Skip to main content

Full text of "ಯುದ್ಧ ಮತ್ತು ಶಾಂತಿ - ಭಾಗ ೧"

See other formats


ಯುದ್ಧ 


ರ್ನಾಟಕ ಸರ್ಕಾರ 


ಮತು 


ಶಾಂತಿ 


ಭಾಗ ೧ 


ಮೂಲ: ಕೌಂಟ್ ಅಯೋ ಟಾಲ್‌ಸ್ಟಾಯ್ 
ಅನು: ಓ .ಎಲ್. ನಾಗಭೂಷಣ ಸ್ವಾಮಿ 


es 


ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 
ಕಲಾಗ್ರಾಮ , ಜ್ಞಾನಭಾರತಿ , ಬೆಂಗಳೂರು ವಿಶ್ವವಿದ್ಯಾಲಯ 
ಆವರಣದ ಹಿಂಭಾಗ, ಮಲ್ಲತ್ತಹಳ್ಳಿ, ಬೆಂಗಳೂರು ೫೬೦೦೫೬ 


ಸರ್ವಭಾಷಾಮಯೀ ಸರಸ್ವತಿ 


ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪ್ರಕಟಣೆ – ೯೭ 

ಸಾಹಿತ್ಯ ಮಾಲೆ - ೭೬ 


ಪ್ರಧಾನ ಸಂಪಾದಕರು 
ಡಾ . ಪ್ರಧಾನ್ ಗುರುದತ್ತ 


ಯುದ್ಧ ಮತ್ತು ಶಾಂತಿ 
( ಭಾಗ ೧ ಮತ್ತು ೨) 


ಅಲಂಡರು ವti 


ಯುದ್ಧ ಮತ್ತು ಶಾಂತಿ 
( ಭಾಗ ೧ ಮತ್ತು ೨) 


ಮೂಲ 
ಕೌಂಟ್ ಲಿಯೋ ಟಾಲ್‌ಸ್ಟಾಯ್ 

ಅನುವಾದ 
ಓ. ಎಲ್ . ನಾಗಭೂಷಣ ಸ್ವಾಮಿ 


ಇದzzಇಯು 


ಕda 


ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 

ಕಲಾಗ್ರಾಮ , ಜ್ಞಾನಭಾರತಿ 
ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ 
ಮಲ್ಲತ್ತಹಳ್ಳಿ, ಬೆಂಗಳೂರು - ೫೬೦ ೦೫೬ 


YUDDHA MATTU SHANT! (Bhaga 1 mattu 2 ) - Kannada Translation of 
War and Peace by Count Leo Tolstoy , Kannada translation by 
Prof. O . L . Nagabhushanaswamy; Editor- in -Chief : Dr. Pradhan 
Gurudatta ; Published by Sri P . Narayana Swamy, Registrar, Kuvempu 
Bhasha Bharathi Pradikara ; Kalagrama, Jnana Bharathi, Behind 
Bangalore University Campus , Mallattahalli,Bangalore - 560 056 ; 
2010 ; Pp . xxii + 900 (Part 1): 901 to 1912 (Pan ) : Price : Rs . 500 . 00 


© ಹಕ್ಕುಗಳನ್ನು ಕಾದಿರಿಸಿದೆ 


ಮುದ್ರಣ : ೨೦೧೦ 
ಪುಟಗಳು : XXX + ೯೦೦ ( ಭಾಗ ೧); ೯೦೧ - ೧೯೧೨ ( ಭಾಗ ೨) 
ಬೆಲೆ : ರೂ . ೫೦೦ . ೦೦ 


ಪ್ರಕಾಶಕರು : 
ಪಿ. ನಾರಾಯಣಸ್ವಾಮಿ 
ರಿಜಿಸ್ಟಾರ್ 
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ 
ಕಲಾಗ್ರಾಮ , ಜ್ಞಾನಭಾರತಿ 
ಬೆಂಗಳೂರು ವಿಶ್ವವಿದ್ಯಾಲಯ ಆವರಣದ ಹಿಂಭಾಗ 
ಮಲ್ಲತ್ತಹಳ್ಳಿ, ಬೆಂಗಳೂರು - ೫೬೦ ೦೫೬ 
ದೂ : ೨೩೧೮೩೩೧೧, ೨೩೧೮೩೩೧೨ 


ಮುಖಪುಟ ವಿನ್ಯಾಸ ಮತ್ತು ಚಿತ್ರ : ವಿಶ್ವನಾಥ್ ಶೆಟ್ಟಿಗಾರ್ 


ISBN : 978- 93- 80415 -16-1 


ಮುದ್ರಕರು : 
ಮೆ । ಮಯೂರ ಪ್ರಿಂಟ್ ಆಡ್ಸ್ 
ನಂ . ೬೯ , ಸುಭೇದಾರ್ ಛತ್ರಂ ರೋಡ್ 
ಬೆಂಗಳೂರು - ೫೬೦೦೨೦ ದೂ : ೨೩೩೪೨೨೪ . . 


. 


ಬಿ .ಎಸ್ . ಯಡಿಯೂರಪ್ಪ 

ವಿಧಾನಸೌಧ 

ಬೆಂಗಳೂರು - ೫೬೦ ೦೦೧ 
ಮುಖ್ಯಮಂತ್ರಿಗಳು 

ಕರ್ನಾಟಕ ಸರ್ಕಾರ 
ಸಿಎಂ/ ಪಿಎಸ್ / ೧೪೭/೦೯ 

ದಿನಾಂಕ : ೦೫.೦೮. ೨೦೦೯ 
ಮೊದಲ ಮಾತು 
ಕನ್ನಡ ನಾಡಿನ ಹೆಮ್ಮೆಯ ಮಹಾಕವಿ ಶ್ರೀ ಕುವೆಂಪು ಅವರು ಕನ್ನಡದ 
ಕೀರ್ತಿಯನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ 
ಮಹಾಚೇತನ. ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಸಂಸ್ಥಾಪಿಸಿರುವ 'ಕುವೆಂಪು 
ಭಾಷಾ ಭಾರತಿ ಪ್ರಾಧಿಕಾರ' ರಾಷ್ಟ್ರೀಯ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾಗಿ 
ಬೆಳೆಯಬೇಕೆಂಬುದು ಸರ್ಕಾರದ ಸದಾಶಯ , ಬೆಂಗಳೂರು ' ಜ್ಞಾನಭಾರತಿ' 
ಆವರಣದಲ್ಲಿ ನಿರ್ಮಿಸಲಾಗಿರುವ ಬೃಹತ್ ಭವನದ ಸಮುಚ್ಚಯದಲ್ಲಿ ಶಿಕ್ಷಣ, 
ತರಬೇತಿ ಮತ್ತು ಪ್ರಕಟಣೆಗಳ ರೂಪದಲ್ಲಿ ಬಹು - ಆಯಾಮದ ಅದರ ಚಟುವಟಿಕೆಗಳು 
ಅರಳಿ ನಿಲ್ಲಲಿವೆ. 

ಅದು ಆರಂಭಿಸಲಿರುವ ಭಾಷಾಂತರ ಮತ್ತು ತೌಲನಿಕ ಸಾಹಿತ್ಯ 
ಸಂಬಂಧವಾದ ವಿಶಿಷ್ಟ ಶಿಕ್ಷಣಗಳು ಆಡಳಿತ ಕ್ಷೇತ್ರ, ನ್ಯಾಯಾಂಗ ಕ್ಷೇತ್ರ ಮತ್ತು 
ಶಿಕ್ಷಣ ಕ್ಷೇತ್ರಗಳಿಗೆ ಪೂರಕವಾಗಿ, ಕನ್ನಡವನ್ನು ಸರ್ವತೋಮುಖವಾಗಿ ಬೆಳೆಸಲು 
ಸಹಾಯಕವಾಗಲಿವೆ. 

ಭಾರತೀಯ ಭಾಷಾ - ಸಾಹಿತ್ಯಗಳ ಉತ್ತಮೋತ್ತಮ ಕೃತಿಗಳನ್ನು ಮಾತ್ರವಲ್ಲದೆ, 
ವಿಶ್ವಸಾಹಿತ್ಯದ ಶ್ರೇಷ್ಠ ಕೃತಿಗಳನ್ನು ಕನ್ನಡಕ್ಕೆ ತರುವುದಲ್ಲದೆ, ಕನ್ನಡದ ಶ್ರೇಷ್ಠ ಕೃತಿಗಳನ್ನು 
ಜಾಗತಿಕ ಸಾಹಿತ್ಯಕ್ಕೆ ಪರಿಚಯಿಸಿಕೊಡುವ ಕರ್ತವ್ಯದ ಜೊತೆಗೆ, ಜ್ಞಾನ - ವಿಜ್ಞಾನ 
ಮತ್ತು ತಂತ್ರಜ್ಞಾನದ ಮಹತ್ವದ ಕೃತಿಗಳನ್ನು ಕನ್ನಡಕ್ಕೆ ತರುವ ಮಹತ್ತರ 
ಕಾರ್ಯವನ್ನೂ ಅದು ಹಮ್ಮಿಕೊಳ್ಳಬೇಕಾದ ಅಗತ್ಯವಿದೆ. 

ನಾಡಿನ ಶ್ರೇಷ್ಠ ವಿದ್ವಾಂಸರ ಸಲಹೆ -ಸೂಚನೆ - ಮಾರ್ಗದರ್ಶನಗಳ ಬೆಳಕಿನಲ್ಲಿ 
ಅದರ ಕೆಲಸ ಕಾರ್ಯಗಳು ಆದರ್ಶಪ್ರಾಯವಾಗಿ ಮೂಡಿಬರಲಿ ಹಾಗೂ 
ಇದೊಂದು ವಿಶಿಷ್ಟ ಸಂಸ್ಥೆಯಾಗಿ ದೇಶ- ವಿದೇಶಗಳ ಗಮನವನ್ನು ಸೆಳೆಯುವಂತಾಗಲಿ 
ಎಂದು ಹಾರೈಸುತ್ತೇನೆ. 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳಲ್ಲಿ 
ಆಸಕ್ತರೆಲ್ಲರೂ ಪಾಲ್ಗೊಳ್ಳಬೇಕೆಂಬ , ಇದರ ಪ್ರಕಟಣೆಗಳನ್ನು ಜನಸಮುದಾಯ 
ಆದರ - ವಿಶ್ವಾಸಗಳಿಂದ ಸ್ವೀಕರಿಸುವರೆಂಬ ಆಶಯ ನಮ್ಮದಾಗಿದೆ . 

( Maddp3 
( ಬಿ.ಎಸ್. ಯಡಿಯೂರಪ್ಪ) 


ಕರ್ನಾಟಕ ಸರ್ಕಾರ 
ಗೋವಿಂದ ಎಂ . ಕಾರಜೋಳ 
ಕನ್ನಡ ಮತ್ತು ಸಂಸ್ಕೃತಿ, ಸಣ್ಣ ನೀರಾವರಿ ಹಾಗೂ 
ಜವಳಿ ಸಚಿವರು 


ವಿಧಾನ ಸೌಧ 
ಬೆಂಗಳೂರು - ೦೧ 


೫ ಅಕ್ಟೋಬರ್ ೨೦೧೦ 


ಶುಭಾಕಾಂಕ್ಷೆ 
ರಾಷ್ಟ್ರಕವಿ ಶ್ರೀ ಕುವೆಂಪು ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿರುವ 
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ರಾಷ್ಟ್ರೀಯ ಸಾಹಿತ್ಯಕ ಮತ್ತು ಸಾಂಸ್ಕೃತಿಕ 
ಚಟುವಟಿಕೆಗಳ ಮೂಲಕ ಈಗಾಗಲೇ ಖ್ಯಾತಿಯನ್ನು ಗಳಿಸಿದೆ. ರಾಷ್ಟ್ರೀಯ ಮತ್ತು 
ಅಂತರರಾಷ್ಟ್ರೀಯ ಮಹತ್ವದ ಸಾಹಿತ್ಯಕ, ಐತಿಹಾಸಿಕ , ವೈಜ್ಞಾನಿಕ ಮತ್ತು ಇತರ 
ಗ್ರಂಥಗಳನ್ನು ಪ್ರಕಟಿಸುವ ಮೂಲಕ ಮತ್ತು ರಾಷ್ಟ್ರೀಯ ವಿಚಾರಸಂಕಿರಣಗಳನ್ನು 
ಏರ್ಪಡಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿ ಬೆಳೆಯುವ 
ದಿಕ್ಕಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಡುತ್ತಿರುವುದು ನನಗೆ ತುಂಬ ಸಂತೋಷವನ್ನು 
ತಂದುಕೊಟ್ಟಿದೆ. ಈ ಮೂಲಕ ಕನ್ನಡ ನಾಡಿನ ಜನತೆಗೆ ಈಗಾಗಲೇ ಮಹತ್ವದ 
ಕೃತಿಗಳು ಕನ್ನಡದಲ್ಲಿ ದೊರೆಯುವಂತಾಗಿಸುವುದು ಮಾತ್ರವಲ್ಲದೆ, ಕನ್ನಡದ ಶ್ರೇಷ್ಠ 
ಕೃತಿಗಳ ಪರಿಚಯ ಇತರ ಭಾಷಾ ಬಾಂಧವರಿಗೂ ಆಗುವಂತೆ ಮಾಡುವ ದಿಕ್ಕಿನಲ್ಲಿ 
ಈ ಸಂಸ್ಥೆ ಕಾರ್ಯೋನ್ಮುಖವಾಗಬೇಕಾಗಿದೆ. ಈ ಕಾರ್ಯದಲ್ಲಿ ನಾಡಿನ ಖ್ಯಾತ 
ಲೇಖಕರು, ವಿದ್ವಾಂಸರು , ವಿಮರ್ಶಕರು ಸಹಕರಿಸುತ್ತಿರುವುದು ವಿಶೇಷ ಸಂಗತಿಯೇ 
ಆಗಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಆಶ್ರಯದಲ್ಲಿ ಮುಂದಿನ ದಿನಗಳಲ್ಲಿ 
ಶೈಕ್ಷಣಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿರುವುದು ಸಂತೋಷದ ಸಂಗತಿ. ನಮ್ಮ 
ತರುಣ ಜನಾಂಗವನ್ನು ಈ ಸಾಹಿತ್ಯಕ - ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಿದ್ಧಗೊಳಿಸುವ 
ಕಾರ್ಯ ಇದರ ಮೂಲಕ ನಡೆಯುತ್ತದೆ ಎಂದು ನಂಬಿದ್ದೇನೆ. 

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಾರ್ಯಕ್ರಮಗಳಲ್ಲಿ ನಾಡಿನ ಜನತೆ 
ಸಕ್ರಿಯವಾಗಿ ಭಾಗವಹಿಸಲಿ ಎಂದು ಹಾರೈಸುತ್ತೇನೆ. 


ಗೋವಿಂದ ಎಂ . ಕಾರಜೋಳ 


ಕರ್ನಾಟಕ ಸರ್ಕಾರ 

ವಿಕಾಸ ಸೌಧ 
ರಮೇಶ್ ಬಿ .ಝಳಕಿ, ಭಾ.ಆ.ಸೇ . 

ಬೆಂಗಳೂರು - ೦೧ 
ಸರ್ಕಾರದ ಕಾರೈದರ್ಶಿಗಳು 
ಕನ್ನಡ ಮತ್ತು ಸಂಸ್ಕೃತಿ ಹಾಗೂ 
ವಾರ್ತಾ ಇಲಾಖೆ 

- ಹಾರೈಕೆ 
- ರಾಷ್ಟ್ರಕವಿ ಶ್ರೀ ಕುವೆಂಪು ಅವರ ಹೆಸರಿನಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿರುವ 
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಸಾಹಿತ್ಯಕ ಮತ್ತು ಸಾಂಸ್ಕೃತಿಕ 
ಚಟುವಟಿಕೆಗಳಿಂದ ನಮ್ಮ ನಾಡಿನ ಜನಸಮುದಾಯದ ಗಮನವನ್ನು ಸೆಳೆಯವ 
ದಿಕ್ಕಿನಲ್ಲಿ ಮುನ್ನಡೆಯುತ್ತಿರುವುದು ತುಂಬ ಸಂತೋಷದ ಸಂಗತಿಯೇ ಆಗಿದೆ. 
ಪ್ರಾಧಿಕಾರದ ಒಂದು ಭಾಗವೇ ಆಗಿ ಕಲ್ಪಿಸಿಕೊಳ್ಳಲಾಗಿದ್ದ ಕರ್ನಾಟಕ ಅನುವಾದ 
ಸಾಹಿತ್ಯ ಅಕಾಡೆಮಿಯ ಕಾರ್ಯಚಟುವಟಿಕೆಗಳ ಅಂಗವಾಗಿ ಹೊರತರಲಾಗಿದ್ದ 
ಸುಮಾರು ೬೦ ಗ್ರಂಥಗಳ ಜೊತೆಗೆ , ಪ್ರಾಧಿಕಾರ ಮತ್ತಷ್ಟು ಮಹತ್ವಪೂರ್ಣ 
ಗ್ರಂಥಗಳನ್ನು ಹೊರತರುತ್ತಿದ್ದು, ಸದ್ಯದಲ್ಲಿಯೇ ಈ ಸಂಖ್ಯೆ ನೂರರ ಗಡಿಯನ್ನು 
ದಾಟಲಿದೆ. ಭಾರತೀಯ ವಿದ್ಯಾಭವನ' ದಂಥ ರಾಷ್ಟ್ರೀಯ ಸಂಸ್ಥೆಯೊಂದಿಗೆ ಸಂಯುಕ್ತ 
ಕಾರ್ಯಕ್ರಮವನ್ನು ಏರ್ಪಡಿಸಿಕೊಂಡು ಪ್ರಾಧಿಕಾರ ಮುನ್ನಡೆಯಲಿರುವುದು 
ಪ್ರಾಧಿಕಾರದ ಚಟುವಟಿಕೆಗಳಿಗೆ ಹೊಸ ಆಯಾಮವನ್ನೇ ನೀಡಲಿದೆ ಎಂದು 
ನಂಬಿದ್ದೇನೆ. ಡಾ . ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೪ ಸಂಪುಟಗಳ 
ಕನ್ನಡ ಅನುವಾದದ ಪರಿಷ್ಕರಣ , ೧೫ ರಿಂದ ಮುಂದಿನ ಸಂಪುಟಗಳ ಅನುವಾದ 
ಕಾರ್ಯ, ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಅವರ ಸಮಗ್ರ ಕೃತಿಗಳ 
ಕನ್ನಡ ಅನುವಾದದ ಪ್ರಕಟಣೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರ 
ಸಂಚಯಗಳ ಹಿಂದೀ ಮತ್ತು ಇಂಗ್ಲಿಷ್ ಆವೃತ್ತಿಗಳ ಪ್ರಕಟಣೆ - ಇವೇ ಮೊದಲಾದ 
ಮಹತ್ವದ ಕಾರ್ಯಕ್ರಮಗಳನ್ನು ಈ ಪ್ರಾಧಿಕಾರ ಹಮ್ಮಿಕೊಂಡಿರುವುದು ಸ್ತುತರ್ಹವಾದ 
ಸಂಗತಿಯೇ ಆಗಿದೆ. ಕಾವೇರಿ ನ್ಯಾಯಾಧಿಕರಣದ ತೀರ್ಪಿನ ಕನ್ನಡ ಆವೃತ್ತಿಯೂ 
ಸದ್ಯದಲ್ಲಿಯೇ ಹೊರಬರಲಿದೆ. ವೈಜ್ಞಾನಿಕ, ತಾಂತ್ರಿಕ ಮತ್ತು ವೈದ್ಯಕೀಯ ಸಾಹಿತ್ಯ 
ಪ್ರಕಟಣೆಯತ್ತಲೂ ಪ್ರಾಧಿಕಾರ ಗಮನಹರಿಸಿದೆ. ಪ್ರಾಧಿಕಾರದ ಮುನ್ನಡೆಗೆ ಕರ್ನಾಟಕ 
ಸರ್ಕಾರದ ಎಲ್ಲ ಬಗೆಯ ನೆರವೂ ಲಭಿಸಲಿದೆ. 

ಈ ಎಲ್ಲ ಚಟುವಟಿಕೆಗಳು ಕನ್ನಡಿಗರ ಆದರ, ಮೆಚ್ಚಿಕೆ , ಸಂತೋಷಗಳಿಗೆ 
ಪಾತ್ರವಾಗುತ್ತದೆಂದು ನಂಬಿದ್ದೇನೆ. 


ದ 


( ರಮೇಶ್ ಬಿ. ಝಳಕಿ) 


. 


ಕರ್ನಾಟಕ ಸರ್ಕಾರ 


ಮನು ಬಳಿಗಾರ್ 
ನಿರ್ದೆಶಕರು 
ಕನ್ನಡ ಮತ್ತು ಸಂಸ್ಕೃತಿ ಇಲಾಖೆ 


ಕನ್ನಡ ಭವನ , ಜೆ. ಸಿ. ರಸ್ತೆ 
ಬೆಂಗಳೂರು - ೫೬೦ ೦೦೨ 


ಪ್ರಾಸ್ತಾವಿಕ ನುಡಿ 
ಕುವೆಂಪು ಭಾಷಾ ಭಾರತಿ ಅಂಗವಾಗಿ ಕರ್ನಾಟಕ ಸರ್ಕಾರ 2005ರಲ್ಲಿ 
ಸ್ಥಾಪಿಸಿದ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಕೇವಲ ಮೂರು ವರ್ಷಗಳಲ್ಲಿ 
ಮಾಡಿರುವ ವೈವಿಧ್ಯಮಯವಾದ ಕಾರ್ಯವನ್ನು ನಾನು ಗಮನಿಸಿದ್ದೇನೆ. ಕುವೆಂಪು 
ಭಾಷಾ ಭಾರತಿಯ ಕಟ್ಟಡ ಸಮುಚ್ಚಯದ ನಿರ್ಮಾಣಕಾರ್ಯ ಪೂರ್ಣಗೊಂಡಿದ್ದು , 
ಸನ್ಮಾನ್ಯ ಮುಖ್ಯಮಂತ್ರಿಗಳು ಅದರ ಉದ್ಘಾಟನ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. 
ವೈವಿಧ್ಯಮಯವಾದ ಮತ್ತು ವ್ಯಾಪಕವಾದ ಕಾರ್ಯಯೋಜನೆಗಳನ್ನು , 
ಧೈಯೋದ್ದೇಶಗಳನ್ನು ಹೊಂದಿರುವ ಕುವೆಂಪು ಭಾಷಾ ಭಾರತಿ ಕುವೆಂಪು ಅವರ 
ಹೆಸರಿನಲ್ಲಿಯೇ ಸ್ಥಾಪಿತವಾಗಿದ್ದರೂ ಕುವೆಂಪು ಸಾಹಿತ್ಯದ ಪ್ರಚಾರ ಪ್ರಸಾರಗಳಿಗೆ 
ಮಾತ್ರವೇ ಸೀಮಿತವಾಗಿರುವುದಿಲ್ಲ . ಕುವೆಂಪು ಮಾಡಿರುವ ಅತ್ಯುಚ್ಚ ಸಾಹಿತ್ಯಕ 
ಸಾಧನೆಯ ಪ್ರತೀಕವಾಗಿ ಈ ಸಂಸ್ಥೆಗೆ ಆ ಹೆಸರನ್ನು ಕೊಡಲಾಗಿದೆ . ಕನ್ನಡ ಭಾಷಾ 
ಸಾಹಿತ್ಯಗಳ ಹಿರಿಯ ಸಾಧನೆಯನ್ನು ಕನ್ನಡೇತರರಿಗೆ, ದೇಶ - ವಿದೇಶಗಳ ಸಾಹಿತ್ಯಕ 
ಸಾಧನೆಯನ್ನು ಕನ್ನಡಿಗರಿಗೆ ಪರಿಚಯಿಸಿಕೊಡುವುದಲ್ಲದೆ , ಸಾಹಿತ್ಯ , ಜ್ಞಾನ - ವಿಜ್ಞಾನ 
ತಂತ್ರಜ್ಞಾನಗಳ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗೆ ಕನ್ನಡವನ್ನು ಅಣಿಗೊಳಿಸುವ 
ಧೈಯವನ್ನೂ ಇದು ಇರಿಸಿಕೊಂಡಿದೆ. ಹೀಗೆ ಇದು ಸರ್ವಭಾಷೆಗಳ ಸಾಮರಸ್ಯದ 
ಪ್ರತೀಕವಾದ ಸಾಹಿತ್ಯಕ ಸಂಸ್ಥೆಯಾಗಿ ಕೆಲಸ ಮಾಡಲಿದೆ. ಭಾಷಾಂತರ ಶಿಕ್ಷಣ, 
ವಿದೇಶ ಭಾಷೆಗಳ ಶಿಕ್ಷಣ, ತೌಲನಿಕ ಸಾಹಿತ್ಯಾಧ್ಯಯನ, ತರಬೇತಿ ಕಾರ್ಯಕ್ರಮಗಳು , 
ಪ್ರಕಟಣೆಗಳು - ಹೀಗೆ ಬಹುಮುಖವಾದ ಕಾರ್ಯಚಟುವಟಿಕೆಗಳಿಂದ ಕುವೆಂಪು 
ಭಾಷಾ ಭಾರತಿ ನಾಡಿನ ಹೆಮ್ಮೆಯ ಸಂಸ್ಥೆಯಾಗಿ ಬೆಳೆದು ಬರಬೇಕೆಂಬ ಆಶಯವನ್ನು 
ಇರಿಸಿಕೊಳ್ಳಲಾಗಿದೆ. ಕುವೆಂಪು ಭಾಷಾ ಭಾರತಿಯ ಅಂಗವಾಗಿ ಈ ಹಿಂದೆ 
ಸ್ಥಾಪಿತವಾಗಿದ್ದ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಕುವೆಂಪು ಭಾಷಾ 
ಭಾರತಿಯಲ್ಲಿ ಈಗ ವಿಲೀನಗೊಂಡಿದ್ದು , ಹೆಚ್ಚಿನ ವೈವಿಧ್ಯ ಮತ್ತು ವ್ಯಾಪ್ತಿಯ 
ಕಾರ್ಯಕ್ರಮಗಳಲ್ಲಿ ಅದು ತನ್ನನ್ನು ತೊಡಗಿಸಿಕೊಳ್ಳಲಿದೆ. ಈ ಅಕಾಡೆಮಿಯ ಮೂರು 
ವರ್ಷಗಳ ಅಲ್ಪಾವಧಿಯಲ್ಲಿ ಅಭಿನಂದನೀಯವಾದ ಕಾರ್ಯವನ್ನು ಮಾಡಿದ ಹಿರಿಯ , 
ಬಹುಭಾಷಾ ವಿದ್ವಾಂಸರಾದ ಡಾ . ಪ್ರಧಾನ್ ಗುರುದತ್ತ ಅವರನ್ನು ಕುವೆಂಪು ಭಾಷಾ 
ಭಾರತಿಯ ಪ್ರಥಮಾಧ್ಯಕ್ಷರಾಗಿ ಕರ್ನಾಟಕ ಸರ್ಕಾರ ನೇಮಕ ಮಾಡಿದ್ದು, ಅವರು 
ಈ ಸಂಸ್ಥೆಯ ಧೈಯೋದ್ದೇಶಗಳನ್ನು ಈಡೇರಿಸಲು ಸಂಕಲ್ಪಬದ್ದರಾಗಿದ್ದಾರೆ ಎಂದು 
ನಾನು ಭಾವಿಸಿದ್ದೇನೆ. 


ಕುವೆಂಪು ಭಾಷಾ ಭಾರತಿ ತನ್ನ ವಿಶಿಷ್ಟ ಕಾರ್ಯಚಟುವಟಿಕೆಗಳಿಂದ 
ಕನ್ನಡಿಗರ ಮೆಚ್ಚಿನ ಸಾಹಿತ್ಯಕ - ಸಾಂಸ್ಕೃತಿಕ ಸಂಸ್ಥೆಯಾಗಿ ಬೆಳೆಯಲಿ ಎಂದು 
ಹಾರೈಸುತ್ತೇನೆ. ಅದು ಅನೇಕ ಮಹತ್ವದ ಪ್ರಕಟಣೆಗಳನ್ನು ಹೊರತರುತ್ತಿರುವುದು 
ಅದರ ಕಾರ್ಯಚಟುವಟಿಕೆಗಳ ಪ್ರತೀಕವಾಗಿದೆ. ಈ ಸಂಸ್ಥೆ ಇತೋಪ್ಯತಿಶಯವಾಗಿ 
ಬೆಳೆಯಲಿ ಎಂದು ಹಾರೈಸುತ್ತೇನೆ. 

MON ) ยหา * 
( ಮನು ಬಳಿಗಾರ್) 


ಪೀಠಿಕೆ 


ಶ್ರೀ ಕುವೆಂಪು ಅವರು ಕನ್ನಡ ನಾಡಿನ ಹೆಮ್ಮೆಯ ರಾಷ್ಟ್ರಕವಿ . ಕನ್ನಡದ 
ಇನ್ನೊಬ್ಬ ವರಕವಿಗಳಾದ ಬೇಂದ್ರೆಯವರಿಂದಲೇ ಯುಗದ ಕವಿ, ಜಗದ ಕವಿ 
ಎಂದು ಕೀರ್ತಿತರಾಗಿದ್ದಂಥವರು. ಕನ್ನಡದ ಹಿರಿಮೆಯನ್ನು ರಾಷ್ಟ್ರೀಯ ಮತ್ತು 
ಅಂತರರಾಷ್ಟ್ರೀಯ ಸ್ತರಗಳಲ್ಲಿ ಎತ್ತಿ ಹಿಡಿದ ಮಹಾಚೇತನವೂ ಅವರಾಗಿದ್ದರು. ಸಾಹಿತ್ಯದ 
ಅನೇಕ ಪ್ರಕಾರಗಳಿಗೆ ಮಹತ್ವಪೂರ್ಣ ಕೊಡುಗೆಗಳನ್ನು ನೀಡಿರುವ ಹಿರಿಮೆಯೂ 
ಅವರದಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯಿಂದ ಹಿಡಿದು ಜ್ಞಾನಪೀಠ 
ಪ್ರಶಸ್ತಿಯವರೆಗೆ ರಾಷ್ಟ್ರಮಟ್ಟದ ಬಹುತೇಕ ಗೌರವ ಪ್ರಶಸ್ತಿಗಳೆಲ್ಲ ಅವರದಾಗಿವೆ. 
ರಾಷ್ಟ್ರಮಟ್ಟದ ಈ ಗೌರವ ಪ್ರಶಸ್ತಿಗಳೆಲ್ಲ ಕನ್ನಡದಲ್ಲಿ ಮೊದಲ ಬಾರಿಗೆ ಅವರನ್ನು 
ಅರಸಿಬಂದವು. ದೇಶ- ವಿದೇಶಗಳ ವಿಶ್ವವಿದ್ಯಾನಿಲಯಗಳ ಹಾಗೂ ಪ್ರತಿಷ್ಠಿತ ಸಾಹಿತ್ಯಕ 
ಸಂಸ್ಥೆಗಳ ಗೌರವಾದರಗಳಿಗೂ ಅವರು ಪಾತ್ರರಾಗಿದ್ದರು. 
- ಶ್ರೀ ಕುವೆಂಪು ಅವರ ಶೈಕ್ಷಣಿಕ - ಸಾಹಿತ್ಯಕ ಹಿರಿಮೆ ಸಾಧನೆಗಳನ್ನು ಗುರುತಿಸಿ, 
ಅವರ ಹೆಸರಿನಲ್ಲಿ ಅಧ್ಯಯನ ಸಂಸ್ಥೆಗಳನ್ನು ಮಾತ್ರವಲ್ಲದೆ, ವಿಶ್ವವಿದ್ಯಾನಿಲಯವೊಂದನ್ನೂ 
ಸ್ಥಾಪಿಸಲಾಗಿದೆ . ಶ್ರೀ ಕುವೆಂಪು ಅವರ ಮಹಾಕಾವ್ಯವಾದ ' ಶ್ರೀ ರಾಮಾಯಣ 
ದರ್ಶನಂ' ಸೇರಿದಂತೆ ಅವರ ಸಾಹಿತ್ಯದ ಬಹ್ವಂಶ ಇಂಗ್ಲಿಷ್‌ನಂಥ ವಿದೇಶಿ 
ಭಾಷೆಗೆ ಮಾತ್ರವಲ್ಲದೆ ಹಿಂದಿಯಂಥ ಇತರ ಭಾರತೀಯ ಭಾಷೆಗಳಿಗೂ 
ಅನುವಾದಗೊಂಡಿದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ಶ್ರೀ ಕುವೆಂಪು 
ಅವರ ಈ ಹೈಮಾಚಲೋಪಮ ಸಾಧನೆಗೆ ಯೋಗ್ಯವಾದ ರಾಷ್ಟ್ರೀಯ ಮಹತ್ವದ 
ಸಾಹಿತ್ಯಕ- ಸಾಂಸ್ಕೃತಿಕ ಸಂಸ್ಥೆಯೊಂದನ್ನು ಸ್ಥಾಪಿಸಬೇಕೆಂಬುದು ಮತ್ತು ಅದು ಭಾರತೀಯ 
ಸಾಹಿತ್ಯಕ ಸಾಂಸ್ಕೃತಿಕ ಲೋಕದ ಹೆಮ್ಮೆಯ ಪ್ರತೀಕವಾದ ಸಂಸ್ಥೆಯಾಗಬೇಕೆಂಬುದು 
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯ 
ಮೂಲ ರೂವಾರಿ ಪ್ರೊ . ದೇ . ಜವರೇಗೌಡ ಅವರು, 'ಕುವೆಂಪು ಭಾಷಾ ಭಾರತಿ' ಯ 
ಅಂಗವಾಗಿ ಆರಂಭಿಸಲಾಗಿದ್ದ ಅನುವಾದ ಸಾಹಿತ್ಯ ಅಕಾಡೆಮಿಯನ್ನು ಈಗ 
ವಿಧ್ಯುಕ್ತವಾಗಿ 'ಕುವೆಂಪು ಭಾಷಾ ಭಾರತಿ ಪ್ರಾಧಿಕಾರ' ದಲ್ಲಿ ವಿಲೀನಗೊಳಿಸಲಾಗಿದ್ದು , 
ಅದರ ಎಲ್ಲ ಕಾರ್ಯಚಟುವಟಿಕೆಗಳೂ ಇನ್ನಷ್ಟು ವ್ಯಾಪ್ತಿ - ವೈವಿಧ್ಯಗಳೊಂದಿಗೆ 
ಮುಂದುವರಿಯಲಿವೆ. 'ಕುವೆಂಪು ಭಾಷಾ ಭಾರತಿ' ಕುವೆಂಪು ಸಾಹಿತ್ಯದ 
ಪ್ರಚಾರ - ಪ್ರಸಾರಗಳಿಗೆ ಮಾತ್ರವೇ ಮೀಸಲಾದ ಸಂಸ್ಥೆಯಾಗಿರದೆ, ಕನ್ನಡ ಸಾಹಿತ್ಯದ 
ಹಿರಿಮೆ - ಗರಿಮೆಗಳನ್ನು ರಾಷ್ಟ್ರೀಯ- ಅಂತರರಾಷ್ಟ್ರೀಯ ಮಟ್ಟದಲ್ಲಿ ಮೆರೆಸುವ, 
ಭಾರತೀಯ ಸಾಹಿತ್ಯದ ಮತ್ತು ವಿಶ್ವಸಾಹಿತ್ಯದ ಉತ್ಕಷ್ಟ ಕೃತಿಗಳಿಂದ ಕನ್ನಡ ಸಾಹಿತ್ಯವನ್ನು 
ಸಮೃದ್ಧಗೊಳಿಸುವ ಮಹದಾಶಯವನ್ನು ಹೊಂದಿದೆ. 

ಬೆಂಗಳೂರು ವಿಶ್ವವಿದ್ಯಾನಿಲಯದ ಜ್ಞಾನಭಾರತಿ ಆವರಣದಲ್ಲಿ ಎರಡು 


ಎಕರೆಗಳಷ್ಟು ವಿಶಾಲವಾದ ಸ್ಥಳದಲ್ಲಿ ಕುವೆಂಪು ಭಾಷಾ ಭಾರತಿ' ಯ ಕಟ್ಟಡದ 
ಶಿಲಾನ್ಯಾಸ ಕಾರ್ಯಕ್ರಮ ದಿನಾಂಕ : ೦೧ . ೦೯ . ೨೦೦೫ರಂದು ಅಂದಿನ ಮಾನ್ಯ 
ಮುಖ್ಯಮಂತ್ರಿಗಳಾಗಿದ್ದ ಶ್ರೀ ಎನ್. ಧರ್ಮಸಿಂಗ್ ಅವರಿಂದ ನೆರವೇರಿತು. ' ವಿಶ್ವಚೇತನ ' 
ಮತ್ತು 'ಕಾಜಾಣ' ಎಂದು ಹೆಸರಿಸಲಾಗಿರುವ ಎರಡು ಬೃಹತ್ ಕಟ್ಟಡಗಳ 
ಸಮುಚ್ಚಯವನ್ನು ಒಳಗೊಂಡಿರುವ ಕುವೆಂಪು ಭಾಷಾ ಭಾರತಿಯ ಕಟ್ಟಡದ 
ನಿರ್ಮಾಣಕ್ಕೆ ಸುಮಾರು ಎರಡೂವರೆ ಕೋಟಿ ರೂಪಾಯಿಗಳನ್ನು ಖರ್ಚು 
ಮಾಡಲಾಗಿದ್ದು, ೨೦೦೯ರಲ್ಲಿ ಇದರ ಕಾಮಗಾರಿ ಪೂರ್ಣಗೊಂಡಿತು. ಇದೇ ದಿನಾಂಕ: 
೧೯ .೦೮. ೨೦೦೯ರಂದು ಬೆಳಗ್ಗೆ ೧೧ . ೦೦ ಗಂಟೆಗೆ ಕರ್ನಾಟಕ ಸರ್ಕಾರದ ಮಾನ್ಯ 
ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಈ ಕಟ್ಟಡ- ಸಮುಚ್ಚಯದ 
ಉದ್ಘಾಟನೆ ಸಮಾರಂಭವನ್ನು ಹಾಗೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ 
ಪ್ರಕಟಣೆಗಳ ಮೊದಲ ಕಂತಿನ ಹತ್ತು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು 
ನೆರವೇರಿಸಿದ್ದಾರೆ. 
- ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಕಾರ್ಯಚಟುವಟಿಕೆಗಳ ಸ್ವರೂಪ 
ಮೂರು ಮುಖದ್ದಾಗಿರುತ್ತದೆ : 
( ಅ) ಶೈಕ್ಷಣಿಕ ಚಟುವಟಿಕೆಗಳು ಮತ್ತು ತರಬೇತಿ ಕಾರ್ಯಗಳು 
( ಆ) ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು 
( ಇ) ಪ್ರಕಟಣೆಗಳು 
( ಅ) ಶೈಕ್ಷಣಿಕ ಚಟುವಟಿಕೆಗಳು ಮತ್ತು ತರಬೇತಿ ಕಾರ್ಯಗಳು : 
(1) “ಕನ್ನಡ ಸಾಹಿತ್ಯ ಹಿರಿಮೆ - ಗರಿಮೆಗಳಲ್ಲಿ ಯಾವ ಭಾರತೀಯ ಸಾಹಿತ್ಯಕ್ಕೂ 

ಕಡಿಮೆಯಾಗಿಲ್ಲ. ಅದರ ಮಹತ್ವವನ್ನು ಎತ್ತಿತೋರಿಸುವ ಕಾರ್ಯಕ್ರಮಗಳನ್ನು 
ಕೈಗೊಳ್ಳಬೇಕಾಗಿದೆ. ಅಷ್ಟೇ ” ಎಂಬುದಾಗಿ ಕುವೆಂಪು ಅವರು ಉದ್ಯೋಷಿಸಿದ್ದರು. 
ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಅಂಗವಾಗಿ ಅನುವಾದ, ತೌಲನಿಕ 
ಸಾಹಿತ್ಯ , ವಿದೇಶಿ ಭಾಷೆಗಳ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಈ ಕೆಳಕಂಡ ಶಿಕ್ಷಣ 
ಕ್ರಮಗಳನ್ನು ಆರಂಭಿಸಬೇಕೆಂದು ಯೋಜಿಸಲಾಗಿದೆ : 
( ೧) ಭಾಷಾಂತರ ಡಿಪ್ಲೊಮಾ ಶಿಕ್ಷಣ - ಮೊದಲ ಹಂತದಲ್ಲಿ ಇಂಗ್ಲಿಷ್ , 

ಹಿಂದೀ , ಕನ್ನಡ, ತೆಲುಗು, ತಮಿಳು, ಮಲಯಾಳಂ, ಬಂಗಾಳಿ, ಮರಾಠಿ 
ಭಾಷೆಗಳಲ್ಲಿ ವಿಶೇಷ ತರಬೇತಿಗೆ ಒತ್ತುಕೊಟ್ಟು ಈ ಶಿಕ್ಷಣವನ್ನು 

ಪ್ರಾರಂಭಿಸಲಾಗುತ್ತದೆ . 
( ೨) ಭಾಷಾಂತರದಲ್ಲಿ ಎಂ . ಫಿಲ್ . ಶಿಕ್ಷಣ : ವಿಶೇಷ ವಿಷಯಕ್ಕೆ ಒತ್ತುಕೊಟ್ಟು 
( ೩) ಪತ್ರಿಕೋದ್ಯಮ ಮತ್ತು ಭಾಷಾಂತರ 
( ೪) ಕಾನೂನುಶಾಸ್ತ್ರ, ಆಡಳಿತ ಭಾಷೆ ಮತ್ತು ಭಾಷಾಂತರ 


ರಾಲೋಚಿಸಿ ಕಾರ್ಯ ಈ ಎಲ್ಲ ಶಿಕ್ಷಣಗಚ್ 
, ರಷ್ಯನ್, ಜಿ 


( ೫ ) ವಿಜ್ಞಾನ ಮತ್ತು ಮಾನವಿಕಶಾಸ್ತ್ರ ಕೃತಿಗಳು ಮತ್ತು ಭಾಷಾಂತರ ; 

ಮತ್ತು 
( ೬ ) ತೌಲನಿಕ ಸಾಹಿತ್ಯ 
( ೭) ವಿದೇಶೀ ಭಾಷೆಗಳ ಶಿಕ್ಷಣ ( ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ) 
ಕನ್ನಡ ಸಾಹಿತ್ಯವನ್ನು ವಿಶ್ವಸಾಹಿತ್ಯದ ಮಟ್ಟದಲ್ಲಿ ಪ್ರಚುರಪಡಿಸಬೇಕಾದರೆ - 
ಜಾಗತಿಕ ಪ್ರಾಚುರದ ವಿದೇಶಿ ಭಾಷೆಗಳಿಗೆ ಕನ್ನಡದ ಶ್ರೇಷ್ಠ ಕೃತಿಗಳನ್ನು 
ಕೊಂಡೊಯ್ಯುವ ಮಹತ್ವದ ಕಾರ್ಯವನ್ನು ಕೈಗೊಳ್ಳಬೇಕಾಗುತ್ತದೆ. ಹೀಗಾಗಿ 
ಮೊದಲ ಹಂತದಲ್ಲಿ ಸ್ಪ್ಯಾನಿಷ್, ಜಪಾನಿ, ಫ್ರೆಂಚ್, ರಷ್ಯನ್ , ಜರ್ಮನ್ , ಚೀಣೀ , 
ಆಫ್ರಿಕನ್ ಭಾಷೆಗಳು - ಈ ಎಲ್ಲ ಶಿಕ್ಷಣಗಳಿಗೆ ಸಂಬಂಧಿಸಿದಂತೆ , ತಜ್ಞರೊಂದಿಗೆ 
ಸಮಾಲೋಚಿಸಿ ಕಾರ್ಯಕ್ರಮಗಳನ್ನು ರೂಪಿಸುವುದು , ಶಿಕ್ಷಣಕ್ಕೆ ಮತ್ತು ತರಬೇತಿಗೆ 
ವ್ಯವಸ್ಥೆಯನ್ನು ಕಲ್ಪಿಸುವುದು ಮೊದಲಾದ ಕಾರ್ಯಗಳನ್ನು ಸಮರೋಪಾದಿಯಲ್ಲಿ 
ಕೈಗೊಳ್ಳಲಾಗುತ್ತದೆ. ವಿದೇಶಿ ದೂತಾವಾಸಗಳ ನೆರವಿನೊಂದಿಗೆ ಈ ಶಿಕ್ಷಣ 
ಕ್ರಮಗಳನ್ನು ಯೋಜಿಸಲಾಗುತ್ತದೆ. 
ವಿವಿಧ ಭಾಷೆಗಳಲ್ಲಿ ಪರಿಣತಿಯನ್ನು ಪಡೆದಿರುವಂಥ ತರುಣ ಪ್ರತಿಭೆಗಳನ್ನು 
ಗುರುತಿಸಿ, ಅವರಿಗೆ ತರಬೇತಿ ನೀಡಿ ಪ್ರಕಟಣಾವಕಾಶಗಳನ್ನು ಕಲ್ಪಿಸಿಕೊಡಲು 
ಅನುಕೂಲವಾಗುವಂತೆ ವಿಚಾರಗೋಷ್ಠಿಗಳು , ವಿಚಾರ ಸಂಕಿರಣಗಳು , 
ಕಾರ್ಯಶಿಬಿರಗಳು ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು 
ಕೈಗೊಳ್ಳಲಾಗುತ್ತದೆ. 
ಶ್ರೀ ಕುವೆಂಪು ಅವರು ಸಾಹಿತ್ಯ ಮತ್ತು ವಿಜ್ಞಾನ - ತಂತ್ರಜ್ಞಾನಗಳನ್ನು ಮಾನವ 
ಸಂಸ್ಕೃತಿಯ ಕಣ್ಣುಗಳೆಂದೇ ಭಾವಿಸಿದ್ದವರು. ಹೀಗಾಗಿ , ಜ್ಞಾನದ ಇತರ 
ಕ್ಷೇತ್ರಗಳತ್ತಲೂ ಕುವೆಂಪು ಭಾಷಾಭಾರತಿ ಕೈಚಾಚಲಿದೆ . ಈ ದೃಷ್ಟಿಯಲ್ಲಿ 
ಕನ್ನಡವನ್ನು ಸರ್ವಾಂಗಸಮೃದ್ಧವಾಗಿ ಬೆಳೆಸುವ ಅವರ ಆಶಯ ಕಾರ್ಯರೂಪಕ್ಕೆ 
ಬರಬಹುದಾಗಿದೆ. 
ಕೇಂದ್ರ ಸರ್ಕಾರದ ರಾಷ್ಟ್ರೀಯ ಅನುವಾದ ಮಿಷನ್ ಯೋಜನೆ ಕಾರ್ಯರೂಪಕ್ಕೆ 
ಬರಲಿರುವ ಹಿನ್ನೆಲೆಯಲ್ಲಿ, ಇಂಥ ಶಿಕ್ಷಣಗಳನ್ನು ಪ್ರಾರಂಭಿಸುವುದಕ್ಕೆ ಹೆಚ್ಚಿನ 

ಅರ್ಥ ಮತ್ತು ಔಚಿತ್ಯ ದೊರೆಯುವಂತಾಗುತ್ತದೆ. 
( ಆ) ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು : 

ಕೇಂದ್ರ ಸಾಹಿತ್ಯ ಅಕಾಡೆಮಿ ರವೀಂದ್ರನಾಥ ಠಾಗೂರ್ ಅವರ ಪ್ರಾತಿನಿಧಿಕ 
ಸಂಕಲನಗಳನ್ನೊಳಗೊಂಡ 'ರವೀಂದ್ರ ಸಂಚಯ ' ವನ್ನು ಹೊರತಂದಿರುವ 
ರೀತಿಯಲ್ಲಿಯೇ 'ಕುವೆಂಪು ಸಂಚಯ ' ಮತ್ತು ' ಪು . ತಿ. ನ ಸಂಚಯ' ಗಳನು. 
ಹೊರತರಲಾಗಿದೆ. ಇದೇ ರೀತಿಯಲ್ಲಿ ಶಿವರಾಮ ಕಾರಂತ , ಮಾಸ್ತಿ, 
ವಿ. ಕೃ . ಗೋಕಾಕ್ ಮತ್ತು ಜಿ. ಎಸ್ . ಶಿವರುದ್ರಪ್ಪ ಮೊದಲಾದ ಕನ್ನಡದ ಮಹತ್ವದ 
ಲೇಖಕರ ಸಂಕಲನಗಳನ್ನು ಹೊರತರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇತರ 


xiii 


ಮಹತ್ವದ ಕನ್ನಡ ಲೇಖಕರ 'ಸಂಚಯ ' ಗಳನ್ನು ಹೊರತರಲಾಗುತ್ತದೆ. ಮುಂದೆ 
ಇವುಗಳನ್ನು ಇಂಗ್ಲಿಷ್ ಮತ್ತು ಹಿಂದೀ ಭಾಷೆಗಳಲ್ಲಿ ಹೊರತರುವ 
ಯೋಜನೆಗಳನ್ನೂ ಹಾಕಿಕೊಳ್ಳಲಾಗುತ್ತಿದೆ. ಇದೇ ರೀತಿಯಲ್ಲಿ ಭಾರತೀಯ 
ಜ್ಞಾನಪೀಠ ಮತ್ತು ಇತರ ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಗಳಿಸಿರುವ ಶ್ರೇಷ್ಠ 
ಸಾಹಿತಿಗಳ ಪ್ರಾತಿನಿಧಿಕ ರಚನೆಗಳನ್ನು ಒಳಗೊಂಡ ಸಂಚಯ ಕೃತಿಗಳನ್ನು 
ಹೊರತರಲೂ ಕ್ರಮ ಕೈಗೊಳ್ಳಲಾಗುತ್ತದೆ. ಉದಾ: ಮೈಥಿಲಿ ಶರಣಗುಪ್ತ ಸಂಚಯ , 
ಜಯಶಂಕರ ಪ್ರಸಾದ್ ಸಂಚಯ ( ಹಿಂದಿ ), ವಿಶ್ವನಾಥ ಸಂಚಯ ( ತೆಲುಗು), 
ಆಶಾಪೂರ್ಣದೇವಿ ಸಂಚಯ ( ಬಂಗಾಳಿ ), ಶಿವಶಂಕರ ಪಿಳ್ಳೆ ಸಂಚಯ ಮತ್ತು 
ಎಂ. ಟಿ. ವಾಸುದೇವನ್ ನಾಯರ್ ಸಂಚಯ ( ಮಲಯಾಳಂ) ಇತ್ಯಾದಿ. 
ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮತ್ತು ಜಾಗತಿಕ ಸ್ತರಗಳಲ್ಲಿ ಪ್ರಚುರಪಡಿಸಲು 
ವಿಚಾರಗೋಷ್ಠಿಗಳನ್ನು , ಸಮಾರಂಭಗಳನ್ನು ಏರ್ಪಡಿಸುವಂತೆಯೇ , ಇತರ 
ಭಾರತೀಯ ಭಾಷಾಸಾಹಿತ್ಯ ಮತ್ತು ವಿಶ್ವಸಾಹಿತ್ಯಕ್ಕೆ ಸಂಬಂಧಪಟ್ಟಂತಹ ಇದೇ 
ಬಗೆಯ ಅರ್ಥಪೂರ್ಣ ಕಾರ್ಯಕ್ರಮಗಳನ್ನೂ ರೂಪಿಸಲಾಗುತ್ತದೆ. 
ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ರಾಷ್ಟ್ರೀಯ ಧೈಯೋದ್ದೇಶಗಳಿಗೆ 
ಪೂರಕವೂ - ಪ್ರೇರಕವೂ ಆಗುವಂತೆ , ಸಾಹಿತ್ಯಕ ಮತ್ತು ಸಾಂಸ್ಕೃತಿಕ 
ಕಾರ್ಯಕ್ರಮಗಳನ್ನು ರೂಪಿಸುತ್ತದೆ. ಅಂತೆಯೇ , ರಾಷ್ಟ್ರಮಟ್ಟದ ಸಾಹಿತ್ಯಕ 
ಸಂಘ - ಸಂಸ್ಥೆಗಳಾಗಿರುವ ಕೇಂದ್ರ ಸಾಹಿತ್ಯ ಅಕಾಡೆಮಿ , ನ್ಯಾಷನಲ್ ಬುಕ್ 
ಟ್ರಸ್ಟ್ , ಬಿರ್ಲಾ ಪ್ರತಿಷ್ಠಾನ ಮೊದಲಾದವುಗಳಲ್ಲಿನ ಕಾರ್ಯಕ್ರಮಗಳ 
ಪುನರಾವರ್ತನೆಯಾಗದಂತೆ ವಿಶಿಷ್ಟ ರೀತಿಯಲ್ಲಿ ಕುವೆಂಪು ಭಾಷಾಭಾರತಿ 
ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತದೆ. 
ರಾಷ್ಟ್ರೀಯ ಪ್ರಶಸ್ತಿ : ರಾಷ್ಟ್ರಮಟ್ಟದಲ್ಲಿ ಕುವೆಂಪು ಅವರ ಹೆಸರಿನಲ್ಲಿ ರಾಷ್ಟ್ರಮಟ್ಟದ 
ಪ್ರಶಸ್ತಿಯೊಂದನ್ನು ಸ್ಥಾಪಿಸಿ, ನಾಡಿನ ಶ್ರೇಷ್ಠ ಸಾಹಿತಿಗಳನ್ನು ಗುರುತಿಸಿ ಸನ್ಮಾನಿಸಲು 
ಹಾಗೂ ಅಂತಹವರ ಪ್ರಮುಖ ಕೃತಿಗಳನ್ನು ಕನ್ನಡದಲ್ಲಿ ಹೊರತರಲು 
ಯೋಜನೆಗಳನ್ನು ರೂಪಿಸಲಾಗುತ್ತದೆ. 
ತರುಣ ಪ್ರತಿಭೆಗಳಿಗೆ ಪ್ರೋತ್ಸಾಹ : ತರುಣ ಪ್ರತಿಭೆಗಳನ್ನು ಗುರುತಿಸಿ, ವಿವಿಧ 
ಭಾರತೀಯ ಭಾಷೆಗಳಲ್ಲಿ ವಿಶೇಷ ತರಬೇತಿ ಲಭ್ಯವಾಗುವಂತೆ ಮಾಡಿ, 
ಮುಂದೆ ಸಾಹಿತ್ಯಕ ಕೊಳು -ಕೊಡೆ ಕಾರ್ಯದಲ್ಲಿ ಅವರು ಸಕ್ರಿಯವಾಗಿ 
ಪಾಲ್ಗೊಳ್ಳುವಂತೆ ಮಾಡಲು ವಿವಿಧ ರಾಜ್ಯಸರ್ಕಾರಗಳ ನೆರವಿನೊಂದಿಗೆ 

ಶಿಷ್ಯವೇತನ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಬೇಕೆಂದು ಯೋಜಿಸಲಾಗಿದೆ. 
( ಇ ) ಪ್ರಕಟಣೆಗಳು : 


“ಕುವೆಂಪು ಭಾಷಾ ಭಾರತಿ' ಯ ಅಂಗವಾಗಿ ಸ್ಥಾಪಿಸಲಾಗಿದ್ದ ಕರ್ನಾಟಕ 
ಅನುವಾದ ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳೂ ಸೇರಿದಂತೆ ಇದುವರೆಗೆ 
೮೦ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತರಲಾಗಿದೆ. ಮುಂದೆ ಹಮ್ಮಿಕೊಳ್ಳಲಿರುವ 
ಹಾಗೂ ಮುನ್ನಡೆಯುತ್ತಿರುವ ಮಹತ್ವದ ಯೋಜನೆಗಳಲ್ಲಿ ಜೆ. ಡಿ.ಬರ್ನಾಲ್ 


XIV 


ಅವರ 'ಸೈನ್ಸ್ ಇನ್ ಹಿಸ್ಟರಿ' ಗ್ರಂಥದ ನಾಲ್ಕು ಸಂಪುಟಗಳು, ವಿಲ್ ಡ್ಯೂರಂಟ್ 
ಅವರ ' 

ಸ್ಟೋರಿ ಆಫ್ ಸಿವಿಲಿಸೇಷನ್ ' ನ ಉಳಿದ ಎಂಟು ಸಂಪುಟಗಳು 
( ೪ ರಿಂದ ೧೧) , ವಿಜ್ಞಾನ - ತಂತ್ರಜ್ಞಾನಗಳಿಗೆ ಸಂಬಂಧಿಸಿದ ಸುಮಾರು 
೧೦೦ ಗ್ರಂಥಗಳು , ಸೋಮದೇವನ 'ಕಥಾಸರಿತ್ಸಾಗರ' ದ ಐದು ಸಂಪುಟಗಳು 
( ೬ ರಿಂದ ೧೦) - ಇವನ್ನು ಮುಖ್ಯವಾಗಿ ಹೆಸರಿಸಬಹುದಾಗಿದೆ . ಭಾರತೀಯ 
ವಿಜ್ಞಾನ ಸಂಸ್ಥೆ' ಯಂಥ ಅಂತರರಾಷ್ಟ್ರೀಯ ಖ್ಯಾತಿಯ ಸಂಶೋಧನ ಸಂಸ್ಥೆಯ 
ಸಹಕಾರದೊಂದಿಗೆ ಇಂಗ್ಲಿಷ್ ಮತ್ತು ಜಾಪನೀಸ್ ಭಾಷೆಗಳಲ್ಲಿ ಮಾತ್ರ ಲಭ್ಯವಿರುವ 
' ಷಾಕ್ ವೇವ್'ನಂಥ ಗ್ರಂಥವೂ ಕನ್ನಡದಲ್ಲಿ ಹೊರಬರಲಿದೆ. ' ಅಂತರರಾಷ್ಟ್ರೀಯ 
ಕನಕದಾಸ ಮಿಷನ್ ' ಸಂಸ್ಥೆಯ ನೆರವಿನೊಂದಿಗೆ ಕನಕದಾಸರ ಸಾಹಿತ್ಯದ 
ಅನುವಾದ ಕಾರ್ಯವೂ ಆರಂಭಗೊಳ್ಳಲಿದೆ. ಹೀಗಾಗಿ, ಕನ್ನಡ ಪ್ರಕಾಶನದ 
ಕ್ಷೇತ್ರದಲ್ಲಿಯೂ , ಮಹತ್ವದ ಹೆಜ್ಜೆ- ಗುರುತುಗಳನ್ನು ಕುವೆಂಪು ಭಾಷಾ ಭಾರತಿ 
ಮೂಡಿಸುತ್ತ ಮುನ್ನಡೆಯಲಿದೆ. 
ಖಾಸಗಿ ಪ್ರಕಾಶಕರ ಸಹಭಾಗಿತ್ವ : ಖಾಸಗಿ ಪ್ರಕಾಶಕರ ಸಹಾಯ 
ಸಹಕಾರಗಳೊಂದಿಗೆ ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ 
ಪ್ರಚುರಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ವಿಶೇಷ ಯೋಜನೆಯೊಂದಕ್ಕೆ 
ಅನುಮತಿ ನೀಡಿದೆ. ಅದರ ಮೇರೆಗೆ ಕನ್ನಡ ಸಾಹಿತ್ಯ ಕೃತಿಗಳನ್ನು ಇತರ 
ಭಾರತೀಯ ಮತ್ತು ವಿದೇಶೀ ಭಾಷೆಗಳಲ್ಲಿ ಹೊರತರುವ ಪ್ರತಿಷ್ಠಿತ ಪ್ರಕಾಶನ 
ಸಂಸ್ಥೆಗಳಿಗೆ ಪ್ರಕಟಣೆಯ ಮೂಲಧನವನ್ನು ಮುಂಗಡವಾಗಿ ನೀಡಿ, ಮೂರು 
ವರ್ಷಗಳಲ್ಲಿ ಅವರು ಈ ಮುಂಗಡ ಹಣವನ್ನು ಹಿಂದಿರುಗಿಸುವಂತೆ 
ಈ ಕಾರ್ಯಕ್ರಮ ರೂಪಿಸಲಾಗಿದೆ. ಇತರ ಕ್ಷೇತ್ರಗಳಿಗೆ ಸರ್ಕಾರಗಳು ಅನೇಕ 
ರೀತಿಯಲ್ಲಿ ನೆರವಾಗುತ್ತಿದ್ದರೂ , ಪ್ರಕಟಣ ಕ್ಷೇತ್ರಕ್ಕೆ ಈ ಬಗೆಯ ನೆರವು 
ಇರಲಿಲ್ಲವಾದ್ದರಿಂದ ಇದೊಂದು ಬಗೆಯ ವಿನೂತನ ಯೋಜನೆ ಆಗಿದೆ 
ಎಂದೂ , ಇಂಥ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದಾಗಿಯೂ 
ಅನೇಕ ಪ್ರಕಾಶನ ಸಂಸ್ಥೆಗಳು ಈಗಾಗಲೇ ಮುಂದೆ ಬಂದಿವೆ. ಈ ದಿಕ್ಕಿನಲ್ಲಿ 
ವ್ಯವಸ್ಥಿತ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಹೀಗೆ ಪ್ರಕಟಣೆಯ 
ಕಾರ್ಯಕೈಗೊಳ್ಳುವ ಮೂಲಕ ಕನ್ನಡೇತರ ಭಾಷಾ - ಸಾಹಿತ್ಯವಲಯಗಳಲ್ಲಿ 
ಕನ್ನಡದ ಮೇರು ಕೃತಿಗಳು ಪರಿಚಯಗೊಳ್ಳಲೂ , ಜನಪ್ರಿಯವಾಗಲೂ 
ಸಹಾಯವಾಗುತ್ತದೆಂದು ನಂಬಲಾಗಿದೆ. 
ಕರ್ನಾಟಕ ಸರ್ಕಾರದ ಉದಾರ ನೆರವಿನಿಂದ ಇಂಥ ಮಹತ್ವದ ಮತ್ತು ಬಹು 
ಆಯಾಮದ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ಭಾರತೀಯ 
ಮತ್ತು ವಿದೇಶಿ ಭಾಷೆಗಳ ನಡುವೆ ಒಂದು ಸಾಂಸ್ಕೃತಿಕ ಸೇತುವೆಯಾಗಿ , 
ಮಿನಿ ವಿಶ್ವವಿದ್ಯಾನಿಲಯವಾಗಿ 'ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ' 
ಕಾರ್ಯ ನಿರ್ವಹಿಸಲಿದೆ. ನಾಡಿನ ಗಣ್ಯ ವಿದ್ವಾಂಸರ ಸಹಾಯ - ಸಹಕಾರಗಳನ್ನು 
ಪಡೆದುಕೊಂಡು ಈ ಕಾರ್ಯವನ್ನು ನಿರ್ವಹಿಸಲಾಗುತ್ತದೆ. ಹೀಗಾಗಿ, ಕುವೆಂಪು 
ಭಾಷಾ ಭಾರತಿ ಕನ್ನಡ ನಾಡಿನ ಇತಿಹಾಸದಲ್ಲಿ ಮಾತ್ರವಲ್ಲದೆ, ಭಾರತೀಯ 


XV 


ಸಾಹಿತ್ಯಕ - ಸಾಂಸ್ಕೃತಿಕ ಕ್ಷೇತ್ರದಲ್ಲಿ ಒಂದು ಮಹತ್ವದ ಸಂಸ್ಥೆಯಾಗಿ 
ರೂಪುಗೊಳ್ಳಲಿದೆಯೆಂದೂ , ಕನ್ನಡ ನಾಡಿನ ವಿದ್ವದ್ವಲಯಕ್ಕೆ, ಸಾಹಿತ್ಯ 
ಪ್ರೇಮಿಗಳಿಗೆ, ಕುವೆಂಪು ಅವರ ಅಭಿಮಾನಿಗಳಿಗೆ ಇದು ಸಂತಸದ ಸಂಗತಿ 
ಆಗಲಿದೆ ಎಂದೂ ನಂಬಿದ್ದೇವೆ. 
ರಷ್ಯಾ ದೇಶದ ಪ್ರಮುಖ ಕಾದಂಬರಿಕಾರರೂ , ಚಿಂತಕರೂ ಆದ ಕೌಂಟ್ 
ಲಿಯೋ ಟಾಲ್‌ಸ್ಟಾಯ್ ಅವರ ಜಗದ್ವಿಖ್ಯಾತ ಕಾದಂಬರಿಗಳಲ್ಲಿ ' ವಾರ್ 
ಅಂಡ್ ಪೀಸ್' ಕೂಡ ಒಂದು. ಜಗತ್ತಿನ ಅನೇಕ ಭಾಷೆಗಳಿಗೆ ಇದು 
ಅನುವಾದಗೊಂಡಿದೆ. ಕನ್ನಡದಲ್ಲಿ ' ಯುದ್ಧ ಮತ್ತು ಶಾಂತಿ' ಎಂಬ ಹೆಸರಿನಲ್ಲಿ 
ಈ ಕಾದಂಬರಿಯನ್ನು ಕನ್ನಡದ ಖ್ಯಾತ ಲೇಖಕರಾದ ಪ್ರೊ . ದೇ . ಜ . ಗೌ . 
ಅವರು ಬಹಳ ಹಿಂದೆಯೇ ಅನುವಾದಿಸಿದ್ದು , ಇತ್ತೀಚೆಗೆ ಅದರ ಪುನರ್ 
ಮುದ್ರಣವೂ ಹೊರಬಂದಿದೆ. ದೇಜಗೌ ಅವರು ಟಾಲ್‌ಸ್ಟಾಯ್ ಅವರ 'ರಿಸರೆಕ್ಷನ್' 
( ಪುನರುತ್ಥಾನ) ಮತ್ತು ' ಅನ್ನಾ ಕರೆನೀನಾ' ಕಾದಂಬರಿಗಳನ್ನೂ ಅನುವಾದಿಸಿದ್ದಾರೆ. 
ಟಾಲ್‌ಸ್ಟಾಯ್ ಅವರ ಆತ್ಮಕಥೆ' ಯ ಮತ್ತು ಅವರ ಹಲವಾರು ಕಥೆಗಳ 
ಅನುವಾದಗಳೂ ಕನ್ನಡದಲ್ಲಿ ಹೊರಬಂದಿವೆ. ಇವೆಲ್ಲ ಕನ್ನಡದಲ್ಲಿಯೂ 
ಟಾಲ್ಸ್ಟಾಯ್ ಅವರ ಜನಪ್ರಿಯತೆಗೆ ಸಾಕ್ಷಿಯಾಗಿವೆ. ಇದೀಗ ಕುವೆಂಪು 
ಭಾಷಾ ಭಾರತಿ ಪ್ರಾಧಿಕಾರ ” ವಾರ್ ಅಂಡ್ ಪೀಸ್' ನ ಇನ್ನೊಂದು ಆವೃತ್ತಿಯನ್ನು 
ಹೊರತರುತ್ತಿದೆ. ಇದೂ ಕನ್ನಡಿಗರಿಗೆ ಪ್ರಿಯವಾಗಬಹುದೆಂದು ನಂಬಿದ್ದೇವೆ. 
ಕನ್ನಡದ ಶ್ರೇಷ್ಠ ವಿಮರ್ಶಕರಲ್ಲಿ, ಉತ್ತಮ ಅನುವಾದಕರಲ್ಲಿ ಒಬ್ಬರಾಗಿರುವ 
ಪ್ರೊ | ಓ.ಎಲ್. ನಾಗಭೂಷಣ ಸ್ವಾಮಿಯವರು ಈ ಅನುವಾದವನ್ನು ಸಿದ್ಧ 
ಪಡಿಸಿಕೊಟ್ಟಿದ್ದಾರೆ. ರಷ್ಯನ್ನಿಂದ ಇಂಗ್ಲಿಷಿಗೆ ಬಂದಿರುವ ಹಲವು 
ಅನುವಾದಗಳನ್ನು ಪರಿಶೀಲಿಸಿ, ಈ ಅನುವಾದವನ್ನು ಸಿದ್ಧಪಡಿಸಿರುವುದು 
ಈ ಆವೃತ್ತಿಯ ವಿಶೇಷ. ಜೊತೆಗೆ, ಟಾಲ್‌ಸ್ಟಾಯ್‌ಗೆ ಸಂಬಂಧಿಸಿದಂತೆ ಕೆಲವು 
ವಿಶೇಷ ವಿಚಾರ - ವಿವರಗಳನ್ನು ಒದಗಿಸಿದ್ದಾರೆ. ಹಲವು ವರ್ಷಗಳ ಪರಿಶ್ರಮದಿಂದ 
ಇಂಥದೊಂದು ಆವೃತ್ತಿಯನ್ನು ಅವರು ಸಿದ್ಧಪಡಿಸಿಕೊಟ್ಟಿದ್ದಾರೆ. ಇದಕ್ಕಾಗಿ 
ಅವರಿಗೆ ನಮ್ಮ ವಿಶೇಷ ವಂದನೆಗಳು. 
ಪ್ರಾಧಿಕಾರದ ಕೆಲಸ - ಕಾರ್ಯಗಳಲ್ಲಿ ಹಾಗೂ ಪ್ರಕಟಣೆಯ ವಿಚಾರದಲ್ಲಿ 
ಹೃತೂರ್ವಕವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಪ್ರಾಧಿಕಾರದ ರಿಜಿಸ್ಟ್ರಾರ್ 
ಪಿ. ನಾರಾಯಣಸ್ವಾಮಿ ಮತ್ತು ಇತರ ಸಿಬ್ಬಂದಿವರ್ಗದವರಿಗೂ , ಸುಂದರವಾಗಿ 
ಮುದ್ರಿಸುವಲ್ಲಿ ಸಹಕರಿಸಿರುವ ಮೆ । ಮಯೂರ ಪ್ರಿಂಟ್ ಆಡ್ಸ್ನ 
ಶ್ರೀ ಬಿ .ಎಲ್. ಶ್ರೀನಿವಾಸ ಮತ್ತು ಅವರ ಸಿಬ್ಬಂದಿ ವರ್ಗದವರಿಗೂ ನಮ್ಮ 
ವಂದನೆಗಳು. 


ಪ್ರಧಾನ್ ಗುರುದತ್ತ 


ಪ್ರಸ್ತಾವನೆ 


ದೊಡ್ಡ ನಿಧಿಯಿಂದಿದ್ದರೆ ವಾಯುವುದಕ್ಕೆ ಹತ್ತಿರದ ಆಪ್ತವಾಗಿ 


ಸಾವಧಾನ | 

ಇದು ಅವಸರದಲ್ಲಿ ಓದುವ ಪುಸ್ತಕವಲ್ಲ. ಅಯ್ಯೋ , ಇಷ್ಟು ದೊಡ್ಡದು! 
ಎಂದು ಸಾವಿರದ ಎಂಟುನೂರು ಪುಟಗಳ ಗಾತ್ರವನ್ನು ಕಂಡು ಅಂಜುವವರಿಗೂ 
ಇದು ತಕ್ಕುದಲ್ಲ. ಕಾದಂಬರಿ ಅನ್ನುವುದು ಯಾರಿಗೆ ಕೇವಲ ಕಥೆಯ ಕುತೂಹಲವಲ್ಲವೋ 
ಅವರು , ಸಾಹಿತ್ಯವೂ ಬದುಕನ್ನು ಕಾಣುವ ದಾರಿ ಅನ್ನುವ ತಿಳಿವಳಿಕೆ ಇರುವವರು 
ಮಗ್ನರಾಗಬೇಕಾದ ಕೃತಿ ಇದು. ಕಣ್ಣಿಗೂ ಕಿವಿಗೂ ಅಪರಿಚಿತವಾದ ಹೆಸರುಗಳು , 
ಮೊದ ಮೊದಲಲ್ಲಿ ಸಷ್ಟವಾಗದ ಪಾತ್ರಗಳ ಪರಸ್ಪರ ಸಂಬಂಧಗಳು, ಸ್ವಲ್ಪ ಅಪರಿಚಿತ 
ಅನ್ನಿಸುವ ರಾಜಕೀಯ ವಿವರ ಇವನ್ನು ಸಮಾಧಾನದಿಂದ ದಾಟಿಕೊಂಡರೆ ನಮ್ಮ 
ಕಾಲದ, ನಮ್ಮದೇ ಬದುಕಿನ ಕಥನ ಇದು ಅನ್ನಿಸುವಷ್ಟು ಆಪ್ತವಾಗುತ್ತದೆ. ಮಹಾ 
ಕೃತಿಯೊಂದರ ಆಪ್ತ ಅನುಭವ ಪಡೆಯುವುದಕ್ಕೆ ಹತ್ತಿರದ, ಸುಲಭದ ದಾರಿಗಳಿಲ್ಲ. 
ಓದುಗರಲ್ಲಿ ಸಾವಧಾನವೊಂದಿದ್ದರೆ ' ವಾರ್ ಅಂಡ್ ಪೀಸ್' ಓದುಗರಿಗೆ ಬದುಕಿನ 
ಬಲು ದೊಡ್ಡ ನಿಧಿಯನ್ನೇ ಕೊಟ್ಟಿತು. 

ಕಡಲಿನ ಹಾಗೆ ಇದು. ನಿತ್ಯವೂ ಹೊಸತು . ಇಲ್ಲಿರುವುದು ಕ್ಷಣ ಕಥನ . 
ಯಾವುದೇ ಅನುಭವ ಆದಾಗ, ಆಗುತ್ತಿರುವಾಗ, ಆದ ಮೇಲೆ ಮನುಷ್ಯನ ಮೈ 
ಮನಸ್ಸು ಬುದ್ಧಿ ಭಾವಗಳು ಹೇಗೆ ಅದನ್ನು ತಮ್ಮದಾಗಿಸಿಕೊಳ್ಳುತ್ತವೆ, ಗ್ರಹಿಸುತ್ತವೆ, 
ಅರ್ಥಕಟ್ಟಿಕೊಳ್ಳುತ್ತವೆ , ವಿವರಿಸುತ್ತವೆ ಅನ್ನುವುದನ್ನು ಇದಕ್ಕಿಂತ ಇನ್ನೂ 
ಪರಿಪೂರ್ಣವೆಂಬಂತೆ ಹೇಳಲು ಸಾಧ್ಯವೇ ಇಲ್ಲ' ಅನ್ನುವ ಹಾಗೆ ಚಿತ್ರಿಸುವ ಕಥನ. 
ಬಿಡಿ ಮನುಷ್ಯನ ಮತ್ತು ಸಮೂಹದ ಅನುಭವದ ಕ್ಷಣಗಳ ಒಳ- ಹೊರಗುಗಳನ್ನು 
ಕಥಿಸುವ ಮೂಲಕವೇ ಇಲ್ಲಿನ ಕಥೆ ಅನ್ನುವುದು ರೂಪಪಡೆಯುತ್ತದೆ. ಅಲೆಯೇಳುವ 
ಕಡಲು , ಶಾಂತವಾದ ಕಡಲು, ಪ್ರಕ್ಷುಬ್ದವಾದ ಕಡಲು, ಅಂಚಿನಲ್ಲಿ ನೀರಾಟವಾಡಲು 
ಕರೆಯುವ ಕಡಲು, ಕ್ಷಣ ಕ್ಷಣವೂ ಹೊಸತಾಗಿ ಕಾಣುವ ಅಲೆಗಳ ವಿನ್ಯಾಸ, ಮೊರೆತ, 
ಇರುವ, ಇರುತ್ತಲೇ ಹೊಸತಾಗುವ, ಆದರೂ ಚಿರಪರಿಚಿತ ಅನಿಸುವ, ನೋಡಿದಷ್ಟೂ 
ಹೊಸ ಭಾವಗಳನ್ನು ಉದ್ದೀಪಿಸುವ ಕಡಲಿನ ಹಾಗೆ ಈ ಕಥನ , ಈ ಕಥೆ . ಬದುಕಿನ 
ಯಾವ ಸಣ್ಣ ವಿವರವೂ ನಿರ್ಲಕ್ಷಿಸಬಹುದಾದಷ್ಟು ಸಣ್ಣದಲ್ಲ - ಸುಂದರಿಯ 
ತುಟಿಯಂಚಿನಲ್ಲಿ ನಗು ಅರಳುವ ಗಳಿಗೆ, ಶತ್ರುವಿನ ಗುಂಡೇಟಿಗೆ ಇನ್ನೇನು 
ಗುರಿಯಾಗಲಿರುವ ಸೈನಿಕನ ಮನಸ್ಸಲ್ಲಿ ಮೂಡುವ ಹೆಸರಿಡಲಾಗದ ಭಾವ, 
ಬೆಳುದಿಂಗಳಲ್ಲಿ ತೊಯ್ದು ನಿಂತ ಅರೆ ಸ್ಪಷ್ಟ ಮರ ಇಂಥ ಅಸಂಖ್ಯ ಅನುಭವಗಳ 
ಮೊತ್ತ, ಅಂಥವನ್ನು ನಮಗೆ ನಾವೇ ಆದರೂ ಹೇಳಿಕೊಳ್ಳುವ ಕಥನವೇ ಬದುಕು 
ಅನ್ನುವ ಹಾಗೆ ; ಇವೆಲ್ಲದರೊಡನೆ ನಾವು ಸಮಾಜ ಅನ್ನುವ, ಚರಿತ್ರೆ ಅನ್ನುವ, 
ರಾಜಕೀಯ ಅನ್ನುವ ಸಂಗತಿಗಳೂ ಬೇರ್ಪಡಿಸಲಾಗದಂತೆ ಬೆರೆತು ಇರುವ, ತಿದ್ದುವ 
ಬೆರಗು ಕೂಡ ಓದುಗರ ಮನಸ್ಸು ತಟ್ಟುತ್ತದೆ. ಟಾಲ್ಸ್ಟಾಯ್ ನಿಜವಾಗಿ 'ನೋಡಿ' ದವನು ; 


xvii 


ಓದುಗರೂ ಅವನು ಕಂಡದ್ದನ್ನೆಲ್ಲ ನೋಡಬಲ್ಲ' ಸಾವಧಾನ ಇರುವವರು ಆಗಬೇಕು. 
ಕಥೆಯ ಕುತೂಹಲದ ಧಾವಂತಕ್ಕಿಂತ ಸಾವಧಾನವಾಗಿ ಬದುಕಿನೊಳಗಾಗುವ ಬಗೆ 
ಇಲ್ಲಿನದು. 
- ' ವಾರ್ ಅಂಡ್ ಪೀಸ್' ಸುಮಾರು ಮೂವತ್ತು ವರ್ಷಗಳಿಂದ ನನ್ನೊಳಗೇ 
ಬೆಳೆಯುತ್ತಾ ಬಂದಿರುವ ಕೃತಿ. ಕನ್ನಡದಲ್ಲಿ ಅದನ್ನು ಹೇಳಬೇಕೆಂಬ, ನನ್ನ ಸುಖಕ್ಕೆ, 
ನನ್ನ ತೃಪ್ತಿಗೆ ಮಾಡಿದ ಅನುವಾದ ಸಮಾಧಾನಕ್ಕಿಂತ ಹೆಚ್ಚಾಗಿ ವಿನಯವನ್ನು 
ಕಲಿಸಿದೆ. ಯಾರಿಗೆ ' ವಾರ್ ಅಂಡ್ ಪೀಸ್' ಪರಿಚಯವಿಲ್ಲವೋ ಅವರಿಗೆ ಅದರ 
ಬಗ್ಗೆ ಹೇಳುವುದೆಂದರೆ ಎಸ್ಕಿಮೋಗಳಿಗೆ ಆನೆಯನ್ನು ವರ್ಣಿಸಿದಂತೆ ಅನ್ನುವ, ಇತ್ತೀಚೆಗೆ 
ಪ್ರಕಟವಾದ ಈ ಕಾದಂಬರಿಯ ಇಂಗ್ಲಿಷ್ ಅನುವಾದದ ರಿಮ್ರದಲ್ಲಿ ಓದಿದ ಮಾತು 
ತೀರ ನಿಜ ಅನ್ನಿಸುತ್ತದೆ. 
* ತೀರ ಸಾಮಾನ್ಯ ಓದುಗರಿಗೂ ಕಷ್ಟವಾಗದಂಥ, ಅರ್ಥವಾಗದ ಒಂದೂ 
ಪದ ಬಳಸದ , ಸಲೀಸಾಗಿ ಓದಬಹುದಾದ ಬರವಣಿಗೆ ಟಾಲ್ಸ್ಟಾಯ್‌ನದು. ಆದರೆ 
ಬದುಕನ್ನು ಅವನು ನೋಡುವ ರೀತಿ, ಮಾತಿನಲ್ಲಿ ಅವನು ತರುವ ಲಯದ 
ಬಗೆಗಳು, ಪ್ರತಿ ನುಡಿಯಲ್ಲೂ ಕಾಣುವ ಜೀವಂತಿಕೆ , ತೀರ ನಿಜ ನಿಜ ಅನ್ನಿಸುವ 
ವ್ಯಕ್ತಿಗಳು ಬೆರಗಲ್ಲದೆ ಮತ್ತೇನನ್ನೂ ಹುಟ್ಟಿಸುವುದಕ್ಕೆ ಸಾಧ್ಯವಿಲ್ಲ. ಓದುಗನೊಬ್ಬ 
ಹೇಳುತ್ತಾನೆ - ಟಾಲ್ಸ್ಟಾಯ್‌ನನ್ನು ಓದಿ ಬದುಕಿನ ಬಗ್ಗೆ ಪ್ರೀತಿ ಬೆಳಸಿಕೊಳ್ಳದವರು, 
ಬೆರಗು ಪಡದವರು ಕೆಂಪು ಹಸಿರುಗಳನ್ನು ಗುರುತಿಸಲಾರದ ಬಣ್ಣಗುರುಡರಂತೆ. 

ಕನ್ನಡದಲ್ಲಂತೂ ಟಾಲ್ಸ್ಟಾಯ್ ಅಪರಿಚಿತನೇನಲ್ಲ. ಅವನು “ ಮಹರ್ಷಿ' 
ಅನ್ನುವ ಅಭಿಪ್ರಾಯ , ಗಾಂಧೀಜಿಯ ಮೇಲೂ ಪ್ರಭಾವ ಬೀರಿದ ಮಹಾನುಭಾವ 
ಅನ್ನುವ ಗೌರವ ಇವು ಪ್ರಮುಖವಾಗಿವೆ ಕನ್ನಡದ ಓದುಗರ ಮನಸ್ಸಿನಲ್ಲಿ. ಆದರೆ , 
ತೀರ ತಳಮಳ ಪಡುತಿದ್ದ, ಬದುಕಿನ ಅರ್ಥವಂತಿಕೆಯನ್ನು ಅರಿಯಲು ಇನ್ನಿಲ್ಲದಷ್ಟು 
ಪ್ರಯೋಗಗಳಲ್ಲಿ ತೊಡಗಿಕೊಂಡ, ಚರಿತ್ರೆ, ನೀತಿ, ಆಧ್ಯಾತ್ಮ, ರಾಜಕೀಯ, ಜೂಜು. 
ಲಂಪಟತನ ಎಲ್ಲದರಲ್ಲೂ ತೀವ್ರವಾಗಿ ತೊಡಗಿಕೊಂಡಿದ್ದ, ತೀರ ಲೌಕಿಕನೂ ತೀರ 
ವಿರಾಗಿಯೂ ಆಗಿದ್ದ ಅತಿ ಸಂಕೀರ್ಣ ಸ್ವಭಾವ ಟಾಲ್ಸ್ಟಾಯ್‌ನದು. ಅವನ ಎಲ್ಲ 
ಶಕ್ತಿ , ಉತ್ಸಾಹ, ಗಾಂಭೀರ್ಯ, ಲೇವಡಿ, ಕುಹಕ, ತಮಾಷೆ ಇತ್ಯಾದಿಗಳನ್ನೆಲ್ಲ ಒಳಗೊಂಡು 
'ಬದುಕೆಂದರೆ ಇದೇ ' ಅನ್ನಿಸುವ ಹಾಗಿರುವ, ಆದರೆ ಕಲಾತ್ಮಕ ವಿನ್ಯಾಸದಲ್ಲಿ ಒಂದಿಷ್ಟೂ 
ರಾಜಿಮಾಡಿಕೊಳ್ಳದ , ಅವನ ಯೌವನದ ದಿನಗಳ ಮೊದಲ ಕೃತಿ ' ವಾರ್ ಅಂಡ್ 
ಪೀಸ್', ೨೦೦೯ರಲ್ಲಿ ಪಟ್ಟಿ ಮಾಡಿದ ಜಗತ್ತಿನ ಅತಿ ಮುಖ್ಯ ನೂರು ಪುಸ್ತಕಗಳಲ್ಲೂ 
( ಇಂಥ ಪಟ್ಟಿಗಳು ವ್ಯಾಪಾರದ ಗಿಮಿಕ್ ಆಗಿದ್ದರೂ ಕೂಡ) ಈ ಕಾದಂಬರಿ 
ಕಾಣಿಸಿಕೊಳ್ಳುತ್ತದೆ. 'ಸಾಹಿತ್ಯದ ಸೀಮೆಯನ್ನೇ ಹಿಗ್ಗಿಸಿದ' ಅನ್ನುವ ಮಾತನ್ನು 
ಹೇಳುವುದಿದ್ದರೆ ಅದು ' ವಾರ್ ಅಂಡ್ ಪೀಸ್' ಬಗ್ಗೆ ಹೇಳಬಹುದಾದ ಮಾತು .. 

- ಕಾದಂಬರಿಯ ಐದುನೂರಕ್ಕೂ ಹೆಚ್ಚು ಪಾತ್ರಗಳಲ್ಲಿ ಕೆಲವು ಮಾತ್ರ ತಮ್ಮನ್ನು 
ತಾವು ನೋಡಿಕೊಳ್ಳುತ್ತಾ ಬದುಕಿನ ಬಗ್ಗೆ ಪ್ರಶ್ನೆ ಕೇಳಿಕೊಳ್ಳುತ್ತವೆ. ಸಂತೋಷವೆಂದರೇನು? 
ಎಲ್ಲಿದೆ ಅದು? ಸಂತೋಷವೆನ್ನುವುದು ತಮಾಷೆಗಿಂತ ಹೇಗೆ ಬೇರೆ? ಸಾವು ಖಚಿತವೆಂಬ 
ತಿಳಿವಳಿಕೆಯಿದ್ದರೂ ಬದುಕುವುದಕ್ಕೆ ಸಾಧ್ಯವಾಗುತ್ತದಲ್ಲ ಹೇಗೆ? ದೇವರ ಕಲ್ಪನೆ 
ಇಟ್ಟುಕೊಳ್ಳುವುದರಿಂದ ಲಾಭವಿದೆಯೇ ? ಮನುಷ್ಯನಿಗೆ ಆಗುವ ಅನುಭವಗಳಲ್ಲಿ 
ವಿಧಿಯ ಪಾಲು ಎಷ್ಟು, ಆಕಸ್ಮಿಕದ ಪಾಲು ಎಷ್ಟು? ಪೂರ್ಣ ಸ್ವಾತಂತ್ರ್ಯವೆಂಬುದು 


xviii 


ಇದೆಯೇ ? ಇದ್ದರೆ ಅದನ್ನು ಪಡೆಯುವುದು ಹೇಗೆ? ನಾವು ನೀವು 
ಅವಲಂಬಿಸಿಕೊಳ್ಳಬಹುದಾದ ತಾತ್ವಿಕ ಸತ್ಯಗಳು ಇವೆಯೇ ? ನಮ್ಮ ಪಾಲಿನ 
ಈ ಬದುಕನ್ನು ಏನು ಮಾಡಬೇಕು ನಾವು? ಅನುಭವವನ್ನು ಸುಳ್ಳಾಗದಂತೆ ಹೇಳುವುದು 
ಹೇಗೆ? ಇಂಥ ಮುಖ್ಯ ಪ್ರಶ್ನೆಗಳು ಕಾದಂಬರಿಯ ಪಾತ್ರಗಳ ಮತ್ತು ಓದುಗರ 
ಪರಿಶೀಲನೆಗೆ ಈ ಕಾದಂಬರಿಯಲ್ಲಿ ಕಾದಿವೆ. ಹಾಗೆಯೇ ಅಸಂಖ್ಯವಾದ ಉಲ್ಲಾಸಮಯ, 
ಸಂತೋಷಭರಿತ ಅನುಭವಗಳ ಚಿತ್ರಣವೂ ಇವೆ. ಬದುಕಿನಷ್ಟೇ ಸರಳ ಅಥವಾ 
ಸಂಕೀರ್ಣ ಕೃತಿ ಇದು. ಆದ್ದರಿಂದಲೇ ಓದುಗರು ಇದನ್ನು ಸಾವಧಾನದಿಂದ 
ಓದಬೇಕೆಂದು ಹೇಳಿದ್ದು . 


ಕಾದಂಬರಿಯ ಹೆಸರು 

'ವೊಯಾ ಇ ಮಿರ್' ಅನ್ನುವುದು ' ವಾರ್ ಅಂಡ್ ಪೀಸ್' ಕಾದಂಬರಿಯ 
ರಶಿಯನ್ ಹೆಸರು . ಮಿರ್ ಅನ್ನುವ ಪದಕ್ಕೆ ರಶಿಯನ್ ಭಾಷೆಯಲ್ಲಿ ಶಾಂತಿ 
ಅನ್ನುವ ಅರ್ಥ ಇರುವ ಹಾಗೆಯೇ ಸಮಾಜ ಅನ್ನುವ ಅರ್ಥವೂ ಇದೆ ಅನ್ನುತ್ತಾರೆ. 
ಈ ಕಾದಂಬರಿಯನ್ನು ಟಾಲ್ಸ್ಟಾಯ್ ಬರೆಯಲು ತೊಡಗಿದ್ದು ೧೮೬೨ರಲ್ಲಿ, ತನ್ನ 
ಮೂವತ್ತನಾಲ್ಕನೆಯ ವಯಸ್ಸಿನಲ್ಲಿ. ಅದೇ ವರ್ಷ ಅವನ ಮದುವೆಯೂ ಆಗಿತ್ತು. 
ಕೊನೆಯ ಪಕ್ಷ ಏಳು ಬಾರಿ ಇಡೀ ಕಾದಂಬರಿಯನ್ನು ತಿದ್ದಿ ಬರೆದ ಟಾಲ್ಸ್ಟಾಯ್. 
ಟಾಲ್ಸ್ಟಾಯ್ ಪ್ರತಿದಿನವೂ ಬರೆದದ್ದನ್ನು ಅವನ ಹೆಂಡತಿ, ಹತ್ತೊಂಬತ್ತು ವರ್ಷದ 
ಸೋಫಿಯಾ ನಿಷ್ಠೆಯಿಂದ ಪ್ರತಿಮಾಡಿಕೊಡುತಿದ್ದಳು, ಕಾದಂಬರಿಯ ಬಗ್ಗೆ 
ಚರ್ಚಿಸುತಿದ್ದಳು. ಕಾದಂಬರಿ ರಚನೆಯಲ್ಲಿ ಆಕೆಯ ಸಹಯೋಗ ದಂತಕಥೆಯಾಗುವಷ್ಟು 
ಬೆಳೆದಿದೆ. ೧೮೬೩ ರಿಂದ ೧೮೬೮ರ ವರೆಗೆ ಈ ಕಾದಂಬರಿ ಪ್ರಕಟವಾಯಿತು. 
ಮೊದಲಿಗೆ ಈ ಕಾದಂಬರಿಯನ್ನು '೧೮೦೫' ಎಂದು ಕರೆಯಬೇಕು ಎಂದು 
ಉದ್ದೇಶಿಸಿದ್ದ ಟಾಲ್ಸ್ಟಾಯ್, ನಂತರ ಇದಕ್ಕೆ ' ಆಲ್ ಈಸ್ ವೆಲ್ ದಟ್ ಎಂಡ್ 
ವೆಲ್' ಎಂಬ ಹೆಸರನ್ನು ಕೊಟ್ಟ. ಕೊನೆಗೆ ಉಳಿದದ್ದು 'ಮೊಯ್ತಾ ಇ ಮಿರ್‌', 
ಇಂಗ್ಲಿಷಿನಲ್ಲಿ ' ವಾರ್ ಅಂಡ್ ಪೀಸ್', ಹೀಗೆ ಬದಲಾದ ಹೆಸರುಗಳು ಕಾದಂಬರಿಯ 
ಬದಲಾಗುತ್ತ ಹೋದ ಸ್ವರೂಪವನ್ನೂ ತಿಳಿಸುತ್ತವೆ . ಮಹಾಭಾರತದ ಪಾತ್ರಗಳು , 
ಆ ಪಾತ್ರಗಳ ಕಥೆಗಳ ವಿವರಗಳು ನಮ್ಮ ದೇಶದ ಒಂದೊಂದು ಭಾಗದಲ್ಲಿ ಒಂದೊಂದು 
ರೀತಿ ಇರುವ ಹಾಗೆಯೇ ' ವಾರ್ ಅಂಡ್ ಪೀಸ್' ನ ಜನರೂ ಲೇಖಕ ಒಮ್ಮೊಮ್ಮೆ 
ಕೃತಿಯನ್ನು ಮರುರಚಿಸಿದಾಗಲೂ ಬೇರೆ ಬೇರೆ ಆಗುತ್ತಾ ಹೋದರು . ಸಾವಿರ 
ಅರ್ಜುನರು , ಸಾವಿರ ಸೀತೆಯರು ನಮ್ಮ ಮನಸ್ಸಿನಲ್ಲಿ ರೂಪ ತಳೆದಂತೆಯೇ 
ಸಾವಿರ ಪಿಯರೆ, ಸಾವಿರ ಆಂಡೂ , ಸಾವಿರ ನತಾಶಾಗಳು ಕಳೆದ ನೂರೈವತ್ತು 
ವರ್ಷಗಳಲ್ಲಿ ಜಗತ್ತಿನ ಅಸಂಖ್ಯ ಓದುಗರ ಮನಸ್ಸಿನಲ್ಲಿ ರೂಪ ಪಡೆಯುತ್ತಿದ್ದಾರೆ. 


ಕೆಲವು ಅಚ್ಚರಿಗಳು 

- ಹಿಮಾಲಯದ ವಿಸ್ತಾರವಾದ ಪರ್ವತ ಶ್ರೇಣಿಯ ಹಾಗೆ ಈ ಕಾದಂಬರಿ . 
ಸುಮಾರು ಐವತ್ತು ಮುಖ್ಯ ಪಾತ್ರಗಳೂ ಸೇರಿದಂತೆ ಒಟ್ಟಾರೆಯಾಗಿ ಐದುನೂರಕ್ಕೂ 
ಹೆಚ್ಚು ಜನ ಈ ಕಾದಂಬರಿಯಲ್ಲಿ ಎದುರಾಗುತ್ತಾರೆ. ರಶಿಯನ್ ಬದುಕನ್ನು ಬದಲಿಸಿದ 
ಮೂರು ಯುದ್ಧಗಳ ವರ್ಣನೆ ಇದರಲ್ಲಿದೆ. ಸೈನ್ಯದ, ಯುದ್ಧದ ಸತ್ಯಗಳನ್ನು ಈ 


xix 


ಕಾದಂಬರಿ ಮನಗಾಣಿಸುವಂತೆ ಬೇರೆ ಯಾವ ಚಾರಿತ್ರಿಕ ದಾಖಲೆಗಳೂ 
ಮನಗಾಣಿಸಲಾರವು. ಯುದ್ಧ, ರಾಜಕೀಯ , ಸಮಾಜದಲ್ಲಿ ಆಗುತ್ತಿದ್ದ ಪಲ್ಲಟ ಇವನ್ನೆಲ್ಲ 
ಮುಖ್ಯ ಪಾತ್ರಗಳ ಸುಖ , ದುಃಖ , ದುಮ್ಮಾನ, ನಲಿವು, ಸಣ್ಣ ಪುಟ್ಟ ಸಂತೋಷ, 
ಕನಸು, ಭಯ , ಭ್ರಮೆ , ವಾಸ್ತವದ ಚರಿತ್ರೆ ಕಥನವಾಗುವಾಗ, ನೆನಪಿನ ರೂಪ 
ಪಡೆದಾಗ ಆಗುವ ವ್ಯತ್ಯಾಸಗಳು , ಸಾವು, ಪ್ರೀತಿ, ರಶಿಯದ ಎಲ್ಲ ಸ್ತರಗಳ ಬದುಕು, 
ಇವೆಲ್ಲ ಒಂದರೊಡನೆ ಇನ್ನೊಂದು ಸಂದಿಲ್ಲದಂತೆ ಬೆರೆತು ನಿರೂಪಣೆಗೊಂಡ 
ಕಾವ್ಯರೂಪೀ ಕಥನ ಇದು. ಟಾಲ್ಸ್ಟಾಯ್‌ನ ಕಥನದಲ್ಲಿಯೇ ಕಥೆ ಹುಟ್ಟಿಕೊಳ್ಳುತ್ತದೆಯೇ 
ಹೊರತು ಸಂಗ್ರಹಿಸಿ ಹೇಳಬಹುದಾದ ಕಥೆ ಅನ್ನುವುದು ಇಲ್ಲಿ ಇಲ್ಲ. 


ಯೂರೋಪಿಯನ್ ಮಾದರಿಯ ಕಾದಂಬರಿಯ ವಿನ್ಯಾಸವನ್ನು ಧಿಕ್ಕರಿಸಿ 
ಒಂದು ಕೇಂದ್ರ' ವಿಲ್ಲದೆ, ಒಂದು ಕೇಂದ್ರ ' ಪಾತ್ರ'ವಿಲ್ಲದೆ, ಆದಿ - ಅಂತ್ಯವಿಲ್ಲದೆ, ಮಹಾ 
ಸಂಗೀತ ಮೇಳದ ಹಾಗೆ ಬಗೆ ಬಗೆಯ ಲಯ ವಿನ್ಯಾಸಗಳಲ್ಲಿ ರೂಪು ತಳೆಯುತ್ತಾ 
ಹೋಗುವ ಕಥನ ಇಲ್ಲಿದೆ. ಕನ್ನಡದ ಮಟ್ಟಿಗೆ ಹೇಳುವುದಾದರೆ ಕಾದಂಬರಿಯ 
ಪ್ರಕಾರದ ಬಗ್ಗೆಯೇ ಒಲವಿಲ್ಲದ ಕುವೆಂಪು ಟಾಲ್ಸ್ಟಾಯ್‌ನನ್ನು ಓದಿ ಬರೆದರೆ 
ಹೀಗೆ ಬರೆಯಬೇಕೆಂದು 'ಕಾನೂರು ಸುಬ್ಬಮ್ಮ ಹೆಗ್ಗಡಿತಿ ' ಮತ್ತು ' ಮಲೆಗಳಲ್ಲಿ 
ಮದುಮಗಳು' ಬರೆದರು. ಕಾನೂರು ಹೆಗ್ಗಡಿತಿ ಟಾಲ್ಸ್ಟಾಯ್‌ನ ' ಅನ್ನಾ ಕರೆನೀನಾ' ದ 
ಸ್ವರೂಪವನ್ನೂ , ' ಮಲೆಗಳಲ್ಲಿ ಮದುಮಗಳು ' ' ವಾರ್ ಅಂಡ್ ಪೀಸ್' ನ ಸ್ವರೂಪವನ್ನೂ 
ಹೋಲುತ್ತವೆ. ಇಲ್ಲಿ ಯಾವುದೂ ಮುಖ್ಯವಲ್ಲ, ಯಾವುದೂ ಅಮುಖ್ಯವಲ್ಲ' ಅನ್ನುವ 
ಸುಪ್ರಸಿದ್ದವಾದ ಕುವೆಂಪು ಮಾತು ' ವಾರ್ ಅಂಡ್ ಪೀಸ್ ' ನ ಪಿಯರೆ 
ಆತ್ಮಾವಲೋಕನದಲ್ಲಿ ಒಮ್ಮೆ ಹೇಳಿಕೊಳ್ಳುವ [ ಸಂಪುಟ ೨ , ಸಂಚಿಕೆ ೫ ಅಧ್ಯಾಯ 
೧ರ ಕೊನೆಗೆ] ಮಾತೇ ಆಗಿದೆ. ಕುವೆಂಪು ಕಾದಂಬರಿಯ ಮೊದಲಲ್ಲಿ ಬರುವ 
ಮಾತುಗಳು ಇಡಿಯಾಗಿ ಟಾಲ್ಸ್ಟಾಯ್ ಕೃತಿಗೂ ಅನ್ವಯವಾಗುತ್ತವೆ. 


ರಶಿಯದ ಇನ್ನೊಬ್ಬ ಮಹಾನ್ ಕಾದಂಬರಿಕಾರ ದಾಸ್ತೋವ್ಸ್ಕಿಯ ' ಕ್ರೈಂ 
ಅಂಡ್ ಪನಿಷ್ಮೆಂಟ್' ಕೂಡ ' ವಾರ್ ಅಂಡ್ ಪೀಸ್' ಕಾದಂಬರಿಯ ಮೊದಲ 
ಆವೃತ್ತಿಯೊಡನೆ, ಏಕ ಕಾಲದಲ್ಲಿ ಒಂದೇ ನಿಯತಕಾಲಿಕದಲ್ಲಿ, ಧಾರಾವಾಹಿಯಾಗಿ 
ಪ್ರಕಟಗೊಂಡಿತು . ೧೮೦೫ ' ಎಂಬ ಹೆಸರು ಹೊತ್ತಿದ್ದ ' ವಾರ್ ಅಂಡ್ ಪೀಸ್' ನ 
ಮೊದಲ ರೂಪ ಮತ್ತು ಕ್ರೈಂ ಅಂಡ್ ಪನಿಷ್ಮೆಂಟ್ ' ಎರಡೂ ೧೮೬೬ರ ರಸ್ಕಿ 
ವೆಸ್ನಿಕ್ ಪತ್ರಿಕೆಯಲ್ಲಿ ಸರದಿಯ ಪ್ರಕಾರ, ಜನವರಿ ತಿಂಗಳಲ್ಲಿ ದಾಸ್ತೋವ್ಸ್ಕಿ , 
ಫೆಬ್ರವರಿ, ಮಾರ್ಚ್, ಏಪ್ರಿಲ್‌ನಲ್ಲಿ ಟಾಲ್ಸ್ಟಾಯ್, ಮತ್ತೆ ದಾಸ್ತೋವ್ಸ್ಕಿ ಹೀಗೆ 
ಪ್ರಕಟಗೊಂಡವು. ಮಹಾನ್ ವ್ಯಕ್ತಿಯೊಬ್ಬ ಬದುಕಿನ ಕ್ರಮವನ್ನು ಪಲ್ಲಟಿಸಬಲ್ಲ ಅನ್ನುವ 
ದಾಸೋವ್ಸ್ಕಿಯ ನಿಲುವು ಮತ್ತು ಯಾವನೇ ಒಬ್ಬ ಮನುಷ್ಯನ ಇಚ್ಛೆಯಿಂದ 
ಬದುಕಿನ ಗತಿ ಬದಲಾಗದು ಅನ್ನುವ ಟಾಲ್ಸ್ಟಾಯಮ್ನ ನಿಲುವು ಎರಡೂ 
ತದ್ವಿರುದ್ಧವಾದವು. ಮತ್ತೆ ಆ ಕಾಲದಲ್ಲಿ ನಡೆಯುತ್ತಿದ್ದ (" ದಿ ಕಾಂಟೆಂಪೊರರಿ ' 
ಅನ್ನುವ ನಿಯತಕಾಲಿಕ ) ಮಹಾಪುರುಷರನ್ನು ಗುರುತಿಸುವುದು ಹೇಗೆ, ಅವರ 
ಕ್ರಿಯೆಗಳ ಪರಿಣಾಮವೇನು ಅನ್ನುವ ಚರ್ಚೆಗಳಿಗೆ ಶತಮಾನದ ಎರಡು ದೊಡ್ಡ 
ಮನಸ್ಸುಗಳು ಕೊಟ್ಟ ಭಿನ್ನ ಉತ್ತರಗಳಂತೆ ಇದ್ದವು. 


XX 


೧೯೭೦ರ ಡಿಸೆಂಬರ್ ೬ನೆಯ ತಾರೀಕಿನಿಂದ ಐದು ದಿನಗಳ ಕಾಲ ಅಮೆರಿಕದ 
ಪ್ಯಾಸಿಫಿಕ್ ರೇಡಿಯೋ ' ವಾರ್ ಅಂಡ್ ಪೀಸ್' ಕಾದಂಬರಿಯ ನಿರಂತರ ಓದು 
ಪ್ರಸಾರ ಮಾಡಿತು. ಪತ್ರಕರ್ತರು, ಅಧ್ಯಾಪಕರು , ಲೇಖಕರು, ಸಾಮಾನ್ಯರು ಹೀಗೆ 
೧೭೦ ಜನ ದಿನವೂ ಬಂದು ಬಂದು ' ವಾರ್ ಅಂಡ್ ಪೀಸ್' ಓದುವಿಕೆಯಲ್ಲಿ 
ಪಾಲ್ಗೊಂಡಿದ್ದರು . ಮತ್ತೆ ೨೦೦೫ರಲ್ಲಿ ಆ ಘಟನೆಯ ಮೂವತ್ತೈದನೆಯ 
ವಾರ್ಷಿಕೋತ್ಸವ ಆಚರಿಸಿದರು . ಅಮೆರಿಕದ ಯುದ್ಧೋತ್ಸಾಹದ ನಡುವೆ ಈ ಕಾದಂಬರಿ 
ವಾಚನಕ್ಕೆ ಸಿಕ್ಕ ಮನ್ನಣೆ ಅಭೂತಪೂರ್ವ ಅನ್ನುವಷ್ಟಿತ್ತು. 


೧೯೫೬ರಿಂದ ೨೦೦೩ರ ವರೆಗೆ ಒಟ್ಟು ೧೪ ಚಲನಚಿತ್ರಗಳು , ಟಿವಿ 
ಧಾರಾವಾಹಿಗಳು ' ವಾರ್ ಅಂಡ್ ಪೀಸ್' ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು 
ಸೃಷ್ಟಿಯಾಗಿವೆ. ಈ ಕಾದಂಬರಿಯ ಭಾಗಗಳ ಬ್ಯಾಲೆ ರೂಪಗಳೂ ಇವೆ. ನಮ್ಮ 
ದೇಶದ ರಾಮಾಯಣ ಮಹಾಭಾರತಗಳನ್ನು ಆಧಾರವಾಗಿಟ್ಟುಕೊಂಡು ಕಥೆಯನ್ನು 
ಹಿಗ್ಗಿಸಿಯೋ ಕುಗ್ಗಿಸಿಯೋ , ಎಲ್ಲೆಲ್ಲಿಂದಲೋ ಆರಂಭಿಸಿಯೋ ಸಂಪೂರ್ಣ ರಾಮಾಯಣ 
ಇತ್ಯಾದಿಗಳು ರೂಪುಗೊಂಡಿರುವಂತೆ ' ವಾರ್ ಅಂಡ್ ಪೀಸ್' ನ ಬಗೆ ಬಗೆಯ 
ನಿರೂಪಣೆಗಳು ದೃಶ್ಯಮಾಧ್ಯಮದಲ್ಲಿ ರಚನೆಗೊಂಡಿವೆ. ಕಾದಂಬರಿಯ ಕಾಲ್ಪನಿಕ 
ಪಾತ್ರಗಳೂ ನಿಜವಾದ ಜೀವಂತ ವ್ಯಕ್ತಿಗಳು ಅನ್ನುವಂತೆ ಈ ಹೊತ್ತೂ ಅವರ 
ಬದುಕಿನ ಬಗ್ಗೆ ಚರ್ಚಿಸುವ ಅಸಂಖ್ಯ ಓದುಗರನ್ನು ಅಂತರ್ಜಾಲದಲ್ಲಿ ಕಾಣಬಹುದು. 


ಏಳು ಬಾರಿ ತಿದ್ದಿ ಬರೆದ, ಕಂತುಗಳಲ್ಲಿ ಪ್ರಕಟಗೊಂಡ, ಪ್ರಕಟವಾದಮೇಲೂ 
ಮತ್ತೆ ತಿದ್ದುಪಡಿಗಳಿಗೆ ಒಳಗಾದ ' ವಾರ್ ಅಂಡ್ ಪೀಸ್'ನ 'ಅಧಿಕೃತ' ಆವೃತ್ತಿ 
ಇಂದಿಗೂ ಲಭ್ಯವಿಲ್ಲ! ೨೦೦೭ನೆಯ ಇಸವಿಯಷ್ಟು ಇತ್ತೀಚೆಗೆ ಆಂಡೂ 
ಬೋಮ್‌ಫೀಲ್ಡ್ ಒಂದು ಅನುವಾದವನ್ನು , ರಿಚರ್ಡ್ ಪೀವಿಯರ್ ಮತ್ತವನ ಪತ್ನಿ 
ಲಾರಿಸಾ ಇನ್ನೊಂದು ಅನುವಾದವನ್ನೂ ಪ್ರಕಟಿಸಿ ಇದೇ 'ಮೂಲ' 'ವಾರ್ ಅಂಡ್ 
ಪೀಸ್ ' ಎ೦ಬ ಬಿಸಿ ಬಿಸಿ ವಾಗ್ವಾದ ನಡೆ ಯುತ್ತಿದೆ . ಇಬ್ಬರ 
ಆಧಾರವಾಗಿಟ್ಟುಕೊಂಡಿರುವುದು ಎವೆಲಿನಾ ರೈಡೆನ್ಸ್ ಹು‌ ಎಂಬಾಕೆ ಐವತ್ತು 
ವರ್ಷಗಳ ಕಾಲ ಕಷ್ಟ ಪಟ್ಟು ಸಹಸ್ರಾರು ಪುಟಗಳಷ್ಟು ಹಸ್ತಪ್ರತಿಗಳನ್ನು ಇಂಕು ಮತ್ತು 
ಟಾಲ್ಸ್ಟಾಯ್ ಕೈಬರಹದ ವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಿ, ಪೂಫಿನ ಹಾಳೆಯ 
ಅಂಚುಗಳಲ್ಲಿ ಬರೆದದ್ದು, ಹೊಡೆದು ತಿದ್ದಿದ್ದು, ಸೆಲಿಂಗಿನ ತಪ್ಪು ಇತ್ಯಾದಿಗಳನ್ನೆಲ್ಲ 
ಪರಿಷ್ಕರಿಸಿ ಸಿದ್ಧಪಡಿಸಿದ ಮೂಲ ಮಾತೃಕೆಯನ್ನು ಆಧರಿಸಿದ್ದು. 
ಪ್ರಸ್ತುತ ಅನುವಾದ 

ನಾನು ' ವಾರ್ ಅಂಡ್ ಪೀಸ್' ಕಾದಂಬರಿಯನ್ನು ಮೊದಲು ಓದಿದ್ದು 
೧೯೭೨ರ ಬೇಸಗೆಯ ರಜೆಯಲ್ಲಿ. ಅದಕ್ಕೆ ಮೊದಲು ಟಾಲ್ಸ್ಟಾಯ್ ಕತೆಗಳನ್ನು 
ಕನ್ನಡದಲ್ಲಿ ಗುಂಡಣ್ಣನವರ ಅನುವಾದದಲ್ಲಿ , ' ರಿಸರೆಕ್ಷನ್ ' ಅನ್ನು ದೇಜಗೌ ಅನುವಾದಲ್ಲಿ 
ಓದಿದ್ದೆ. ಇಂಗ್ಲಿಷ್ ಭಾಷೆಯಲ್ಲಿ 'ಅನ್ನ ಕರೆನೀನ' ಓದಿದ್ದೆ. ಪ್ರೋಗ್ರಸ್ ಪಬ್ಲಿಶರ್ 
ಪ್ರಕಟಿಸಿದ್ದ ' ಫಾದರ್ ಸೆರ್ಗಿಯಸ್ , ಮತ್ತು ' ದಿ ಡೆತ್ ಅಫ್ ಇವಾನ್ ಇಲಿಚ್ ' ಗಳನ್ನು 
ಓದಿ ಮನಸ್ಸು ತುಂಬಿಬಂದಿತ್ತು. ನಾನು ಮತ್ತು ಗೆಳೆಯ ರಾಮು ' ಡೆತ್ ಆಫ್ 
ಇವಾನ್ ಇಲಿಚ್ ' ಕತೆಯನ್ನು ಪಾರಾಯಣದ ಹಾಗೆ ಮತ್ತೆ ಮತ್ತೆ ಒಬ್ಬರಿಗೊಬ್ಬರು 


xxi 


ಓದಿ ಓದಿ ಕಣ್ಣು ತುಂಬಿಕೊಂಡಿದ್ದೆವು. ' ವಾರ್ ಅಂಡ್ ಪೀಸ್' ಓದಬೇಕು ಅನ್ನುವ 
ಆಸೆ ಹುಟ್ಟಿತ್ತು. ನನ್ನ ಕೈಗೆ ಆಗ ಸಿಕ್ಕಿದ್ದು ' ವಾರ್ ಅಂಡ್ ಪೀಸ್ ' ನ ಸಂಕ್ಷಿಪ್ತ ಆವೃತ್ತಿ, 
ಸುಮಾರು ನಾಲ್ಕುನೂರು ಪುಟಗಳದ್ದು. ವಿಶೇಷವೆಂದರೆ ಅದರಲ್ಲಿ ಬಿಟ್ಟಿದ್ದ ಅಧ್ಯಾಯಗಳ 
ಸಂಕ್ಷಿಪ್ತ ಸಾರಾಂಶವನ್ನೂ ನಡುನಡುವೆಯೇ ಕೊಟ್ಟಿದ್ದರು. ಸುಮಾರು ನೂರೈವತ್ತು 
ಪುಟ ಓದುವಷ್ಟರಲ್ಲಿ ಬಿಟ್ಟಿರುವ ಭಾಗಗಳ ಬಗ್ಗೆ ಕುತೂಹಲ ಹುಟ್ಟಿ ಸಮಗ್ರ 
ಅನುವಾದವನ್ನು ಹುಡುಕಿ ಸಂಪಾದಿಸಿಕೊಂಡೆ. ಈಗ ನೆನೆದುಕೊಂಡರೆ ಕಾದಂಬರಿಯ 
ಒಂದೊಂದು ಪ್ರಸಂಗವೂ , ವಿಶೇಷವಾಗಿ ನತಾಶಾ ಕಾಣಿಸಿಕೊಳ್ಳುತ್ತಿದ್ದ ಭಾಗಗಳು , 
ನಕೊಲಸ್ ರೋಸ್ಟೋವ್ ರಜೆಯಲ್ಲಿ ಮನೆಗೆ ಹಿಂದಿರುಗುವ ಭಾಗ , ಪ್ರಿನ್ಸ್ ಆಂಡೂ 
ಓಕ್ ಮರವನ್ನು ನೋಡುವ, ನತಾಶಾಳ ಮಾತನ್ನು ಇರುಳಲ್ಲಿ ಅಕಸ್ಮಾತ್ ಕೇಳಿಸಿಕೊಳ್ಳುವ, 
ಮತ್ತೆ ಅವನು ಗಾಯಗೊಂಡಾಗ ಆಮೇಲೆ ಸಾಯುವ ಮುನ್ನ ಅವನಿಗಾಗುವ 
ಅನುಭವ, ಮಾಸ್ಕೋ ನಗರಕ್ಕೆ ಬೆಂಕಿ ಇಟ್ಟು ಜನ ಊರು ತೊರೆದು ಹೋಗುವಾಗ 
ಬರುವ ವರ್ಣನೆ ಇಂಥವುಗಳನ್ನು ಓದಿದಾಗ ಇದೆಲ್ಲ ನನಗೇ ಆಗುತ್ತಿದೆ, ನಾನೇ 
ಹೇಳುತ್ತಿದ್ದೇನೆ ಅನ್ನಿಸುತ್ತಾ , ಮನಸ್ಸಿನಲ್ಲಿ ಮೂಡುತ್ತಿದ್ದ ಭಾವವನ್ನು ಉಲ್ಲಾಸ ಅಂತಲೇ 
ಹೇಳಬೇಕೇನೋ . ಆ ನೆನಪು ಈಗ ಮನಸ್ಸಿಗೆ ಬಂದರೆ 'ಜೀವನ ಪ್ರೀತಿ', 'ಜೀವ ಪರ ' 
ಅನ್ನುವ ಮಾತುಗಳನ್ನು ಕೇಳುತ್ತೇವಲ್ಲಾ ಅಂಥ ಮಾತುಗಳಿಗೆ ಅರ್ಥವೇನಾದರೂ 
ಇದ್ದರೆ ಅದರ ಪ್ರತ್ಯಕ್ಷಾನುಭವ ಆದದ್ದು ' ವಾರ್ ಅಂಡ್ ಪೀಸ್' ಮೊದಲ ಬಾರಿಗೆ 
ಓದಿದಾಗ ಅನ್ನುವುದು ಹೊಳೆಯುತ್ತದೆ . 

ಬದುಕಿನ ಬಗ್ಗೆ ಏನೇ ಎಷ್ಟೇ ವ್ಯಾಖ್ಯಾನಮಾಡಿದರೂ ಬದುಕು ಅವಾವುದೂ 
ಅಲ್ಲ, ಎಲ್ಲವೂ ಹೌದು, ಆದರೆ ಅಂಥ ಎಲ್ಲ ವಿವರಣೆಗಳಿಗಿಂತ ಮಿಗಿಲು ಆಗಿರುತ್ತದಲ್ಲ 
' ವಾರ್ ಅಂಡ್ ಪೀಸ್' ಕೂಡ ಹಾಗೆಯೇ . ಈ ಕಾದಂಬರಿಯನ್ನು ಕುರಿತು ಬಂದಿರುವ 
ವ್ಯಾಖ್ಯಾನ ವಿಮರ್ಶೆಗಳು ಹೇರಳವಾಗಿವೆ. ಈ ನಿಜವಾಗಲೂ ದೊಡ್ಡ ಕಾದಂಬರಿಯ 
ಒಂದೊಂದು ಅಂಶಗಳ ಬಗ್ಗೆ ಅವೆಲ್ಲ ಚೂರು ಪಾರು ಸತ್ಯ ಹೇಳಿದರೂ ಕಾದಂಬರಿಯ 
ಓದಿನ ಮೂಲಕ ನಾವು ಪಡೆದ ಅನುಭವವನ್ನು ಅವು ಯಾವುವೂ ಸರಿಗಟ್ಟಲಾರವು. 
ಕಾದಂಬರಿ ವಿಮರ್ಶೆಯ ಬಗ್ಗೆ ಹೇಳುವ ಈ ಮಾತು ಅನುವಾದದ ತಾತ್ವಿಕತೆಗಳನ್ನು 
ಕುರಿತ ಚಿಂತನೆಗಳಿಗೂ ' ವಾರ್ ಅಂಡ್ ಪೀಸ್ ' ಅನುವಾದದ ಕಾರ್ಯಕ್ಕೂ 
ಅನ್ವಯಿಸುತ್ತದೆ. 
- ದೇಜಗೌ ಅವರು ೧೯೮೮ರಲ್ಲಿ ' ವಾರ್ ಅಂಡ್ ಪೀಸ್' ಅನ್ನು ' ಯುದ್ಧ 
ಮತ್ತು ಶಾಂತಿ' ಎಂಬ ಹೆಸರಿನಲ್ಲಿ ಅನುವಾದಿಸಿದ್ದರು. ನಿಜವಾಗಲೂ ದೊಡ್ಡ 
ಪ್ರಯತ್ನ , ಟಾಲ್ಸ್ಟಾಯ್‌ನ ಎಲ್ಲ ಮಹಾ ಕೃತಿಗಳನ್ನು ಕನ್ನಡ ಓದುಗರಿಗೆ ದೊರೆಯುವಂತೆ 
ಮಾಡಿದ ಹಿರಿಯರು ದೇಜಗೌ , ಮಹಾ ಕೃತಿಗಳು ಒಂದೊಂದು ತಲೆಮಾರಿನಲ್ಲೂ 
ಮತ್ತೆ ಮತ್ತೆ ಅನುವಾದಗೊಳ್ಳಬೇಕು ಅನ್ನುವ ಮಾತು ನಿಜ. ಹೀಗಾಗಿ ನಾನು 
ಇನ್ನೊಮ್ಮೆ ನನಗಾಗಿ ಅನುವಾದ ಮಾಡಿಕೊಳ್ಳಬೇಕು ಅನ್ನಿಸಿತು. ಅನುವಾದದ 
ಮೂಲಕ ಮತ್ತೆ ಹೊಸ 'ಮೂಲ'ವನ್ನು ಸೃಷ್ಟಿಮಾಡಿಕೊಳ್ಳಬೇಕು ಅನ್ನಿಸಿತು. 
ಸವಾಲುಗಳು 
- ರಶಿಯನ್ ಭಾಷೆ ಗೊತ್ತಿಲ್ಲದ ನಾನು ಇಂಗ್ಲಿಶ್ ಅನುವಾದವನ್ನೇ ಮೂಲವೆಂದು 
ಗ್ರಹಿಸಬೇಕಾಗಿದೆ. ರಶಿಯನ್ ಬಲ್ಲ ಓದುಗರು ' ಇಂಗ್ಲಿಶ್ ಅನುವಾದಗಳಲ್ಲಿ ದಾಸ್ತೋವ್ಸ್ಕಿ , 
ಟಾಲ್ಸ್ಟಾಯ್, ಟರ್ಗೆನಿವ್ , ಪುಷ್ಠಿನ್ ಎಲ್ಲರೂ ಒಂದೇ ಥರ ಕಾಣುತ್ತಾರೆ. 


xxii 


ಟಾಲ್ಸ್ಟಾಯ್‌ನ ಭಾಷೆಯ ಸೊಬಗು ಇಂಗ್ಲಿಶಿನಲ್ಲಿ ಕಾಣದು, ಎಂದು ಬಹುಶಃ 
ಸಕಾರಣವಾಗಿಯೇ ಟೀಕೆ ಮಾಡುತ್ತಾರೆ . ಬೇರೆ ಬೇರೆ ಕಾಲಗಳಲ್ಲಿ ಆದ ಐದು 
ಇಂಗ್ಲಿಶ್ ಅನುವಾದಗಳನ್ನು ನೋಡಿದಾಗ ನಾನು ಮೊದಲು ಈ ಕಾದಂಬರಿಯನ್ನು 
ಓದಿದಾಗ ಆದ ಅನುಭವವನ್ನು ಮನಸ್ಸಿಗೆ ತಂದುಕೊಂಡು ಪರಿಶೀಲಿಸಿದಾಗ ಅನ್ನಸಿದ್ದು 
ಇದು: ಮೂಲ ಭಾಷೆ ಬಾರದಿದ್ದವರಿಗೆ ಅನುವಾದವೇ ಮೂಲ; ಆದ್ದರಿಂದ ನನ್ನ 
ಅನುವಾದವೂ ಕನ್ನಡದ 'ಮೂಲ' ವೇ ಆಗಬೇಕು. ಹೀಗಾಗುವುದಕ್ಕೆ ನಾನೇ ಅನುಭವಿಸಿ 
ಬರೆದಂತೆ, ನನ್ನ ಕಾಲದ ಭಾಷೆಯನ್ನು ಬಳಸಿಕೊಳ್ಳಬೇಕು. ಟಾಲ್ಸ್ಟಾಯ್ನ ಕಾದಂಬರಿ 
ಬಹುಭಾಷಿಕವಾದದ್ದು , ರಶಿಯನ್, ಅದಕ್ಕಿಂತ ಕಡಿಮೆ ಪ್ರಮಾಣವಾದರೂ ಅತಿ 
ಹೆಚ್ಚು ಫ್ರೆಂಚ್ , ಸ್ವಲ್ಪ ಮಟ್ಟಿನ ಜರ್ಮನ್ ಮತ್ತು ಇಟಾಲಿಯನ್ ಭಾಷೆಗಳು 
ಬಳಕೆಯಾಗಿವೆ. ಅವನ ಮಾದರಿಯನ್ನೇ ಅನುಸರಿಸುವುದು ಅಸಾಧ್ಯ . ಕೆಲವು 
ಅನುವಾದಕರು ಈ ಬಹುಭಾಷಿಕತೆಯನ್ನು ಹಾಗೇ ಉಳಿಸಿಕೊಂಡರೂ ಬಹುತೇಕ 
ಇಂಗ್ಲಿಶ್ ಅನುವಾದಕರು ' ಫ್ರೆಂಚ್‌ನಲ್ಲಿ ಹೇಳಿದಳು ', ' ಜರ್ಮನ್‌ನಲ್ಲಿ ಹೇಳಿದ ' 
ಇತ್ಯಾದಿಯಾಗಿ ಅನುವಾದದೊಳಗೇ ಭಾಷಿಕ ವ್ಯತ್ಯಾಸ ಸೂಚಿಸುತ್ತಾರೆ . ನಾನು 
ಫ್ರೆಂಚ್ ಬದಲಿಗೆ ಇಂಗ್ಲಿಶನ್ನು ಇಟ್ಟುಕೊಳ್ಳಲೇ ಅನ್ನುವ ಯೋಚನೆ ಬಂದರೂ ಕನ್ನಡ 
ಓದುಗರಿಗೆ ತೊಡಕಾದೀತು ಅನ್ನಿಸಿ ಪಾತ್ರಗಳು ಆಡುವ ಮಾತಿನ ಭಾಷೆಯನ್ನು 
ಸೂಚಿಸುವ ದಾರಿಯೇ ಸರಿ ಅಂದುಕೊಂಡೆ. 

ಟಾಲ್ಸ್ಟಾಯ್‌ನ ಪಾತ್ರಗಳು ಸುಶಿಕ್ಷಿತ ಮೇಲ್ವರ್ಗದವರು ಫ್ರೆಂಚ್‌ ಬಳಸುವ 
ಹಾಗೆಯೇ ಸುಶಿಕ್ಷಿತ ಮಧ್ಯಮವರ್ಗದ ಜನ ಇಂಗ್ಲಿಶನ್ನು ಬಳಸುತ್ತಾರೆ . ನಮ್ಮ 
ಸುಶಿಕ್ಷಿತರು ಬಳಸುವಷ್ಟು ಪ್ರಮಾಣದಲ್ಲಿ ಇಂಗ್ಲಿಶನ್ನು ಬಳಸದೆ ಇದ್ದರೂ ಆಡುವ 
ಕನ್ನಡದಲ್ಲಿ ಬೆರೆತು ಹೋಗಿರುವ ಇಂಗ್ಲಿಶ್ ಪದಗಳನ್ನು, ನುಡಿಗಟ್ಟುಗಳನ್ನು ಉಳಿಸಿಕೊಳ್ಳುವ 
ತೀರ್ಮಾನ ಮಾಡಿದ್ದೇನೆ. ಹಾಗಾಗಿ ಧನ್ಯವಾದ', ' ಸ್ವಾಮೀ ', 'ಸ್ವಸ್ತಿಪಾನ' ಇತ್ಯಾದಿ 
ಕೃತಕವಾಗಿ ತೋರುವ ನುಡಿಗಟ್ಟುಗಳ ಬದಲಾಗಿ ಥ್ಯಾಂಕ್ಸ್ , ಸರ್, ಚಿಯರ್ಸ್ 
ಅನ್ನುವಂಥ ಪ್ರಚಲಿತ ಬಳಕೆಗಳನ್ನು ಉಳಿಸಿಕೊಂಡಿದ್ದೇನೆ. 
- ಅನುವಾದ ಓದುಗರ ಮನಸ್ಸಿನ ಕಿವಿಗೆ ಕೇಳಿಸುವ ಕನ್ನಡವಾಗಬೇಕು ಅನ್ನುವುದು 
ಆದರ್ಶ , - ತಾನೆ, - ತಾಳೆ, - ತದೆ ಎಂದು ಕೊನೆಯಾಗುವ ಕ್ರಿಯಾಪದಗಳು ಒಂದೇ 
ಪ್ರಸಂಗದಲ್ಲಿ ಹತ್ತಿಪ್ಪತ್ತು ಬಾರಿ ಬಂದಾಗ ಚಡಪಡಿಸುವಂತಾಗುತ್ತದೆ. ಕನ್ನಡದ 
ಆಡುನುಡಿಯಲ್ಲಿ ವಾಕ್ಯದ ಕೊನೆಯ ಕ್ರಿಯಾಪದದಲ್ಲಿ ಹೀಗೆ ಒತ್ತಕ್ಷರಗಳ ಬಳಕೆ 
ಇಲ್ಲವೇ ಇಲ್ಲವೆನ್ನುವಷ್ಟು ಕಡಮೆ. ಅವಳು ಹೇಳುತ್ತಾಳೆ' ಅನ್ನುವುದನ್ನು ಅವಳು 
ಹೇಳ್ತಾಳೆ' ಅನ್ನುವ ರೀತಿಯಲ್ಲಿ ಉಚ್ಚರಿಸುತ್ತೇವೆ. ಇಂಥದನ್ನು ಬರೆಯುವಾಗ 
ಅರ್ಧಾಕ್ಷರಗಳನ್ನು ಬಳಸುತ್ತ ಹೋದರೆ ಅದೂ ಕಿರಿಕಿರಿಯೇ . 'ಹೇಳತಾಳೆ' ' ಮಾಡತಾನೆ' 
ಅನ್ನುವಂಥ ರೂಪಗಳು ಸೂಕ್ತ; ಓದುಗರ ಮನಸ್ಸಿನ ಕಿವಿ ಕಣ್ಣಿಗೆ ಕಾಣದ ಒತ್ತಕ್ಷರಗಳನ್ನು 
ತಾನೇ ತುಂಬಿಕೊಳ್ಳುತ್ತದೆ. ಈ ಮಾತು ನನಗೆ ಮನದಟ್ಟಾದದ್ದು ರಾಮುವಿನೊಡನೆ 
ಅನುವಾದವನ್ನು ಓದುತ್ತ ಕುಳಿತಾಗ. ಆದರೆ ಎಲ್ಲ ಎಡೆಗಳಲ್ಲೂ ಹೀಗೆ ಮಾಡಲಾಗಿಲ್ಲ. 

- ರಶಿಯನ್ ಮತ್ತು ಅನ್ಯಭಾಷಿಕ ಹೆಸರುಗಳನ್ನು ಆಯಾ ಭಾಷೆಯಲ್ಲಿ ಹೇಗೆ 
ಉಚ್ಚರಿಸುತ್ತಾರೋ ಹಾಗೆ ಅಲ್ಲ, ಕನ್ನಡದಲ್ಲಿ ಬಳಕೆಯಾಗಿ ಅಭ್ಯಾಸವಾಗಿರುವ ರೀತಿಯಲ್ಲಿ, 
ಕನ್ನಡಕ್ಕೆ ಹೊಂದುವ ರೀತಿಯಲ್ಲಿ ಬಳಸಿಕೊಂಡಿದ್ದೇನೆ. ನಿದರ್ಶನಕ್ಕೆ ಪಿಯರೆಯ 
ಹೆಸರನ್ನು ಕೆಲವು ವೀಡಿಯೋಗಳಲ್ಲಿ ಪಿಯರ್‌ ಅನ್ನುವಂತೆ ಉಚ್ಚರಿಸಿರುವುದುಂಟು. 


xxiii 


ಕನ್ನಡದಲ್ಲಿ ಅದು ಪಿಯರೆ ಆಗಿಯೇ ಉಳಿದಿದೆ. ವಿವಾಹಿತ ಮಹಿಳೆಯರ ಹೆಸರುಗಳನ್ನು 
ಗಂಡನ ಕುಟುಂಬದ ಹೆಸರಿನೊಂದಿಗೆ ಸ್ತ್ರೀಲಿಂಗ ಪ್ರತ್ಯಯದೊಡನೆ ರಶಿಯನ್‌ನಲ್ಲಿ 
ಬಳಸುತ್ತಾರೆ. ಬೋಲೋನ್‌ಸ್ಟಾಯಾ, ರೋಸ್ಕೋವಾ ಇತ್ಯಾದಿ, ಇಂಗ್ಲಿಷ್ ಆವೃತ್ತಿಗಳಲ್ಲಿ 
ಅದನ್ನು ಇಂಗ್ಲಿಷ್‌ಗೊಳಿಸಿದ್ದಾರೆ, ಅಥವಾ ಬಿಟ್ಟುಬಿಟ್ಟಿದ್ದಾರೆ . ಈ ಅನುವಾದದಲ್ಲೂ 
ಕನ್ನಡಕ್ಕೆ ಹೆಚ್ಚು ಪರಿಚಿತವಾಗಿರುವ ಇಂಗ್ಲಿಶ್ ರೂಪಗಳನ್ನೇ ಉಳಿಸಿಕೊಂಡಿದ್ದೇನೆ. 
ಈ ಸೋಲೊಪ್ಪಿಕೊಳ್ಳುವಂತಾದದ್ದು ಟಾಲ್ಸ್ಟಾಯ್‌ನ ಲಯವೈವಿಧ್ಯವನ್ನು ಕನ್ನಡಕ್ಕೆ 
ತರುವಲ್ಲಿ, ಒಂದೊಂದು ಪಾತ್ರವೂ ತನ್ನದೇ ರೀತಿಯಲ್ಲಿ ನುಡಿಯುತ್ತದೆ, ಲೇಖಕನ 
ವಿವರಣೆಯ ಲಯ ಬೇರೆ, ವರ್ಣನೆಯ ಭಾಷೆಯ ವೇಗ ಅಥವಾ ಸಾವಧಾನ 
ಬೇರೆ, ತಾತ್ವಿಕ ಚರ್ಚೆಯ ನುಡಿಗಟ್ಟು, ಶೈಲಿಗಳೇ ಇನ್ನೂ ಬೇರೆ. ಇದರೊಡನೆ 
ಒಂದೊಂದು ಪಾತ್ರದ ಒಂದೊಂದು ಮನಸ್ಥಿತಿಯ ನಿರೂಪಣೆಯ ಲಯವೂ 
ಭಿನ್ನವೇ . ಅತ್ಯುತ್ತಮ ಕಾವ್ಯದಲ್ಲಿ ಕವಿ ಹೇಗೆ ಎಚ್ಚರದಿಂದ ಪದಗಳನ್ನು ಆಯ್ದು 
ಸಂಯೋಜಿಸುತ್ತಾನೆಯೋ ಹಾಗೇ ಟಾಲ್ಸ್ಟಾಯ್ ಕಾದಂಬರಿಯಲ್ಲಿ ಭಾಷೆಯನ್ನು 
ಬಳಸಿದ್ದಾನೆ. ಅನುವಾದದಲ್ಲೂ ಅಂಥ ಲಯವೈವಿಧ್ಯವನ್ನು ತರಲು ಸಾಧ್ಯವಾಗಬೇಕು 
ಅನ್ನುವುದು ಆದರ್ಶ . ಇದನ್ನು ಕಾದಂಬರಿಯುದ್ದಕ್ಕೂ ಅನುವಾದದಲ್ಲಿ ಸಾಧಿಸಲು 
ಸಾಧ್ಯವಾಗಿಲ್ಲ. 

ವ್ಯಾಸನ ಹಾಗೆ ಟಾಲ್ಸ್ಟಾಯ್ ಕೂಡ ಎಂಥ ಸದೃಢ ಸಜೀವ ಕೃತಿಯನ್ನು 
ರಚಿಸಿದ್ದಾನೆಂದರೆ ಎಂಥ ದುರ್ಬಲ ಮರುನಿರೂಪಣೆಯಲ್ಲೂ ಅದರ ಜೀವಂತಿಕೆ 
ಒಂದಿಷ್ಟು ಉಳಿದೇ ಇರುತ್ತದೆ! ಟಾಲ್ಸ್ಟಾಯ್‌ನ ' ವಾರ್ ಅಂಡ್ ಪೀಸ್'ನಲ್ಲಿ ನನಗೆ 
ಕಂಡದ್ದು, ನನಗೆ ಆದದ್ದು ಈ ಅನುವಾದದ ಮೂಲಕ ಓದುಗರಿಗೆ ಕಿಂಚಿತ್ 
ಆದರೂ ಕಂಡರೆ, ಗೊತ್ತಾದರೆ, ಅಷ್ಟು ಸಾಕು. 

ಅಕ್ಟೋಬರ್ ೨೦೦೭ರಲ್ಲಿ ಆರಂಭಿಸಿದ ಅನುವಾದ ಕಾರ್ಯ ಜುಲೈ ೨೦೦೮ರಲ್ಲಿ 
ಮುಗಿಯಿತು. ಗೆಳೆಯ ರಾಮುವಿನೊಡನೆ, ಮತ್ತು ಆಗಾಗ ದೇವನೂರ ಮಹಾದೇವ 
ಅವರೊಡನೆ , ಅನುವಾದವನ್ನು ಓದಿ ಪರಿಷ್ಕರಿಸಿ ತಿದ್ದುವ ಕೆಲಸ ೨೦೧೦ರ 
ಮಾರ್ಚ್‌ವರೆಗೆ ನಡೆಯಿತು. ಎಷ್ಟು ಪರಿಷ್ಕರಿಸಿದರೂ ಅನುಮಾನ, ಆತಂಕಗಳು 
ಉಳಿದೇ ಇವೆ. ಕೊನೆಗೆ ನನ್ನ ಕೈಲಾಗುವುದು ಇಷ್ಟು ಅನ್ನುವ ಅನಿವಾರ್ಯ 
ಸಮಾಧಾನ ತಂದುಕೊಂಡಿದ್ದೇನೆ. 


ಆಕರ ಕೃತಿಗಳು 

ಕಾನ್‌ಸ್ಪೆನ್ಸ್ ಗಾರ್ನೆಟ್ - ೧೯೦೪ರ ಅನುವಾದ; ಲೂಯಿ ಮತ್ತು ಆಲ್ಕರ್ 
ಮಾಡ್ - ೧೯೨೨ - ೩ ಮತ್ತು ೧೯೩೦ರ ದಶಕದಲ್ಲಿ ಮಾಡಿದ ಅನುವಾದ; ರೋಸ್‌ಮೇರಿ 
ಎಡ್ಕಂಡ್ - ೧೯೫೭ ( ಪರಿಷ್ಕೃತ ಅನುವಾದ ೧೯೭೮); ಆಂತನಿ ಬಿಗ್ - ೨೦೦೫ರಲ್ಲಿ 
ಮಾಡಿದ ಅನುವಾದ ಇವುಗಳನ್ನು ನನ್ನ ಆಕರಗಳಾಗಿ ಬಳಸಿಕೊಂಡಿದ್ದೇನೆ. ಹೆಚ್ಚು 
ಅವಲಂಬಿಸಿರುವುದು ಎರಡನೆಯ ಮತ್ತು ಕೊನೆಯ ಆಕರಗಳನ್ನು , ಜಾರ್ಜ್ ಗಿಬಿಯನ್ 
ಸಂಪಾದಿಸಿರುವ ನಾರ್ಟನ್ ಕ್ರಿಟಿಕಟಲ್ ಎಡಿಶನ್ ( ೧೯೬೬ ಮತ್ತು ೧೯೯೬ ) 
ಇದರಿಂದ ಅನೇಕ ಪೂರಕ ಸಾಮಗ್ರಿಗಳನ್ನು ಮತ್ತು ವಿಮರ್ಶೆಯ ಭಾಗಗಳನ್ನು 
ಬಳಸಿಕೊಂಡಿದ್ದೇನೆ. ಚಿತ್ರ ಮಾಹಿತಿಯನ್ನು ಅಂತರ್ಜಾಲದ ವಿವಿಧ ತಾಣಗಳಿಂದ 
ಪಡೆದುಕೊಂಡಿದ್ದೇನೆ. 


xxiv 


ಅನುಬಂಧಗಳ ಬಗ್ಗೆ 

' ವಾರ್ ಅಂಡ್ ಪೀಸ್' ಬಗ್ಗೆ ಓದುಗರಿಗೆ ನೆರವಾಗುವಂಥ ಮಾಹಿತಿಯನ್ನು 
ಎಂಟು ಅನುಬಂಧಗಳಲ್ಲಿ ನೀಡಿದ್ದೇನೆ. ' ವಾರ್ ಅಂಡ್ ಪೀಸ್' ಓದುತ್ತಿರುವಾಗ 
ಇಂತಿಂಥ ಅಂಶಗಳ ಬಗ್ಗೆ ಮಾಹಿತಿ ಇದ್ದರೆ ಚೆನ್ನ ಎಂದು ನನಗೆ ತೋರಿದ 
ಅಂಶಗಳನ್ನೆಲ್ಲ ಇಲ್ಲಿ ನೀಡಿದ್ದೇನೆ. ಉದಾಹರಣೆಗೆ ಕಾದಂಬರಿಯ ಉದ್ದಕ್ಕೂ ಪಾತ್ರಗಳು 
ಪರಸ್ಪರ ಪ್ರಿನ್ಸ್, ಕೌಂಟ್, ಪ್ರಿನ್ಸೆಸ್ , ಕೌಂಟೆಸ್ ಇತ್ಯಾದಿಯಾಗಿ ಸಂಬೋಧಿಸುವುದು 
ಕನ್ನಡ ಓದುಗರ ಅಚ್ಚರಿಗೆ ಕಾರಣವಾದೀತು. ಅದಕ್ಕೆ ವಿವರಣೆ ಆ ಕಾಲದ ರಶಿಯನ್ 
ಸಮಾಜ ವ್ಯವಸ್ಥೆಯನ್ನು ಕುರಿತ ಅನುಬಂಧದಲ್ಲಿ ದೊರೆಯುತ್ತದೆ. ಮುಖ್ಯ ಪಾತ್ರಗಳ 
ಸಂಬಂಧದ ಬಗ್ಗೆ ಸ್ಫೂಲವಾದ ಚಿತ್ರಣ ಕೊಡುವ ಅನುಬಂಧವೂ ಇದೆ. ಕಾದಂಬರಿಯ 
ಓದಿಗೆ, ಅನುಭವಕ್ಕೆ ಅನುಬಂಧಗಳು ಅನಿವಾರ್ಯವೇನೂ ಅಲ್ಲ. ಆದರೆ 
ಮಹಾಕೃತಿಯೊಂದು ಓದುಗರಲ್ಲಿ ಮೂಡಿಸುವ ಕೃತಿಕಾರ ಮತ್ತು ಕೃತಿಯ ಬಗೆಗಿನ 
ಕುತೂಹಲಗಳನ್ನು ಸಾಧ್ಯವಾದ ಮಟ್ಟಿಗೂ ತಣಿಸುವುದು ಅನುವಾದಕನ ಕರ್ತವ್ಯವೆಂದು 
ಭಾವಿಸಿ ಇವನ್ನು ನೀಡಿದ್ದೇನೆ. ಕಾದಂಬರಿಯ ಓದಿಗೆ ಭಂಗ ಬರದಂತೆ ಆದರೆ 
ಅಗತ್ಯವಾಗಿ ನೀಡಬೇಕಾದ ಮಾಹಿತಿಯನ್ನು ಅಲ್ಲಲ್ಲೇ ಅಡಿ ಟಿಪ್ಪಣಿಗಳ ರೂಪದಲ್ಲಿ 
ನೀಡಿದ್ದೇನೆ. ಈ ಅಡಿ ಟಿಪ್ಪಣಿಗಳ ಸಲುವಾಗಿ ನಾನು ಗಮನಿಸಿದ ಮೇಲೆ ಹೇಳಿದ 
ಆಕರಗಳಲ್ಲದೆ ಇನ್ನು ಹಲವು ಇಂಗ್ಲಿಶ್ ಅನುವಾದಕರ ಅಡಿ ಟಿಪ್ಪಣಿಗಳಿಗೆ 
ಋಣಿಯಾಗಿದ್ದೇನೆ. 

ಕನ್ನಡದ ಪ್ರಮುಖ ಮತ್ತು ಹಿರಿಯ ಅನುವಾದಕ ವಿದ್ವಾಂಸರಾದ 
ಶ್ರೀ ಪ್ರಧಾನ ಗುರುದತ್ ಅವರು ಮೊದಲು ಕರ್ನಾಟಕ ಅನುವಾದ ಸಾಹಿತ್ಯ 
ಅಕಾಡೆಮಿಯ ಅಧ್ಯಕ್ಷರಾಗಿ, ಆನಂತರ ಕುವೆಂಪು ಭಾಷಾಭಾರತಿಯ ನೇತೃತ್ವವವನ್ನು 
ವಹಿಸಿಕೊಂಡಮೇಲೆ ಕನ್ನಡದಲ್ಲಿ ನಡೆಯುತ್ತಿರವ ಅನುವಾದ ಕಾರ್ಯಗಳಿಗೆ ಅಪಾರವಾದ 
ಪ್ರೋತ್ಸಾಹ ದೊರೆಯುತ್ತಿದೆ. ಅಗತ್ಯವಾದ ಮಹಾ ಕೃತಿಗಳನ್ನು ಕನ್ನಡಕ್ಕೆ ತಂದುಕೊಳ್ಳುವ, 
ಕನ್ನಡದ ಮುಖ್ಯ ಕೃತಿಗಳನ್ನು ಇತರ ಭಾಷೆಗಳಿಗೆ ಕಳಿಸಿಕೊಡುವ ಸಾಂಸ್ಕೃತಿಕ 
ಪ್ರಾಮುಖ್ಯದ ಕಾರ್ಯಕ್ಕೆ ಸ್ಪಷ್ಟ ರೂಪುರೇಖೆಗಳು ಮೂಡುತ್ತಿವೆ. ಅವರ ವಿಶ್ವಾಶಪೂರ್ವಕ 
ಒತ್ತಾಸೆಯಿಂದಾಗಿ ಈ ಅನುವಾದ ನಿಮ್ಮ ಕೈಗೆ ತಲುಪುತ್ತಿದೆ. ಪ್ರಧಾನ ಗುರುದತ್ 
ಅವರಿಗೂ , ತಮ್ಮ ಕಾರ್ಯದ ಬಗ್ಗೆ ಅಪಾರ ಕಾಳಜಿ ಹೊಂದಿರುವ ರಿಜಿಸ್ಟ್ರಾರ್ 
ಪಿ. ನಾರಾಯಣಸ್ವಾಮಿ ಮತ್ತು ಕುವೆಂಪು ಭಾಷಾ ಭಾರತಿಯ ಆಡಳಿತ ಮಂಡಳಿಯ 
ಸದಸ್ಯರಿಗೂ ಕೃತಜ್ಞನಾಗಿದ್ದೇನೆ. 


ಓ. ಎಲ್. ನಾಗಭೂಷಣಸ್ವಾಮಿ 
ಮೈಸೂರು 
ಜುಲೈ ೨೦೧೧ 


ಕೃತಜ್ಞತೆ 


ರಾಮು, ದೇವನೂರ ಮಹಾದೇವ, ಎಚ್.ಎಸ್. ರಾಘವೇಂದ್ರರಾವ್, ವಿವೇಕ 
ಶಾನುಭಾಗ್, ಎಸ್. ಮಂಜುನಾಥ್ , ಪಂಡಿತಾರಾಧ್ಯ , ಸಚ್ಚಿದಾನಂದ, ಹೇಮಾ, 
ಚಂದ್ರಾ ನಾಗಭೂಷಣಸ್ವಾಮಿ , ಬಸಪ್ಪ, ಗೋವಿಂದರಾಜು; ಪ್ರಧಾನ ಗುರುದತ್ , 
ಪಿ. ನಾರಾಯಣ ಸ್ವಾಮಿ, ಶೋಭಾ, ಮಯೂರ ಪ್ರಿಂಟ್ ಆಡ್ಸ್ ಇವರೆಲ್ಲರ ಪ್ರೀತಿ 
ವಿಶ್ವಾಸಗಳಿಂದ ಅನುವಾದ ನಿಮ್ಮ ಮುಂದಿದೆ. 


ಓ .ಎಲ್.ಎನ್ . 


ಪರಿವಿಡಿ 


COOKIE 


ಮೊದಲ ಮಾತು 
ಶುಭಾಕಾಂಕ್ಷೆ 
ಹಾರೈಕೆ 
ಪ್ರಾಸ್ತಾವಿಕ ನುಡಿ 
ಪೀಠಿಕೆ 
ಪ್ರಸ್ತಾವನೆ 
ಕೃತಜ್ಞತೆ 


vi 
vii 
viii 


xvi 


XXV 


೧೬೬ 


೩೦೨ 


ಭಾಗ ೧ 
ಸಂಪುಟ ೧ 
ಸಂಚಿಕೆ ಒಂದು 
ಜುಲೈ - ಆಗಸ್ಟ್ ೧೮೦೫ 
ಸಂಚಿಕೆ ಎರಡು 
ಅಕ್ಟೋಬರ್ - ನವೆಂಬರ್‌ ೧೮೦೫ 
ಸಂಚಿಕೆ ಮೂರು 
ನವೆಂಬರ್ ೧೮೦೫. 
ಸಂಪುಟ ೨ 
ಸಂಚಿಕೆ ಒಂದು 
೧೮೯೬ 
ಸಂಚಿಕೆ ಒಂದು 
ಭಾಗ ಎರಡು: ೧೮೦೬ - ೦೭ 
ಸಂಚಿಕೆ ಮೂರು 
೧೮೦೮- ೧೦ 
ಸಂಚಿಕೆ ನಾಲ್ಕು 
೧೮೧೦ - ೧೧ 
ಸಂಚಿಕೆ ಐದು 
೧೮೧೧ - ೧೨ 


೫೧೭ 


೭೨೬ 


೭೯೯ 


ಭಾಗ ೨ 
ಸಂಪುಟ ೩ 
ಸಂಚಿಕೆ ಒಂದು 
೧೮೧೨ 


೯೦೩ 


೧೦೧೯ 


೧೨೨೦ 


೧೩೮೧ 


ಸಂಚಿಕೆ ಎರಡು 
ಆಗಸ್ಟ್ ೧೮೧೨ 
ಸಂಚಿಕೆ ಮೂರು 
೧೮೧೨ 
ಸಂಪುಟ ೪ . 
ಸಂಚಿಕೆ ಒಂದು 
ಆಗಸ್ಟ್ ೧೮೧೨ 
ಸಂಚಿಕೆ ಎರಡು 
ಅಕ್ಟೋಬರ್ ೧೮೧೨ 
ಸಂಚಿಕೆ ಮೂರು 
ಅಕ್ಟೋಬರ್ - ನವೆಂಬರ್ ೧೮೧೨ 
ಸಂಚಿಕೆ ನಾಲ್ಕು 
ನವೆಂಬರ್ - ಡಿಸೆಂಬರ್ ೧೮೧೨ 


೧೪೫೬ 


೧೫೨೦ 


೧೫೮೪ 


ಸಮಾರೋಪ 
ಭಾಗ ಒಂದು 


ಭಾಗ ಎರಡು 


ಅನುಬಂಧ ೧ 
ಅನುಬಂಧ ೨ 
ಅನುಬಂಧ ೩ 
ಅನುಬಂಧ ೪ 
ಅನುಬಂಧ ೫ 
ಅನುಬಂಧ ೬ 
ಅನುಬಂಧ ೭ 
ಅನುಬಂಧ ೮ 


೧೬೬೧ 
೧೭೩೫ 
೧೭೮೧. 
೧೭೮೬ 
೧೭೯೨ 
೧೭೯೭ 
೧೭೯೯ 
೧೮೨೨ 
೧೮೨೪ 
೧೮೬೭ 
೧೮೭೯ 


ಚಿತ್ರಗಳು 


ಯುದ್ಧ ಮತ್ತು ಶಾಂತಿ 


ಭಾಗ ೧ 


ಸಂಪುಟ ಒಂದು 


ಸಂಚಿಕೆ ಒಂದು 
( ಜುಲೈ - ಆಗಸ್ಟ್ ೧೮೦೫ ) 


* ' ಏನು ಪ್ರಿನ್ಸ್ , ಜಿನೀವಾ ಲೂಕ್ಕಾ ಎರಡೂ ಈಗ ಬೂನೋಪಾರ್ಟೆಯ 
ಅಪ್ಪನ ಆಸ್ತಿ ಅಷ್ಟೇ ಅನ್ನೋ ಹಾಗೆ ಸ್ವಾಹಾ ಆಗಿ ಹೋಯಿತಲ್ಲಾ ? ” ಮೊದಲೇ 
ಎಚ್ಚರಿಕೆ ಕೊಟ್ಟಿರತೇನೆ, ಇದು ಯುದ್ದ ಅಲ್ಲಾ ಅಂತ ನೀನೇನಾದರೂ ಆ ಕ್ರಿಸ್ತಶತ್ತು, 
ಅಲ್ಲದೆ ಇನ್ನೇನು ಮತ್ತೆ ಅವನು, ನಡೆಸಿದ ಘೋರ ಅತ್ಯಾಚಾರಕ್ಕೆಲ್ಲ ಕಣ್ಣು 
ಮುಚ್ಚಿಕೊಂಡಿದ್ದರೆ ನನ್ನ ನಿನ್ನ ಸಂಬಂಧ ಮುರೀತು. ನೀನು ನನ್ನ ಸ್ನೇಹಿತ 
ಅಲ್ಲಾ - ನನ್ನ ನೆಚ್ಚಿನ ಬಂಟ ಅಂತ ಏನೇನೋ ಹೇಳಿಕೊಳ್ಳುತ್ತೀಯಲ್ಲಾ, ಅದೆಲ್ಲಾ 
ಡೋಂಗಿ ಅನ್ನುತ್ತೇನೆ... ಇರಲಿ, ಹೇಗಿದೀಯಾ? ಗಾಬರೀನಾ? ಹೆದರಿಸಿಬಿಟ್ಟೆನಾ ? 
ಬಾ , ಕೂತುಕೋ , ಏನು ಸಮಾಚಾರ, ಹೇಳು.' 
- ಜುಲೈ ೧೮೦೫ರ ಒಂದು ದಿನ ಸಾಯಂಕಾಲ ಫ್ರೆಂಚಿನಲ್ಲಿ ಹೀಗೆ 
ಮಾತಾಡಿದವಳು ಸುಪ್ರಸಿದ್ದ ಅನ್ನಾ ಪಾವೋದ್ಮಾ ಶೆರರ್‌, ಮಹಾರಾಣಿ ಮಾರಿಯಾ 
ಫೆಡರೋಬ್ಬಾಳ ಆಪ್ತ ಸಖಿ . ತಾನು ಏರ್ಪಾಡು ಮಾಡಿದ್ದ ಸಂಜೆಯ ಪಾರ್ಟಿಗೆ 
ಎಲ್ಲರಿಗಿಂತ ಮೊದಲು ಬಂದ ಪ್ರಿನ್ಸ್ ವ್ಯಾಸಿಲಿ ಕುರಾಗಿನ್‌ನನ್ನು ಅವಳು 
ಬರಮಾಡಿಕೊಂಡದ್ದು ಹೀಗೆ, ಪ್ರಿನ್ಸ್ ಕುರಾಗಿನ್ ದೊಡ್ಡ ಪದವಿ, ದೊಡ್ಡ ವರ್ಚಸ್ಸು 
ಇದ್ದವನು. ಕೆಲವು ದಿನದಿಂದ ಅನ್ನಾಗೆ ಕೆಮ್ಮು ಆಗಿತ್ತು. ಅದನ್ನು ಅವಳು ' ಲಾ 
ಗ್ರಿಪ್' ಅಂತ ಕರೆಯುತ್ತಾ ಇದ್ದಳು. ಗ್ರಿಪ್ ಅನ್ನುವ ಮಾತು ಹೊಸದು, ಇನ್ನೂ 
ಚಲಾವಣೆಗೆ ಬಂದಿರಲಿಲ್ಲ . ಅವತ್ತು ಬೆಳಿಗ್ಗೆ ಕೆಂಪು ಸಮವಸ್ತ್ರ ತೊಟ್ಟ ಅವಳ 
ಸೇವಕನೊಬ್ಬ ಹೋಗಿ ಫ್ರೆಂಚಿನಲ್ಲಿ ಬರೆದ ಪತ್ರವನ್ನು ಆಹ್ವಾನಿತರಿಗೆ ತಲುಪಿಸಿ 
ಬಂದಿದ್ದ. ಎಲ್ಲದರಲ್ಲೂ ಒಂದೇ ಒಕ್ಕಣೆ ಇತ್ತು: 


೧ ೧೭೯೭ರಲ್ಲಿ ನೆಪೋಲಿಯನ್ ಜಿನೇವಾದ ಸ್ವಲ್ಪ ಭಾಗವನ್ನು ರಿಪಬ್ಲಿಕ್ ಎಂದು ಘೋಷಿಸಿ 

೧೮೦೫ರಲ್ಲಿ ಫ್ರಾನ್ಸಿಗೆ ಸೇರಿಸಿಕೊಂದ. ೧೭೯೯ರಲ್ಲಿ ಲುಕ್ಕಾ ವಶಪಡಿಸಿಕೊಂಡ . ೧೮೦೫ರಲ್ಲಿ 
ಅದನ್ನು ಸಾಮಂತ ರಾಜಧಾನಿಯಾಗಿ ಮಾಡಿ ತನ್ನ ಸೋದರಿ ಎಲಿಸಾಳ ವಶಕ್ಕೆ ಒಪ್ಪಿಸಿದ. 
ಬೋನಪಾರ್ಟೆ ಮೇಲೆ ಇರುವ ತಿರಸ್ಕಾರ ತೋರಿಸುವ ಹಾಗೆ ಅನ್ನಾ ಇಲ್ಲಿ ಅವನನ್ನು ಅವನ 
ಹುಟ್ಟೂರು ಕಾರ್ಸಿಯಾದ ಮಾತಿನ ರೀತಿಯಲ್ಲಿ ಬೋನಾಪಾರ್ಟೆ ಎಂದು ಕರೆಯುತ್ತಿದ್ದಾಳೆ. 


ಯುದ್ಧ ಮತ್ತು ಶಾಂತಿ 
ಪ್ರಿಯ ಕೌಂಟ್/ ಪ್ರಿನ್ಸ್, 

ಇಂದು ಸಂಜೆ ನಿಮಗೆ ಮುಖ್ಯವಾದ ಕಾರ್ಯಗಳು ಇರದಿದ್ದರೆ , ಬಡ 
ರೋಗಿಷ್ಠೆಯೊಡನೆ ಸಂಜೆಯನ್ನು ಕಳೆಯುವುದಕ್ಕೆ ತೀರ ಭಯವಾಗದಿದ್ದರೆ , ಈ 
ಸಂಜೆ ೭ ರಿಂದ ೧೦ರ ವರೆಗೆ ನಮ್ಮ ನಿವಾಸಕ್ಕೆ ಬರುವುದಾದರೆ ನನಗೆ ಅತ್ಯಂತ 
ಸಂತೋಷವಾಗುತ್ತದೆ. 

- ನಿಮ್ಮ ವಿಶ್ವಾಸಿ ಆನೆಟ್ ಶರರ್‌. 
“ ಅಬ್ಬಾ ! ಎಂಥಾ ದಾಳಿ!' ಆಗತಾನೇ ಒಳಕ್ಕೆ ಬಂದಿದ್ದ ಪ್ರಿನ್ಸ್ ಈ ಥರದ 
ಸ್ವಾಗತದಿಂದ ಒಂದಿಷ್ಟೂ ಕಸಿವಿಸಿಪಡದೆ ಹೇಳಿದ. ಮಂಡಿ ಸೋಕುವ ಕಾಲುಚೀಲ, 
ಶೂ , ಕಸೂತಿ ಹಾಕಿದ ಆಸ್ಥಾನದ ಸಮವಸ್ತ , ಎದೆಯ ಮೇಲೆ ನಕ್ಷತ್ರಗಳೊಂದಿಗೆ 
ತೊಟ್ಟಿದ್ದ. ಮುಖದಲ್ಲಿ ಯಾವ ಭಾವವನ್ನೂ ತೋರದೆ ಮನಸ್ಸು ಕೆಡಿಸಿಕೊಳ್ಳದೆ 
ತಣ್ಣಗೆ ಅವಳನ್ನು ನೋಡಿದ. ಅವನು ಬಳಸುತ್ತಿದ್ದ ಭಾಷೆ ನಮ್ಮ ಅಜ್ಜಂದಿರು 
ಮಾತನಾಡುವುದಕ್ಕೂ ಯೋಚಿಸುವುದಕ್ಕೂ ಬಳಸುತ್ತಿದ್ದ ಸುಸಂಸ್ಕೃತ ಫ್ರೆಂಚ್ . 
ಉನ್ನತವರ್ಗದ, ಆಸ್ಥಾನದ ಪರಿಸರದಲ್ಲಿ ಬೆಳೆದ, ಘನವಂತರಿಗೆ ಸಹಜವಾಗಿ 
ಬರುವ ಗಣ್ಯರೆಂಬ ಎಚ್ಚರದ ನಾಜೂಕು, ಕೇಳುವವರ ಮೇಲೆ ದಯೆ 
ತೋರುವಂತಿರುವ ನಯ ದನಿಯಲ್ಲಿತ್ತು. ಅನ್ನಾ ಪಾವೋವಾಳ ಹತ್ತಿರಕ್ಕೆ ಬಂದ, 
ಅವಳ ಕೈಗೆ ಮುತ್ತಿಟ್ಟ , ಸುಗಂಧ ದ್ರವ್ಯ ಲೇಪಿತವಾದ ಹೊಳೆಯುವ ಬೊಕ್ಕತಲೆಯನ್ನು 
ಬಾಗಿಸಿದ, ಸೋಫಾದ ಮೇಲೆ ತಣ್ಣಗೆ ಕೂತ. 

`ಮೊದಲು ನೀವು ಹೇಗಿದೀರಿ ಹೇಳಿ? ನನ್ನ ಮನಸಿಗೆ ನೆಮ್ಮದಿಯಾಗಬೇಕು' 
ಅಂದ. ಅವನ ದನಿ ದೃಢವಾಗಿತ್ತು, ಆಡಿದ ಧಾಟಿಯಲ್ಲಿ ವಿನಯ , ಅನುಕಂಪದ 
ಜೊತೆಗೆ ಉದಾಸೀನ, ಅಷ್ಟೇ ಅಲ್ಲ ಒಂದು ಚೂರು ಲೇವಡಿ ಕೂಡ ಸೇರಿತ್ತು. 
ಈ 'ನೆಮ್ಮದಿ... ಮನಸ್ಸು ಸಂಕಟಪಡುತಾ ಇರುವಾಗ ನೆಮ್ಮದಿ ಎಲ್ಲಿ! ಸೂಕ್ಷವಾಗಿ 
ಇರುವೋರು ಇಂಥಾ ದಿನಗಳಲ್ಲಿ ನೆಮ್ಮದಿಯಾಗಿ ಇರೋದಕ್ಕಾಗುತದಾ ?' ಅಂದಳು 
ಅನ್ನಾ ಪಾವೋವಾ, ಇವತ್ತು ಪಾರ್ಟಿ ಮುಗಿಯುವವರೆಗೆ ಇರುತ್ತೀರಿ ತಾನೇ ?” 
ಆ ' ಇಂಗ್ಲೆಂಡಿನ ರಾಯಭಾರಿಯದು ಪಾರ್ಟಿ ಇದೆ. ಇವತ್ತು ಬುಧವಾರ. 
ಹೋಗಿ ಮುಖ ತೋರಿಸಲೇಬೇಕು. ನನ್ನ ಮಗಳು ಬರತಾಳೆ, ಕರಕೊಂಡು 
ಹೋಗೋದಕ್ಕೆ ' ಅಂದ ಪ್ರಿನ್ಸ್ , 

' ಇವತ್ತಿನ ಸಡಗರ ರದ್ದಾಗಿದೆ ಅಂದುಕೊಂಡಿದ್ದೆ. ಈ ಸಡಗರ , ಬಾಣ 
ಬಿರುಸು... ತಲೆ ಚಿಟ್ಟು ಹಿಡಿದುಬಿಟ್ಟಿದೆ.' 

“ ಸಡಗರ ನಿಮಗೆ ಇಷ್ಟವಿಲ್ಲ ಅನ್ನುವುದು ಗೊತ್ತಾಗಿದ್ದರೆ ನಿಲ್ಲಿಸಿಬಿಡುತಿದ್ದರು' 
ಹೊತ್ತಿಗೆ ಸರಿಯಾಗಿ ಗಂಟೆ ಬಾರಿಸುವ ಕೀಲಿ ಕೊಟ್ಟ ಗಡಿಯಾರದ ಹಾಗೆ 
ನುಡಿದ ಪ್ರಿನ್ಸ್ ಅಂದುಕೊಳ್ಳದೆ ಇರುವುದನ್ನೂ ಅಭ್ಯಾಸದಿಂದ ಆಡುತ್ತಿದ್ದ. 


ಸಂಪುಟ ೧ - ಸಂಚಿಕೆ ಒಂದು 
- 'ಸುಮ್ಮನೆ ಹಂಗಿಸಬೇಡಿ! ಸರಿ...ನೋವೊಸಿಲ್‌ತೇವ್‌ನ ರಾಯಭಾರದ ಬಗ್ಗೆ 
ಏನು ತೀರ್ಮಾನ ಆಯಿತು ? ನಿಮಗೆ ಎಲ್ಲಾ ಗೊತ್ತಿರುತ್ತದೆ, ಹೇಳಿ' ಅಂದಳು. 
ಈ 'ಹೇಳೋದಕ್ಕೆ ಏನಿದೆ ?' ಪ್ರಿನ್ಸ್ ತಣ್ಣನೆಯ ಬೇಸರದ ಧ್ವನಿಯಲ್ಲಿ ಹೇಳಿದ. 
“ಎಂಥಾ ತೀರ್ಮಾನ? ನೆಪೋಲಿಯನ್ ಬೋನಾಪಾರ್ಟೆ ಮುಳುಗಿಹೋಗಿದಾನೆ 
ಅಂದುಕೊಂಡಿದಾರೆ, ನಾವೂ ಮುಳುಗೋದಕ್ಕೆ ಸಿದ್ದ ಅಂತ ಕಾಣುತ್ತದೆ.' ಪ್ರಿನ್ಸ್ 
ವ್ಯಾಸಿಲಿ ಯಾವಾಗಲೂ ಹಳೆಯ ನಾಟಕದ ಪಾತ್ರದ ಮಾತು ಆಡುವ ನಟನ 
ಹಾಗೆ ಉತ್ಸಾಹವಿಲ್ಲದ ಬೇಜಾರಿನ ದನಿಯಲ್ಲಿ ಜಡವಾಗಿ ರಾಗ ಎಳೆದು ಮಾತಾಡುತ್ತಿದ್ದ. 
ಅನ್ನಾ ಪಾವೋವಾ ಇದಕ್ಕೆ ವಿರುದ್ಧವಾಗಿದ್ದಳು. ನಲವತ್ತು ಆಗಿದ್ದರೂ ಅವಳಲ್ಲಿ 
ಸ್ಫೂರ್ತಿ, ಉತ್ಸಾಹ ಉಕ್ಕುತ್ತಿದ್ದವು. ಘನವಂತರ ಸಮಾಜದಲ್ಲಿ ಯಾವಾಗಲೂ 
ಉತ್ಸಾಹಿಯಂತೆ ಕಾಣಿಸಿಕೊಳ್ಳುವುದು ಅವಳ ವಿಶೇಷ ಪಾತ್ರವಾಗಿತ್ತು. ಹಾಗಾಗಿ 
ಮನಸ್ಸಿನಲ್ಲಿ ಲವಲವಿಕೆ ಇರದಿದ್ದರೂ ತನ್ನನ್ನು ಬಲ್ಲ ಸುತ್ತಲ ಜನರ ನಿರೀಕ್ಷೆಯನ್ನು 
ಹುಸಿಮಾಡಬಾರದೆಂದು ಸದಾ ಉತ್ಸಾದ ಬಣ್ಣ ಮೆತ್ತಿಕೊಂಡಿರುತ್ತಿದ್ದಳು . ಹಾಗಾಗಿ 
ಅವಳ ಮುಖದ ಮೇಲೆ ಪ್ರತ್ಯೇಕವಾಗಿ ಸದಾ ಇದ್ದೇ ಇರುತ್ತಿದ್ದ ಮುಗುಳು ನಗೆ 
ಚೆಲುವು ಮಾಸಿದ ಅವಳ ಮುಖಕ್ಕೆ ಹೊಂದದೆ ಇದ್ದರೂ -ಅವಳನ್ನು ಮುದ್ದಿನಿಂದ 
ಹಾಳಾದ ಮಗುವಿನ ಹಾಗೆ ಕಾಣುವಂತೆ ಮಾಡಿತ್ತು. ಅದು ಅವಳಿಗೂ ಗೊತ್ತಿದ್ದರೂ 
ಅದನ್ನು ತಿದ್ದಿಕೊಳ್ಳುವ ಇಷ್ಟ ಇರಲಿಲ್ಲವೋ ಶಕ್ತಿ ಇರಲಿಲ್ಲವೋ , ಅಥವಾ ತಿದ್ದಿಕೊಳ್ಳಬೇಕು 
ಅಂತಲೂ ಅನಿಸಿರಲಿಲ್ಲವೋ .. 

ಆಮೇಲೆ, ರಾಜಕೀಯ ವಿಷಯಗಳ ಸಂಭಾಷಣೆಯ ಮಧ್ಯೆ ಅನ್ನಾ ಪಾವೋನ್ಮಾ 
ಇದ್ದಕ್ಕಿದ್ದ ಹಾಗೆ ಮಹಾ ಉದ್ರೇಕದಿಂದ ಸಿಡಿದುಬಿದ್ದಳು : ' ಆಸ್ಟಿಯಾದ ಸುದ್ದಿ 
ಎತ್ತಬೇಡಿ ನನ್ನ ಹತ್ತಿರ . ನನಗೆ ಮೀರಿದ ವಿಷಯ ಇರಬಹುದು. ಆದರೆ ಆಸ್ಸಿಯಾಕ್ಕೆ 
ಯಾವತ್ತೂ ಯುದ್ಧ ಬೇಕಾಗಿರಲಿಲ್ಲ . ಈಗಲೂ ಬೇಕಾಗಿಲ್ಲ. ನಮಗೆ ಮೋಸ 
ಮಾಡುತ್ತಿದಾರೆ ಅವರು! ರಶಿಯಾ ಒಂದೇ ಯೂರೋಪನ್ನು ಕಾಪಾಡಬೇಕು 
ಈಗ, ನಮ್ಮ ಮಹಾಪ್ರಭುಗಳಿಗೆ ತಾವು ಎಂಥ ಮಹತ್ವದ ಕಾರ್ಯ ಮಾಡಬೇಕು 
ಅನ್ನುವ ಅವರ ಜವಾಬ್ದಾರಿ ಗೊತ್ತು, ಅದಕ್ಕೆ ತಪ್ಪುವರಲ್ಲ. ಇದೊಂದು ವಿಷಯದಲ್ಲಿ 


೨ ಶಾಂತಿ ಸಂಧಾನದ ಮಾತುಕಥೆಯಲ್ಲಿ ಸಹಾಯಕನಾಗಿರುವಂತೆ ಚಕ್ರವರ್ತಿ ಅಲೆಕ್ಸಾಂಡರ್ 

ಎನ್ . ಎನ್ . ನೋವೊಸಿಲ್‌ಗ್ರೇವ್‌ನನ್ನು ವಿಶೇಷರಾಯಭಾರಿಯಾಗಿ ಪ್ಯಾರಿಸ್‌ಗೆ ಕಳುಹಿಸಿದ್ದ. ಈ 

ರಾಯಭಾರ ವಿಫಲವಾಯಿತು. 
೩ ಕೆಲವೇ ವಾರಗಳ ಹಿಂದೆ, ಏಪ್ರಿಲ್ ೧೮೦೫ರಲ್ಲಿ, ಗ್ರೇಟ್ ಬ್ರಿಟನ್, ಆಸ್ಟ್ರಿಯಾ ಮತ್ತು ರಶಿಯಾ 

ನಡುವೆ ಮೂರನೆಯ ಬಾರಿಗೆ ಒಪ್ಪಂದವೊಂದು ಏರ್ಪಟ್ಟಿತ್ತು. ಮೂರೂ ದೇಶಗಳು ಒಟ್ಟಿಗೆ 
ಸೇರಿ ನೆಪೋಲಿಯನ್‌ನ ಮೇಲೆ ದಾಳಿ ಮಾಡಿ ಸೋಲಿಸಲು ಬಯಸಿದ್ದವು. ಇಂಥದೇ 
ಒಪ್ಪಂದವೊಂದನ್ನು ನೆರವೇರಿಸದೆ ಆಸ್ಟಿಯಾದವರು ರಶಿಯಾಕ್ಕೆ ಮೋಸಮಾಡಿದ್ದರೂ , ಈಗಲೂ 
ಅವರನ್ನು ನಂಬುವುದು ಸಾಧ್ಯವಿಲ್ಲ ಎಂದು ಅನೇಕರು ಭಾವಿಸಿದ್ದರು. 


ಯುದ್ಧ ಮತ್ತು ಶಾಂತಿ 
ನನಗೆ ಪೂರ್ತಿ ವಿಶ್ವಾಸವಿದೆ. ಜಗತ್ತಿನಲ್ಲಿ ಮಹೋನ್ನತವಾದ ಪಾತ್ರ ನಮ್ಮ ಪ್ರಭುಗಳಿಗಾಗಿ 
ಕಾಯುತಿದೆ. ಅವರಂಥ ಗುಣವಂತರನ್ನು ಧರ್ಮಿಷ್ಠರನ್ನು ದೇವರು ಖಂಡಿತ 
ಕೈಬಿಡುವುದಿಲ್ಲ. ಆ ದುಷ್ಟ, ನೀಚನ ರೂಪದಲ್ಲಿ ತಲೆ ಎತ್ತಿರುವ ಕ್ರಾಂತಿಯ 
ವಿಷಸರ್ಪವನ್ನ ಹೊಸಕಿಹಾಕುತಾರೆ! ನ್ಯಾಯಕ್ಕೋಸ್ಕರ ರಕ್ತ ಚೆಲ್ಲಿದವರ ಪರವಾಗಿ 
ಸೇಡು ನಾವೇ ತೀರಿಸಬೇಕು. ಹೇಳಿ ಯಾರನ್ನು ನಂಬುವುದು, ಹೇಳಿ ನೋಡೋಣ? 
ವ್ಯಾಪಾರಿಬುದ್ಧಿಯ ಇಂಗ್ಲೆಂಡಿಗೆ ನಮ್ಮ ಚಕ್ರವರ್ತಿ ಅಲೆಕ್ಸಾಂಡರ್‌ನ ಆತ್ಮದ ಎತ್ತರ 
ತಿಳಿದಿಲ್ಲ, ತಿಳಿಯುವುದೂ ಇಲ್ಲ. ಮಾಲ್ಟಾ ದ್ವೀಪ ಖಾಲಿ ಮಾಡಿ ಅಂದರೆ ಮಾಡಲಿಲ್ಲ” 
ಅವರು. ನಾವು ಮಾಡಿದ್ದರಲ್ಲೆಲ್ಲ ಏನೋ ಸಂಚು ಹುಡುಕುತ್ತಲೇ ಇರುತ್ತಾರೆ. 
ನೋವೊಸಿಲ್‌ತೈವ್‌ಗೆ ಏನು ಉತ್ತರ ಕೊಟ್ಟರು ? ಮಾತೇ ಆಡಲಿಲ್ಲ. ನಮ್ಮ 
ಚಕ್ರವರ್ತಿಯವರದು ಎಂಥ ಉಪಕಾರದ ಬುದ್ದಿ , ಸ್ವಂತಕ್ಕೆ ಏನೂ ಬೇಡ. ಇಡೀ 
ಮನುಷ್ಯ ಕುಲಕ್ಕೆ ಒಳ್ಳೆಯದಾಗಬೇಕು ಅನ್ನುವವರು ಅವರು. ನನಗೆ ಬೇಡ, 
ನಿಮಗಿರಲಿ ಅನ್ನುವ ಅವರ ಬುದ್ದಿ ಇಂಗ್ಲಿಷಿನವರಿಗೆ ಅರ್ಥವಾಗುವುದಿಲ್ಲ. 
ನಮಗೇನಾದರೂ ಮಾತು ಕೊಟ್ಟಿದಾರಾ ? ಇಲ್ಲ! ಅವರು ಕೊಟ್ಟಿರುವ ಸಣ್ಣ ಪುಟ್ಟ 
ಮಾತೂ ನಡೆಸೋದಿಲ್ಲ. ಇನ್ನು ಪ್ರಶಿಯಾ, ಅವರು ಬಿಡಿ . ಬೊನೊಪಾರ್ಟೆಯನ್ನು 
ಸೋಲಿಸುವುದಕ್ಕೆ ಸಾಧ್ಯವೇ ಇಲ್ಲ . ಅವನ ಮುಂದೆ ಇಡೀ ಯೂರೋಪೇ 
ದುರ್ಬಲವಾಗಿ ನಿಂತಿದೆ ಅಂತ ಘೋಷಣೆಮಾಡಿಬಿಟ್ಟಿದಾರೆ. ಹಾರ್ಡೆನ್‌ಬರ್ಗ್ 
ಹೇಳುವ ಒಂದು ಅಕ್ಷರವನ್ನೂ ನಂಬುವುದಿಲ್ಲ, ಅಥವಾ ಹಾಗ್ವಿಟ್ನದೂ ಅಷ್ಟೆ. 
ನಾವು ಯಾವ ಪಕ್ಷಕ್ಕೂ ಸೇರದವರು ಅನ್ನುವ ಪರ್ಶಿಯಾದವರ ಮಾತು ಬರೀ 
ಮೋಸದ ಬಲೆ, ನಾನು ನಂಬುವುದು ದೇವರನ್ನು ಮತ್ತೆ ನಮ್ಮ ಪ್ರಭುಗಳ 
ದೊಡ್ಡತನವನ್ನ ಮಾತ್ರ, ಖಂಡಿತ ಯೂರೋಪನ್ನು ಕಾಪಾಡುತ್ತಾರೆ ಅವರು!' 

ತಟ್ಟನೆ ಮಾತು ನಿಲ್ಲಿಸಿದಳು. ತನ್ನ ಮಾತಿನ ಭಾವುಕ ತೀವ್ರತೆಯನ್ನು 
ಆನಂದಿಸಿದಳು. 

“ ನಮ್ಮ ವಿನ್‌ಟೈನ್‌ಜೆರೋಡ್ ಬದಲಾಗಿ ನಿಮ್ಮನ್ನೇ ಕಳುಹಿಸಿದ್ದಿದ್ದರೆ ಇಂಥಾ 
ಬರೀ ಮಾತಿನ ದಾಳಿಯಿಂದಲೇ ಪರ್ಶಿಯಾದ ಚಕ್ರವರ್ತಿಯ ಒಪ್ಪಿಗೆಯನ್ನು 
೪ ಫ್ರೆಂಚ್ ಕ್ರಾಂತಿಯ ನೆನಪು ಇನ್ನೂ ಹಸಿರಾಗಿತ್ತು. ಅದರ ಪರಿಣಾಮವಾಗಿ ರಶಿಯಾ ಸೇರಿದಂತೆ 
ಯೂರೋಪಿನ ದೇಶಗಳಲ್ಲಿ ಸಂಚಲನದ ಅಲೆಗಳು ಏಳುತ್ತಿದ್ದವು. ಸಾಮಾನ್ಯ ಹಿನ್ನೆಲೆಯ 
ನೆಪೋಲಿಯನ್ ಹುಟ್ಟಿಸಿದ್ದ ರಿಪಬ್ಲಿಕನ್ ಸ್ಫೂರ್ತಿ ರಾಜಪ್ರಭುತ್ವವಿದ್ದ ದೇಶಗಳ ಸ್ಥಿರತೆಯನ್ನು 

ಕಲಕುತ್ತದೆ ಎಂಬ ಆತಂಕವಿತ್ತು 
೫ ೧೭೯೮ರಲ್ಲಿ ಮಾಲ್ಟಾ ನೆಪೋಲಿಯನ್‌ನ ವಶವಾಗಿತ್ತು. ೧೮೦೦ರಲ್ಲಿ ಬ್ರಿಟಿಷರು ಅದನ್ನು ಮತ್ತೆ 

ವಶಪಡಿಸಿಕೊಂಡರು. ಆಗ ಆದ ಒಪ್ಪಂದದ ಪ್ರಕಾರ ಬ್ರಿಟನ್ ಮಾಲ್ಟಾ ದ್ವೀಪ ಬಿಟ್ಟುಕೊಡಬೇಕಾಗಿತ್ತು. 
ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಮಧ್ಯಸ್ಥಿಕೆ ನಡೆಸುವುದಕ್ಕೆ ರಶಿಯಾ ಮುಂದೆ ಬಂದಿತು. 
ರಶಿಯಾದ ಸಲಹೆ ತಿರಸ್ಕಾರಗೊಂಡಿತು. ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಕದನ ನಡೆಯಿತು. 
ರಶಿಯಾ ಬ್ರಿಟನ್ ಪರವಾಗಿ ಯುದ್ಧಮಾಡಿತು. 


ಸಂಪುಟ ೧ - ಸಂಚಿಕೆ ಒಂದು 
ಗೆದ್ದು ತಂದುಬಿಡುತ್ತಿದ್ದಿರಿ ಅನ್ನಿಸುತ್ತದೆ. ಅಷ್ಟು ಚೆನ್ನಾಗಿ ಮಾತಾಡಿದಿರಿ ,' ಅವಳ 
ಹಾಗೆಯೇ ನಗುತ್ತಾ ಪ್ರಿನ್ಸ್ ಹೇಳಿದ. 'ಸ್ವಲ್ಪ ಟೀ ಕೊಡುತ್ತೀರಾ ?' 

' ಖಂಡಿತಾ' ಮನಸ್ಸು ಸ್ಥಿಮಿತಕ್ಕೆ ತಂದುಕೊಳ್ಳುತ್ತಾ ಹೇಳಿದಳು. ಅಂದ 
ಹಾಗೆ ಇವತ್ತು ಸಾಯಂಕಾಲ ಇಬ್ಬರು ವಿಶೇಷ ಅತಿಥಿಗಳು ಬರುತ್ತಾರೆ. ಒಬ್ಬ 
ವೈಕೌಂಟ್ ಮಾರ್ಟಿಮರ್, ರೋನ್ ಕುಟುಂಬಕ್ಕೆ ಸೇರಿದವನು, ಮಾರ್ಷಲ್ 
ಆಗಿದಾನೆ, ಅವನದ್ದು ಹೆಸರುವಾಸಿಯಾದ ಫ್ರೆಂಚ್ ಮನೆತನ. ನಮ್ಮ ರಾಜಾಶ್ರಯ 
ಕೋರಿ ಬಂದ ಒಳ್ಳೆಯ ಎಮಿಗ್ರಿ ಅವನು. ಇನ್ನೊಬ್ಬ ಅಬೆ ಮೊರಿಯೊ . ಸುಪ್ರಸಿದ್ದ 
ಚಿಂತಕ , ಗೊತ್ತಾ ಅವವನು ? ಚಕ್ರವರ್ತಿಯವರು ಕೂಡ ಅವನನ್ನು ಕರೆಸಿಕೊಂಡು 
ಮಾತಾಡಿಸಿದಾರೆ.' 
. 'ಓ , ಅಂಥವರನ್ನು ಕಾಣೋದು ಯಾವಾಗಲೂ ಸಂತೋಷವೇ ' ಅಂದ 
ಪಿನ್ ಅಂದ ಹಾಗೆ...' ಪ್ರಯತ್ನಪೂರ್ವಕವಾಗಿ ಉದಾಸೀನ ನಟಿಸುತ್ತಾ , ಅದೇ 
ಆಗ ಆ ವಿಚಾರ ಮನಸ್ಸಿಗೆ ಬಂತೋ ಅನ್ನುವ ಹಾಗೆ ಪ್ರಶ್ನೆಯೊಂದನ್ನು ಕೇಳಿದ. 
ನಿಜವಾಗಿಯೂ ಆ ಮಾತನ್ನು ಕೇಳಬೇಕು ಅನ್ನುವುದೇ ಅವತ್ತು ಅವನು ಅನ್ನಾ 
ಪಾವೊವ್ಯಾಳ ಮನೆಗೆ ಬರುವುದಕ್ಕೆ ಮುಖ್ಯ ಕಾರಣ. “ ಅಂದ 
ಹಾಗೆ...ರಾಜಮಾತೆಯವರು ಬ್ಯಾರನ್ ಫಂಕ್‌ನನ್ನು ವಿಯೆನ್ನಾದ ಪ್ರಥಮ ಕಾರ್ಯದರ್ಶಿ 
ಮಾಡಬೇಕು ಅಂತ ಇದಾರೆ ಅನ್ನುವ ಮಾತು ಕೇಳಿದೆ, ಹೌದೇ ? ಯೋಗ್ಯತೆ 
ಇಲ್ಲದ ಕ್ರಿಮಿ ಅನ್ನುತ್ತಾರಪ್ಪಾ, ಪಾಪ, ಬ್ಯಾರನ್...' ಅಂದ. 
- ಪ್ರಿನ್ಸ್ ವ್ಯಾಸಿಲಿ ತನ್ನ ಮಗನಿಗೆ ಆ ಹುದ್ದೆ ಕೊಡಿಸಬೇಕೆಂದು ಆಸೆಪಟ್ಟಿದ್ದ. 
ಆದರೆ ಮಹಾರಾಣಿ ಮಾರಿಯಾ ಫೆಡೆರೊಟ್ನಾಳ ಮುಖಾಂತರ ಬ್ಯಾರನ್ ಫಂಕ್‌ಗೆ 
ಅದನ್ನು ಕೊಡಿಸಲು ಬೇರೆಯವರು ಪ್ರಯತ್ನಿಸುತ್ತಿದ್ದರು. ಅನ್ನಾ ಪಾವೋವಾ 
ಕಣ್ಣುಗಳನ್ನು ಅರ್ಧ ಮುಚ್ಚಿಕೊಂಡಳು - ಮಹಾರಾಣಿ ಏನು ಮಾಡಬೇಕು 
ಅಂದುಕೊಳ್ಳುತ್ತಾಳೆ, ಮಾಡಲು ಬಯಸುತ್ತಾಳೆ ಅದರ ಬಗ್ಗೆ ಮಾತಾಡುವುದಕ್ಕೆ 
ತನಗಾಗಲೀ ಬೇರೆ ಯಾರಿಗೇ ಆಗಲಿ ಅಧಿಕಾರವಿಲ್ಲ ಅನ್ನುವುದನ್ನು ಸೂಚಿಸುವುದಕ್ಕೆ. 
' ಮಹಾರಾಣಿಯವರಿಗೆ ಅವರ ಸೋದರಿಯವರು ಫಂಕ್ ಬಗ್ಗೆ ಶಿಫಾರಸು 
ಮಾಡಿದಾರೆ' ಎಂದಷ್ಟೇ ಅಂದಳು. ಮಹಾರಾಣಿಯ ಹೆಸರನ್ನು ಎತ್ತುತ್ತಿದ್ದ ಹಾಗೆಯೇ 
ಅವಳ ಮುಖದಲ್ಲಿ ಇದ್ದಕ್ಕಿದ್ದಂತೆ ಅಗಾಧವಾದ ಭಕ್ತಿ, ಅದರ ಜೊತೆಗೆ ಗೌರವ , 
ಅದರೊಡನೆ ಒಂದಿಷ್ಟು ದುಃಖದ ಬಣ್ಣಬೆರೆತು ಕಾಣಿಸಿಕೊಂಡಿತು . ತನ್ನ 
ಆಶ್ರಯದಾತಳನ್ನು ಕುರಿತು ಮಾತನಾಡುವಾಗಲೆಲ್ಲ ಇದೇ ಭಾವ ಅವಳಲ್ಲಿ ತಪ್ಪದೆ 
ಮೂಡುತ್ತಿತ್ತು . ಮಹಾರಾಣಿಯವರು ಬ್ಯಾರನ್ ಫಂಕ್‌ಗೆ ಗೌರವ ತೋರುವ 
ಕರುಣೆ ಮಾಡಿದ್ದಾರೆ ಎಂದು ಹೇಳುವಾಗ ಅವಳ ಮುಖವೇ ದುಃಖವಾಗಿ 
ಕರಗಿತ್ತು. 


ಯುದ್ಧ ಮತ್ತು ಶಾಂತಿ 
- ಪಿನ್ ಏನೂ ಮಾತನಾಡಲಿಲ್ಲ, ಯಾವ ಭಾವವನ್ನೂ ತೋರಲಿಲ್ಲ. ಆಸ್ಥಾನಿಕರಿಗೆ 
ಮತ್ತೆ ಹೆಂಗಸರಿಗೆ ಸಹಜವಾದ ಸೂಕ್ಷತೆ ಮತ್ತೆ ಚುರುಕುತನ ಹಾಗೂ ಸ್ತ್ರೀ 
ಸಹಜವಾದ ಚಳಕದಿಂದ ಅನ್ನಾ ಪಾವೋವಾ ಏಕಕಾಲದಲ್ಲಿ ಮಹಾರಾಣಿ 
ಒಪ್ಪಿದವನನ್ನು ಟೀಕಿಸುವ ಸ್ವಾತಂತ್ರ ತೋರಿದ್ದಾಗಿ ಅವನನ್ನು ಗದರಿಸುವಂತೆಯೂ 
ಸಮಾಧಾನಪಡಿಸುವಂತೆಯೂ ಮಾತನಾಡಿದಳು: 

- ನಿಮ್ಮ ಮನೆಯ ಸಮಾಚಾರವೇನು? ನಿಮ್ಮ ಮಗಳು ಹೊರಗೆ 
ಕಾಣಿಸಿಕೊಳ್ಳಲು ಶುರುಮಾಡಿಮೇಲೆ ನಮ್ಮ ಸಮಾಜದ ಎಲ್ಲರಿಗೂ ಖುಶಿ 
ಆಗಿದೆಯಂತೆ ? ಬೆರಗಾಗುವಷ್ಟು ಚೆನ್ನಾಗಿದಾಳೆ ಅಂತ ಕೇಳಿದೆ.' 

ಗೌರವ , ಕೃತಜ್ಞತೆಗಳನ್ನು ತೋರುವ ಹಾಗೆ ಪ್ರಿನ್ಸ್ ತಲೆಬಾಗಿಸಿದ. 
- ಆಕೆ ಕೊಂಚ ಹೊತ್ತು ಸುಮ್ಮನಿದ್ದು,' ನನಗನ್ನಿಸುತ್ತದೆ...' ಎಂದು ಶುರುಮಾಡಿ , 
ಸ್ವಲ್ಪ ಹತ್ತಿರಕ್ಕೆ ಸರಿದು, ರಾಜಕೀಯದ, ಸಮಾಜದ ವಿಚಾರಗಳು ಮುಗಿದವು, 
ಇನ್ನು ಮನೆಯ ಕಷ್ಟ ಸುಖ ಮಾತಾಡಿಕೊಳ್ಳಬಹುದು ಅನ್ನುವುದನ್ನು ಸೂಚಿಸುತ್ತಾ, 
ಸಿಹಿಯಾಗಿ ಮುಗುಲ್ನಗುತ್ತಾ 'ದೇವರು ಬದುಕಿನ ಸಂತೋಷವನ್ನು ಸಮವಾಗಿ 
ಹಂಚುವುದಿಲ್ಲ ಅಂತ ಎಷ್ಟೋ ಸಲ ನನಗನ್ನಿದೆ; ಇಬ್ಬರು ಅದ್ಭುತವಾದ ಮಕ್ಕಳನ್ನು 
ಕೊಟ್ಟಿಲ್ಲವೇ ದೇವರು ? ಚಿಕ್ಕವನು, ಅನತೋಲ್ ಬಗ್ಗೆ ನಾನು ಏನೂ ಹೇಳೋದಿಲ್ಲ. 
ಅವನನ್ನು ಕಂಡರೆ ನನಗೇನೂ ಅಷ್ಟು ಇಷ್ಟ ಇಲ್ಲ.' ಈ ಮಾತಿಗೆ ಪ್ರತಿಯಾಡಬಾರದು 
ಅನ್ನುವ ಹಾಗೆ ಹುಬ್ಬನ್ನು ಕೊಂಚವೇ ಎತ್ತರಿಸಿ, ' ಮುತ್ತಿನಂಥಾ ಇಬ್ಬರು ಮಕ್ಕಳು . 
ಆದರೂ ನೀವು ಮಿಕ್ಕ ತಂದೆಯರ ಹಾಗೆ ಮಕ್ಕಳ ಬಗ್ಗೆ ಒಳ್ಳೆಯ ಮಾತು ಆಡಿದ್ದು 
ಕೇಳಿಯೇ ಇಲ್ಲ. ಅವರು ನಿಮ್ಮ ಮಕ್ಕಳಾಗಿ ಹುಟ್ಟಬಾರದಾಗಿತ್ತು' ಅನ್ನುತ್ತಾ 
ಪರವಶಗೊಳಿಸುವಂಥ ಮುಗುಳು ನಗೆಯನ್ನು ಬೀರಿದಳು. 

'ಏನು ಮಾಡಲಿ? ಲವಾಟೆ ಪ್ರಕಾರ ನನಗೆ ಅಪ್ಪತನದ ಹಣೆಯ ಉಬ್ಬು 
ಇಲ್ಲ, ನನಗೆ ಮಕ್ಕಳನ್ನು ಸಾಕುವುದಕ್ಕೆ ಬರುವುದಿಲ್ಲ ಅನ್ನುತ್ತಾನೇನೋ ಅವನು' 
ಅಂದ ಪ್ರಿನ್ಸ್, 

- 'ಸಾಕು, ತಮಾಷೆ ಮಾಡಬೇಡಿ. ನಿಮ್ಮ ಹತ್ತಿರ ಈ ವಿಚಾರ ಹೇಳಬೇಕು. 
ಅಂದುಕೊಂಡಿದ್ದೆ . ನಿಮ್ಮ ಚಿಕ್ಕ ಮಗ ಆಡುವುದು ನೋಡಿಬೇಜಾರಾಗಿಬಿಟ್ಟಿದೆ. ಈ 
ವಿಷಯ ನಮ್ಮಲ್ಲೇ ಇರಲಿ (ಹೀಗೆನ್ನುವಾಗ ಅವಳ ಮುಖ ಮತ್ತೆ ಮಂಕಾಗಿತ್ತು), 
ಮಹಾರಾಣಿಯವರ ಎದುರಿಗೆ ನಿಮ್ಮ ಮಗನ ಪ್ರಸ್ತಾಪ ಬಂತು. ಜನ ನಿಮ್ಮ ಬಗ್ಗೆ . 
ಅಯ್ಯೋ ಪಾಪ ಅನ್ನುತಾರೆ...' ಅಂದಳು. 
೬ ಜೆ.ಕೆ. ಲವಾಟೆ ( ೧೭೪೧ - ೧೮೦೩) ಸ್ವಿಸ್ ದೇಹ ಶಾಸ್ತ್ರಜ್ಞ ಫ್ರೆನಾಲಜಿ ಎಂಬ ಅರೆ ವಿಜ್ಞಾನದ 
ಸೃಷ್ಟಿಕರ್ತರಲ್ಲಿ ಒಬ್ಬ . ಹಣೆಯ ಮೇಲೆ, ತಲೆಯ ಬುರುಡೆಯ ಮೇಲೆ ಇರುವ ಉಬ್ಬುಗಳು 
ವ್ಯಕ್ತಿಯ ಮಾನಸಿಕ ಸಾಮರ್ಥ್ಯಗಳನ್ನು ತೋರುತ್ತವೆ ಎಂದು ಪ್ರತಿಪಾದಿಸಿದ 


ಸಂಪುಟ ೧ - ಸಂಚಿಕೆ ಒಂದು 
- ಪ್ರಿನ್ಸ್ ಏನೂ ಮಾತನಾಡಲಿಲ್ಲ. ಎಲ್ಲ ಬಲ್ಲವವಳ ಹಾಗೆ ಅವನನ್ನೇ ದಿಟ್ಟಿಸುತ್ತಾ 
ಉತ್ತರಕ್ಕಾಗಿ ಕಾದಿದ್ದಳು ಅನ್ನಾ ಪಾವೋವಾ, ಪ್ರಿನ್ಸ್ ವ್ಯಾಸಿಲಿ ಹುಬ್ಬು ಗಂಟಿಕ್ಕಿದ. 

“ ನಾನು ತಾನೇ ಏನು ಮಾಡಲಿ?' ಕೊನೆಗೊಮ್ಮೆ ಹೇಳಿದ, “ ಮಕ್ಕಳನ್ನ 
ಸರಿಯಾಗಿ ಬೆಳೆಸುವುದಕ್ಕೆ ಅಪ್ಪ ಆದವನು ಏನು ಮಾಡಬಹುದೋ ಅದೆಲ್ಲ 
ಮಾಡಿದೆ. ಇಬ್ಬರೂ ಮೂರ್ಖಶಿಖಾಮಣಿಗಳಾದರು. ಹಿಪೊಲೈಟ್ ಎಷ್ಟೋವಾಸಿ. 
ಪೆದ್ದ, ಸುಮ್ಮನೆ ಇರುತಾನೆ. ಅನತೋಲ್ ಪೆದ್ದ ಮತ್ತೆ ರೌಡಿ, ಇಬ್ಬರಿಗೂ ಅಷ್ಟೇ 
ವ್ಯತ್ಯಾಸ.' ಅಸಹಜವಾಗಿ ಬಲವಂತವಾಗಿ ನಗುತ್ತಾ ಹೇಳಿದ. ಹಾಗಾಗಿ ಬಾಯಿಯ 
ಸುತ್ತ ಇದ್ದ ಗೆರೆಗಳು ತಿರುಚಿಕೊಂಡು ಅವನ ಬಾಯಿ ಆಶ್ಚರ್ಯವಾಗುವಷ್ಟು 
ವಿಕಾರವಾಗಿ ಒಡ್ಡಾಗಿ ಕಾಣುತ್ತಿತ್ತು. 

“ನಿಮ್ಮಂಥವರಿಗೆ ಮಕ್ಕಳಾದರೂ ಯಾಕೆ ಆಗುತ್ತವೋ ? ನೀವು ಮಕ್ಕಳ 
ತಂದೆ ಅನ್ನುವುದನ್ನು ಬಿಟ್ಟರೆ ನಿಮ್ಮಲ್ಲಿ ಇನ್ನು ಯಾವ ಕುಂದೂ ಕಾಣದು' ಅಂದಳು 
ಅನ್ನಾ ಪಾವೋವಾ, ಅವಳ ನೋಟದಲ್ಲಿ ದುಃಖವಿತ್ತು. 

' ನಾನು ನಿಮ್ಮ ನೆಚ್ಚಿನ ಬಂಟ, ನಿಮ್ಮ ಹತ್ತಿರ ನಿಜ ಹೇಳುತ್ತೇನೆ. ಈ ಮಕ್ಕಳು 
ನನ್ನ ಜನಕ್ಕೆ ಅಂಟಿದ ರೋಗ, ಬದುಕಿನ ಉದ್ದಕ್ಕೂ ನಾನೇ ಹೊರಬೇಕಾಗಿರುವ 
ಶಿಲುಬೆ ಅಂದುಕೊಳ್ಳತೇನೆ. ನೀವಾಗಿದ್ದರೆ...' ತಟ್ಟನೆ ಮಾತು ನಿಲ್ಲಿಸಿದ. ಕೂರವಿಧಿಗೆ 
ಸೋತವನ ಹಾಗೆ ಕೈ ಚೆಲ್ಲಿದ. ಅನ್ನಾ ಪಾವೋವಾ ಯೋಚನೆಯಲ್ಲಿ ಮುಳುಗಿದಳು. 

“ನಿಮ್ಮ ಅಸಡ್ಡಾಳ ಮಗ ಇದ್ದಾನಲ್ಲಾ , ಅವನಿಗೆ ಮದುವೆಮಾಡುವ 
ಯೋಚನೆಯೇನಾದರೂ ಬಂದಿದೆಯೇ ? ವಯಸ್ಸಾದ ಹೆಂಗಸರಿಗೆ ಗಂಡು 
ಹೆಣ್ಣು ಕುದುರಿಸುವ ಹುಚ್ಚು ಹಿಡಿಯುತ್ತದೆ ಅನ್ನುತ್ತಾರೆ. ಇದುವರೆಗೂ ನನಗೆ 
ಅಂಥ ಕಾಯಿಲೆ ಬಂದಿದೆ ಅನ್ನಿಸಿಲ್ಲ . ಆದರೂ ನನ್ನ ಗಮನದಲ್ಲಿ ಒಂದು ಹೆಣ್ಣಿದೆ 
ನೋಡಿ, ಅವಳೂ ಅಪ್ಪನ ಕೈಯಲ್ಲಿ ಸಿಕ್ಕಿ ಬೇಜಾರಾಗಿದಾಳೆ, ನಮ್ಮ ದೂರದ 
ಸಂಬಂಧ...ಪ್ರಿನ್ಸೆಸ್ ಮೇರಿ ಬೋಲೋನ್ .' 

- ಪಿನ್ ವ್ಯಾಸಿಲಿ ಉತ್ತರಿಸಲಿಲ್ಲ. ಉನ್ನತವರ್ಗದವರಿಗೆ ಸಹಜವಾಗಿ ತಟ್ಟನೆ 
ಸಂಬಂಧಗಳು ನೆನಪಿಗೆ ಬಂದು ಅರ್ಥವಾಗುವ ಹಾಗೆ ತನಗೂ ಎಲ್ಲ 
ಹೊಳೆದುಬಿಟ್ಟಿತು ಅನ್ನುವುದನ್ನು , ಅವಳ ಮಾತು ಕೇಳಿಸಿಕೊಂಡಿದ್ದೇನೆ, 
ಪರಿಶೀಲಿಸುತ್ತಿದ್ದೇನೆ ಅನ್ನುವುದನ್ನು ಕೊಂಚವೇ ತಲೆಯಾಡಿಸಿ ಸೂಚಿಸಿದ. 

' ಇಲ್ಲಿ ಕೇಳಿ. ನಿಮಗೆ ಗೊತ್ತಾ? ಈ ಅನತೋಲ್‌ನಿಂದಾಗಿ ನನಗೆ ವರ್ಷಕ್ಕೆ 
ನಲವತ್ತು ಸಾವಿರ ರೂಬೆಲ್ ಖರ್ಚು ಬರುತ್ತಿದೆ. ಮತ್ತೆ...' ತನ್ನ ಮನಸ್ಸಿನಲ್ಲಿ 
ಏಳುತ್ತಿದ್ದ ಬೇಸರದ ಅಲೆಗಳನ್ನು ತಡೆಹಿಡಿಯಲಾರದವನ ಹಾಗೆ ಕೊನೆಗೊಮ್ಮೆ 
ಹೇಳಿದ. ಕೊಂಚ ಹೊತ್ತು ಸುಮ್ಮನಿದ್ದು, “ಅವನು ಹೀಗೆಯೇ ಇದ್ದರೆ ಇನ್ನು ಐದು 
ವರ್ಷಕ್ಕೆ ನನ್ನ ಗತಿ ಏನಾಗಬೇಡ ಹೇಳಿ? ' ಇಷ್ಟು ಹೇಳಿದವನು ಇನ್ನೊಂದು 


ಯುದ್ಧ ಮತ್ತು ಶಾಂತಿ 
ಮಾತು ಸೇರಿಸಿದ: “ ಅಪ್ಪ ಆಗಿರುವ ಸೌಭಾಗ್ಯ ನೋಡಿ....ನೀವು ಹೇಳಿದ ಪ್ರಿನ್ಸೆಸ್ , 
ಆಸ್ತಿ ಪಾಸ್ತಿ ಇದೆಯಾ ಅವಳಿಗೆ ?' 

'ಅವಳ ಅಪ್ಪ ಶ್ರೀಮಂತ, ಜಿಪುಣ . ಹಳ್ಳಿಯಲ್ಲಿದಾನೆ. ಪ್ರಿನ್ಸ್ ಬೋಲೋನ್‌ಸಿ . 
ಹಿಂದಿನ ಚಕ್ರವರ್ತಿಗಳ ಸೈನ್ಯದಲ್ಲಿ ಸೇವೆ ಸಲ್ಲಿಸಿ ರಿಟೈರಾಗಿದಾನೆ. ಅವನ್ನು ಎಲ್ಲರೂ 
ಪರ್ಶಿಯಾದ ರಾಜ ಅಂತ ತಮಾಷೆ ಮಾಡುತಿದ್ದರು. ಬಹಳ ಘಾಟಿ . ಒಂದು 
ಥರಾ ಐಲು. ಮಹಾ ಬೋರು. ಪಾಪ, ಅವನ ಹತ್ತಿರ ಏಗಿ ಏಗಿ ಹುಡುಗಿಗೆ 
ಸಾಕಾಗಿದೆ. ಬೇಸತ್ತು ಹೋಗಿದಾಳೆ. ಅವಳಿಗೆ ಒಬ್ಬ ಅಣ್ಣ ಇದಾನೆ. ಬಹುಶಃ 
ನಿಮಗೂ ಗೊತ್ತಿರಬಹುದು. ಮೊನ್ನೆ ಮೊನ್ನೆ ಲಿಸಿ ಮೈನಿನ್‌ಳನ್ನ ಮದುವೆಯಾದ. 
ಕುತುಝೇವ್ ನ ಏಡ್ ಡಿ ಕ್ಯಾಂಪ್ ಆಗಿದಾನೆ. ಇವತ್ತು ರಾತ್ರಿ ಅವನನ್ನೂ 
ಕರೆದಿದೇನೆ.' 

“ನೋಡಿ ಆನೆಟ್, ಪ್ರಿನ್ಸ್ ತಟಕ್ಕನೆ ಅನ್ನಾ ಪಾವೋಬ್ಬಾಳ ಕೈ ಹಿಡಿದು, 
ಯಾಕೋ ಏನೋ ಕೆಳಕ್ಕೆ ಜಗ್ಗುತ್ತಾ 'ದಯವಿಟ್ಟು ಈ ಸಂಬಂಧ ಕುದುರಿಸಿಬಿಡಿ. 
ಐ ಶಲ್ ಆಲ್ವೇಸ್‌ ಬಿ ಯುವರ್ ಸ್ಟೇಫ್' ಅಂದ. ( ಹಳ್ಳಿಯ ಹಿರಿಯ ನನಗೆ ಪತ್ರ 
ಬರೆಯುವಾಗ ಪ್ಲೇವ್ ಅನ್ನುವ ಮಾತನ್ನು ಸೇಫ್ ಎಂದು ಬರೆಯುತ್ತಾನಲ್ಲಾ 
ಹಾಗೆ.) ' ಹುಡುಗಿ ಶ್ರೀಮಂತಳಾಗಿದ್ದು ಒಳ್ಳೆಯ ಮನೆತನದವಳಾಗಿದ್ದರೆ ಸಾಕು. 
ಇನ್ನೇನೂ ಕೇಳುವುದು ಇಲ್ಲ' ಅಂದ. 

- ಸ್ವಾತಂತ್ರ ವಹಿಸಿ, ಸಲುಗೆತೋರುತ್ತಾ ಜನ್ಮಜಾತವಾಗಿ ಬಂದಿದ್ದ ಘನವಾದ 
ಶೈಲಿಯಲ್ಲಿ ತೀರ ಮಹಾರಾಣಿಯ ಆಪ್ತ ಸಖಿಯ ಕೈಯನ್ನು ಹಿಡಿದು, ಮುತ್ತಿಟ್ಟು, 
ಬೇರೆ ದಿಕ್ಕಿಗೆ ನೋಡುತ್ತಾ, ತಟ್ಟಿ, ಆರಾಮ ಕುರ್ಚಿಯ ಬೆನ್ನಿಗೆ ಒರಗಿದ. 
- “ ಆಯಿತು, ನೋಡೋಣ. ಬೋಲೋನ್‌ಕಿಯ ಮಗನ ಹೆಂಡತಿ, ಲಿಸಿಗೆ 
ಇವತ್ತೇ ಹೇಳಿ ನೋಡುತ್ತೇನೆ. ಸಂಬಂಧ ಆಗಬಹುದು ಎಂದು ಕಾಣುತದೆ. 
ಮುದುಕಿಯರ ಕಸುಬನ್ನು ನಿಮ್ಮ ಮನೆಯಿಂದಲೇ ಕಲಿಯುವುದಕ್ಕೆ ಶುರುಮಾಡುತ್ತೇನೆ.' 


` 


' ' 


, 


ಅನ್ನಾ ಪಾವೋವ್ಯಾಳ ದಿವಾನಖಾನೆಯಲ್ಲಿ ಜನ ನಿಧಾನವಾಗಿ 
ತುಂಬಿಕೊಳ್ಳುತ್ತಿತ್ತು. ಪೀಟರ್ಸ್‌ಬರ್ಗಿನ ಘನವಂತರಲ್ಲಿ ಮುಖ್ಯರಾದವರೆಲ್ಲ ಅಲ್ಲಿದ್ದರು. 
ವಯಸ್ಸು ಬೇರೆ, ಗುಣ ಬೇರೆ, ಸ್ವಭಾವ ಬೇರೆ ಆದರೂ ಅವರೆಲ್ಲರೂ ಹಂಚಿಕೊಂಡಿದ್ದ 
ಸಾಮಾಜಿಕ ಹಿನ್ನೆಲೆ ಮಾತ್ರ ಒಂದೇ , ಪ್ರಿನ್ಸ್ ವ್ಯಾಸಿಲಿಯ ಮಗಳು, ಆ ಚೆಲುವೆ 
ಹೆಲನೆ, ತಂದೆಯನ್ನು ಇಂಗ್ಲೆಂಡ್ ರಾಯಭಾರಿಯ ನಿವಾಸಕ್ಕೆ ಕರಕೊಂಡು ಹೋಗಲು 
ಆಗಷ್ಟೆ ಬಂದಳು . ಬಾಲ್ ಡಾನ್ಸಿಗೆ ತಕ್ಕ ಉಡುಪು ತೊಟ್ಟಿದ್ದಳು, ಮೇಡ್ ಆಫ್ 
ಆನರ್‌- ಮಹಾರಾಣಿಯ ಆಪ್ತ ಸಹಾಯಕಿ- ಅನ್ನುವ ಪದಕ ಕಳೆಯನ್ನು ಹೆಚ್ಚಿಸಿತ್ತು. 
“ಎಳೆಯ ಪ್ರಾಯದ ಮನಸೆಳೆವ ಸುಂದರಿ' ಎಂದು ಪೀಟರ್ಸ್‌ಬರ್ಗಿನಲ್ಲಿ 


೯ 


ಸಂಪುಟ ೧ - ಸಂಚಿಕೆ ಒಂದು 
ಮನೆಮಾತಾಗಿದ್ದ ಪ್ರಿನ್ಸೆಸ್ ಬೋಲೋನ್‌ ಕೂಡ ಅಲ್ಲಿದ್ದಳು. ಕಳೆದ ಮಾಗಿಯಲ್ಲಿ 
ಅವಳ ಮದುವೆಯಾಗಿತ್ತು. ಬಸುರಿಯಾಗಿದ್ದರಿಂದ ದೊಡ್ಡ ಸಮಾರಂಭಗಳಲ್ಲಿ 
ಕಾಣಿಸಿಕೊಳ್ಳದಿದ್ದರೂ ಮನೆಯಮಟ್ಟಿಗೆ ನಡೆಯುವ ಸಂಜೆಯ ಪಾರ್ಟಿಗಳಿಗೆ 
ಈಗಲೂ ಬರುತಿದ್ದಳು. ಪ್ರಿನ್ಸ್ ವ್ಯಾಸಿಲಿಯ ಮಗ ಹಿಪೊಲೈಟ್ ಮಾರ್ಟಿಮರ್‌ನನ 
ಜೊತೆಯಲ್ಲಿ ಬಂದ, ಅವನನ್ನು ಉಳಿದವರಿಗೆ ಪರಿಚಯಮಾಡಿಕೊಟ್ಟ, ಅಬೆ 
ಮೊರಿಯೊ ಮತ್ತು ಇನ್ನೂ ಬಹಳ ಜನ ಬಂದಿದ್ದರು. 

. ಒಬ್ಬೊಬ್ಬ ಹೊಸ ಅತಿಥಿ ಬಂದಾಗಲೂ ಅನ್ನಾ ಪಾವೋವಾ 'ನೀವು 
ಇನ್ನೂ ನಮ್ಮ ಚಿಕ್ಕಮ್ಮನನ್ನು ಮಾತನಾಡಿಸಿಲ್ಲವೆ' ಎಂದೋ 'ನಮ್ಮ ಚಿಕ್ಕಮ್ಮ ನಿಮಗೆ' 
ಗೊತ್ತಿಲ್ಲ ಅಲ್ಲವೇ ?' ಎಂದೋ ಬರಮಾಡಿಕೊಂಡು ಅವರನ್ನು ತಲೆಗೆ ದೊಡ್ಡ 
ರಿಬ್ಬನ್ನು ಕಟ್ಟಿಕೊಂಡಿದ್ದ ಹಿಡಿಮೈಯ ಮುದುಕಿಯೊಬ್ಬಳ ಬಳಿಗೆ ಘನ ಗಂಭೀರವಾಗಿ 
ಕರೆದುಕೊಂಡು ಹೋಗುತ್ತಿದ್ದಳು. ಅತಿಥಿಗಳು ಬರುತ್ತಿದ್ದಾರೆ ಅನ್ನುವ ಸೂಚನೆ 
ಸಿಕ್ಕೊಡನೆ ಮುದುಕಿ ತನ್ನ ಕೋಣೆಯಿಂದ ದಿವಾನಖಾನೆಗೆ ತೇಲಿಬಂದಿದ್ದಳು. 
ಅನ್ನಾ ಪಾವೋಬ್ಬಾ ಅತಿಥಿಯ ಹೆಸರು ಹೇಳಿ, ಅತಿಥಿಯ ಮುಖದಿಂದ ಚಿಕ್ಕಮ್ಮನ 
ಮುಖದತ್ತ ನಿಧಾನವಾಗಿ ಕಣ್ಣು ಹೊರಳಿಸಿ, ಆಮೇಲೆ ಹೊರಟುಬಿಡುತ್ತಿದ್ದಳು. 

ಯಾರಿಗೂ ಗೊತ್ತಿಲ್ಲದ, ಯಾರಿಗೂ ಬೇಡವಾದ, ಯಾರಿಗೂ ಆಸಕ್ತಿ 
ಇರದ ಈ ಚಿಕ್ಕಮ್ಮನನ್ನು ಮಾತನಾಡಿಸುವ ಕಟ್ಟಳೆಯನ್ನು ಎಲ್ಲರೂ ಅನುಭವಿಸಿಯೇ 
ತೀರಬೇಕಾಗಿತ್ತು. ಅತಿಥಿಗಳ ಆಚರಣೆಯನ್ನು ಅನ್ನಾ ಪಾವೋವಾ ವಿಷಾದದಿಂದ, 
ಗಂಭೀರ ಅನುಕಂಪದಿಂದ, ಗಮನಿಸುತ್ತಿದ್ದಳು. ಮೌನ ಸಮ್ಮತಿಯ ಚಿತ್ರ ಅದು. 
“ ನನ್ನ ಚಿಕ್ಕಮ್ಮ ' ಅನ್ನಿಸಿಕೊಂಡ ಆ ಮುದುಕಿ ಹೊಸದಾಗಿ ಬಂದ ಒಬ್ಬೊಬ್ಬರ 
ಹತ್ತಿರವೂ ಒಂದೇ ದಾಟಿಯಲ್ಲಿ ಅವರ ಆರೋಗ್ಯ, ತನ್ನ ಆರೋಗ್ಯ, ಮಹಾರಾಣಿಯ 
ಆರೋಗ್ಯದ ಬಗ್ಗೆ ಕೇಳುತ್ತಾ, 'ದೇವರ ದಯ , ಸದ್ಯ ಸುಧಾರಿಸಿದೆ' ಅನ್ನುತ್ತಿದ್ದಳು. 
ಆತುರವನ್ನು ತೋರಿಸದಷ್ಟು ಸಜ್ಜನಿಕೆ ಬಂದವರಿಗೆ ಇರುತ್ತಿತ್ತು, ಅವಳನ್ನು ಮತಾಡಿಸುವ 
ಕಠೋರ ವ್ರತ ತೀರಿದೊಡನೆ ಸದ್ಯ ಪಾರಾದೆವು ಎಂಬಂತೆ ಸರನೆ ಜಾರಿಕೊಂಡು 
ಮತ್ತೆ ಅವಳ ಹತ್ತಿರವೂ ಸುಳಿಯುತ್ತಿರಲಿಲ್ಲ. .. 

ಎಳೆಯ ಪ್ರಾಯದ ಪ್ರಿನ್ಸೆಸ್ ಬೋಲೋನ್‌ ಅರೆ ಮುಗಿದ ಕೈಕೆಲಸವನ್ನು 
ಚಿನ್ನದ ಕಸೂತಿಯ ವೆಲ್ವೆಟ್ ಚೀಲದಲ್ಲಿಟ್ಟುಕೊಂಡು ಬಂದಿದ್ದಳು. ಕಂಡೂ ಕಾಣದ 
ನವಿರು ಕೂದಲಿದ್ದ ಅವಳ ಮುದ್ದಾದ ಪುಟ್ಟ ತುಟಿ ಹಲ್ಲುಗಳನ್ನು ಪೂರ್ತಿ 
ಮುಚ್ಚದಿದ್ದರೂ ಕೆಳತುಟಿಯಿಂದ ಮೇಲಿದ್ದಾಗ ಒಂದು ಚೆಂದವಾಗಿ, ಕೆಳತುಟಿಯನ್ನು 
ಮುಟ್ಟಲು ಕೆಳಗಿಳಿಯುವಾಗ ಮತ್ತೂ ಚೆಂದವಾಗಿ ಕಾಣುತ್ತಿತ್ತು. ಪರಮ ಸುಂದರಿಯರ 
ಸಣ್ಣ ಪುಟ್ಟ ದೋಷವೂ ವಿಶೇಷ ಸೌಂದರ್ಯವಾಗಿ ಮೂಡುವ ಹಾಗೆ ಇವಳ 
ಮಟ್ಟಿಗೆ ಆ ಪುಟ್ಟ ತುಟಿ ಮತ್ತು ಅರೆ ತೆರೆದಂಥ ಬಾಯಿ , ಇಷ್ಟೊಂದು ಲವಲವಿಕೆ, 


ಯುದ್ಧ ಮತ್ತು ಶಾಂತಿ 
ಆರೋಗ್ಯಗಳಿಂದ ತುಳುಕುತ್ತಾ ಬಸುರಾಗಿದ್ದೂ ಲಘುವಾಗಿರುವ ಹುಡುಗಿಯನ್ನು 
ಕಂಡು ಎಲ್ಲರೂ ಸಂತೋಷಪಡುತ್ತಿದ್ದರು. ಅವಳೊಂದಿಗೆ ಒಂದೆರಡು ನಿಮಿಷವಿದ್ದು 
ಅವಳೊಡನೆ ಒಂದೆರಡು ಮಾತನಾಡಿದರೆ ಮುದುಕರು, ಬೇಸತ್ತು ಮಂಕಾಗಿರುವ 
ಯುವಕರು ಕೂಡ ತಾವೂ ಅವಳ ಹಾಗೆ ಆಗುತ್ತಿದ್ದೇವೆ ಅಂದುಕೊಳ್ಳುತ್ತಿದ್ದರು. 
ಅವಳೊಡನೆ ಯಾರೇ ಮಾತಾಡಲಿ, ಅವಳ ಒಂದೊಂದು ಮಾತೂ ತೋರುತ್ತಿದ್ದ 
ಆ ಹೊಳೆಯೊಳೆಯುವ ಪುಟ್ಟ ನಗು, ನಗುವಿನೊಂದಿಗೆ ಉಜ್ವಲವಾಗಿ ಥಳಥಳಿಸುವ 
ಹಲ್ಲಿನ ಬಿಳುಪು ಕಾಣುತ್ತಾ ತಮ್ಮ ಮನಸ್ಸಿನ ತುಂಬ ಉಲ್ಲಾಸ ತುಂಬಿಕೊಂಡು 
ಹೋಗುತ್ತಿದ್ದರು. ಪ್ರತಿಯೊಬ್ಬರಿಗೂ ಹಾಗಾಗುತ್ತಿತ್ತು. 

- ಪುಟ್ಟ ರಾಜಕುಮಾರಿ ಕೊಂಚವೇ ಓಲಾಡುತ್ತಾ ಪುಟ್ಟ ಪುಟ್ಟ ಚುರುಕು ಹೆಜ್ಜೆ 
ಹಾಕುತ್ತಾ ಚಿಕ್ಕ ವೆಲ್ವೆಟ್ ಚೀಲ ಹಿಡಿದುಕೊಂಡು ಟೇಬಲ್ಲನ್ನು ಬಳಸಿಕೊಂಡು 
ಹೋಗಿ, ಬೆಳ್ಳಿಯ ಸಮೋವರ್ ಪಕ್ಕದಲ್ಲಿದ್ದ ಸೋಫಾದ ಮೇಲೆ, ಉಡುಪಿನ 
ನಿರಿಗೆಗಳನ್ನು ಖುಷಿಯಾಗಿ ನೇವರಿಸಿಕೊಂಡು , ಆರಾಮವಾಗಿ ಕುಳಿತಳು. ಅವಳು 
ಮಾಡುವುದೆಲ್ಲ ತನಗಾಗಿ, ತನ್ನ ಸುತ್ತಲಿನವರಿಗಾಗಿ ಮಾಡಿದ ಒಸಗೆಯಂತಿತ್ತು. 
- “ನನ್ನ ಕಸೂತಿ ತಂದಿದೀನಿ' ಫ್ರೆಂಚಿನಲ್ಲಿ ಹೇಳುತ್ತಾ ವೆಲ್ವೆಟ್ಟಿನ ಚೀಲವನ್ನು 
ತೆರೆಯುತ್ತಾ ಅಲ್ಲಿದ್ದವರಿಗೆಲ್ಲ ಹೇಳಿದಳು. 'ಹೀಗೆ ಮೋಸ ಮಾಡಬಾರದು ಆನೆಟ್ 
ಆಂಟಿ. ಚಿಕ್ಕ ಪಾರ್ಟಿ ಎಂದು ಬರೆದಿದ್ದಿರಿ. ಈಗ ನನ್ನ ಅವತಾರ ನೋಡಿ' 
ಅನ್ನುತ್ತಾ ತೆಳ್ಳನೆಯ ನಡು, ಲೇಸು ಹಾಕಿದ ಗೇ ಕಲರಿನ ಸುಂದರವಾದ ಉಡುಪು, 
ಎದೆಯ ಕೆಳಗೆ ಅಗಲವಾದ ರಿಬ್ಬನ್ನು ಕಾಣುವ ಹಾಗೆತೋಳು ಅಗಲ ಮಾಡಿದಳು. 
- ' ಪರವಾಗಿಲ್ಲ ಬಿಡು ಲಿಸೀ , ಹೇಗೇ ಇದ್ದರೂ ನೀನು ಎಲ್ಲರಿಗಿಂತಲೂ 
ಚೆಂದ ಕಾಣುತೀ ' ಅಂದಳು ಅನ್ನಾ ಪಾವೋನ್ಮಾ. 

“ ನನ್ನ ಗಂಡ ನನ್ನ ತೊರೆದು ಹೋಗುತ್ತಾ ಇರುವುದು ನಿಮಗೆ ಗೊತ್ತಾ?? 
ಪಿನ್ಸೆಸ್ ಜನರಲ್ ಒಬ್ಬನತ್ತ ತಿರುಗಿ ಫ್ರೆಂಚಿನಲ್ಲಿ ಮತ್ತೆ ಅದೇ ಥರದ ದನಿಯಲ್ಲಿ 
ಕೇಳಿದಳು. 'ಕೊಲ್ಲಿಸಿಕೊಳ್ಳುವುದಕ್ಕೆ ಹೊರಟಿದ್ದಾರೆ. ಈ ಹಾಳು ಯುದ್ದ ಯಾಕೆ 
ಹೇಳಿ?' ಎಂದು ಪ್ರಿನ್ ವ್ಯಾಸಿಲಿಯನ್ನು ಕೇಳಿದಳು. ಅವನು ಉತ್ತರಿಸುವ ಮೊದಲೇ 
ಅವನ ಮಗಳು ಆ ಚೆಲುವೆ ಹೆಲನಳತ್ತ ಹೋದಳು. 
. ಎಂಥಾ ಅದ್ಭುತ ಜೀವ ಅಲ್ಲವಾ ಈ ಪುಟ್ಟ ರಾಜಕುಮಾರಿ!” ಅನ್ನಾ 
ಪಾವೋವಾಳ ಕಡೆಗೆ ನೋಡುತ್ತಾ ಪ್ರಿನ್ಸ್ ವ್ಯಾಸಿಲಿ ಹೇಳಿದ. 

ಪುಟ್ಟ ರಾಜಕುಮಾರಿ ಬಂದ ಸ್ವಲ್ಪ ಹೊತ್ತಿಗೇ ದೊಡ್ಡ ಗಾತ್ರದ ಮೈ 
ಧಾರಾಳವಾಗಿ ಬೆಳೆಸಿಕೊಂಡಿದ್ದ ಯುವಕ ಒಳ ಬಂದ . ತಲೆಗೂದಲು ಚಿಕ್ಕದಾಗಿ 
ಕ್ರಾಪುಮಾಡಿಕೊಂಡಿದ್ದ, ಕನ್ನಡಕ ಹಾಕಿಕೊಂಡಿದ್ದ, ಆ ಕಾಲದ ಫ್ಯಾಶನ್ನಿನ ಕೊನೆಯ 
ಮಾತು ಅನ್ನುವ ಹಾಗೆ ಇದ್ದ ತೆಳು ಬಣ್ಣದ, ಉಬ್ಬಿದ ನಿರಿಗೆಗಳ ಬೀಚಸ್ 


ಸಂಪುಟ ೧ - ಸಂಚಿಕೆ ಒಂದು 
ತೊಟ್ಟಿದ್ದ , ಅಲಂಕಾರದ ನಿರಿಗೆಗಳಿದ್ದ ಕಂದು ಬಣ್ಣದ ಚರ್ಮದ ಕೋಟು 
ಹಾಕಿಕೊಂಡಿದ್ದ. ಈ ದಡೂತಿ ಯುವಕ ಮಹಾರಾಣಿ ಕ್ಯಾಥರೀನ್‌ಳ ಕಾಲದ ಗಣ್ಯ 
ವ್ಯಕ್ತಿಯಾಗಿದ್ದು , ಇದೀಗ ಮಾಸ್ಕೋದಲ್ಲಿ ಸಾಯುತ್ತಾ ಮಲಗಿದ್ದ ಕೌಂಟ್ 
ಬೆಝುಕೋವ್‌ನ ಅಕ್ರಮ ಸಂತಾನ. ವಿದೇಶದಲ್ಲಿ ಓದುತ್ತಿದ್ದು ಇದೇ ಈಗ ವಾಪಸ್ಸು 
ಬಂದಿದ್ದರಿಂದ ಇನ್ನೂ ಯಾವ ಕೆಲಸಕ್ಕೂ ಸೇರಿರಲಿಲ್ಲ. ಘನವಂತರ ಪಾರ್ಟಿಯಲ್ಲಿ 
ಅವನು ಕಾಣಿಸಿಕೊಂಡದ್ದು ಇದೇ ಮೊದಲು. ಅನ್ನಾ ಪಾವೋವಾ ತನ್ನ 
ದಿವಾನಖಾನೆಯ ಶ್ರೇಣಿಗಳಲ್ಲಿ ಅತೀ ಕೆಳಗಿನವರಿಗೆ ಮೀಸಲಾಗಿಟ್ಟಿದ್ದ ರೀತಿಯಲ್ಲಿ 
ಗೋಣು ಹಾಕಿ ಅವನನ್ನು ಬರಮಾಡಿಕೊಂಡಳು. ಈ ಹೊಸಬನನ್ನು ಹೀಗೆ 
ಅತ್ಯಂತ ಕೀಳು ರೀತಿಯಲ್ಲಿ ಸ್ವಾಗತಿಸುತ್ತಿರುವಾಗಲೇ ಅವಳ ಮುಖದ ಭಾವ 
ಬದಲಾಯಿತು. ದಿವಾನಖಾನೆಗೆ ಸಲ್ಲದ, ದೊಡ್ಡ ಗಾತ್ರದ ಅಸಹ್ಯವಾದ ವಸ್ತುವನ್ನು 
ಕಂಡಳೋ ಅನ್ನುವ ಹಾಗೆ ಆವಳ ನೋಟದಲ್ಲಿ ಕಸಿವಿಸಿ, ದಿಗಿಲು ಕಾಣಿಸಿತು. 
ಅಲ್ಲಿ ಸೇರಿದ್ದ ಎಲ್ಲರಿಗಿಂತಲೂ ದೇಹದ ಗಾತ್ರದಲ್ಲಿ ಪಿಯರಿ ಕೊಂಚವೇ 
ದಡೂತಿಯಾಗಿದ್ದ . ಅವಳ ಆತಂಕಕ್ಕೆ ನಿಜವಾಗಿ ಬೇರೆಯದೇ ಕಾರಣವಿದ್ದಿರಬೇಕು. 
ವಿವೇಕ, ಸಂಕೋಚ, ಎಲ್ಲವನ್ನೂ ಗಮನಿಸುತ್ತಾ ಸದಾ ಸಹಜವಾಗಿರುವ 
ಸ್ವಭಾವದಿಂದಲೇ ಅವನು ಅಲ್ಲಿದ್ದ ಎಲ್ಲರಿಗಿಂತ ವಿಶೇಷವಾಗಿದ್ದ. ಅದಕ್ಕೇ ಅನ್ನಾ 
ಪಾವೋದ್ಮಾಳ ಮನಸ್ಸಿನಲ್ಲಿ ಅಳುಕು ಮೂಡಿತ್ತು. 

“ಕಾಯಿಲೆ ಬಿದ್ದಿರುವ ಬಡಪಾಯಿ ಹೆಂಗಸನ್ನು ನೋಡಲು ಬಂದದ್ದಕ್ಕೆ 
ಬಹಳ ಥ್ಯಾಂಕ್ಸ್ ಮಾನ್ಸಿಯೂರ್ಪಿಯರೆ' ಅನ್ನುತ್ತಾ ಪಿಯರೆಯನ್ನು ಚಿಕ್ಕಮ್ಮನ 
ಹತ್ತಿರ ಕರೆದುಕೊಂಡು ಹೋಗುವಾಗ ಆತಂಕಪಡುತ್ತಾ ಚಿಕ್ಕಮ್ಮನ ಕಡೆಗೆ ಒಮ್ಮೆ 
ನೋಡಿದಳು. ಪಿಯರೆ ಅಸ್ಪಷ್ಟವಾಗಿ ಗೊಣಗುತ್ತಾ ಏನೋ ಹುಡುಕುವವನ ಹಾಗೆ 
ಸುತ್ತಲೂ ನೋಡುತ್ತಲೇ ಇದ್ದ. ಪುಟ್ಟ ರಾಜಕುಮಾರಿಯನ್ನು ಕಂಡು ಸಂತೋಷದಿಂದ 
ಮುಖ ಅರಳಿ, ತೀರ ಹತ್ತಿರದ ಸ್ನೇಹಿತೆ ಅನ್ನುವಹಾಗೆ ಅವಳಿಗೆ ವಂದಿಸಿ ಆಮೇಲೆ 
ಚಿಕ್ಕಮ್ಮನತ್ತ ಹೋದ. . 

ಮುದುಕಿ ಚಿಕ್ಕಮ್ಮ ಅವನ ಆರೋಗ್ಯ, ತನ್ನ ಅರೋಗ್ಯ, ಚಕ್ರವರ್ತಿಯ 
ಆರೋಗ್ಯದ ಬಗ್ಗೆ ಹೇಳುವ ಮಾತುಗಳನ್ನು ಪೂರಾ ಕೇಳಿಸಿಕೊಳ್ಳದೆ ಪಿಯರೆ 
ಹಾಗೇ ಹೊರಟುಬಿಟ್ಟಾಗ ಅನ್ನಾ ಪಾವೋಟ್ನಾಳ ಆತಂಕ ನಿಜವಾಗಿತ್ತು. ಹೆದರಿದ 
ಅನ್ನಾ ಪಾವೋವಾ “ ನಿಮಗೆ ಅಬೆ ಮೊರಿಯೋ ಪರಿಚಯ ಇದೆಯೇ ? ಅವರನ್ನು 
ನೋಡಬೇಕು ನೀವು...' ಅನ್ನುತ್ತಾ ಅವನನ್ನು ತಡೆದಳು. .. 

'ಗೊತ್ತು. ಅವರ ವಿಚಾರ ಕೇಳಿದೇನೆ. ಶಾಶ್ವತವಾದ ಶಾಂತಿ ಸಾಧಿಸುವುದಕ್ಕೆ 
ಅವರು ರೂಪಿಸಿರುವ ಯೋಜನೆ ಚೆನ್ನಾಗಿದೆ, ನಡೆಸುವುದಕ್ಕೆ ಮಾತ್ರ ಸಾಧ್ಯವೇ 
ಇಲ್ಲ.' 


ಯುದ್ಧ ಮತ್ತು ಶಾಂತಿ 
- ಆತಿಥೇಯಳಾಗಿ ತನ್ನ ಕರ್ತವ್ಯ ಪಾಲಿಸಲು ಹೊರಡುವ ಮೊದಲು 
ಏನಾದರೂ ಹೇಳಬೇಕಲ್ಲಾ ಎಂದು ' ಹಾಗನ್ನುತ್ತೀರಾ? ” ಅಂದಳು ಅನ್ನಾ ಪಾವೋವಾ. 
ಪಿಯರಿ ಈಗ ಇನ್ನೊಂದು ರೀತಿಯಲ್ಲಿ ಶಿಷ್ಟಾಚಾರವನ್ನು ಭಂಗ ಮಾಡಿದ. ಸ್ವಲ್ಪ 
ಹೊತ್ತಿನ ಮೊದಲು ತನ್ನೊಡನೆ ಮಾತಾಡುತ್ತಿದ್ದ ಮಹಿಳೆಯ ಮಾತು ಮುಗಿಯುವ 
ಮೊದಲೇ ಅಲ್ಲಿಂದ ಹೊರಟಿದ್ದ, ಈಗ ಮಾತು ಕೇಳಿಸಿಕೊಳ್ಳಲು ಇಷ್ಟವಿಲ್ಲದ 
ಮಹಿಳೆಯನ್ನು ಬಲವಂತವಾಗಿ ನಿಲ್ಲಿಸಿಕೊಂಡು ಅಬೆ ರೂಪಿಸಿರುವ ಯೋಜನೆಯ 
ದೌರ್ಬಲ್ಯಗಳನ್ನು ವಿವರಿಸಲು ತೊಡಗಿದ. ಕಾಲಗಲಿಸಿ ನಿಂತು , ತಲೆ ಬಾಗಿಸಿ 
ನೋಡುತ್ತಾ ಅಬೆಯ ಯೋಜನೆ ಯಾಕೆ ಸಮರ್ಪಕವಲ್ಲ ಎಂದು ಅನ್ನಾ 
ಪಾವೋಬ್ಬಾಳಿಗೆ ವಿವರಿಸಲು ಶುರುಮಾಡಿದ. 

' ಅದರ ಬಗ್ಗೆ ಆಮೇಲೆ ಮಾತಾಡೋಣ, ಆಯಿತೇ ?' ಮುಗುಳ್ನಗುತ್ತಾ 
ಅನ್ನಾ ಪಾವೋವಾ ಹೇಳಿದಳು . . 
* ಪಾರ್ಟಿಯಲ್ಲಿ ಹೇಗೆ ವರ್ತಿಸಬೇಕೆಂದು ಗೊತ್ತಿಲ್ಲದ ಯುವಕನಿಂದ 
ಕಳಚಿಕೊಂಡು ಬೇರೆಯ ಕೆಲಸ ನೋಡಲು ಹೊರಟಳು. ದಿವಾನಖಾನೆಯಲ್ಲಿ 
ಸೇರಿದ್ದ ಜನರ ನಡುವೆ ಅಡ್ಡಾಡುತ್ತಾ, ಎಲ್ಲರನ್ನೂ ಗಮನಿಸುತ್ತಾ, ಎಲ್ಲರ ಮಾತೂ 
ಗಮನವಿಟ್ಟುಕೇಳುತ್ತಾ, ಯಾವುದಾದರೂ ಗುಂಪಿನಲ್ಲಿ ಮಾತು ನಿಲ್ಲುತ್ತಿದೆ ಅನ್ನುವ 
ಸೂಚನೆ ಸಿಕ್ಕೊಡನೆ ಅಲ್ಲಿ ಬೆರೆತು ಮಾತಿಗೆ ಚುರುಕು ಹುಟ್ಟಿಸುತ್ತಾ ಓಡಾಡಿದಳು. 
ನೂಲು ಸುತ್ತುವ ಕಾರ್ಖಾನೆಯ ಫೋರ್‌ಮ್ಯಾನು ಕಾರ್ಮಿಕರನ್ನೆಲ್ಲ ಕೆಲಸಕ್ಕೆ ಹಚ್ಚಿ, 
ಯಾವ ರಾಟೆ ನಿಂತಿದೆ, ಯಾವುದು ಕಿರುಗುಡುತ್ತಿದೆ, ಯಾವುದು ಮಾಮೂಲಿಗಿಂತ 
ಹೆಚ್ಚು ಸದ್ದು ಮಾಡುತ್ತಿದೆ ಎಂದು ಪರೀಕ್ಷಿಸಿಕೊಂಡು ಕಾರ್ಖಾನೆಯೊಳಗೆ ಅಡ್ಡಾಡುತ್ತಾ, 
ಯಂತ್ರಗಳು ಸರಿಯಾಗಿ ಸುತ್ತುವ ಹಾಗೆ ಸಣ್ಣ ಪುಟ್ಟ ಉಸ್ತುವಾರಿಮಾಡಿಕೊಂಡು 
ಓಡಾಡುವಂತೆಯೇ ಅನ್ನಾ ಪಾವೋವಾ ದಿವಾನಖಾನೆಯ ಜನರ ನಡುವೆ 
ಅಡ್ಡಾಡುತ್ತಾ ಮೌನವಾಗಿರುವ ಗುಂಪಿನಲ್ಲಿ ಮಾತು ಹುಟ್ಟಿಸಿ , ಗದ್ದಲ ಹೆಚ್ಚಾಗಿರುವ 
ಗುಂಪಿನಲ್ಲಿ ಒಂದಿಷ್ಟು ಶಾಂತಿ ತಂದು, ಗಂಭೀರವಾಗುತ್ತಿರುವ ಯಾವುದೋ 
ಚರ್ಚೆಯನ್ನು ಲಘುವಾದ ಧಾಟಿಗೆ ಮರಳಿಸಿ , ಪಾರ್ಟಿಯ ಸಂಭಾಷಣಾ ಯಂತ್ರ 
ಸ್ಥಿರವಾಗಿ, ಸೂಕ್ತವಾಗಿ , ನಿರಂತರವಾಗಿ ಚಲಿಸುತ್ತಿರುವಂತೆ ನೋಡಿಕೊಂಡಳು. 
ಆದರೆ ಈ ಎಲ್ಲ ಜವಾಬ್ದಾರಿಗಳ ನಡುವೆಯೂ ಪಿಯರಿಯ ಬಗ್ಗೆ ಅವಳಿಗೆ 
ಆತಂಕವಿದ್ದೇ ಇತ್ತು. ಮಾರ್ಟಿಮರ್ ಇದ್ದ ಗುಂಪಿನತ್ತ ಪಿಯರಿ ಹೋದಾಗ ಅಲ್ಲಿ 
ಯಾವ ಮಾತು ನಡೆಯುತ್ತಿದೆ ಎಂದು, ಅಬೆ ಇದ್ದ ಗುಂಪಿನತ್ತ ಸಾಗಿದಾಗ ಅಲ್ಲಿ 
ಪಿಯರೆ ಏನು ಹೇಳುತ್ತಿದ್ದಾನೆ ಎಂದು ಗಮನಿಸುತ್ತಲೇ ಇದ್ದಳು. 

- ಪಿಯರೆ ಓದಿದ್ದಲ್ಲ ವಿದೇಶದಲ್ಲಿ, ರಶಿಯಾಕ್ಕೆ ಬಂದಮೇಲೆ ಅವನು ಮೊದಲು 
ಬಂದದ್ದೇ ಅನ್ನಾ ಪಾವೋದ್ವಾಳ ಪಾರ್ಟಿಗೆ, ಪೀಟರ್ಸ್‌ಬರ್ಗಿನ ಪ್ರಖರವಾದ 


ಸಂಪುಟ ೧ - ಸಂಚಿಕೆ ಒಂದು 


೧೩ 


ಬುದ್ದಿಜೀವಿಗಳೆಲ್ಲ ಅಲ್ಲಿ ನೆರೆದಿದ್ದಾರೆ ಎಂದು ಅವನಿಗೆ ಗೊತ್ತಿತ್ತು. ಆಟಿಗೆಯ 
ಅಂಗಡಿಯಲ್ಲಿ ಯಾವುದನ್ನು ಕೈಗೆತ್ತಿಕೊಳ್ಳಲಿ ಎಂದು ತಿಳಿಯದೆ ದಿಕ್ಕು ತಪ್ಪಿದ 
ಮಗುವಿನ ಹಾಗೆಯೇ ಕೇಳಿಸಿಕೊಳ್ಳಬೇಕಾದ ಚತುರ ಸಂಭಾಷಣೆ ಎಲ್ಲಿ ತಪ್ಪಿ 
ಹೋಗುತ್ತದೋ ಎಂಬ ಆತಂಕದಲ್ಲಿ ಅಡ್ಡಾಡುತ್ತಿದ್ದ. ಅಲ್ಲಿದ್ದ ಜನರ ಮುಖದ 
ಮೇಲಿದ್ದ ಸುಸಂಸ್ಕೃತ ಆತ್ಮವಿಶ್ವಾಸದ ಭಾವವನ್ನು ಕಂಡು ಗಹನವಾದ ಮಾತು 
ಏನೋ ಕೇಳೀತು ಎಂದು ನಿರೀಕ್ಷಿಸುತ್ತಾ ಇದ್ದ. ಕೊನೆಗೊಮ್ಮೆ ಮೊರಿಯೋ ಇದ್ದ 
ಗುಂಪಿಗೆ ಬಂದ. ಅಲ್ಲಿ ನಡೆಯುತ್ತಿದ್ದ ಸಂಭಾಷಣೆ ಸ್ವಾರಸ್ಯವಾಗಿತ್ತು. ಆ ಮಾತು 
ಕೇಳಿಸಿಕೊಳ್ಳುತ್ತಾ, ತನ್ನ ಅಭಿಪ್ರಾಯ ತಿಳಿಸುವುದಕ್ಕೆ ಅವಕಾಶ ದೊರೆತೀತೆ ಎಂದು 
ಯುವಕರಿಗೆ ಸಹಜವಾದ ಆಸೆಯಿಂದ ಕಾಯುತ್ತ ನಿಂತ. 


ಅನ್ನಾ ಪಾವೋಟ್ನಾಳ ಪಾರ್ಟಿಗೆ ಕಳೆ ಏರಿತ್ತು. ರಾಟೆಗಳು ಎಲ್ಲೆಲ್ಲೂ ಒಂದೇ 
ಸಮ ಸದ್ದು ಮಾಡುತ್ತಿದ್ದವು. ಚಿಕ್ಕಮ್ಮ ಮತ್ತೆ ಆವಳ ಜೊತೆಗಿದ್ದ ಒಬ್ಬಳೇ ಸಂಗಾತಿ 
ಬವಣೆಗಳಿಂದ ನವೆದುಹೋದ ಮುಖದ, ಈ ಉಜ್ವಲವಾದ ಘನವಂತರ ಸಮಾಜಕ್ಕೆ 
ಸಲ್ಲದವಳು ಅನ್ನುವ ಹಾಗಿದ್ದ ಹಿರಿಯಾಕೆಯನ್ನು ಬಿಟ್ಟರೆ ಉಳಿದವರೆಲ್ಲ ಮೂರು 
ಗುಂಪುಗಳಾಗಿದ್ದರು. ಬಹಳ ಮಟ್ಟಿಗೆ ಗಂಡಸರೇ ಇದ್ದ ಒಂದು ಗುಂಪು ಅಬೆಯ 
ಸುತ್ತಲೂ ಸೇರಿತ್ತು. ಯುವಕರೇ ಹೆಚ್ಚಾಗಿದ್ದ ಎರಡನೆಯ ಗುಂಪಿನ ಮೇಲೆ ಆ 
ಚೆಲುವೆ, ಪ್ರಿನ್ಸ್ ವ್ಯಾಸಿಲಿಯ ಮಗಳು ಹೆಲನೆ ಮತ್ತು ನಾಚಿ ಮುಖ ಕೆಂಪಾಗಿ, 
ವಯಸ್ಸಿಗೆ ಮೀರಿದಷ್ಟು ತುಂಬಿಕೊಂಡು ಮುದ್ದು ಮುದ್ದಾಗಿ ಇದ್ದ ಪುಟ್ಟ ರಾಜಕುಮಾರಿ 
ಪ್ರಿನ್ಸೆಸ್ ಬೋಲೋನ್ಯ ರ ಆಧಿಪತ್ಯವಿತ್ತು. ಮೂರನೆಯ ಗುಂಪು ಮಾರ್ಟಿಮರ್ 
ಮತ್ತೆ ಅನ್ನಾ ಪಾವೋದ್ಮಾಳ ಸುತ್ತಲೂ ಸೇರಿತ್ತು. 
* ವೈಕೌಂಟ್ ಸೌಮ್ಯರೂಪಿನ, ನಗುಮುಖದ ನಯ ನಾಜೂಕು ವರ್ತನೆಯ 
ಯುವಕ. ತನ್ನ ದೊಡ್ಡಸ್ತಿಕೆಯ ಅರಿವಿದ್ದರೂ ಸೌಜನ್ಯದ ತಳಿಯವನಾದ್ದರಿಂದ 
ಜೊತೆಗೆ ಯಾರಿದ್ದರೂ ಅವರಿಗಿಷ್ಟವಾಗುವಂತೆ ಇರುವುದು ಗೊತ್ತಿತ್ತು. ಅನಾ 
ಪಾವೋವಾ ಅವನನ್ನು ಪ್ರದರ್ಶನಕ್ಕೆ ಇಟ್ಟಿದ್ದಳು . ಜಾಣ ಬಾಣಸಿಗನೊಬ್ಬ ದನದ 
ಮಾಂಸವನ್ನು ವಿಶೇಷ ರುಚಿಯ ಭಕ್ಷ ವೆಂಬಂತೆ ಅತಿಥಿಗಳಿಗೆ ಬಡಿಸುವ ಹಾಗೆಯೇ 
ಅವನನ್ನು ಬಂದವರ ಮುಂದೆ ತಂದಿರಿಸಿದ್ದಳು . ಕೊಳಕು ಆಡುಗೆಯ ಮನೆಯಲ್ಲಿ 
ತಯಾರು ಮಾಡುವಾಗ ಕಂಡಿದ್ದಿದ್ದರೆ ಯಾರಿಗೂ ತಿನ್ನುವ ಮನಸ್ಸೇ ಆಗದಂಥ 
ಮಾಂಸದ ಅಡುಗೆಯಂತೆ ಇದ್ದ ವೈಕೌಂಟ್‌ನನ್ನು ಮೊದಲು, ಆನಂತರ ಅಬೆಯನ್ನು 
ಬಡಿಸಿದಳು. ಮಾರ್ಟಿಮರ್‌ನ ಜೊತೆಗಿದ್ದ ಗುಂಪು ಡ್ಯೂಕ್ ಎನ್‌ಹೈನ್‌ನ ಕೊಲೆಯನ್ನು 
ಕುರಿತು ಚರ್ಚೆ ಶುರುಮಾಡಿತ್ತು . ಡ್ಯೂಕ್ ಎನ್‌ಹೈನ್ ತನ್ನ ಔದಾರ್ಯದ 
ಕಾರಣದಿಂದಲೇ ನಾಶವಾದ, ಅವನನ್ನು ದ್ವೇಷಿಸುವುದಕ್ಕೆ ಬೋನಾಪಾರ್ಟೆಗೆ 


೧೪ 

ಯುದ್ಧ ಮತ್ತು ಶಾಂತಿ 
ವಿಶೇಷವಾದ ಕಾರಣಗಳಿದ್ದವು ಎಂದು ಮಾರ್ಟಿಮರ್ ಹೇಳುತ್ತಿದ್ದ . 
- 'ಆಹಾ, ಹೌದಾ! ಆ ಕುರಿತು ಸ್ವಲ್ಪ ಹೇಳೋಣವಾಗಲಿ , ವೈಕೌಂಟ್ ' ಅಂದಳು 
ಅನ್ನಾ ಪಾವೋವಾ, ತಾನು ಆಡಿದ ಹಳೆಯ ಕಾಲದ ಪೊಚ್ ವಾಕ್ಯದಲ್ಲಿ ಹದಿನೈದನೆಯ 
ಲೂಯಿಯ ಶೈಲಿಯ ಸ್ಪರ್ಶ ಒಂದಿಷ್ಟಾದರೂ ಬಂದಿದೆ ಎಂದು ಸಂತೋಷಪಟ್ಟಳು. 

ವೈಕೌಂಟ್ ಸೌಜನ್ಯದಿಂದ ತಲೆ ಬಾಗಿಸಿ , ಒಪ್ಪಿಗೆಯ ಮುಗುಲ್ನಗು ಬೀರಿದ. 
ಕಥೆಯನ್ನು ಕೇಳುವುದಕ್ಕೆ ಬನ್ನಿ ಎಂದು ಎಲ್ಲರನ್ನೂ ಕೈ ಬೀಸಿ ಕರೆಯುತ್ತಾ ಅವನ 
ಸುತ್ತಲೂ ಜನರನ್ನು ಗುಂಪುಗೂಡಿಸಿದಳು ಅನ್ನಾ ಪಾವೋನ್ಮಾ. . 
- ' ವೈಕೌಂಟ್‌ಗೆ ಡ್ಯೂಕ್ ಪರಿಚಯ ಬಹಳ ಚೆನ್ನಾಗಿತ್ತು,' ಒಬ್ಬ ಅತಿಥಿಯ 
ಕಿವಿಯಲ್ಲಿ ಪಿಸುಗುಟ್ಟಿದಳು. 'ವೈಕೌಂಟ್ ಬಹಳ ಚೆನ್ನಾಗಿ ಕಥೆ ಹೇಳುತ್ತಾರೆ,' 
ಇನ್ನೊಬ್ಬ ಅತಿಥಿಗೆ ಹೇಳಿದಳು. 'ವೈಕೌಂಟ್ ನಿಜವಾಗಲೂ ದೊಡ್ಡ ಮನೆತನದವರು!” 
ಮತ್ತೊಬ್ಬನಿಗೆ ಹೇಳಿದಳು . ಮಸಾಲೆ ಹಾಕಿದ ದನದ ತೊಡೆಯ ಮಾಂಸವನ್ನು 
ತಟ್ಟೆಗೆ ಬಡಿಸುವ ಹಾಗೆಯೇ ವೈಕೌಂಟನ ಬಗ್ಗೆ ಹೊಗಳಿಕೆಯ ಉದ್ಧಾರಗಳನ್ನೆತ್ತಿ 
ಅವನು ಹೇಳುವ ಕಥೆಗೆ ಅತಿಥಿಗಳನ್ನು ಅಣಿಮಾಡಿದಳು. 

ವೈಕೌಂಟ್ ಕಥೆ ಶುರುಮಾಡಲು ಸಿದ್ಧನಾಗುತ್ತಾ ನಾಜೂಕಾಗಿ ಮುಗುಳಕ್ಕ .' 

' ಹೆಲನೆ ಡಿಯರ್, ಸ್ವಲ್ಪ ಬಾ ಇಲ್ಲಿ ಕೊಂಚ ದೂರದಲ್ಲಿ ಮತ್ತೊಂದು 
ಗುಂಪಿನ ಕೇಂದ್ರವಾಗಿ ಕುಳಿತಿದ್ದ ಆ ಚೆಲುವೆ ಪ್ರಿನ್ಸೆಸ್ ಹೆಲನಳನ್ನು ಅನ್ನಾ ಪಾವೋವಾ 
ಕರೆದಳು. 

ಆ ಚೆಲುವೆ ಮುಗಳಕ್ಕಳು, ಪರಿಪೂರ್ಣ ಸುಂದರಿಯ ಯಾವ 
ಮುಗುಳ್ಳಗೆಯೊಂದಿಗೆ ದಿವಾನಖಾನೆಗೆ ಕಾಲಿಟ್ಟಿದ್ದಳೋ ಬದಲಾಗದ ಅದೇ 
ಮುಗುಳಗೆಯೊಂದಿಗೆ ಮೇಲೆದ್ದಳು. ಹೂ ಬಿಡದ ಮಾಸ್ ಮತ್ತು ದ್ರಾಕ್ಷಿ ಬಳ್ಳಿಗಳ 
ಅಲಂಕಾರದ ಅಂಚಿನ ಅಚ್ಚ ಬಿಳಿಯ ಉಡುಪಿನ ಮೆಲುವಾದ ಸರಬರ 
ಸದ್ದಿನೊಂದಿಗೆ, ನಳನಳಿಸುವ ಬಿಳಿಯ ತೋಳುಗಳೊಂದಿಗೆ, ಕಣ್ಣ ಸೆಳೆಯುವ 
ಕೂದಲ ಹೊಳಪಿನೊಂದಿಗೆ , ವಜ್ರಗಳ ಥಳಥಳದೊಂದಿಗೆ , ತನಗಾಗಿ 
ದಾರಿಮಾಡಿಕೊಟ್ಟ ಗಂಡಸರ ನಡುವೆ, ಅವರು ಯಾರನ್ನೂ ನೋಡದೆ, ಎಲ್ಲರತ್ತಲೂ 
ನಗೆಯನ್ನು ಸೂಸುತ್ತಾ , ತನ್ನ ಬೆರಗುಗೊಳಿಸುವ ಆಕಾರ , ಸೆಳೆಯುವ ಬತ್ತಲೆ 
ತೋಳು, ಬೆನ್ನು , ವಿಶಾಲವಾದ ಉಬ್ಬಿದ ಎದೆಗಳನ್ನು ಮೆಚ್ಚಲು ಒಬ್ಬೊಬ್ಬರಿಗೂ 
ಅನುಮತಿ ನೀಡುವಂತಿರುವ ಆ ಹೊತ್ತಿನ ಫ್ಯಾಶನ್ನಿನ ಉಡುಪಿನ ಆ ಚೆಲುವೆ 
ಪ್ರಿನ್ಸೆಸ್ ಅನ್ನಾ ಪಾವೋವಾಳ ಬಳಿಗೆ ತೇಲಿ ಬಂದಳು. ಬಾಲ್‌ರೂಮಿನ ವೈಭವವೆಲ್ಲ 


೭ ಹದಿನೈದನೆಯ ಲೂಯಿ: ೧೭೧೫ರಿಂದ ೧೭೭೪ರಲ್ಲಿ ಅವನು ಸಾಯುವವರೆಗೆ ಫ್ರಾನ್ಸಿನ 

ಚಕ್ರವರ್ತಿಯಾಗಿದ್ದ 


ول 


೧೫. 
ಸಂಪುಟ ೧ - ಸಂಚಿಕೆ ಒಂದು 
ಅವಳೊಡನೆ ಬಂದಂತಿತ್ತು. ಹೆಲನಳ ನಡಿಗೆಯಲ್ಲಿ ಚೆಲ್ಲುತನದ ಸುಳಿವೂ ಇರಲಿಲ್ಲ. 
ಅದಕ್ಕೆ ಬದಲಾಗಿ ನೋಡಿದವರೆಲ್ಲರ ಕಣ್ಣೆಳೆದು ಸೋಲಿಸುವ ತನ್ನ ಮಿಕ್ಕು ಮೀರಿದ 
ಚೆಲುವಿನ ಬಗ್ಗೆ ತುಸು ನಾಚಿಕೆಯೇ ಇದ್ದಂತಿತ್ತು. ತನ್ನ ಸೌಂದರ್ಯದ ಪರಿಣಾಮವನ್ನು 
ತಗ್ಗಿಸಿಕೊಳ್ಳಬೇಕೆಂಬ ಆಸೆಯಿದ್ದರೂ ಆಗುತ್ತಿಲ್ಲವಲ್ಲಾ ಎಂಬ ಅಸಹಾಯಕತೆ 
ಇದ್ದಂತಿತ್ತು. 

ನೋಡಿವರೆಲ್ಲ 'ಎಂಥಾ ಚೆಲುವೆ!' ಅಂದರು . ಅವಳು ಅವನ ಎದುರಿಗೇ 
ಸರಿಯಾಗಿ ಕೂತುಕೊಳ್ಳುತ್ತಾ ಉಜ್ವಲವಾದ ನಗುವನ್ನು ಅವನತ್ತಲೂ ತೂರಿಬಿಟ್ಟಾಗ 
ವೈಕೌಂಟ್ ಭುಜ ಕೊಡವಿ ನೆಲ ನೋಡಿದ, ನಿಗೂಢ ಶಕ್ತಿಯ ಆಘಾತಕ್ಕೆ ಸಿಕ್ಕವನ 
ಹಾಗೆ. . 

'ಮೇಡಂ, ಇಂಥ ಸಭಿಕರ ಎದುರಿಗೆ ಮಾತನಾಡುವ ಶಕ್ತಿ ಇದೆಯೇ 
ಅನ್ನುವುದು ಅನುಮಾನ' ಅಂದು ನಗುತ್ತಾ ತಲೆ ಬಾಗಿಸಿದ. . 

- ಪಿನ್ನೆಸ್ ದುಂಡು ಬತ್ತಲೆ ತೋಳುಗಳನ್ನು ಚಿಕ್ಕ ಟೇಬಲ್ಲಿನ ಮೇಲೆ ಊರಿದಳು, 
ಏನೂ ಉತ್ತರ ಹೇಳಬೇಕಾಗಿಲ್ಲ ಅಂದುಕೊಂಡಳು. ನಕ್ಕಳು, ಕಾದಳು. ಅವನು 
ಕಥೆ ಹೇಳುತ್ತಿದ್ದಷ್ಟೂ ಹೊತ್ತೂ ನೆಟ್ಟಗೆ ಕುಳಿತು, ಟೇಬಲ್ಲಿಗೆ ಅಲಂಕಾರವಾಗಿ 
ಸುಮ್ಮನೆ ಬಿದ್ದಿದ್ದ ಕೈಯನ್ನು ಒಮ್ಮೆ ನೋಡಿಕೊಳ್ಳುತ್ತಾ, ಇನ್ನೊಮ್ಮೆ ಮತ್ತೂ 
ಸುಂದರವಾದ ಎದೆಯನ್ನೂ ಎದೆಯ ಮೇಲೆ ಪವಡಿಸಿದ್ದ ಮತ್ತೆ ಮತ್ತೆ 
ಸರಿಪಡಿಸಿಕೊಳ್ಳಬೇಕಾದ ವಜ್ರದ ಹಾರವನ್ನೂ ನೋಡಿಕೊಳ್ಳುತ್ತಾ ಇದ್ದಳು. ತನ್ನ 
ಉಡುಪಿನ ನಿರಿಗೆಗಳನ್ನು ಎಷ್ಟೋ ಬಾರಿ ಸರಿಮಾಡಿಕೊಂಡಳು . ಕೇಳುವವರಿಗೆ 
ಕಥೆ ಕುತೂಹಲ ಹುಟ್ಟಿಸಿದೆ ಅನ್ನಿಸಿದಾಗ ಮಹಾರಾಣಿಯ ಆಪ್ತಸಖಿಯ ಮುಖದ 
ಮೇಲಿದ್ದಂಥ ಭಾವನೆಗೆ ತನ್ನ ಮುಖದಮೇಲಿನ ಭಾವನೆಯನ್ನು ಹೊಂದಿಸಿಕೊಳ್ಳುವ 
ಸಲುವಾಗಿ ಅನ್ನಾಪಾವೋನ್ಮಾಳ ಕಡೆಗೆ ನೋಡುತ್ತಿದ್ದಳು. ಮತ್ತೆ ಎಂದಿನ ಹಾಗೆ 
ಪ್ರಕಾಶಮಾನವಾದ ನಗುವನ್ನು ಬೀರುತ್ತಾ ಕೂರುತ್ತಿದ್ದಳು. . 

ಪುಟ್ಟ ರಾಜಕುಮಾರಿ ಬೋಲೋನ್‌ ಕೂಡ ಟೀ ಟೇಬಲ್ಲಿನಿಂದ ಎದ್ದು 
ಹೆಲನಳ ಹಿಂದೆಯೇ ಬಂದಿದ್ದಳು. 

'ಒಂದು ನಿಮಿಷ. ನನ್ನ ಹ್ಯಾಂಡ್‌ಬ್ಯಾಗು ಬೇಕು...' ಅಂದಳು. ಪ್ರಿನ್ಸ್ 
ಹಿಪೊಲೆಟ್‌ನ ಕಡೆಗೆ ತಿರುಗಿ “ ಏನು ನೋಡುತ್ತಾ ಇದೀಯ? ನನ್ನ ಹ್ಯಾಂಡ್ 
ಬ್ಯಾಗು ತಗೊಂಡು ಇಲ್ಲಿಗೆ ಬಾ ' ಅಂದಳು. 

ಪ್ರಿನ್ಸೆಸ್ ಎದ್ದು, ಎಲ್ಲರಿಗೂ ಒಂದು ಮಾತು ಒಂದು ನಗು ನೀಡುತ್ತಾ ಇಡೀ 
ಗುಂಪು ಅತ್ತಿತ್ತ ಸರಿದಾಡಿ ಹೊಸರೀತಿಯಲ್ಲಿ ಕೂರುವಂತೆ ಮಾಡಿ , ಆಮೇಲೆ 
ಕೂತು ಗೌನು ಸರಿಮಾಡಿಕೊಂಡಳು . 

'ಈಗ ಸರಿ ಹೋಯಿತು' ಅನ್ನುತ್ತಾ ಕಸೂತಿಯನ್ನು ಎತ್ತಿಕೊಂಡು ಇನ್ನು 


ಯುದ್ಧ ಮತ್ತು ಶಾಂತಿ 
ವೈಕೌಂಟ್ ಇನ್ನು ಶುರುಮಾಡಲಿ ಅನ್ನುವ ಹಾಗೆ ನೋಡಿದಳು. 

ಪ್ರಿನ್ಸ್ ಹಿಪೊಲೈಟ್‌ ಬ್ಯಾಗನ್ನು ತಂದುಕೊಟ್ಟು, ಕಥೆ ಕೇಳಲು ಸೇರಿದ್ದ ಜನರ 
ಗುಂಪಿನಲ್ಲಿ ಸೇರಿ, ಕುರ್ಚಿಯೊಂದನ್ನು ಎಳೆದುಕೊಂಡು ಅವಳ ಪಕ್ಕದಲ್ಲಿ ಕುಳಿತ. 

- ` ಮುದ್ದು ಮಾಟಕಾರ' ಹಿಪೊಲೈಟ್‌ ಸುಂದರಿಯಾದ ಅಕ್ಕನ ಹಾಗೆಯೇ 
ಇದ್ದ. ಬಹಳ ಹೋಲಿಕೆ ಇದ್ದರೂ ಅತಿ ಕುರೂಗಿದ್ದದ್ದು ಇನ್ನೂ ಆಶ್ಚರ್ಯವಾಗುತ್ತಿತ್ತು. 
ಅವನ ರೂಪ ಅಕ್ಕನ ಹಾಗೆಯೇ ಇತ್ತು. ಅವಳ ಮುಖದಲ್ಲಿ ಆನಂದ, ಆತ್ಮತೃಪ್ತಿ, 
ಯೌವನ ತುಂಬಿದ ಜೀವಂತ ವಾದ ನಗು ಸದಾ ಬೆಳಗುತ್ತಾ ಅಪರೂಪದ 
ಚೆಲುವೆ ಅನ್ನಿಸಿದರೆ ಅವಳ ಸೋದರನ ಮುಖದಲ್ಲಿ ಪೆದ್ದುತನ, ನಿಶ್ಯಕ್ತಿ, ಜಗಳಗಂಟಿತನ, 
ಸಿಡಿಮಿಡಿ ತುಂಬಿಕೊಂಡು ಮಂಕಾಗಿತ್ತು. ಮೈ ಕೃಶವಾಗಿತ್ತು. ಕಣ್ಣು, ಮೂಗು, 
ಬಾಯಿ ಒಂದೊಂದೂ ವಿಕಾರವಾಗಿ ತಿರುಚಿಕೊಂಡು ಪೆದ್ದ ನಗು ನಗುತ್ತಿರುವಂತೆ 
ಕಾಣುತ್ತಿತ್ತು. ಕೈ ಕಾಲುಗಳು ಯಾವಾಗಲೂ ಸೊಟ್ಟಗೆ ಅಸಹಜ ಭಂಗಿಗಳಲ್ಲಿರುತ್ತಿದ್ದವು. 
- ' ದೆವ್ವದ ಕಥೆಯಲ್ಲ ತಾನೇ ?' ಪ್ರಿನ್ಸೆಸ್‌ಳ ಪಕ್ಕದಲ್ಲಿ ಕೂರುತ್ತಾ ಹಿಡಿಯಿರುವ 
ಕನ್ನಡಕವನ್ನು ದಡಬಡನೆ ಕಣ್ಣಿಗೆ ಇಟ್ಟುಕೊಂಡ, ಅದಿಲ್ಲದಿದ್ದರೆ ಮಾತು ಹೊರಡುವುದೇ 
ಇಲ್ಲವೇನೋ ಅನ್ನುವ ಹಾಗೆ. . 

- ಆಶ್ಚರ್ಯಗೊಂಡ ಕಥೆಗಾರ ಭುಜ ಕೊಡವುತ್ತಾ 'ಇಲ್ಲಾ ಮೈ ಡಿಯರ್ 
ಫೆಲೋ ' ಅಂದ. 

'ದೆವ್ವದ ಕಥೆ ಕೇಳಲಾರೆ' ಅಂದ ಪ್ರಿನ್ಸ್ ಹಿಪೊಲೈಟ್ - ಏನು ಅನ್ನುತಿದ್ದೇನೆ 
ಅವನಿಗೇ ಗೊತ್ತಿಲ್ಲ ಅನ್ನುವ ಹಾಗಿತ್ತು . ಎಂಥ ಆತ್ಮವಿಶ್ವಾಸದಿಂದ ಹೇಳಿದ್ದನೆಂದರೆ 
ಕೇಳಿದವರಿಗೆ ಅದು ಜಾಣ ಮಾತೋ ಅಥವಾ ಪೆದ್ದು ಮಾತೋ ಅನ್ನುವುದೇ 
ತಿಳಿಯಲಿಲ್ಲ. ಅವನು ಕಡು ಹಸಿರು ಬಣ್ಣದ ಡ್ರೆಸ್ ಕೋಟು ಧರಿಸಿದ್ದ . ರೇಶಿಮೆಯ 
ಉದ್ದನೆಯ ಕಾಲುಚೀಲ, ಹಗುರ ಶೂ , ಮೊಳಕಾಲಿನವರೆಗೆ ಬರುವ ಬೀಚಸ್ 
ತೊಟ್ಟಿದ್ದ . ಅದರ ಬಣ್ಣವನ್ನು ಬೆದರಿದ ವನದೇವತೆಯ ತೊಡೆಗಳ ಬಣ್ಣ' ಅನ್ನುತ್ತಿದ್ದ. 

ಆ ಕಾಲದಲ್ಲಿ ಪ್ರಚಲಿತವಾಗಿದ್ದ ಕಥೆಯನ್ನು ವೈಕೌಂಟ್ ಅಚ್ಚುಕಟ್ಟಾಗಿ ಹೇಳಿದ. 
ಅದರ ಪ್ರಕಾರ ಡ್ಯೂಕ್ ಎನ್‌ಹೈನ್ ಒಮ್ಮೆ ಸುಪ್ರಸಿದ್ದ ನಟಿ ಶ್ರೀಮತಿ ಜಾರ್ಜ್ಳನ್ನು 
ಗುಟ್ಟಾಗಿ ಕಾಣುವುದಕ್ಕೆ ಪ್ಯಾರಿಸ್‌ನಲ್ಲಿದ್ದ ಅವಳ ಮನೆಗೆ ಹೋಗಿದ್ದನಂತೆ; ಅಲ್ಲಿ 
ಸುಪ್ರಸಿದ್ದ ಸ್ನೇಹವನ್ನು ಅನುಭವಿಸುತ್ತಿದ್ದ ಬೋನಾಪಾರ್ಟೆಯನ್ನು ಕಂಡನಂತೆ. 
ಬೋನಾಪಾರ್ಟೆಗೆ ಮೂರ್ಚೆಬಂದು ಬಿದ್ದುಬಿಟ್ಟನಂತೆ; ಅವನಿಗೆ ಮೂರ್ಛರೋಗ 
ಇದೆ ಎಂದು ಡ್ಯೂಕ್‌ಗೆ ತಿಳಿದುಬಿಟ್ಟಿತಂತೆ; ಇದನ್ನು ಡ್ಯೂಕ್ ಸುದ್ದಿ ಮಾಡಿಬಿಟ್ಟರೆ 
ಎಂದು ಬೊನಾಪಾರ್ಟೆ ಅಂಜಿದನಂತೆ; ಆದರೆ ಸಜ್ಜನ ಡ್ಯೂಕ್ ಅದನ್ನು ಯಾರಿಗೂ 
ಹೇಳಲಿಲ್ಲವಂತೆ; ಈ ದೊಡ್ಡತನಕ್ಕೆ ಪ್ರತಿಫಲ ಎಂಬಂತೆ ಬೋನಾಪಾರ್ಟೆ ಅವನ 
ಕೊಲೆಮಾಡಿಸಿಬಿಟ್ಟನಂತೆ. 


೧೭ 


ಸಂಪುಟ ೧ - ಸಂಚಿಕೆ ಒಂದು 

ಕಥೆ ಸ್ವಾರಸ್ಯವಾಗಿತ್ತು. ಅದರಲ್ಲೂ ಪ್ರತಿ ಸ್ಪರ್ಧಿಗಳು ಒಬ್ಬರನ್ನೊಬ್ಬರು 
ಗುರುತು ಹಿಡಿದ ಪ್ರಸಂಗ ಬಂದಾಗ ಅಲ್ಲಿ ನೆರೆದಿದ್ದ ಮಹಿಳೆಯರು ಬೆದರಿದಂತೆ 
ಕಂಡರು. 

ಕಥೆಯನ್ನು ಕೇಳಿ ' ಚನ್ನಾಗಿದೆ!' ಅನ್ನುತ್ತಾ ಅನ್ನಾ ಪಾವೋವಾ ಪುಟ್ಟ 
ರಾಜಕುಮಾರಿಯತ್ತ ಪ್ರಶ್ನೆಯ ನೋಟ ಬೀರಿದಳು. 

ಪುಟ್ಟ ರಾಜಕುಮಾರಿ ಪಿಸುದನಿಯಲ್ಲಿ ' ಚನ್ನಾಗಿದೆ!' ಅನ್ನುತ್ತಾ ಕೈಯಲ್ಲಿದ್ದ 
ಸೂಜಿಯನ್ನು ಚೀಲಕ್ಕೆ ಚುಚ್ಚಿ ಸುಮ್ಮನೆ ಕೂತಳು - ಕಥೆಯ ಸ್ವಾರಸ್ಯ ಎಷ್ಟು ಇದೆ 
ಅಂದರೆ, ಆಸಕ್ತಿ ಎಷ್ಟಿದೆ ಅಂದರೆ, ನನ್ನ ಕಸೂತಿ ಕೆಲಸಕ್ಕೆ ಅಡ್ಡ ಬಂದಿದೆ ಎಂದು 
ಸೂಚಿಸುವ ಹಾಗಿತ್ತು ಅದು. 

ಈ ಮೌನ ಶ್ಲಾಘನೆಯನ್ನು ವೈಕೌಂಟ್ ಮೆಚ್ಚಿಕೊಂಡು ಕೃತಜ್ಞತೆಯಿಂದ 
ಮುಗುಲ್ನಗುತ್ತಾ ಕಥೆ ಮುಂದುವರೆಸಲು ಸಿದ್ದನಾದ. ಆದರೆ ತನ್ನನ್ನು ಅಷ್ಟೊಂದು 
ಅಂಜಿಸಿದ್ದ ಯುವಕನಮೇಲೆಕಣ್ಣಾವಲು ಇಟ್ಟೇ ಇದ್ದ ಅನ್ನಾ ಪಾವೋಬ್ಬಾ ಅವನು 
ಬಹಳ ಜೋರಾಗಿ ಗಟ್ಟಿ ಧ್ವನಿಯಲ್ಲಿ ಅಬೆಯೊಡನೆ ವಾದಮಾಡುತ್ತಿರುವುದು ಗಮನಿಸಿ 
ರಕ್ಷಣಾಕಾರ್ಯಕ್ಕೆಂದು ಅಪಾಯದ ವಲಯಕ್ಕೆ ಧಾವಿಸಿದಳು. ಅಬೆಯೊಡನೆ ಶಕ್ತಿ 
ಸಮತೋಲನದ ರಾಜಕೀಯ ಚರ್ಚೆ ಶುರುಮಾಡುವುದರಲ್ಲಿ ಪಿಯರೆ 
ಯಶಸ್ವಿಯಾಗಿದ್ದ . ಯುವಕನ ಮುಗ್ಗ ಕುತೂಹಲವನ್ನು ಕಂಡು ಉತ್ತೇಜಿತನಾಗಿದ್ದ 
ಅಬೆ ತನಗೆ ಪ್ರಿಯವಾದ ಸಿದ್ದಾಂತವನ್ನು ವಿವರಿಸುವುದಕ್ಕೆ ಶುರುಮಾಡಿದ್ದ . ಇಬ್ಬರೂ 
ತುಂಬ ನೇರವಾಗಿ ಮಾತಾಡುತ್ತಾ ತುಂಬ ಸಹಜವಾಗಿ ಒಬ್ಬರ ಮಾತು ಇನ್ನೊಬ್ಬರು 
ಕೇಳಿಸಿಕೊಳ್ಳುತ್ತಿದ್ದರು. ಅದಕ್ಕೇ ಅದು ಅನ್ನಾ ಪಾವೋವಾಗೆ ಇಷ್ಟವಾಗಲಿಲ್ಲ. 

'ಹೇಗೆ ಅಂದರೆ ಯೂರೋಪಿನಲ್ಲಿ ಶಕ್ತಿಯ ಸಮತೋಲನವಿರಬೇಕು, 
ಜನತೆಯ ಹಕ್ಕುಗಳು ಇರಬೇಕು. ಈಗ ಅಸಂಸ್ಕೃತರ ನಾಡು ಅನ್ನುವ ಕೆಟ್ಟ 
ಹೆಸರು ಇದ್ದರೂ ಪರವಾಗಿಲ್ಲ, ರಶಿಯಾದಂಥ ಒಂದು ಪ್ರಬಲವಾದ ರಾಷ್ಟ 
ಯೂರೋಪಿನ ಶಕ್ತಿ ಸಮತೋಲನದ ಸಾಧಿಸುವುದಕ್ಕೆ ಒಕ್ಕೂಟವೊಂದನ್ನು ಮಾಡಿ 
ಅದರ ಮುಖಂಡತ್ವದ ಜವಾಬ್ದಾರಿಯನ್ನು ನಿರ್ಲಿಪ್ತವಾಗಿ ವಹಿಸಿಕೊಳ್ಳಬೇಕು. 
ಇದರಿಂದ ಇಡೀ ಜಗತ್ತನ್ನೇ ಕಾಪಾಡಿದಂತಾಗುತ್ತದೆ!' ಅನ್ನುತ್ತಿದ್ದ ಅಬೆ . 

'ಸರಿ, ಶಕ್ತಿಯ ಅಂಥ ಸಮತೋಲನ ಸಾಧಿಸುವುದು ಹೇಗೆ ?' ಪಿಯರೆ 
ಕೇಳುತ್ತಿದ್ದ. ಆ ಕ್ಷಣದಲ್ಲಿ ಅನ್ನಾ ಪಾವೋವಾ ಅಡ್ಡ ಬಂದಳು. ಪಿಯರೆಯ ಕಡೆಗೆ 
ನಿಟ್ಟೂರವಾಗಿ ನೋಡುತ್ತಾ ರಶಿಯದ ಹವೆ ನಿಮಗೆ ಒಗ್ಗಿತೇ ಎಂದು ಇಟಲಿಯವನನ್ನು 
ಕೇಳಿದಳು. ಇಟಲಿಯವನ ಮುಖದ ಭಾವ ತಟ್ಟನೆ ಬದಲಾಯಿತು. ಮಹಿಳೆಯರೊಡನೆ 
ಮಾತನಾಡುವಾಗ ಮುಖದಲ್ಲಿ ಸಹಜವಾಗಿ ಅನ್ನುವಂತೆ ಮೂಡುತ್ತಿದ್ದ ಅತಿ ಸಿಹಿಸಿಹಿ 
ನೋಟ ತಟ್ಟನೆ ಅವನ ಮುಖದಲ್ಲಿ ಮೂಡಿತು. 'ನಿಮ್ಮ ಘನವಂತ ಸಮಾಜದ, 


೧೮ 


ಯುದ್ಧ ಮತ್ತು ಶಾಂತಿ 
ಅದರಲ್ಲೂ ಹೆಂಗಸರ , ಬುದ್ದಿವಂತಿಕೆ , ಸಂಸ್ಕೃತಿ ಕಂಡು ಮರುಳಾಗಿಬಿಟ್ಟಿದೇನೆ! 
ಇಂಥ ಅದೃಷ್ಟ ಸಿಕ್ಕಿ ನಿಮ್ಮ ದೇಶದ ಹವೆ ಹೇಗಿದೆ, ಯೋಚನೆ ಮಾಡಲು 
ಪುರುಸೊತ್ತೇ ಸಿಕ್ಕಿಲ್ಲ' ಅಂದ. ಅಬೆ ಮತ್ತು ಪಿಯರಿ ತಪ್ಪಿಸಿಕೊಳ್ಳುವುದಕ್ಕೆ ಬಿಡದೆ, 
ಅವರ ಮೇಲೆ ಒಂದು ಕಣ್ಣಿಟ್ಟಿರಲು ಅನುಕೂಲವಾಗುವಂತೆ ಅನ್ನಾ ಪಾವೋವಾ 
ಹೆಚ್ಚು ಜನರ ಗುಂಪಿದ್ದಲ್ಲಿಗೆ ಅವರನ್ನು ಕರೆದುಕೊಂಡು ಬಂದಳು . 


ಅದೇ ಹೊತ್ತಿಗೆ ಮತ್ತೊಬ್ಬ ಅತಿಥಿ, ಪ್ರಿನ್ಸ್ ಆಂಡೂ ಬೋಲೋನ್‌ , 
ದಿವಾನಖಾನೆಗೆ ಬಂದ. ಅವನು ಪುಟ್ಟ ರಾಜಕುಮಾರಿಯ ಗಂಡ, ಹೆಚ್ಚು ಎತ್ತರವಿರದ, 
ಆದರೆ ತುಂಬ ಸ್ಪುರದ್ರೂಪಿಯಾಗಿದ್ದ ಕಡೆದಿಟ್ಟ ವಿಗ್ರಹದಂಥ ಯುವಕ, ಅವನ 
ಮುಖದ ಮೇಲಿದ್ದ ಆಲಸ್ಯ , ಉದಾಸೀನ, ಬೇಸರದ ಭಾವಗಳಿಂದ ಹಿಡಿದು 
ನಿಧಾನವಾದ ತೂಕ ತಪ್ಪದ ಹೆಜ್ಜೆಗಳವರೆಗೆ ಅವನ ವ್ಯಕ್ತಿತ್ವದ ಪ್ರತಿಯೊಂದು 
ವಿವರವೂ ಪುಟ್ಟ ರಾಜಕುಮಾರಿಯ ಜೀವಂತ ಲವಲವಿಕೆಯ ಸ್ವಭಾವಕ್ಕೆ 
ತದ್ವಿರುದ್ದವಾಗಿದ್ದವು. ದಿವಾನಖಾನೆಯಲ್ಲಿದ್ದ ಪ್ರತಿಯೊಬ್ಬರೂ ಗೊತ್ತು, ಇವರ 
ಮುಖ ನೋಡುವುದು, ಇವರ ಮಾತು ಕೇಳುವುದು ತೀರ ಬೇಜಾರು, ಇವರ 
ಮುಖ ಕಂಡರೆ ಮಾತು ಕೇಳಿದರೆ ಹುಚ್ಚೇ ಹಿಡಿಯುತ್ತದೆ ಅನ್ನುವ ಭಾವ 
ವ್ಯಕ್ತವಾಗುತ್ತಿತ್ತು. ಅಲ್ಲಿದ್ದ ದಣಿವು ಹುಟ್ಟಿಸುವಂಥ ಎಲ್ಲ ಮುಖಗಳಲ್ಲಿ ಅವನ 
ಹೆಂಡತಿಯ ಮುದ್ದು ಮುಖವೇ ಅತಿ ಹೆಚ್ಚು ಬೇಜಾರು ಹುಟ್ಟಿಸುತ್ತಿತ್ತು. ಅವಳನ್ನು 
ಕಂಡವನೇ ಸಿಟ್ಟಿನಿಂದ ಗುರುಗುಟ್ಟಿ ಹಣೆ ಗಂಟಿಕ್ಕಿ ಅವನ ಸುಂದರವಾದ ಮುಖ 
ವಿಕಾರವಾಯಿತು. ಮುಖ ತಿರುಗಿಸಿ ಅನ್ನಾ ಪಾವೋಬ್ಬಾಳ ಕೈಗಳಿಗೆ ಚುಂಬಿಸುತ್ತಾ 
ಕಣ್ಣು ಕಿರಿದು ಮಾಡಿಕೊಂಡು ಸುತ್ತಲೂ ಇದ್ದವರನ್ನೆಲ್ಲಾ ಪರೀಕ್ಷಿಸುವಂತೆ ನೋಡಿದ. 

' ಹಾಗಾದರೆ... ಯುದ್ಧಕ್ಕೆ ಹೊರಟಿರಾ, ಪ್ರಿನ್ಸ್ ?' ಅನ್ನಾ ಪಾವೋವಾ ಕೇಳಿದಳು. 

' ಜನರಲ್ ಕುತುಝೇವ್ ನನ್ನನ್ನು ಏಡ್- ಡಿ -ಕ್ಯಾಂಪ್ ಆಗಿ ತೆಗೆದುಕೊಳ್ಳಲು 
ದೊಡ್ಡ ಮನಸ್ಸುಮಾಡಿ ಒಪ್ಪಿದ್ದಾರೆ...' ಎಂದು ಫ್ರೆಂಚಿನಲ್ಲಿ ಹೇಳಿದ. ಕುತುವ್ 
ಅನ್ನುವ ಹೆಸರಿನ ಕೊನೆಯ ಅಕ್ಷರವನ್ನು ಫ್ರೆಂಚರಂತೆಯೇ ಉಚ್ಚರಿಸಿದ. 

" ಮತ್ತೆ, ನಿಮ್ಮ ಹೆಂಡತಿ, ಲಿಸ್ತೀ ?' 
'ನಮ್ಮ ಹಳ್ಳಿಗೆ ಹೋಗುತ್ತಾಳೆ.' 

“ ನಿಮ್ಮ ಹೆಂಡತಿಯ ಸಹವಾಸ ನಮಗೆಲ್ಲ ತಪ್ಪಿಹೋಗುವಂತೆ ಮಾಡುತ್ತಿದೀರಲ್ಲ, 
ನಾಚಿಕೆಯಾಗುವುದಿಲ್ಲವೇ ?' 
- “ ಆಂದ್ರೆ, ವೈಕೌಂಟ್ ಅವರು ಶ್ರೀಮತಿ ಜಾರ್ಜ್ ಮತ್ತೆ ಬೋನಾಪಾರ್ಟೆ 
ಬಗ್ಗೆ ಎಂಥಾ ಕಥೆ ಹೇಳುತ್ತಾ ಇದ್ದರು ಗೊತ್ತಾ!' ಮಿಕ್ಕ ಗಂಡಸರ ಹತ್ತಿರ 
ಮಾತನಾಡುವಾಗ ಇರುತ್ತಿದ್ದ ಬಿನ್ನಾಣದ ದನಿಯಲ್ಲಿ ಅವನ ಹೆಂಡತಿ ತನ್ನ ಗಂಡನನ್ನು 


ಸಂಪುಟ ೧ - ಸಂಚಿಕೆ ಒಂದು 


ಮಾತಾಡಿಸಿದಳು . 

, ಪ್ರಿನ್ಸ್ ಆಂಡೂ ಸಿಟ್ಟಿನಿಂದ ಹುಬ್ಬು ಗಂಟಿಕ್ಕಿ ಪಕ್ಕಕ್ಕೆ ತಿರುಗಿದ. ಪ್ರಿನ್ಸ್ 
ಆಂಡೂ ಡ್ರಾಯಿಂಗ್ ರೂಮಿಗೆ ಕಾಲಿಟ್ಟ ಕ್ಷಣದಿಂದ ಪಿಯರೆ ಅವನನ್ನು ಪ್ರೀತಿ, 
ಸ್ನೇಹ, ಸಂತೋಷ ತುಂಬಿದ ದೃಷ್ಟಿಯಿಂದ ಗಮನಿಸುತ್ತಿದ್ದ . ಈಗ ಅವನ ಹತ್ತಿರ 
ಹೋಗಿ ತೋಳು ಹಿಡಿದುಕೊಂಡ. ಕತ್ತು ಹೊರಳಿಸಿ ನೋಡುವ ಮೊದಲು 
' ಯಾರೋ ನನ್ನ ಮೈ ಮುಟ್ಟುತ್ತಿದ್ದಾರಲ್ಲ' ಎಂದು ಆಂಡ್ರ ಮುಖ ಗಂಟಿಕ್ಕಿಕೊಂಡ. 
ಸಂತೋಷತುಂಬಿರುವ ಪಿಯರೆಯ ಮುಖ ಕಂಡ ತಕ್ಷಣ ಆಂಡ್ರನ ಮುಖದಲ್ಲಿ 
ಅಸಾಮಾನ್ಯ ಸಂತೋಷದ ಮುಗುಳು ನಗೆ ಮೂಡಿತು. 

“ಓಹೋ ...ನೀನು! ಈ ಘನವಂತರ ಮಹಾ ಜಗತ್ತಿನಲ್ಲಿ?' ಅಂದ ಪ್ರಿನ್ಸ್ 


ಆಂಡ್ರ , 


- “ನೀನು ಇಲ್ಲಿಗೆ ಬಂದೇ ಬರುತೀಯ ಎಂದು ಗೊತ್ತಿತ್ತು. ರಾತ್ರಿಗೆ ಒಟ್ಟಿಗೆ 
ಊಟ ಮಾಡೋಣವೇ ?' ಕಥೆಯನ್ನು ಮುಂದುವರೆಸುತ್ತಿದ್ದ ವೈಕೌಂಟನಿಗೆ 
ತೊಂದರೆಯಾಗದಂತೆ ಪಿಯರೆ ಪಿಸುಮಾತಿನಲ್ಲಿ ಕೇಳಿದ. 

“ಊಹೂಂ, ಸಾಧ್ಯವಿಲ್ಲ' ಅನ್ನುತ್ತಾ, ಆದರೆ ಇದು ಕೇಳ ಬೇಕಾದ ಪ್ರಶ್ನೆಯೇ 
ಅನ್ನುವ ಹಾಗೆ ನಗುತ್ತಾ, ಪ್ರಿನ್ಸ್ ಆಂಡೂ ಪಿಯರೆಯ ಕೈಯನ್ನು ಸ್ನೇಹದಿಂದ 
ಅದುಮಿದ. ಇನ್ನೂ ಏನೋ ಹೇಳುವವನಿದ್ದ. ಆದರೆ ಆ ಹೊತ್ತಿಗೆ ಪ್ರಿನ್ಸ್ ವ್ಯಾಸಿಲಿ 
ಮತ್ತು ಅವನ ಮಗಳು ಹೊರಡಲು ಎದ್ದರು. ಅವರಿಗೆ ಜಾಗಮಾಡಿಕೊಡಲು 
ಇನ್ನಿಬ್ಬರು ಯುವಕರೂ ಎದ್ದು ನಿಂತರು. 
ಆ 'ನಮ್ಮನ್ನು ಕ್ಷಮಿಸಬೇಕು, ವೈಕೌಂಟ್ ' ಅನ್ನುತ್ತಾ ಪ್ರಿನ್ಸ್ ವ್ಯಾಸಿಲಿ 
ಸ್ನೇಹಪೂರ್ವಕವಾಗಿ ವೈಕೌಂಟನ ಅಂಗಿಯ ತೋಳು ಜಗ್ಗಿ ಅವನು ಎದ್ದು 
ನಿಲ್ಲುವ ಅಗತ್ಯವಿಲ್ಲವೆಂಬುದನ್ನು ಸೂಚಿಸಿದ. 'ರಾಯಭಾರಿಯವರ ನಿವಾಸದಲ್ಲಿ 
ಈ ಹೊತ್ತೇ ಕಾರ್ಯಕ್ರಮ ಇರುವುದು ನನ್ನ ದುರದೃಷ್ಟ. ನಿಮ್ಮ ಕಥೆ ಕೇಳುವ 
ಅವಕಾಶ ತಪ್ಪಿತು, ನಿಮಗೆ ಅಡ್ಡಿ ಮಾಡಬೇಕಾಯಿತು' ಅಂದ. ' ಇಷ್ಟು ಒಳ್ಳೆಯ 
ಪಾರ್ಟಿ ಬಿಟ್ಟು ಹೋಗಲು ನನಗೂ ಮನಸ್ಸೇ ಇಲ್ಲ' ಎಂದು ಅನ್ನಾ ಪಾವೋದ್ಘಾಳತ್ತ 
ತಿರುಗಿ ಹೇಳಿದ. 

ಅವನ ಮಗಳು , ಆ ಚೆಲುವೆ ಪ್ರಿನ್ಸೆಸ್ ಹೆಲನೆ ನಾಜೂಕಾಗಿ ಹಿಡಿದುಕೊಂಡು, 
ಕುರ್ಚಿಗಳ ನಡುವೆ ಜಾಗಮಾಡಿಕೊಂಡು ನಡೆದಾಗ ಅವಳ ಚೆಲುವಾದ ಮುಖದಲ್ಲಿ 
ಅದೇ ಮುಗುಳಗು ಮತ್ತಷ್ಟು ಪ್ರಕಾಶಮಾನವಾಗಿತ್ತು. ತನ್ನ ಪಕ್ಕದಲ್ಲಿ ಹಾದು 
ಹೋಗುತ್ತಿರುವ ಚೆಲುವಿನ ದರ್ಶನವನ್ನು ಕಂಡು ಪಿಯರೆ ಪರವಶನಾದ. ಅವನ 
ಕಣ್ಣಲ್ಲಿ ಅಚ್ಚರಿಯಿತ್ತು, ದಿಗಿಲಿತ್ತು. 

- 'ಎಷ್ಟು ಚೆನ್ನಾಗಿದಾಳೆ!' ಅಂದ ಪ್ರಿನ್ಸ್ ಆಂಡ್ರ , 


ಯುದ್ಧ ಮತ್ತು ಶಾಂತಿ 
“ ಅಲ್ಲವಾ!' ಅಂದ ಪಿಯರೆ. 

ಪ್ರಿನ್ಸ್ ವ್ಯಾಸಿಲಿ ಪಿಯರೆಯ ಪಕ್ಕದಿಂದ ಹೋಗುವಾಗ ಅವನ ಕೈ ಹಿಡಿದು, 
ಅನ್ನಾ ಪಾವೋವಾಳತ್ತ ತಿರುಗಿ , ' ಈ ಕರಡಿಗೆ ಸಭ್ಯತೆ, ಶಿಷ್ಟಾಚಾರ ಕಲಿಸಿಕೊಡಿ. 
ಒಂದು ತಿಂಗಳಿನಿಂದ ನನ್ನ ಜೊತೆಯಲ್ಲೇ ಇದ್ದರೂ ಇದೇ ಮೊದಲನೇ ಸಾರಿ 
ಅವನನ್ನು ಪಾರ್ಟಿಯಲ್ಲಿ ನೋಡುತ್ತಿದ್ದೇನೆ. ಯುವಕರಾದವರಿಗೆ ಜಾಣ ಹೆಂಗಸರ 
ಸಹವಾಸದಷ್ಟು ಮುಖ್ಯವಾದದ್ದು ಬೇರೇನೂ ಇಲ್ಲ' ಅಂದ. 


ಪಿಯರೆಯು ತಂದೆಯ ಕಡೆಯಿಂದ ಪ್ರಿನ್ಸ್ ವ್ಯಾಸಿಲಿಯ ಸಂಬಂಧಿಕನೆಂಬುದು 
ಗೊತ್ತಿದ್ದ ಅನ್ನಾ ಪಾವೋವಾ ನಕ್ಕು ಸರಿಯಾಗಿ ನೋಡಿಕೊಳ್ಳುತ್ತೇನೆ ಅಂದಳು. 
ಈ ಮೊದಲು ಮುದುಕಿ ಚಿಕ್ಕಮ್ಮನ ಪಕ್ಕದಲ್ಲಿ ಕೂತಿದ್ದ ಹಿರಿಯಾಕೆ ಅವಸರದಿಂದ 
ಎದ್ದು ಪ್ರಿನ್ಸ್ ವ್ಯಾಸಿಲಿಯ ಬೆನ್ನುಹತ್ತಿ ಹೋಗಿ ಹಾಲ್ ದಾಟುವಷ್ಟರಲ್ಲಿ ಅವನನ್ನು 
ಹಿಂದಿಕ್ಕಿದಳು. ಅವಳ ಮುಖದಲ್ಲಿ ಇದುವರೆಗೂ ಇದ್ದ ತೋರಿಕೆಯ ಆಸಕ್ತಿ 
ಮಾಯವಾಗಿತ್ತು. ಜವಾಬ್ದಾರಿ ಹೊತ್ತು ದಣಿದ ಮುಖದಲ್ಲಿ ಆತಂಕ, ದಿಗಿಲು 
ಬಿಟ್ಟರೆ ಬೇರೆ ಏನೂ ಇರಲಿಲ್ಲ . 

' ಪ್ರಿನ್ಸ್ , ನನ್ನ ಮಗಬೋರಿಸ್‌ನದು ಏನು ಮಾಡಿದಿರಿ? ಪೀಟರ್ಸ್‌ಬರ್ಗಿನಲ್ಲೇ 
ಕಾಯುತ ಇರಲಾರೆ. ಬಡಪಾಯಿ ಮಗನಿಗೆ ಏನು ಹೇಳಲಿ , ಹೇಳಿ?' ಹಾಲ್‌ನಲ್ಲಿ 
ಪ್ರಿನ್ಸ್ ವ್ಯಾಸಿಲಿಯನ್ನು ಸಮೀಪಿಸಿ, ' ಬೋ ' ಎಂಬ ಅಕ್ಷರವನ್ನು ವಿಶೇಷವಾಗಿ ಒತ್ತಿ 
ಕೇಳಿದಳು . 
- ಪ್ರಿನ್ಸ್ ವ್ಯಾಸಿಲಿ ಹಿರಿಯಾಕೆಯ ಮಾತುಗಳನ್ನು ಕೇಳಿಸಿಕೊಳ್ಳಲು 
ಹಿಂಜರಿಯುತ್ತಾ, ಅಸೌಜನ್ಯದ ಅಂಚಿನಲ್ಲಿ ನಿಂತು ಸ್ವಲ್ಪ ಅಸಹನೆಯನ್ನೂ 
ತೋರಿಸುತ್ತಿದ್ದರೂ ಆಕೆ ಮಾತ್ರ ಅವನನ್ನು ಗೋಗರೆಯುವಂತೆ ಸಿಹಿಯಾಗಿ 
ಮುಗುಳಗುತ್ತಾ, ತಪ್ಪಿಸಿಕೊಂಡು ಹೋಗದಿರಲೆಂದು ತೋಳನ್ನು ಬಿಗಿಯಾಗಿ 
ಹಿಡಿದುನಿಲ್ಲಿಸಿ, “ನೀವು ಅವನ ಪರವಾಗಿ ಮಹಾಪ್ರಭುಗಳಿಗೆ ಒಳ್ಳೆಯ ಮಾತು 
ಹೇಳುವುದಕ್ಕೆ ಏನೂ ಖರ್ಚಾಗುವುದಿಲ್ಲ. ಅವನನ್ನು ನೆಟ್ಟಗೆ ಗಾರ್ಡ್‌ಗೆ ವರ್ಗಾ 
ಮಾಡಿಯೇ ಮಾಡುತ್ತಾರೆ' ಅಂದಳು . 
- ' ನನ್ನನ್ನು ನಂಬಿ ಪ್ರಿನ್ಸೆಸ್ , ನನ್ನ ಕೈಯಲ್ಲಿ ಸಾಧ್ಯವಿರುವುದನ್ನೆಲ್ಲಾ ಖಂಡಿತ 
ಮಾಡುತ್ತೇನೆ. ನಾನೇ ಸ್ವತಃ ಮಹಾಪ್ರಭುಗಳಿಗೆ ಮನವಿ ಮಾಡುವುದು ಕಷ್ಟ . 
ಒಂದು ಕೆಲಸ ಮಾಡಿ , ಪ್ರಿನ್ಸ್ ಗೊಲಿತ್‌ಸೈನ್ ಮೂಲಕ ರುಮ್ಯಾನ್‌ತೈವ್‌ನನ್ನು 
ಹೋಗಿ ಕಾಣಿರಿ . ಅದೇ ಒಳ್ಳೆಯ ಉಪಾಯ ' ಅಂದ ಪ್ರಿನ್ಸ್ ವ್ಯಾಸಿಲಿ. . 

ಆ ಹಿರಿಯಾಕೆ, ಪ್ರಿನ್ಸೆಸ್ ದುಬೆತಸ್ಕಾಯಾ, ರಶಿಯಾದ ಅತ್ಯುತ್ತಮ 
ಮನೆತನವೊಂದಕ್ಕೆ ಸೇರಿದವಳು. ಆದರೆ ಬಡತನ ಬಂದು ಘನವಂತರ ಸಮಾಜಕ್ಕೆ 


ಸಂಪುಟ ೧ - ಸಂಚಿಕೆ ಒಂದು 
ಹೊರಗಾಗಿ ತನಗಿದ್ದ ಹಳೆಯ ಪ್ರಭಾವಶಾಲೀ ಸ೦ಪರ್ಕಗಳನ್ನೆಲ್ಲ 
ಕಳೆದುಕೊಂಡಿದ್ದಳು. ಈಗ ತನ್ನ ಒಬ್ಬನೇ ಮಗನ ಪರವಾಗಿ ಶಿಫಾರಸು ಮಾಡಿಸಿ 
ಅವನಿಗೆ ಗಾರ್ಡ್‌ನಲ್ಲಿ ಉದ್ಯೋಗ ಕೊಡಿಸುವ ಸಲುವಾಗಿ ಪೀಟರ್ಸ್‌ಬರ್ಗಿಗೆ 
ಬಂದಿದ್ದಳು. ಪ್ರಿನ್ಸ್ ವ್ಯಾಸಿಲಿಯನ್ನು ಭೇಟಿಮಾಡುವ ಕಾರಣಕ್ಕಾಗಿಯೇ ಅನ್ನಾ 
ಪಾವೋವಾಳ ಪಾರ್ಟಿಗೆ ಆಹ್ವಾನವನ್ನು ಸಂಪಾದಿಸಿಕೊಂಡು ಇಲ್ಲಿಗೆ ಬಂದು 
ವೈಕೌಂಟನ ಕಥೆ ಮುಗಿಯುವವರೆಗೆ ಕೇಳುತ್ತಾ ಕೂತಿದ್ದಳು . ಈಗ ಅವನ 
ಮಾತು ಕೇಳಿ ದಿಕ್ಕುತಪ್ಪಿದಂತಾಯಿತು. ಚೆಲುವು ಮಾಸಿದ ಅವಳ ಮುಖದ ಮೇಲೆ 
ಒಂದೇ ಒಂದು ಕ್ಷಣ ಆತಂಕದ ಛಾಯೆ ಮೂಡಿತು. ಮತ್ತೆ ಮುಗುಳಗುತ್ತಾ ಪ್ರಿನ್ 
ವ್ಯಾಸಿಲಿಯ ತೋಳಿನ ಮೇಲಿನ ಹಿಡಿತ ಬಿಗಿಮಾಡಿದಳು . 

. 'ಇಲ್ಲಿ ಕೇಳಿ ಪ್ರಿನ್ಸ್, ನಾನು ಇದುವರೆಗೂ ನಿಮ್ಮನ್ನು ಏನೂ ಕೇಳಿಲ್ಲ. 
ಮುಂದೆ ಕೇಳುವುದೂ ಇಲ್ಲ. ನಮ್ಮ ತಂದೆಗೂ ನಿಮ್ಮ ತಂದೆಯವರಿಗೂ ಇದ್ದ 
ಸ್ನೇಹಸಂಬಂಧವನ್ನು ಯಾವತ್ತೂ ನಿಮ್ಮ ಗಮನಕ್ಕೆ ತಂದಿಲ್ಲ. ಈಗ ನನ್ನ ಮಗನ 
ಸಲುವಾಗಿ ಇದೊಂದು ಕೆಲಸಮಾಡಿಕೊಟ್ಟರೆ ನೀವೇ ದೇವರೆಂದು ತಿಳಿಯುತ್ತೇನೆ.' 
ಆತುರಾತುರವಾಗಿ ಮಾತು ಮುಂದುವರೆಸುತ್ತಾ ' ದಯವಿಟ್ಟುಕೋಪಮಾಡಿಕೊಳ್ಳಬೇಡಿ! 
ಕೆಲಸಮಾಡಿಕೊಡುತ್ತೇನೆಂದು ಮಾತು ಕೊಡಿ ಸಾಕು. ಆಗಲೇ ಗೊಲಿತ್‌ಸೈನ್ 
ಅವರನ್ನು ಕೇಳಿದೆ. ಆಗುವುದಿಲ್ಲ ಎಂದುಬಿಟ್ಟರು. ನಿಮ್ಮದು ಕಷ್ಟಕ್ಕೆ ಮರುಗುವ 
ಮನಸ್ಸು, ದಯವಿಟ್ಟು ಸಹಾಯಮಾಡಿ' ಎಂದು ಕೋರಿಕೊಂಡಳು. ಕಣ್ಣಲ್ಲಿ ನೀರು 
ತುಂಬಿದ್ದರೂ ಮುಗುಳಗುವುದಕ್ಕೆ ಹೆಣಗಿದಳು. . 

ಬಾಗಿಲಿನಲ್ಲಿ ಕಾಯುತ್ತಾ ನಿಂತಿದ್ದ ಆ ಚೆಲುವೆ ಪ್ರಿನ್ಸೆಸ್ ಹೆಲೆನ್ ವಿಗ್ರಹದಂಥ 
ಸುಂದರವಾದ ಭುಜಗಳ ಮೇಲಿದ್ದ ತಲೆಯನ್ನು ಕೊಂಚವೇ ಹಿಂದೆ ತಿರುಗಿಸಿ 
ತಂದೆಯನ್ನು ನೋಡುತ್ತಾ ' ಪಾಪಾ, ವಿ ಷಲ್ ಬಿ ಲೇಟ್” ಅಂದಳು. 

ಶ್ರೀಮಂತ ಸಮಾಜದವರಿಗೆ ಪ್ರಭಾವವೆಂಬುದು ಬಲು ದೊಡ್ಡ 
ಬಂಡವಾಳ ಖರ್ಚಾಗದೆ ಉಳಿದಿರಬೇಕಾದರೆ ಅದನ್ನು ತೀರ ಜತನವಾಗಿ 
ಬಳಸಬೇಕು. ಪ್ರಿನ್ಸ್ ವ್ಯಾಸಿಲಿಗೆ ಇದು ಗೊತ್ತಿತ್ತು , ಸಹಾಯ ಕೋರಿ ಬಂದವರೆಲ್ಲರ 
ಪರವಾಗಿ ಪ್ರಭಾವನ್ನು ಬಳಸುತ್ತಾ ಹೋದರೆ ಕೊನೆಗೆ ತನಗಾಗಿ ಏನನ್ನೂ 
ಕೋರಲಾಗದ ಸ್ಥಿತಿಗೆ ಬಂದುಬಿಡುತ್ತೇನೆ ಎಂಬ ಅರಿವು ಇದ್ದದ್ದರಿಂದ ಶಿಫಾರಸು 
ಮಾಡಲು ಹಿಂಜರಿಯುತ್ತಿದ್ದ. ಆದರೆ ಪ್ರಿನ್ಸೆಸ್ ದುಬೆತಸ್ವಾಯಾ ಎರಡನೆಯ ಬಾರಿ 
ಕೋರಿಕೊಂಡಾಗ ಅವನ ಅಂತಸ್ಸಾಕ್ಷಿ ಕುಟುಕಿದಂತಾಯಿತು. ಅವಳು ಸತ್ಯವಾದ 
ಸಂಗತಿಯನ್ನೇ ನೆನಪಿಸಿದ್ದಳು. ಉದ್ಯೋಗದ ಆರಂಭದ ದಿನಗಳಲ್ಲಿ ಮೇಲೇರುವುದಕ್ಕೆ 
ಆಕೆಯ ತಂದೆಯೇ ಕಾರಣವಾಗಿದ್ದ. ಅದಕ್ಕಿಂತ ಹೆಚ್ಚಾಗಿ, ಕೆಲವು ಹೆಂಗಸರಿರುತ್ತಾರೆ , 
ಅದರಲ್ಲೂ ತಾಯಂದಿರು, ಒಮ್ಮೆ ಮನಸ್ಸು ಮಾಡಿಬಿಟ್ಟರೆ ಶತಾಯ ಗತಾಯ 


೨೨ 

ಯುದ್ಧ ಮತ್ತು ಶಾಂತಿ 
ತಮ್ಮ ಇಚ್ಛೆ ಪೂರ್ಣವಾಗುವವರೆಗೆ ಹಿಡಿದ ಪಟ್ಟು ಬಿಡುವುದೇ ಇಲ್ಲ, ದಿನ 
ದಿನವೂ , ಗಂಟೆಗೊಮ್ಮೊಮ್ಮೆ ಅದೇ ಮಾತು ಆಡಿ ಕೋರುತ್ತಾ ಒತ್ತಾಯಮಾಡುತ್ತಾ 
ಒಂದೊಂದು ಸಾರಿ ದೊಡ್ಡ ಪ್ರಸಂಗವನ್ನೇ ಸೃಷ್ಟಿಮಾಡಿಬಿಡುತ್ತಾರೆ. ಅಂಥವರಲ್ಲಿ 
ಇವಳೂ ಒಬ್ಬಳು ಅನ್ನಿಸಿತ್ತು ಪ್ರಿನ್ಸ್ ವ್ಯಾಸಿಲಿಗೆ, ಹಾಗಾಗಿ ಕೊಂಚ ತಡೆದ. 

' ಮೈ ಡಿಯರ್ ಅನ್ನಾ ಮಿಖಾಯ್ಸನ್ಮಾ, ನೀವುಕೇಳುವದನ್ನು ಮಾಡುವುದಕ್ಕೆ 
ನನಗೆ ಸಾಧ್ಯವೇ ಇಲ್ಲ. ಆದರೂ ನಿಮ್ಮ ಬಗ್ಗೆ ನನಗೆ ಪ್ರೀತಿ ಇದೆ, ನಿಮ್ಮ ತಂದೆಯವರು 
ಮಾಡಿದ ಸಹಾಯದ ನೆನಪಿದೆ ಎಂದು ತೋರಿಸುವುದಕ್ಕಾಗಿಯಾದರೂ 
ಅಸಾಧ್ಯವಾದ ಕೆಲಸ ಸಾಧ್ಯಮಾಡುತ್ತೇನೆ. ನಿಮ್ಮ ಮಗನಿಗೆ ಗಾರ್ಡ್‌ಗೆ ವರ್ಗಾ 
ಆಗಿಯೇ ಆಗುತ್ತದೆ. ಇಗೋ ಮಾತು ಕೊಟ್ಟೆ, ಸಮಾಧಾನವೇ ?' ಎಂದಿನ ಹಾಗೆ 
ಬಡಿವಾರವಿಲ್ಲದೆ ಸಲಿಗೆ ಮತ್ತು ಬೇಸರ ಬೆರೆತ ಧ್ವನಿಯಲ್ಲಿ ಹೇಳಿದ. 

'ನೀವೇ ಸಾಕ್ಷಾತ್ ದೇವರಪ್ಪಾ! ನಿಮ್ಮ ಮನಸ್ಸು ಮರುಗುತ್ತದೆ ಎಂದು 
ಗೊತ್ತಿತ್ತು ನನಗೆ!” ಅಂದಳು. ಅವನು ಹೊರಡಲು ಯತ್ನಿಸಿದ. ' ಒಂದು ನಿಮಿಷ 
ತಾಳಿ, ಅವನಿಗೆ ಗಾರ್ಡ್‌ಗೆ ವರ್ಗವಾದಮೇಲೆ...' ಅವಳ ಧ್ವನಿ ತೊದಲಿತು. 'ಹೇಗೂ 
ನಿಮಗೆ ಮೈಖೆಲ್ ಇಲಾರಿನೊವಿಚ್ ಕುತುಝೇವ್ಅವರ ಪರಿಚಯ ಚೆನ್ನಾಗಿದೆ. 
ನಿಮ್ಮ ಮಾತು ಅವರು ತೆಗೆದುಹಾಕುವುದಿಲ್ಲ. ಬೋರಿಸ್‌ನನ್ನು ಅವರ ಅಡುಟೆಂಟ್ 
ಮಾಡಿಕೊಳ್ಳುವಂತೆ ಶಿಫಾರಸುಮಾಡಿಬಿಟ್ಟರೆ ಸಾಕು . ನನ್ನ ಮನಸ್ಸಿಗೆ 
ಸಮಾಧಾನವಾಗುತ್ತದೆ. ಆಮೇಲೆ...' 
- ಪ್ರಿನ್ಸ್ ವ್ಯಾಸಿಲಿ ಮುಗುಳಕ್ಕ , ' ಇಲ್ಲ. ಆ ಕೆಲಸ ಮಾಡುತ್ತೇನೆಂದು 
ಮಾತುಕೊಡಲಾರೆ, ಕುತುಝೇವ್ಕಮಾಂಡರ್ ಇನ್ ಛೀಫ್ ಆದಮೇಲೆ ಜನ 
ಅವರನ್ನು ಎಷ್ಟು ಪೀಡಿಸುತ್ತಿದಾರೆ, ನಿಮಗೆ ಗೊತ್ತಿಲ್ಲ. ಮಾಸ್ಕೋದ ಎಲ್ಲ ಹೆಂಗಸರೂ 
ತಮ್ಮ ಗಂಡುಮಕ್ಕಳನ್ನು ಅವರ ಅದ್ಭುಟಂಟ್ ಆಗಿಸಲು ಹುನ್ನಾರಮಾಡಿದ್ದಾರೆ 
ಎಂದು ಅವೇ ಒಮ್ಮೆ ನನಗೆ ಹೇಳಿದ್ದರು. 

'ಇಲ್ಲಾ. ನೀವು ಮಾತು ಕೊಡಲೇಬೇಕು! ಇಲ್ಲವೆಂದರೆ ನಿಮ್ಮನ್ನು ಬಿಡುವುದಿಲ್ಲ! 
ನೀವೇ ನಮ್ಮ ಪಾಲಿನ ದೇವರು...' 

' ಪಾಪಾ, ವಿ ಷಲ್ ಬಿ ಲೇಟ್” ಆ ಚೆಲುವೆ ಹೆಲನೆ ಮತ್ತೆ ಅದೇ ಧ್ವನಿಯಲ್ಲಿ 
ಉಲಿದಳು . 

'ಸರಿ , ಹೋಗಿಬರುತ್ತೇನೆ! ಗುಡ್ ಬೈ ! ಏನಾಗುತ್ತದೋ ನೋಡೋಣ' 
' ಹಾಗಾದರೆ, ನಾಳೆ ಮಹಾಪ್ರಭುಗಳ ಹತ್ತಿರ ಮಾತನಾಡುತೀರಾ?' 
' ಖಂಡಿತ. ಆದರೆ ಕುತುಬ್ ಗೆ ಹೇಳುವುದು ಸಾಧ್ಯವಿಲ್ಲ.' 

“ ಆಗುತದೆ ಅನ್ನು ಬಾಸಿಲೀ !' ಅವನು ಹೊರಟಮೇಲೆ ಮುಗುಳಗುತ್ತಾ 
ಎಳೆಯ ನಾಯಕಸಾನಿಯ ದನಿಯಲ್ಲಿ ಅನ್ನಾ ಮಿಖಾಯೌವ್ವಾ ಹೇಳಿದಳು. 


ಸಂಪುಟ ೧ - ಸಂಚಿಕೆ ಒಂದು 

೨೩ 
ಹಾಗೆ ಕುಲುಕುವುದು ಹಿಂದೊಮ್ಮೆ ಅವಳಿಗೆ ಒಗ್ಗುತ್ತಿತ್ತೇನೋ . ಈಗ ಸುಕ್ಕುಗಟ್ಟಿದ 
ಬಡಕಲು ಮುಖಕ್ಕೆ ಅಂಥ ನಗು ಚೆನ್ನಾಗಿ ಕಾಣುತ್ತಿರಲಿಲ್ಲ. ಆಗಿರುವ ವಯಸ್ಸನ್ನು 
ಮರೆತುಬಿಟ್ಟಂತಿದ್ದಳು. ಆದ್ದರಿಂದಲೇ ಸ್ತ್ರೀ ಸಹಜವಾದ ತನ್ನ ಪ್ರಾಚೀನ ಅಸ್ತ್ರಗಳನ್ನೂ 
ಅಭ್ಯಾಸಬಲದಿಂದ ಬಳಸುತ್ತಿದ್ದಳು. ಪ್ರಿನ್ಸ್ ಹೊರಟುಹೋದ ತಕ್ಷಣವೇ ಅವಳ 
ಮುಖ ಮೊದಲಿದ್ದ ತಣ್ಣನೆಯ ಕೃತಕವಾದ ಭಾವಕ್ಕೆ ಮರಳಿತು . ಇನ್ನೂ 
ಮಾತನಾಡುತ್ತಿದ್ದ ವೈಕೌಂಟ್‌ನ ಬಳಿಗೆ ಹೋಗಿ ಅವನ ಕಥೆಯನ್ನು 
ಕೇಳಿಸಿಕೊಳ್ಳುತ್ತಿರುವಂತೆ ನಟಿಸುತ್ತಾ, ಹೊರಡುವ ಸಮಯಕ್ಕಾಗಿ ಕಾಯುತ್ತಿದ್ದಳು. 
ಅವಳು ಬಂದ ಕೆಲಸ ಆಗಿತ್ತು. 

' ಇತ್ತೀಚೆಗೆ ಮಿಲಾನ್‌ನಲ್ಲಿ ನಡೆಯಿತಲ್ಲ ಪಟ್ಟಾಭಿಷೇಕದ ನಾಟಕ, ಮತ್ತೆ 
ಜಿನೀವಾ, ಲುಕ್ಕಾದಲ್ಲಿ ನಡೆದ ಇನ್ನೊಂದು ನಾಟಕ, ಜನ ಬಂದು ಬಂದು 
ಬೋನಾಪಾರ್ಟೆಗೆ ಮನವಿ ಕೊಡೋದಂತೆ, ಬೋನಾಪಾರ್ಟೆ ಮಹಾಶಯ 
ಸಿಂಹಾಸನದ ಮೇಲೆ ಕೂತು ಬೇರೆ ದೇಶಗಳ ಮನವಿ ಸ್ವೀಕರಿಸೋದಂತೆ, ಏನು 
ಅದ್ಭುತವಪ್ಪಾ! ಕೇಳಿದರೆ ಸಾಕು , ತಲೆ ಸುತ್ತಿ ಬರುತ್ತದೆ! ಜಗತ್ತಿಗೇ ಹುಚ್ಚು ಹಿಡಿದಿದೆ 
ಅಂತ ಕಾಣುತದೆ' ಅಂದಳು ಅನ್ನಾ ಪಾವೋವಾ, 

ಪ್ರಿನ್ಸ್ ಆಂಡೂ ನಕ್ಕ . ಅನ್ನಾ ಪಾಟ್ನಾಳ ಕಣ್ಣುಗಳನ್ನೇ ದಿಟ್ಟಿಸುತ್ತಾ ' ಈ 
ಕಿರೀಟ ದೈವದತ್ತ, ಮುಟ್ಟಲು ಬಂದವರಿಗೆ ದುಃಖ ಬಂದೆರಗಲಿ ಅಂದ' 
(ಕಿರೀಟಧಾರಣೆಯ ಸಮಯದಲ್ಲಿ ಬೋನಾಪಾರ್ಟೆ ಹೇಳಿದ ಮಾತು). ಆವಾಗ 
ಅದ್ಭುತವಾಗಿ ಕಾಣುತ್ತಾ ಇದ್ದನಂತೆ' ಅನ್ನುತ್ತಾ ಅದೇ ಮಾತುಗಳನ್ನು ಮತ್ತೆ 
ಇಟಾಲಿಯನ್‌ನಲ್ಲಿ ಹೇಳಿದ. 
- 'ಈ ಮಾತೇ ಕೊನೆಯ ಹನಿಯಾಗಿ ಅವನ ಪಾಪದ ಕೊಡ ತುಂಬಲಿ . 
ಅವನಿಂದ ಎಲ್ಲಕ್ಕೂ ಗಂಡಾಂತರ. ಯೂರೋಪಿನ ಸಾರ್ವಭೌಮರು ಇಂಥಾ 
ಆಸಾಮಿಯನ್ನ ಸಹಿಸಿಳ್ಳಲಾಗದು' ಅನ್ನಾ ಪಾವೋವಾ ಮಾತು ಮುಂದುವರೆಸಿದಳು. 
ಈ ' ಸಾರ್ವಭೌಮರು ?... ಮ್ಯಾಡಮ್... ಈ ಸಾರ್ವಭೌಮರು, ರಶಿಯಾದ 
ವಿಷಯ ಬಿಡಿ... ಮೆಡಂ ಹದಿನಾರನೆಯ ಲೂಯಿಗೆ ಮಾಡಿದ್ದೇನು, ಮತ್ತೆ ಮಹಾರಾಣಿ 
ಮೇಡಂ ಎಲಿಸಬೆತ್ತು ? ಊಹೂಂ' ವೈಕೌಂಟ್ ಗೌರವದ ದನಿಯಲ್ಲಿ, 
ಹತಾಶೆಯೊಂದಿಗೆ ಮಾತನಾಡಿದ, “ ಹೇಳುತೇನೆ ಕೇಳಿ, ಬೊರಬನ್‌ರಿಗೆ 
ಮೋಸಮಾಡಿದ್ದರಲ್ಲ ಅದನ್ನ ಉಣ್ಣುತ್ತಿದ್ದಾರೆ. ಯೂರೋಪಿನ ಚಕ್ರವರ್ತಿಗಳು ! 


00 


೮ ಹದಿನಾರನೆಯ ಶತಮಾನದ ಉತ್ತರಾರ್ಧದಲ್ಲಿದ್ದ ಫ್ರಾನ್ಸಿನ ಆಳುವ ವರ್ಗ, ಫ್ರೆಂಚ್ ಕ್ರಾಂತಿ 

ನಡೆಯುವವರೆಗೆ ಇವರೇ ಅಧಿಕಾರದಲ್ಲಿದ್ದರು. ಬೋರಬನ್ ರಾಜರು ತಮ್ಮ ನಿಷ್ಠುರ ವರ್ತನೆಗೆ 
ಕುಪ್ರಸಿದ್ದರಾಗಿದ್ದರು. ಹದಿನಾಲ್ಕನೆಯ ಲೂಯಿ ಮತ್ತು ಹದಿನಾರನೆಯ ಲೂಯಿ ಬೋರಬನ್ 
ರಾಜರು. 


೨೪ 

ಯುದ್ಧ ಮತ್ತು ಶಾಂತಿ 
ಅಧಿಕಾರ ಕಿತ್ತುಕೊಂಡವನಿಗೆ ಜೈಕಾರ ಹಾಕುವುದಕ್ಕೆ ದೂತರನ್ನು ಕಳುಹಿಸುತ್ತಿದಾರೆ ' 
ನಿಧಾನವಾಗಿ ವಿಶ್ವಾಸ ಕುದುರಿಸಿಕೊಳ್ಳುತ್ತಾ ಹೇಳಿದ. 

ತಿರಸ್ಕಾರದ ನಿಟ್ಟುಸಿರು ಬಿಡುತ್ತಾ ಕುಳಿತಿದ್ದ ಭಂಗಿಯನ್ನು ಬದಲಾಯಿಸಿಕೊಂಡ. 
ಅದುವರೆಗೂ ಹಿಡಿಕೆ ಇರುವ ಕನ್ನಡಕದ ಮೂಲಕ ವೈಕೌಂಟನನ್ನು ದಿಟ್ಟಿಸುತ್ತಾ 
ಕೂತಿದ್ದ ಪ್ರಿನ್ಸ್ ಹಿಪೊಲೈಟ್ ಇದ್ದಕ್ಕಿದ್ದ ಹಾಗೆ ಪೂರ್ತಿ ಪಕ್ಕಕ್ಕೆ ತಿರುಗಿದ. ಪುಟ್ಟ 
ರಾಜಕುಮಾರಿ ಕಸೂತಿ ಹಾಕುತ್ತಿದ್ದ ಸೂಜಿಯನ್ನು ಕೇಳಿ ಇಸಕೊಂಡ. ಮೇಜಿನ 
ಮೇಲೆ ಕೋಂಡ್ ಪೀಳಿಗೆಯವರ ಲಾಂಛನದ ರೇಖಾ ಚಿತ್ರವನ್ನು ಬಿಡಿಸಿದ. 
ವಿವರಿಸು ಎಂದು ಆಕೆ ಕೇಳಿದಳೋ ಅನ್ನುವ ಹಾಗೆ ಗಂಭೀರವಾಗಿ ವರ್ಣಿಸತೊಡಗಿದ. 
“ಕೋಂಡ್ ಪೀಳಿಗೆ ಲಾಂಛನದ ಚಿತ್ರ, ಇದು ಖಡ್ಡ ಮುಖ ' ಎಂದು ಫ್ರೆಂಚಿನಲ್ಲಿ 
ವಿವರಿಸಿದ. ಪ್ರಿನ್ಸೆಸ್ ಕೇಳಿಸಿಕೊಳ್ಳುತ್ತಾ ನಗುತ್ತಿದ್ದಳು. 
* 'ಬೋನಾಪಾರ್ಟೆ ಒಂದೇ ಒಂದು ವರ್ಷ ಸಿಂಹಾಸನದ ಮೇಲಿದ್ದರೂ ' 
ಸಾಕು...' ಎಲ್ಲ ಗೊತ್ತಿರುವವನ ಥರ ಮಾತಿನ ಎಳೆಯನ್ನು ಎತ್ತಿಕೊಂಡು ತನ್ನ 
ಮಾತನ್ನೇ ಹಿಡಿದು , ಯಾರನ್ನೂ ಲೆಕ್ಕಿಸದೆ ವೈಕೌಂಟ್ ಹೇಳಿದ, 'ಇನ್ನು ಒಂದೇ 
ಒಂದು ವರ್ಷ ಆಳಿದರೂ ಸಾಕು, ಎಲ್ಲಾ ಕುಲಗೆಟ್ಟು ಹೋಗುತ್ತದೆ. ರಾಜಕೀಯ 
ಕುತಂತ್ರ, ಹುನ್ನಾರ, ಹಿಂಸೆ, ಗಡೀಪಾರು, ಮರಣದಂಡನೆ ಇಡೀ ಸಮಾಜ, 
ಅಂದರೆ ಸಜ್ಜನ ಫ್ರೆಂಜ್ ಸಮಾಜ ಸರ್ವನಾಶವಾಗುತ್ತದೆ. ಆಮೇಲೆ...' 

- ವೈಕೌಂಟ್ ಭುಜ ಕೊಡವಿ ಕೈಗಳನ್ನು ಅಗಲಮಾಡಿದ, ಪಿಯರೆ ಆ ಮಾತಿಗೆ 
ಪ್ರತಿಯಾಗಿ ಏನೋ ಹೇಳಲು ಬಯಸಿದ್ದ. ಈ ಮಾತು ಅವನನ್ನು ಸೆಳೆದು 
ಕುತೂಹಲ ಕೆರಳಿಸಿತ್ತು. ಅವನ ಮೇಲೆ ನಿಗಾ ಇಟ್ಟಿದ್ದ ಅನ್ನಾ ಪಾವೋವಾ ಅಡ್ಡ 
ಮಾತನಾಡಿದಳು . 

“ ಫ್ರೆಂಚ್ ಜನ ತಮಗೆ ಇಷ್ಟಬಂದ ಸರ್ಕಾರವನ್ನು ಆಯ್ಕೆಮಾಡಿಕೊಳ್ಳಬಹುದು 
ಎಂದು ಚಕ್ರವರ್ತಿ ಅಲೆಕ್ಸಾಂಡರ್‌ ಘೋಷಣೆ ಮಾಡಿದಾರೆ,” ಚಕ್ರವರ್ತಿಯ ಬಗ್ಗೆ 
ಮಾತನಾಡುವಾಗಲೆಲ್ಲ ಅವಳ ಗಂಟಲು ತುಂಬಿ ಬರುತ್ತಿತ್ತು. ನನಗೆ ಗೊತ್ತು, ಈಗ 
ಅಧಿಕಾರವನ್ನು ಕಿತ್ತುಕೊಂಡಿರುವ ದುಷ್ಪನನ್ನು ಕಿತ್ತುಹಾಕಿದ ಮೇಲೆ ಫ್ರಾನ್ಸಿನ ಜನ 
ರಾಜರನ್ನೇ ಒಪ್ಪಿಕೊಳ್ಳುತ್ತಾರೆ..' ರಾಜನಿಷ್ಠನಾದ ಎಮಿಗ್ರೆಗೆ ಪ್ರಿಯವಾಗುವ ಹಾಗೆ 
ಮಾತನಾಡಿದಳು. 

- 'ನನಗೇನೋ ಅನುಮಾನ. ವೈಕೌಂಟ್ ಹೇಳಿದ್ದು ಸರಿ. ಎಲ್ಲ ಕೈ ಮೀರಿ 
ಹೋಗಿದೆ. ಕಾಲವನ್ನು ಹಿಂದೆ ತಳ್ಳುವುದಕ್ಕೆ ಆಗದು' ಅಂದ ಪ್ರಿನ್ಸ್ ಆಂಡೂ 

' ನಾನು ಕೇಳಿದ ಮಟ್ಟಿಗೆ ಶ್ರೀಮಂತವರ್ಗವೆಲ್ಲ ಬೋನಾಪಾರ್ಟೆಯ ಕಡೆಗೇ 
ಸೇರಿದೆಯಂತೆ' ಪಿಯರೆ ಕೆಂಪಾಗುತ್ತಾ ಅವರ ಮಾತುಕತೆಗೆ ಸೇರಿಕೊಂಡ. 

“ಬೋನಾಪಾರ್ಟೆಗೆ ನಿಷ್ಠರಾದವರು ಹಾಗೆ ಹೇಳುತ್ತಾರೆ. ಫ್ರೆಂಚ್ ಜನದ 


೨೫ 
ಸಂಪುಟ ೧ - ಸಂಚಿಕೆ ಒಂದು 
ಮನಸ್ಸಿನಲ್ಲಿ ಏನಿದೆ ತಿಳಿಯುವುದು ಕಷ್ಟವೇ ' ಪಿಯರೆಯತ್ತ ನೋಡದೆಯೇ 
ವೈಕೌಂಟ್ ಉತ್ತರಿಸಿದ. 

- “ಅದೂ ಬೋನಾಪಾರ್ಟೆ ಮಾತೇ ' ಎಂದು ಪ್ರಿನ್ಸ್ ಆಂಡೂ ವ್ಯಂಗ್ಯವಾಗಿ 
ನಕ್ಕ. ಅವನಿಗೆ ವೈಕೌಂಟ್ ಹಿಡಿಸಿರಲಿಲ್ಲ ಅನ್ನುವುದು ನಿಚ್ಚಳವಾಗಿತ್ತು. ಅವನ ಕಡೆಗೆ 
ನೋಡದೆ ಎಲ್ಲ ಮಾತುಗಳನ್ನೂ ಅವನಿಗೇ ಗುರಿ ಇಟ್ಟು ಆಡುತ್ತಿದ್ದ . 
* 'ಸುಖ ಸಮೃದ್ಧಿಯ ದಾರಿಯನ್ನು ತೋರಿದೆ ಯಾರಿಗೂ ಬೇಕಾಗಿಲ್ಲ' 
ಎಂದು ನೆಪೋಲಿಯನ್‌ನ ಮಾತುಗಳನ್ನು ಉದ್ದರಿಸಿದ. ಕೊಂಚ ಹೊತ್ತು ಸುಮ್ಮನಿದ್ದು 
' ಒಳಮನೆಯ ಬಾಗಿಲು ತೆರೆದೆ, ಜನದ ಗುಂಪು ನುಗ್ಗಿ ಬಂದಿತು' ಎಂದು ಮತ್ತೆ 
ಅವನದೇ ಮಾತು ಹೇಳಿದ. ' ಹಾಗನ್ನುವುದಕ್ಕೆ ಅವನಿಗೆ ಯಾವ ಸಮರ್ಥನೆಯಿತ್ತೋ 
ಗೊತ್ತಿಲ್ಲ' ಅಂದ ಪ್ರಿನ್ಸ್ ಆಂಡೂ 

* ಏನೇನೂ ಇರಲಿಲ್ಲ! ಡ್ಯೂಕನ ಕೊಲೆಯಾದಮೇಲೆ ನೆಪೋಲಿಯನ್ನನ 
ಕಟ್ಟಾ ಹಿಂಬಾಲಕರು ಕೂಡ ಅವನನ್ನು ನಾಯಕ ಅಂದುಕೊಳ್ಳುವುದು ಬಿಟ್ಟರು. 
ಅವನನ್ನು ನಾಯಕ ಅನ್ನುವವರು ಒಬ್ಬರೋ ಇಬ್ಬರೋ ಇದ್ದಾರು' ಅನ್ನಾಳತ್ತ 
ನೋಡುತ್ತಾ 'ಸ್ವರ್ಗದಲ್ಲಿ ಒಬ್ಬ ಹುತಾತ್ಮ ಹೆಚ್ಚಿಕೊಂಡ, ಭೂಮಿಯ ಮೇಲೆ ಒಬ್ಬ 
ನಾಯಕ ಕಮ್ಮಿ ಬಿದ್ದ' ಅಂದ. 
- ಅನ್ನಾ ಪಾವೋವಾ ಮತ್ತೆ ಉಳಿದವರು ವೈಕೌಂಟನ ಮಾತಿಗೆ ನಗುವಷ್ಟು 
ಅವಕಾಶವನ್ನೂ ಕೊಡದೆ ಪಿಯರೆ ಮತ್ತೆ ಮಾತು ತೆಗೆದ. ಅವನ ಮಾತು ಎಲ್ಲೆಲ್ಲಿಯೋ 
ಹೋಗುತ್ತದೆ ಎಂದು ಅನ್ನಾ ಪಾವೋಬ್ಬಾಳಿಗೆ ಗೊತ್ತಿದ್ದರೂ ತಡೆಯಲಾಗಲಿಲ್ಲ. 

'ಡ್ಯೂಕ್ ಎನ್‌ಹೈನ್‌ನ ಕೊಲೆ ರಾಜಕೀಯ ಅಗತ್ಯವಾಗಿತ್ತು. ಆ ಕೊಲೆಯ 
ಜವಾಬ್ದಾರಿ ಹೊರಲು ಹಿಂಜರಿಯಲಿಲ್ಲವಲ್ಲ ಅದು ನನ್ನ ಪ್ರಕಾರ ನೆಪೋಲಿಯನ್‌ನ 
ನಿಜವಾದ ದೊಡ್ಡತನ ತೋರುತದೆ' ಅಂದ ಪಿಯರೆ. 

“ಅಯ್ಯೋ ದೇವರೇ !' ಅನ್ನಾ ಪಾವೋವಾ ದಿಗಿಲಲ್ಲಿ ಪಿಸುಗುಟ್ಟಿದಳು. 

' ಮಿಸ್ಟರ್ ಪಿಯರೆ! ಕೊಲೆಯೇ ದೊಡ್ಡತನದ ಅಳತೆಯಾ?' ಪುಟ್ಟ 
ರಾಜಕುಮಾರಿ ನಗುತ್ತಾ ಕಸೂತಿಯನ್ನು ತನ್ನತ್ತ ಎಳೆದುಕೊಂಡಳು . 

ಎಲ್ಲ ಕಡೆಯಿಂದಲೂ ಓಹೋ , ಅಹಾ ಗಳು ಬಂದವು. 

'ಗ್ರೇಟ್!” ಎಂದು ಇಂಗ್ಲಿಷಿನಲ್ಲಿ ಅನ್ನುತ್ತಾ ಹಿಪೊಲೈಟ್ ಮೊಳಕಾಲು 
ತಟ್ಟಿಕೊಂಡ, ವೈಕೌಂಟ್ ಸುಮ್ಮನೆ ಭುಜ ಕೊಡವಿದ. 

ಪಿಯರೆ ಕನ್ನಡಕದ ಮೇಲಿನಿಂದ ದೃಷ್ಟಿ ಹಾಯಿಸಿ ತನ್ನ ಪ್ರೇಕ್ಷಕರು 
ಗಂಭೀರವಾಗಿ ನೋಡಿದ. ಅವನ ಧ್ವನಿಯಲ್ಲಿ ಹತಾಶೆಯಿತ್ತು. 

' ಯಾಕೆ ಹಾಗೆ ಹೇಳುತ್ತೇನೆಂದರೆ , ಕ್ರಾಂತಿಯಾದಮೇಲೆ ಜನರನ್ನು ಅರಾಜಕತೆಗೆ 
ನೂಕಿ ಬೋರಬನ್‌ವಂಶದವರೆಲ್ಲ ಓಡಿಹೋದರು . ಕ್ರಾಂತಿಯನ್ನು ಸರಿಯಾಗಿ 


೨೬ 

ಯುದ್ಧ ಮತ್ತು ಶಾಂತಿ 
ಅರ್ಥಮಾಡಿಕೊಂಡು ಮೀರಿ ನಿಲ್ಲುವ ಶಕ್ತಿ ಇದ್ದದ್ದು ನೆಪೋಲಿಯನ್ ಒಬ್ಬನಿಗೇ . 
ಆದ್ದರಿಂದಲೇ ಎಲ್ಲರ ಹಿತಕ್ಕಾಗಿ ಒಬ್ಬನನ್ನು ಕೊಲ್ಲುವುದಕ್ಕೆ , ಕೊಲೆಯ ಜವಾಬ್ದಾರಿ 
ಹೊರುವುದಕ್ಕೆ ಹಿಂಜರಿಯಲಿಲ್ಲ' ಅಂದ ಪಿಯರೆ. 

ಅನ್ನಾ ಪಾವೋವಾ ಎದ್ದು ನಿಂತು ಕೊಂಚ ಈ ಟೇಬಲ್ಲಿಗೆ ಬರುತ್ತೀರಾ ?' 
ಎಂದು ಪಿಯರೆಯನ್ನು ಕರೆದಳು. ಪಿಯರೆ ಉತ್ತರಿಸಲಿಲ್ಲ. ಉತ್ಸಾಹದಲ್ಲಿದ್ದ. 
- ' ಇಲ್ಲ. ನೆಪೋಲಿಯನ್ ದೊಡ್ಡಮನುಷ್ಯ. ಯಾಕೆಂದರೆ ಅವನು ಕ್ರಾಂತಿಯನ್ನೂ 
ಮೀರಿ ಬೆಳೆದ; ಕ್ರಾಂತಿ ಅತಿಗೆ ಹೋಗುವುದನ್ನ ತಡೆದ, ಅದರ ಒಳ್ಳೆಯ ಅಂಶಗಳನ್ನು , 
ಅಂದರೆ, ಸಮಾನತೆ, ವಾಕ್ ಸ್ವಾತಂತ್ರ , ಪತ್ರಿಕಾ ಸ್ವಾತಂತ್ರ ಗಳನ್ನು ಕಾಪಾಡಿದ. ಆ 
ಕಾರಣಕ್ಕಾಗಿಯೇ ಪರಮಾಧಿಕಾರ ಪಡೆದುಕೊಂಡ' ಅಂದ ಪಿಯರೆ. 

'ಸರಿ. ಆದರೆ ಆ ಅಧಿಕಾರವನ್ನ ಕೊಲೆಮಾಡುವುದಕ್ಕೆ ಬಳಸದೆ, ನ್ಯಾಯವಾದ 
ರಾಜನಿಗೆ ತಲುಪಿಸಿದ್ದಿದ್ದರೆ ಅವನನ್ನು ದೊಡ್ಡಮನುಷ್ಯ ಅನ್ನಬಹುದಾಗಿತ್ತು' ಅಂದ 
ವೈಕೌಂಟ್. 

- “ಅದಾಗುತ್ತಿರಲಿಲ್ಲ . ಬೋರಬನ್‌ಗಳನ್ನು ತೊಲಗಿಸಬೇಕೆಂದೇ ಜನ ಅವನಿಗೆ 
ಅಧಿಕಾರ ಕೊಟ್ಟಿದ್ದರು. ಅವನು ಮಹಾಪುರುಷ ಅನ್ನುವುದು ಜನಕ್ಕೆ ಗೊತ್ತಿತ್ತು. 
ಕ್ರಾಂತಿಯಂತೂ ನಿಜವಾಗಿ ಒಂದು ಮಹಾನ್ ಸಾಧನೆ.' ಪಿಯರೆ ಒತ್ತಿ ಹೇಳಿದ. 
ಹತಾಶ, ಸವಾಲೆಸೆಯುವಂಥ ಮಾತು ಅವನ ಉಕ್ಕುವ ಪ್ರಾಯವನ್ನೂ , 
ಗೊತ್ತಿರುವುದನ್ನೆಲ್ಲ ಒಮ್ಮೆಗೇ ಒದರಿಬಿಡಬೇಕೆಂಬ ಆಸೆಯನ್ನೂ ತೋರುತ್ತಿದ್ದವು. 

- “ಕ್ರಾಂತಿ, ರಾಜಹತ್ಯೆ ಇವು ಮಹಾ ಘಟನೆಗಳೇ ?... ಸರಿ, ಅದಾದಮೇಲೆ?... ಈ 
ಟೇಬಲ್ಲಿಗೆ ಬರುವ ಆಸೆ ಇಲ್ಲವೇ ?' ಅನ್ನಾ ಪಾವೋವಾ ಮತ್ತೊಮ್ಮೆ ಕೇಳಿದಳು. 
- 'ಆಹಾ, ರೂಸೋ ಹೇಳಿದ ಸಾಮಾಜಿಕ ಒಪ್ಪಂದ ' ವೈಕೌಂಟ್ ಕೀಟಲೆಯ 
ನಗು ನಕ್ಕು ಹೇಳಿದ. 
- ' ರಾಜ ಹತ್ಯೆಯಲ್ಲ, ನಾನು ಹೇಳುತ್ತಿರುವುದು ವಿಚಾರಗಳು.' 

- ' ಹೂಂ , ವಿಚಾರ! ದರೋಡೆ, ಕೊಲೆ, ರಾಜ ಹತ್ಯೆ ' ಎಂದು ಒಂದು 
ಕೊಂಕು ದನಿ ಸೇರಿಕೊಂಡಿತು. 

- “ಅವೆಲ್ಲಾ ಅತಿರೇಕ, ನಿಜವೇ . ಆದರೆ ಅವು ಕ್ರಾಂತಿಯ ಗುರಿಯಲ್ಲ. ಮಾನವ 
ಹಕ್ಕು, ಪೂರ್ವಾಗ್ರಹಗಳಿಂದ ವಿಮೋಚನೆ, ಸಮಾನತೆ, ಈ ಗಟ್ಟಿ ವಿಚಾರಗಳಿಗಾಗಿ 
ನೆಪೋಲಿಯನ್ ನಿಂತದ್ದು.' 


೯ ಜೀನ್ ಜಾಕೈಸ್ ರೂಸೋ ಬರೆದ ಕಾಂಟ್ರಾಕ್ಟ್ ಸೋಶಿಯಲ್ (೧೭೬೨) ಎಂಬ, ಸರ್ಕಾರ 

ಮತ್ತು ನಾಗರಿಕರನ್ನು ಕುರಿ ನಿಬಂಧ, ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ೧೮೭೯ರಲ್ಲಿ ನಡೆದ 
ಹಿಂಸೆಯ ಅತಿರೇಕಗಳಿಗೆ ಈ ಪುಸ್ತಕದ ವಿಚಾರಗಳೂ ಕಾರಣ ಎಂದು ಕೆಲವರು ತಿಳಿದಿದ್ದಾರೆ. 


ಸಂಪುಟ ೧ - ಸಂಚಿಕೆ ಒಂದು 

' ಸ್ವಾತಂತ್ರ್ಯ , ಸಮಾನತೆ' ವೈಕೌಂಟ್ ತಿರಸ್ಕಾರದ ಧ್ವನಿಯಲ್ಲಿ ಅಂದ. 
ಪಿಯರೆಯನ್ನು ಗಂಭೀರವಾಗಿ ಪರಿಗಣಿಸಿ ಈ ಯುವಕನ ಬಡಬಡಿಕೆ ಎಷ್ಟು 
ಮೂರ್ಖತನದ್ದು ಎಂದು ಸಾಬೀತು ಮಾಡಲು ಕೊನೆಗೂ ನಿರ್ಧರಿಸಿದವನ 
ಹಾಗೆ ಅರ್ಥವಿಲ್ಲದ ದೊಡ್ಡ ದೊಡ್ಡ ಪದಗಳು. ಎಂದೋ ಬೆಲೆಕಳೆದುಕೊಂಡವು. 
ಸ್ವಾತಂತ್ರ್ಯ , ಸಮಾನತೆ ಯಾರು ತಾನೇ ಬೇಡ ಅನ್ನುತ್ತೇವೆ? ನಮ್ಮ ಕರ್ತನೇ 
ಸ್ವಾತಂತ್ರ್ಯ , ಸಮಾನತೆ ಎಂದು ಹೇಳಿಕೊಟ್ಟು ಹೋದ. ಕ್ರಾಂತಿಯಾಯಿತು, ಜನಕ್ಕೆ 
ಸುಖ ಸಿಕ್ಕಿತಾ ? ಖಂಡಿತ ಇಲ್ಲ. ನಾವು ಬಯಸಿದ್ದು ಸ್ವಾತಂತ್ರ , ಬೋನಾಪಾರ್ಟೆ 
ಅದನ್ನು ನಾಶಮಾಡಿದ' . 

- ಪ್ರಿನ್ಸ್ ಆಂಡೂ ಎಲ್ಲರನ್ನೂ ನೋಡಿ ನಕ್ಕ - ಪಿಯರೆ, ವೈಕೌಂಟ್, 
ಆತಿಥೇಯಳು ಎಲ್ಲರ ಕಡೆಗೂ . 

ಪಿಯರಿ ಹಾಗೆ ಸಿಡಿದದ್ದು ನೋಡಿ ಅಷ್ಟೆಲ್ಲ ಚಾಲೂಕು ಇದ್ದ ಅನ್ನಾ 
ಪಾವೋವಾಕೂಡ ಒಂದು ಕ್ಷಣ ಹಿಮ್ಮೆಟ್ಟಿದಳು. ಆದರೆ ಪಿಯರೆಯ ಅನಾಚಾರದ 
ಮಾತಿನ ರೀತಿಯಿಂದ ವೈಕೌಂಟ್ ವಿಚಲಿತನಾಗಿಲ್ಲವೆಂದು ತಿಳಿದು, ಏನು ಮಾಡಿದರೂ 
ಪಿಯರೆಯನ್ನು ತಡೆಯಲು ಸಾಧ್ಯವಿಲ್ಲವೆಂದು ಅರಿತು , ವೈಕೌಂಟನ ಪರ 
ವಹಿಸಿಕೊಂಡು ಪಿಯರಿಯ ಮೇಲೆ ದಾಳಿಗೆ ಇಳಿದಳು. 

'ಪಿಯರೆ ಮಹಾಶಯರೇ , ಏನೂ ಅರಿಯದ ಕನೊಬ್ಬನನ್ನು , ಏನೇ 
ಆದರೂ ಅವನೂ ನರಜೀವವೇ ಅಲ್ಲವೇ , ಯಾವ ವಿಚಾರಣೆಯೂ ಇಲ್ಲದೆ ಆ 
ನಿಮ್ಮ ಮಹಾ ಪುರುಷ ಕೊಲ್ಲುವುದಕ್ಕೆ ಆಯಿತಲ್ಲ, ಇದಕ್ಕೇನು ಅನ್ನುತ್ತೀರಿ?' 
ಎಂದು ಕೇಳಿದಳು . 

' ಬ್ರುಮರೆ ಹದಿನೆಂಟಕ್ಕೆ೧೦ ಸ್ವಾಮಿಯವರು ಏನನ್ನುತ್ತಾರೆ ? ಮಹಾಪುರುಷರಿಗೆ 
ಸಲ್ಲದ ಮರೆ- ಮೋಸ, ಕಳ್ಳ - ಕಪಟದ ಕೆಲಸ ಅದು' ಅಂದ ವೈಕೌಂಟ್. 

- 'ಮತ್ತೆ ಆಫ್ರಿಕಾದಲ್ಲಿ ಖೈದಿಗಳನ್ನು ಕೊಂದಿದ್ದು ೧೧ ? ಅಬ್ಬಾ, ಭಯಂಕರ ' 
ಅನ್ನುತ್ತಾ ಪುಟ್ಟ ರಾಜಕುಮಾರಿ ಭುಜ ಕೊಡವಿದಳು . 

- “ನೀವು ಏನಾದರೂ ಹೇಳಿ, ಕೆಳಗಿಂದ ಮೇಲಕ್ಕೆ ಏರಿದವನು' ಅಂದ ಪ್ರಿನ್ಸ್ 
ಹಿಪೊಲೈಟ್. 


೧೦ ಬ್ರುಮರಿ ಹದಿನೆಂಟು: ಫ್ರೆಂಚ್ ಕ್ರಾಂತಿಯ ಕ್ಯಾಲೆಂಡರಿನ ಪ್ರಕಾರ ನವೆಂಬರ್ ೯ , ೧೭೯೯ . 
- ಅಂದು ನಡೆದ ದಂಗೆ ಯಶಸ್ವಿಯಾಗಿ ನೆಪೋಲಿಯನ್ ಪ್ರಥಮ ಕಾನುಲ್ ಪದವಿಯನ್ನು 
ಪಡೆದುಕೊಂಡ. ಬ್ರುಮರಿ ಅನ್ನುವುದು ಫ್ರೆಂಚ್ ಕ್ರಾಂತಿಯ ಕ್ಯಾಲೆಂಡರಿನಂತೆ ಅಕ್ಟೋಬರ್ 
೨೨ರಿಂದ ನವೆಂಬರ್ ೨೦ರ ವರೆಗಿನ ಎರಡನೆಯ ತಿಂಗಳು, ಈ ಮಾತಿಗೆ ಫ್ರೆಂಚ್ ಭಾಷೆಯಲ್ಲಿ 
ಕಾವಳ ಅನ್ನುವ ಅರ್ಥವೂ ಇದೆ. 
೧೧ ಸೆಪ್ಲೋಬರ್ ೧೭೯೯ರಲ್ಲಿ ನೆಪೋಲಿಯನ್ ಮೂರು ಸಾವಿರ ಟರ್ಕಿಷ್‌ ಖೈದಿಗಳನ್ನು ಕೊಲ್ಲಬೇಕೆಂದು 

ಆಜ್ಞೆಮಾಡಿದ. 


೨೮ 

ಯುದ್ಧ ಮತ್ತು ಶಾಂತಿ 
- ಯಾರ ಮಾತಿಗೆ ಉತ್ತರ ಹೇಳುವುದೆಂದು ತಿಳಿಯದೆ ಪಿಯರೆ ಮುಗುಳಗುತ್ತಾ 
ಎಲ್ಲರನ್ನೂ ನೋಡಿದ. ಅವನ ನಗು ಮಿಕ್ಕವರ ನಗುವಿನ ಹಾಗೆ ಇರಲಿಲ್ಲ. 
ಮಿಕ್ಕವರದು ನಿಜವಾದ ನಗುವಲ್ಲ. ಪಿಯರೆ ನಕ್ಕಾಗ ಅವನ ಗಂಭೀರವಾದ , ಸ್ವಲ್ಪ 
ವಿಷಾದವೂ ಇದ್ದಂತಿದ್ದ ಮುಖ ತಟ್ಟನೆ ಬದಲಾಗಿ ಬೇರೆಯದೇ 
ಮುಖವಾಗಿಬಿಡುತ್ತಿತ್ತು. ಬಾಲಿಶತನ , ಪೆಚ್ಚು ಅನ್ನಿಸುವ ಒಳ್ಳೆಯತನ , ಹೋಗಲಿ 
ಬಿಡಿ ಅನ್ನುವಂಥ ಭಾವಗಳು ಕಾಣಿಸಿಕೊಳ್ಳುತ್ತಿದ್ದವು. ಪಿಯರಿಯನ್ನು ಅದೇ 
ಮೊದಲನೆಯ ಬಾರಿಗೆ ನೋಡುತ್ತಿದ್ದ ವೈಕೌಂಟ್ ಈ ಜಾಕೊಬಿನ್೧೨ ಮಾತಿನಲ್ಲಿ 
ಭಯಂಕರನ ಹಾಗೆ ಕಂಡರೂ ನಿಜವಾಗಿ ಹಾಗಿಲ್ಲ ಎಂದುಕೊಂಡ. 

ಕೊಂಚ ಹೊತ್ತು ಯಾರೂ ಮಾತನಾಡಲಿಲ್ಲ. 

“ಎಲ್ಲರಿಗೂ ಒಟ್ಟಿಗೆ ಉತ್ತರ ಹೇಳಬೇಕೆ ಅವನು ? ಇರಲಿ , ಮುತ್ಸದ್ದಿಯೊಬ್ಬನ 
ಕೆಲಸಗಳಲ್ಲಿ ಅವನು ಖಾಸಗಿಯಾಗಿ ಏನು ಮಾಡುತ್ತಾನೆ, ಸೇನೆಯ ಮುಖಂಡನಾಗಿ 
ಅಥವಾ ಚಕ್ರವರ್ತಿಯಾಗಿ ಏನುಮಾಡುತ್ತಾನೆ ಅದನ್ನೆಲ್ಲ ಬೇರೆಬೇರೆಯಾಗಿಯೇ 
ನೋಡಬೇಕು ಅನಿಸುತ್ತದಪ್ಪಾ ನನಗೆ' ಅಂದ ಪ್ರಿನ್ಸ್ ಆಂಡ್ರ 

'ಹೌದು, ಹೌದು!' ತನ್ನ ಪಕ್ಷ ವಹಿಸಿ ಮಾತನಾಡುವವರೊಬ್ಬರು ಸಿಕ್ಕರೆಂದು 
ಪಿಯರೆಗೆ ಸಂತೋಷವಾಗಿತ್ತು. 

- 'ಅರ್ಕೊಲಾ ಸೇತುವೆಯಮೇಲೆ ನೆಪೋಲಿಯನ್ ಮಹಾಪುರುಷ, ಮತ್ತೆ 
ಜಾಫ್ಲಾ ಆಸ್ಪತ್ರೆಯಲ್ಲಿ ಪ್ಲೇಗು ಬಂದವರ ಕೈ ಕುಲುಕುವಾಗ ಕೂಡ ಮಹಾಪುರುಷ೧೩ , 
ಹಾಗೇ ...ಸರಿ, ಒಪ್ಪುವುದಕ್ಕೆ ಆಗದ ಕೆಲಸಗಳೂ ಇವೆ' ಅಂದ ಪ್ರಿನ್ಸ್ ಆಂಡೂ 

ಪಿಯರೆಯ ಮಾತುಗಳಿಂದ ಹುಟ್ಟಿದ ಕಸಿವಿಸಿಯನ್ನು ಕಡಮೆ 
ಮಾಡುವುದಕ್ಕಾಗಿಯೇ ಆಂಡೂ ಹಾಗೆ ಹೇಳಿದ್ದ . ಹೊರಡೋಣ ಎಂದು ತನ್ನ 
ಹೆಂಡತಿಗೆ ಸೂಚನೆ ಕೊಟ್ಟ. 
* ಪ್ರಿನ್ಸ್ ಹಿಪೊಲೈಟ್ ಇದ್ದಕ್ಕಿದ್ದಂತೆ ಎದ್ದು ನಿಂತು ದಯವಿಟ್ಟು ಒಂದು ನಿಮಿಷ 
ಕುಳಿತುಕೊಳ್ಳಿ ಎಂಬಂತೆ ಸನ್ನೆಮಾಡಿದ. ಎಲ್ಲರೂ ಮತ್ತೆ ಕುಳಿತಮೇಲೆ ಮಾತು 
ಶುರುಮಾಡಿದ: 

' ಹ್ವಾ ..ಇವತ್ತು ಮಾಸ್ಕೋದಲ್ಲಿ ತಮಾಷೆಯ ಕತೆ ಕೇಳಿದೆ. ನಿಮಗೆ ಹೇಳಬೇಕು. 


೧೨ ಫ್ರೆಂಚ್ ಕ್ರಾಂತಿಕಾರಿ ಸಂಘಟನೆಗಳ ಸದಸ್ಯರನ್ನು ಕುರಿತ ಜನಪ್ರಿಯ ಹೆಸರು. ಈ ಕ್ರಾಂತಿಕಾರಿಗಳು 
- ಜಾಕೊಬಿನ್ ಕಾನ್ವೆಂಟಿನ ಸಭಾಂಗಣದಲ್ಲಿ ಸೇರುತ್ತಿದ್ದುದರಿಂದ ಆ ಹೆಸರು. 
೧೩ ಅರ್ಕೊಲಾ ಸೇತುವೆಯಮೇಲೆ ... ಪ್ಲೇಗು ಬಂದವರ ಕೈ ಕುಲುಕುವಾಗ: ೧೭೯೬ರಲ್ಲಿ 

ಆಸ್ಟಿಯಾದ ವಿರುದ್ದ ಫ್ರೆಂಚ್ ಸೈನ್ಯವನ್ನು ಮುನ್ನಡೆಸುತ್ತಾ ನೆಪೋಲಿಯನ್ ಅರ್ಕೊಲಾದ 
ಸೇತುವೆಯ ಮೇಲೆ ತಾನೇ ಧ್ವಜವನ್ನು ಹಿಡಿದು ಮುನ್ನುಗ್ಗಿ ಜೀವನವನ್ನು ಅಪಾಯಕ್ಕೆ ಒಡ್ಡಿಕೊಂಡಿದ್ದ. 
ಅದೇ ವರ್ಷ ಜಾಪ್ಪಾದಲ್ಲಿ ಪ್ಲೇಗು ರೋಗಿಗಳಿರುವ ಆಸ್ಪತ್ರೆಗೆ ಭೇಟಿಕೊಟ್ಟಿದ್ದ . 


೨೯ 


ಸಂಪುಟ ೧ - ಸಂಚಿಕೆ ಒಂದು 
ವೈಕೌಂಟ್, ದಯವಿಟ್ಟು ಕ್ಷಮಿಸಿ, ನಾನು ರಶಿಯನ್‌ನಲ್ಲೇ ಹೇಳುತ್ತೇನೆ. ಇಲ್ಲದಿದ್ದರೆ 
ಕಥೆಯ ಸ್ವಾರಸ್ಯ ಹೊರಟು ಹೋಗುತ್ತದೆ' ಅಂದ ಹಿಪೊಲೈಟ್. ಫ್ರೆಚ್ ಮಾತನಾಡುವ 
ಮನುಷ್ಯ ರಶಿಯಾದಲ್ಲಿ ಒಂದು ವರ್ಷ ಕಳೆದಮೇಲೆ ಹೊಸ ಭಾಷೆಯನ್ನು 
ಆಡುವ ರೀತಿಯನ್ನು ಅಣಕಿಸುತ್ತಾ ಮಾತನಾಡಿದ ಪ್ರಿನ್ಸ್ ಹಿಪೊಲೈಟ್ . ಕಥೆ 
ಕೇಳಲೇಬೇಕೆಂದು ಪ್ರಿನ್ಸ್ ಒತ್ತಾಯಿಸಿದ್ದರಿಂದ ಎಲ್ಲರೂ ಕೂತು ಕುತೂಹಲದಿಂದ 
ಕಾಯುತ್ತಿದ್ದರು. 

' ಮಾಸ್ಕೋದಲ್ಲಿ ಒಬ್ಬ ಹೆಂಗಸಿದ್ದಳು. ಯಾರೋ ಒಬ್ಬಳು ಮಹಿಳೆ ಅನ್ನಿ . 
ಬಹಳ ಜಿಪುಣಿ. ಅವಳ ಸಾರೋಟಿನ ಹಿಂದೆ ಇಬ್ಬರು ದಡೂತಿ ಸೇವಕರು 
ಯಾವಾಗಲೂ ಇರಬೇಕಾಗಿತ್ತು. ತುಂಬಾ ಎತ್ತರದವರು. ಅವಳ ಟೇಸ್ಸು ಅದು. 
ಮತ್ತೆ ಅವಳಿಗೆ ಒಬ್ಬ ಆಪ್ತ ಸಖಿ ಇದ್ದಳು. ಅವಳೂ ಎತ್ತರ ಇದ್ದಳು. ಈ ಮಹಿಳೆ 
ತನ್ನ ಆಪ್ತ ಸಖಿಗೆ ಹೇಳಿದಳು...' 
* ಪ್ರಿನ್ಸ್ ಓಪೊಲೈಟ್ ಮಾತು ನಿಲ್ಲಿಸಿದ. ಕಥೆ ಜ್ಞಾಪಿಸಿಕೊಳ್ಳುವುದಕ್ಕೆ ಕಷ್ಟಪಡುತ್ತಿದ್ದ . 

- “ ಅವಳು ಅಂದಳು , ಏನು ಅಂದಳು ಅಂದರೆ... ಹಾಂ ... ಹುಡುಗೀ , 
ಯೂನಿಫಾರಂ ಹಾಕಿಕೋ , ನನ್ನ ಸಾರೋಟಿನ ಹಿಂದೆ ಬಾ , ಯಾರದೋ ಮನೆಗೆ 
ಹೋಗಬೇಕಾಗಿದೆ ಅಂದಳು.” 

ಕೇಳುತ್ತಿದ್ದ ಜನ ನಗುವ ಮೊದಲೇ ಪ್ರಿನ್ಸ್ ಹಿಪೊಲೈಟ್‌ಗೆ ಫಕ್ಕನೆ ನಗು 
ಬಂದು ಕಷ್ಟಪಟ್ಟು ತಡೆದುಕೊಂಡ. ಇದರಿಂದ ಕಥೆಯ ಪರಿಣಾಮ ಆಗಬೇಕಾದಷ್ಟು 
ಆಗಲಿಲ್ಲ. ಆದರೂ ಹಿರಿಯಾಕೆ ಮತ್ತು ಅನ್ನಾ ಪಾವೋವಾ ಸಭ್ಯತೆಯ ಸಲುವಾಗಿ 
ಮುಗುಳಕ್ಕರು. 
- 'ಸರಿ, ಆ ಅಪ್ತ ಸಖಿ ಗಂಡಸರ ಉಡುಪು ತೊಟ್ಟು ಹೊರಟಳಾ... ದಾರಿಯಲ್ಲಿ 
ಜೋರಾಗಿ, ತುಂಬಾ ಜೋರಾಗಿ ಗಾಳಿ ಬೀಸಿತು. ಆವಾಗ ಏನಾಯಿತಪ್ಪಾ ಅಂದರೆ 
ಆ ಅಪ್ತಸಖಿ ಇದ್ದಳಲ್ಲ, ಅವಳ ತಲೆಯಮೇಲಿದ್ದ ಕ್ಯಾಪು ಹಾರಿ ಹೋಗಿ ಅವಳ 
ಕೂದಲೆಲ್ಲ ಹರಡಿಕೊಂಡುಬಿಟ್ಟಿತು.' 

* ಅಷ್ಟು ಹೇಳಿದವನೆ ನಗು ತಡೆಯಲಾರದೆ ಹೋದ. ಜೋರಾಗಿ ನಗುತ್ತಾ, 
ನಡು ನಡುವೆ ಸುದಾರಿಸಿಕೊಂಡು 'ಇಡೀ ಜಗತ್ತಿಗೆ ಅವಳು ಗಂಡಸು ಸೇವಕ 
ಅಲ್ಲ, ಹುಡುಗಿ ಎಂದು ಗೊತ್ತಾಗಿಹೋಯಿತು...' ಎಂದು ಹೇಗೋ ಹೇಳಿದ. . 

ಅಷ್ಟೇ ಕಥೆ, ಅದನ್ನು ಯಾಕೆ ಹೇಳಿದನೋ , ಯಾಕೆ ರಶಿಯನ್‌ನಲ್ಲೇ 
ಹೇಳಿದನೋ ಯಾರಿಗೂ ಗೊತ್ತಾಗಲಿಲ್ಲ. ಆದರೂ ಅನ್ನಾ ಪಾವೋವಾ ಮತ್ತು 
ಅವಳ ಅತಿಥಿಗಳು ಪಿಯರೆಯ ತೂಕ ತಪ್ಪಿದ ಆಸ್ಫೋಟಕ ಮಾತುಗಳ ಪ್ರಸಂಗವನ್ನು 
ಹೀಗೆ ತಮಾಷೆಯ ಕಥೆ ಹೇಳಿ ಮುಗಿಸಿದ ಪ್ರಿನ್ಸ್ ಹಿಪೊಲೈಟ್‌ನ ಜಾಣ್ನೆಯನ್ನು 
ಮೆಚ್ಚಿಕೊಂಡರು. ಈ ಕಥಾ ಪ್ರಸಂಗವಾದಮೇಲೆ ಸಣ್ಣ ಸಣ್ಣ ಗುಂಪುಗಳಲ್ಲಿ ಮುಂದಿನ 


೩೦ 


ಈ ಯುದ್ಧ ಮತ್ತು ಶಾಂತಿ 
ಬಾಲ್ ಡಾನ್ನು ಎಲ್ಲಿ , ಕಳೆದ ಬಾಲ್ ಡಾನ್ಸು ಹೇಗಿತ್ತು, ಯಾವ ನಾಟಕ ಇದೆ, 
ಯಾರು ಯಾರನ್ನ ಎಲ್ಲಿ ಹೇಗೆ ಯಾವಾಗ ಮತ್ತೆ ಭೇಟಿ ಮಾಡಬೇಕು ಇತ್ಯಾದಿ 
ಮಾತು ನಡೆಯಿತು. 


- ಪಾರ್ಟಿ ತುಂಬ ಚೆನ್ನಾಗಿತ್ತು ಎಂದು ಅನ್ನಾ ಪಾವೋಬ್ಬಾಳಿಗೆ ಧನ್ಯವಾದ 
ಹೇಳಿ ಅತಿಥಿಗಳೆಲ್ಲ ಹೊರಟರು. 
- ಪಿಯರಿ ಒಡ್ಡ, ಎತ್ತರವಾಗಿ, ದಪ್ಪಗೆ ಇದ್ದ . ಕೈಗಳು ತುಂಬ ದೊಡ್ಡದಾಗಿ 
ಕೆಂಪಗೆ ಇದ್ದವು. ದಿವಾನಖಾನೆಗೆ ಹೇಗೆ ಬರಬೇಕು ಅನ್ನುವುದೇ ಗೊತ್ತಿಲ್ಲ, ಹೇಗೆ 
ಹೋಗಬೇಕು ಅನ್ನುವುದು ಗೊತ್ತೇ ಇಲ್ಲ , ಹೊರಡುವಾಗ ಒಳ್ಳೆಯ 
ಮಾತಾಡುವುದಂತೂ ತಿಳಿದೇ ಇಲ್ಲ ಎಂದು ಅವನ ಬಗ್ಗೆ ಆಡಿಕೊಳ್ಳುತ್ತಿದ್ದರು. 
ಜೊತೆಗೆ ಅವನ ಮನಸೂ ಎಲ್ಲೋ ಇರುತ್ತಿತ್ತು. ಹೊರಡುವುದಕ್ಕೆ ಎದ್ದ. ತನ್ನ 
ಹ್ಯಾಟಿನ ಬದಲು ಜನರಲ್ ಒಬ್ಬನ ಸೊಗಸಾದ ಗರಿಗಳಿದ್ದ ಮೂರುಮೂಲೆಯ 
ಹ್ಯಾಟು ಎತ್ತಿಕೊಂಡ. ಜನರಲ್ ವಾಪಸ್ಸು ಕೇಳುವ ತನಕ ಗರಿಗಳನ್ನು ಕೀಳುತ್ತಾ 
ಇದ್ದ . ಅವನೆಲ್ಲೋ ಅವನ ಮನಸೆಲ್ಲೋ ಅನ್ನುವ ಹಾಗೆ ಇದ್ದರೂ ದಿವಾನಖಾನೆಗೆ 
ಹೊಗುವ, ಹೊಕ್ಕ ಮೇಲೆ ಸರಿಯಾಗಿ ಮಾತನಾಡಲಾಗದಿರುವ ದೌರ್ಬಲ್ಯವನ್ನು 
ಅವನ ಒಳ್ಳೆಯತನ, ಸರಳತೆ, ಸೌಜನ್ಯದ ಭಾವಗಳು ಸರಿದೂಗುತ್ತಿದ್ದವು. ಅನ್ನಾ 
ಪಾವೋವಾ ಅವನ ಕಡೆಗೆ ತಿರುಗಿದಳು. ಕ್ರಿಶ್ಚಿಯನ್ ವಿನಯದಿಂದ ಅವನ ಮಾತಿನ 
ಆಸ್ಫೋಟವನ್ನು ಮನ್ನಿಸಿ, ತಲೆದೂಗಿದಳು. ಮತ್ತೆ ಬರುತೀರಿ ತಾನೇ ಡಿಯರ್ 
ಪಿಯರೆ. ಇನ್ನೊಂದು ಸಾರಿ ಬರುವ ಹೊತ್ತಿಗೆ ನಿಮ್ಮ ಅಭಿಪ್ರಾಯ ಬದಲಾಗಿರುತ್ತವೆ 
ಅಂದುಕೊಂಡಿದ್ದೇನೆ,' ಅಂದಳು. 
- ಅವಳು ಅಂದಳು, ಅವನು ಉತ್ತರ ಕೊಡಲಿಲ್ಲ. ತಲೆಬಾಗಿ ತನ್ನ ಇನ್ನೊಂದು 
ಮುಗುಳಗೆಯನ್ನು ಎಲ್ಲರಿಗೂ ತೋರಿದ, ಅಷ್ಟೆ . ' ಅಭಿಪ್ರಾಯ , ವಿಚಾರ, ಏನೇ 
ಇರಲಿ, ನನ್ನ ಮನಸ್ಸೆಷ್ಟು ಒಳ್ಳೆಯದು ನೋಡಿ' ಅನ್ನುತಿತ್ತು ಆ ನಗು. ಅದಕ್ಕೆ 
ಯಾರೂ , ಅನ್ನಾಪಾವೋವಾಕೂಡ ಹೌದು ಅಂತಲ್ಲದೆ ಇಲ್ಲ ಅನ್ನಲು ಆಗುತ್ತಿರಲಿಲ್ಲ. 
ಈ ಪ್ರಿನ್ಸ್ ಆಂಡೂ ಹಾಲ್‌ಗೆ ಬಂದಿದ್ದ. ನಿಲುವಂಗಿ ಹಿಡಿದು ಸಿದ್ದವಾಗಿದ್ದ 
ಸೇವಕನತ್ತ ತೋಳು ತಿರುಗಿಸಿಕೊಂಡು ನಿಂತಿರುವಾಗ ತನ್ನ ಹೆಂಡತಿ ಪ್ರಿನ್ಸ್ 
ಹಿಪೊಲೈಟ್‌ನ ಜೊತೆಯಲ್ಲಿ ಹರಟೆ ಹೊಡೆಯುತ್ತಿರುವುದನ್ನು ಉದಾಸೀನನಾಗಿ 
ಕೇಳಿಸಿಕೊಳ್ಳುತ್ತಿದ್ದ. ಅವಳೊಂದಿಗೇ ಬಂದಿದ್ದ ಪ್ರಿನ್ಸ್ ಹಿಪೊಲೈಟ್ ಬಸುರಿಯಾಗಿದ್ದ 
ಪುಟ್ಟ ರಾಜಕುಮಾರಿಯ ಪಕ್ಕದಲ್ಲೇ ನಿಂತು ಮುದ್ದಾಗಿ ಕಾಣುತ್ತಿದ್ದ ಅವಳನ್ನು 
ಹಿಡಿಕೆ ಇರುವ ಕನ್ನಡಕದ ಮೂಲಕ ದಿಟ್ಟಿಸುತ್ತಿದ್ದ. 
* ಅನ್ನಾ ಪಾವೋವಾಳಿಂದ ಬೀಳ್ಕೊಳ್ಳುತ್ತಾ “ನೀವು ಒಳಗೆ ಹೋಗಿ ಆನೆಟ್ , 


೩೧ 
ಸಂಪುಟ ೧ - ಸಂಚಿಕೆ ಒಂದು 
ನೆಗಡಿ ಆಗಬಹುದು' ಅಂದಳು ಪುಟ್ಟ ರಾಜಕುಮಾರಿ . ನೀವು ಹೇಳಿದ್ದು ಆಯಿತು 
ಅಂದುಕೊಳ್ಳಿ' ಮೆಲ್ಲಗೆ ಪಿಸುಗುಟ್ಟಿದಳು. 
- ಅನತೋಲ್ ಮತ್ತು ಪುಟ್ಟ ರಾಜಕುಮಾರಿಯ ನಾದಿನಿಗೆ ತಾನು 
ಕುದುರಿಸುತ್ತಿರುವ ಸಂಬಂಧದ ಬಗ್ಗೆ ಅನ್ನಾ ಪಾವೋವಾ ಅದು ಹೇಗೋ 
ಅವಕಾಶಮಾಡಿಕೊಂಡು ಲಿಸಿಯೊಡನೆ ಮಾತಾಡಿದ್ದಳು. 

' ನಿನ್ನನ್ನೇ ನಂಬಿಕೊಂಡಿದ್ದೇನೆ, ನನ್ನಮ್ಮಾ, ಅವಳಿಗೆ ಕಾಗದ ಬರೆದು ನೋಡು, 
ಅವಳ ತಂದೆಗೆ ಈ ಸಂಬಂಧ ಹೇಗೆ ಅನಿಸುತ್ತದೆ ಅದನ್ನ ನನಗೆ ತಿಳಿಸು,' ಎಂದು 
ಅವಳಷ್ಟೇ ಸಣ್ಣ ದನಿಯಲ್ಲಿ ಹೇಳಿ ಗುಡ್ ಬೈ ' ಅಂದು ಹೊರಟು ಹೋದಳು. 

ಅವಳು ಹೋದಮೇಲೆ ಪ್ರಿನ್ಸ್ ಹಿಪೊಲೈಟ್ ಆ ಜಾಗಕ್ಕೆ ಬಂದು ಪುಟ್ಟ 
ರಾಜಕುಮಾರಿಯ ಮುಖ ತಾಗುಲುವಷ್ಟು ಬಗ್ಗಿ ಅರ್ಧ ಪಿಸುದನಿಯಲ್ಲಿ ಮಾತಾಡಲು 
ಶುರುಮಾಡಿದ . 

ಇಬ್ಬರು ಸೇವಕರು, ಪುಟ್ಟ ರಾಜಕುಮಾರಿಯ ಸೇವಕ ಒಬ್ಬ , ಪ್ರಿನ್ಸ್ ಹಿಪೊಲೈಟ್‌ನ 
ಸೇವಕ ಇನ್ನೊಬ್ಬ, ಕೈಯಲ್ಲಿ ಶಾಲು, ನಿಲುವಂಗಿ ಹಿಡಿದು ನಿಂತುಕೊಂಡು ತಮ್ಮ 
ಒಡೆಯರ ಮಾತು ಮುಗಿಯುವುದನ್ನೇ ಕಾಯುತ್ತಿದ್ದರು. ಫ್ರೆಂಚ್ ಮಾತು ಅವರಿಗೆ 
ತಿಳಿಯುತ್ತಿರಲಿಲ್ಲ. ತಿಳಿಯುತ್ತಿದೆ ಅನ್ನುವ ಹಾಗೆ ಕೇಳಿಸಿಕೊಳ್ಳುತ್ತಾ, ಆದರೂ ತಮಗೆ 
ತಿಳಿಯಿತು ಅನ್ನುವುದನ್ನು ತೋರಿಸಿಕೊಳ್ಳುವುದಿಲ್ಲ ಅನ್ನುವ ಹಾಗೆ ಇತ್ತು ಅವರ 
ಮುಖಗಳು. ಪುಟ್ಟ ರಾಜಕುಮಾರಿ ಯಾವಾಗಲೂ ಮಾಡುವ ಹಾಗೆ ಮಾತಾಡುವಾಗ 
ಮುಗುಳಗುತ್ತಾ, ಕೇಳಿಸಿಕೊಳ್ಳುವಾಗ ಜೋರಾಗಿ ನಗುತ್ತಾ ಇದ್ದಳು. 

'ನಾನು ರಾಯಭಾರಿಯ ನಿವಾಸಕ್ಕೆ ಹೋಗದೆ ಇದ್ದದ್ದೇ ಒಳ್ಳೆಯದಾಯಿತು. 
ಅಲ್ಲಿ ಬೋರ್ಹೊಡೆಯುತ್ತದೆ. .ಇವತ್ತು ಸಾಯಂಕಾಲದ ಈ ಪಾರ್ಟಿ ಚೆನ್ನಾಗಿತ್ತಲ್ಲವಾ? 
ಖುಷಿ ಆಯಿತು!' ಅನ್ನುತ್ತಿದ್ದ ಪ್ರಿನ್ಸ್ ಹಿಪೊಲೈಟ್. 

' ರಾಯಭಾರಿ ನಿವಾಸದಲ್ಲಿ ಬಾಲ್ ಡಾನ್ನು ಚೆನ್ನಾಗಿರುತ್ತದೆ ಅನ್ನುತ್ತಾರೆ, 
ಪುಟ್ಟ ರಾಜಕುಮಾರಿ ನವಿರು ಕೂದಲ ತುಟಿ ಮೇಲೆತ್ತಿ, ' ಚೆನ್ನಾಗಿರುವ ನಮ್ಮ 
ಸುಂದರಿಯರೆಲ್ಲ ಬಂದಿರುತ್ತಾರೆ' ಅಂದಳು. . 

' ಎಲ್ಲರೂ ಅಲ್ಲ. ನೀವು ಹೋಗಿಲ್ಲವಲ್ಲ! ಪ್ರಿನ್ಸ್ ಹಿಪೊಲೈಟ್‌ ಖುಶಿಯಾಗಿ 
ನಗುತ್ತಾ ಹೇಳಿದ . ಆಮೇಲೆ ಅವಳ ಸೇವಕನ ಕೈಯಲ್ಲಿದ್ದ ಶಾಲು ಕಿತ್ತುಕೊಂಡು, 
ಅವನನ್ನು ಪಕ್ಕಕ್ಕೆ ದಬ್ಬಿ , ತಾನೇ ಪುಟ್ಟ ರಾಜಕುಮಾರಿಯ ಭುಜದಮೇಲೆ ಶಾಲು 
ಹೊದ್ದಿಸಿದ. ಕಕ್ಕಬಿಕ್ಕಿಯಾಗಿದ್ದನೋ ಅಥವಾ ಬೇಕು ಅಂತಲೇ ಮಾಡಿದನೋ 
( ಯಾರಿಗೆ ಗೊತ್ತು) ಶಾಲು ಹೊದಿಸಿದ ಮೇಲೂ ಅವಳನ್ನು ತೆಕ್ಕೆಗೆ ತೆಗೆದುಕೊಳ್ಳುವ 
ಹಾಗೆ ಕೈ ಸ್ವಲ್ಪ ಹೊತ್ತು ಹಾಗೇ ಇಟ್ಟುಕೊಂಡಿದ್ದ . 

ಅವಳು ಗಂಭಿರವಾಗಿ, ಇನ್ನೂ ಮುಗುಳ್ಳಗುತ್ತಾ, ಕೊಸರಿ ಬಿಡಿಸಿಕೊಂಡು, 


ಯುದ್ಧ ಮತ್ತು ಶಾಂತಿ 
ಗಂಡನ ಕಡೆ ನೋಡಿದಳು. ಪ್ರಿನ್ಸ್ ಆಂಡೂ ಕಣ್ಣು ಮುಚ್ಚಿಕೊಂಡಿದ್ದ. ಆಯಾಸವಾಗಿ 
ನಿದ್ರೆ ಬಂದಹಾಗಿತ್ತು. 

ಕಣ್ಣು ತೆರೆದು, ಅವಳಾಚೆಗೆ ಎಲ್ಲೋ ದೃಷ್ಟಿ ನೆಟ್ಟು “ಆಯಿತಾ, 
ಹೊರಡೋಣವಾ?' ಅಂದ. 

- ಪ್ರಿನ್ಸ್ ಹಿಪೊಲೈಟ್ ಆತುರಾತುರವಾಗಿ ತನ್ನ ನಿಲುವಂಗಿ ತೊಟ್ಟುಕೊಂಡ. 
ಫ್ಯಾಶನ್ನಿನಲ್ಲಿ ಕೊನೆಯ ಮಾತು ಅನ್ನುವ ಹಾಗೆ ಇದ್ದ ಉದ್ದ ಕೋಟು ಅವನ 
ಹಿಮ್ಮಡಿಯವರೆಗೆ ಬರುತ್ತಿತ್ತು . ಅದು ಹೆಜ್ಜೆಗಳಿಗೆ ತೊಡರಿಕೊಳ್ಳುತ್ತಾ ಆಗಾಗ 
ಮುಗ್ಗರಿಸುತ್ತಾ ಮೆಟ್ಟಿಲಿಳಿದುಕೊಂಡು ಪುಟ್ಟ ರಾಜಕುಮಾರಿಯ ಹಿಂದೆ ಓಡಿದ. 
ಸೇವಕನೊಬ್ಬ ಆಕೆ ಸಾರೋಟು ಹತ್ತಲು ಸಹಾಯಮಾಡುತ್ತಿದ್ದ . 'ಗುಡ್ ಬೈ 
ಪ್ರಿನ್ಸೆಸ್ ' ಪ್ರಿನ್ಸ್ ಹಿಪೊಲೈಟ್ ಚೀರಿದ. ಕಾಲು ಮುಗ್ಗರಿಸಿದ ಹಾಗೆಯೇ ಅವನ 
ನಾಲಗೆಯೂ ಎಡವುತ್ತಿತ್ತು. 
- ಪಿನ್ನೆಸ್ ಗೌನನ್ನು ಸ್ವಲ್ಪ ಎತ್ತಿ ಹಿಡಿದು ಕತ್ತಲು ತುಂಬಿದ ಸಾರೋಟಿನಲ್ಲಿ 
ಸರಿಯಾಗಿ ಕೂರುತ್ತಿದ್ದಳು. ಅವಳ ಗಂಡ ಸೊಂಟಕ್ಕೆ ಬಿಗಿದುಕೊಂಡಿದ್ದ ಕತ್ತಿಯನ್ನು 
ಸರಿಮಾಡಿಕೊಳ್ಳುತ್ತಿದ್ದ. ಸಹಾಯಮಾಡುವ ನೆಪದಲ್ಲಿ ಪ್ರಿನ್ಸ್ ಹಿಪೊಲೈಟ್ ಎಲ್ಲರಿಗೂ 
ತೊಡರಾಗಿದ್ದ. 

ಸ್ವಲ್ಪ ದಾರಿಬಿಡುತೀರಾ' ಪ್ರಿನ್ಸ್ ಆಂಡೂ ತಣ್ಣನೆಯ ಅಸಹನೆಯ ಧ್ವನಿಯಲ್ಲಿ 
ದಾರಿಗಡ್ಡ ನಿಂತಿದ್ದ ಪ್ರಿನ್ಸ್ ಹಿಪೊಲೈಟ್‌ಗೆ ಹೇಳಿದ , ರಶಿಯನ್‌ನಲ್ಲಿ. 
- ಬೆಚ್ಚನೆಯ ಸ್ನೇಹ ತುಂಬಿದ ಧ್ವನಿಯಲ್ಲಿ ಪಿಯರೆಗೆ ಕಾಯುತ್ತಾ ಇರುತ್ತೇನೆ' 
ಅಂತ ಹೇಳಿದ. 

ಸಾರೋಟು ಹೊರಟಿತು . ಪ್ರಿನ್ಸ್ ಹಿಪೊಲೈಟ್ ಕುಲುಕುಲು ನಗುತ್ತಾ 
ಪೋರ್ಟಿಕೋದಲ್ಲೇ ವೈಕೌಂಟ್‌ಗಾಗಿ ಕಾದು ನಿಂತ. ವೈಕೌಂಟನನ್ನು ಮನೆಗೆ 
ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದ ಅವನು. 


ಸಾರೋಟಿನಲ್ಲಿ ಹಿಪೊಲೈಟ್‌ನ ಪಕ್ಕದಲ್ಲಿ ಕುಳಿತ ವೈಕೌಂಟ್ ' ಮೈ ಡಿಯರ್ 
ಫೆಲೋ , ನಿಮ್ಮ ಪುಟ್ಟ ರಾಜಕುಮಾರಿ ತುಂಬಾ ಚೆನ್ನಾಗಿದಾಳೆ, ತುಂಬಾ, ಫ್ರೆಂಚ್ 
ಸುಂದರಿಯ ಹಾಗಿದಾಳೆ' ಅನ್ನುತ್ತಾ ಬೆರಳುಗಳಿಗೆ ಮುತ್ತಿಟ್ಟುಕೊಂಡ. ಹಿಪೊಲೈಟ್ 
ಪಕಪಕ ನಕ್ಕುಬಿಟ್ಟ . 

- 'ಏನೂ ಗೊತ್ತಿಲ್ಲದವನ ಹಾಗೆ ಕಾಣುತೀಯ, ಭಯಂಕರ ಆಸಾಮಿ ನೀನು. 
ರಾಜಕುಮಾರ ಅನ್ನುವ ಹಾಗೆ ಪೋಸುಕೊಡುವ ಬಡಪಾಯಿ ಎಳೆಯ ಅಧಿಕಾರಿ 
ಗಂಡನನ್ನು ಕಂಡರೆ ಅಯ್ಯೋ ಪಾಪ ಅನ್ನಿಸುತದೆ' ಅಂದ ವೈಕೌಂಟ್. 
* ಹಿಪೊಲೈಟ್ ಜೋರಾಗಿ ನಗುತ್ತಾ, ನಗುವಿನ ನಡುನಡುವೆಯೇ ' ಮತ್ತೆ 


೩೩ 


ಸಂಪುಟ ೧ - ಸಂಚಿಕೆ ಒಂದು 


ನೀವು ಹೇಳುತ್ತಿದ್ದಿರಿ, ರಶಿಯನ್ ಹೆಂಗಸರು ಫ್ರೆಂಚ್ ಹೆಂಗಸರಿಗೆ ಸಮ ಅಲ್ಲ 
ಅಂತ ? ನಮ್ಮ ಹೆಂಗಸರ ಜೊತೆ ವ್ಯವಹಾರ ಹೇಗೆ ಮಾಡಬೇಕು ಅನ್ನುವುದು 
ಗೊತ್ತಿರಬೇಕು ಅಷ್ಟೆ,' ಅಂದ. 


ಮಿಕ್ಕವರಿಗಿಂತ ಮೊದಲೇ ಮನೆಗೆ ಬಂದ ಪಿಯರೆ. ತಾನು ಆ ಮನೆಯವನೇ 
ಅನ್ನುವ ಹಾಗೆ ನೆಟ್ಟಗೆ ಪ್ರಿನ್ಸ್ ಆಂಡ್ರ ನ ಡಿ ರೂಮಿಗೆ ಹೋದ, ಹೋದವನೇ 
ಮಾಮೂಲಾಗಿ ಅಲ್ಲಿದ್ದ ಸೋಫಾದ ಮೇಲೆ ಮೈ ಚೆಲ್ಲಿದ. ಕೈ ಚಾಚಿ ಸಿಕ್ಕಿದ 
ಪುಸ್ತಕವನ್ನು ಎಳೆದುಕೊಂಡು, ಮಧ್ಯದ ಯಾವುದೋ ಪುಟ ತೆರೆದು, ತಲೆಗೆ 
ಮೊಳಕೈಯನ್ನು ಆಸರೆಯಾಗಿ ಕೊಟ್ಟುಕೊಂಡು ಓದುವುದಕ್ಕೆ ಶುರುಮಾಡಿದ. 
ಅವನು ಓದುತ್ತಿದ್ದದ್ದು ಸೀಸರ್‌ನ ಕಾಮೆಂಟರೀಸ್‌ಗಿಳಿ ಅನ್ನುವ ಪುಸ್ತಕ . 
ಆ ಅನ್ನಾ ಪಾವೋವಾಗೆ ಎಂಥಾ ಗತಿ ತಂದಿಟ್ಟುಬಿಟ್ಟೆಯಪ್ಪಾ! ಹಬೆಯಾಡುತಾ 
ಇರತಾಳೆ ಈಗ ಬಿಳಿಯ ಕೈಗಳನ್ನು ಉಜ್ಜಿಕೊಳ್ಳುತ್ತಾ ಸ್ಪಡಿಯೊಳಕ್ಕೆ ಕಾಲಿಟ್ಟ ಪ್ರಿನ್ಸ್ 
ಆಂಡೂ ಅಂದ. 

ಸೋಫಾ ಕಿರುಗುಟ್ಟುವ ಹಾಗೆ ಇಡೀ ಮೈಯನ್ನು ಪಕ್ಕಕ್ಕೆ ಹೊರಳಿಸಿ 
ಕುತೂಹಲದಿಂದ ಆಂಡ್ರನನ್ನು ನೋಡಿ ಕಾತರದ ನಗೆ ಬೀರುತ್ತಾ ಗಾಳಿಯಲ್ಲಿ 
ಕೈ ಬೀಸಿದ ಪಿಯರೆ. 

' ಇಲ್ಲ. ಅಬೆ ಇದ್ದಾನಲ್ಲ , ತುಂಬ ಚೆನ್ನಾಗಿ ಮಾತನಾಡುತ್ತಾನೆ. ಅವನಿಗೆ 
ಸರಿಯಾಗಿ ಅರ್ಥವಾಗಿಲ್ಲ ಅಷ್ಟೆ...ನನಗೆ ಅನಿಸುವ ಹಾಗೆ ಶಾಶ್ವತವಾದ ಶಾಂತಿ 
ಸಾಧಿಸುವುದು ಕಷ್ಟವಲ್ಲ. ಆದರೆ... ಥ , ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ...ಖಂಡಿತ 
ರಾಜಕೀಯ ಶಕ್ತಿಗಳ ಸಮತೋಲನದಿಂದಂತೂ ಅಲ್ಲ... ಅಷ್ಟೆ ' 

- ಇಂಥ ಅಮೂರ್ತ ವಿಚಾರಗಳ ಚರ್ಚೆಯಲ್ಲಿ ಪ್ರಿನ್ಸ್ ಆಂಡ್ರ ಗೆ ಆಸಕ್ತಿ 
ಇರಲಿಲ್ಲ. 

- ' ಮನಸ್ಸಿನಲ್ಲಿರುವುದನ್ನೆಲ್ಲಾ ನೆಟ್ಟಗೆ ಎಲ್ಲರ ಎದುರಿಗೂ ಹೇಳಬಾರದು, ಫ್ರೆಂಡ್. 
ಅದಿರಲಿ , ಏನಾದರೂ ತೀರ್ಮಾನ ಮಾಡಿದೆಯಾ? ಗಾರ್ಡ್ಮ ನ್ ಆಗಿ ಸೈನ್ಯಕ್ಕೆ 
ಸೇರುತೀಯೋ ಅಥವಾ ರಾಯಭಾರಿ ಕೆಲಸಕ್ಕೆ ಸೇರುತೀಯೋ ?” ಒಂದು ಕ್ಷಣ 
ಸುಮ್ಮನಿದ್ದು ಪ್ರಿನ್ಸ್ ಆಂಡೂ ಕೇಳಿದ. 

* ಪಿಯರೆ ಎದ್ದು,ಸೋಫಾದಮೇಲೆಯೇ ಚಕ್ಕಂಬಟ್ಟಲು ಹಾಕಿ ಕೂತುಕೊಂಡು 
ಹೇಳಿದ, 'ಗೊತ್ತಿಲ್ಲ. ನಿಜವಾಗಲೂ , ಎರಡೂ ಕೆಲಸ ಇಷ್ಟವಿಲ್ಲ ' ಎಂದ. 


೧೪ ಜೂಲಿಯಸ್ ಸೀಸರ್ ಬರೆದ ಕಾಮೆಂಟರೀಸ್ ಆನ್ ದಿ ಗ್ಯಾಲಿಕ್ ವಾರ್ ಎಂಬ ಪುಸ್ತಕ . 

ಮಿಲಿಟರಿ ಇತಿಹಾಸದ ಬಹು ಮುಖ್ಯ ಪುಸ್ತಕಗಳಲ್ಲಿ ಒಂದು. 


೩೪ 


ಯುದ್ಧ ಮತ್ತು ಶಾಂತಿ 
“ತೀರ್ಮಾನ ಮಾಡಬೇಕಲ್ಲವಾ ? ನಿಮ್ಮ ಅಪ್ಪ ಕಾಯುತಾ ಇದಾರೆ.' 

ಪಿಯರೆಗೆ ಹತ್ತು ವರ್ಷವಾಗಿದ್ದಾಗಲೇ ಅವರ ಅಪ್ಪ ಅಬೆಯೊಬ್ಬನನ್ನು 
ಮೇಷ್ಟರಾಗಿ ನೇಮಿಸಿ ಮಗನನ್ನು ವಿದೇಶಕ್ಕೆ ಕಳುಹಿಸಿದ್ದ . ಇಪ್ಪತ್ತು ವರ್ಷ ಅಲ್ಲೇ 
ಇದ್ದು ವಾಪಸ್ಸು ಮಾಸ್ಕೋಗೆ ಬಂದಮೇಲೆ ಅಪ್ಪ ಅಬೆಯನ್ನು ಕಳಿಸಿಬಿಟ್ಟು 'ಈಗ 
ಪೀಟರ್ಸ್‌ಬರ್ಗಿಗೆ ಹೋಗು, ನಾಲ್ಕಾರು ದಿನ ಇದ್ದು ಯಾವ ಕೆಲಸ ಒಗ್ಗುತ್ತದೆ 
ನೋಡು. ನಿನಗೆ ಬೇಕಾದ ಕೆಲಸ ಮಾಡು. ನನ್ನ ಅಭ್ಯಂತರವೇನೂ ಇಲ್ಲ. ಇಗೋ 
ಇದು ಪ್ರಿನ್ಸ್ ವ್ಯಾಸಿಲಿಗೆ ಬರೆದಿರುವ ಕಾಗದ, ಇದು ನಿನ್ನ ಖರ್ಚಿಗೆ ದುಡ್ಡು. ಏನು 
ತೀರ್ಮಾನಮಾಡಿದೆ ಅಂತ ಕಾಗದ ಬರೆದು ತಿಳಿಸು. ನಾನು ಎಲ್ಲ ಥರದ 
ಸಹಾಯಮಾಡುತ್ತೇನೆ' ಅಂತ ಹೇಳಿದ್ದ. ಪಿಯರೆ ಮೂರು ತಿಂಗಳು ಕಳೆದಿದ್ದ . 
ಯಾವ ಕೆಲಸ ಎಂದು ತೀರ್ಮಾನ ಮಾಡಿರಲಿಲ್ಲ . ಕೆಲಸದ ಬಗ್ಗೆ ತೀರ್ಮಾನ 
ಮಾಡಿದೆಯಾ ಎಂಬ ಬಗ್ಗೆಯೇ ಈಗ ಪ್ರಿನ್ಸ್ ಆಂಡೂ ಕೇಳುತ್ತಿದ್ದ . ಪಿಯರೆ 
ಹಣೆ ಉಜ್ಜಿಕೊಂಡ. 

- “ಅವನು ಫೀಮೇಸನ್ ೧೫ ಅಂತ ಕಾಣುತ್ತದೆ' ಪಿಯರೆ ಅಂದು ಸಂಜೆ 
ಮಾತನಾಡಿದ್ದ ಅಬೆಯ ಬಗ್ಗೆ ಹೇಳಿದ. 
- ' ಅದೆಲ್ಲ ಉಪಯೋಗವಿಲ್ಲದ ಮಾತು' ಪಿಯರೆಯನ್ನು ತಡೆಯುತ್ತಾ ಪ್ರಿನ್ಸ್ 
ಆಂಡೂ ಹೇಳಿದ. “ ನಿನ್ನ ಕೆಲಸದ ವಿಚಾರ ಹೇಳು, ಹಾರ್ಸ್ ಗಾರ್ಡ್ ನೋಡಿ 
ಬಂದೆಯಾ ?' ಪ್ರಿನ್ಸ್ ಆಂಡೂ ಕೇಳಿದ. 

' ಇಲ್ಲ , ಹೋಗಿಲ್ಲ. ಇಲ್ಲಿ ಕೇಳು. ನಿನ್ನ ಒಂದು ವಿಚಾರ ಕೇಳಬೇಕು. ಈಗ 
ನಡೆಯುತಾ ಇರುವುದು ನೆಪೋಲಿಯನ್ ವಿರುದ್ಧ ಯುದ್ದ, ಸ್ವಾತಂತ್ರ್ಯಕ್ಕೋಸ್ಕರ 
ನಡೆಯುತ್ತಿರುವ ಯುದ್ದವೇನಾದರೂ ಆಗಿದ್ದಿದ್ದರೆ ಎಲ್ಲರಿಗಿಂತ ಮೊದಲು ನಾನೇ 
ಹೋಗಿ ಸೈನ್ಯಕ್ಕೆ ಸೇರುತ್ತಿದ್ದೆ . ಆದರೆ ಜಗತ್ತಿನ ಮಹಾಪುರುಷ ನೆಪೋಲಿಯನ್ 
ವಿರುದ್ದ , ಇಂಗ್ಲೆಂಡು ಮತ್ತು ಆಸ್ಟಿಯಾಕ್ಕೆ ಸಹಾಯವಾಗಲಿ ಅಂತ ನಡೆಯುವ 
ಯುದ್ಧಕ್ಕೆ ಸೇರುವುದು ತಪ್ಪು ' 

ಪ್ರಿನ್ಸ್ ಆಂಡೂ ಭುಜ ಕೊಡವಿದ, ಪಿಯರೆಯ ಬಾಲಿಶವಾದ ಮಾತಿಗೆ 
ಅವನು ಮಾಡಬಹುದಾಗಿದ್ದು ಅಷ್ಟೆ. ಇಂಥ ಅಸಂಬದ್ದಕ್ಕೆ ಯಾವ ಉತ್ತರವೂ 
ಇಲ್ಲ ಅನ್ನುವ ಹಾಗಿತ್ತು ಅವನ ವರ್ತನೆ. ಆ ಮುಗ್ಧ ಪ್ರಶ್ನೆಗೆ ಅವನೀಗ ಕೊಟ್ಟ 
ಉತ್ತರಕ್ಕಿಂತ ಬೇರೆ ಉತ್ತರ ಹೇಳುವುದೂ ಕಷ್ಟವೇ ಆಗಿತ್ತು. ಎಲ್ಲರೂ ಅವರವರ 


೧೫ ೧೩೧೬ರ ಸುಮಾರಿನಲ್ಲಿ ಆರಂಭವಾಯಿತೆಂದು ತಿಳಿಯಲಾಗಿರುವ ಒಂದು ಗುಪ್ತ ಸಂಘಟನೆ. 

ಸದಸ್ಯರ ನಡುವೆ ಭ್ರಾತೃತ್ವವನ್ನು ಬೆಳೆಸುವ ಉದ್ದೇಶ ಹೊಂದಿತ್ತು. ಗುಪ್ತ ಸಂಕೇತ, ಗುಪ್ತ 
ಆಚರಣೆಗಳನ್ನು ಪಾಲಿಸುತ್ತಿತ್ತು. ಇದು ಮುಕ್ತ ಚಿಂತಕರ, ಕ್ರಾಂತಿಕಾರಿಗಳ ಗುಂಪು ಎಂದು 
ರಶಿಯಾದ ಆಡಳಿತ ಭಾವಿಸಿತ್ತು 


ಸಂಪುಟ ೧ - ಸಂಚಿಕೆ ಒಂದು 

೩೫ 
ನಂಬಿಕೆಗಳನ್ನು ಬಿಟ್ಟು ಬೇರೆ ಕಾರಣಕ್ಕೆ ಯುದ್ಧಮಾಡುವುದೇ ಇಲ್ಲ ಅನ್ನುವಹಾಗಿದ್ದಿದ್ದರೆ 
ಯುದ್ದಗಳೇ ಇರುತ್ತಿರಲಿಲ್ಲ' ಎಂದ. 

'ಎಷ್ಟು ಚೆನ್ನಾಗಿರುತ್ತಿತ್ತು' ಎಂದ ಪಿಯರೆ. 
- ಪ್ರಿನ್ಸ್ ಆಂಡೂ ಹಲ್ಲು ತೋರುವಂತೆ ಮುಗುಳಕ. 
' ಇರಬಹುದು. ಆದರೆ ಅಂಥ ಸ್ಥಿತಿ ಎಂದೂ ಬರುವುದಿಲ್ಲ... 
“ಸರಿ , ನೀನು ಯಾಕೆ ಯುದ್ಧಕ್ಕೆ ಹೋಗುತ್ತಿದ್ದೀ ?' ಪಿಯರೆ ಕೇಳಿದ. 

“ ಯಾಕೆ ? ಗೊತ್ತಿಲ್ಲ. ಹೋಗಲೇಬೇಕು.' ಕೊಂಚ ಹೊತ್ತು ಸುಮ್ಮನಿದ್ದ. 
' ಮತ್ತೆ... ಇಲ್ಲಿ ನಾನು ನಡೆಸುತ್ತಿರುವ ಬದುಕು... ಈ ಬದುಕು ನನಗೆ ಹಿಡಿಸುವುದಿಲ್ಲ ' 
ಎಂದ ಪ್ರಿನ್ಸ್ ಆಂಡ್ರ . 


. ಪಕ್ಕದಕೋಣೆಯಿಂದ ಹೆಣ್ಣುಡುಗೆಯ ಸರಬರ ಬಂದಿತು. ಪ್ರಿನ್ಸ್ ಆಂಡೂ 
ಮೆಟ್ಟಿಬಿದ್ದ - ಆಗ ತಾನೇ ದಿಡೀರನೆ ಎದ್ದವನ ಹಾಗೆ, ಅವನ ಮುಖ ಅನ್ನಾ 
ಪಾವೋವಾಳಾ ದಿವಾನಖಾನೆಯಲ್ಲಿದ್ದಾಗ ಇದ್ದಂಥದೇ ಭಾವವನ್ನು ಮತ್ತೆ 
ತೊಟ್ಟುಕೊಂಡಿತು. ಪಿಯರೆ ಸೋಫಾದಿಂದ ಕಾಲು ಕೆಳಗೆ ಇಳಿಸಿದ. ಒಳಗೆ 
ಬಂದಳು, ಪುಟ್ಟರಾಜಕುಮಾರಿ , ಮೊದಲು ತೊಟ್ಟಿದ್ದ ಗೌನಿನಷ್ಟೇ ಸೊಗಸಾಗಿ, 
ಹೊಸತಾಗಿ ಇದ್ದ , ಮನೆಯಲ್ಲಿ ತೊಡುವಂಥ ಬಟ್ಟೆ ತೊಟ್ಟಿದ್ದಳು. ಪ್ರಿನ್ಸ್ ಆಂಡೂ 
ಎದ್ದು ನಿಂತು ಆರಾಮ ಕುರ್ಚಿಯನ್ನು ಸೌಜನ್ಯಪೂರ್ಣವಾಗಿ ಅವಳತ್ತ ದೂಡಿದ. 

ಕುರ್ಚಿಯಮೇಲೆ ಬಿರುಸಾಗಿ ಕೂರುತ್ತಾ ಚಡಪಡಿಸಿ ಬಟ್ಟೆ ಸರಿಮಾಡಿಕೊಳ್ಳುತ್ತಾ, 
ಮಾಮೂಲಿನಂತೆ ಫ್ರೆಂಚಿನಲ್ಲಿ ' ಆ ಆನೆಟ್ ಯಾಕೆ ಮದುವೆಯಾಗಲಿಲ್ಲವೋ ? 
ಅವಳನ್ನು ಮದುವೆಯಾಗಲಿಲ್ಲವಲ್ಲಾ , ನೀವು, ಗಂಡಸರೆಲ್ಲಾ ಮುಟ್ಟಾಳರು! ಹೆಂಗಸರ 
ಬಗ್ಗೆ ಅ ಆ ಇ ಈ ಕೂಡಗೊತ್ತಿಲ್ಲ . ಮತ್ತೆ, ಪಿಯರೆ, ವಾದಮಾಡುವುದು ನಿಮಗೆ 
ಇಷ್ಟ ಅಲ್ಲವಾ!' ಅಂದಳು . 
- 'ಈಗ ತಾನೇ ನಿಮ್ಮ ಗಂಡನ ಜೊತೆ ವಾದಮಾಡುತ್ತಾ ಇದ್ದೆ. ಯುದ್ಧಕ್ಕೆ 
ಹೋಗಬೇಕು ಅಂತ ಯಾಕೆ ಅನ್ನುತ್ತಾನೋ ನನಗಂತೂ ಗೊತ್ತಾಗಲ್ಲ' ಅಂದ 
ಪಿಯರೆ. ಯುವತಿಯೊಡನೆ ಮಾತನಾಡುವಾಗ ಯುವಕನಲ್ಲಿ ಸಾಮಾನ್ಯವಾಗಿ 
ಕಾಣುವ ಯಾವ ಸಂಕೋಚವೂ ಅವನಿಗೆ ಇರಲಿಲ್ಲ. 

ಪುಟ್ಟ ರಾಜಕುಮಾರಿಯ ಮಾತು ಮೊನಚಾಗಿತ್ತು. ಪಿಯರೆಯ ಮಾತು 
ಅವಳ ಮರ್ಮಕ್ಕೆ ತಾಗಿತ್ತು. 

' ನಾನೂ ಅದನ್ನೇ ಸಾವಿರ ಸಲ ಹೇಳಿದೇನೆ! ಅರ್ಥ ಆಗಲ್ಲ ನನಗೆ, ಯುದ್ದ 
ಇಲ್ಲದೆ ಬದುಕುವುದಕ್ಕೆ ಆಗುವುದಿಲ್ಲವಲ್ಲಾ ಗಂಡಸರಿಗೆ , ಯಾಕೆ ಅರ್ಥ ಆಗೋದೇ 
ಇಲ್ಲ ? ನನಗಂತೂ ಗೊತ್ತೇ ಅಗಲ್ಲ. ನಮಗೆ, ಹೆಂಗಸರಿಗೆ, ಅದು ಬೇಕು ಅನಿಸುವುದೇ 


೩೬ 

ಈ ಯುದ್ಧ ಮತ್ತು ಶಾಂತಿ 
ಇಲ್ಲವಲ್ಲ , ಅದರ ಸಮಾಚಾರವೇ ಬೇಡವಲ್ಲಾ ಯಾಕೆ ? ನೀವೇ ತೀರ್ಮಾನ 
ಮಾಡಿ. ಇವರಿಗೆ ಯಾವಾಗಲೂ ಹೇಳುತ್ತಾ ಇರುತ್ತೇನೆ. ಇಲ್ಲಿ ಅಂಕಲ್‌ಗೆ ಅಡ್ಲುಟೆಂಟ್ 
ಆಗಿದಾರೆ, ಎಂಥಾ ಒಳ್ಳೆಯ ಹುದ್ದೆ. ಊರಲ್ಲಿ ಎಲ್ಲಾರಿಗೂ ಗೊತ್ತು. ಎಲ್ಲರೂ 
ಇವರನ್ನ ಎಷ್ಟು ಕೊಂಡಾಡತಾರೆ. ಮೊನ್ನೆ ಅಪ್ರಾನ್ ಮನೆಗೆ ಹೋಗಿದ್ದಾಗ 
' ಯಾರು , ಅದು ಪ್ರಿನ್ಸ್ ಆಂಡೂ ಅಲ್ಲವಾ ?' ಅಂತ ಒಬ್ಬಳು ಹೇಳಿದ್ದು ನಾನೇ 
ಕೇಳಿದೆ. ಸತ್ಯವಾಗಲೂ !' ನಕ್ಕಳು . ಎಲ್ಲಾ ಕಡೆಗೂ ಕರೆಯುತ್ತಾರೆ. ಮನಸ್ಸು ಮಾಡಿದರೆ 
ಇವರು ಚಕ್ರವರ್ತಿಯ ಪರಿವಾರಕ್ಕೆ ಸೇರಬಹುದು. ಗೊತ್ತಾ ನಿಮಗೆ, ಪ್ರಭುಗಳು 
ಇವರ ಹತ್ತಿರ ಎಷ್ಟು ವಿಶ್ವಾಸದಿಂದ ಮಾತಾಡಿದಾರೆ. ಅನೆಟ್ ಮತ್ತೆ ನಾನು ಈಗ 
ತಾನೇ ಅಂದುಕೊಳ್ಳುತ್ತಾ ಇದ್ದೆವು, ಇವರಿಗೆ ಆ ಕೆಲಸ ಸಿಗುವ ಹಾಗೆ ಮಾಡುವುದು 
ಎಷ್ಟು ಸಲೀಸು ಅಂತ. ನೀವೇನು ಅನ್ನುತೀರಿ? ' 

ಗೆಳೆಯನ ಕಡೆಗೆ ನೋಡಿದ ಒಂದು ನೋಟವೇ ಈ ವಿಷಯ 
ಅವನಿಗಿಷ್ಟವಿಲ್ಲವೆಂದು ಪಿಯರೆಗೆ ಹೇಳಿತು. ಅದಕ್ಕೆ ಏನೂ ಹೇಳದೆ ಸುಮ್ಮನಿದ್ದುಬಿಟ್ಟ 
- ' ಯಾವಾಗ ಹೊರಡತೀಯಾ?' ಅಂತ ಕೇಳಿದ. 

“ಅಯ್ಯೋ , ಹೊರಡುವ ಸುದ್ದಿ ಮಾತ್ರ ಎತ್ತಬೇಡಿ! ಆ ಸುದ್ದಿ ಮಾತ್ರ 
ನನ್ನೆದುರಿಗೆ ಎತ್ತಬಾರದು. ಬೇಡವೇ ಬೇಡ.' ಸಂಜೆಯ ಪಾರ್ಟಿಯಲ್ಲಿ 
ಹಿಪೊಲೈಟ್‌ನೊಡನೆ ಮಾತನಾಡುವಾಗ ಹೇಗೆ ಮೊದ್ದಾಗಿ, ಬಿನ್ನಾಣವಾಗಿ 
ಮಾತಾಡಿದ್ದಳೋ ಈಗಲೂ ಹಾಗೆಯೇ ಮಾತಾಡಿದಳು ಪುಟ್ಟರಾಜಕುಮಾರಿ. 
ಮನೆಯವರೊಡನೆ ಮಾತಾಡುವಾಗ ಆ ಧ್ವನಿ ಹೊಂದುತ್ತಿರಲಿಲ್ಲ. ಅಲ್ಲದೆ ಪಿಯರೆ 
ಹೆಚ್ಚು ಕಡಮೆ ಮನೆಯವನೇ . ಇನ್ನು ಮೇಲೆ ಕಡಿದುಕೊಳ್ಳಬೇಕಾದ ಈ ಸ್ನೇಹ 
ಸಂಬಂಧಗಳನ್ನೆಲ್ಲಾ ಇವತ್ತು ನೆನೆಸಿಕೊಳ್ಳುತ್ತಾ ಇದ್ದಾಗ....ನಿನಗೆ ಗೊತ್ತಾ ಆಂದ್ರೆ' 
ಅನ್ನುತ್ತಾ ತಟ್ಟನೆ ಬೆದರಿ ನಡುಗಿ ಗಂಡನತ್ತ ಅರ್ಥ ತುಂಬಿದ ನೋಟ ಮಿಂಚಿಸಿದಳು. 
“ ನನಗೆ ಭಯ , ಭಯ ಆಂದ್ರೆ, ಭಯ ' ಅಂತ ಪಿಸುಗುಟ್ಟಿದಳು. ಅವಳ ಗಂಡ 
ಅವಳತ್ತ ನೋಡಿದ - ತನ್ನ ಜೊತೆ ಪಿಯರೆ ಬಿಟ್ಟು ಮತ್ತೊಬ್ಬರು ರೂಮಿಗೆ ಯಾಕೆ 
ಬಂದರು ಅನ್ನುವ ಹಾಗೆ, ಆದರೆ ತಣ್ಣಗೆ ಕೊರೆಯುವ ಸೌಜನ್ಯದ ದನಿಯಲ್ಲಿ 
“ ಭಯ ಯಾಕೆ ಲಿಸೀ ? ತಿಳೀಲಿಲ್ಲ' ಅಂದ. 

“ನೋಡಿ, ಗಂಡಸರೆಲ್ಲ ಎಷ್ಟು ಸ್ವಾರ್ಥಿಗಳು! ಎಲ್ಲಾ ಗಂಡಸರೂ ಅಷ್ಟೇ , 
ಒಬ್ಬೊಬ್ಬರೂ ಸ್ವಾರ್ಥಿಗಳೇ ! ತಲೆಗೆ ಹೊಕ್ಕಿತು ಅಂತ, ಯಾಕೆ ಹೊಕ್ಕಿತೋ 
ಭಗವಂತನಿಗೇ ಗೊತ್ತು, ನನ್ನ ತೊರೆದು, ಒಬ್ಬಳನ್ನೇ ನನ್ನಪಾಡಿಗೆ ಹಳ್ಳಿಯಲ್ಲಿ 
ಕೂಡಿಹಾಕಿ ಹೋಗುತಿದಾರೆ.' 

* 'ನಮ್ಮ ಅಪ್ಪ, ತಂಗೀ ಜೊತೆಗೆ, ಮರೀಬೇಡ' ಪ್ರಿನ್ಸ್ ಆಂಡೂ ಮೆಲುವಾಗಿ 
ಹೇಳಿದ. 


ಸಂಪುಟ ೧ - ಸಂಚಿಕೆ ಒಂದು 

“ ಆದರೂ ಒಂಟೀನೇ . ಜೊತೆಗೆ ನನ್ನ ಸ್ನೇಹಿತರು ಯಾರೂ ಇರಲ್ಲ ... ಮತ್ತೆ 
ಮೇಲೆ, ಭಯ ಪಡಬೇಡ ಅನ್ನುತಾರೆ,” ಅವಳದು ಈಗ ದೂರುವ ಅಳುದನಿಯಾಗಿತ್ತು. 
ಅವಳ ತುಟಿಹೀಯಾಳಿಸುವ ಹಾಗೆ ಸೊಟ್ಟಗಾಯಿತು. ಅದರಿಂದ ಸಂತೋಷವೇ 
ಇಲ್ಲದ ಹಾಗೆ, ಕಾಡು ಪ್ರಾಣಿಯ ಹಾಗೆ, ಇಣಚಿಯ ಹಾಗೆ, ಅಸಹ್ಯವಾಗಿ ಕಂಡಿತು. 
ಮತ್ತೇನೂ ಹೇಳಲಿಲ್ಲ- ಪಿಯರಿ ಇದ್ದಾಗ ಬಸಿರಿನ ಮಾತು ಎತ್ತುವುದು ತಪ್ಪು 
ಅನ್ನುವ ಹಾಗೆ, ಇವೆಲ್ಲ ಮಾತು ಅದೇ ಆಗಿದ್ದರೂ , 

* ' ಆದರೂ ಹೆದರಿಕೆ ಯಾಕೆ, ಅರ್ಥ ಅಗತಾ ಇಲ್ಲ' ಹೆಂಡತಿಯಮೇಲೆ 
ನೆಟ್ಟಿದ್ದ ದೃಷ್ಟಿಯನ್ನು ಕದಲಿಸದೆ ಪ್ರಿನ್ಸ್ ಆಂಡೂ ಮಾತು ಒತ್ತಿ ಒತ್ತಿ ನಿಧಾನವಾಗಿ 
ಹೇಳಿದ. ಪುಟ್ಟ ರಾಜಕುಮಾರಿ ನಾಚಿಕೊಂಡಳು. ಹತಾಶೆಯಿಂದ ಕೈ ಆಡಿಸಿದಳು. 

' ಇಲ್ಲ ಆಂಡ್ರ , ನೀವು ಬದಲಾಗಿದ್ದೀರಿ, ನಿಜವಾಗಲೂ ನೀವು...' 

' ಡಾಕ್ಟರು ಹೇಳಿದಾರೆ ತಡವಾಗಿ ಮಲಗಬಾರದು. ಈಗ ನೀನು 
ನಿದ್ರೆಮಾಡಬೇಕು,' ಅಂದ ಪ್ರಿನ್ಸ್ ಆಂಡೂ 

ಪ್ರಿನ್ಸೆಸ್ ಏನೂ ಮಾತನಾಡಲಿಲ್ಲ. ನವಿರು ಕೂದಲಿದ್ದ ಪುಟ್ಟ ತುಟಿ ಇದ್ದಕ್ಕಿದ್ದ 
ಹಾಗೆ ಕಂಪಿಸಿತು. ಪ್ರಿನ್ಸ್ ಆಂಡ್ರ ಎದ್ದ. ಭುಜ ಕೊಡವಿದ. ಅತ್ತಿಂದಿತ್ತ ಕಾಲು 
ಹಾಕಿದ. 

ಪಿಯರಿ ಮುಗ್ಗ ಆಶ್ಚರ್ಯದಿಂದ ಒಮ್ಮೆ ಅವನನ್ನೂ ಒಮ್ಮೆ ಆಕೆಯನ್ನೂ 
ಕನ್ನಡಕದ ಹಿಂದಿನ ಕಣ್ಣುಗಳಿಂದ ನೋಡುತ್ತಾ, ತಾನೂ ಏಳುವವನ ಹಾಗೆ ಆದರೆ 
ಮನಸ್ಸು ಬದಲಾಯಿಸಿ ಕೂತವನ ಹಾಗೇ ಇದ್ದಲ್ಲೇ ಸರಿದಾಡಿದ. 
ಈ ' ಮಿಸ್ಟರ್ ಪಿಯರೆ ಇದ್ದುಕೊಳ್ಳಲಿ, ಪರವಾಗಿಲ್ಲ' ಪುಟ್ಟ ರಾಜಕುಮಾರಿ 
ತಟ್ಟನೆ ಅಂದಳು. ಅವಳ ಪುಟ್ಟ ಮುದ್ದು ಮುಖ ಕಣ್ಣೀರು ತುಂಬಿದ ವಕ್ರನಗೆಯಾಗಿ 
ಹಿಂಡಿಕೊಂಡಿತು . 'ಕೇಳೋಣಕಾಯುತ್ತಾ ಇದ್ದೆ ಆಂದ್ರೆ ನನ್ನ ವಿಷಯಕ್ಕೆ ತುಂಬ 
ಬದಲಾಗಿದೀರಿ? ನಾನು ಅಂಥಾದೇನು ಮಾಡಿದೇನೆ? ಸೈನ್ಯಕ್ಕೆ ಸೇರತಾ ಇದೀರಿ, 
ಯಾಕೆ, ಕೇಳಿಸಿಕೊಳ್ಳುವುದೇ ಇಲ್ಲ. ಯಾಕೆ ? | 

* ' ಲಿಸ್ತಾ!' ಪ್ರಿನ್ಸ್ ಆಂಡೂ ಆಡಿದ್ದು ಒಂದೇ ಮಾತು. ಆದರೂ ಅದರಲ್ಲಿ 
ಒಂದು ಬೇಡಿಕೆ , ಒಂದು ಎಚ್ಚರಿಕೆ, ಎಲ್ಲಕ್ಕಿಂತ ಮಿಗಿಲಾಗಿ ನೀನು ಆಡುವ ಮಾತಿಗೆ 
ಮರುಗ ಬೇಕಾಗುತ್ತದೆ ಅನ್ನುವ ಧೋರಣೆ ಎಲ್ಲ ಇದ್ದವು. ಆದರೂ ಆಕೆ ಬಡಬಡನೆ 
ಹೇಳಿದಳು. 

- 'ನಾನು ಕೈಯ್ಯಲ್ಲಾಗದ ರೋಗಿಯೋ , ಮಗುವೋ ಅನ್ನುವ ಹಾಗೆ ಆಡುತೀರಿ! 
ನನಗೆ ಗೊತ್ತಾಗುತ್ತದೆ. ಆರು ತಿಂಗಳ ಹಿಂದೆ ಹೀಗಿರಲಿಲ್ಲ ನೀವು, ಅಲ್ಲವಾ ?' 
ಅಂದಳು . 


ಲಿಸಾ, ಸಾಕು, ನಾನು ಹೇಳತಾ ಇದೇನೆ... ಪ್ರಿನ್ಸ್ ಆಂಡೂ ಮಾತುಗಳನ್ನು 


೩೮ 


ಯುದ್ಧ ಮತ್ತು ಶಾಂತಿ 
ಒತ್ತಿ ಹೇಳಿದ. 

ಮಾತು ಬೆಳೆದಹಾಗೆ ಪಿಯರೆಗೆ ಕಸಿವಿಸಿ ಹೆಚ್ಚಾಗಿ, ಈಗ ಎದ್ದು ನಿಂತು 
ಪಿನೆಸ್ ಹತ್ತಿರಕ್ಕೆ ಹೋದ. ಅವಳು ಅಳುವುದು ನೋಡುವುದಕ್ಕೆ ಆಗಲಿಲ್ಲ. ಅವನಿಗೂ 
ಅಳು ಬರುವ ಹಾಗೆ ಆಗಿತ್ತು . 

'ಸಮಾಧಾನ ಮಾಡಿಕೊಳ್ಳಿ, ಪ್ರಿನ್ಸೆಸ್...ನನಗೆ ಗೊತ್ತಾಗುತ್ತದೆ....ಎಷ್ಟೋ ಸಾರಿ 
ನನಗೂ ಹಾಗೆ ಆಗಿದೆ... ಯಾಕೆ ಅಂದರೆ... ಅದು... ನೋ , ಸಾರಿ! ಬೇರೆಯವರು 
ಇರಬಾರದು...ಬೇಜಾರುಮಾಡಿಕೊಳ್ಳಬೇಡಿ, ಫೀಸ್...ನಾನು ಹೊರಡತೀನಿ...!? - 

ಪ್ರಿನ್ಸ್ ಆಂಡೂ ಅವನ ತೋಳು ಹಿಡಿದ, ನಿಲ್ಲಿಸಿದ. ' ತಾಳು , ಪಿಯರೆ! 
ಪ್ರಿನ್ಸೆಸ್ ಒಳ್ಳೆಯವಳು , ಕಲ್ಲು ಮನಸ್ಸಿನವಳಲ್ಲ. ನಿನ್ನ ಜೊತೆ ನಾನು ಸಾಯಂಕಾಲ 
ಆರಾಮವಾಗಿರುವ ಖುಷಿ ಕಿತ್ತುಕೊಳ್ಳಲ್ಲ ಅವಳು' ಅಂದ. 

'ಸರಿ, ಯಾವಾಗಲೂ ಅವರಿಗೆ ಅವರದೇ ಯೋಚನೆ ' ಅಂದ ಪ್ರಿನ್ಸೆಸ್ 
ಕಣ್ಣೀರು ತಡೆಯಲು ಹೋಗಲಿಲ್ಲ. 

ಲಿಸ್ವಾ!' ದನಿ ಎತ್ತರಿಸಿದ , ಏರಿದ ದನಿ ತಾಳ್ಮೆ ಮುಗಿಯಿತು ಅನ್ನುವುದನ್ನು 
ತೋರುತ್ತಿತ್ತು. 

ಇದ್ದಕ್ಕಿದ್ದಹಾಗೆ ರಾಜಕುಮಾರಿಯ ಚೆಲುವಾದ ಪುಟ್ಟ ಮುಖ ಕೋಪಗೊಂಡ 
ಅಳಿಲಿನಂತಿದ್ದ ಭಾವವನ್ನು ಬದಲಾಯಿಸಿಕೊಂಡು ಭಯವನ್ನು ತೋರಿತು. 
ಅದರಿಂದ ಸುಂದರವಾಗಿಯೂ ಕಾಣುತ್ತಿತ್ತು, ಕರುಣೆಯನ್ನೂ ಹುಟ್ಟಿಸುತ್ತಿತ್ತು . 
ಹುಬ್ಬುಗಂಟಿಕ್ಕಿಕೊಂಡು ಚೆಲುವಾದ ಅವಳ ಕಣ್ಣು ಸಿಡುಕು ದೃಷ್ಟಿಯನ್ನು ಗಂಡನತ್ತ 
ಕಳುಹಿಸಿತ್ತಿದ್ದರೂ ಮುಖದಲ್ಲಿ ಅಂಥ ವಿಶ್ವಾಸವಿರದೆ ತಟ್ಟನೆ ಬಾಲ ಕೆಳಗಿಳಿಸಿ 
ಜೋರಾಗಿ ಆಡಿಸುವ ನಾಯಿಯ ಹಾಗೆ ಅಸಹಾಯಕವಾಗಿತ್ತು. 

“ಅಯ್ಯೋ ದೇವರೇ !' ಅನ್ನುತ್ತಾ, ಒಂದು ಕೈಯಲ್ಲಿ ಗೌನನ್ನು ಎತ್ತಿ 
ಹಿಡಿದುಕೊಂಡು, ಗಂಡನ ಹತ್ತಿರ ಹೋಗಿ, ಹಣೆಯಮೇಲೆ ಮುತ್ತಿಟ್ಟಳು. 

'ಗುಡ್ ನೈಟ್, ಲಿಸ್ಸಾ' ಅಂದ ಪ್ರಿನ್ಸ್ ಆಂಡೂ , ಅವಳು ಅಪರಿಚಿತಳೋ 
ಅನ್ನುವ ಹಾಗೆ ಕೈಗೆ ಮುತ್ತಿಡುದವುದಕ್ಕೆ ಸೌಜನ್ಯಪೂರ್ಣವಾಗಿ ಎದ್ದು ನಿಂತ. 


ಇಬ್ಬರು ಸ್ನೇಹಿತರೂ ಸುಮ್ಮನೆ ಇದ್ದರು. ಮಾತು ಶುರುಮಾಡುವುದಕ್ಕೆ 
ಇಬ್ಬರಿಗೂ ಇಷ್ಟವಿರಲಿಲ್ಲ. ಪಿಯರೆ ಆಂಡ್ರ ನನ್ನು ನೋಡುತ್ತಾ ಸುಮ್ಮನೆ ಕೂತಿದ್ದ. 
ಪ್ರಿನ್ಸ್ ಆಂಡ್ರ ಹಿಂಗೈಯಲ್ಲಿ ಹಣೆ ತಿಕ್ಕಿಕೊಂಡ. 
- ನಿಟ್ಟುಸಿರು ಬಿಡುತ್ತಾ ಎದ್ದು ನಿಂತು, ಬಾಗಿಲ ಕಡೆಗೆ ಹೆಜ್ಜೆ ಹಾಕುತ್ತಾ 
“ ಏನಾದರೂ ಒಂದಿಷ್ಟು ಊಟ ಮಾಡೋಣ ಬಾ ' ಅಂದ. 

ಸೊಬಗಿನ, ಹೊಸದಾಗಿ ಸಿಂಗರಿಸಿದ್ದ , ಶ್ರೀಮಂತವಾಗಿ ಸಜ್ಜುಗೊಂಡಿದ್ದ 


೩೯ 
ಸಂಪುಟ ೧ - ಸಂಚಿಕೆ ಒಂದು 
ಊಟದ ಮನೆಗೆ ಬಂದರು. ಮೇಜಿನ ಮೇಲಿದ್ದ ಕೈ ವಸ್ತಗಳು, ಬೆಳ್ಳಿಯ ಪಾತ್ರೆ, 
ಪಿಂಗಾಣಿ ಸಾಮಗ್ರಿ, ಗಾಜಿನ ವಸ್ತುಗಳು ಎಲ್ಲದರ ಮೇಲೂ ಇತ್ತೀಚೆಗೆ ಮದುವೆಯಾಗಿ 
ಸಂಸಾರ ಹೂಡಿರುವವರ ಮನೆಗಳಲ್ಲಿರುವ ಹಾಗೆ ಹೊಸತನದ ವಿಶೇಷ ಮುದ್ರೆ 
ಇತ್ತು. ಅರ್ಧ ಊಟ ಮುಗಿದಿದ್ದಾಗ ಪ್ರಿನ್ಸ್ ಆಂಡೂ ಮೇಜಿನ ಮೇಲೆ ಒಂದು 
ಮೊಳಕೈ ಊರಿ, ಮನಸ್ಸಿನಲ್ಲಿ ಏನೋ ಇಟ್ಟುಕೊಂಡಿರುವವನ ಹಾಗೆ , 
ಮನಸ್ಸಿನಲ್ಲಿರುವುದನ್ನೆಲ್ಲ ಹೇಳಿಬಿಡಲು ತಟ್ಟನೆ ನಿರ್ಧಾರ ಮಾಡಿದವನ ಹಾಗೆ 
ಸಿಡಿಮಿಡಿಗೊಂಡು ಚಡಪಡಿಸುತ್ತಾ ಮಾತು ಶುರುಮಾಡಿದ. ಗೆಳೆಯನ ಮುಖದಲ್ಲಿ 
ಅಂಥ ಭಾವವನ್ನು ಪಿಯರೆ ಹಿಂದೆ ಯಾವತ್ತೂ ಕಂಡಿರಲಿಲ್ಲ. 

'ಬೇಡ, ಮದುವೆ ಆಗಬೇಡ, ಮದುವೆ ಮಾತ್ರ ಯಾವತ್ತೂ ಆಗಲೇ ಬೇಡ. 
ಮಾಡಬೇಕಾದ್ದೆಲ್ಲ ಮಾಡಿ ಮುಗಿಸುವ ತನಕ , ಮೆಚ್ಚಿದ ಹುಡುಗಿಯ ಬಗ್ಗೆ ಪ್ರೀತಿ 
ಮುಗಿದುಹೋಗಿ, ಅವಳು ಹೇಗಿದ್ದಾಳೋ ಹಾಗೇ ಕಾಣುವ ತನಕ ಮದುವೆ 
ಆಗಲೇಬೇಡ. ಇಲ್ಲದಿದ್ದರೆ ಎಂದೂ ಸರಿಮಾಮಾಡು ವುದಕ್ಕಾಗದಂಥ ದೊಡ್ಡ 
ತಪ್ಪು , ಕ್ರೂರವಾದ ತಪ್ಪು ಮಾಡುತೀಯೆ ನೋಡು. ಮದುವೆ ಆಗು - ವಯಸ್ಸಾಗಿ, 
ಕೆಲಸಕ್ಕೆ ಬರದವನ ಹಾಗೆ ಆದಮೇಲೆ... ಇಲ್ಲದಿದ್ದರೆ ನಿನ್ನ ಒಳ್ಳೆಯತನ, ದೊಡ್ಡಗುಣ 
ಎಲ್ಲ ತೀರಿಹೋಗತವೆ. ಕೆಲಸಕ್ಕೆ ಬಾರದ ಸಣ್ಣ ಪುಟ್ಟ ವಿಚಾರಗಳಲ್ಲೇ ಸೋರಿ 
ಹೋಗತವೆ. ನಿಜ! ನಿಜ! ನಿಜ! ಯಾಕೆ ಹಾಗೆ ನೋಡತೀಯ, ಒಳ್ಳೆಯ ದಿನ 
ಬರುತದೆ ಅಂದುಕೊಂಡಿದ್ದರೆ ನಿನ್ನ ಒಂದೊಂದು ಹೆಜ್ಜೆಯಲ್ಲೂ ಅಡ್ಡಿ, ಆತಂಕ...ಎಲ್ಲ 
ಬಾಗಿಲೂ ಮುಚ್ಚಿಕೊಂಡವು, ದಿವಾನಖಾನೆಯದು ಬಿಟ್ಟು, ಅನಿಸುತ್ತದೆ. ಆಸ್ಥಾನದ 
ಡವಾಲಿ ಥರ , ಕೆಲಸಕ್ಕೆ ಬಾರದ ಮೂರ್ಖರ ಥರ ಇರಬೇಕಾಗುತ್ತದೆ.... ಯಾಕೆ ಈ 
ಪಾಡು ?...' ಅನ್ನುತ್ತಾ ಜೋರಾಗಿ ಕೈ ಬೀಸಿದ. 
- ಪಿಯರೆ ಕನ್ನಡಕ ತೆಗೆದ, ಅದರಿಂದ ಅವನ ಮುಖ ಬದಲಾಯಿತು, 
ಇನ್ನೂ ಹೆಚ್ಚು ಔದಾರ್ಯ ತುಂಬಿಕೊಂಡ ಹಾಗೆ ಕಾಣುತ್ತಿತ್ತು. ಗೆಳೆಯನನ್ನು 
ಬೆರಗಿನಿಂದ ನೋಡಿದ. 

ನನ್ನ ಹೆಂಡತಿ, ಅದ್ಭುತ ಹೆಂಗಸು. ಇಂಥವಳ ಜೊತೆ ಇದ್ದರೆ ಮರ್ಯಾದೆ 
ಭದ್ರವಾಗಿರತದೆ ಅನ್ನಿಸುವಂಥ ಅಪರೂಪದ ಹೆಂಗಸು . ಅಯ್ಯೋ ಭಗವಂತ , 
ಮದುವೆಯಾಗದವನು ಅನ್ನಿಸಿಕೊಳ್ಳುವುದಕ್ಕೆ ಏನು ಬೇಕಾದರೂ ಕೊಟ್ಟೇನು! ನೋಡು, 
ಇದೇ ಮೊದಲು, ಇದನ್ನೆಲ್ಲ ಹೇಳಿದ್ದು, ಅದೂ ನಿನಗೆ ಮಾತ್ರ ನೀನು ನನ್ನ 
ಹತ್ತಿರದವನು ' ಅಂದ. 
- ಹೀಗೆ ಮಾತನಾಡುತ್ತಿರುವ ಪ್ರಿನ್ಸ್ ಆಂಡೂ ಸ್ವಲ್ಪ ಹೊತ್ತಿಗೆ ಮೊದಲು 
ಅನ್ನಾ ಪಾವೋಬ್ಬಾಳ ದಿವಾನಖಾನೆಯಲ್ಲಿ ಆರಾಮ ಕುರ್ಚಿಯಮೇಲೆ ಅಡ್ಡಾದಿಡ್ಡಿ 
ಮೈ ಚೆಲ್ಲಿಕೊಂಡು ಕೂತು ಕಣ್ಣು ಕಿರಿದುಮಾಡಿಕೊಂಡು ಫ್ರೆಂಚ್ ವಾಕ್ಯಗಳನ್ನು 


೪೦ 


ಯುದ್ಧ ಮತ್ತು ಶಾಂತಿ 
ಹಲ್ಲುಗಳಿಂದಾಚೆಗೆ ನೂಕುತ್ತಿದ್ದ ಆ ಪ್ರಿನ್ಸ್ ಆಂಡೂ ಬೋಲೋನ್‌ಸ್ತಿಯಾಗಿರಲಿಲ್ಲ. 
ಅವನ ತೆಳ್ಳನೆಯ ಮುಖದ ಒಂದೊಂದು ಮಾಂಸಖಂಡವೂ ಉದ್ವೇಗದಿಂದ 
ಕಂಪಿಸುತ್ತಿತ್ತು ಈಗ, ಜೀವನೋತ್ಸಾಹದ ಬೆಂಕಿ ಆರಿಹೋದ ಹಾಗಿದ್ದ ಕಣ್ಣು ಈಗ 
ಸ್ವಚ್ಛವಾಗಿ ಬೆಳಗುತ್ತಿದ್ದವು. ಮಾಮೂಲಾಗಿ ನಿರ್ಜಿವವಾಗಿ ಕಾಣುವವನು ಕೆರಳಿದಾಗ 
ಹೆಚ್ಚು ಜೀವಂತವಾಗಿ, ಚುರುಕಾಗಿ ಇರುತ್ತಿದ್ದ. .. 

- ' ಯಾಕೆ ಹೀಗೆ ಹೇಳತೇನೆ ಅನ್ನುವುದು ನಿನಗೆ ತಿಳಿಯಲ್ಲ. ಬದುಕು ಇದೇನೇ . 
ಬೋನಾಪಾರ್ಟೆ ಬಗ್ಗೆ ಹೇಳುತೀಯೆ' ಪಿಯರೆ ಬೊನಪಾರ್ಟೆಯ ಹೆಸರನ್ನೇ 
ಎತ್ತಿರದಿದ್ದರೂ ಹೇಳಿದ, 'ಬೋನಾಪಾರ್ಟೆ ಒಂದು ಗುರಿ ಇಟ್ಟುಕೊಂಡು 
ಒಂದೊಂದೇ ಹೆಜ್ಜೆ ಇಡುತಿರುವಾಗ ಸ್ವತಂತ್ರನಾಗಿದ್ದ . ಗುರಿ ಬಿಟ್ಟರೆ ಬೇರೆ ಯಾವುದೂ 
ಗಮನ ಇರಲಿಲ್ಲ. ಹೋಗಿ ಮುಟ್ಟಿದ. ಹೆಂಗಸನ್ನ ಕಟ್ಟಿಕೊಂಡರೆ ಮುಗಿಯಿತು, 
ಸಂಕೋಲೆ ಬಿಗಿಸಿಕೊಂಡ ಖೈದಿಯ ಹಾಗೆ ಸ್ವಾತಂತ್ರ್ಯ ಕಳಕೊಂಡುಬಿಡುತೀಯ! 
ನಿನ್ನ ಶಕ್ತಿ ಸಾಮರ್ಥ , ಆಸೆ ಭರವಸೆಗಳೆಲ್ಲ ನಿನ್ನ ಕೆಳಗೆ ತಳ್ಳಿ, ಪಶ್ಚಾತ್ತಾಪವಾಗಿ 
ಹಿಂಸೆಯಾಗುತ್ತದೆ. ದಿವಾನಖಾನೆ, ಕಾಡು ಹರಟೆ, ಒಣ ಜಂಬ , ಬಡಿವಾರ , 
ಬಾಲ್ಡಾನ್ನು, ಕ್ಷುದ್ರವಾದ ಈ ವಿಷದ ಸುಳಿಗೆ ಸಿಕ್ಕಿಬಿದ್ದಿದೇನೆ. ಈಗ ಯುದ್ದಕ್ಕೆ 
ಹೊರಟಿದ್ದೇನೆ. ಇದುವರೆಗೆ ನಡೆಯದೆ ಇದ್ದಂಥ ಮುಂದೆ ನಡೆಯದಂಥ ಮಹಾ 
ಯುದ್ದಕ್ಕೆ ನನಗೆ ಏನೂ ಗೊತ್ತಿಲ್ಲ. ಕೆಲಸಕ್ಕೆ ಬಾರದವನು. ನಾನು ಒಳ್ಳೆಯವನು, 
ಚುರುಕಾಗಿ ಮಾತಾಡತೇನೆ, ಅನ್ನಾ ಪಾವೋಬ್ಬಾಳ ಪಾರ್ಟಿಗೆ ಹೋದರೆ 
ಮಾತಾಡಿದಾಗ ಎಲ್ಲರೂ ಗಮನಕೊಟ್ಟು ನನ್ನ ಮಾತು ಕೇಳುತ್ತಾರೆ. ಮೂರ್ಖ 
ಜನ ಸುತ್ತಲೂ ಇರದಿದ್ದರೆ ನನ್ನ ಹೆಂಡತಿಗೆ ಬಾಳೇ ಇಲ್ಲ, ಈ ಹೆಂಗಸರು... ಈ 
ಶ್ರೀಮಂತ ಹೆಂಗಸರು ನಿನಗೆ ಗೊತ್ತಿದ್ದರೆ... ಯಾಕೆ ಎಲ್ಲ ಹೆಂಗಸರೂ ಅಷ್ಟೆ...! 
ನಮ್ಮಪ್ಪ ಹೇಳಿದ್ದು ಸರಿ, ಸ್ವಾರ್ಥಿಗಳು , ಒಣಜಂಬದವರು, ಮೂರ್ಖರು, ಬುದ್ದಿ 
ಇಲ್ಲದ ಖಾಲಿ ಬುರುಡೆಗಳು - ನಿಜವಾದ ಬಣ್ಣ ಬಯಲಾದಾಗ ಹೆಂಗಸರೆಲ್ಲಾ 
ಇಷ್ಟೇ ! ಪಾರ್ಟಿಗಳಲ್ಲಿ ಕಂಡರೆ ಅವರಲ್ಲಿ ಏನೋ ಇದೆ ಅಂದುಕೊಳ್ಳತೇವೆ. ಏನೂ 
ಇಲ್ಲ, ಏನೇನೂ ಇಲ್ಲ, ಲೊಳಲೊಟ್ಟೆ! ಮದುವೆ ಆಗಬೇಡ, ಆಗಲೇಬೇಡ!' ಅಂದ 
ಪ್ರಿನ್ಸ್ ಆಂಡೂ . 
* 'ಸೋತುಹೋದೆ, ಬದುಕು ದಂಡ ಅಂತ ನೀನು ಅಂದುಕೊಳ್ಳುವುದು 
ವಿಚಿತ್ರವಾಗಿ ಕಾಣುತ್ತದೆ. ಇಡೀ ಬದುಕು ನಿನ್ನ ಮುಂದೆ ಇದೆ, ಬೇಕಾದದ್ದೆಲ್ಲ ಇದೆ. 
ನೀನು...' ಎಂದ ಪಿಯರೆ. 

'ನೀನು' ಏನು ಎಂದು ಹೇಳಲಿಲ್ಲ. ಆದರೆ ಅವನ ಧ್ವನಿಯಲ್ಲಿ ಗೆಳೆಯನ 
ಬಗ್ಗೆ ಇದ್ದ ಮೆಚ್ಚುಗೆ, ಅವನ ಭವಿಷ್ಯದ ಬಗ್ಗೆ ಇದ್ದ ನಿರೀಕ್ಷೆ ತಿಳಿಯುತ್ತಿತ್ತು. 

'ಹೀಗೇಕೆ ಮಾತಾಡುತಾನೆ ?' ಅಂದುಕೊಂಡ ಪಿಯರೆ. ತನ್ನಲ್ಲಿಲ್ಲದ ಎಲ್ಲಾ 


ဂ 
ಸಂಪುಟ ೧ - ಸಂಚಿಕೆ ಒಂದು 
ಗುಣಗಳೂ ಅವನಲ್ಲಿ ಕೂಡಿಕೊಂಡಿರುವುದರಿಂದ ಗೆಳೆಯನನ್ನು ಎಲ್ಲ ಸದ್ಗುಣಗಳ 
ಮಾದರಿ ಅಂತಲೇ ತಿಳಿದಿದ್ದ ಪಿಯರೆ. ಆ ಗುಣಗಳನ್ನೆಲ್ಲ ಒಂದೇ ಮಾತಿನಲ್ಲಿ 
ಇಚ್ಚಾಶಕ್ತಿ ಎಂದು ಕರೆಯಬಹುದಾಗಿತ್ತು. ಎಲ್ಲ ಥರದ ಜನರೊಂದಿಗೆ ಆರಾಮವಾಗಿ 
ಬೆರೆಯುವ, ಅಗಾಧ ಜ್ಞಾಪಕ ಶಕ್ತಿಯ , ವಿಶಾಲವಾದ ಓದಿನ ( ಅವನು ಎಲ್ಲವನ್ನೂ 
ಓದಿದ್ದ , ಎಲ್ಲವೂ ಅವನಿಗೆ ಗೊತ್ತಿತ್ತು , ಎಲ್ಲವನ್ನೂ ಸ್ವಲ್ಪವಾದರೂ 
ಅರ್ಥಮಾಡಿಕೊಳ್ಳುತ್ತಿದ್ದ) ಎಲ್ಲಕ್ಕಿಂತ ಮಿಗಿಲಾಗಿ ಕಠಿಣ ಶ್ರಮಪಡಬಲ್ಲ, ಕಲಿಯಬಲ್ಲ 
ಪ್ರಿನ್ಸ್ ಆಂಡ್ರ ನ ಸಾಮರ್ಥವನ್ನು ಪಿಯರೆ ಯಾವಾಗಲೂ ಮೆಚ್ಚಿಕೊಳ್ಳುತ್ತಿದ್ದ. 
ಪ್ರಿನ್ಸ್ ಆಂಡ್ರ ಗೆ ಕನಸು ಕಾಣಲಾಗುವುದಿಲ್ಲ, ಫಿಲಾಸಫಿ ಹೇಳಲಾರ ( ಇವುಗಳಲ್ಲಿ 
ಮುಳುಗುವ ಗುಣ ಪಿಯರೆಯಲ್ಲಿ ವಿಶೇಷವಾಗಿತ್ತು ) ಎಂದು ಒಮ್ಮೊಮ್ಮೆ 
ಆಶ್ಚರ್ಯವಾದರೂ ಅದು ಪ್ರಿನ್ಸ್ ಆಂಡೂನಕೊರತೆಯಲ್ಲ, ಸದ್ಗುಣ ಅಂತಲೇ 
ಪಿಯರೆ ಭಾವಿಸಿದ್ದ. 

ಗಾಲಿಗಳು ಸಲೀಸಾಗಿ ತಿರುಗುವುದಕ್ಕೆ ಕೀಲೆಣ್ಣೆ ಅಗತ್ಯವಾಗಿರುವ ಹಾಗೆಯೇ 
ಬದುಕಿನ ಅತ್ಯುತ್ತಮ ಅತ್ಯಂತ ಸ್ನೇಹಮಯ, ಅತ್ಯಂತ ಸರಳವಾದ ಸಂಬಂಧದಲ್ಲೂ 
ಹೊಗಳಿಕೆಯ , ಮೆಚ್ಚುಗೆಯ ಮಾತುಗಳು ಅಗತ್ಯವಾಗಿ ಬೇಕೇ ಬೇಕು. 

' ನನ್ನ ವಿಷಯ ಬಿಡು ನಾವೆಲ್ಲ ನಿನ್ನೆಯವರು . ನನ್ನ ಬಗ್ಗೆ ಮಾತಾಡಿ 
ಉಪಯೋಗವಿಲ್ಲ ನಿನ್ನ ವಿಚಾರ ನೋಡೋಣ' ಅಂದ ಪ್ರಿನ್ಸ್ ಆಂಡೂ ಸ್ವಲ್ಪ 
ಹೊತ್ತು ಮೌನವಾಗಿದ್ದು , ಮನಸ್ಸಿನಲ್ಲಿ ಹುಟ್ಟಿದ ಸಮಾಧಾನದ ಯೋಚನೆಗಳನ್ನು 
ಕಂಡು ಮುಗಳು ನಕ್ಕ . ಅವನ ನಗು ತಕ್ಷಣವೇ ಪಿಯರೆಯ ಮುಖದಲ್ಲೂ 
ಪ್ರತಿಮೂಡಿತು. 
- ' ನನ್ನ ವಿಚಾರ ಏನಿದೆ?” ಸಲೀಸಾದ, ಖುಶಿಯಾದ ನಗುವಾಗಿ ಪಿಯರೆಯ 
ಬಾಯಿ ಹಿಗ್ಗಿತು. ' ನಾನು ಯಾರು ? ಹಾದರಕ್ಕೆ ಹುಟ್ಟಿದವನು!” ತಟ್ಟನೆ ಅವನ 
ರೋಮರೋಮವೆಲ್ಲ ನಾಚಿಕೊಂಡವು. ಈ ಮಾತು ಹೇಳುವುದಕ್ಕೆ ಪಿಯರೆ 
ಬಹಳ ಕಷ್ಟಪಟ್ಟಿದ್ದು ಗೊತ್ತಾಗುತ್ತಿತ್ತು . 'ಹೇಳಿಕೊಳ್ಳುವುದಕ್ಕೆ ಹೆಸರಿಲ್ಲ, ಆಸ್ತಿಯಿಲ್ಲ. 
ನಿಜವಾಗಿ...' ನಿಜವಾಗಿ ಏನು ಎಂದು ಅವನು ಹೇಳಲಿಲ್ಲ. 'ಸದ್ಯಕ್ಕೆ ಸ್ವತಂತ್ರನಾಗಿದ್ದೇನೆ, 
ನಡೀತಿದೆ. ಸರಿ . ಮುಂದೆ ಏನು ಮಾಡಬೇಕು. ಅದು ಮಾತ್ರ ಗೊತ್ತಿಲ್ಲ . ನಿನ್ನ 
ಹತ್ತಿರ ಅದನ್ನೇ ಮಾತಾಡೋಣ ಅಂದುಕೊಂಡಿದ್ದೆ' ಅಂದ. ಮರುಕ ತುಂಬಿದ 
ಕಣ್ಣುಗಳಿಂದ ಪಿಯರೆಯನ್ನು ನೋಡಿದ ಪ್ರಿನ್ಸ್ ಆಂಡೂ . ಹಾಗೆ ನೋಡಿದಾಗ 
ಸ್ನೇಹ ಪ್ರೀತಿಯ ಜೊತೆಗೆ ತನ್ನ ಹಿರಿಮೆಯ ಅರಿವೂ ಇತ್ತು. 

'ನಮ್ಮ ಘನವಂತರ ಸಮಾಜದಲ್ಲಿ ನಿಜವಾಗಿ ಬದುಕಿರುವ ಮನುಷ್ಯ ಅಂದರೆ 
ನೀನೇನೆ, ಅದಕ್ಕೇ ನೀನು ನನಗೆ ತುಂಬ ಹತ್ತಿರದವನು. ಏನೂ ಯೋಚನೆ 
ಮಾಡಬೇಡ. ಯಾವ ಕೆಲಸ ಬೇಕಾದರೂ ಮಾಡು. ಏನೂ ಕೊಳ್ಳೆ ಹೋಗಲ್ಲ. 


ಯುದ್ಧ ಮತ್ತು ಶಾಂತಿ 
ಎಲ್ಲಿ ಹೋದರೂ ಹೊಂದಿಕೊಳ್ಳುತೀ ನೀನು. ಒಂದು ಮಾತು. ಕುರಾಗಿನ್ 
ಮನೆಯವರ ಜೊತೆ ಸೇರಿ ಅವರ ಹಾಗೆ ಆಗಬೇಡ, ಆ ಥರದ ಬದುಕು ನಿನಗೆ 
ಹೊಂದಲ್ಲ. ಬೇಕಾಬಿಟ್ಟಿ ಬದುಕು, ವ್ಯಭಿಚಾರ...' ಅಂದ ಪ್ರಿನ್ಸ್ ಆಂಡೂ 

“ಏನು ಮಾಡಬೇಕು ಅನ್ನುತ್ತೀಯಾ? ಹೆಂಗಸರು ಕಣಯ್ಯಾ ಹೆಂಗಸರು!” 
ಪಿಯರೆ ಭುಜ ಕೊಡವುತ್ತಾ ಹೇಳಿದ. 

ತಿಳಿಯೋದಿಲ್ಲ ನನಗೆ. ಒಳ್ಳೆಯ ಹೆಂಗಸರಾದರೆ ಸರಿ . ಕುರಾಗಿನ ಕರೆಯುವ 
ಹೆಂಗಸರೋ , ಹೆಂಗಸರು , ಹೆಂಡ... ತಿಳಿಯೋದೇ ಇಲ್ಲ ನನಗೆ' ಎಂದ ಪ್ರಿನ್ಸ್ 
ಆಂಡೂ 

ಪಿಯರೆ ಪ್ರಿನ್ಸ್ ವ್ಯಾಸಿಲಿ ಕುರಾಗಿನನ ಮನೆಯಲ್ಲಿ ಉಳಿದಿದ್ದ . ಅವನ ಮಗ 
ಅನತೋಲ್, ಯಾರನ್ನು ಸುಧಾರಿಸಲು ಪ್ರಿನ್ಸ್ ಆಂಡೂ ನ ತಂಗಿಯನ್ನು 
ತಂದುಕೊಳ್ಳಬೇಕೆಂದಿದ್ದರೋ ಆ ಯುವಕನ ಜೊತೆ ಸೇರಿಕೊಂಡು ಅವನ ಉಡಾಳ, 
ಲಂಪಟ ಬದುಕಿನಲ್ಲಿಯೂ ಪಾಲ್ಗೊಂಡಿದ್ದ . 

'ಗೊತ್ತಾ?' ಇದ್ದಕ್ಕಿದ್ದ ಹಾಗೆ ಒಳ್ಳೆಯ ಯೋಚನೆಯೊಂದು ಹೊಳೆದವನ 
ಹಾಗೆ ಪಿಯರೆ ಹೇಳಿದ. 'ಈಗ ಸ್ವಲ್ಪ ದಿನದಿಂದ ಅನ್ನಿಸತಾ ಇದೆ, ಅನತೋಲ್‌ನ 
ಹಾಗೆ ಬದುಕುತಾ ಯಾವ ತೀರ್ಮಾನ ಮಾಡುವುದಕ್ಕೂ ಆಗಲ್ಲ , ಏನೂ ಸರಿಯಾಗಿ 
ಯೋಚನೆ ಮಾಡುವುದಕ್ಕೂ ಆಗಲ್ಲ ಅಂತ. ತಲೆ ನೋವುತಪ್ಪಿದ್ದೇ ಅಲ್ಲ, ಮತ್ತೆ 
ಜೇಬಿನಲ್ಲಿ ದುಡ್ಡಿ ಇಲ್ಲ. ಇವತ್ತು ರಾತ್ರಿ ಪಾರ್ಟಿಗೆ ಕರೆದಿದ್ದಾನೆ, ಹೋಗಲ್ಲ.' 

'ಹೋಗಲ್ಲ ಅಂತ ಪ್ರಾಮಿಸ್ ?' 
“ ಪ್ರಾಮಿಸ್.' 


ಪಿಯರೆ ಗೆಳೆಯನನ್ನು ಬಿಟ್ಟು ಹೊರಟಾಗ ರಾತ್ರಿ ಒಂದು ಗಂಟೆ ದಾಟಿತ್ತು. 
ಪೀಟರ್ಸ್‌ಬರ್ಗಿನ ಜೂನ್ ತಿಂಗಳ ' ಬಿಳಿಯ ಇರುಳು' ಅದು. ಮೋಡವಿಲ್ಲದ 
ಬೇಸಗೆಯ ರಾತ್ರಿ ಬಾಡಿಗೆಯ ಸಾರೋಟು ಏರಿದಾಗ ಮನೆಗೆ ಹೋಗಬೇಕು 
ಅನ್ನುವ ಉದ್ದೇಶವೇ ಪಿಯರೆಯ ಮನಸ್ಸಿನಲ್ಲಿತ್ತು. ಮನೆ ಹತ್ತಿರವಾಗುತ್ತಿದ್ದ ಹಾಗೆ 
ಸಂಜೆಯಂತೆಯೋ ಹಗಲಿನಂತೆಯೇ ಇದ್ದ ಇಂಥ ರಾತ್ರಿಯಲ್ಲಿ ನಿದ್ರೆ ಬರುವುದೇ 
ಇಲ್ಲ ಅನ್ನಿಸಿತು . ರಸ್ತೆ ಬಹಳ ದೂರದವರೆಗೆ ನಿರ್ಜನವಾಗಿತ್ತು. ದಾರಿಯಲ್ಲಿ 
ಹೋಗುತ್ತಿರುವಾಗ ಜೂಜಾಟದ ಹಳೆಯ ಪಟಾಲಮ್ ಅನತೋಲ್ ಕುರಾಗಿನ 
ಮನೆಯಲ್ಲಿ ಸೇರಿರುತ್ತದೆ; ಕುಡಿತ, ಮತ್ತೆ ಪಿಯರೆಗೆ ಪ್ರಿಯವಾದಂಥ ಮೋಜು 
ಮಜಾ ಇರುತ್ತದೆ ಅನ್ನುವುದು ಜ್ಞಾಪಕಕ್ಕೆ ಬಂದಿತು. 

- “ಕುರಾಗಿನ್‌ನ ಮನೆಗೆ ಹೋದರೆ ಚೆನ್ನಾಗಿರುತ್ತದೆ' ಅಂದುಕೊಂಡ. ಅಲ್ಲಿಗೆ 
ಮತ್ತೆ ಹೋಗುವುದಿಲ್ಲವೆಂದು ಪ್ರಿನ್ಸ್ ಆಂಡ್ರ ಗೆ ಕೊಟ್ಟಿದ್ದ ಮಾತು ನೆನಪಿಗೆ 


೪೩ 


ಸಂಪುಟ ೧ - ಸಂಚಿಕೆ ಒಂದು 


ಬಂದಿತು. 

ಬೆನ್ನೆಲುಬಿಲ್ಲದವರು ಎಂದು ಕರೆಯಬಹುದಾದವರಿಗೆ ಆಗುವಂತೆಯೇ 
ಪಿಯರೆಯ ಮನಸ್ಸಿನಲ್ಲಿ ಕೂಡ ಹಳೆಯ ಲಂಪಟತೆಯನ್ನು ಇನ್ನೊಂದು ಬಾರಿಗೆ 
ರುಚಿ ನೋಡಬೇಕು, ಅಲ್ಲಿಗೆ ಹೋಗಬೇಕು ಅನ್ನುವ ಬಲವಾದ ಆಸೆ ಹುಟ್ಟಿತು. 
'ಪ್ರಿನ್ಸ್ ಆಂಡ್ರ ಗೆ ಕೊಟ್ಟ ಮಾತು ಪ್ರಮಾಣವಲ್ಲ, ಹೋಗುವುದಿಲ್ಲವೆಂದು ಅವನಿಗೆ 
ಮಾತು ಕೊಡುವುದಕ್ಕೆ ಮೊದಲೇ ಖಂಡಿತ ಬರುತ್ತೇನೆ ಅಂತ ಪ್ರಿನ್ಸ್ ಅನತೋಲ್‌ನಿಗೆ 
ವಾಗ್ದಾನಮಾಡಿದ್ದೆ' ತಟ್ಟನೆ ಅನ್ನಿಸಿತು. ಆಮೇಲೆ, ಅಂಥ ಆಣೆ ಪ್ರಮಾಣಗಳೆಲ್ಲ 
ಸಾಪೇಕ್ಷವಾದವು, ಅವಕ್ಕೆಲ್ಲ ಖಚಿತವಾದ ಅರ್ಥವೇನೂ ಇಲ್ಲ, ನಾಳೆಯೇ ಸಾವು 
ಬರಬಹುದು, ಆಗಬಾರದ್ದು ಆಗಬಹುದು , ಆಗ ಪ್ರಾಮಾಣಿಕತೆಗೂ 
ಅಪ್ರಾಮಾಣಿಕತೆಗೂ ವ್ಯತ್ಯಾಸವೇ ಇರುವುದಿಲ್ಲ ಅನ್ನುವ ಯೋಚನೆ ಹುಟ್ಟಿತು. 
ತನ್ನ ತೀರ್ಮಾನ, ಉದ್ದೇಶಗಳನ್ನು ನಾಶಮಾಡುವ ಇಂಥ ಯೋಚನಾಲಹರಿಗಳಲ್ಲಿ 
ಆಗಾಗ ಮಳುಗಿಬಿಡುವ ಸ್ವಭಾವ ಪಿಯರೆಗೆ ಇತ್ತು. ಅವನು ಕುರಾಗಿನ ಮನೆಗೆ 
ಹೋದ. 
* ಅಶ್ವದಳದ ಲಾಯಗಳಿಗೆ ಸಮೀಪದಲ್ಲಿದ್ದ ಅನತೋಲ್‌ನ ದೊಡ್ಡ ಮನೆಗೆ 
ಹೋದ. ಎಲ್ಲ ದೀಪ ಉರಿಯುತ್ತಿದ್ದ ಪೋರ್ಟಿಕೋ ದಾಟಿ, ಮೆಟ್ಟಿಲು ಏರಿ, 
ಮಹಡಿ ಹತ್ತಿ, ಬಾಗಿಲು ತೆರೆದೇ ಇದ್ದ ರೂಮಿಗೆ ಕಾಲಿಟ್ಟ, ಯಾರೂ ಇರಲಿಲ್ಲ. 
ಖಾಲಿ ಬಾಟಲಿ , ನಿಲುವಂಗಿ, ಉದ್ದ ಶೂಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ರೂಮು 
ಹೆಂಡದ ವಾಸನೆ ಹೊಡೆಯುತ್ತಿತ್ತು. ದೂರದಲ್ಲೆಲ್ಲೊ ಜನ ಮಾತಾಡುತ್ತಿರುವುದು , 
ಕೂಗಾಡುತ್ತಿರುವುದು ಕೇಳಿಸಿತು. . 

ಆಟ ಮುಗಿಸಿದ್ದರು.ಊಟವೂ ಆಗಿತ್ತು. ಪಾರ್ಟಿ ಮುಗಿದಿರಲಿಲ್ಲ. ಪಿಯರೆ 
ನಿಲುವಂಗಿಯನ್ನು ಎಸೆದು, ಮೊದಲ ಕೋಣೆಗೆ ಹೋದ. ಎಂಜಲು ತಟ್ಟೆ ಹಾಗೇ 
ಇದ್ದವು. ಸೇವಕನೊಬ್ಬ ಯಾರೂ ನೋಡುವುದಿಲ್ಲ ಅಂದುಕೊಂಡು ಗ್ಲಾಸುಗಳಲ್ಲಿ 
ಉಳಿದಿದ್ದ ಮದ್ಯವನ್ನು ಕುಡಿಯುತ್ತಾ ಇದ್ದ. ಮೂರನೆಯ ಕೋಣೆಯಿಂದ ಜೋರಾದ 
ನಗು , ಪರಿಚಿತವಾದ ಧ್ವನಿಗಳ ಕೂಗಾಟ, ಕರಡಿಯ ಗುರುಗುರು ಸದ್ದು ಕೇಳಿಸುತ್ತಿತ್ತು. 
ಎಂಟೊಂಬತ್ತು ಯುವಕರು ತೆರೆದ ಕಿಟಕಿಯ ಹತ್ತಿರ ನೂಕಾಡುತ್ತಿದ್ದರು. ಇನ್ನು 
ಮೂರು ಜನ ಕರಡಿಯ ಮರಿಯೊಡನೆ ಆಡುತ್ತಿದ್ದರು. ಒಬ್ಬಾತ ಅದಕ್ಕೆ ಕಟ್ಟಿದ್ದ 
ಸರಪಳಿ ಜಗ್ಗಿ ಎಳೆಯುತ್ತಾ, ಮಿಕ್ಕವರ ಮೇಲೆ ನುಗ್ಗಿಸಿ ಹೆದರಿಸುತ್ತಿದ್ದ . 

“ಸ್ಟೀವನ್ಸ್ ಮೇಲೆ ನೂರು!' ಒಬ್ಬ ಕಿರುಚಿದ. 
“ಕಿಟಕಿ ಹಿಡಿದುಕೊಳ್ಳುವ ಹಾಗಿಲ್ಲ!' ಇನ್ನೊಬ್ಬ ಕೂಗಿದ. 

'ದೊಲೊಯೋವ್ ಮೇಲೆ ನನ್ನ ಬೆಟ್ . ಕುರಾಗಿನ್ ನೀನೇ ಸಾಕ್ಷಿ ' 
ಮೂರನೆಯವನು ಹೇಳಿದ. 


೪೪ 

ಯುದ್ಧ ಮತ್ತು ಶಾಂತಿ 
'ಕರಡಿ ಬಿಟ್ಟು ಬಾ , ಇಲ್ಲಿ ಬೆಟ್ ಕಟ್ಟಿದಾರೆ .' 
“ಎಣ್ಣೆ ಹಾಕಿಕೋ , ಇಲ್ಲಾ ಸೋತುಬಿಡುತೀಯಾ!' ನಾಲ್ಕನೆಯವನು ಹೇಳಿದ. 

' ಜಾಕಬ್, ಬಾಟಲಿ ತೆಗೆದುಕೊಂಡು ಬಾರೋ , ಜಾಕಬ್!”, ಅನತೋಲ್ 
ಕೂಗಿದ, ಎತ್ತರವಾದ, ಸುಂದರವಾದ ಯುವಕ , ನಯವಾದ ಅಂಗಿ ತೊಟ್ಟು, 
ಎದೆಯ ಮಧ್ಯದವರೆಗೆ ಗುಂಡಿ ಬಿಚ್ಚಿಕೊಂಡು ಅನತೋಲ್ ಗುಂಪಿನ ಮಧ್ಯೆ 
ನಿಂತಿದ್ದ. ಸ್ವಲ್ಪ ತಾಳಿ , ಯಾರು ಬಂದಿದಾರೆ ನೋಡಿ- ಪೀತ್ಯಾ ಬಾರಯ್ಯಾ ಬಾ !' 
ಅನ್ನುತ್ತಾ ಪಿಯರೆಯ ಕಡೆ ತಿರುಗಿದ. 

ಕಿಟಕಿಯ ಬದಿಯಿಂದ, ಮಾಮೂಲಿ ಎತ್ತರದ , ಸ್ವಚ್ಛ ನೀಲಿ ಕಣ್ಣುಗಳ, 
ಕುಡುಕರ ನಡುವೆ ಬುದ್ದಿ ಸ್ಥಿಮಿತವನ್ನು ಕಾಪಾಡಿಕೊಂಡಿದ್ದವನ ಧ್ವನಿ ಕೇಳಿಸಿತು. 
' ಇಲ್ಲಿ ಬನ್ನಿ , ಬೆಟ್ ದುಡ್ಡು ಇತ್ಯರ್ಥಮಾಡಿಕೊಳ್ಳಿ!' ಹೀಗೆಂದವನು ದೊಲೊಯೋವ್. 
ಅವನು ಸೆಮೆನೊವ್ ರೆಜಿಮೆಂಟಿನ ಒಬ್ಬ ಅಧಿಕಾರಿ, ಜೂಜುಗಾರ, ಬಡಾಯಿಕೋರ, 
ಆತುರಗಾರ ತಿಕ್ಕಲ . ಸದ್ಯಕ್ಕೆ ಅನತೋಲ್‌ಜೊತೆಗೇ ಉಳಿದುಕೊಂಡಿದ್ದ . ಈ 
ಪಟಾಲಮ್ಮನ್ನು ಕಣ್ಣರಳಿಸಿಕೊಂಡು ನೋಡುತ್ತಾ ಪಿಯರೆ 
- 'ಗೊತ್ತಾಗಲಿಲ್ಲ, ಏನು ನಡೀತಿದೆ ಇಲ್ಲಿ' ಅಂದ. 

' ತಾಳಿ, ಇವನು ಇನ್ನೂ ಕುಡಿದೇ ಇಲ್ಲಾ! ಬಾಟಲು ಬರಲಿ ' ಅನ್ನುತ್ತಾ 
ಅನತೋಲ್ ಮೇಜಿನ ಮೇಲಿದ್ದ ಗ್ಲಾಸು ಹಿಡಿದು ಪಿಯರೆಯ ಹತ್ತಿರ ಹೋದ. 

“ಮೊದಲು ಕುಡೀ ನೀನು!' ಅಂದ. 
* ಪಿಯರೆ ಒಂದಾಮೇಲೆ ಒಂದು ಗ್ಲಾಸು ಇಳಿಸಿದ. ಕಿಟಕಿಯ ಹತ್ತಿರ ಮತ್ತೆ 
ಗುಂಪು ಸೇರಿ, ಅಮಲೇರಿ ತೂರಾಡುತ್ತಿದ್ದವರನ್ನು ಅನುಮಾನದಿಂದ ನೋಡುತ್ತಾ 
ಮಾತು ಕೇಳಿಸಿಕೊಳ್ಳುತ್ತಿದ್ದ . ಅನತೋಲ್ ಮತ್ತೆ ಮತ್ತೆ ಪಿಯರೆಯ ಗ್ಲಾಸು 
ತುಂಬಿಸುತ್ತಿದ್ದ : ಮೂರನೆಯ ಅಂತಸ್ತಿನ ಕಿಟಕಿಯ ಅಂಚಿನಲ್ಲಿ ಕೂತು, ಕಾಲು 
ಹೊರಗೆ ಇಳಿಬಿಟ್ಟುಕೊಂಡು, ಒಂದು ಇಡೀ ಬಾಟಲು ರಮ್ ಕುಡಿಯುತ್ತೇನೆ 
ಎಂದು ಹೀಗೇ ಸುಮ್ಮನೆ ಬಂದಿದ್ದ ಇಂಗ್ಲೆಂಡಿನ ನೌಕಾದಳದ ಅಧಿಕಾರಿ ಸ್ಟೀವನ್ಸ್ 
ಅನ್ನುವವನ ಜೊತೆದೋಖೋವ್ ಪಂದ್ಯ ಕಟ್ಟಿದಾನೆ ಅಂತ ಹೇಳಿದ. 

- 'ತಗೋ , ಈ ಬಾಟಲಿ ಮುಗಿಸು' ಅನ್ನುತ್ತಾ ಅನತೋಲ್ ಪಿಯರಿಗೆ 
ಕೊನೆಯ ಗ್ಲಾಸು ಕೊಟ್ಟು ಇಲ್ಲದಿದ್ದರೆ ಬಿಡಲ್ಲ!' ಅಂದ. 

“ ಬೇಡ, ಸಾಕು' ಅನ್ನುತ್ತಾ ಅನತೋಲ್‌ನನ್ನು ಪಕ್ಕಕ್ಕೆ ತಳ್ಳಿ ಪಿಯರೆ ಕಿಟಕಿಯ 
ಹತ್ತಿರ ಹೋದ 
. 
- ದೋಖೋವ್ ಇಂಗ್ಲಿಷ್ ಅಧಿಕಾರಿಯ ಕೈ ಹಿಡಿದುಕೊಂಡು, ಮುಖ್ಯವಾಗಿ 
ಅನತೋಲ್ ಮತ್ತು ಪಿಯರೆಯರನ್ನು ನೋಡುತ್ತಾ ಪಂದ್ಯದ ವಿವರಗಳನ್ನು 
ಹೇಳಿದ. 


೪೫ 
ಸಂಪುಟ ೧ - ಸಂಚಿಕೆ ಒಂದು 

ದೊಲೊಖೋವ್ ಮಧ್ಯಮ ಎತ್ತರದ, ಇಪ್ಪತ್ತೈದರ ಆಸುಪಾಸಿನ ಮನುಷ್ಯ, 
ಗುಂಗುರು ಕೂದಲು, ಹೊಳೆಯುವ ನೀಲಿ ಕಣ್ಣು. ಪದಾತಿ ದಳದ ಎಲ್ಲ ಅಧಿಕಾರಿಗಳ 
ಹಾಗೆ ಅವನಿಗೂ ಮೀಸೆ ಇರಲಿಲ್ಲ . ಅದಕ್ಕೇ ಅವನ ಮುಖದ ವಿಶೇಷ ಅನ್ನುವ 
ಹಾಗೆ ಇದ್ದ ಬಾಯಿ ಎದ್ದು ಕಾಣುತ್ತಿತ್ತು. ಸುಂದರವಾಗಿ ಬಾಗಿತ್ತು. ಅವನ ಮೇಲ್ದುಟಿಯ 
ಮಧ್ಯೆ ಸ್ಪಷ್ಟವಾದ ಹಳ್ಳದಂತಿದ್ದು ತೆಳ್ಳನೆಯ ಕೆಳತುಟಿಯನ್ನು ಬಲವಾಗಿ ಒತ್ತುವಂತೆ 
ಇದ್ದುದರಿಂದ ಅವನ ಬಾಯಿಯ ಎರಡೂ ಅಂಚುಗಳಲ್ಲಿ ಎರಡು ಮುಗುಳಗುಗಳು 
ಏಕ ಕಾಲದಲ್ಲಿ ನಲಿದಾಡುವಂತೆ ತೋರುತ್ತಿದ್ದವು. ಜೊತೆಗೇ ಅವನ ಕಣ್ಣುಗಳಲ್ಲಿ 
ಸಿಗ್ಗಿಲ್ಲದ ಜಾಣತನವೂ ದೃಢ ನಿರ್ಧಾರವೂ ಬೆರೆತಿದ್ದು ಯಾರಾದರೂ ಸರಿ , 
ಅವನ ಮುಖ ಗಮನಿಸದೆ ಇರಲು ಸಾಧ್ಯವೇ ಇಲ್ಲ ಅನ್ನುವ ಹಾಗಿತ್ತು. 
ದೊಲೊಖೋವ್‌ಗೆ ಆದಾಯ ಕಡಮೆ , ಪ್ರಭಾವಶಾಲಿಗಳ ಸಂಪರ್ಕವೂ ಇರಲಿಲ್ಲ. 
ಅನತೋಲ್ ಹತ್ತಾರು ಸಾವಿರ ರೂಬೆಲ್‌ಗಳನ್ನು ಖರ್ಚುಮಾಡುತ್ತಿದ್ದರೂ , 
ದೊಲೊಖೋವ್ ಅವನೊಡನೆಯೇ ಇದ್ದರೂ ಅದು ಹೇಗೋ ಸ್ವತಃ ಅನತೋಲ್ 
ಮತ್ತು ಬೇರೆಯವರೆಲ್ಲರೂ ತನ್ನನ್ನೇ ಹೊಗಳುವ ಹಾಗೆ ಅನತೋಲ್‌ಗಿಂತ ಹೆಚ್ಚು 
ಮರ್ಯಾದೆಯಿಂದ ಕಾಣುವ ಹಾಗೆ ಮಾಡಿಕೊಂಡಿದ್ದ .ದೋಖೋವ್ ಎಲ್ಲದರ 
ಮೇಲೂ ಪಣ ಕಟ್ಟುತ್ತಿದ್ದ , ಸಾಮಾನ್ಯವಾಗಿ ಗೆಲ್ಲುತ್ತಿದ್ದ . ಎಷ್ಟೇ ಕುಡಿದರೂ ಬುದ್ದಿಯ 
ಸ್ಥಿಮಿತ ಕಳಕೊಳ್ಳುತ್ತಿರಲಿಲ್ಲ. ಕುರಾಗಿನ ಮತ್ತು ದೊಲೊಯೋವ್ ಇಬ್ಬರೂ ಆ 
ಕಾಲದ ಪೀಟರ್ಸ್‌ಬರ್ಗಿನಲ್ಲಿ ಮಹಾನ್ ಪೋಕರಿಗಳೆಂದೂ , ಕಚ್ಚೆಹರುಕರೆಂದೂ 
ಕುಪ್ರಸಿದ್ದರಾಗಿದ್ದರು. 

ರಮ್ ಬಾಟಲು ಬಂದಿತು. ಕಿಟಕಿಯ ಅಂಚಿನಲ್ಲಿ ಯಾರೂ ಕೂರದ 
ಹಾಗೆ ಅಡ್ಡವಾಗಿ ಹಾಕಿದ್ದ ಪ್ರೇಮನ್ನು ಇಬ್ಬರು ಸೇವಕರು ಬಲವಂತವಾಗಿ ಕಿತ್ತು 
ತೆಗೆಯುತ್ತಿದ್ದರು. ಎಲ್ಲರ ಮಾತು ಕೂಗಾಟಗಳಿಂದ ಅಂಜಿ ತಬ್ಬಿಬ್ಬಾಗಿದ್ದರು. 
ಅನತೋಲ್ ತಟ್ಟಾಡಿಕೊಂಡು ಕಿಟಕಿಯ ಹತ್ತಿರ ಹೋದ. ಏನನ್ನಾದರೂ ಕುಟ್ಟಿ 
ಪುಡಿಮಾಡಬೇಕು ಅನ್ನಿಸಿತ್ತು. ಕೆಲಸದವರನ್ನು ಪಕ್ಕಕ್ಕೆ ದಬ್ಬಿ ಕಿಟಕಿಯ ಪ್ರೇಮನ್ನು 
ಹಿಡಿದು ಎಳೆದ. ಬರಲಿಲ್ಲ. ಒಂದು ಹಲಗೆಯನ್ನು ಮುರಿದ . 
* ' ಬಾರಯ್ಯಾ , ಹರ್ಕುಲಿಸ್, ನೀನೊಂದು ಕೈ ನೋಡು' ಪಿಯರೆಯನ್ನು 
ಕರೆದ, ಪಿಯರೆ ಓಕ್ ಮರದ ಪ್ರೇಮಿನ ಅಡ್ಡಪಟ್ಟಿ ಅಲ್ಲಾಡಿಸಿ ಎತ್ತಿ, ಕಿತ್ತುಹಾಕಿದ. 

“ಪೂರಾ ತೆಗೆದೇ ಬಿಡಿ . ಇಲ್ಲದಿದ್ದರೆ ನಾನು ಅದನ್ನು ಹಿಡಿದುಕೊಂಡಿದ್ದೇನೆ 
ಅನ್ನುತಾರೆ' ಅಂದ ದೊಲೊಯೋವ್. 

' ಇಂಗ್ಲೀಷಿನವನು ಜಂಬ ಹೊಡೀತಿದಾನಾ ?... ಹಾಂ ...ಎಲ್ಲಾ ಸರೀ ಇದೆಯಾ ?” 
ಅನತೋಲ್ ಕೇಳಿದ. 

ಕೈಯಲ್ಲಿ ಬಾಟಲು ಹಿಡಿದು ಕಿಟಕಿಯ ಕಡೆ ಹೆಜ್ಜೆ ಹಾಕುತ್ತಿದ್ದ 


೪೬ 

ಯುದ್ಧ ಮತ್ತು ಶಾಂತಿ 
ದೋಖೋವ್‌ನನ್ನು ನೋಡುತ್ತಾ 'ಸರಿ' ಅಂದ ಪಿಯರೆ. ಕರಗುತ್ತಿದ್ದ ಇರುಳ 
ಬೆಳಕಿನೊಡನೆ ಬೆರೆತ ಮುಂಜಾವದ ಮಸುಕು ಬೆಳಕು ಆಕಾಶದಲ್ಲಿತ್ತು . 
ದೊಲೊಯೋವ್ಕೈಯಲ್ಲಿ ರಮ್ ಬಾಟಲಿ ಹಿಡಿದುಕೊಂಡೇ ಕಿಟಕಿಯ ಅಂಚಿನ 
ಮೇಲೆ ಹಾರಿ ನಿಂತು, 'ಎಲ್ಲಾರೂ ಕೇಳಿ!' ಅಂದ. ನಿಶ್ಯಬ್ದ ಆವರಿಸಿತು. 

' ಐವತ್ತು ಇಂಪೀರಿಯಲ್, ಅಂದರೆ ಐನೂರು ರೂಬಲ್ ಬೆಟ್ ನನ್ನದು' 
ಇಂಗ್ಲಿಷಿನವನಿಗೆ ಅರ್ಥವಾಗಲೆಂದು ಫ್ರೆಂಚಿನಲ್ಲಿ ಹೇಳಿದ.ದೋಖೋವ್‌ಗೆ 
ಫ್ರೆಂಚ್ ಸರಿಯಾಗಿ ಬರುತ್ತಿರಲಿಲ್ಲ. "...ಅಥವಾ ನೂರು ಇರಲಿ ಅನ್ನುತೀಯಾ? 
ಅಂದ. 
* 'ಇಲ್ಲ. ಐವತ್ತು ,' ಅಂದ ಇಂಗ್ಲಿಷಿನವನು. 

- 'ಸರಿ , ಐವತ್ತು, ಹಾಗಾದರೆ, ಬಾಯಿಗಿಟ್ಟುಕೊಂಡ ಬಾಟಲು ತೆಗೆಯದೆ, 
ಕಿಟಕಿಯ ಅಂಚಿನಲ್ಲಿ ಕೂತು, ರಸ್ತೆನೋಡುತ್ತಾ ಕುಡಿದು ಮುಗಿಸುತ್ತೇನೆ' ಅನ್ನುತ್ತಾ, 
ಕಿಟಕಿಯ ಆಚೆಗೆ ಬಾಗಿ, ಇಳಿಜಾರಾದ ಚೆಜ್ಜಾದ ಅಂಚಿನ ಜಾಗ ತೋರಿಸುತ್ತಾ 
ಹೇಳಿದ, “ ಮತ್ತೆ ನಾನು ಸಪೋರ್ಟಿಗೆ ಅಂತ ಏನೂ ಹಿಡಿದುಕೊಳ್ಳಲ್ಲ, ಸರಿಯಾ?' 
ಅಂದ. 
. 'ಸರಿ' ಅಂದ ಇಂಗ್ಲಿಷಿನವನು. 

ಅನತೋಲ್ ನಾವಿಕನ ಕಡೆ ತಿರುಗಿ, ಅವನ ಕೋಟಿನ ಗುಂಡಿ ಹಿಡಿದು, 
ಅವನು ಕುಳ್ಳನಾದ್ದರಿಂದ ತನ್ನ ತಲೆಯನ್ನು ಕೊಂಚ ತಗ್ಗಿಸಿ ಅವನನ್ನೇ ನೋಡುತ್ತಾ 
ಪಂದ್ಯದ ವಿವರಗಳನ್ನು ಇಂಗ್ಲಿಷಿನಲ್ಲಿ ಮತ್ತೆ ವಿವರಿಸಿದ. 
- 'ಒಂದು ನಿಮಿಷ ' 

ದೋಖೋವ್ಕಿರುಚಿದ. ಎಲ್ಲರ ಗಮನ ಸೆಳೆಯುವುದಕ್ಕೆ 
ಕಿಟಕಿಯ ಬಾಗಿಲಿಗೆ ಬಾಟಲನ್ನು ಬಡಿದು ಸದ್ದು ಮಾಡಿದ. ' ತಾಳು ಕುರಾಗಿನ್. 
ಎಲ್ಲಾರೂ ಕೇಳಿ! ಬೇರೆ ಯಾವನಾದರೂ ನಾನು ಮಾಡಿದ ಹಾಗೇ ಮಾಡಿದರೆ 
ಅವನಿಗೆ ನೂರು ಇಂಪೀರಿಯಲ್ ಕೊಡುತ್ತೇನೆ. ಸರಿಯಾ?' ಅಂದ. 
- ಹೊಸ ಸವಾಲನ್ನು ಒಪ್ಪಿಕೊಂಡನೋ ಇಲ್ಲವೋ ಅನ್ನುವುದದು ಗೊತ್ತಾಗದ 
ಹಾಗೆ ಇಂಗ್ಲಿಷಿನವನು ತಲೆ ಹಾಕಿದ. ತನಗೆಲ್ಲ ಗೊತ್ತಾಯಿತು ಅನ್ನುವ ಹಾಗೆ ತಲೆ 
ಹಾಕುತ್ತಲೇ ಇದ್ದರೂ ಅನತೋಲ್ ಅವನ ಕೋಟನ್ನು ಬಿಡದೆ,ದೋಖೋವ್ 
ಹೇಳಿದ ಮಾತುಗಳನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿ ಹೇಳುತ್ತಲೇ ಇದ್ದ. ಲೈಫ್ 
ಗಾರ್ಡಿನಲ್ಲಿ ಹುಸ್ಸಾರ್ ಆಗಿದ್ದ ಬಡಕಲು ಮೈಯ ಯುವಕ , ಅವತ್ತಿನ ಆಟದಲ್ಲಿ 
ತುಂಬ ದುಡ್ಡು ಸೋತಿದ್ದವನು, ಕಿಟಕಿಯ ಮೇಲೆ ಹತ್ತಿ, ಕೆಳಗೆ ಬಗ್ಗಿ ನೋಡಿದ. 
* ಕಲ್ಲು ಹಾಸಿನ ರಸ್ತೆ ನೋಡುತ್ತಾ 'ಅಯ್ಯಪ್ಪಾ!' ಅಂದ. 

' ಮುಚ್ಚು ಬಾಯಿ!' ಅನ್ನುತ್ತಾ ದೊಲೊವ್ ಆ ಹುಡುಗನನ್ನು ಹಿಂದಕ್ಕೆಳೆದ. 
ಹುಡುಗ ರಿಕಾಪು ಎಡವಿಕೊಂಡು, ಆಯ ತಪ್ಪಿ ತಟ್ಟಾಡಿಕೊಂಡು, ಹಿಂದಕ್ಕೆ , 


ಸಂಪುಟ ೧ - ಸಂಚಿಕೆ ಒಂದು 


ರೂಮಿನ ನೆಲದ ಮೇಲೆ ಬಿದ್ದ. 

ದೊಲೊಖೋವ್ ರಮ್ ಬಾಟಲಿಯನ್ನು ತನ್ನ ಕೈಗೆ ಎಟುಕುವ ಹಾಗೆ 
ಕಿಟಕಿಯ ಅಂಚಿನ ಮೇಲಿ ನಿಲ್ಲಿಸಿ, ನಿಧಾನವಾಗಿ, ಹುಷಾರಾಗಿ ಕಿಟಕಿಯಾಚೆಗೆ 
ಕಾಲು ಇಳಿಬಿಟ್ಟ, ಕಿಟಕಿಯ ಎರಡೂ ಬದಿಗೆ ಕೈ ಒತ್ತಿ ಸರಿಯಾಗಿ ಕೂತುಕೊಂಡ; 
ಕೈ ಬಿಟ್ಟು ಸ್ವಲ್ಪ ಬಲಕ್ಕೆ, ಆಮೇಲೆ ಸ್ವಲ್ಪ ಎಡಕ್ಕೆ ಸರಿದು ಸರಿಯಾಗಿ ಕೂತು ಬಾಟಲಿ 
ಎತ್ತಿಕೊಂಡ. ಅನತೋಲ್ ಎರಡು ಮೇಣದ ಬತ್ತಿಗಳನ್ನು ಹಚ್ಚಿಕೊಂಡು ಬಂದು 
ಆಗಲೇ ಸಾಕಷ್ಟು ಬೆಳಕಾಗಿದ್ದರೂ ಕಿಟಕಿಯ ಹತ್ತಿರ ಇಟ್ಟ . ಬಿಳಿಯ ಅಂಗಿ 
ತೊಟ್ಟಿದ್ದ ದೊಲೊಯೋವ್‌ನ ಬೆನ್ನು , ತಲೆಯ ಗುಂಗುರು ಕೂದಲ ಮೇಲೆ 
ಎರಡೂ ಬದಿಯಿಂದ ಬೆಳಕು ಬೀಳುತ್ತಿತ್ತು. ಎಲ್ಲರೂ ಕಿಟಕಿಯ ಹತ್ತಿರ ಮುಕುರಿದರು. 
ಇಂಗ್ಲಿಷಿನವನು ಎಲ್ಲರಿಗಿಂತ ಮುಂದೆ ಇದ್ದ . ಪಿಯರೆ ಮುಗುಳಕ, ಏನೂ ಹೇಳಲಿಲ್ಲ. 
ಒಬ್ಬಾತ , ಅಲ್ಲಿದ್ದ ಎಲ್ಲರಿಗಿಂತ ವಯಸ್ಸಾಗಿದ್ದವನು, ಇದ್ದಕ್ಕಿದ್ದ ಹಾಗೆ ಮುಂದಕ್ಕೆ 
ನುಗ್ಗಿ ಬಂದ. ಅವನ ಮುಖದಲ್ಲಿ ಭಯವಿತ್ತು,ಕೋಪವಿತ್ತು. ದೊಲೊಯೋವ್‌ನ 
ಅಂಗಿಯನ್ನು ಹಿಡಿದು ಹಿಂದಕ್ಕೆಳೆಯಲು ನೋಡಿದ. 

- 'ಹುಚ್ಚು ಇದು! ಸತ್ತು ಹೋಗುತಾನೆ ಅವನು!' ಅಂದ ಎಲ್ಲರಿಗಿಂತ ಹೆಚ್ಚು 
ಬುದ್ಧಿಯಿದ್ದವನು. 

ಅನತೋಲ್ ಅವನನ್ನು ತಡೆದ . 

' ಮುಟ್ಟ ಬೇಡ ಅವನನ್ನ ! ಹೆದರಿಸುತೀಯ, ಬಿದ್ದು ಸತ್ತು ಹೋಗುತ್ತಾನೆ, 
ಗೊತ್ತಾ!' ಅಂದ. 
- ದೊಲೊಯೋವ್ ತಿರುಗಿ ನೋಡಿ, ಎರಡೂ ಕೈಯಲ್ಲಿ ಕಿಟಕಿಯ ಅಂಚು 
ಹಿಡಿದುಕೊಂಡೇ ಸರಿಯಾಗಿ ಕೂತ. 

- ' ಮತ್ತೆ ಯಾರಾದರೂ ಮುಟ್ಟಿದರೆ ಎತ್ತಿ ಬಿಸಾಕಿ ಬಿಡುತ್ತೇನೆ' ತೆಳ್ಳನೆ ತುಟಿ 
ಬಿಗಿಯಾಗಿ ಕಚ್ಚಿಕೊಂಡು ಒಂದೊಂದೇ ಮಾತು ಒತ್ತಿ ಹೇಳಿದ. 

ಮತ್ತೆ ಮುಖ ತಿರುಗಿಸಿ ಹೊರಗೆ ನೋಡುತ್ತಾ, ಕೈ ಬಿಟ್ಟು, ಬಾಟಲಿ ಎತ್ತಿ 
ತುಟಿಗಿಟ್ಟುಕೊಂಡು, ತಲೆಯನ್ನು ಹಿಂದಕ್ಕೆ ಬಾಗಿಸಿ, ಇನ್ನೊಂದು ಕೈಯನ್ನು ಗಾಳಿಯಲ್ಲಿ 
ಪಕ್ಕಕ್ಕೆ ಚಾಚಿ ಜೋಲಿ ಹಿಡಿದ. ರೂಮಿನಲ್ಲಿ ಬಿದ್ದಿದ್ದ ಗಾಜಿನ ಚೂರುಗಳನ್ನು 
ಆಯುವುದಕ್ಕೆ ಬಂದಿದ್ದ ಸೇವಕ ಮುಂದೆ ಬಾಗಿದ್ದವನು ಹಾಗೇ ನಿಶ್ಚಲವಾಗಿ, 
ದೊಲೊಯೋವ್‌ನ ಬೆನ್ನಿಗೇ ದೃಷ್ಟಿ ಅಂಟಿಸಿ ನಿಂತುಬಿಟ್ಟ. ಅನತೋಲ್ ನೆಟ್ಟಗೆ 
ನಿಂತು ದಿಟ್ಟಿಸುತ್ತಿದ್ದ. ಒಂದು ಪಕ್ಕಕ್ಕೆ ಸರಿದು ನಿಂತು ನೋಡುತ್ತಿದ್ದ ಇಂಗ್ಲಿಷಿನವನು 
ತುಟಿ ಬಿಗಿದುಕೊಂಡಿದ್ದ . ಇದನ್ನೆಲ್ಲ ತಡೆಯಲು ನೋಡಿದ್ದಾತ ರೂಮಿನ ಮೂಲೆಗೆ 
ಧಾವಿಸಿ ಹೋಗಿ,ಗೋಡೆಯ ಕಡೆಗೆ ತಿರುಗಿಕೊಂಡುಸೋಫಾದ ಮೇಲೆ ಮಲಗಿಬಿಟ್ಟ. 
ಪಿಯರೆ ಮುಖ ಮುಚ್ಚಿಕೊಂಡಿದ್ದ. ಮರೆತುಹೋಗಿದ್ದ ಮುಗುಳು ನಗೆಯೊಂದು 


ಯುದ್ಧ ಮತ್ತು ಶಾಂತಿ 
ತುಟಿಯಂಚಿನಲ್ಲಿ ಮಸುಕಾಗಿ ಹಾಗೆಯೇ ಉಳಿದಿತ್ತು. ಮುಖದ ತುಂಬ ಭಯ , 
ಆತಂಕವಿತ್ತು. ಯಾರೂ ಮಾತಾಡಲಿಲ್ಲ. ಪಿಯರೆ ಕಣ್ಣು ಮುಚ್ಚಿಕೊಂಡಿದ್ದ ಕೈ 
ತೆಗೆದ.ದೋಖೋವ್ ಅಲ್ಲಿ ಇನ್ನೂ ಅದೇ ಭಂಗಿಯಲ್ಲಿ ಕೂತಿದ್ದ . ಅವನ ತಲೆ 
ಮಾತ್ರ ಮತ್ತಷ್ಟು ಹಿಂದಕ್ಕೆ ಬಾಗಿ ಕತ್ತಿನ ಅಂಚಿನ ಗುಂಗುರು ಕೂದಲು ಹಿಂದೆ 
ಕಾಲರಿಗೆ ತಾಗುತ್ತಿತ್ತು. ಬಾಟಲಿಯನ್ನು ಹಿಡಿದಿದ್ದ ಕೈ ಅದನ್ನು ಇನ್ನೂ ಇನ್ನೂ 
ಮೇಲೆತ್ತುವ ಪ್ರಯಾಸದಲ್ಲಿ ಕಂಪಿಸುತ್ತಿತ್ತು. ಬಾಟಲಿ ಸರಾಗವಾಗಿ ಖಾಲಿಯಾಗುವುದು 
ಕಾಣುತ್ತಿತ್ತು. ಖಾಲಿಯಾದಂತೆ ಬಾಟಲು ಮೇಲೇರುತ್ತಾ ಕತ್ತು ಮತ್ತೂ ಹಿಂದಕ್ಕೆ 
ಬಾಗುತ್ತಿತ್ತು. ' ಯಾಕೆ ಇಷ್ಟು ತಡ ಆಗುತಿದೆ ?” ಅಂದುಕೊಂಡ ಪಿಯರೆ. ಆಗಲೇ 
ಅರ್ಧ ಗಂಟೆ ಕಳೆದು ಹೋಯಿತು ಅನ್ನಿಸುತ್ತಾ ಇತ್ತು. ಇದ್ದಕ್ಕಿದ್ದ ಹಾಗೆಯೇ 
ದೊಲೊಯೋವ್ ಬೆನ್ನು ಮತ್ತೂ ಹಿಂದೆ ಬಾಗಿತು.ತೋಳುಅದುರಿತು. ಕಿಟಕಿಯ 
ಅಂಚಿನ ಇಳಿಜಾರಿನಲ್ಲಿ ಕೂತಿದ್ದವನು ಜಾರುವುದಕ್ಕೆ ಅಷ್ಟು ಸಾಕಾಗಿತ್ತು. ಅವನು 
ಜಾರುತ್ತಾ ಹೆಣಗುತ್ತಿದ್ದಂತೆ ತಲೆ, ತೋಳುಗಳು ಅಲುಗಿ, ಕಿಟಕಿಯ ಅಂಚು 
ಹಿಡಿಯುವುದಕ್ಕೆ ಅನ್ನುವ ಹಾಗೆ ಕೈ ಪಕ್ಕಕ್ಕೆ ಚಾಚಿತು. ಕಿಟಕಿಯನ್ನು ಮುಟ್ಟದೆ ತಕ್ಷಣ 
ಕೈ ಹಿಂದಕ್ಕೆಳೆದುಕೊಂಡ, ಪಿಯರೆ ಮತ್ತೆ ಕಣ್ಣು ಮುಚ್ಚಿಕೊಂಡ. ಮತ್ತೆ ಕಣ್ಣು 
ತೆಗೆಯುವುದಿಲ್ಲ ಎಂದು ಆಣೆ ಇಟ್ಟುಕೊಂಡ. ಇದ್ದಕ್ಕಿದ್ದ ಹಾಗೆ ಜನ ಅಲುಗಿದ್ದು, 
ಓಡಾಡಿದ್ದು ಗೊತ್ತಾಯಿತು. ತಲೆ ಎತ್ತಿ ನೋಡಿದ. ದೊಲೊಯೋವ್ಕಿಟಕಿಯನ್ನೇರಿ 
ನಿಂತಿದ್ದ. ಬಿಳಿಚಿಕೊಂಡಿದ್ದ ಮುಖದಲ್ಲಿ ಸಂತೋಷವಿತ್ತು. 

' ಬಾಟಲು ಖಾಲಿ' ಅಂದ. 

ಇಂಗ್ಲಿಷಿನವತ್ತ ಬಾಟಲಿ ಎಸೆದ. ಕೆಳಕ್ಕೆ ಹಾರಿದ ದೊಲೊಯೋವ್. 
ಇಂಗ್ಲಿಷಿನವನು ನೀಟಾಗಿ ಬಾಟಲಿ ಕ್ಯಾಚು ಹಿಡಿದ. ರಮ್ನ ಕಡು ವಾಸನೆ 
ಹೊಡೆಯುತ್ತಾದೋಖೋವ್‌ನ ಕಿಟಕಿಯ ಅಂಚಿನಿಂದ ಕೆಳಕ್ಕೆ ನೆಗೆದ. 

' ವೆಲ್ ಡನ್!...ಮಾರ್ವೆಲಸ್ ....ಗೆದ್ದ ...ದೆವ್ವಾ ...' ಎಲ್ಲ ಕಡೆಗಳಿಂದ ಕೂಗು 
ಕೇಳಿಸಿತು. 

- ಇಂಗ್ಲಿಷಿನವನು ಪರ್ಸು ತೆಗೆದು ದುಡ್ಡು ಎಣಿಸಿದ. ದೋಲೊಯೋವ್ 
ಹುಬ್ಬು ಗಂಟಿಕ್ಕಿಕೊಂಡು ಸುಮ್ಮನೆ ನಿಂತಿದ್ದ. ಪಿಯರೆ ಕಿಟಕಿಯ ಮೇಲೆ ಹಾರಿ 
ನಿಂತ. 'ಫ್ರೆಂಡ್ ನನ್ನ ಮೇಲೆ ಯಾರು ಬೆಟ್ ಕಟ್ಟುತ್ತೀರಿ? ನಾನೂ ಮಾಡಿ 
ತೋರಿಸತೇನೆ!' ಎಂದು ಕೂಗಿ ಹೇಳಿದ. ' ಯಾರೂ ಬೆಟ್ ಕಟ್ಟದಿದ್ದರೂ ಪರವಾಗಿಲ್ಲ, 
ನಾನೂ ಮಾಡತೇನೆ! ಬಾಟಲಿ ಕೊಡಿ, ನಾನೂ ಮಾಡತೇನೆ...ಬಾಟಲಿ ಕೊಡಿ!' 

' ಮಾಡು!' ಹಲ್ಲು ಕಿರಿಯುತ್ತಾದೋಖೋವ್ ಅಂದ. 

'ಏನು... ಹುಚ್ಚಾ ?... ನಿನ್ನ ಯಾರು ಬಿಡತಾರೆ?... ನೆಟ್ಟಗೆ ಮೆಟ್ಟಿಲು 
ಇಳಿಯುವುದಕ್ಕೂ ಆಗಲ್ಲ ನಿನಗೆ...!” ತಲೆಗೊಂದು ಮಾತು ಕೇಳಿಸಿತು. 


ರ್೪ 


ಸಂಪುಟ ೧ - ಸಂಚಿಕೆ ಒಂದು 

ಅಮಲು ತಲೆಗೇರಿದ್ದ ಪಿಯರೆ ಜೋರಾಗಿ ಮೇಜು ಗುದ್ದುತ್ತಾ, ಕಿಟಕಿಯನ್ನು 
ಹತ್ತಲು ಗಟ್ಟಿ ಮನಸ್ಸು ಮಾಡಿದವನಂತೆ 'ನಾನೂ ಅದೇ ಥರಾ ಪೂರಾ ಬಾಟಲು 
ಖಾಲಿ ಮಾಡೇನೆ! ಕೊಡಿ ರಮ್ ಬಾಟಲು!' ಎಂದು ಕೂಗಾಡಿದ. ಜನ ಅವನ 
ತೋಳುಹಿಡಿದು ಎಳೆದೆರು. ಎಲ್ಲರಿಗಿಂತ ಬಲವಾಗಿದ್ದ ಪಿಯರೆ ಹತ್ತಿರ ಬಂದವರನ್ನು 
ಎತ್ತಿ ದೂರಕ್ಕೆ ಎಸೆದ. 

'ಹೀಗೆ ಮಾಡಿದರೆ ಅವನು ಕೇಳಲ್ಲ. ಇರಿ , ನಾನು ಹೇಳತೇನೆ' ಅನ್ನುತ್ತಾ 
ಅನತೋಲ್ ಪಿಯರೆಯ ಸಮೀಪಕ್ಕೆ ಹೋಗಿ, 'ಕೇಳು ಪಿಯರೆ, ನಿನ್ನ ಬೆಟ್ 
ಒಪ್ಪಿಕೊಂಡಿದ್ದೇನೆ, ಅದು ನಾಳೆ ರಾತ್ರಿಗೆ ಇರಲಿ. ಈಗ ನಾವೆಲ್ಲ ಎಲ್ಲೋ ಹೋಗುತಾ 
ಇದೇವೆ, ಎಲ್ಲಿಗೆ ಗೊತ್ತಲ್ಲಾ?” ಎಂದ. 
- 'ಹೋಗೋಣ ನಡೀರಿ ಮತ್ತೆ? ಯಾಕೆ ಲೇಟು? ನಡೀರಿ! ನಮ್ಮ ಜೊತೆ 
ಬ್ರೂಯಿನ್ನೂ ಕರೆದುಕೊಂಡು ಹೋಗೋಣ' ಅನ್ನುತ್ತಾ ಕರಡಿಯನ್ನು ಹಿಡಿದು, 
ನೆಲದಿಂದ ಮೇಲೆತ್ತಿ, ಅಪ್ಪಿಕೊಂಡು ರೂಮಿನಲ್ಲೆಲ್ಲ ಡ್ಯಾನ್ನು ಮಾಡಿದ . 

೭ . 
. ಅನ್ನಾ ಪಾವೋನ್ಮಾಳ ಮನೆಯ ಸಂಜೆ ಪಾರ್ಟಿಯಲ್ಲಿ ಪ್ರಿನ್ಸೆಸ್ ಅನ್ನಾ 
ಮಿಖಾಲ್ಲೋವಾಗೆ ಕೊಟ್ಟಿದ್ದ ಮಾತನ್ನು ಪ್ರಿನ್ಸ್ ವ್ಯಾಸಿಲಿ ಉಳಿಸಿಕೊಂಡ. ತನ್ನ 
ಒಬ್ಬನೇ ಮಗ ಬೋರಿಸ್‌ಗೆ ಸಹಾಯಮಾಡಬೇಕೆಂದು ಅನ್ನಾ ಮಿಖಾಯೌವ್ವಾ 
ಕೋರಿದ್ದಳು. ಅವನ ಪರವಾಗಿ ಚಕ್ರವರ್ತಿಯ ಬಳಿ ಮಾತಾಡಿದ್ದಾಯಿತು, ಮತ್ತೆ 
ಇಂಥಕೋರಿಕೆಗೆ ಅವಕಾಶವಿಲ್ಲ ಎಂದು ಹೇಳಿ ಅವನನ್ನು ಸೆಮೆನೋವ್ ಗಾರ್ಡ್ 
ದಳದಲ್ಲಿ ಎನ್‌ಸೈನ್ ೧೬ ಹುದ್ದೆಗೆ ನೇಮಿಸಿದ್ದೂ ಅಯಿತು. ಆದರೆ ಅನ್ನಾ 
ಮಿಖಾಯೌವ್ವಾ ಎಷ್ಟೇ ಪ್ರಯತ್ನಪಟ್ಟರೂ ಬೇಡಿಕೊಂಡರೂ ಬೋರಿಸ್‌ಗೆ 
ಕುತುರೋಪ್‌ನ ಸಹಾಯಕನಾಗುವ ಅವಕಾಶ ಮಾತ್ರ ದೊರೆಯಲಿಲ್ಲ. ಅನ್ನಾ 
ಪಾವೋನ್ಮಾಳ ಸಂಜೆಯ ಪಾರ್ಟಿ ಆದ ಸ್ವಲ್ಪ ದಿನಕ್ಕೇ ಅನ್ನಾ ಮಿಖಾಯೌವ್ವಾ 
ಮಾಸ್ಕೋಗೆ ವಾಪಸ್ಸು ಬಂದವಳೇ ನೇರವಾಗಿ ತನ್ನ ಶ್ರೀಮಂತ ಸಂಬಂಧಿಕರು, 
ರೋಸ್ಕೋವ್ಕುಟುಂಬದ ಮನೆಗೆ ಹೋದಳು. ಆಕೆ ಮಾಸ್ಕೋಗೆಬಂದಾಗೆಲ್ಲ 
ಅವರ ಮನೆಯಲ್ಲೇ ಉಳಿಯುತ್ತಿದ್ದಳು. ಅವಳ ಮಗ ಬೋರಿಸ್ , ಇದೀಗ ಗಾರ್ಡ್ 
ದಳದಲ್ಲಿ ಎನ್‌ಸೈನ್ ಆಗಿದ್ದವನು, ಚಿಕ್ಕಂದಿನಿಂದ ಅವರ ಮನೆಯಲ್ಲೇ ವರ್ಷಾನುಗಟ್ಟಲೆ 
ಇದ್ದು ವಿದ್ಯಾಭ್ಯಾಸ ಮಾಡಿದ್ದ . ಗಾರ್ಡ್ ದಳ ಆಗಸ್ಟ್ ಹತ್ತರಂದೇ ಯುದ್ಧ 
ಭೂಮಿಗೆ ತೆರಳಿತ್ತು. ಬೋರಿಸ್ ತನ್ನ ಸಾಮಗ್ರಿಗಳನ್ನು ಸಂಗ್ರಹಿಸಿಕೊಳ್ಳುವ ಸಲುವಾಗಿ 
೧೬ ಎನ್‌ಸೈನ್: ಸೇನೆಯಲ್ಲಿ ಅತ್ಯಂತ ಕೆಳಗಿನ ದರ್ಜೆಯ ಕಮಿಶನ್ ಆಫೀಸರು, ಸೆಕೆಂಡ್ ಲೆಫ್ಟಿನೆಂಟ್, 
ಜ್ಯೂನಿಯರ್ ಗ್ರೇಡ್ ಹುದ್ದೆಗೆ ಸಮಾನವಾದದ್ದು ; ರೆಜಿಮೆಂಟಿನ ಧ್ವಜದ ಜವಾಬ್ದಾರಿಯನ್ನು 
ಹೊತ್ತಿರುವವವನು. 


೫೦ 


ಯುದ್ಧ ಮತ್ತು ಶಾಂತಿ 
ಮಾಸ್ಕೋದಲ್ಲೇ ಇದ್ದ . ರಾವಿಲೊವ್ ಎಂಬ ಊರಿಗೆ ಹೊರಟಿದ್ದ ದಳವನ್ನು 
ಅವನು ಮಾರ್ಗ ಮಧ್ಯದಲ್ಲಿ ಸೇರಿಕೊಳ್ಳಬೇಕಾಗಿತ್ತು, 

- ಅಂದು ಸಂತ ನತಾಲಿಯಳ೧೭ ಹಬ್ಬದ ದಿನ. ಅವತ್ತು ಅವರ ಮನೆಯ 
ಇಬ್ಬರು ನತಾಲಿಯಾ, ಅಮ್ಮ ಮತ್ತು ಕಿರಿಯಮಗಳ ನೇಮ್ ಡೇಯ ಸಂಭ್ರಮ 
ಇತ್ತು. ರೋಸ್ಟೋವ್ ಕುಟುಂಬದಲ್ಲಿ ಇಬ್ಬರ ಹೆಸರುಗಳು, ತಾಯಿ ಮತ್ತು ಕಿರಿಯ 
ಮಗಳದ್ದು , ನತಾಲಿಯಾ ಅಂತಲೇ ಇತ್ತು. ಹಾಗಾಗಿ ಆವತ್ತು ಅವರಿಬ್ಬರ ನೇಮ್ 
ಡೇ ಆಗಿತ್ತು . ಅವತ್ತು ಬೆಳಗಿನಿಂದಲೂ ಕೌಂಟೆಸ್ ರೋಸ್ಟೋವಾಗೆ ಶುಭ 
ಹಾರೈಸುವುದಕ್ಕೆ ಪೊವಾರ್ಸಾಯಾಬೀದಿಲ್ಲಿದ್ದ, ಇಡೀ ಮಾಸ್ಕೋಗೆ ಸುಪರಿಚಿತವಾಗಿದ್ದ, 
ಅವರ ಬಂಗಲೆಗೆ ಆರು ಕುದುರೆ ಕಟ್ಟಿದ ಸಾರೋಟುಗಳು ಅತಿಥಿಗಳನ್ನು ಹೊತ್ತು 
ಒಂದಾದಮೇಲೆ ಒಂದು ಬರುತ್ತ ಹೋಗುತ್ತಾ ಇದ್ದವು. ಕೌಂಟೆಸ್ ದಿವಾನಖಾನೆಯಲ್ಲಿ 
ಸುಂದರವಾಗಿದ್ದ ಹಿರಿಯ ಮಗಳ ಜೊತೆಗೆ ಕೂತು ಅಭಿನಂದಿವುದಕ್ಕೆಂದು 
ಒಬ್ಬರಾದಮೇಲೆ ಒಬ್ಬರು ಬರುತ್ತಲೇ ಇದ್ದ ಅತಿಥಿಗಳನ್ನು ಸ್ವಾಗತಿಸಿ, ಅವರನ್ನು 
ಮಾತಾಡಿಸುತ್ತಾ ಇದ್ದಳು. 

ಆಕೆ ನಲವತ್ತೈದರ ಸುಮಾರಿನ ಹೆಂಗಸು, ಒಂದು ಥರಾ ಕೋಲು ಮುಖ 
ಪೂರ್ವದೇಶದವರಿಗೆ ಇರುವಂಥದ್ದು . ಹೆತ್ತು ಹೊತ್ತು ಸುಸ್ತಾಗಿದ್ದಳು. ಹನ್ನೆರಡು 
ಮಕ್ಕಳು. ಮೈಯ ನಿತ್ರಾಣದಿಂದ ಮಾತು, ನಡೆ ನಿಧಾನವಾಗಿ ದೊಡ್ಡ ಮನುಷ್ಯಳು 
ಅನ್ನುವ ಹಾಗೆ ಕಂಡು ಅದರಿಂದಲೇ ದೊಡ್ಡಸ್ತಿಕೆಯ ಲಕ್ಷಣ ಬಂದುಬಿಟ್ಟು 
ನೋಡಿದವರಲ್ಲಿ ಗೌರವ ಹುಟ್ಟಿಸುತ್ತಾ ಇತ್ತು. ಮನೆಯವಳೇ ಆಗಿಬಿಟ್ಟಿದ್ದ ಸಂಬಂಧಿ 
ಪ್ರಿನ್ಸೆಸ್ ಅನ್ನಾ ಮಿಖಾಯೌವ್ವಾ ಅವರ ಜೊತೆಗೆ ಕೂತು ಅತಿಥಿಗಳನ್ನು 
ಸ್ವಾಗತಿಸಿ ಮಾತನಾಡಿಸುವ ಉದ್ಯೋಗದಲ್ಲಿ ಸಹಾಯಮಾಡುತ್ತಾ ಇದ್ದಳು. ಚಿಕ್ಕವರು 
ಒಳಗಿನ ಕೋಣೆಗಳಲ್ಲಿದ್ದರು, ಅತಿಥಿಗಳನ್ನು ಬರಮಾಡಿಕೊಳ್ಳುವುದರಲ್ಲಿ 
ಪಾತ್ರವಹಿಸಬೇಕಾದ ಜವಾಬ್ದಾರಿ ತಮಗಿಲ್ಲ ಅನ್ನುವ ಹಾಗೆ, ಕೌಂಟ್ ರೋಸ್ಕೋವ್ 


೧೭ ಸಂತರ ಹೆಸರುಗಳನ್ನಿಟ್ಟುಕೊಂಡ ರಶಿಯನ್ನರು ಆಯಾ ಸಂತರ ಹುಟ್ಟುಹಬ್ಬದ ದಿನವೇ ತಮ್ಮ 

ನಾಮಕರಣದ ದಿನ ಎಂದು ನಮ್ ಡೇಯನ್ನು ಆಚರಿಸಿಕೊಳ್ಳುವ ಸಂಪ್ರದಾಯವಿತ್ತು. ಇಲ್ಲಿ 
ಸಂತ ನತಾಲ್ಯಾಳ ದಿನಾಚರಣೆ ಹಾಗೂ ರೋಸ್ಟೋವನ ಹೆಂಡತಿ ಮತ್ತು ಕಿರಿಯ ಮಗಳ 
ಹುಟ್ಟು ಹಬ್ಬ ನಡೆಯುತ್ತಿದೆ. ಸಂತ ನತಾಲ್ಯಾ - ಶಿರಚ್ಛೇದನಕ್ಕೆ ಗುರಿಯಾದದ್ದು ಜುಲೈ ೨೭, 
೮೫೨. ಕ್ರಿಶ್ಚಿಯನ್ ಧರ್ಮವನ್ನು ಒಪ್ಪಿಕೊಂಡ ಅರೆ- ಮೂರಿಶ್ ಜನಾಂಗದ ಹೆಣ್ಣುಮಗಳು. 
ಸಂತ ಅರೀಲಿಯಸ್‌ನನ್ನು ಮದುವೆಯಾಗಿದ್ದಳು . ಇಬ್ಬರು ಮಕ್ಕಳಿದ್ದರು. ಮೂರ್ 
ಜನಾಂಗದವರಾಗಿದ್ದು ಕ್ರಿಶ್ಚಿಯನ್ ಧರ್ಮವನ್ನು ಒಪ್ಪಿಕೊಂಡರೆ ಹುತಾತ್ಮರಾಗಬೇಕೆಂದು ತಿಳಿದಿದ್ದರೂ 
ಮಕ್ಕಳಿಗೆ ತಕ್ಕ ವ್ಯವಸ್ಥೆಮಾಡಿ ಸಾರ್ವಜನಿಕವಾಗಿ ಅವರು ಕ್ರಿಶ್ಚಿಯನ್ನರಾದರು. ಬಡವರು, 
ರೋಗಿಗಳ ಸೇವೆಮಾಡಿದರು. ಏಸುವಿನ ಬಗ್ಗೆ ಸಾರ್ವಜನಿಕವಾಗಿ ಮಾತನಾಡುತ್ತಿದ್ದರು. ನತಾಲ್ಯಾಳ 
ಶಿರಚ್ಛೇದನ ಮಾಡಲಾಯಿತು. 


೫೧ 
ಸಂಪುಟ ೧ - ಸಂಚಿಕೆ ಒಂದು 
ಅತಿಥಿಗಳನ್ನು ಬರಮಾಡಿಕೊಳ್ಳುತ್ತಾ ಸಾಗಹಾಕುತ್ತಾ ಒಬ್ಬೊಬ್ಬರಿಗೂ ರಾತ್ರಿಯ 
ಊಟಕ್ಕೆ ಆಹ್ವಾನ ನೀಡುತ್ತಾ ಇದ್ದ. 

- “ನೀವು ಬಂದಿದ್ದು ನಿಜವಾಗಲೂ ಬಹಳ ಸಂತೋಷ ಮೈ ಡಿಯರ್' 
ಬಂದವರು ತನಗಿಂತ ಮೇಲಿನವರೇ ಆಗಿರಲಿ , ಕೆಳಗಿನವರೇ ಆಗಿರಲಿ ಯಾವ 
ವ್ಯತ್ಯಾಸವಿಲ್ಲದೆ ಎಲ್ಲರನ್ನೂ ' ಮೈ ಡಿಯರ್' ಅಂತಲೇ ಮಾತಾಡಿಸುತ್ತಿದ್ದ . ನನಗೂ 
ಸಂತೋಷ, ನನಗೆ ಪ್ರಿಯರಾದ ಇಬ್ಬರು ಹೆಂಗಸರ ನೇಮ್ ಡೇ ಇದೆಯಲ್ಲಾ, 
ಅವರಿಗೂ ಸಂತೋಷ. ನೋಡಿ, ರಾತ್ರಿ ಊಟಕ್ಕೆ ತಪ್ಪದೆ ಬರಬೇಕು. ಬರದೆ 
ಇದ್ದರೆ ಬಹಳ ಬೇಜಾರಾಗತದೆ , ಡಿಯರ್, ಮನೆಯವರು ಎಲ್ಲರ ಪರವಾಗಿ 
ಕರೆಯುತಾ ಇದೇನೆ ಮೈ ಡಿಯರ್ ಲೇಡಿ' ಅನ್ನುತ್ತಿದ್ದ . ಈ ಮಾತುಗಳೊಂದಿಗೆ 
ನುಣ್ಣಗೆ ಕ್ಷೌರ ಮಾಡಿಸಿಕೊಂಡ, ಖುಷಿ ತುಂಬಿದ ದುಂಡು ಮುಖದಲ್ಲಿ ಯಾವಾಗಲೂ 
ಒಂದೇ ರೀತಿಯ ಭಾವ ಇರುತ್ತಿತ್ತು , ಕೈಯನ್ನೂ ಒಂದೇ ರೀತಿ ಬಿಗಿಯಾಗಿ 
ಅಮುಕಿ ಹಿಡಿದುಳ್ಳುವುದು ಇರುತ್ತಿತ್ತು, ಮತ್ತೆ ಮತ್ತೆಗೋಣು ಹಾಕುವುದು ಇರುತ್ತಿತ್ತು. 
ಮಾತಿನಲ್ಲಿ ವ್ಯತ್ಯಾಸ ಇಲ್ಲದೆ, ದನಿಯಲ್ಲಿ ಏರಿಳಿತವಿಲ್ಲದೆ, ಒಂದೇ ರೀತಿಯಲ್ಲಿ 
ಯಾರನ್ನೂ ಬಿಡದೆ ಎಲ್ಲರಿಗೂ ಹೀಗೆ ಹೇಳುತ್ತಾ ಇದ್ದ . ಒಬ್ಬರನ್ನು ಕಳುಹಿಸಿಕೊಟ್ಟ 
ಮೇಲೆ ದಿವಾನಖಾನೆಯಲ್ಲಿ ಇನ್ನೂ ಇದ್ದ ಗಂಡಸರ ಹತ್ತಿರವೋ ಹೆಂಗಸರ 
ಹತ್ತಿರವೋ ವಾಪಸ್ಸು ಹೋಗುತ್ತಿದ್ದ. ಕುರ್ಚಿಗಳನ್ನು ಎಳೆದು ಸರಿಯಾಗಿ 
ಜೋಡಿಸಿಕೊಂಡು, ಬದುಕು ಕಂಡವನ ಹಾಗೆ, ಜೀವನದ ಖುಷಿ ತಿಳಿದವನ 
ಧಾಟಿಯನ್ನು ತಂದುಕೊಂಡು, ಕೂತು, ಚಿಕ್ಕ ಪ್ರಾಯದವರ ಹಾಗೆ ಕಾಲು 
ಅಗಲವಾಗಿಟ್ಟುಕೊಂಡು, ಮೊಳಕಾಲುಗಳ ಮೇಲೆ ಕೈ ಊರಿಕೊಂಡು, ನಿಧಾನವಾಗಿ 
ಹಿಂದಕ್ಕೂ ಮುಂದಕ್ಕೂ ಮೈ ತೂಗುತ್ತಾ, ಹವಾಮಾನ ಹೇಗೆ ಎಂದು ಸ್ವಲ್ಪ 
ಗಂಭೀರವಾಗಿ ಭವಿಷ್ಯ ಒಂದಿಷ್ಟು ನುಡಿದು, ಅಥವಾ ಬೇರೆಯವರ ಆರೋಗ್ಯದ 
ಬಗ್ಗೆ ಉಚಿತ ಸಲಹೆಗಳ ವಿತರಣೆ ಮಾಡಿ, ಒಂದೊಂದು ಸಾರಿ ರಶಿಯನ್ 
ಭಾಷೆಯಲ್ಲಿ, ಒಂದೊಂದು ಸಾರಿ ತಪ್ಪು ತಪ್ಪು ಫ್ರೆಂಚ್ ಭಾಷೆಯಲ್ಲಿ ನನ್ನ ಮಾತೇ 
ಸರಿ ಅನ್ನುವ ಆತ್ಮವಿಶ್ವಾಸದಲ್ಲಿ ಪಲುಕುತ್ತಿದ್ದ . ಆಮೇಲೆ ಮತ್ತೆ ಏಳುತ್ತಿದ್ದ, 
ಆಯಾಸವಾಗಿದ್ದರೂ ಕರ್ತವ್ಯವನ್ನು ಕುಂದಿಲ್ಲದಂತೆ ನಡೆಸಬೇಕೆಂಬ ಹಟವೂ 
ಉತ್ಸಾಹವೂ ಇರುವವನ ಹಾಗೆ ಬೋಳುತಲೆಯಮೇಲೆ ಇದ್ದ ನಾಲ್ಕು ನೆರೆಗೂದಲು 
ನೇವರಿಸಿ ಸರಿಪಡಿಸಿಕೊಂಡು ಹೊರಟವರನ್ನು ಬೀಳ್ಕೊಡಲು ಅವರ ಸಂಗಡ 
ಬಾಗಿಲ ತನಕ ಹೆಜ್ಜೆ ಹಾಕುತ್ತಾ, ಮತ್ತೊಮ್ಮೆ ರಾತ್ರಿಯ ಊಟಕ್ಕೆ ಆಹ್ವಾನ 
ನೀಡುತ್ತಿದ್ದ . ಒಂದೊಂದು ಸಾರಿ ದಿವಾನಖಾನೆಗೆ ವಾಪಸ್ಸು ಬರುವ ದಾರಿಯಲ್ಲಿ 
ಕೈ ತೋಟ ಹಾದು ಉಗ್ರಾಣಕ್ಕೆ ಹೋಗಿ, ನೋಡಿಕೊಂಡು, ಅಲ್ಲಿಂದ ಎಂಬತ್ತು 
ಜನ ಅತಿಥಿಗಳಿಗೆ ಭೋಜನದ ಮೇಜು ಸಿದ್ಧಮಾಡುತ್ತಿದ್ದ ಅಮೃತ ಶಿಲೆಯ 


೫೨ 


ಯುದ್ಧ ಮತ್ತು ಶಾಂತಿ 
ಭೋಜನಶಾಲೆಗೆ ನಡೆಯುತ್ತಿದ್ದ . ಅಲ್ಲಿ ಮೇಜು ಕೂರಿಸುವ, ಬೆಳ್ಳಿಯ ಪಾತ್ರೆಗಳನ್ನು 
ಜೋಡಿಸುವ , ಚೀನೀ ಪಿಂಗಾಣಿ ಪಾತ್ರೆಗಳನ್ನು ತಂದಿಡುವ, ಮೇಜಿನ ಮೇಲೆ 
ಡಮಾಸ್ಕ ಬಟ್ಟೆಯನ್ನು ಹಾಸುವ ಕೆಲಸಗಾರರನ್ನು ನಿಗಾ ಇಟ್ಟು ಪರೀಕ್ಷಿಸಿ ನೋಡುತ್ತಾ 
ಇದ್ದ . ಮನೆಯ ಉಸ್ತುವಾರಿ ನೋಡಿಕೊಳ್ಳುತ್ತಾ ಅವನ ಸಹಾಯಕನ ಕೆಲಸವನ್ನೂ 
ಮಾಡುತ್ತಾ ಇದ್ದ ಯವಕ ಕೆಲಸಗಾರನನ್ನು ಕರೆದು ' ಬೈತ್ರಿ, ಎಲ್ಲ ಸರಿಯಾಗಿದೆಯಾ 
ನೋಡಿಕೊಳ್ಳಬೇಕಪ್ಪಾ, ನೋಡುತೀ ತಾನೇ ?' ಅನ್ನುತ್ತಿದ್ದ . ಊಟದ ಹಾಲಿನ 
ತುಂಬಾ ವಿಸ್ತಾರವಾಗಿ ಹರಡಿರುವ ಅಗಾಧ ಮೇಜು ನೋಡಿ ಬಹಳ 
ಸಂತೋಷಪಡುತ್ತಾ “ ಮುಖ್ಯ ಏನಪ್ಪಾ ಅಂದರೆ - ಸರಿಯಾಗಿ ಬಡಿಸಬೇಕು. ಗುಟ್ಟು 
ಇರೋದು ಅದರಲ್ಲೇ ' ಅನ್ನುತ್ತಿದ್ದ . ತೃಪ್ತಿಯ ನಿಟ್ಟುಸಿರು ಬಿಡುತ್ತಾ ದಿವಾನಖಾನೆಗೆ 
ವಾಪಸ್ಸು ಹೋಗುತ್ತಿದ್ದ. 

“ಮೇಡಂ ಮರಿಯಾ ಲೋವಾ ಮತ್ತೆ ಅವರ ಮಗಳು!” ದೊಡ್ಡ ದೇಹದ 
ಸೇವಕ ದಿವಾನಖಾನೆಗೆ ಬಂದು ಹೊಸದಾಗಿ ಬಂದಿದ್ದ ಅತಿಥಿಗಳ ಹೆಸರನ್ನು 
ಮಂದಸ್ವರದಲ್ಲಿ ಘೋಷಿಸಿದ. ಕೌಂಟೆಸ್ ಒಂದು ಕ್ಷಣ ಯೋಚನೆ ಮಾಡಿ, ಗಂಡನ 
ಚಿತ್ರವನ್ನು ಮುದ್ರಿಸಿರುವ ಚಿನ್ನದ ಡಬ್ಬಿಯಿಂದ ಚಿಟಿಕೆ ನಶ್ಯ ತೆಗೆದುಕೊಂಡು, 
“ ಬರುವವರು, ಹೋಗುವವರು ಎಷ್ಟೊಂದು ಜನ... ಸಾಕು ಸಾಕಾಗಿಹೋಯಿತಪ್ಪಾ! 
ಇವಳೊಬ್ಬಳನ್ನ ಮಾತಾಡಿಸಿ ಕಳಿಸಿಬಿಡುತ್ತೇನೆ. ಇಲ್ಲದಿದ್ದರೆ ಬೇಜಾರು 
ಮಾಡಿಕೊಳ್ಳುತ್ತಾಳೆ. ತುಂಬ ಜಂಬ . ಸರಿ, ಒಳಗೆ ಕರೆದುಕೊಂಡು ಬಾ ' ಅನ್ನುವುದನ್ನು 
' ಸಾಕು ಮುಗಿಸಿಬಿಡಪ್ಪಾ ಇನ್ನು ' ಅನ್ನುವ ಹಾಗೆ ದುಃಖದ ಧ್ವನಿಯಲ್ಲಿ ಸೇವಕನಿಗೆ 
ಹೇಳಿದಳು. . 
- ಬಟ್ಟೆ ಸರಸರ ಸದ್ದು ಮಾಡಿಕೊಂಡು ಉದ್ದನೆಯ , ದಪ್ಪನೆಯ , ಬಡಿವಾರದ 
ಹೆಂಗಸು ಮತ್ತೆ ದುಂಡು ಮುಖದ ನಗುನಗುತ್ತಿದ್ದ , ಅವಳ ಮಗಳು, ಇಬ್ಬರೂ 
ದಿವಾನಖಾನೆಗೆ ಬಂದರು. 

“ ಆಹಾ ಕೌಂಟೆಸ್... ಎಷ್ಟು ದಿನವಾಗಿತ್ತಲ್ಲಾ ನೋಡಿ... ಇವಳು , ಪಾಪ, ಹಾಸಿಗೆ 
ಹಿಡಿದು ಬಿಟ್ಟಿದ್ದಳು...ರಾಝುಮೋವ್ಸ್ಕಿ ಮನೆಯ ಬಾಲ್ ಡಾನ್ಸ್ ಪಾರ್ಟಿಯಲ್ಲಿ 
ಅಲ್ಲವಾ... ಮತ್ತೆ ಅವತ್ತು ಕೌಂಟೆಸ್‌ ಅಪ್ರಾಕ್ಸಿನ್ ಮನೆಯಲ್ಲಿ... ತುಂಬ ಸಂತೋಷ...' 
ಹೆಣ್ಣು ಹರಟೆಯ ಕಲಕಲ, ಒಬ್ಬರನ್ನು ತಡೆದು ಇನ್ನೊಬ್ಬರು ಆಡುವ ಮಾತು , 
ಉಡುಪುಗಳ ಸರಬರದ ಜೊತೆಗೆ ಕುರ್ಚಿಗಳ ಸದ್ದಿನ ಜೊತೆಗೆ ಬೆರೆತಿತ್ತು. ಅದು 
ಎಂಥಾ ಸಂಭಾಷಣೆ ಅಂದರೆ ಮಾತಿನ ನಡುವೆ ವಿರಾಮ ದೊರೆತ ತಕ್ಷಣ ಬಟ್ಟೆ 
ಸರಸರ ಸದ್ದು ಮಾಡಿಕೊಂಡು ಎದ್ದು ನಿಂತು ' ತುಂಬಾ ಸಂತೋಷ... ಅಮ್ಮನ 
ಆರೋಗ್ಯ, ನೋಡಿ...ಕೌಂಟೆಸ್‌ ಅಪ್ರಾಕ್ಸಿನಾ ಮನೆಯಲ್ಲಿ...' ಅಂತ ಏನೇನೋ 
ಗೊಣಗಿ, ಉಡುಪು ಇನ್ನೂ ಸರಸರ ಸದ್ದು ಮಾಡುತ್ತಾ ಹಜಾರಕ್ಕೆ ಹೋಗಿ 


೫೩ 
ಸಂಪುಟ ೧ - ಸಂಚಿಕೆ ಒಂದು 
ಕೋಟು ಹಾಕಿಕೊಂಡು, ಗಾಡಿ ಹತ್ತಿ ಹೊರಡುವವರೆಗೆ ಮಾತ್ರ ಆಡಬೇಕೆಂದು 
ಲೆಕ್ಕ ಹಾಕಿ ತೊಡಗುವಂಥ ಸಂಭಾಷಣೆ ಅದು. ವಿಷಯ -ಊರಿನಲ್ಲಿ ಇತ್ತೀಚೆಗೆ 
ಹರಡಿದ್ದ ಸುದ್ದಿ . ಮಹಾರಾಣಿ ಕ್ಯಾಥರೀನಳ೧೮ ಕಾಲದಲ್ಲಿ ಹೆಸರುವಾಸಿಯಾಗಿದ್ದ, 
ಈಗ ಮುದುಕನಾಗಿ ಹಾಸುಗೆ ಹಿಡಿದಿದ್ದ ಶ್ರೀಮಂತ ವೃದ್ದ ಕೌಂಟ್ ಬೆಝುಕೋವ್‌ನ 
ಕಾಯಿಲೆ, ಮತ್ತೆ ಅನ್ನಾ ಪಾವೋವಾಳ ಪಾರ್ಟಿಯಲ್ಲಿ ಒಡ್ಡನಂತೆ ನಡೆದುಕೊಂಡಿದ್ದ, 
ಕೌಂಟ್ ಬೆಝುಕೋವ್‌ನ ಅಕ್ರಮ ಸಂತಾನ ಪಿಯರೆಯನ್ನು ಕುರಿತದ್ದು. 
- ' ಪಾಪ ಕೌಂಟು, ಅಯ್ಯೋ ಅನ್ನಿಸುತದೆ,' ಹೊಸದಾಗಿ ಬಂದಿದ್ದ ಅತಿಥಿ 
ಅಂದಳು. “ಅವನ ಆರೋಗ್ಯ ಹಾಳಾಗಿದೆ , ಅದರ ಮೇಲೆ ಈ ಮಗನ ಹಲ್ವಾ 
ಕೆಲಸ ಬೇರೆ. ಕೊಂದುಹಾಕಿಬಿಡುತ್ತದೆ ಅವನನ್ನ .' 

' ಯಾಕೆ, ಏನಾಯಿತು?” ಕೌಂಟೆಸ್ ಕೇಳಿದಳು - ಆಕೆ ಹೇಳುತ್ತಿರುವ ವಿಚಾರ 
ತನಗೇನೂ ಗೊತ್ತೇ ಇಲ್ಲ ಅನ್ನುವ ಹಾಗೆ, ಕೌಂಟ್ ಬೆಝುಕೋವ್‌ನ ಕಾಯಿಲೆಯ 
ಬಗ್ಗೆ ಅವಳು ಅವತ್ತು ಆಗಲೇ ಕೊನೆಯ ಪಕ್ಷ ಹದಿನೈದು ಬಾರಿಯಾದರೂ 
ಕೇಳಿದ್ದಳು. 

'ಈಗಿನ ಕಾಲದ ವಿದ್ಯಾಭ್ಯಾಸ ಇನ್ನೇನು ಮಾಡುತ್ತದೆ ಹೇಳಿ!' ಬಂದಿದ್ದಾಕೆ 
ಹೇಳಿದಳು. ' ಆ ಹುಡುಗ ಪಿಯರೆಯನ್ನು ಫಾರಿನ್ನಿನಲ್ಲಿ ಓದಿಸಿದರು . ಲಂಗು 
ಲಗಾಮು ಇರಲಿಲ್ಲ. ಈಗ ಪೀಟರ್ಸ್‌ಬರ್ಗಿಗೆ ಬಂದು ಎಂಥಾ ಕೆಲಸ 
ಮಾಡುತ್ತಿದಾನಂತಪ್ಪಾ ಅಂದರೆ ಪೋಲಿಸಿನವರ ಜೊತೆ ಅವನನ್ನ ಕಳಿಸಬೇಕಾಯಿತಂತೆ” 
ಅಂದಳು. 
- ' ಹೌದಾ!' ಉದ್ದಾರವೆತ್ತಿದಳು ಕೌಂಟೆಸ್ . 

“ಕೆಟ್ಟ ಸಹವಾಸಕ್ಕೆ ಬಿದ್ದಿದಾನೆ ಅವನು,' ಅನ್ನಾ ಮಿಖಾಯೌವ್ವಾ ಮಧ್ಯೆ 
ಬಾಯಿ ಹಾಕಿದಳು. ಅವನು, ಆಮೇಲೆ ಪ್ರಿನ್ಸ್ ವ್ಯಾಸಿಲಿಯ ಮಗ, ಮತ್ತೆ ಯಾರೋ 
ಇನ್ನೊಬ್ಬ ದೊಲೊಖೋವ್ ಅಂತೆ, ಎಲ್ಲಾರೂ ಸೇರಿ ಏನೇನು ರಾದ್ದಾಂತ 
ಮಾಡಿದರೋ ...ದೇವರಿಗೇ ಗೊತ್ತು! ಈಗ ಅನುಭವಿಸತಾ ಇದಾರೆ. 
ದೊಲೊಸೊವ್‌ಗೆ ಹಿಂಬಡ್ತಿ ಮಾಡಿ ಪೇದೆ ಅಂತ ಮಾಡಿದ್ದಾರಂತೆ , 
ಬೆಝುಕೋವ್ನ ಮಗನನ್ನು ಮಾಸ್ಕೋಗೆ ಗಡೀಪಾರು ಮಾಡಿದಾರಂತೆ, 
ಅನತೋಲ್‌ನ ಅಪ್ಪ ಮಗನ ಹೆಸರು ಹೊರಕ್ಕೆ ಬರದಹಾಗೆ ಮುಚ್ಚಿಹಾಕಿದನಂತೆ. 
ಅವನನ್ನೂ ಪೀಟರ್ಸ್‌ಬರ್ಗಿನಿಂದ ಕಳಿಸಿಬಿಟ್ಟನಂತೆ.' 

“ ಯಾಕೆ , ಏನು ಮಾಡಿದರು ಅವರೆಲ್ಲಾ ?' ಕೌಂಟೆಸ್ ಕೇಳಿದಳು. 
* 'ಶುದ್ಧ ಲಫಂಗರು, ಅದರಲ್ಲೂ ಆ ದೊಲೋಬೋವ್,' ಬಂದಿದ್ದಾಕೆ 


೧೮ ೧೭೨ ರಿಂದ ೧೭೯೬ರ ವರೆಗೆ ಕ್ಯಾಥರೀನ್ ದಿ ಗ್ರೇಟ್ ರಶಿಯಾದ ಸಾಮ್ರಾಜ್ಜಿಯಾಗಿದ್ದಳು 


೫೪ 

ಯುದ್ಧ ಮತ್ತು ಶಾಂತಿ 
ಹೇಳಿದಳು . ಅವನು ಮಾರಿಯಾ ಇವಾನೊವ್ಯಾ ದೋಲೋಖೋವಾಳ ಮಗ. 
ಗೊತ್ತಲ್ಲಾ ? ಪಾಪ , ತುಂಬ ಮರ್ಯಾದಸ್ಥೆ. ಏನು ಮಾಡಿದರು ಗೊತ್ತಾ? ಮೂರು 
ಜನಾನೂ ಸೇರಿ ಎಲ್ಲಿಂದಲೋ ಒಂದು ಕರಡಿ ಹಿಡಕೊಂಡು ಬಂದರಂತೆ. ಅದನ್ನ 
ಸಾರೋಟಿನಲ್ಲಿ ಹಾಕಿಕೊಂಡು ಯಾರೋ ಕುಣಿತದವಳ ಮನೆಗೆ ಹೋದರು! 
ಪೋಲೀಸಿನವನು ಅವರನ್ನ ತಡೆಯೋದಕ್ಕೆ ಬಂದ. ಆಗ ಈ ಹುಡುಗರು ಅವನನ್ನ 
ಹಿಡಿದು ಕರಡಿಯ ಬೆನ್ನಿಗೆ ಕಟ್ಟಿ ಮೊಯ್ತಾ ಕಾಲುವೆಗೆ ಎಸೆದುಬಿಟ್ಟರು . 
ಪೋಲೀಸಿನವನನ್ನ ಬೆನ್ನ ಮೇಲೆ ಹೊತ್ತುಕೊಂಡು ಕರಡಿ ಹಾಗೇ ಈಜುತ್ತಾ 
ಇತ್ತು! 

'ಓ ಮೈ ಡಿಯರ್! ಆ ಪೋಲೀಸಿನವನು...ಕರಡಿ... ಅಪ್ಪಾ... ಹೋ ಹೋ 
ಹೇಗೆ ಕಾಣತಾ ಇದ್ದನೋ !' ಕೌಂಟ್ ತಡೆಯಲಾಗದೆ ನಗುವುದಕ್ಕೆ ಶುರುಮಾಡಿದ. 

- “ ಛೇ! ಛೇ! ಇದು ನಗುವ ಮಾತಲ್ಲಾ ಕೌಂಟ್,' ಅಂದರೂ ಹೆಂಗಸರು ಕೂಡ 
ನಗದೆ ಇರಲು ಆಗಲಿಲ್ಲ. 

'ಬಡಪಾಯಿ ಪೋಲೀಸಿನವನನ್ನ ಕಷ್ಟಪಟ್ಟು ಕಾಪಾಡಿದರಂತೆ' ಬಂದಿದ್ದಾಕೆ 
ಕಥೆ ಮುಂದುವರೆಸಿದಳು. 'ಕೌಂಟ್ ಕಿರಿಲ್ ಕ್ಲಾಡಿಮಿರೊವಿಚ್ ಬೆಝುಕೋವ್‌ನ 
ಮಗ ಇಂಥ ತರಲೆಮಾಡುತಾನೆ! ತುಂಬ ಓದಿಕೊಂಡಿದಾನೆ, ಜಾಣ ಅನ್ನುತ್ತಿದ್ದರು. 
ಫಾರಿನ್ ವಿದ್ಯಾಭ್ಯಾಸ ನಮ್ಮವರನ್ನ ಹೀಗೆ ಮಾಡಿದೆ! ಅವನ ಹತ್ತಿರ ದುಡ್ಡು ಇದ್ದರೆ 
ಇರಲಿ . ಇಲ್ಲಿ, ಮಾಸ್ಕೋದಲ್ಲಿ ಯಾರೂ ಅವನನ್ನ ಮನೆಗೆ ಕರೆಯಬಾರದು. 
ನನಗೂ ಯಾರೋ ಅವನ ಪರಿಚಯ ಮಾಡಿಸಿ ನಿಮ್ಮ ಮನೆಗೂ ಕರೆಯಿರಿ 
ಅಂತ ಹೇಳಿದರು. ಬಿಲ್‌ಕುಲ್ ಆಗೋದಿಲ್ಲಾ ಅಂದೆ. ನನಗೆ ಹೆಣ್ಣು ಮಕ್ಕಳು 
ಇದಾರೆ.' 

' ಅಷ್ಟೊಂದು ದುಡ್ಡಿದೆಯಾ ಆ ಹುಡುಗನ ಹತ್ತಿರ ?” ಕಿವಿಗೆ ಬೀಳುತ್ತಿದ್ದ 
ವಿಚಾರದ ಬಗ್ಗೆ ಆಸಕ್ತಿ ಇಲ್ಲ ಅನ್ನುವ ಹಾಗೆ ತಟ್ ಅಂತ ನಿರಾಸಕ್ತಿಯನ್ನು 
ನಟಿಸಿದ ಹುಡುಗಿಯರನ್ನು ಬಿಟ್ಟು ಅತಿಥಿಯ ಕಡೆಗೆ ನೋಡುತ್ತಾ ಕೇಳಿದಳು 
ಕೌಂಟೆಸ್ , ' ಬೆಝುಕೋವ್‌ನ ಮಕ್ಕಳೆಲ್ಲ ಅಕ್ರಮ ಸಂತಾನ ಅಂತ ಕೇಳಿದೇನೆ. 
ಪಿಯರೆ ಕೂಡ...ಹಾಗೇ ಅಕ್ರಮಸಂತಾನ ಅಂತ ಕಾಣತದೆ.' 

- ಅತಿಥಿ ಕೈ ಆಡಿಸಿ 'ಕೊನೇ ಪಕ್ಷ ಅಂಥಾವರು ಒಂದಿಪ್ಪತ್ತು ಮಕ್ಕಳಿರಬಹುದು 
ಬೆಝುಕೋವ್‌ಗೆ' ಅಂದಳು. . 

- ನಿಜ ಏನೆಂದರೆ, ತನಗೆ ಎಂತೆಂಥ ಸಂಬಂಧಿಕರಿದ್ದಾರೆ, ಘನವಂತರ 
ಸಮಾಜದಲ್ಲಿ ನಡೆಯುತ್ತಿರುವುದೆಲ್ಲ ತನಗೆ ಗೊತ್ತು ಎಂದು ತೋರಿಸಿಕೊಳ್ಳುವುದಕ್ಕಾಗಿ 
ಪ್ರಿನ್ಸೆಸ್ ಅನ್ನಾ ಮಿಖಾಯೌವ್ವಾ ನಡುವೆ ಬಾಯಿ ಹಾಕಿ, ಅರ್ಥಪೂರ್ಣ ಅರೆ 
ಪಿಸುಮಾತಿನ ಮಟ್ಟಕ್ಕೆ ದನಿ ತಗ್ಗಿಸಿ ಹೇಳಿದಳು. 'ನಿಜ ಏನೆಂದರೆ, ಕೌಂಟ್ ಕಿರಿಲ್‌ನ 


೫೫ 
ಸಂಪುಟ ೧ - ಸಂಚಿಕೆ ಒಂದು 
ವಿಷಯ ನಮಗೆಲ್ಲಾರಿಗೂ ಗೊತ್ತು. ಎಷ್ಟು ಮಕ್ಕಳಿದಾರೆ ಅನ್ನುವ ಲೆಕ್ಕ ಅವನಿಗೇ 
ಇಲ್ಲ. ಆದರೆ ಈ ಪಿಯರೇನ ಕಂಡರೆ ಮಾತ್ರ ಯಾವಾಗಲೂ ತುಂಬ ಪ್ರೀತಿ.' 

- ' ಆ ಕೌಂಟ್ ನೋಡೋದಕ್ಕೆ ಎಷ್ಟು ಚೆನ್ನಾಗಿದ್ದ, ಒಂದು ವರ್ಷದ ಹಿಂದೆ 
ನೋಡಿದ್ದೆ . ಅವನಿಗಿಂತ ಚೆನ್ನಾಗಿರೋರನ್ನ ಕಂಡೇ ಇಲ್ಲ' ಅಂದಳು ಕೌಂಟೆಸ್. 

“ಈಗ ಬಹಳ ತೆಗೆದುಹೋಗಿದಾನೆ,' ಅನ್ನಾ ಮಿಖಾಯೌವ್ವಾ ಅಂದಳು. 
“ ಅದೇ , ಹೇಳುತ್ತಾ ಇದ್ದೆನಲ್ಲಾ...ಅವನ ಹೆಂಡತಿ ಕಡೆಯಿಂದ ಪ್ರಿನ್ಸ್ ವ್ಯಾಸಿಲಿ ಕೌಂಟ್ 
ಕಿರಿಲ್‌ಗೆ ಸಂಬಂಧ ಆಗಬೇಕು. ಆಸ್ತಿ ಎಲ್ಲಾ ಅವನಿಗೇ ಸೇರಬೇಕು. ಆದರೆ 
ಕೌಂಟ್ ಕಿರಿಲ್‌ಗೆ ಪಿಯರೆಯನ್ನ ಕಂಡರೆ ಬಹಾಳ ಅಕ್ಕರೆ, ಅವನನ್ನು ಓದಿಸಿದ, 
ಅವನ ಪರವಾಗಿ ಚಕ್ರವರ್ತಿಗೆ ಪತ್ರ ಬರೆದಿದ್ದಾನೆ. ಅಕಸ್ಮಾತ್ ಅವನೇನಾದರೂ 
ಸತ್ತರೆ... ಯಾವತ್ತು ಬೇಕಾದರೂ ಸಾಯಬಹುದು ಅನ್ನಿ , ಅಷ್ಟೊಂದು ಕಾಯಿಲೆ 
ಆಗಿದೆ... ಮೊನ್ನೆ ತಾನೇ ಪೀಟರ್ಸ್‌ಬರ್ಗಿನಿಂದ ಡಾಕ್ಟರ್ ಲೋರೈನ್ ಬಂದು 
ನೋಡಿಕೊಂಡು ಹೋದ...ಆಸ್ತಿಯೆಲ್ಲಾ ಯಾರಿಗೆ ಹೋಗುತ್ತದೆ, ಪಿಯರೆಗೋ 
ಪ್ರಿನ್ಸ್ ವ್ಯಾಸಿಲಿಗೋ ಅನ್ನೋದು ಯಾರಿಗೂ ಗೊತ್ತಿಲ್ಲ. ನಲವತ್ತು ಸಾವಿರ ಜೀತದಾಳು, 
ಕೋಟಿಗಟ್ಟಲೆ ರೂಬಲ್ ದುಡ್ಡು! ನಿಜಾ! ಪ್ರಿನ್ಸ್ ವ್ಯಾಸಿಲಿನೇ ಖುದ್ದಾಗಿ ಹೇಳಿದ. 
ಮತ್ತೆ ಕಿರಿಲ್ ನಮ್ಮ ಅಮ್ಮನ ಕಡೆಯಿಂದ ದಾಯಾದಿ ಆಗಬೇಕು. ಅಲ್ಲದೆ ನಮ್ಮ 
ಬೋರಿಸ್‌ಗೆ ಗಾಡ್‌ಫಾದರ್ ಕೂಡಾ ಹೌದು.' ಅನ್ನುವ ಮಾತೂ ಸೇರಿಸಿದಳು, 
ಇವೆಲ್ಲಾ ಅಷ್ಟೇನೂ ಮುಖ್ಯವಲ್ಲ ಅನ್ನುವ ಹಾಗೆ. 

'ಪ್ರಿನ್ಸ್ ವ್ಯಾಸಿಲಿ ನಿನ್ನೆ ಮಾಸ್ಕೋಗೆ ಬಂದರಂತೆ. ಏನೋ ಇನ್‌ಸೆಕ್ಷನ್ 
ಇದೆಯಂತಪ್ಪಾ' ಬಂದಿದ್ದಾಕೆ ಅಂದಳು . 

' ಹೌದು, ಇದು ನಮ್ಮಲ್ಲೇ ಇರಲಿ, ಅದು ನೆಪ ಅಷ್ಟೆ. ಕಿರಿಲ್‌ಗೆ ಖಾಯಿಲೆ 
ಅಂತ ಗೊತ್ತಾಗಿ ನೋಡುವುದಕ್ಕೆ ಬಂದಿದಾನೆ' ಅಂದಳು ಅನ್ನಾ ಮಿಖಾಯೌವ್ವಾ. 

' ಹೋ ಹೋ ಹೋ ! ಹೌದಾ! ತುಂಬಾ ತಮಾಷೆಯಾಗಿತ್ತು' ಬಂದಿದ್ದಾಕೆ 
ಮಾತು ಕೇಳಿಸಿಕೊಳ್ಳುತ್ತಿಲ್ಲವೆಂದು ಹುಡುಗಿಯರ ಕಡೆಗೆ ತಿರುಗಿ ಕೌಂಟ್ ಹೇಳಿದ . 
'ಪೋಲೀಸಿನವನು! ಕಣ್ಣಿಗೆ ಕಟ್ಟಿದ ಹಾಗೆ ಇದೆ!” 

ತೋಳು ಬೀಸಿ ಆಡಿಸುತ್ತಾ ತಾನೇ ಪೋಲೀಸಿನವನು ಅನ್ನುವ ಹಾಗೆ 
ಅಭಿನಯಿಸಿತೋರಿಸುತ್ತಾ ತುಂಬು ದನಿಯಲ್ಲಿ ಗಹಗಹಿಸಿ ನಕ್ಕ. ಒಳ್ಳೆಯ ಊಟ, 
ಅದಕ್ಕಿಂತ ಒಳ್ಳೆಯ ಮದ್ಯ ಕುಡಿದವರ ಹಾಗೆ ಅವನ ಇಡೀ ಮೈ ಸಂತೋಷದಲ್ಲಿ 
ಕುಲುಕಾಡಿತು. ಅಂದ ಹಾಗೆ, ರಾತ್ರಿ ಊಟಕ್ಕೆ ತಪ್ಪದೆ ಬರಬೇಕು ನೀವು' ಅಂದ. 


ಸ್ವಲ್ಪ ಹೊತ್ತು ಯಾರೂ ಮಾತಾಡಲಿಲ್ಲ. ಕೌಂಟೆಸ್‌ ಬಂದಿದ್ದಾಕೆಯನ್ನು 
ನೋಡುತ್ತಾ ನಗುನಗುತ್ತಲೇ ಇದ್ದಳು. ಆದರೂ ಅವಳು ಎದ್ದು ಹೊರಟರೆ 


೫೬ 


ಯುದ್ಧ ಮತ್ತು ಶಾಂತಿ 
ಬೇಜಾರೇನೂ ಇಲ್ಲ ಅನ್ನುವ ಭಾವನೆ ಬಚ್ಚಿಟ್ಟಿರಲಿಲ್ಲ . ಬಂದಿದ್ದಾಕೆಯ ಮಗಳು 
ಗೌನಿನ ನಿರಿಗೆ ನೇವರಿಸಿಕೊಳ್ಳುತ್ತಾ ಚಡಪಡಿಸುತ್ತಾ ತಾಯಿಯ ಕಡೆ ಪ್ರಶ್ನೆ ಕೇಳುವ 
ಹಾಗೆ ನೋಡುತ್ತಾ ಇರುವಾಗ, ಇದ್ದಕ್ಕಿದ್ದ ಹಾಗೆ ಹುಡುಗರು ಹುಡುಗಿಯರು 
ಪಕ್ಕದ ಕೋಣೆಯಿಂದ ಓಡಿಬರುತ್ತಾ ಇರುವ ಹೆಜ್ಜೆ ಶಬ್ದ , ಡಿಕ್ಕಿ ಹೊಡೆದು ಕುರ್ಚಿ 
ದಡಾರನೆ ಬಿದ್ದ ಶಬ್ದ ಎಲ್ಲಾರಿಗೂ ಕೇಳಿಸಿತು. ಹದಿಮೂರು ವರ್ಷದ ಹುಡುಗಿ 
ಮಸ್ಲಿನ್ ಫ್ರಾಕಿನ ನಿರಿಗೆಯಲ್ಲಿ ಏನೋ ಬಚ್ಚಿಟ್ಟುಕೊಂಡು ಓಡುತ್ತಾ ಕೋಣೆಯ 
ಮಧ್ಯಕ್ಕೆ ಬಂದವಳೇ ಹಾಗೇ ತಟ್ ಅಂತ ನಿಂತುಬಿಟ್ಟಳು. ಓಡಿ ಬರುವ ರಭಸದಲ್ಲಿ 
ಎಲ್ಲ ಲೆಕ್ಕಾಚಾರ ತಪ್ಪಾಗಿ, ಅಂದುಕೊಂಡದ್ದಕ್ಕಿಂತಲೂ ದೂರ, ಅವರ ಮಧ್ಯಕ್ಕೆ 
ಬಂದುಬಿಟ್ಟಿದ್ದಳು. ಅಲ್ಲಿ, ಅವಳ ಹಿಂದೆಯೇ , ದಿವಾನಖಾನೆಯ ಬಾಗಿಲಲ್ಲಿ ಕೆಂಪು 
ಕಾಲರಿನ ಕೋಟು ತೊಟ್ಟಿರುವ ವಿದ್ಯಾರ್ಥಿ, ಇನ್ನೊಬ್ಬ ಗಾರ್ಡ್ ಅಫೀಸರು, 
ಮತ್ತೊಬ್ಬ ಹದಿನೈದು ವರ್ಷದ, ಇನ್ನೊಬ್ಬಳು ಹುಡುಗಿ, ದಪ್ಪ ದಪ್ಪಗೆ ಕೆಂಪು 
ಕೆಂಪಾಗಿದ್ದ ಪುಟ್ಟ ಹುಡುಗ ನಿಂತಿದ್ದರು. 

ಈ ಕೌಂಟ್ ದಡಕ್ಕನೆ ಎದ್ದು ನಿಂತ, ಎಡಕ್ಕೂ ಬಲಕ್ಕೂ ಸ್ವಲ್ಪ ಓಲಾಡಿ ತೋಳು 
ಅಗಲಮಾಡಿ, ದಿವಾನಖಾನೆಗೆ ಓಡಿ ಬಂದಿದ್ದ ಪುಟ್ಟ ಹುಡುಗಿಯನ್ನು ಅಪ್ಪಿಕೊಂಡ. 

- “ ಅಹಾ, ಆಹಾ! ಸಿಕ್ಕಳೂ ! ಇಲ್ಲಿದಾಳೆ!' ನಗುತ್ತಾ ಕೂಗು ಹಾಕಿ ' ಹ್ಯಾಪಿ 
ನೇಮ್ ಡೇ ಡಾರ್ಲಿಂಗ್!' ಅಂದ. | 

- 'ಎಲ್ಲಾದಕ್ಕೂ ಹೊತ್ತು, ಗೊತ್ತು, ಇರುತದೆ ಪುಟ್ಟಾ' ಕೌಂಟೆಸ್ ಸುಳ್ಳು ಶಿಸ್ತು 
ನಟಿಸುತ್ತಾ ಮಗಳಿಗೆ ಹೇಳಿದಳು. ಗಂಡನ ಕಡೆಗೆ ತಿರುಗಿ 'ಇಲ್ಯಾ, ಮುದ್ದು ಮಾಡಿ 
ಮಾಡಿ ಹುಡುಗಿಯನ್ನ ಹಾಳು ಮಾಡುತೀರಿ' ಅಂದಳು. 
- 'ಗುಡ್ ಮಾರ್ನಿಂಗ್ ಮೈ ಡಿಯರ್. ವಿಶ್ ಯೂ ಮೆನಿ ಹ್ಯಾಪಿ ರಿಟರ್ನ್' 
ಅಂದಳು ಅತಿಥಿ. ಅಮ್ಮನ ಕಡೆ ನೋಡುತ್ತಾ 'ಬಹಳ ಮುದ್ದಾಗಿದಾಳೆ' ಅನ್ನುವ 
ಮಾತು ಸೇರಿಸಿದಳು. ಕಪ್ಪು ಕಣ್ಣಿನ ಹುಡುಗಿ ಮುದ್ದಾಗಿರಲಿಲ್ಲ, ಅವಳ ಬಾಯಿ 
ತುಂಬ ದೊಡ್ಡದಾಗಿತ್ತು, ನೋಡುವುದಕ್ಕೆ ಬಹಳ ಸುಂದರಿಯಲ್ಲದಿದ್ದರೂ ಲವಲವಿಕೆ , 
ಉತ್ಸಾಹ , ತುಂಬಿಕೊಂಡಿದ್ದಳು. ಹುಚ್ಚುಚ್ಚಾಗಿ ಓಡಿ ಬಂದ ರಭಸಕ್ಕೆ ಅವಳ ಫ್ರಾಕಿನ 
ತೋಳಿನ ಪಟ್ಟಿಗಳು ಸರಿದು ಕಾಣುತ್ತಿದ್ದ ಏರಿಳಿಯುವ ಬತ್ತಲೆ ಮಗು ಭುಜ ; 
ಸುಮ್ಮನೆ ಹಿಂದಕ್ಕೆ ದಬ್ಬಿ ಕೆದರಿಕೊಂಡ ಕಪ್ಪು ಗುಂಗುರು ಕೂದಲು; ತೆಳ್ಳನೆ 
ತೋಳು, ಕಸೂತಿ ಹಾಕಿದ ಉದ್ದನೆಯ ಕಾಲುಚೀಲವಿದ್ದ ಪುಟ್ಟ ಕಾಲು; ಚಪ್ಪಲಿ 
ಹಾಕಿಕೊಂಡಿದ್ದ, ಮಗುತನ ಹೋಗಿರುವ, ಕನ್ನೆತನ ಇನ್ನೂ ಬಾರದಿರುವ ಮುದ್ದು 
ವಯಸ್ಸಿನಲ್ಲಿದ್ದ ಹುಡುಗಿ ಅವಳು. ಅಪ್ಪನ ಕೈಯಿಂದ ಕೊಸರಿಕೊಂಡು, ಅಮ್ಮನ 
ಕೋಪ ಲೆಕ್ಕಿಸದೆ, ನಾಚಿ ಕೆಂಪು ತಿರುಗಿದ್ದ ತನ್ನ ಮುಖವನ್ನು ಅಮ್ಮನ ಶಾಲಿನ 
ಹಿಂದೆ ಮರೆಸಿಕೊಂಡು ನಕ್ಕಳು. ಗುರಿ ಇಲ್ಲದೆ ಸುಮ್ಮಸುಮ್ಮನೆ ನಗುತಿದ್ದಳು. 


೫೭. 


ಸಂಪುಟ ೧ - ಸಂಚಿಕೆ ಒಂದು 
ಫ್ರಾಕಿನಲ್ಲಿ ಬಚ್ಚಿಟ್ಟುಕೊಂಡಿದ್ದ ಬೊಂಬೆಯನ್ನು ಹೊರಗೆ ತೆಗೆದು, ಗಲಗಲ 
ಮಾತಾಡಿದಳು. 

- “ಅಮಾ...ನೋಡಿದೆಯಾಮಾ... ? ಬೊಂಬೆ...ಮಿಮಿ ಇದಾಳಲ್ಲಾ... 
ನೋಡಮ್ಮಾ ?....' ಅವಳಿಗೆ ಹೇಳಲು ಆಗಿದ್ದು ಅಷ್ಟೇ . ಅಮ್ಮನ ಮೇಲೆ ಬಿದ್ದು 
ನಕ್ಕಳು. ಮತ್ತೂ ಎಷ್ಟು ಜೋರಾಗಿ ನಕ್ಕಳು ಅಂದರೆ ಎಲ್ಲರೂ ನಕ್ಕರು. ಗಂಜಿ 
ಹಾಕಿ ಆಸ್ತಿ ಮಾಡಿದ ಹಾಗೆ ಇದ್ದ ಅತಿಥಿ ಕೂಡ ಸೇರಿಕೊಂಡಳು . ನಗದೆ 
ಇರುವುದಕ್ಕೆ ಯಾರಿಗೂ ಆಗಲಿಲ್ಲ. 

“ ನಡಿ, ಹೊರಡು ಇಲ್ಲಿಂದ, ಈ ನಿನ್ನ ದರಿದ್ರ ಬೊಂಬೆ ಇಲ್ಲಿಂದ ತಗೊಂಡು 
ಹೋಗುತೀಯೋ ಇಲ್ಲವೋ ' ಅಮ್ಮ ಹುಸಿಕೋಪದಿಂದ ಮಗಳನ್ನು ದಬ್ಬಿದಳು. 
“ ನನ್ನ ಕೊನೆಯ ಮಗಳು' ಅತಿಥಿಗೆ ಹೇಳಿದಳು. 

ಅಮ್ಮನ ಲೇಸು ಹಾಕಿದ್ದ ಶಾಲಿನಿಂದ ತಲೆ ಹೊರಗೆ ಹಾಕಿ, ನಕ್ಕು ನಕ್ಕು 
ನೀರು ತುಂಬಿಕೊಂಡಿದ್ದ ಕಣ್ಣುಗಳಿಂದ ಒಮ್ಮೆ ಅವಳನ್ನು ಒಂದು ನಿಮಿಷ ನೋಡಿ, 
ಮತ್ತೆ ಅಮ್ಮನ ಮಡಿಲಲ್ಲಿ ಮುಖ ಬಚ್ಚಿಟ್ಟುಕೊಂಡಳು. 

ಬಂದಿದ್ದಾಕೆ ಈ ಮನೆಯ ನಾಟಕ ಮೆಚ್ಚಿಕೊಳ್ಳಲೇ ಬೇಕಾದವಳ ಹಾಗೆ , 
ತಾನೂ ಅದರಲ್ಲಿ ಭಾಗವಹಿಸಲು ಇಷ್ಟಪಡುವಳ ಹಾಗೆ 'ಹೇಳು ಪುಟ್ಟಾ, ಮಿಮಿ 
ಯಾರು ? ನಿನ್ನ ಮಗಳಾ ?' ಅಂದಳು. 

ಬಂದಿದ್ದ ಅತಿಥಿ ಹೀಗೆ ಸುಳ್ಳು ಮುದ್ದಿನ ದನಿಯಲ್ಲಿ ಕೇಳಿದ್ದು ನತಾಶಾಗೆ 
ಇಷ್ಟವಾಗಲಿಲ್ಲ. ಏನೂ ಮಾತನಾಡದೆ ಮಂಕಾಗಿ ಅವಳ ಕಡೆಗೆ ದುರುಗುಟ್ಟಿಕೊಂಡು 
ನೋಡಿದಳು . 
. ಇತ್ತ ಹುಡುಗರ ಪಡೆ: ಆಫೀಸರನಾಗಿದ್ದ ಬೋರಿಸ್, ಮಿಖಾಯೌವ್ವಾಳ 
ಮಗ; ನಿಕೊಲಸ್, ಕಾಲೇಜು ವಿದ್ಯಾರ್ಥಿ, ಕೌಂಟ್‌ನ ಹಿರಿಯ ಮಗ; ಹದಿನೈದು 
ವರ್ಷದ ಸೋನ್ಯಾ, ಕೌಂಟ್‌ನ ಸೋದರ ಸೊಸೆ; ಮತ್ತೆ ಪೀತ್ಯಾ, ಕೌಂಟನ 
ಕಿರಿಯ ಮಗ , ಎಲ್ಲರೂ ದಿವಾನಖಾನೆಯಲ್ಲಿ ಚದುರಿ ನಿಂತು ಮನಸ್ಸಿನಲ್ಲಿ ಉಕ್ಕುತ್ತಿದ್ದ 
ಖುಶಿಯನ್ನು ಮರ್ಯಾದೆಯ ಚೌಕಟ್ಟಿನಲ್ಲಿ ಹಿಡಿದಿಡಲು ಕಷ್ಟಪಡುತ್ತಿದ್ದರು. ಒಳಗಿನ 
ಕೋಣೆಗಳಿಂದ ಹುಚ್ಚು ಹುಮ್ಮಸ್ಸಿನಲ್ಲಿ ಓಡಿ ಬರುವ ಮೊದಲು ಅವರೆಲ್ಲ ಅಲ್ಲಿ 
ಸೇರಿಕೊಂಡು ಆಡುತ್ತಿದ್ದ ಮಾತು ಇಲ್ಲಿನ ಘನವಂತರ ಹರಟೆ, ನಗರದ ಹವಾಮಾನ, 
ಕೌಂಟೆಸ್‌ ಅಪ್ರಾಪ್ತಿನಾಳ ಮನೆಯ ಬಾಲ್ ಡ್ಯಾನ್ಸುಗಳ ವಿಚಾರಕ್ಕಿಂತ ರುಚಿಯಾಗಿತ್ತು. 
ನುಗ್ಗಿ ನುಗ್ಗಿ ಬರುತ್ತಿದ್ದ ನಗುವನ್ನು ತಡೆದುಕೊಂಡು ಒಬ್ಬರ ಮುಖ ಒಬ್ಬರು 
ನೋಡಿಕೊಂಡು, ತಟ್ಟನೆ ನಕ್ಕು , ಮತ್ತೆ ಗಂಭೀರವಾಗಿರಲು ಕಷ್ಟಪಡುತ್ತಿದ್ದರು. 
ಈ ಇಬ್ಬರು ಯುವಕರು, ಒಬ್ಬ ಆಫೀಸರು ಇನ್ನೊಬ್ಬ ಕಾಲೇಜು ವಿದ್ಯಾರ್ಥಿ, 
ಒಂದೇ ವಯಸ್ಸಿನವರು , ಚಿಕ್ಕಂದಿನಿಂದಲೂ ಸ್ನೇಹಿತರು. ಇಬ್ಬರೂ ನೋಡುವುದಕ್ಕೆ 


3805 

ಯುದ್ಧ ಮತ್ತು ಶಾಂತಿ 
ಚೆನ್ನಾಗಿದ್ದರು, ಬೇರೆ ಬೇರೆ ರೀತಿಯಲ್ಲಿ. ಬೋರಿಸ್ ಎತ್ತರವಾಗಿದ್ದ, ದಟ್ಟ ಕೂದಲಿನ 
ಲಕ್ಷಣವಾದ ಯುವಕ. ಸುಂದರವಾದ ಮುಖ , ಸಮಾಧಾನದ ನೋಟ ಇತ್ತು. 
ನಿಕೋಲಸ್‌ನ ಎತ್ತರ ಸ್ವಲ್ಪ ಕಡಮೆ , ಗುಂಗುರು ಪೊದೆಗೂದಲು, ಆಗ ತಾನೇ 
ಮೂಡುತ್ತಿದ್ದ ಎಳೆಯ ಮೀಸೆ, ಯಾವುದೇ ಕೆಲಸಕ್ಕೆ ಹುಮ್ಮಸ್ಸಿನಿಂದ ಮುಂದೆ 
ನುಗ್ಗುವ ದುಡುಕು ಉತ್ಸಾಹ, ಮುಗ್ಧತೆ, ಮುಖದ ಮೇಲೆಕಾಣುತ್ತಿತ್ತು. ದಿವಾನಖಾನೆಗೆ 
ಬರುತ್ತಿದ್ದ ಹಾಗೇ ನಿಕೋಲಸ್ ನಾಚಿಕೊಂಡ. ಏನಾದರೂ ಹೇಳಬೇಕು ಅಂತ 
ಪ್ರಯತ್ನಪಟ್ಟು, ಆಗದೆ,ಸೋತು ಸುಮ್ಮನೆ ನಿಂತ ಹಾಗೆ ಇತ್ತು. ಅವನಿಗೆ ತದ್ವಿರುದ್ಧವಾಗಿ 
ಬೋರಿಸ್ ತಕ್ಷಣವೇ ಸಾವರಿಸಿಕೊಂಡು, ಶಾಂತವಾದ ಧ್ವನಿಯಲ್ಲಿ ಸರಾಗವಾಗಿ 
ತಮಾಷೆಯಾಗಿ ಹೇಳಿದ - ಮಿಮಿ ಪುಟ್ಟ ಹುಡುಗಿಯಾಗಿದ್ದಾಗಿನಿಂದ, ಅವಳ ಮೂಗು 
ಮುರಿದುಹೋಗುವ ಮೊದಲಿನಿಂದಲೂ ನನಗೆ ಗೊತ್ತು, ಈ ಐದು ವರ್ಷಗಳಲ್ಲಿ 
ಹೇಗೆ ಬೆಳೆದುಬಿಟ್ಟಿದಾಳೆ, ವಯಸ್ಸಾಗಿಬಿಟ್ಟಿದೆ ಮತ್ತೆ ಮಿಮಿಯ ತಲೆ ಬುರುಡೆ ಸೀಳಿ 
ಬಿರುಕು ಬಿಟ್ಟುಬಿಟ್ಟಿದೆ ಅಂದ. ಇದನ್ನೆಲ್ಲ ಹೇಳಿ ನತಾಶಾಳ ಕಡೆಗೆ ನೋಡಿದ. 
ನತಾಶಾ ಮುಖ ತಿರುಗಿಸಿ ತಮ್ಮನತ್ತ ನೋಡಿದಳು . ಆ ತಮ್ಮ ಉಕ್ಕಿ ಬರುತ್ತಿರುವ 
ನಗು ಅದುಮಿಟ್ಟುಕೊಳ್ಳಲು ಆಗದೆ, ಕಣ್ಣು ಕಿರಿದು ಮಾಡಿಕೊಂಡು, ತುಟಿ 
ಬಿಗಿದುಕೊಂಡು, ಮೈ ಕುಲುಕಿಸಿಕೊಂಡು ನಿಂತಿದ್ದ . ಅದನ್ನು ಕಂಡು ತನಗೂ 
ಬರುತ್ತಿರುವ ನಗು ತಡೆಯಲಾಗದೆ, ಸೋಫಾದಿಂದ ಕೆಳಕ್ಕೆ ಹಾರಿ ಎಷ್ಟು ಆಗುತ್ತದೋ 
ಅಷ್ಟು ಜೋರಾಗಿ ಓಡಿ ಹೋದಳು. 

- ಬೋರಿಸ್ ನಗಲಿಲ್ಲ. 'ನೀನು ಹೊರಡಬೇಕು ಅನ್ನುತ್ತಿದ್ದೆಯಲ್ಲಾ ಮಮಾ? 
ಸಾರೋಟು ತರಿಸಲೇ ?' ಮುಗಳು ನಗುತ್ತಾ ತಾಯಿಯನ್ನು ಕೇಳಿದ. 

'ಹೌದು, ಹೌದು, ಸಾರೋಟು ರೆಡಿ ಮಾಡಲು ಹೇಳು' ಎಂದಳು ತಾಯಿ , 
ತಾನೂ ಮುಗಳುನಗುತ್ತಾ, 

ಬೋರಿಸ್ ನಿಧಾನವಾಗಿ ಹೆಜ್ಜೆ ಹಾಕುತ್ತಾ ನತಾಶಾಳನ್ನು ಹುಡುಕಿಕೊಂಡು 
ಹೊರಟ . ದಪ್ಪ ಮೈಯ ಪುಟ್ಟ ಹುಡುಗ ತಮ್ಮ ಆಟ ಹಾಳಾದದ್ದಕ್ಕೆಕೋಪಗೊಂಡವನ 
ಹಾಗೆ ಅವನ ಹಿಂದೆಯೇ ದೊಡ್ಡ ಹೆಜ್ಜೆ ಹಾಕಿಕೊಂಡು ಹೋದ. 


ಆಮೇಲೆ ದಿವಾನಖಾನೆಯಲ್ಲಿ ಉಳಿದುಕೊಂಡ ಹುಡುಗರು -ಕೌಂಟೆಸ್ 
ಜೊತೆಗೆ ಇದ್ದ ದೊಡ್ಡ ಮಗಳು, ತಂಗಿಗಿಂತ ನಾಲ್ವೇ ವರ್ಷ ಹಿರಿಯಳಾಗಿದ್ದರೂ 
ಬೆಳೆದ ಹೆಂಗಸಿನ ಹಾಗೆ ಆಡುತ್ತಿದ್ದವಳು ಮತ್ತೆ ಅತಿಥಿಯ ಮಗಳನ್ನು ಬಿಟ್ಟರೆ 
ನಿಕೋಲಸ್ ಮತ್ತು ಸೋದರ ಸೊಸೆ ಸೋನ್ಯಾ ಮಾತ್ರ ಸೋನ್ಯಾ ತೆಳ್ಳನೆ 
ಮೈಕಟ್ಟಿನ ಕಂದು ಬಣ್ಣದ ಪುಟ್ಟ ಹುಡುಗಿ, ಉದ್ದವಾದ ರೆಪ್ಪೆಯ ನೆರಳಿನಲ್ಲಿರುವ 
ಮೆದುತನದ ಕಣ್ಣು, ಸೊಂಪಾದ ದಟ್ಟ ಕಪ್ಪುಗೂದಲನ್ನು ಎರಡು ಸುತ್ತು ಸುತ್ತಿ 


೫೯ 
ಸಂಪುಟ ೧ - ಸಂಚಿಕೆ ಒಂದು 
ತಲೆಯ ಹಿಂದೆ ಹಾಕಿಕೊಂಡಿದ್ದ ಗಂಟು, ಮುಖದ ಮೇಲೆ, ಅದಕ್ಕಿಂತ ಕತ್ತಿನ 
ಮೇಲೆ ಎಳೆಯ ಕಿತ್ತಳೆಯ ಛಾಯೆ ಇತ್ತು. ಬಡಕಲಾಗಿದ್ದ ಬೋಳು ತೋಳು 
ಬಿಗಿಕಟ್ಟಾಗಿ ಒಳ್ಳೆಯ ಅಕಾರದಲ್ಲಿತ್ತು. ಸಾವಕಾಶವಾದ ಓಡಾಟ , ಪುಟ್ಟ ಕೈ ಕಾಲುಗಳ 
ಮೃದು ಚಪಲತೆ, ಬೆರೆತೂ ಬೇರೆಯಾಗಿರುವ ಎಚ್ಚರ ಇದೆಲ್ಲ ಸೇರಿ ಮುಂದೆ 
ಮೈದುಂಬಿ ಬೆಳೆದು ಮದ್ದು ಬೆಕ್ಕು ಆಗಲಿರುವ ಈಗ ಅರ್ಧ ಬೆಳೆದಿರುವ ಮರಿಯ 
ಹಾಗೆ ಅನಿಸುತ್ತಿತ್ತು . ಸುಮ್ಮನೆ ಮುಗುಳು ನಗುತ್ತಾ ಕೂತಿದ್ದರೂ ಸರಿ ದಿವಾನಖಾನೆಯ 
ಮಾತುಕತೆಯಲ್ಲಿ ಸೇರಿಕೊಂಡಿದ್ದೇನೆ ಅನ್ನುವ ಹಾಗೆ ತೋರಿಸಿಕೊಳ್ಳುವುದು ಅಗತ್ಯ 
ಅಂದುಕೊಂಡಿದ್ದಳು . ಆದರೆ ಈಗ, ಅರ್ಧ ಮುಚ್ಚಿಕೊಂಡಿದ್ದ ಉದ್ದ ರೆಪ್ಪೆಗಳ 
ಹಿಂದಿದ್ದ ಕಣ್ಣು ತನ್ನಿಚ್ಛೆಯನ್ನೂ ಮೀರಿ, ಸದ್ಯದಲ್ಲೇ ಸೈನ್ಯಕ್ಕೆ ಸೇರುವವನಿದ್ದ 
ನಿಕೋಲಸ್‌ನ ಕಡೆಗೆ ತಿರುಗಿತ್ತು. ಆರಾಧನೆಯ ಅಂಚನ್ನು ಮುಟ್ಟಿದ್ದ ಅವಳ 
ಬಾಲಿಶವಾದ ಪ್ರೀತಿ ಎದ್ದು ತೋರುತ್ತಿದ್ದು ಸೋನ್ಯಾಳ ಮುಗುಳು ನಗೆ ಯಾರನ್ನೂ 
ನಂಬಿಸಲಾರದಾಗಿತ್ತು. ತಲೆ ತಗ್ಗಿಸಿ, ಬೆನ್ನು ಬಾಗಿಸಿ ಹೊಂಚು ಹಾಕುತ್ತಿರುವ ಬೆಕ್ಕಿನ 
ಮರಿ ತಟ್ಟನೆ ಚಿಮ್ಮಿ ನಿಕೋಲಸನ ಮೇಲೆ ಎಗರಿ ಚಿನ್ನಾಟವಾಡುತ್ತದೆ, ಬೋರಿಸ್ 
ಮತ್ತು ನತಾಶಾರ ಹಾಗೆ ತಾವೂ ಡ್ರಾಯಿಂಗ್ ರೂಮಿನಿಂದ ತಪ್ಪಿಸಿಕೊಳ್ಳುವುದಕ್ಕೆ 
ಕಾಯುತ್ತಿದೆ ಅನ್ನುವಂತಿತ್ತು ಅವಳ ನಗೆ, 
- 'ಹೌದು, ಮೈ ಡಿಯರ್' ಅತಿಥಿಯನ್ನು ಉದ್ದೇಶಿಸಿ, ನಿಕೋಲಸನನ್ನು 
ತೋರಿಸುತ್ತಾ ಕೌಂಟ್ ಹೇಳಿದ, 'ಹೌದು, ಮೈ ಡಿಯರ್, ಇವನ ಸ್ನೇಹಿತ 
ಬೋರಿಸ್ ಸೈನ್ಯದ ಅಧಿಕಾರಿಯಾಗಿದ್ದಾನೆ, ಅದಕ್ಕೇ ಗೆಳೆತನದ ಸಲುವಾಗಿ ಇವನೂ 
ಯೂನಿವರ್ಸಿಟಿ ಬಿಟ್ಟು, ವಯಸ್ಸಾದ ಈ ತಂದೆಯನ್ನು ಬಿಟ್ಟು, ಆರ್ಕೆವ್ ಇಲಾಖೆಯಲ್ಲಿ 
ಇವನಿಗಾಗಿ ಕಾದಿರುವ ಹುದ್ದೆ ಬಿಟ್ಟು, ತಾನೂ ಸೈನ್ಯಕ್ಕೆ ಸೇರುತಿದಾನೆ! ಗೆಳೆತನ 
ಅಂದರೆ ಇದೇ ಅಲ್ಲವಾ?' 

- ' ಯುದ್ಧ ಘೋಷಣೆಯಾಗಿದೆ ಅನ್ನುತಿದ್ದರಪ್ಪಾ' ಅತಿಥಿ ಉತ್ತರಿಸಿದಳು . 
- 'ಎಷ್ಟೋ ದಿನದಿಂದ ಅನ್ನತಾ ಇದಾರೆ. ಸಾಕಾಗೋವರೆಗೂ ಅನ್ಸತಲೇ 
ಇರತಾರೆ, ಅಷ್ಟೆ. ಆದರೂ , ಗೆಳೆತನ ಎಂದರೆ ನನ್ನ ಮಗನದು ನೋಡಿ, ಹುಸಾರ್ 
ದಳಕ್ಕೆ ಸೇರಿಕೊಳ್ಳುತ್ತಿದ್ದಾನೆ.' 

ಏನು ಹೇಳಬೇಕೆಂದು ತಿಳಿಯದೆ ಅತಿಥಿ ತಲೆ ಆಡಿಸಿದಳು. 
- 'ಸ್ನೇಹ ಅಂತ ಏನೂ ಅಲ್ಲ. ಸ್ನೇಹ ಅಲ್ಲ. ಸೈನ್ಯಕ್ಕೆ ಸೇರುವುದು ನನಗೆ ಇಷ್ಟ, 
ನನ್ನ ಮನಸ್ಸಿಗೆ ಒಗ್ಗುವುದು ಅದೇ ' ತನಗೆ ದೊಡ್ಡ ಅಪಮಾನವಾಯಿತು ಅನ್ನುವ 
ಹಾಗೆ ಮುಖ ಊದಿಸಿಕೊಂಡು ಜೋರಾಗಿ ಅಂದ ನಿಕೋಲಸ್ . 

ಪಕ್ಕಕ್ಕೆ ತಿರುಗಿ ಸೋನ್ಯಾ ಮತ್ತು ಅತಿಥಿಯ ಮಗಳು ಜೂಲಿಯಾಳ ಕಡೆಗೆ 
ಕುಡಿ ನೋಟ ಬೀರಿದ. ಹುಡುಗಿಯರಿಬ್ಬರೂ ಒಪ್ಪಿದೆವು ಅನ್ನುವ ಹಾಗೆ 


೬೦ 


ಯುದ್ಧ ಮತ್ತು ಶಾಂತಿ 
ಮುಗುಲ್ನಗುತ್ತಾ ಅವನನ್ನು ನೋಡಿದರು. 

“ಕರ್ನಲ್ ಶ್ರುಬೆರ್ಟ್ ಇವತ್ತು ರಾತ್ರಿ ಊಟಕ್ಕೆ ಬರುತ್ತಾನೆ. ಪಾವೋಗ್ರಾಡ್ 
ಹುಸಾರ್‌ ದಳದಲ್ಲಿದಾನೆ. ರಜದ ಮೇಲೆ ಬಂದಿದಾನೆ, ನಿಕೋಲಸ್‌ನ ಕರಕೊಂಡು 
ಹೋಗುತ್ತಾನೆ. ಏನೂ ಮಾಡಕ್ಕಾಗಲ್ಲ!' ಕೌಂಟ್ ಭುಜವನ್ನು ಕೊಡವಿ ತನ್ನ ಮನಸ್ಸು 
ಕೆಡಿಸಿದ್ದ ಸಂಗತಿಯನ್ನು ಜೋಕು ಅನ್ನುವ ಹಾಗೆ ಹೇಳಿದ. 

“ನಿಮಗೆ ಆಗಲೇ ಹೇಳಿದೇನೆ ಪಪ್ಪಾ, ನಿಮಗೆ ಇಷ್ಟ ಇಲ್ಲದಿದ್ದರೆ ಹೇಳಿಬಿಡಿ, 
ನಾನು ಹೋಗಲ್ಲ . ಸೈನ್ಯ ಬಿಟ್ಟರೆ ಬೇರೆ ಎಲ್ಲೂ ನನಗೆ ಸರಿಹೋಗಲ್ಲ . 
ರಾಯಭಾರಿಯೂ ಅಲ್ಲ, ಸರ್ಕಾರಿ ಗುಮಾಸ್ತನೂ ಅಲ್ಲ. ಮನಸ್ಸಿನಲ್ಲಿರೋದನ್ನ 
ಬಚ್ಚಿಟ್ಟುಕೊಳ್ಳೋದಕ್ಕೆ ಬರಲ್ಲ ನನಗೆ ' ಅಂದ ನಿಕೋಲಸ್, ಸುಂದರ ಯುವಕರು 
ಮಾತನಾಡುವಾಗ ಮಾಡುವಂತೆಸೋನ್ಯಾ ಮತ್ತು ಅತಿಥಿಯ ಮಗಳು ಜೂಲಿಯಾಳ 
ಕಡೆಗೆ ಚೆಲ್ಲಾಟದ ನೋಟ ಬೀರುತ್ತಿದ್ದ . 

ನೋಟವನ್ನು ಅವನಿಗೇ ಅಂಟಿಸಿಕೊಂಡು ನಿಜವಾದ ಬೆಕ್ಕಿನ ಹಾಗೆ ಅವನ 
ಮೇಲೆ ಎಗರಿ ಕೀಟಲೆಮಾಡಲು ಸೋನ್ಯಾ ಅನ್ನುವ ಬೆಕ್ಕಿನ ಮರಿ ಕಾಯುತ್ತಿತ್ತು. 

“ಸರಿ, ಸರಿ . ಎಂಥಾ ಹುಚ್ಚು. ಈ ಬೋನಾಪಾರ್ಟೆ ಇವರ ಬುದ್ದಿ 
ಕೆಡಿಸಿಬಿಟ್ಟಿದಾನೆ. ಸೈನ್ಯದಲ್ಲಿ ಪೇದೆಯಾಗಿದ್ದವನು ಚಕ್ರವರ್ತಿಯಾದನಲ್ಲ ಅನ್ನೋದನ್ನೇ 
ಯೋಚನೆ ಮಾಡತಾರೆ. ದೇವರು ಒಳ್ಳೆಯದು ಮಾಡಲಿ” ಅಂದ ಕೌಂಟ್. ಅತಿಥಿಯ 
ವ್ಯಂಗ್ಯ ತುಂಬಿದ ನಗುವನ್ನು ಗಮನಿಸಲಿಲ್ಲ. 

ದೊಡ್ಡವರೆಲ್ಲ ಬೋನಾಪಾರ್ಟೆಯ ಬಗ್ಗೆ ಮಾತಿಗೆ ಶುರುಮಾಡಿಕೊಂಡಾಗ 
ಅತಿಥಿಯ ಮಗಳು ಜೂಲಿ ನಿಕೋಲಸ್‌ನನ್ನು ನೋಡುತ್ತಾ 'ಹೋದ ಗುರುವಾರ 
ನೀನು ಆರ್ಖರೋವ್ ಮನೆಯ ಪಾರ್ಟಿಗೆ ಬಂದಿರಲಿಲ್ಲ. ನೀನು ಇಲ್ಲದೆ ಬೋರು 
ಹೊಡೆಯುತ್ತಿತ್ತು' ಅನ್ನುತ್ತಾ ಸಿಹಿಯಾಗಿ ನಕ್ಕಳು. 

ಹೆಮ್ಮೆಯಿಂದ ಉಬ್ಬಿ ಚೆಲ್ಲಾಟವಾಡುವ ಯುವಕರ ಹಾಗೆ ನಗುತ್ತಾ ಜೂಲಿಯ 
ಹತ್ತಿರಕ್ಕೆ ಸರಿದುಕೊಂಡ. ಅವನ ಹಾಗೆಯೇ ನಗುತ್ತಾ ಇದ್ದ ಜೂಲಿಯ ಜೊತೆ 
ಖಾಸಗಿ ಮಾತು ಶುರುಮಾಡಿದ. ಸಹಜವಾಗಿ ಹೊಮ್ಮಿದ ತನ್ನ ಮುಗುಳು ನಗು 
ಹೊಟ್ಟೆಯ ಕಿಚ್ಚಿನ ಸೂನ್ಯಾಳ ಹೃದಯವನ್ನು ಇರಿದಿದೆ, ನಾಚಿದ ಮುಖದ ಮೇಲೆ 
ಬಲವಂತದ ನಗು ಇಟ್ಟುಕೊಂಡು ಕೂತಿದ್ದಾಳೆ ಅನ್ನುವುದನ್ನು ಗಮನಿಸದಷ್ಟು 
ಆನಂದದಲ್ಲಿ ಮೈಮರೆತಿದ್ದ . ಮಾತಿನ ಮಧ್ಯೆ ಹೀಗೇ ಸುಮ್ಮನೆ ಅವಳ ಕಡೆ 
ನೋಡಿದ, ಸೋನ್ಯಾ ಕಹಿ ತುಂಬಿಕೊಂಡು ದುರುಗುಟ್ಟಿ ನೋಡುತ್ತಾ ಎದ್ದು 
ನಿಂತು, ತುಂಬಿ ಬಂದ ಕಣ್ಣೀರು ತಡೆದುಕೊಳ್ಳಲಾರದೆ, ಮುಖದ ಮೇಲೆ ಬಲವಂತದ 
ನಗು ಹಾಗೇ ಇಟ್ಟುಕೊಂಡು, ದಿವಾನಖಾನೆಯಿಂದಾಚೆಗೆ ನಡೆದುಬಿಟ್ಟಳು. 

ನಿಕೋಲಸನ ಉತ್ಸಾಹ ಆವಿಯಾಗಿಬಿಟ್ಟಿತು. ಮಾತಿನ ಮಧ್ಯೆ ಬಿಡುವು 


೬೧ 
ಸಂಪುಟ ೧ - ಸಂಚಿಕೆ ಒಂದು 
ಸಿಗುವ ಅವಕಾಶಕ್ಕಾಗಿಯೇ ಕಾಯುತ್ತಿದ್ದು, ಸಿಕ್ಕ ಕೂಡಲೇ ಸೋನ್ಯಾಳನ್ನು ಹುಡುಕಲು 
ಹೊರಟುಬಿಟ್ಟ . ಅವನ ಮುಖ ಕಳವಳದ ಚಿತ್ರ ಅನ್ನುವಹಾಗಿತ್ತು. 
* 'ಈ ಹುಡುಗರು ಮನಸ್ಸಿನಲ್ಲಿರುವುದೆಲ್ಲಾ ತೋರಿಸಿಕೊಂಡುಬಿಡುತ್ತಾರೆ ' ಅನ್ನಾ 
ಮಿಖಾಯೌವ್ವಾ ನಿಕೋಲಾಸ್ ಹೋದ ದಿಕ್ಕಿಗೇ ನೋಡುತ್ತಾ ತಲೆದೂಗಿ ' 

ಸೋದರಿಕೆ 
ಸಂಬಂಧ, ಮೈಯೆಲ್ಲಾ ಕಣ್ಣಾಗಿರಬೇಕು' ಅಂದಳು. 

ಯುವಕರು ರೂಮಿಗೆ ತಂದಿದ್ದ ಎಳೆ ಬಿಸಿಲು ಮಾಯವಾದಮೇಲೆ, ಯಾರೂ 
ಕೇಳದಿದ್ದರೂ ತನ್ನ ಮನಸ್ಸಿನಲ್ಲೇ ಕೊರೆಯುತ್ತಾ ಇರುವ ಪ್ರಶ್ನೆಗೆ ಉತ್ತರ ಹೇಳುವ 
ಹಾಗೆ ಕೌಂಟೆಸ್ ಮಾತಾಡಿದಳು: 'ಹೌದು, ಬೆಳೆದ ಮಕ್ಕಳನ್ನು ಕಣ್ಣು ತುಂಬಾ 
ನೋಡಿ ಸಂತೋಷಪಡತೇವೆ, ಅವರನ್ನ ಬೆಳೆಸೋದಕ್ಕೆ ಎಷ್ಟು ಕಷ್ಟಪಟ್ಟಿರತೇವೆ, 
ಎಷ್ಟು ಆತಂಕ ಪಟ್ಟಿರತೇವೆ! ಈಗಲೂ ಅಷ್ಟೆ, ಆಣೆ ಮಾಡಿ ಹೇಳತೇನೆ, ಮಕ್ಕಳಿಂದ 
ಸುಖಪಡೋದಕ್ಕಿಂತ ಭಯಪಡೋದೇ ಹೆಚ್ಚು. ಯಾವಾಗಲೂ ಭಯವೇ , 
ಯಾವಾಗಲೂ ಆತಂಕವೇ ! ವಯಸ್ಸಿಗೆ ಬಂದ ಹುಡುಗ - ಹುಡುಗೀರು...' 
ಈ ಎಲ್ಲಾ ನಾವು ಮಕ್ಕಳನ್ನು ಹೇಗೆ ಬೆಳೆಸುತ್ತೇವೆ ಅನ್ನುವುದರ ಮೇಲಿದೆ' 
ಅತಿಥಿ ಹೇಳಿದಳು. 

“ನಿಜ , ನೀವು ಹೇಳಿದ್ದು, ಸದ್ಯ ದೇವರ ದಯ , ಇದುವರೆಗೂ ಮಕ್ಕಳಿಗೆ 
ಸ್ನೇಹಿತೆಯಾಗೇ ಇದ್ದೇನೆ. ಮಕ್ಕಳು ನನ್ನನ್ನ ಪೂರ್ತಿ ನಂಬಿದಾರೆ, ವಿಶ್ವಾಸ 
ಇಟ್ಟುಕೊಂಡಿದಾರೆ' ಅಂದಳು ಕೌಂಟೆಸ್ . ನಮ್ಮ ಮಕ್ಕಳು ನಮಗೆ ಚೆನ್ನಾಗಿ ಗೊತ್ತು, 
ಅವರು ಏನನ್ನೂ ನಮ್ಮಿಂದ ಬಚ್ಚಿಡುವುದಿಲ್ಲ ಅಂದುಕೊಳ್ಳುವ, ಎಲ್ಲ 
ತಂದೆತಾಯಿಯರೂ ಇಟ್ಟುಕೊಂಡಿರುವ ಭ್ರಮೆಯನ್ನೇ ಅವಳೂ ಆಡಿ ತೋರುತ್ತಿದ್ದಳು. 
“ ನನ್ನ ಹೆಣ್ಣು ಮಕ್ಕಳನ್ನ ಚೆನ್ನಾಗಿ ಬಲ್ಲೆ. ಅವರಿಗೆ ಏನೇ ಆದರೂ ಮೊದಲು ನನ್ನ 
ಹತ್ತಿರವೇ ಹೇಳಿಕೊಳ್ಳುತ್ತಾರೆ. ನಿಕೋಲಸ್‌ಗೆ ದುಡುಕು, ಏನಾದರೂ ತಪ್ಪು 
ಮಾಡಿದರೂ , ಹುಡುಗರು ಎಷ್ಟಂದರೂ ಹುಡುಗರೇ , ಅವನು ಮಾತ್ರ ಆ 
ಪೀಟರ್ಸ್‌ಬರ್ಗ್ ಹುಡುಗರ ಹಾಗೆ ಆಗೋದಿಲ್ಲ ಅಂದುಕೊಂಡಿದ್ದೇನೆ' ಅಂದಳು. 

'ಹೌದು, ಅದ್ಭುತವಾದ ಮಕ್ಕಳು, ತುಂಬಾ ಅದ್ಭುತವಾದ ಮಕ್ಕಳು' ಕೌಂಟ್ 
ದನಿ ಸೇರಿಸಿದ. ಮುಳ್ಳಿನ ಹಾಗೆ ಚುಚ್ಚುವ ಎಲ್ಲಾ ಸಮಸ್ಯೆಗಳನ್ನೂ ಅದ್ಭುತವಾಗಿದೆ' 
ಅನ್ನುವ ಪರಿಹಾರಮಾಡಿಕೊಂಡುಬಿಡುತ್ತಿದ್ದ . 'ನೋಡಿ, ನೋಡಿ! ನನ್ನ ಮಗ 
ಹುಸಾರ್! ನೀನು ಹೇಗೆ ಹೇಳುತೀಯೋ ಹಾಗೆ, ಮೈ ಡಿಯರ್,' ಅಂದ. 

- ನಿಮ್ಮ ಚಿಕ್ಕ ಮಗಳು ತುಂಬ ಚೆನ್ನಾಗಿದಾಳೆ , ಒಳ್ಳೆಯ ಪಾದರಸದ ಹಾಗೆ!” 
ಅಂದಳು ಅತಿಥಿ. . 
- 'ಎಲ್ಲಾ ನನ್ನ ಹಾಗೇನೇ !' ಕೌಂಟ್ ಹೇಳಿದ, 'ಎಷ್ಟು ಚೆನ್ನಾಗಿ ಹಾಡತಾಳೆ 
ಅನ್ನತೀರಿ! ನನ್ನ ಮಗಳು ಅಂತ ಹೇಳಿಕೊಳ್ಳೋದಲ್ಲ , ಅದ್ಭುತವಾದ ಕಂಠ, ಒಳ್ಳೆಯ 


೬೨ 


ಯುದ್ಧ ಮತ್ತು ಶಾಂತಿ 
ಸಂಗೀತಗಾರಳಾಗತಾಳೆ, ಇನ್ನೊಬ್ಬ ಸಾಲೊಮೊನಿ೧೯ ಥರಾ! ಅವಳಿಗೆ ಸಂಗೀತ 
ಪಾಠ ಹೇಳಿಕೊಡುವುದಕ್ಕೆ ಇಟಲಿಯ ಮೇಷ್ಟರನ್ನ ಗೊತ್ತುಮಾಡಿದೇವೆ.' 

'ತುಂಬಾ ಚಿಕ್ಕ ವಯಸ್ಸಲ್ಲವಾ ? ಇಷ್ಟು ಚಿಕ್ಕವಯಸ್ಸಿಗೇ ಟ್ರೈನಿಂಗ್ ಕೊಟ್ಟರೆ 
ಧ್ವನಿ ಕೆಡತದೆ ಅನ್ನುತಾರಪ್ಪಾ ' . 
- “ ಚಿಕ್ಕ ವಯ ! ನಮ್ಮ ಅಮ್ಮಂದಿರಿಗೆ ಹನ್ನೆರಡು, ಹದಿಮೂರಕ್ಕೇ ಮದುವೆ 
ಆಗಿರುತ್ತಾ ಇತ್ತು, ಮರೀಬೇಡಿ,' ಅಂದ ಕೌಂಟ್. 

“ ಆಗಲೇ ನಿಮ್ಮ ಬೋರಿಸ್‌ನ ಲವ್ ಮಾಡುತ್ತಿದ್ದಾಳೆ, ಗೊತ್ತಾ!' ಮೃದುವಾಗಿ 
ನಗುತ್ತಾ ಬೋರಿಸ್‌ನ ತಾಯಿಯ ಕಡೆ ನೋಡುತ್ತಾ ಕೌಂಟೆಸ್ ಹೇಳಿದಳು. ತನ್ನ 
ಮನಸ್ಸಿನಲ್ಲಿ ಒತ್ತುತ್ತಾ ಇದ್ದ ಯಾವುದೋ ಯೋಚನೆ ಹೇಳಿಕೊಳ್ಳುವ ಹಾಗೆ 
'ನಾನು ತುಂಬಾ ಸ್ಪಿನ್ನು ಮಾಡಿದರೆ , ಬೇಡ ಅಂತ ತಡೆದರೆ ನನ್ನ ಬೆನ್ನ ಹಿಂದೆ ಏನು 
ಮಾಡತಾರೋ ಏನೋ (ಬೋರಿಸ್ ಮತ್ತು ನತಾಶಾ ಮುತ್ತು ಕೊಟ್ಟುಕೊಂಡಾರು 
ಅನ್ನುವುದು ಅವಳ ಮನಸ್ಸಿನಲ್ಲಿತ್ತು)! ಆದರೆ ಈಗ ಅವಳು ಆಡುವ ಒಂದೊಂದು 
ಮಾತೂ , ನನಗೆ ಗೊತ್ತು, ಈವತ್ತು ರಾತ್ರಿ ನನ್ನ ಹತ್ತಿರ ಓಡಿ ಬಂದು ಎಲ್ಲಾನೂ 
ಹೇಳತಾಳೆ. ಜಾಸ್ತಿ ಮುದ್ದು ಮಾಡಿ ಸ್ವಲ್ಪ ಹಾಳು ಮಾಡಿದೆನೋ ...ಹೀಗೆ ಇರೋದೇ 
ಸರಿ ಅನ್ನಿಸತ್ತೆ...ನತಾಶಾಳ ಅಕ್ಕ ಇದಾಳಲ್ಲ ಅವಳ ಜೊತೆ ಬಹಳ ಸ್ಪಿಕ್ಕಾಗಿದೆ' 
ಅಂದಳು . 
- ' ಹೌದು, ನನ್ನ ಬೇರೆ ಥರಾ ಬೆಳೆಸಿದರು' ಅಂದಳು ಹೊಳೆಯುವ ಮುಖದ 
ಕೌಂಟೆಸ್‌ ವೆರಾ. ಅವಳ ಮುಖದ ಮೇಲೆ ಮುಗುಳುನಗುವಿತ್ತು. ವಿಚಿತ್ರವೆಂದರೆ 
ಆ ನಗುವಿನಿಂದ ಅವಳ ಮುಖಕ್ಕೆ ಏನೂ ಆದ ಹಾಗೆ ಇರಲಿಲ್ಲ. ನಕ್ಕಾಗ ಅವಳ 
ಮುಖ ಅಸಹಜವಾಗಿ, ಅದಕ್ಕೆ ಹಿತವಲ್ಲದ ಮುಖದ ಹಾಗೆ ಕಾಣುತ್ತಿತ್ತು. ದೊಡ್ಡ 
ಮಗಳು ವೇರಾ ನೋಡುವುದಕ್ಕೆ ಚೆನ್ನಾಗಿದ್ದಳು , ಜಾಣೆ , ಕಲಿಯುವುದರಲ್ಲೂ 
ಮುಂದೆ. ಅವಳನ್ನು ಚೆನ್ನಾಗಿಯೇ ಬೆಳೆಸಿದ್ದರು. ಒಳ್ಳೆಯ ಧ್ವನಿಯಿತ್ತು. ಅರ್ಥವತ್ತಾಗಿ , 
ಸಮರ್ಪಕವಾಗಿ ಮಾತಾಡುತ್ತಿದ್ದಳು. ಆದರೂ , ಎಲ್ಲರೂ , ಅತಿಥಿ ಮತ್ತು ವರಾಳ 
ತಾಯಿ ಕೂಡ, ಆಶ್ಚರ್ಯಪಡುತ್ತಾ ವೆರಾಳನ್ನು ನೋಡಿದರು, ಎಲ್ಲರಿಗೂ 
ಇರಿಸುಮುರಿಸು ಆಯಿತು. 

' ಜನ ಯಾವಾಗಲೂ ತಮ್ಮ ದೊಡ್ಡ ಮಕ್ಕಳನ್ನು ಬಹಳ ಹುಷಾರಾಗಿ, 
ಜಾಣತನದಿಂದ ಬೆಳೆಸುತ್ತಾರೆ, ಬೇರೆಯವರ ಥರ ಆಗಬಾರದು ಅಂದುಕೊಳ್ಳುತ್ತಾರೆ' 
ಅಂದಳು ಅತಿಥಿ. 

' ಮಾಡಿದ ಪಾಪ ಗೊತ್ತಾಗೇ ಆಗತದೆ. ನಮ್ಮ ಕೌಂಟೆಸ್‌ ವೆರಾಳನ್ನ ಬೆಳೆಸುವಾಗ 


೧೯ ರಶಿಯಾದಲ್ಲಿ ವಾಸವಾಗಿದ್ದ ಇಟಾಲಿಯನ್ ಒಪೆರಾ ಹಾಡುಗಾರ. 


೬೩ 


ಸಂಪುಟ ೧ - ಸಂಚಿಕೆ ಒಂದು 


ತುಂಬ ಜಾಣತನ ತೋರಿದಳು. ಆದರೂ ನಮ್ಮ ವೆರಾ ಅದ್ಭುತವಾದ ಹುಡುಗಿ 
ಆದಳು ' ಅನ್ನುತ್ತಾ ಕೌಂಟ್ ಮಗಳನ್ನು ನೋಡಿ ಮೆಚ್ಚುಗೆಯಿಂದ ಕಣ್ಣು ಮಿಟುಕಿಸಿದ. 

- ಅತಿಥಿಗಳು ಎದ್ದು ನಿಂತರು, ರಾತ್ರಿಯ ಊಟಕ್ಕೆ ಬರುವುದಾಗಿ ಹೇಳಿ 
ಹೊರಟರು . 

ಅವರನ್ನು ಕಳಿಸಿ ಬರುತ್ತಾ 'ಏನು ಜನವೋ ಏನೋ ! ಹೋಗೋದೇ ಇಲ್ಲ 
ಅವರು, ಅಂದುಕೊಂಡಿದ್ದೆ ' ಅಂದಳು ಕೌಂಟೆಸ್ . 


- ದಿವಾನಖಾನೆಯಿಂದ ಧಾವಿಸಿದ ನತಾಶಾ ಕೈ ತೋಟದವರೆಗೂ ಬಂದು, 
ಅಲ್ಲಿ ನಿಂತುಕೊಂಡು, ಒಳಗೆ ಅವರೆಲ್ಲಾ ಇನ್ನೂ ಆಡುತ್ತಿದ್ದ ಮಾತು ಕೇಳಿಸಿಕೊಳ್ಳುತ್ತಾ 
ಬೋರಿಸ್ ಹೊರಗೆ ಬರಲಿ ಅಂತ ಕಾಯುತ್ತಾ ಇದ್ದಳು. ಇನ್ನೂ ಬರಲಿಲ್ಲವೆಂದು 
ಪುಟ್ಟ ಕಾಲು ನೆಲಕ್ಕೆ ಅಪ್ಪಳಿಸುತ್ತಾ ಕಣ್ಣಿನಲ್ಲಿ ನೀರು ತುಂಬಿಕೊಂಡು ತಾಳ್ಮೆ ಮೀರುತ್ತಾ 
ಇರುವಾಗ ಯಾವುದೋ ಹೆಜ್ಜೆ ಸಪ್ಪಳ, ಯುವಕನೊಬ್ಬನ ಸಾವಕಾಶವೂ ಅಲ್ಲದ 
ಆತುರದ್ದೂ ಅಲ್ಲದ ತೂಕದ ಹೆಜ್ಜೆಗಳ ಸದ್ದು ಕೇಳಿಸಿತು. ನತಾಶಾ ತಟಕ್ಕನೆ ಎರಡು 
ಹೂಕುಂಡಗಳ ಹಿಂದೆ ಬಚ್ಚಿಟ್ಟುಕೊಂಡಳು. 

ಬೋರಿಸ್ ರೂಮಿನ ನಡುವೆ ನಿಂತು, ಸುತ್ತಲೂ ಕಣ್ಣಾಡಿಸಿ, ಯೂನಿಫಾರಂನ 
ತೋಳಿನ ಮೇಲಿದ್ದ ಧೂಳಿನ ಕಣ ಕೊಡವಿಕೊಂಡು, ಸುಂದರವಾದ ಮುಖವನ್ನು 
ನೋಡಿಕೊಳ್ಳಲು ಕನ್ನಡಿಯ ಹತ್ತಿರ ಹೋದ. ನತಾಶಾ ಮಿಸುಕದೆ ಕೂತು ಇಣುಕಿ 
ನೋಡುತ್ತಾ ಅವನೇನು ಮಾಡುತ್ತಾನೋ ಎಂದು ಆಶ್ಚರ್ಯಪಡುತ್ತಾ ಇದ್ದಳು. 
ಕನ್ನಡಿಯ ಮುಂದೆ ಸ್ವಲ್ಪ ಹೊತ್ತು ನಿಂತಿದ್ದು , ತನ್ನ ಮುಖವನ್ನೇ ನೋಡಿ ನಕ್ಕು, 
ಎದುರಿಗೆ ಇದ್ದ ಬಾಗಿಲಿನ ಕಡೆ ಹೆಜ್ಜೆ ಹಾಕಿದ. ನತಾಶಾ ಕೂಗಬೇಕು ಅಂತ 
ಇದ್ದವಳು 'ಬೇಡ, ಅವನೇ ನನ್ನನ್ನು ಹುಡುಕಲಿ” ಅಂದುಕೊಂಡಳು... 

- ಬೋರಿಸ್ ಆ ಕಡೆಗೆ ಹೋಗುತ್ತಿದ್ದ ಹಾಗೆ ಇನ್ನೊಂದು ಬಾಗಿಲಿಂದ 
ಮುಖವೆಲ್ಲ ಕೆಂಪುಮಾಡಿಕೊಂಡು, ಸಿಡಿಮಿಡಿ ಮಾತು ಆಡುತ್ತಾ ಕಣ್ಣಲ್ಲಿ ನೀರು 
ತುಂಬಿಕೊಂಡುಸೋನ್ಯಾ ಬಂದಳು. ಅವಳ ಹತ್ತಿರಕ್ಕೆ ಓಡಿ ಹೋಗಬೇಕು ಅನ್ನುವ 
ಆಸೆಯನ್ನು ನತಾಶಾ ಅದುಮಿಕೊಂಡು ಅವಿತುಕೊಂಡೇ ಮಾಯಮಾಡುವ ಟೋಪಿ 
ಹಾಕಿಕೊಂಡವಳ ಹಾಗೆ ಲೋಕದಲ್ಲಿ ನಡೆಯುವುದನ್ನು ನೋಡುವುದಕ್ಕೆ ಕೂತಳು . 
ಅಪರೂಪದ ಬಗೆಯ ಸಂತೋಷ ಅನುಭವಿಸುತ್ತಿದ್ದಳು. ಸೋನ್ಯಾ ಗೊಣಗುತ್ತಾ 
ದಿವಾನಖಾನೆಯ ಬಾಗಿಲನ್ನೇ ನೋಡುತ್ತಿದ್ದಳು. ಬಾಗಿಲು ತೆರೆದುಕೊಂಡು ನಿಕೋಲಸ್ 
ಹೊರಗೆ ಬಂದ . 

'ಸೋನ್ಯಾ, ಏನಾಗಿದೆ ನಿನಗೆ ? ಯಾಕೆ ಹೀಗೆ ಮಾಡಿದೆ?' ಅವಳ ಹತ್ತಿರ 
ಓಡಿ ಬಂದ ನಿಕೋಲಸ್ ಕೇಳಿದ. 


ಯುದ್ಧ ಮತ್ತು ಶಾಂತಿ 
- 'ಏನೂ ಆಗಿಲ್ಲ. ಹೋಗು, ನೀನು!' ಸೋನ್ಯಾ ಬಿಕ್ಕಿದಳು. 

'ಏನು ಅಂತ ನನಗೆ ಗೊತ್ತು.' 
- ' ಸರಿ , ಹಾಗಾದರೆ, ಒಳ್ಳೆಯದೇ ಆಯಿತು. ಅವಳ ಹತ್ತಿರಾನೇ ಹೋಗು!' 

' ಸೋ - ನಿ - ಯಾ ! ನನ್ನ ಮಾತು ಕೇಳು! ಚಿಕ್ಕ ವಿಚಾರಕ್ಕೆ ಯಾಕೆ ಹೀಗೆ 
ಹಿಂಸೆ ಮಾಡತೀ , ನೀನೂ ಹಿಂಸೆಪಡತೀ ?' ಅವಳ ಕೈ ಹಿಡಿದುಕೊಳ್ಳುತ್ತಾ ನಿಕೋಲಸ್ 
ಕೇಳಿದ. ಸೋನ್ಯಾ ಕೈ ಎಳೆದುಕೊಳ್ಳಲಿಲ್ಲ. ಅಳು ನಿಲ್ಲಿಸಿದಳು. 

ನತಾಶಾ ಉಸಿರು ಬಿಗಿಹಿಡಿದು, ಒಂದಿಷ್ಟೂ ಅಲ್ಲಾಡದೆ , ಇಲಿಯ ಹಾಗೆ 
ಅಡಗಿ ಕೂತು ನೋಡುತ್ತಲೇ ಇದ್ದಳು. ' ಈಗೇನಾಗುತ್ತದೆ ?' ಅಂದುಕೊಂಡಳು. 

'ಸೋನ್ಯಾ ಈ ಜಗತ್ತಿನಲ್ಲಿ ಬೇರೆಯವರನ್ನು ಕಟ್ಟಿಕೊಂಡು ನನಗೇನಾಗಬೇಕು? 
ನನ್ನ ಪಾಲಿಗೆ ನೀನೇ ಎಲ್ಲಾ! ಐ ವಿಲ್ ಪೂವ್‌ ಇಟ್!” 

“ಹೀಗೆಲ್ಲಾ ಮಾತಾಡಬೇಡ, ನನಗೆ ಇಷ್ಟ ಆಗಲ್ಲ .' 
- 'ಸರಿ, ಆಡಲ್ಲ. ಕ್ಷಮಿಸಿಬಿಡು, ಸಾಕು. ಸೋನ್ಯಾ!' ಅನ್ನುತ್ತಾ ಅವಳನ್ನು ಅಪ್ಪಿ 
ಮುತ್ತಿಟ್ಟ . 

- “ ಓ, ಎಷ್ಟು ಚಂದ!' ಅಂದುಕೊಂಡಳು ನತಾಶಾ,ಸೋನ್ಯಾ ಮತ್ತು ನಿಕೋಲಸ್ 
ಹೊರಟುಹೋದಮೇಲೆ ಅವರ ಹಿಂದೆಯೇ ಹೋಗಿಬೋರಿಸ್‌ನನ್ನು ಕೂಗಿದಳು. 

- `ಬೋರಿಸ್, ಫೀಸ್, ಬಾ ಇಲ್ಲಿ.' ದೊಡ್ಡ ಗುಟ್ಟು ಹೇಳುವವಳ ಹಾಗೆ 
ಅವನನ್ನು ನೋಡುತ್ತಾ ನಿನಗೆ ಏನೋ ಹೇಳಬೇಕು. ಬಾ , ಇಲ್ಲಿ, ಇಲ್ಲಿ!' ಅಂದಳು. 
ತಾನು ಬಚ್ಚಿಟ್ಟುಕೊಂಡಿದ್ದ ಗಿಡಗಳ ಹತ್ತಿರಕ್ಕೆ ಅವನನ್ನು ಕರೆದುಕೊಂಡು ಹೋದಳು. 
ಬೋರಿಸ್ ಹಿಂಬಾಲಿಸಿದ, ಮುಗುಲ್ನಗುತ್ತಾ ಇದ್ದ . 

' ಏನು ?' ಅಂದ ಬೋರಿಸ್. 

ಗೊಂದಲದಲ್ಲಿದ್ದಳು. ತಬ್ಬಿಬ್ಬಾಗಿದ್ದಳು. ಸುತ್ತಲೂ ನೋಡಿದಳು. ತಾನೇ 
ಎಸೆದಿದ್ದ ಬೊಂಬೆ ಕಾಣಿಸಿದಾಗ ಎತ್ತಿಕೊಂಡಳು. 

“ ನನ್ನ ಬೊಂಬೆಗೆ ಮುತ್ತು ಕೊಡು' ಅಂದಳು . 

ಬೋರಿಸ್ ಕಾತರ ತುಂಬಿದ ಅವಳ ಮುಖವನ್ನು ಕಣ್ಣಿಟ್ಟು ನೋಡಿದ. 
ಏನೂ ಮಾತನಾಡಲಿಲ್ಲ. 
- “ಕೊಡಲ್ಲವಾ ? ಸರಿ, ಇಲ್ಲಿ ಬಾ , ಹಾಗಾದರೆ' ಅನ್ನುತ್ತಾ ನತಾಶಾ ಗಿಡಗಳ 
ನಡುವೆ ಇನ್ನೂ ಮುಂದೆ ಹೋದಳು , ಬೊಂಬೆಯನ್ನು ಎಸೆದುಬಿಟ್ಟಳು. ' ಇನ್ನೂ ! 
ಇನ್ನೂ ಹತ್ತಿರ! ಪಿಸುನುಡಿದಳು, ಯುವಕ ಅಧಿಕಾರಿಯ ಅಂಗಿಯ ತೋಳನ್ನು 
ಹಿಡಿದುಕೊಂಡಳು . ನಾಚಿಕೊಂಡ ಅವಳ ಮುಖದಲ್ಲಿ ಗಾಂಭೀರ್ಯ, ಭಯ 
ಇತ್ತು. 

'ಹೋಗಲಿ, ನನಗೆ ? ನನಗೆ ಮುತ್ತು ಕೊಡುತ್ತೀಯಾ?' ನಾಚಿಕೆಯಿಂದ 


ಸಂಪುಟ ೧ - ಸಂಚಿಕೆ ಒಂದು 

೬೫ 
ಅವನನ್ನು ನೋಡಿ, ಮುಗುಳುನಗುತ್ತಾ ಅಳುವ ಹಾಗೆ ಕಣ್ಣಲ್ಲಿ ನೀರುತುಂಬಿಕೊಂಡು, 
ಕೇಳಿದಾಗ ಅವಳ ಪಿಸುಮಾತು ಕೇಳಿಸದಷ್ಟು ಮೆತ್ತಗೆ ಇತ್ತು. 

ಬೋರಿಸ್‌ನ ಮುಖ ಕೆಂಪಾಯಿತು. 

'ತಮಾಷೆ ಹುಡುಗಿ!' ಅನ್ನುತ್ತಾ ಅವಳ ಕಡೆ ಬಾಗಿದ, ಮತ್ತಷ್ಟು ಕೆಂಪಾದ. 
ಅಷ್ಟೇ . ಸುಮ್ಮನೆ ಇದ್ದ. ಅವಳು ಮತ್ತೇನು ಮಾಡುತ್ತಾಳೋ ಅಂತ ಕಾಯುತ್ತಾ 
ಇದ್ದ . ನತಾಶಾ ತಟಕ್ಕನೆ ಹೂವಿನ ಕುಂಡದ ಮೇಲೆ ಹತ್ತಿ, ಅವನಿಗಿಂತ ಎತ್ತರವಾಗಿ 
ನಿಂತು, ತೆಳ್ಳನೆ ತೋಳುಗಳಿಂದ ಬೋರಿಸ್‌ನ ಕತ್ತನ್ನು ಬಳಸಿ, ತಲೆಗೂದಲು 
ಹಿಂದಕ್ಕೆ ಚಿಮ್ಮಿಕೊಂಡು, ಅವನ ತುಟಿಯ ಮೇಲೇ ಮುತ್ತಿಟ್ಟಳು. 

ನುಸುಳಿಕೊಂಡು ಗಿಡದ ಇನ್ನೊಂದು ಬದಿಗೆ ಹೋಗಿತಲೆ ಬಗ್ಗಿಸಿಕೊಂಡು 
ನಿಂತುಬಿಟ್ಟಳು. 

“ ನತಾಶಾ, ನಿನಗೂ ಗೊತ್ತು, ನಿನ್ನನ್ನು ಪ್ರೀತಿಸುತ್ತೇನೆ, ಆದರೆ...' 

ನಿಜವಾಗಲೂ ಪ್ರೀತಿ ಮಾಡುತೀಯಾ?' ನತಾಶಾ ಅವನ ಮಾತು ಅರ್ಧದಲ್ಲೇ 
ತಡೆದು ಕೇಳಿದಳು . 

- 'ಹೌದು. ಆದರೆ...ನಾವು ಹೀಗೆ ಮಾಡಬಾರದು...ಇನ್ನು ನಾಲ್ಕು ವರ್ಷ...ನಿನ್ನನ್ನು 
ನನಗೆ ಕೊಟ್ಟು ಮದುವೆ ಮಾಡಿ ಎಂದು ಕೇಳತೇನೆ.' 
- ನತಾಶಾ ಯೋಚನೆ ಮಾಡಿದಳು . 

' ಹದಿಮೂರು, ಹದಿನಾಲ್ಕು, ಹದಿನೈದು, ಹದಿನಾರು' ಅನ್ನುತ್ತಾ ತನ್ನ ತೆಳ್ಳನೆಯ 
ಪುಟ್ಟ ಬೆರಳು ಮಡಿಸುತ್ತಾ ಎಣಿಸಿದಳು. 'ರೈಟ್ , ಪಕ್ಕಾ ?' ಅವಳ ಹೊಳೆಯುವ 
ಮುಖದಲ್ಲಿ ಆನಂದವಿತ್ತು, ಸಮಾಧಾನವಿತ್ತು. 

" ಪಕ್ಕಾ .' 

' ಯಾವಾಗಲೂ ಪ್ರೀತಿಸುತ್ತೀ ? ಸಾಯೋವರೆಗೂ ?' ಅಂತ ಕೇಳಿದಳು 
ಪುಟ್ಟ ಹುಡುಗಿ. 

ಅವನ ತೋಳು ಹಿಡಿದು ಸಂತೋಷ ತುಂಬಿಕೊಂಡ ಮುಖ ಹೊತ್ತು 
ಅವನ ಜೊತೆಯಲ್ಲೇ ಹೆಜ್ಜೆ ಹಾಕುತ್ತಾ ಪಕ್ಕದ ಕೋಣೆಗೆ ಹೋದಳು. 


ಈ ಬಂದವರನ್ನು ಮಾತಾಡಿಸೀ ಆಡಿಸೀ ಕೌಂಟೆಸ್‌ ದಣಿದಿದ್ದಳು. ಇನ್ನು ಯಾರು 
ಬಂದರೂ ನನಗೆ ಹೇಳಬೇಡ, ಅಭಿನಂದಿಸುವುದಕ್ಕೆ ಯಾರು ಬಂದರೂ ರಾತ್ರಿಯ 
ಊಟಕ್ಕೆ ತಪ್ಪದೆ ಬರಬೇಕು, ಅದಷ್ಟನ್ನ ನೀನೇ ಹೇಳಿ ಕಳಿಸಿಬಿಡು ಅನ್ನುವ 
ಸೂಚನೆಯನ್ನು ಸೇವಕನಿಗೆ ಕೊಟ್ಟಳು. ಬಾಲ್ಯದ ಗೆಳತಿ ಪ್ರಿನ್ಸೆಸ್ ಅನ್ನಾ 
ಮಿಖಾಯೌವ್ಹಾಳ ಜೊತೆ ಪಟ್ಟಾಂಗ ಹೊಡೆಯುವುದಕ್ಕೆ ಕಾಯುತ್ತಿದ್ದಳು. ಅನ್ನಾ 
ಪೀಟರ್ಸ್‌ಬರ್ಗಿನಿಂದ ಬಂದಮೇಲೆ ಅವಳನ್ನು ಸರಿಯಾಗಿ ಮಾತನಾಡಿಸಲು 


* ಯುದ್ಧ ಮತ್ತು ಶಾಂತಿ 
ಆಗಿರಲೇ ಇಲ್ಲ. ಚಿಂತೆಯಿಂದ ಸುಕ್ಕುಗಟ್ಟಿದ ಮುಖದ ಅನ್ನಾ ಮಿಖಾಯೌವ್ವಾ 
ನಗುನಗುತ್ತಾ ಕುರ್ಚಿಯನ್ನು ಗೆಳತಿಯ ಹತ್ತಿರಕ್ಕೆಳೆದುಕೊಂಡಳು. 
- 'ನಿನ್ನ ಹತ್ತಿರ ಇದ್ದಿದ್ದು ಇದ್ದ ಹಾಗೆ ಹೇಳಬಹುದು. ನಾವು ಹಳೆಯ 
ಸ್ನೇಹಿತರು. ನಮ್ಮ ಕಾಲದವರು ಈಗ ಜಾಸ್ತಿ ಜನ ಉಳಿದಿಲ್ಲ! ಅದಕ್ಕೇ ನೀನು 
ಅಂದರೆ ನನಗೆ ಪ್ರಾಣ !” ಅಂದಳು ಅನ್ನಾ ಮಿಖಾಯೌವ್ವ. 
ಈ ವೇರಾಳ ಕಡೆಗೆ ನೋಡುತ್ತಾ ಒಂದು ಕ್ಷಣ ಮಾತು ನಿಲ್ಲಿಸಿದಳು. ಕೌಂಟೆಸ್ 
ಗೆಳತಿಯ ಕೈ ಅದುಮಿದಳು. 
- 'ವೇರಾ, ನಿನಗೆ ಇಷ್ಟೂ ಗೊತ್ತಾಗಲ್ಲವಾ ? ನಾವು ಏನೋ ಮಾತಾಡೋದಿದೆ. 
ಇಲ್ಲಿ ಯಾಕಿದ್ದೀಯ ? ತಂಗೀರು ಏನು ಮಾಡತಾ ಇದಾರೆ ನೋಡು, ಇಲ್ಲದೆ 
ಇದ್ದರೆ...' ಕೌಂಟೆಸ್ ದೊಡ್ಡ ಮಗಳಿಗೆ ಹೇಳಿದಳು. ದೊಡ್ಡ ಮಗಳ ಬಗ್ಗೆ ಅವಳಿಗೆ 
ಅಷ್ಟೇನೂ ಅಕ್ಕರೆ ಇರಲಿಲ್ಲ. 

ವೇರಾ ತಾಯಿಯನ್ನು ಧಿಕ್ಕರಿಸುವ ಹಾಗೆ ಒಂದಿಷ್ಟೇ ನಕ್ಕಳು. ಚೂರೂ 
ಬೇಜಾರುಮಾಡಿಕೊಳ್ಳಲಿಲ್ಲ. ' ಆವಾಗಲೇ ಹೇಳಿದ್ದಿದ್ದರೆ ಯಾವಾಗಲೋ ಹೋಗಿರುತ್ತಾ 
ಇದ್ದೆ' ಅನ್ನುತ್ತಾ ತನ್ನ ಕೋಣೆಗೆ ಹೊರಟಳು. .. 

ಆಕೆ ಹಾಲ್ ದಾಟಿ ಹೋಗುವಾಗ ಎರಡು ಜೋಡಿಗಳು ಎರಡು ಕಿಟಕಿಗಳ 
ಮುಂದೆ ಅಚ್ಚುಕಟ್ಟಾಗಿ ಕೂತಿರುವುದನ್ನು ಕಂಡಳು. ನಿಂತಳು. ತಿರಸ್ಕಾರದ ನಗು 
ಚೆಲ್ಲಿದಳು. ಸೋನ್ಯಾ ನಿಕೋಲಸನಿಗೆ ತಾಗುವ ಹಾಗೆ ಕೂತಿದ್ದಳು. ಅವನು ತಾನು 
ಬರೆದಿದ್ದ ಮೊಟ್ಟ ಮೊದಲ ಪ್ರೇಮ ಕವಿತೆಯನ್ನು ಕಾಪಿ ಮಾಡಿಕೊಡುತ್ತಿದ್ದ . 
ಬೋರಿಸ್ ಮತ್ತು ನತಾಶಾ ಇನ್ನೊಂದು ಕಿಟಕಿಯ ಹತ್ತಿರ ಕೂತಿದ್ದವರು ನೇರಾ 
ಬಂದ ತಕ್ಷಣ ಮಾತು ನಿಲ್ಲಿಸಿದರು. ಸೊನ್ಯಾ, ನತಾಶಾ ಇಬ್ಬರೂ ಮುಖದಲ್ಲಿ 
ಸಂತೋಷ ತುಂಬಿಕೊಂಡು, ತಪ್ಪಿತಸ್ಥರ ಹಾಗೆ ವೇರಾಳ ಕಡೆಗೆ ನೋಡಿದರು. 

ಪ್ರೀತಿಯ ಜ್ವರ ಬಂದಿರುವ ಈ ಪುಟ್ಟ ಹುಡುಗಿಯರನ್ನು ನೋಡಿದರೆ 
ತಮಾಶೆ ಅನ್ನಿಸುತ್ತಿತ್ತು , ಮನಸ್ಸು ಮಿಡಿಯುತ್ತಿತ್ತು. ಆದರೆ ಅವರನ್ನು ಕಂಡ ವೇರಾಳ 
ಮನಸ್ಸಿನಲ್ಲಿ ಯಾವ ಸಂತೋಷವೂ ಸುಳಿಯಲಿಲ್ಲ. 
- “ ನನ್ನ ಥಿಂಗ್ ತಗೋಬೇಡ ಅಂತ ಎಷ್ಟು ಸಾರಿ ಹೇಳಿಲ್ಲ ? ನಿಮ್ಮ ರೂಮುಗಳೇ 
ಇವೆಯಲ್ಲಾ,' ಅನ್ನುತ್ತಾ ನಿಕೋಲಸನ ಕೈಯಿಂದ ಇಂಕು ಬಾಟಲು ಕಿತ್ತುಕೊಂಡಳು. 

- ' ತಾಳು, ತಾಳು, ಒಂದೇ ನಿಮಿಷ' ಅನ್ನುತ್ತಾ ಇಂಕು ಬಾಟಲಿನಲ್ಲಿ ಪೆನ್ನು 
ಅದ್ದಿಕೊಂಡ, 

- ' ಯಾವಾಗಲೂ ಮಾಡಬಾರದ ಹೊತ್ತಿನಲ್ಲಿ ಮಾಡಬಾರದ ಕೆಲಸ ಮಾಡುತೀರಿ. 
ಡ್ರಾಯಿಂಗ್ ರೂಮಿಗೆ ಓಡಿಬಂದು ಎಲ್ಲಾರಿಗೂ ನಾಚಿಕೆ ಆಗುವ ಹಾಗೆ ಮಾಡತೀರಿ? 
ವೇರಾ ಅಂದಳು. ಅವಳು ಹೇಳಿದ್ದು ನಿಜವೇ ಆದರೂ , ಅಥವಾ ನಿಜ ಆಗಿದ್ದರಿಂದಲೇ 


ಸಂಪುಟ ೧ - ಸಂಚಿಕೆ ಒಂದು 
ಯಾರೂ ಮಾತನಾಡದೆ ನಾಲ್ಕು ಜನವೂ ಸುಮ್ಮನೆ ಒಬ್ಬರ ಮುಖ ಒಬ್ಬರು 
ನೋಡಿಕೊಂಡರು. ವೇರಾ ಕೈಯಲ್ಲಿ ಇಂಕು ಬಾಟಲು ಹಿಡಿದು ಅಲ್ಲೇ 
ತಿರುಗಾಡಿದಳು. ನಿಮ್ಮ ವಯಸ್ಸಿನಲ್ಲಿ ಗುಟ್ಟು ಮಾತಾಡಿಕೊಳ್ಳುವಂಥದ್ದು ಏನಿರುತ್ತೆ, 
ನತಾಶಾ ? ಬೋರಿಸ್ ? ಅಥವಾ ನೀವು? ಸ್ಟುಪಿಡ್! ನಾನ್ಸೆನ್ !' 
- 'ಅದರಿಂದ ನಿನಗೇನು ಆಗಬೇಕು, ವೇರಾ ?' ಎಲ್ಲರ ಪರವಹಿಸಿಕೊಂಡು 
ನತಾಶಾ ಮೃದುವಾಗಿ ಕೇಳಿದಳು. ಅವಳಿಗೆ ಆ ಹೊತ್ತು ಯಾಕೋ ಎಲ್ಲಾರ 
ಸಿಹಿಯಾದ, ಭಾವನೆ , ಮರುಕ ಉಕ್ಕಿ ಬರುತ್ತಿದ್ದವು. 

'ಸಿಲ್ಲಿ! ಪೆದ್ದಿ ಹಾಗೆ ಆಡಬೇಡ! ಧೂ , ಗುಟ್ಟಂತೆ , ಗುಟ್ಟು!' 

'ಗುಟ್ಟು ಎಲ್ಲಾರದೂ ಇರತ್ತೆ, ನಾವೇನು ನಿನ್ನ , ಬೆಗ್‌ನ ವಿಚಾರ ಕೇಳುತ್ತೇವಾ? ' 
ಅಂದಳು ನತಾಶಾ . ಅವಳಿಗೆ ಕೋಪ ಬರುತ್ತಿತ್ತು. 

'ಕೇಳಿದರೆ ನಾನು ಸುಮ್ಮನೆ ಬಿಡತೇನಾ ? ನಾನು ಯಾವತ್ತೂ ತಪ್ಪಾಗಿ 
ನಡಕೊಂಡಿಲ್ಲ. ನೀನುಬೋರಿಸ್ ಜೊತೆ ಹೇಗಿರುತ್ತೀ ಅಂತ ಅಮ್ಮನಿಗೆ ಹೇಳುತ್ತೇನೆ' 
ಅಂದಳು ವೇರಾ 

“ ನತಾಶಾ ನನ್ನ ಜೊತೆ ಸರಿಯಾಗಿಯೇ ನಡೆದುಕೊಳ್ಳುತ್ತಾಳೆ. ದೂರು 
ಹೇಳುವಂಥದ್ದೇನೂ ಇಲ್ಲ' ಎಂದ ಬೋರಿಸ್. 
- 'ಸುಮ್ಮನೆ ಇರು, ಬೋರಿಸ್ ! ಒಳ್ಳೇ ಡಿಪ್ಲೊಮ್ಯಾಟ್ ಥರ ಆಡುತ್ತಿದ್ದೀ ! 
( ಮಕ್ಕಳು ಡಿಪ್ಲೊಮ್ಯಾಟ್ ಅನ್ನುವ ಮಾತಿಗೆ ತಮ್ಮದೇ ವಿಶೇಷವಾದ ಅರ್ಥ ಕೊಟ್ಟು 
ಅವಕಾಶ ಸಿಕ್ಕಾಗಲೆಲ್ಲ ಬಳಸುತ್ತಿದ್ದರು. ಅವಳು ಯಾಕೆ ನನ್ನ ಸುಮ್ಮನೆ ಕೆಣಕಬೇಕು?' 
ನೊಂದ, ಕಂಪಿಸುವ ಧ್ವನಿಯಲ್ಲಿ ನತಾಶಾ ಹೇಳಿದಳು. ವೇರಾಳ ಕಡೆಗೆ ತಿರುಗಿ 
' ಬೇಕಾದ್ದು ಮಾಡಿಕೋ ಹೋಗು. ಪ್ರೀತಿ ಅಂದರೆ ಏನು ಅಂತ ನಿನಗೇನು 
ಗೊತ್ತು? ನೀನಗೆ ಹೃದಯಾನೇ ಇಲ್ಲ. ನೀನು ಮೇಡಮ್ ಜೆಸ್‌೨೦ ಅಷ್ಟೆ 
( ಮೇಡಮ್ ಜೆನ್ನಿಸ್ ಅನ್ನುವುದು ವೇರಾಳಿಗೆ ನಿಕೋಲಸ್ ಇಟ್ಟಿದ್ದ. ಅವಳನ್ನು 
ಕುಟುಕಿ ರೇಗಿಸುವುದಕ್ಕೆ ಮಕ್ಕಳು ಬಳಸುತ್ತಿದ್ದ ಅಡ್ಡ ಹೆಸರು), ಬೇರೆಯವರನ್ನ 
ಗೋಳುಹೊಯ್ದುಕೊಂಡರೆ ನಿನಗೆ ಖುಷಿ. ಹೋಗಿ ಬೆರ್ಗ್ ಜೊತೆ ಚಕ್ಕಂದ 
ಆಡು!' ಅನ್ನುತ್ತಾ ತಟ್ಟನೆ ಮಾತು ಮುಗಿಸಿದಳು ನತಾಶಾ. 


೨೦ ಆ ಕಾಲದ ಫ್ರೆಂಚ್ ಲೇಖಕಿ, ಶೈಕ್ಷಣಿಕ ಕೃತಿಗಳು ಮತ್ತು ಕಾದಂಬರಿಗಳನ್ನು ಬರೆದಿದ್ದಳು. ಇದೇ 

ಕಾದಂಬರಿಯಲ್ಲಿ ಮುಂದೆ ಬೊರೊದಿನೊ ಯುದ್ದಕ್ಕೆ ಮೊದಲು ಕುತುಝೇವ್ ಈಕೆಯ 
ಕಾದಂಬರಿ ಓದುತ್ತಿದ್ದ ವಿವರ ಬರುತ್ತದೆ. ಸಭ್ಯಸಮಾಜದ ನೀತಿ ನಿಯಮಗಳ ಪಾಲನೆಯ 
ಕಥೆಗಳು ರೋಸ್ಕೋವ್ ಮನೆಯ ಮಕ್ಕಳಿಗೆ ಬೇಸರ ಹುಟ್ಟಿಸಿ ವೇರಾಳಿಗೆ ಮೇಡಂ ಜೆನ್ನಿಸ್ 
ಅನ್ನುವ ಅಡ್ಡ ಹೆಸರು ಇಟ್ಟಿದ್ದರು. 


೬೮ 

ಯುದ್ಧ ಮತ್ತು ಶಾಂತಿ 
"ಹೋಗೇನೆ. ನಿನ್ನ ಹಾಗೆ ನಾನೇನು ಬಂದಿರೋರಎದುರಿಗೆಲ್ಲಾ ಹುಡುಗರನ್ನ 
ಅಟ್ಟಿಸಿಕೊಂಡು ಓಡಿ ಬರಲ್ಲ...' ವೇರಾ ಅಂದಳು. 

- “ ಅವಳು ಬಂದ ಕೆಲಸ ಆಯಿತಲ್ಲ, ಕೆಟ್ಟ ಮಾತು ಆಡಿ ಎಲ್ಲಾರ ಮನಸ್ತೂ 
ಕೆಡಿಸಿದ್ದಾಯಿತು. ಎಲ್ಲಿ ಬೇಕಾದರೂ ಹೋಗು' ಅಂದ ನಿಕೋಲಸ್, ಉಳಿದವರ 
ಕಡೆ ತಿರುಗಿ “ಬನ್ನಿ , ಎಲ್ಲಾರೂ ನರ್ಸರಿ ರೂಮಿಗೆ ಹೋಗೋಣ' ಅಂದ. ನಾಲ್ಲೂ 
ಜನ ಬೆದರಿದ ಹಕ್ಕಿಗಳ ಹಾಗೆ ಒಟ್ಟಿಗೆ ಎದ್ದು ಹೊರಟರು. 

' ನಾನೇನೂ ಯಾರಿಗೂ ಕೆಟ್ಟ ಮಾತು ಹೇಳಲಿಲ್ಲ. ಕೆಟ್ಟ ಮಾತು ಆಡಿದ್ದು 
ನೀವೇನೇ ' ಅಂದಳು ವೇರಾ.. 

“ಮೇಡಂ ಜೆನ್ನಿಸ್! ಮೇಡಂ ಜೆಸ್!' ಎಂದು ಕೂಗುತ್ತಾ, ನಗುತ್ತಾ ಅವರೆಲ್ಲ 
ಹೊರಟುಹೋದರು . 

ಎಲ್ಲರ ಮನಸ್ಸನ್ನು ಕೆಡಿಸಿದ ಈ ಸುಂದರ ಹುಡುಗಿ ವೇರಾ ಮುಗುಳಕ್ಕಳು . 
ಅವರು ಹೇಳಿದ ಮಾತಿನಿಂದ ಒಂದಿಷ್ಟೂ ವಿಚಲಿತಳಾಗದೆ ಕನ್ನಡಿಯ ಹತ್ತಿರ 
ಹೋಗಿ ತಲೆಗೂದಲು, ಸ್ಕಾರ್ಫು ಸರಿಮಾಡಿಕೊಂಡಳು. ಕನ್ನಡಿಯಲ್ಲಿ ತನ್ನ ಮುಖ 
ಒಮ್ಮೆ ನೋಡಿಕೊಂಡ ತಕ್ಷಣ ಮೊದಲಿನ ಹಾಗೆ ತಣ್ಣಗೆ ಸಮಾಧಾನಿಯಾದಳು. 


ದಿವಾನಖಾನೆಯಲ್ಲಿ ಗೆಳತಿಯರ ಮಾತು ಸಾಗಿತ್ತು. 

'ಡಿಯರ್, ನನ್ನ ಜೀವನಾನೂ ಹೂವಿನ ಹಾಸಿಗೆಯೇನಲ್ಲ.' ಕೌಂಟೆಸ್ 
ಹೇಳಿದಳು. ' ಈ ಖರ್ಚೆಲ್ಲಾ ಇನ್ನೂ ಎಷ್ಟು ದಿನ ನಿಭಾಯಿಸಬಹುದೋ ಗೊತ್ತಿಲ್ಲ. 
ನನ್ನ ಗಂಡ ಅಂತೂ ತಲೆಗೆ ಏನೂ ಹಚ್ಚಿಕೊಳ್ಳೋದಿಲ್ಲ. ಅವರು, ಅವರ ಕ್ಲಬ್ಬು, 
ಕಂಡವರಿಗೆಲ್ಲ ಕೈ ಎತ್ತಿ ಕೊಡೋದು, ಅಷ್ಟೆ. ಹಳ್ಳಿಗೆ ಹೋದರೂ ಆರಾಮ ಇರುತ್ತೆ 
ಅನ್ನುತ್ತೀಯಾ? ನಾಟಕಾ ಅಂತೆ, ಸಂಗೀತ ಅಂತೆ , ಬೇಟೆ ಅಂತೆ...ನನ್ನ ಕಥೆ ಇರಲಿ 
ಆನೆಟ್ , ನಿನ್ನದು ಹೇಳು. ಎಲ್ಲಾನೂ ಹೇಗೆ ನಿಭಾಯಿಸಿದೆ ? ನಿನ್ನ ನೋಡಿದರೆ 
ಆಶ್ಚರ್ಯ ಆಗತದೆ. ಈ ವಯಸ್ಸಿನಲ್ಲಿ ಒಬ್ಬಳೇ ಕ್ಯಾರೇಜು ಹತ್ತಿ, ಮಾಸ್ಕೋ , 
ಪೀಟರ್ಸ್‌ಬರ್ಗ್ ಅಂತ ಸುತ್ತಿ, ಮಂತ್ರಿಗಳು, ದೊಡ್ಡ ಮನುಷ್ಯರ ಹತ್ತಿರ 
ವ್ಯವಹಾರಮಾಡಿ... ಜನಗಳನ್ನ ಹೇಗೆ ಆಡಿಸಬೇಕು ಅನ್ನೋದುಗೊತ್ತು ನಿನಗೆ. 
ಅಬ್ಬಾ, ಎಲ್ಲಾ ಸೆಟಲ್ ಆಯಿತು ತಾನೇ ? ಇವೆಲ್ಲ ನನ್ನ ಕೈಯಲ್ಲಿ ಆಗಲ್ಲಪ್ಪಾ.' 
- “ಬಿಡು ಅನ್ನೂ . ನಿನಗೆ ಅಂಥ ಗತಿ ಯಾವತ್ತೂ ಬರಬಾರದು' ಅನ್ನಾ 
ಮಿಖಾಯೌವ್ವಾ ಅಂದಳು. ಗಂಡನನ್ನು ಕಳೆದುಕೊಂಡು, ನೀನೇ ಅಂತ ಕೇಳೋರು 
ದಿಕ್ಕಿಲ್ಲದೆ, ಖರ್ಚಿಗೆ ಕಾಸಿಲ್ಲದೆ, ಮುದ್ದಿನ ಒಬ್ಬನೇ ಮಗನನ್ನು ಹೇಗೆ ಬೆಳೆಸಿದೆನೋ 
ನನಗೇ ಗೊತ್ತು! ಪರಿಸ್ಥಿತಿ ಎಲ್ಲಾನೂ ಕಲಿಸುತದೆ', ಸ್ವಲ್ಪ ಜಂಬದಿಂದಲೇ 
ಹೇಳಿಕೊಂಡಳು. 'ಕೋರ್ಟಿನ ಕೇಸು ತುಂಬಾ ಪಾಠ ಕಲಿಸಿತು. ಯಾರಾದರೂ 


೬ 


ಸಂಪುಟ ೧ - ಸಂಚಿಕೆ ಒಂದು 
ದೊಡ್ಡವರನ್ನು ನೋಡಬೇಕಾಗಿದ್ದರೆ ' ಏನೈಸ್ ಇಂಥಾವರು ಶ್ರೀಮಾನ್ ಇಂಥವರನ್ನು 
ಭೇಟಿಮಾಡಲು ಬಯಸುತ್ತಾರೆ ' ಅಂತ ಒಂದು ಕಾಗದ ಬರೆದು, ಬಾಡಿಗೆ ಗಾಡಿ 
ಹತ್ತಿ, ಒಂದು, ಎರಡು, ಮೂರು, ನಾಲ್ಕು ಸಾರಿಯಾದರೂ ಸರಿ , ನನಗೆ ಬೇಕಾದ್ದು 
ಸಿಗೋವರೆಗೆ, ಆಗೋವರೆಗೆ ಹೋಗಿ ಹೋಗಿನೋಡುತ್ತಾ ಇದ್ದೆ . ಅವರು ನನ್ನ 
ಬಗ್ಗೆ ಏನು ಅಂದುಕೊಂಡರೂ ಪರವಾಗಿಲ್ಲ, ನನ್ನ ಕೆಲಸ ಆಗಬೇಕು ಅಂತ 
ತೀರ್ಮಾನ ಮಾಡಿದ್ದೆ.' 

'ಸರಿ, ನಿಮ್ಮ ಬೋರಿಸ್‌ಗೆ ಕೆಲಸ ಸಿಗುವುದಕ್ಕೆ ಯಾರನ್ನು ಹಿಡಿದಿದ್ದೆ ? ” 
ಕೌಂಟೆಸ್ ಕೇಳಿದಳು. ' ನಿನ್ನ ಮಗ ಆಗಲೇ ಗಾರ್ಡ್‌ನಲ್ಲಿ ಆಫೀಸರಾಗಿದಾನೆ, 
ನಮ್ಮ ಹುಡುಗ ಬರೀ ಕೆಡೆಟ್ಟು ೨೧ ನಮ್ಮ ಹುಡುಗನ್ನ ಕೇಳೋರೇ ಇಲ್ಲ. ನೀನು 
ಯಾರನ್ನು ಕೇಳಿದೆ?' 

'ಪ್ರಿನ್ಸ್ ವ್ಯಾಸಿಲೀನ, ತುಂಬಾ ಮರುಕ ಅವನಿಗೆ ಒಂದೇ ಮಾತಿಗೆ 
ಒಪ್ಪಿಕೊಂಡುಬಿಟ್ಟ , ಚಕ್ರವರ್ತಿಯವರ ಹತ್ತಿರ ಹೋಗಿ ಮಾತಾಡಿದ. ಪ್ರಿನ್ಸ್ ಅನ್ನಾ 
ಮಿಖಾಲ್ಲೋವ್ಯಾ ಸಂತೋಷವಾಗಿ ಹೇಳಿಕೊಂಡಳು , ತನ್ನ ಗುರಿ ಸಾಧಿಸುವುದಕ್ಕೆ 
ಅನುಭವಿಸಿದ ಅವಮಾನ, ನಾಚಿಕೆ ಎಲ್ಲಾ ಮರೆತುಬಿಟ್ಟಿದ್ದಳು. 

'ಏನ್ ವ್ಯಾಸಿಲಿಗೆ ಈಗ ಹೇಗಿದಾನೆ ? ನಾವು ರುಮ್ಯಾನ್‌ತ್ತೋವ್ ಮನೆಯಲ್ಲಿ 
ನಾಟಕ ಆಡಿದಾಗ ನೋಡಿದ್ದು, ಮತ್ತೆ ಅವನನ್ನು ನೋಡೇ ಇಲ್ಲ. ನನ್ನ 
ಮರೆತುಬಿಟ್ಟಿರಬಹುದು. ಆಗ ನನ್ನ ಹಿಂದೆ ಸುತ್ತುತ್ತಾ ಇದ್ದ.' ನೆನಪು ಮಾಡಿಕೊಂಡು 
ಕೌಂಟೆಸ್ ಮುಗುಳ್ಳಕ್ಕಳು. 
- ' ಏನಿಲ್ಲ. ಮೊದಲಿದ್ದ ಹಾಗೇ ಇದಾನೆ,' ಅನ್ನಾ ಮಿಖಾಯೌವ್ವಾ ಹೇಳಿದಳು. 
“ ಅದೇ ಪ್ರೀತಿವಿಶ್ವಾಸ ಇಟ್ಟುಕೊಂಡಿದಾನೆ, ಅಧಿಕಾರ, ಅಂತಸ್ತು ಅವನ ತಲೆ ತಿರುಗಿಸಿಲ್ಲ. 
“ ನನ್ನ ಕೈಯಲ್ಲಿ ಇಷ್ಟೇ ಆಗಿದ್ದು ಅಂತ ಬೇಜಾರಾಗತ್ತೆ ಪ್ರಿನ್ಸೆಸ್, ನನ್ನಿಂದ ಇನ್ನೂ 
ಏನಾದರೂ ಆಗಬೇಕಾಗಿದ್ದರೆ ಹೇಳಿ, ಸಂಕೋಚಮಾಡಿಕೊಳ್ಳಬೇಡಿ' ಅನ್ನುತಾ 
ಪೇಚಾಡಿಕೊಂಡ. ತುಂಬ ಒಳ್ಳೆಯ ಮನುಷ್ಯ, ರಕ್ತಸಂಬಂಧ ದೊಡ್ಡದು ಅನ್ನೋದು 
ಗೊತ್ತಿದೆ. ನನ್ನ ಮಗನ ಮೇಲೆ ನನಗೆಷ್ಟು ಪ್ರೀತಿ ಅಂತ ನಿನಗೇ ಗೊತ್ತಲ್ಲಾ 
ನತಾಲೀ . ಅವನು ಸಂತೋಷವಾಗಿರೋದಕ್ಕೆ ಏನು ಬೇಕಾದರೂ ಮಾಡತೇನೆ. 
ಕೈಯಲ್ಲಿ ಕಾಸಿಲ್ಲ' ಅನ್ನಾ ಮಿಖಾಯೋತ್ಪಾ ದನಿ ತಗ್ಗಿಸಿ , ಮುಖದಲ್ಲಿ ತುಂಬ 
ದುಃಖ ತುಂಬಿಕೊಂಡು ಹೇಳಿದಳು, 'ನನ್ನ ಕಷ್ಟ ಯಾರಿಗೂ ಬರಬಾರದು. ಇದ್ದ 
ಆಸ್ತಿಯೆಲ್ಲ ಕೋರ್ಟು ಕೇಸಿಗೆ ಹೋಯಿತು. ಆದರೂ ಇನ್ನೂ ಕೊನೆಮುಟ್ಟಿಲ್ಲ. 


೨೧ ಕೆಡೆಟ್ -ಉನ್ನತ ವಂಶಸ್ಥನಾದ, ಕಮೀಶನ್ ದೊರೆತಿರದ, ಸ್ವಯಂಸೇವಕ ಸೈನಿಕ. ಆದರೆ 

ಸೈನ್ಯದಲ್ಲಿ ಮಾತ್ರ ಆತ ಸಾಮಾನ್ಯ ಪೇದೆಗಳೊಡನೆ ಇರದೆ ಅಧಿಕಾರಿಗಳೊಡನೆ ಇರುತ್ತಿದ್ದ. 


೭೦ 

ಯುದ್ಧ ಮತ್ತು ಶಾಂತಿ 
ಬೋರಿಸ್, ಹೊರಡುವುದಕ್ಕೆ ಏರ್ಪಾಡು ಬೇರೆ ಮಾಡಬೇಕು, ನನ್ನ ಹತ್ತಿರ 
ಬಿಡಿಗಾಸೂ ಇಲ್ಲ ಅಂದರೆ ನಂಬುತ್ತೀಯಾ?' ಅನ್ನಾ ಮಿಖಾಯೌವ್ವಾ ಕರ್ಚಿಫು 
ತೆಗೆದು ಅಳುವುದಕ್ಕೆ ಶುರುಮಾಡಿದಳು . 'ಐನೂರುರೂಬೆಲ್ ಬೇಕು. ನನ್ನ ಹತ್ತಿರ 
ಇರುವುದು ಇಪ್ಪತ್ತೈದರ ಒಂದು ನೋಟು, ಅಷ್ಟೇ . ದಿಕ್ಕೇ ತೋಚತಾ ಇಲ್ಲ...ಈಗ 
ಇರೋದು ಒಂದೇ ದಾರಿ , ಕೌಂಟ್ ಕಿರಿಲ್ ಬೆಝುಕೋವ್ ಹತ್ತಿರ ಹೋಗಿ 
ಸಹಾಯ ಕೇಳಬೇಕು. ನಮ್ಮ ಬೋರಿಸ್‌ಗೆ ನಾಮಕರಣ ಮಾಡುವಾಗ ಅವನು 
ಗಾಡ್‌ಫಾದರ್ ಅಗಿದ್ದ . ನಿನಗೂ ಗೊತ್ತಲ್ಲವಾ ? ಅವನು ದೊಡ್ಡ ಮನಸ್ಸು ಮಾಡಿ 
ಒಂದಿಷ್ಟು ದುಡ್ಡು ಕೊಟ್ಟರೆ ಸರಿ , ಇಲ್ಲದೆ ಇದ್ದರೆ ನಾನು ವೃಥಾ ಕಷ್ಟಪಟ್ಟಹಾಗೆ 
ಆಗತದೆ. ಮಗನಿಗೆ ಬೇಕಾದ ಬಟ್ಟೆಬರೆ ಕೊಡಿಸೋದಕ್ಕೆ ನನ್ನ ಹತ್ತಿರ ದುಡ್ಡು 
ಇಲ್ಲವೇ ಇಲ್ಲ.' 

ಕೌಂಟೆಸ್ಗೆ ತನ್ನ ಕಣ್ಣಿನಲ್ಲೂ ನೀರು ತುಂಬುತ್ತಿದೆ ಅನ್ನಿಸಿತು . 
ಯೋಚನೆಮಾಡಿದಳು. ಏನೂ ಹೇಳಲಿಲ್ಲ. 

- 'ಹೀಗೆ ಅಂದುಕೊಳ್ಳೋದು ಪಾಪ...' ಮಿಖಾಯೌವ್ವಾ ಹೇಳಿದಳು, ' ಆದರೂ 
ಎಷ್ಟೋ ಸಾರಿ ಇಂಥ ಯೋಚನೆ ಬರತದೆ. ಆ ಕೌಂಟ್ ಕಿರಿಲ್ ಅಷ್ಟೊಂದು ಆಸ್ತಿ 
ಇಟ್ಟುಕೊಂಡು ಕೂತಿದಾನೆ , ಒಬ್ಬನೇ ಇದಾನೆ. ಆದರೂ ಅನುಭವಿಸೋ 
ಹಾಗಿದೆಯಾ ? ಬದುಕೇ ಭಾರ ಅವನಿಗೆ. ನಮ್ಮ ಬೋರಿಸ್ ಬದುಕು ಈಗ 
ಶುರುವಾಗತಿದೆ, ಕೊಡೋದಕ್ಕೆ ನನ್ನ ಹತ್ತಿರ ಏನೂ ಇಲ್ಲ...' 
- “ಕೌಂಟ್ ಬೆಝುಕೋವ್ ಬೋರಿಸ್‌ಗೆ ಏನಾದರೂ ಕೊಟ್ಟಾನು' ಎಂದಳು 
ಕೌಂಟೆಸ್ . 

“ಏನೋ , ದೇವರಿಗೇ ಗೊತ್ತಮ್ಮಾ! ಈ ಸಾವುಕಾರ ಮುದುಕರು ತುಂಬಾ 
ಸ್ವಾರ್ಥಿಗಳು . ಆದರೂ ಒಂದು ಸಾರಿ ಬೋರಿಸ್‌ನ ಕರಕೊಂಡು ಅವನ ಹತ್ತಿರ 
ಹೋಗಿಬರತೇನೆ. ನೇರ ನೇರ ಹೇಳಿಬಿಡತೇನೆ. ಜನ ನನ್ನ ಬಗ್ಗೆ ಏನಾದರೂ 
ಅಂದುಕೊಳ್ಳಲಿ, ಮಗನ ಬಾಳು ಮುಖ್ಯಾ ನನಗೆ' ಅನ್ನುತ್ತಾ ಪ್ರಿನ್ಸೆಸ್ ಎದ್ದಳು. 
'ಈಗಿನ್ನೂ ಎರಡು ಗಂಟೆ. ನಾಲ್ಕು ಗಂಟೆ ಹೊತ್ತಿಗೆ ವಾಪಸ್ಸು ಬಂದುಬಿಡತೇನೆ. 
ರಾತ್ರಿ ಊಟಕ್ಕೆ ಹೊತ್ತಿದೆ' ಅಂದಳು. 

ಕಾಲದ ಸದುಪಯೋಗ ಮಾಡಿಕೊಳ್ಳುವುದನ್ನು ತಿಳಿದಿರುವ ಪೀಟರ್ಸ್‌ಬರ್ಗ್‌ನ 
ವ್ಯವಹಾರಸ್ಥ ಹೆಂಗಸಿನ ಹಾಗೆ ಅನ್ನಾ ಮಿಖಾಯೌವ್ವಾ ಮಗ ಬೋರಿಸ್‌ಗೆ ಕರೆ 
ಕಳುಹಿಸಿ ಅವನ ಜೊತೆ ಹಾಲ್‌ಗೆ ಹೆಜ್ಜೆ ಹಾಕಿದಳು. 
- ತನ್ನನ್ನು ಕಳಿಸಿಕೊಡಲು ಬಾಗಿಲವರೆಗೆ ಬಂದ ಕೌಂಟೆಸ್‌ಗೆ 'ಗುಡ್ ಬೈ 
ಮೈ ಡಿಯರ್' ಅಂದು, ಮಗ ಬೋರಿಸ್ಗೆ ಕೇಳಿಸದ ಹಾಗೆ ಪಿಸುದನಿಯಲ್ಲಿ 
“ ನನ್ನ ಕೆಲಸ ಹಣ್ಣಾಗಲಿ ಅನ್ನು ' ಅಂದಳು. 


ಸಂಪುಟ ೧ - ಸಂಚಿಕೆ ಒಂದು 


“ಓಹೋ , ಕೌಂಟ್ ಕಿರಿಲ್ ಮನೆಗೆ ಹೊರಟಿದ್ದೀರಾ ಡಿಯರ್ ?” ಊಟದ 
ಮನೆಯಿಂದ ಹೊರಗೆ ಬಂದ ಕೌಂಟ್ ಕೇಳಿದ. ಅವನ ಆರೋಗ್ಯ ಸುಧಾರಿಸಿದ್ದರೆ 
ಪಿಯರೆಯನ್ನು ರಾತ್ರಿಯ ಊಟಕ್ಕೆ ಕರೆದುಕೊಂಡು ಬನ್ನಿ . ಅವನು ನಮ್ಮ ಮನೆಗೆ 
ಬಹಳ ಸಾರಿ ಬಂದಿದಾನೆ. ಬಂದು ಮಕ್ಕಳ ಜೊತೆ ಡಾನ್ನು ಮಾಡತಾ ಇದ್ದ. 
ಅವನಿಗೆ ಹೇಳುವುದಕ್ಕೆ ಮರೀಬೇಡಿ, ಡಿಯರ್, ಇವತ್ತು ನಮ್ಮ ಅಡಿಗೆಯ ತಾರಸ್ 
ಏನು ಮಾಡತಾನೆ ನೋಡೋಣ. ಇವತ್ತು ನಮ್ಮ ಮನೆಯ ಊಟ ಇದ್ದ ಹಾಗೆ 
ಕೌಂಟ್ ಓರ್ಿವ್ ಮನೆ ಊಟ ಕೂಡ ಯಾವತ್ತೂ ಇರಲಿಲ್ಲ ಅನ್ನತಾನೆ -೨ 


'ಮಗಾ,- ' ಕೌಂಟೆಸ್ ರೋಸ್ಕೋವಾಳ ಸಾರೋಟುಅವರನ್ನು ಕರೆದುಕೊಂಡು 
ಒಣ ಹುಲ್ಲು ಹಾಸಿರುವ ರಸ್ತೆಯನ್ನು ಹಾದು ಕೌಂಟ್ ಕಿರಿಲ್ ಬೆಝುಕೋವ್‌ನ 
ಮನೆಯ ಮುಂದಿನ ಅತಿ ವಿಶಾಲವಾದ ಅಂಗಳಕ್ಕೆ ಪ್ರವೇಶಿಸಿದಾಗ ತಾಯಿ ತನ್ನ 
ಹಳೆಯ ನಿಲುವಂಗಿಯನ್ನು ಸ್ವಲ್ಪ ಮೇಲೆ ಸರಿಸಿಕೊಂಡು ಮಗನ ಭುಜದ 
ಮೇಲೆ ಅಂಜುತ್ತಾ ಮೆಲ್ಲಗೆ ಕೈ ಇಟ್ಟು ನೇವರಿಸುತ್ತಾ ' ಮಗಾ, ಹೇಳೋದುಕೇಳು, 
ಕೌಂಟ್ ಕಿರಿಲ್ ಬೆಜುಕೋವ್‌ಗೆ ಪ್ರೀತಿತೋರಿಸು, ಗೌರವದಿಂದ ಕಾಣಪ್ಪಾ. 
ಎಷ್ಟಾದರೂ ಅವನು ನಿನ್ನ ಗಾಡ್‌ಫಾದರ್‌, ನಿನ್ನ ಭವಿಷ್ಯ ಅವನ ಮೇಲೇ ನಿಂತಿದೆ, 
ಜ್ಞಾಪಕ ಇರಲಿ.. ಮನಸ್ಸು ಮಾಡಿದರೆ ಆಗತ್ತೆ, ಗೊತ್ತು.' 

- 'ನಮಗೆ ಅವಮಾನ ಆಗೋದು ಬಿಟ್ಟರೆ ಇನ್ನೇನೂ ಆಗೋದಿಲ್ಲ 
ಅಷ್ಟೆ.ಆದರೂ , ನಿನಗೆ ಮಾತು ಕೊಟ್ಟಿದೀನಲ್ಲಾ, ನೀನು ಹೇಳಿದ ಹಾಗೇ ಮಾಡತೇನೆ 
ಬಿಡು, ನಿನಗೋಸ್ಕರ.' ಅವಳ ಮಗ ತಣ್ಣನೆ ದನಿಯಲ್ಲಿ ಹೇಳಿದ. 

ಸಾರೋಟು ತಲೆಬಾಗಿಲಿಗೆ ಬಂದು ನಿಂತಿದ್ದರೂ ಬಾಗಿಲಲ್ಲಿದ್ದ ಸೇವಕ 
ತಾಯಿ - ಮಗನನ್ನು ಗಮನಿಸುತ್ತಾ ('ನಾವು ಇಂಥವರು ಬಂದಿದ್ದೇವೆ, ತಿಳಿಸಿ' 
ಎಂದೇನೂ ಹೇಳದೆ ಅವರಿಬ್ಬರೂ ಹಜಾರದ ಮೂಲೆಗಳಲ್ಲಿದ್ದ ದೊಡ್ಡ ವಿಗ್ರಹಗಳ 
ನಡುವಿನ ಗಾಜಿನ ಬಾಗಿಲ ಮೂಲಕ ಮನೆಯೊಳಕ್ಕೆ ಬರುತ್ತಿರುವುದು ಕಂಡು) 
ಹೆಂಗಸು ತೊಟ್ಟಿದ್ದ ಹಳೆಯ ಗೌನನ್ನು ಅನುಮಾನದಿಂದ ನೋಡುತ್ತಾ ಯಾರನ್ನು 


೨೨ ಕೌಂಟ್ ಅಲೆಕ್ಟಿವ್ ಓರ್ಲೊವ್. ಅವನು ಮತ್ತು ಅವನ ಸಹೋದರ ಜಾರ್ಜಿ ೧೭೬೨ರಲ್ಲಿ 

ನಡೆದ ಅರಮನೆಯ ಕ್ರಾಂತಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಆ ಕ್ರಾಂತಿಯ ಫಲವಾಗಿ 
ಚಕ್ರವರ್ತಿ ಮೂರನೆಯ ಪೀಟರ್ ಸತ್ತು ಕ್ಯಾಥರೀನ್ ಸಿಂಹಾಸನ ಏರಿದಳು . ಓರ್ಲೊವ್ 
೧೭೭೪ರ ಟರ್ಕಿಶ್ ಯುದ್ದದಲ್ಲಿ ಅಪಾರ ಕೀರ್ತಿಪಡೆದು ನಿವೃತ್ತನಾದ. ಮಾಸ್ಕೋ ಸಮೀಪದಲ್ಲಿದ್ದ 
ತನ್ನ ನೆಕ್ಕುಚ್ಚಿ ಅರಮನೆಯಲ್ಲಿ ವಾಸವಾಗಿದ್ದುಕೊಂಡು ವೈಭವಪೂರ್ಣವಾದ ಔತಣಕೂಟ, 
ನರ್ತನ ಕೂಟಗಳನ್ನು ಏರ್ಪಡಿಸುತ್ತಿದ್ದ. ಅವನ ಅತಿಥಿ ಸತ್ಕಾರದಿಂದ ಎಲ್ಲರೂ ಬೆರಗಾಗುತ್ತಿದ್ದರು. 
ಹತ್ತೊಂಬತ್ತನೆಯ ಶತಮಾನದ ಮಾಸ್ಕೋದಲ್ಲಿ ಅವನು ಬಹಳ ಜನಪ್ರಿಯ ವ್ಯಕ್ತಿಯಾಗಿದ್ದ. 


ಯುದ್ಧ ಮತ್ತು ಶಾಂತಿ 
ಕಾಣಬೇಕು, ಕೌಂಟ್ ಅವರನ್ನೊ , ಪ್ರಿನ್ಸೆಸ್‌ಗಳನ್ನೋ ಅಂತ ಕೇಳಿದ. ಕೌಂಟ್ 
ಅವರನ್ನು ನೋಡಬೇಕಾಗಿದೆ ಅಂದಾಗ ತನ್ನ ಒಡೆಯನ ಆರೋಗ್ಯ ಇವತ್ತು 
ಚೆನ್ನಾಗಿಲ್ಲ, ಯಾರನ್ನೂ ನೋಡುವ ಸ್ಥಿತಿಯಲ್ಲಿಲ್ಲ ಅವರು ಅಂದ. 

“ಸರಿ, ವಾಪಸ್ಸು ಹೋಗಬಹುದು ಅನ್ನಿಸತ್ತೆ' ಮಗ ಫ್ರೆಂಚಿನಲ್ಲಿ ಹೇಳಿದ. 

'ಕಂದಾ, ಫೀಸ್, ಅನ್ನಾ ಮಿಖಯೌವ್ವಾ ಯಾಚನೆಯ ದನಿಯಲ್ಲಿ ಬೇಡುತ್ತಾ 
ಮಗನ ಕೈ ಮತ್ತೆ ಮುಟ್ಟಿದಳು. ಹಾಗೆ ಮುಟ್ಟಿದರೆ ಅವನಿಗೆ ಸಮಾಧಾನ ಆಗಬಹುದು, 
ಅಥವಾ ಕೆರಳ ಬಹುದು ಅನ್ನುವ ಹಾಗೆ. 

ಬೋರಿಸ್ ಇದೆಲ್ಲಾ ಏನು ಅನ್ನುವ ಹಾಗೆ ತಾಯಿಯನ್ನೇ ನೋಡಿದ. 
ನಿಲುವಂಗಿ ಕಳಚಲಿಲ್ಲ . 
* ' ಇಲ್ಲಿ ನೋಡಪ್ಪಾ ' ತನ್ನ ದನಿ ಇನ್ನೂ ಸಿಹಿ ಮಾಡಿಕೊಂಡು ಸೇವಕನಿಗೆ 
ಅನ್ನಾ ಮಿಖಾಯೌವ್ವಾ ಹೇಳಿದಳು, 'ಕೌಂಟ್ ಕಿರಿಲ್ ಅವರಿಗೆ ಹುಷಾರಿಲ್ಲ 
ಅನ್ನೋದು ಗೊತ್ತು. ಅದಕ್ಕೇ ಬಂದಿರೋದು ನಾನು. ನಾವು ಅವರ ನಂಟರು. 
ಅವರಿಗೆ ತೊಂದರೆ ಕೊಡೋದಿಲ್ಲ ನನ್ನಪ್ಪನೇ , ಪಿನ್ ವ್ಯಾಸಿಲಿ ಸೆರ್ಗವಿಚ್ ಅವರನ್ನು 
ಕಂಡರೆ ಸಾಕು. ಅವರು ಇಲ್ಲೇ ಇದಾರೆ. ನಾವು ಬಂದಿದೇವೆ ಅಂತ ಅವರಿಗೆ 
ಚೂರು ಹೇಳಪ್ಪಾ' ಅಂದಳು. 
- ದ್ವಾರಪಾಲಕ ಮುಖವನ್ನು ಹುಳ್ಳಗೆ ಮಾಡಿಕೊಂಡು ಕರೆಗಂಟೆಯ ಹಗ್ಗ 
ಎಳೆದ. ಮಹಡಿಯ ಮೇಲೆಲ್ಲೋ ಗಂಟೆ ಸದ್ದು ಮಾಡಿತು. ಮುಖತಿರುಗಿಸಿದ. 

' ಪ್ರಿನ್ಸೆಸ್ ದುಬೆತಸ್ರಾಯಾ ಅವರು ಪ್ರಿನ್ಸ್ ವ್ಯಾಸಿಲಿ ಸೆರ್ಗವಿಚ್ ಅವರ 
ಭೇಟಿಗಾಗಿ ಬಂದಿದ್ದಾರೆ'- ಮೊಳಕಾಲಿನವರೆಗೆ ಇರುವ ಬೀಚಸ್ ತೊಟ್ಟು, ಸ್ವಾಲೋ 
ಟೇಲ್ಕೋಟ್ ಧರಿಸಿ ಮಹಡಿಯಿಂದ ಅರ್ಧ ದೂರ ಇಳಿದು ಬಂದು ಕೆಳಗೆ 
ನೋಡುತ್ತಾ ನಿಂತಿದ್ದ ಮನೆಯ ಆಳಿಗೆ ದ್ವಾರಪಾಲಕ ಹೇಳಿದ. 

ತಾಯಿ ಬಣ್ಣ ಕಟ್ಟಿದ ತನ್ನ ರೇಶಿಮೆಯ ಉಡುಪಿನ ನಿರಿಗೆಗಳನ್ನು ನೇವರಿಸಿ 
ಸರಿಪಡಿಸಿಕೊಳ್ಳುತ್ತಾ ಹಾಲ್‌ನಲ್ಲಿದ್ದ ವೆನೀಶಿಯನ್ ನಿಲುವುಗನ್ನಡಿಯಲ್ಲಿ ಒಮ್ಮೆ 
ನೋಡಿ ಪರೀಕ್ಷೆಮಾಡಿಕೊಂಡಳು . ಹಳೆಯ ಸವೆದ ಶೂಗಳಲ್ಲಿ ಮೆಟ್ಟಿಲಿಗೆ ಹಾಕಿದ್ದ 
ಕಾರ್ಪೆಟ್ಟನ್ನು ಮೆಟ್ಟುತ್ತಾ ಉತ್ಸಾಹದಿಂದ ಹೆಜ್ಜೆ ಹಾಕಿದಳು. 

' ಮಾತು ಕೊಟ್ಟಿದೀಯ, ಜ್ಞಾಪಕ ಇರಲಿ!' ಅನ್ನುತ್ತಾ ಮಗನನ್ನು 
ಹುರಿದುಂಬಿಸುವ ಹಾಗೆ ಅವನ ಭುಜವನ್ನು ಇನ್ನೊಂದು ಸಾರಿ ಮುಟ್ಟಿದಳು . 
ಮಗ ತಲೆ ತಗ್ಗಿಸಿಕೊಂಡು ನೆಲ ನೋಡುತ್ತಾ ಅವಳ ಹಿಂದೆ ನಡೆದ. 

ಅವರು ವಿಶಾಲವಾದ ನಡುಮನೆಗೆ ಬಂದರು. ಅಲ್ಲಿಂದ ಪ್ರಿನ್ಸ್ ವ್ಯಾಸಿಲಿ 
ಇರುವ ಕೋಣೆಗೆ ಬಾಗಿಲಿತ್ತು. 

ಅಲ್ಲಿಗೆ ಬಂದ ತಕ್ಷಣ ಕಾಣಿಸಿಕೊಂಡ ಮುದುಕ ಮನೆಯಾಳನ್ನು ಮುಂದೆ 


೭೩ 


ಸಂಪುಟ ೧ - ಸಂಚಿಕೆ ಒಂದು 
ಹೇಗೆ ಅಂತ ಕೇಳಬೇಕು ಅಂತಿರುವಷ್ಟರಲ್ಲಿ ಬಾಗಿಲೊಂದರ ಹಿತ್ತಾಳೆಯ ದುಂಡು 
ಹಿಡಿಕೆ ತಿರುಗಿತು, ವೆಲ್ವೆಟ್ಟಿನ ನಿಲುವಂಗಿ ತೊಟ್ಟು ಎದೆಯ ಮೇಲೆ ನಕ್ಷತ್ರದ ಪದಕ 
ಧರಿಸಿದ್ದ ಪ್ರಿನ್ಸ್ ವ್ಯಾಸಿಲಿ ಹೊರಗೆ ಬಂದ. ಅವನ ಜೊತೆಯಲ್ಲಿ ಚೆನ್ನಾಗಿ ಕಾಣುತ್ತಿದ್ದ 
ಕಪ್ಪು ಕೂದಲಿನವನೊಬ್ಬನು ಇದ್ದ. ಅವನು ಪೀಟರ್ಸ್‌ಬರ್ಗಿನ ಸುಪ್ರಸಿದ್ದ ಡಾಕ್ಟರು 
ಲೋರೈನ್ . 
- ' ಹಾಗಾದರೆ ಅಷ್ಟೇ ಅನ್ನುತೀರಾ? ' ಏನ್ ಕೇಳಿದ. 

' ಪ್ರಿನ್ಸ್, ಬ್ಯೂಮನ್ ಎಸ್ ಎ‌ ...( ಮನುಷ್ಯರು ತಪ್ಪು ಮಾಡುವುದು ಸಹಜ ) 
ಆದರೆ...' ರ ಕಾರಗಳನ್ನೆಲ್ಲ ನುಂಗುತ್ತಾ , ಲ್ಯಾಟಿನ್ ವಾಕ್ಯವನ್ನು ಫ್ರೆಂಚ್ ಶೈಲಿಯಲ್ಲಿ 
ಉಚ್ಚರಿಸುತ್ತಾ ಡಾಕ್ಟರು ಮಾತಾಡುತ್ತಿದ್ದ . 

'ವೆಲ್, ವೆಲ್...' 

ಅನ್ನಾ ಮಿಖಾಯ್ಲೆಟ್ನಾ, ಮತ್ತೆ ಅವಳ ಮಗನನ್ನು ಕಂಡ ಪ್ರಿನ್ಸ್ ವ್ಯಾಸಿಲಿ 
ತಲೆದೂಗಿ ಡಾಕ್ಟರನ್ನು ಕಳಿಸಿಕೊಟ್ಟು, ಅವಳ ಕಡೆಗೆ ಹೆಜ್ಜೆ ಹಾಕಿದ, ಏನು ಅನ್ನುವ 
ಹಾಗೆ ಮೌನವಾಗಿ ನೋಡಿದ. ಮಗ ನೋಡುತ್ತಿದ್ದ - ತಾಯಿಯ ಕಣ್ಣು ತಟ್ಟನೆ 
ಭಾವ ಬದಲಿಸಿಕೊಂಡು ಗಾಢ ವಿಷಾದಕ್ಕೆ ಹೊರಳಿದ್ದನ್ನು ಕಂಡು ಸಣ್ಣಗೆ ಮುಗುಳಕ್ಕ. 
- 'ಅಯ್ಯೋ , ಪ್ರಿನ್ಸ್ ಮತ್ತೆ ನೋಡುತಾ ಇದೇವೆ, ಅದೂ ಎಂಥಾ ದುಃಖದ 
ಸಮಯದಲ್ಲಿ ಮತ್ತೆ ನೋಡುತಿದೇವಲ್ಲಾ!... ಪಾಪ ಕೌಂಟ್ ಹೇಗಿದಾರೆ? ' ಪ್ರಿನ್ಸ್ 
ಸೆಟೆದುಕೊಂಡು ದುರುಗುಟ್ಟಿ ನೋಡುತ್ತಾ ಇದ್ದರೂ ಅದನ್ನು ಗಮನಿಸದವಳ 
ಹಾಗೆ ಅನ್ನಾ ಮಿಖಾಯೌವ್ವಾ ಕೇಳಿದಳು. ಏನೂ ಅರ್ಥವಾಗದವನ ಹಾಗೆ 
ಪ್ರಿನ್ಸ್ ವ್ಯಾಸಿಲಿ ಅವಳನ್ನು ದಿಟ್ಟಿಸಿದ, ಆಮೇಲೆ ಏನು, ಯಾಕೆ ಅಂತ ಕೇಳುವವನ 
ಹಾಗೆ ಬೋರಿಸ್‌ನ ಕಡೆಗೆ ನೋಡಿದ. ಬೋರಿಸ್ ಸೌಜನ್ಯದಿಂದ ತಲೆಬಾಗಿ 
ವಂದಿಸಿದ. ಅದನ್ನು ಲೆಕ್ಕಕ್ಕೇ ಇಟ್ಟುಕೊಳ್ಳದವನ ಹಾಗೆ ಪ್ರಿನ್ಸ್ ವ್ಯಾಸಿಲಿ ಅನ್ನಾ 
ಮಿಖಾವಾಳ ಕಡೆಗೆ ತಿರುಗಿ, ಅವಳ ಪ್ರಶ್ನೆಗೆ ತಲೆ ಆಡಿಸುತ್ತಾ ತುಟಿ ಮುಂದೆ 
ಚಾಚಿ, ರೋಗಿಯ ಕೋಣೆಯ ಕಡೆ ನೋಡುತ್ತಾ ರೋಗಿಯ ಜೀವದ್ದು ಏನೇನೂ 
ಭರವಸೆ ಇಲ್ಲ ಅನ್ನುವ ಉತ್ತರವನ್ನು ನೋಟದಲ್ಲೇ ಸೂಚಿಸಿದ. 

- 'ಹೌದೇ ! ಅಯ್ಯೋ ! ನೆನೆದುಕೊಂಡರೇ ಭಯವಾಗುತ್ತದೆ...' ಅಂತ ಉದ್ಧರಿಸಿದ 
ಅನ್ನಾ ಮಿಖಾಯೌವ್ವಾ ಬೋರಿಸ್‌ನನ್ನು ತೋರಿಸುತ್ತಾ ಇವನು ನನ್ನ ಮಗ. 
ನಿಮಗೆ ಥ್ಯಾಂಕ್ಸ್ ಹೇಳಬೇಕು ಅಂತ ಅವನೇ ಬಂದಿದಾನೆ ' ಅಂದಳು . 

ಬೋರಿಸ್ ಇನ್ನೊಂದು ಸಾರಿ ಸೌಜನ್ಯ ಪೂರ್ಣವಾಗಿ ತಲೆಬಾಗಿ ವಂದಿಸಿದ. 

“ನಿಜ ಹೇಳತೇನೆ ಪ್ರಿನ್ , ಮಗನಿಗೆ ನೀವು ಮಾಡಿರುವ ಸಹಾಯವನ್ನ ಈ 
ತಾಯಿಯ ಹೃದಯ ಯಾವತ್ತೂ ಮರೆಯಲ್ಲ' ಅಂದಳು. 

'ನಿಮಗೆ ಸಹಾಯಮಾಡುವುದಕ್ಕೆ ಆಯಿತಲ್ಲಾ ಅನ್ನಾ ಮಿಖಾಯೌವ್ವಾ, 


೭೪ 

ಯುದ್ಧ ಮತ್ತು ಶಾಂತಿ 
ಅದೇ ಸಂತೋಷ, ಪ್ರಿನ್ಸ್ ವ್ಯಾಸಿಲಿ ಅಂಗಿಯ ಲೇಸು ಸರಿಮಾಡಿಕೊಳ್ಳುತ್ತಾ, 
ಪೀಟರ್ಸ್‌ಬರ್ಗಿನ ಪಾರ್ಟಿಯಲ್ಲಿ ಮಾತನಾಡಿದ್ದಕ್ಕಿಂತ ಹೆಚ್ಚಿನ ದೊಡ್ಡಸ್ತಿಕೆಯನ್ನು 
ದನಿಯಲ್ಲಿ, ದಾಟಿಯಲ್ಲಿ, ಇಲ್ಲಿ ಮಾಸ್ಕೋದಲ್ಲಿ, ತನ್ನ ಹಂಗಿಗೆ ಒಳಪಟ್ಟಿರುವ 
ಅನ್ನಾ ಮಿಖಾಯೌವ್ಹಾಳ ಎದುರಿಗೆ ತೋರಿಸುತ್ತಾ ಹೇಳಿದ. 

'ಸೈನ್ಯದಲ್ಲಿ ನಿಷ್ಠೆಯಿಂದ, ಚೆನ್ನಾಗಿ ಕೆಲಸಮಾಡು, ಒಳ್ಳೆಯ ಹೆಸರು ತೆಗೆದುಕೋ ' 
ಬೋರಿಸ್‌ನ ಕಡೆಗೆ ತಿರುಗಿ ತೀಕ್ಷವಾಗಿ ಹೇಳಿದ. “ಸಂತೋಷ ಆಯಿತು. ರಜಾದ 
ಮೇಲಿದ್ದೀಯೇನು?” ಅಂದ. ಪ್ರಿನ್ಸ್‌ನ ಧ್ವನಿಯಲ್ಲಿ ಮಾಮೂಲಿನ ಉದಾಸೀನ 
ತುಂಬಿತ್ತು. 

' ಹೊಸ ರೆಜಿಮೆಂಟಿಗೆ ಸೇರಿಕೊಳ್ಳೋದಕ್ಕೆ ಆರ್ಡರಿಗೆ ಕಾಯುತ್ತಾ ಇದೇನೆ, 
ಯುವರ್ ಎಕ್ಸಲೆನ್ಸಿ, ಪ್ರಿನ್ಸ್ನ ಒರಟು ಉದಾಸೀನದಿಂದ ಬೇಜಾರಾಯಿತು ಅನ್ನುವ, 
ಅಥವಾ ಆತನೊಡನೆ ಸಂಭಾಷಣೆ ಮಾಡುವ ಆಸಕ್ತಿ ಇದೆ ಅನ್ನುವ ಸೂಚನೆಯೂ 
ಇಲ್ಲದ ದನಿಯಲ್ಲಿ, ಸಹನೆಯಿಂದ, ಎಷ್ಟೊಂದು ಶಾಂತವಾಗಿ , ಗೌರವವಾಗಿ ಬೋರಿಸ್ 
ಹೇಳಿದ ಅಂದರೆ ಪ್ರಿನ್ಸ್ ವ್ಯಾಸಿಲಿ ಪರೀಕ್ಷಿಸಿ ನೋಡುವವನ ಹಾಗೆ ಅವನನ್ನು 
ದಿಟ್ಟಿಸಿದ. 
- ನಿಮ್ಮ ತಾಯಿಯ ಜೊತೆಯಲ್ಲೇ ಇದೀಯೇನು?' 

“ಕೌಂಟೆಸ್ ರೋಸ್ಕೋವಾ ಅವರ ಮನೆಯಲ್ಲಿದ್ದೇನೆ,' ಅಂತ ಉತ್ತರಿಸಿದ 
ಬೋರಿಸ್ ' ಯುವರ್ ಎಕ್ಸಲೆನ್ಸಿ' ಅನ್ನುವುದನ್ನು ಸೇರಿಸಲು ಮರೆಯಲಿಲ್ಲ. 
ಈ ' ಅದೇ , ಇಲ್ಯಾ ರೋಸ್ಕೋವ್, ನತಾಲಿ ಶಿನ್‌ಶಿನಾಳನ್ನು ಮದುವೆಯಾದರಲ್ಲ, 
ಅವರ ಮನೆ' ಅಂದಳು ಅನ್ನಾ ಮಿಖಾಯೌವ್ವಾ, 

- 'ಗೊತ್ತು, ಗೊತ್ತು' ಪ್ರಿನ್ಸ್ ವ್ಯಾಸಿಲಿ ನೀರಸವಾದ ಧ್ವನಿಯಲ್ಲಿ ಹೇಳಿದ. 
“ ನತಾಲಿ ಅದು ಹೇಗೆ ಆ ಎಳಸು ಕರಡಿಯನ್ನು ಮದುವೆ ಮಾಡಿಕೊಂಡ 
ಏನೋ ! ಶುದ್ಧ ಹುಚ್ಚ, ಮಹಾ ಮೂರ್ಖ. ಜೂಜಾಡುತ್ತಾನೆ ಅಂತಲೂ ಹೇಳುತ್ತಾರೆ' 
ಅಂಧ. 
- “ ಆದರೆ ತುಂಬಾ ಒಳ್ಳೆಯವನು, ಪ್ರಿನ್ಸ್ ' ಕೌಂಟ್ ರೋಸ್ಟೋವ್ ಇಂಥ 
ಟೀಕೆಗೆ ತಕ್ಕವನೇ ಆದರೂ ಬಡಪಾಯಿಯಮೇಲೆ ಸ್ವಲ್ಪ ಕರುಣೆ ಇರಲಿ ಎಂದು 
ಪ್ರಿನ್ಸ್ ವ್ಯಾಸಿಲಿಯ ಮನವೊಲಿಸುವ ಹಾಗೆ ಮರುಕದ ಕಿರುನಗು ನಗುತ್ತಾ ಅನ್ನಾ 
ಮಿಖಾಯ್ತಾ ಹೇಳಿದಳು. 

' ಡಾಕ್ಟರು ಏನನ್ನುತಾರೆ? ' ಸ್ವಲ್ಪ ಹೊತ್ತು ಸುಮ್ಮನಿದ್ದು ಆಮೇಲೆ ಕೇಳಿದಳು. 
ಸುಕ್ಕುಗಟ್ಟಿದ ಅವಳ ಮುಖದ ಮೇಲೆ ಆಳವಾದ ದುಃಖದ ಭಾವ ಮತ್ತೆ 
ಕಾಣಿಸಿಕೊಂಡಿತು. 

ಆಸೆ ಇಟ್ಟುಕೊಳ್ಳೋ ಹಾಗಿಲ್ಲ' ಪ್ರಿನ್ಸ್ ಉತ್ತರಿಸಿದ. 


೭೫ 


ಸಂಪುಟ ೧ - ಸಂಚಿಕೆ ಒಂದು 

“ ನನಗೆ, ಬೋರಿಸ್‌ಗೆ ತುಂಬ ಉಪಕಾರ ಮಾಡಿದ್ದಾರೆ. ಅಂಕಲ್‌ಗೆ ಥ್ಯಾಂಕ್ಸ್ 
ಹೇಳಬೇಕು' ಅಂದಳು. ' ಈ ಬೋರಿಸ್ ಅವರ ಗಾಡ್ ಸನ್' ಅನ್ನುವುದು 
ಸೇರಿಸಿದಳು , ಈ ಸುದ್ದಿಯಿಂದ ಪ್ರಿನ್ಸ್‌ಗೆ ಪರಮ ಸಂತೋಷವಾಗುತ್ತದೆ ಅನ್ನುವ 
ಹಾಗೆ. 

- ಪ್ರಿನ್ಸ್ ವ್ಯಾಸಿಲಿ ಒಂದು ಕ್ಷಣ ಯೋಚನೆಯಲ್ಲಿ ಮುಳುಗಿದ. ಹುಬ್ಬು 
ಗಂಟಿಕ್ಕಿಕೊಂಡ. ಅದನ್ನು ಕಂಡು ತಾವು ಕೌಂಟ್ ಬೆಝುಕೋವ್‌ನ ಆಸ್ತಿಯ 
ಪಾಲುಗಾರರೆಂದು ಆತಂಕಪಡುತ್ತಿದ್ದಾನೆ ಅನ್ನುವುದು ಗೊತ್ತಾಗಿ ಅನ್ನಾ 
ಮಿಖಾಯೌವ್ವಾ ಪ್ರಿನ್ಸ್ನ ಮನಸ್ಸಿಗೆ ಸಮಾಧಾನವಾಗುವ ಹಾಗೆ ತಟ್ಟನೆ, ಹೇಳಿದಳು 

- ' ನನಗೆ ಚಿಕ್ಕಪ್ಪನ ಮೇಲೆ ತುಂಬಾ ಗೌರವ, ತುಂಬಾ ಪ್ರೀತಿ... ಚಿಕ್ಕಪ್ಪ 
ಅನ್ನುವ ಮಾತನ್ನು ಸ್ವಲ್ಪ ಒತ್ತಿ ಆದರೆ ಮಾಮೂಲು ರೀತಿಯಲ್ಲೇ ಹೇಳಿದಳು. 
“ ಅವರು ಎಂಥಾವರು ಅನ್ನೋದುನನಗೆ ಗೊತ್ತು. ತುಂಬಾ ದೊಡ್ಡ ಮನುಷ್ಯರು. 
ನೇರವಾದ ಸ್ವಭಾವ... ಇಲ್ಲಿ ಪ್ರಿನ್ಸೆಸ್‌ಗಳನ್ನು ಬಿಟ್ಟರೆ ಅವರ ಜೊತೆಗೆ ಬೇರೆ 
ಯಾರೂ ಇಲ್ಲ.... ಪ್ರಿನ್ಸೆಸ್‌ಗಳಿಗೂ ಪಾಪ ಇನ್ನೂ ಚಿಕ್ಕ ವಯಸ್ಸು...' ಅಂದು ಅವಳು 
ಮುಂದೆ ಬಗ್ಗಿ ಪಿಸುಮಾತಿನಲ್ಲಿ ಚಿಕ್ಕಪ್ಪ ಕೊನೆಗಾಲದಲ್ಲಿ ಮಾಡಬೇಕಾದದ್ದೆಲ್ಲಾ 
ಮಾಡಿದರಾ ? ಸಾಕ್ರಮೆಂಟ್ ೨೩ ತೆಗೆದುಕೊಳ್ಳುವ ಕೊನೆಯ ನಿಮಿಷಗಳಿಗೆ ಬೆಲೆ 
ಕಟ್ಟವುದುಂಟೇ ! ಆಚಾರ ನಡೆಸೋದರಿಂದ ಕೆಟ್ಟದ್ದೇನೂ ಆಗಲ್ಲ. ಹಾಗೆ ನೋಡಿದರೆ 
ಕೌಂಟ್ ಅವರ ಆರೋಗ್ಯ ಅಷ್ಟೊಂದು ಹದಗೆಟ್ಟಿದ್ದರೆ ಅವರನ್ನ ಅದಕ್ಕೆ ಸಿದ್ದ 
ಮಾಡಬೇಕು, ಅಲ್ಲವಾ.' ಮೃದುವಾದ ನಗುತ್ತಾ 'ನಮಗೆ, ಹೆಂಗಸರಿಗೆ , ಇಂಥಾ 
ಕೆಲಸ ಹೇಗೆ ಹೇಳಬೇಕು ಅನ್ನೋದು ಗೊತ್ತು. ನನ್ನ ಮನಸ್ಸಿಗೆ ಎಷ್ಟು ಕಷ್ಟ 
ಆದರೂ , ನೋವು ಆದರೂ ಪರವಾಗಿಲ್ಲ. ಬೇಕಾದಷ್ಟು ಕಷ್ಟ ಅನುಭವಿಸಿದೀನಿ 
ನಾನು ಅವರನ್ನ ನೋಡಲೇ ಬೇಕು,' ಅಂದಳು. 

ಈ ಹೆಂಗಸಿನಿಂದ ತಪ್ಪಿಸಿಕೊಳ್ಳುವುದು ಅಸಾಧ್ಯ ಅಂತ ಅನ್ನಾ ಪಾವೊಲಾಳ 
ಮನೆಯ ಪಾರ್ಟಿಯಲ್ಲಿ ಹೊಳೆದ ಹಾಗೆಯೇ ಪ್ರಿನ್ಸ್ ವ್ಯಾಸಿಲಿಗೆ ಈಗಲೂ 
ಹೊಳೆಯಿತು. 'ಈಗ ಯಾರನ್ನು ಭೇಟಿ ಮಾಡಿದರೂ ಬಹಳ ಆಯಾಸ ಆಗುತದೆ 
ಕೌಂಟ್ ಅವರಿಗೆ ರಾತ್ರಿವರೆಗೂ ಕಾಯೋಣ. ಏನು ಬೇಕಾದರೂ ಆಗಬಹುದು 
ಅನ್ನುತ್ತಿದಾರೆ ಡಾಕ್ಟರು ' ಅಂದ. 

' ಇಂಥಾ ಹೊತ್ತಿನಲ್ಲಿ ತಡ ಮಾಡಬಾರದು ಪ್ರಿನ್ಸ್ ' ಇದು ಆತ್ಮವನ್ನ ಕಾಪಾಡುವ 
ವಿಚಾರ! ಕ್ರಿಶ್ಚಿಯನ್ ಆದವನು ಮಾಡಲೇಬೇಕಾದ ಕಟ್ಟಳೆ' ಅಂದಳು ಅನ್ನಾ 


೨೩ ಸಾಯಲಿರುವ ವ್ಯಕ್ತಿಯ ಪಾಪ ನಿವಾರಣೆಗೆಂದು ಕಣ್ಣು, ಕಿವಿ, ಮೂಗು ಇತ್ಯಾದಿ ಭಾಗಗಳಿಗೆ 

ಎಣ್ಣೆಯನ್ನು ಲೇಪಿಸುವ ಕ್ರಿಶ್ಚಿಯನ್ ಧಾರ್ಮಿಕ ವಿಧಿ. 


ಯುದ್ಧ ಮತ್ತು ಶಾಂತಿ 
ಮಿಖಾಯೌವ್ವಾ. 
* ಒಳಕೋಣೆಯೊಂದರ ಬಾಗಿಲು ತೆರೆಯಿತು. ಒಬ್ಬ ಪ್ರಿನ್ಸೆಸ್ , ಕೌಂಟ್‌ನ 
ಸೋದರ ಸೊಸೆ, ದುಗುಡ ತುಂಬಿದ, ಕಠಿಣವಾದ ಮುಖ ಹೊತ್ತು ಕಾಣಿಸಿಕೊಂಡಳು. 
ಅವಳ ಉದ್ದವಾದ ದೇಹಕ್ಕೆ ಹೊಂದುವುದಿಲ್ಲ ಅನ್ನುವ ಹಾಗೆ ಗಿಡ್ಡ ಕಾಲು ಎದ್ದು 
ಕಾಣುತ್ತಿತ್ತು . 

“ಈಗ ಹೇಗಿದಾರೆ ?' ಏನ್ ವ್ಯಾಸಿಲಿ ಅವಳ ಕಡೆಗೆ ತಿರುಗಿ ಕೇಳಿದ. 

' ಹಾಗೇ . ಇಷ್ಟೊಂದು ಗಲಾಟೆ ಇದ್ದರೆ ಇನ್ನೇನಾಗತದೆ...' ತನಗೆ ಗೊತ್ತಿಲ್ಲದ 
ಅನ್ನಾ ಮಿಖಾಯೋತ್ಪಾಳನ್ನು ನೋಡುತ್ತಾ ಪ್ರಿನ್ಸೆಸ್ ಹೇಳಿದಳು. 

' ಓ , ಮೈ ಡಿಯರ್ , ಒಂದು ನಿಮಿಷ ನಿನ್ನ ಗುರುತೇ ಸಿಗಲಿಲ್ಲ' ಅನ್ನುತ್ತಾ, 
ಸಂತೋಷದ ನಗುಬೀರುತ್ತಾ ಅನ್ನಾ ಮಿಖಾಯೌವ್ವಾ ಪ್ರಿನ್ಸೆಸ್ ಕಡೆಗೆ ದೊಡ್ಡ 
ಹೆಜ್ಜೆ ಹಾಕಿಕೊಂಡು ಹೋದಳು. ' ನಿನಗೆ ಸಹಾಯಮಾಡೋದಕ್ಕೆ , ಚಿಕ್ಕಪ್ಪನ ಸೇವೆ 
ಮಾಡೋದಕ್ಕೆ ಈಗ ತಾನೇ ಬಂದೆ. ನೀನು ತುಂಬಾ ಕಷ್ಟಪಟ್ಟಿದೀಯಾ' ಅನ್ನುತ್ತಾ 
ಮರುಕ ತೋರುವ ಹಾಗೆ ಏನೈಸ್‌ಳನ್ನು ನೋಡಿದಳು. 

ಪ್ರಿನ್ಸೆಸ್ ಮಾತಾಡಲಿಲ್ಲ, ನಗಲೂ ಇಲ್ಲ. ಸುಮ್ಮನೆ ಹೊರಟುಹೋದಳು. 
ಅನ್ನಾ ಮಿಖಾಯೌವ್ವಾಕೈಯ ಗೌಸುಗಳನ್ನು ತೆಗೆಯುತ್ತಾ , ತಾನು ಗೆದ್ದುಕೊಂಡ 
ರಾಜ್ಯದ ಮೇಲೆ ಅಧಿಕಾರ ಸ್ಥಾಪಿಸುವ ಹಾಗೆ ಅಲ್ಲಿದ್ದ ಆರಾಮ ಕುರ್ಚಿಯ ಮೇಲೆ 
ಒರಗಿ ಕೂತು, ಪ್ರಿನ್ಸ್ ವ್ಯಾಸಿಲಿಯನ್ನು ತನ್ನ ಪಕ್ಕದಲ್ಲಿ ಕೂರಲು ಕರೆದಳು. 
- `ಬೋರಿಸ್! ನಾನು ಒಳಗೆ ಹೋಗಿ ನಮ್ಮ ಚಿಕ್ಕಪ್ಪ , ಕೌಂಟ್ ಅವರನ್ನು 
ನೋಡತೇನೆ. ನೀನು ಹೋಗಿ ಪಿಯರೆಯನ್ನು ಮಾತನಾಡಿಸಿಕೊಂಡು ಬಾ . 
ರೋಸ್ಕೋವ್ ಅವರ ಮನೆಯಲ್ಲಿ ರಾತ್ರಿಯ ಊಟಕ್ಕೆ ಕರೆಯುವುದನ್ನು 
ಮರೆಯಬೇಡ, ಅವರು ಅವನಿಗೂ ಹೇಳಿ ಕಳಿಸಿದಾರೆ' ಅಂದಳು . “ ಪಿಯರೆ 
ಊಟಕ್ಕೆ ಬರೋದಿಲ್ಲ ಅನ್ನಿಸತದೆ , ಅಲ್ಲವಾ ?' ಅಂತ ಪ್ರಿನ್ನನ್ನು ಕೇಳಿದಳು. 

' ಹಾಗೇನಿಲ್ಲ,' ಪ್ರಿನ್ಸ್‌ನ ಧ್ವನಿಯಲ್ಲಿ ಹತಾಶೆ , ಕಸಿವಿಸಿ ಎದ್ದು ಕಾಣುತ್ತಿತ್ತು. 
“ಅವನನ್ನು ಕರಕೊಂಡು ಹೋದರೆ ನಿಮಗೆ ಪುಣ್ಯ ಬರತದೆ..ಅವನು ಮನೇ 
ಬಿಟ್ಟು ಎಲ್ಲೂ ಹೋಗೋದಿಲ್ಲ. ಅವನನ್ನು ನೋಡಬೇಕು ಅಂತ ಕೌಂಟ್ ಇನ್ನೂ 
ಒಂದು ಸಾರಿಯೂ ಹೇಳಿಲ್ಲ' ಅಂದ. 
* ಸುಮ್ಮನೆ ಭುಜ ಕೊಡವಿದ . ಸೇವಕನೊಬ್ಬ ಬಂದು ಕೆಳಗಿನ ಅಂತಸ್ತಿನಲ್ಲಿದ್ದ 
ಪಿಯರೆಯ ಕೋಣೆಗೆ ಬೋರಿಸ್‌ನನ್ನು ಕರೆದುಕೊಂಡು ಹೋದ. 

: 

೧೩ 
ಪಿಯರೆ ಪೀಟರ್ಸ್‌ಬರ್ಗಿನಲ್ಲಿದ್ದು ಯಾವ ಉದ್ಯೋಗ ಮಾಡಬೇಕು 
ಅನ್ನುವುದನ್ನು ತೀರ್ಮಾನ ಮಾಡಲು ಆಗಿರಲಿಲ್ಲ. ಪಿಯರೆ ಅಲ್ಲಿ ನಡೆಸಿದ 


೭೭ 
ಸಂಪುಟ ೧ - ಸಂಚಿಕೆ ಒಂದು 
ದಾಂಧಲೆಗಳಿಂದ ಅವನನ್ನು ಗಡೀಪಾರು ಮಾಡಿ ಮಾಸ್ಕೋಗೆಕಳಿಸಿಬಿಟ್ಟಿದ್ದರು. 
ಕೌಂಟ್ ರೋಸ್ಟೋವ್ ಮನೆಯಲ್ಲಿ ಅವನ ಬಗ್ಗೆ ಕೇಳಿದ ಕಥೆ ನಿಜವಾಗಿತ್ತು. 
ಪೋಲೀಸಿನವನನ್ನು ಕರಡಿಯ ಬೆನ್ನಿಗೆ ಕಟ್ಟಿ ನಾಲೆಗೆ ಎಸೆಯುವ ಕೆಲಸದಲ್ಲಿ 
ಪಿಯರೆ ಕೈ ಜೋಡಿಸಿದ್ದ . ಈಗ ಕೆಲವು ದಿನಗಳ ಹಿಂದೆ ಮಾಸ್ಕೋಗೆ ಬಂದು 
ಯಾವತ್ತಿನ ಹಾಗೇ ತಂದೆಯ ಮನೆಯಲ್ಲಿ ಉಳಿದುಕೊಂಡಿದ್ದ . ತಾನು ಮಾಡಿದ 
ಸಾಹಸದ ಕಥೆ ಆಗಲೇ ಮಾಸ್ಕೋ ಮುಟ್ಟಿರುತ್ತದೆ, ಅಪ್ಪನ ಸುತ್ತಲೂ ಇರುವ 
ತನ್ನನ್ನು ಕಂಡರೆ ಆಗದ ಹೆಂಗಸರೆಲ್ಲ ಅದನ್ನು ಅಪ್ಪನಿಗೆ ಹೇಳಿ ತನ್ನ ವಿರುದ್ದ 
ಎತ್ತಿಕಟ್ಟುವುದಕ್ಕೆ ನೋಡಿರುತ್ತಾರೆ ಅನ್ನುವ ಊಹೆ ಇದ್ದರೂ ಮನೆಗೆ ಬಂದ 
ದಿವಸವೇ ಅಪ್ಪ ಇದ್ದಲ್ಲಿಗೆ ಹೋಗಿನೋಡಲು ಪ್ರಯತ್ನಪಟ್ಟಿದ್ದ . ದಿವಾನಖಾನೆಗೆ 
ಕಾಲಿಟ್ಟು, ಪ್ರಿನ್ಸೆಸ್‌ಗಳಿಗೆ ಪ್ರಿಯವಾಗಿದ್ದ ರಾಜ್ಯ ಅದು, ಅವರನ್ನು ಮಾತಾಡಿಸಿದ. 
ಇಬ್ಬರು ಪ್ರಿನ್ಸೆಸ್‌ಗಳು ಕಸೂತಿ ಹಾಕುತ್ತಾ ಕೂತಿದ್ದರು. ಇನ್ನೊಬ್ಬಳು ಪುಸ್ತಕವನ್ನು 
ಹಿಡಿದು ಗಟ್ಟಿಯಾಗಿ ಓದುತ್ತಿದ್ದಳು. ಮೂವರಲ್ಲಿ ದೊಡ್ಡವಳು , ನೀಟಾಗಿ ಬಿಮ್ಮಗೆ 
ಎತ್ತರ ಮೈ , ಗಿಡ್ಡಕಾಲುಗಳಿದ್ದವಳು , ವಯಸ್ಸು ಮೀರಿದ್ದರೂ ಮದುವೆಯಾಗದ 
ಹೆಂಗಸು, ಅವಳೇ ಅನ್ನಾ ಮಿಖಾಯೌವ್ಹಾಳನ್ನ ಕಂಡಿದ್ದವಳು , ಈಗ ಓದುವ 
ಕೆಲಸ ಮಾಡುತ್ತಿದ್ದಳು. ಕಸೂತಿ ಹಾಕುತ್ತಾ ಕುಳಿತಿದ್ದ ಇಬ್ಬರು ಹುಡುಗಿಯರೂ 
ಕೆಂಪು ಕೆಂಪಗೆ ಮುದ್ದಾಗಿದ್ದರು. ಅವರಿಗೆ ಇದ್ದ ಒಂದೇ ವ್ಯತ್ಯಾಸವೆಂದರೆ ಒಬ್ಬಳ 
ತುಟಿಯ ಮೇಲೆ ಪುಟ್ಟದೊಂದು ಮಚ್ಚೆ ಇದ್ದು ಅದು ಅವಳು ಇನ್ನೂ ಮುದ್ದಾಗಿ 
ಕಾಣುವಂತೆ ಮಾಡಿತ್ತು. ಇಬ್ಬರೂ ಕಸೂತಿ ಕೆಲಸದಲ್ಲಿ ಮುಳುಗಿದ್ದರು. ಸ್ಮಶಾನದಿಂದ 
ಎದ್ದು ಬಂದ ಹಣವನ್ನೋ , ಪ್ಲೇಗು ರೋಗಿಯನ್ನೋ ಸ್ವಾಗತಿಸುವ ಹಾಗೆ ಅವರೆಲ್ಲ 
ಪಿಯರೆಯನ್ನು ಬರಮಾಡಿಕೊಂಡರು. ದೊಡ್ಡ ಪ್ರಿನ್ಸೆಸ್ ಓದುವುದು ನಿಲ್ಲಿಸಿ ಸುಮ್ಮನೆ 
ಅವನನ್ನೇ ದಿಟ್ಟಿಸಿದಳು , ಅವಳ ನೋಟದಲ್ಲಿ ಭಯವಿತ್ತು . ಎಲ್ಲರಿಗಿಂತ ಚಿಕ್ಕವಳು, 
ತುಟಿಯ ಮೇಲೆ ಮಚ್ಚೆ ಇದ್ದವಳು , ತುಂಬ ತಮಾಷೆಯ ಸ್ವಭಾವದವಳು, ನಗುವನ್ನು 
ಬಚ್ಚಿಟ್ಟುಕೊಂಡು ಕಸೂತಿಯ ಚೌಕಟ್ಟು ನೋಡುವ ಹಾಗೆ ತಲೆ ಬಗ್ಗಿಸಿಕೊಂಡು 
ಏನೋ ತಮಾಷೆ ನಡೆಯುತ್ತದೆ ಅಂತ ಊಹಿಸಿಕೊಳ್ಳುತ್ತಿದ್ದಳು. ನಗು ತಡೆಯಲಾಗದೆ, 
ಆಗತಾನೇ ಹಾಕಿದ ಹೊಲಿಗೆಯನ್ನು ಸರಿಮಾಡಬೇಕಾಗಿದೆಯೋ ಅನ್ನುವ ಹಾಗೆ 
ತಲೆ ತಗ್ಗಿಸಿಕೊಂಡು ನೋಡುತ್ತಾ ಕೂತಳು . 

'ಗುಡ್ ಮಾರ್ನಿಂಗ್ ಹೇಗಿದ್ದೀರಿ ಎಲ್ಲಾರೂ ? ನನ್ನ ಗುರುತು 
ಸಿಗಲಿಲ್ಲವಾ ?' ಪಿಯರೆ ಕೇಳಿದ. 

“ಓಹೋ , ನನಗಂತೂ ಬಹಳಾ ಚೆನ್ನಾಗಿ ಸಿಕ್ಕಿತು.” 
- “ಕೌಂಟ್ ಹೇಗಿದ್ದಾರೆ ? ಹೋಗಿನೋಡಬಹುದಾ ನಾನು ?' ಎಂದಿನಂತೆ 
ತಡವರಿಸುತ್ತಾ, ಆದರೆ ಸಂಕೋಚ ಇಲ್ಲದೆ, ಪಿಯರೆ ಕೇಳಿದ. 


೭೮ 


CH 


ಯುದ್ಧ ಮತ್ತು ಶಾಂತಿ 
- “ಕೌಂಟ್ ಅವರ ದೇಹಸ್ಥಿತೀನೂ ಚೆನ್ನಾಗಿಲ್ಲ, ಮನಸ್ಥಿತೀನೂ ಚೆನ್ನಾಗಿಲ್ಲ . 
ಬಹಳ ನರಳತಾ ಇದಾರೆ. ಅವರ ಮನಸ್ಸು ಕೆಡುವುದಕ್ಕೆ ನಿಮ್ಮ ಕಾಣಿಕೇನೂ 
ಇದೆಯಲ್ಲಾ.' 

'ಫೀಸ್, ನಾನು ಹೋಗಿ ನೋಡಲಾ ?' ಪಿಯರೆ ಮತ್ತೆ ಕೇಳಿದ. 

“ಓಹೋ ! ಈಗಲೇ , ಈ ಕ್ಷಣವೇ ಅವರನ್ನ ಸಾಯಿಸಬೇಕು ಅನ್ನುವುದಿದ್ದರೆ 
ಧಾರಳವಾಗಿ ಹೋಗಿನೋಡಬಹುದು...ಓಲ್ಲಾ, ಅಂಕಲ್‌ಗೆ ಟೀ ರೆಡಿಯಾಯಿತೇನೋ 
ನೋಡು, ಆಗಲೇ ಹೊತ್ತಾಗಿಹೋಯಿತು' ಅಂದಳು ದೊಡ್ಡವಳು. ತಾವು ಕೈ 
ತುಂಬ ಕೆಲಸ ಇರುವವರು, ಅವನ ಅಪ್ಪನ ಯೋಗಕ್ಷೇಮ ನೋಡಿಕೊಳ್ಳುವುದರಲ್ಲೇ 
ಮುಳುಗಿರುವವರು, ಪಿಯರೆ ಮಾತ್ರ ಅಪ್ಪನ ಮನಸ್ಸಿನ ನೆಮ್ಮದಿ ಕೆಡಿಸುವುದರಲ್ಲೇ 
ಇರುವವನು ಅನ್ನುವ ಹಾಗೆ ಮಾತಾಡಿದಳು. 

ಓಲ್ಲಾ ಹೊರಗೆ ಹೋದಳು. ಪಿಯರೆ ಅಕ್ಕತಂಗಿಯರನ್ನೇ ನೋಡುತ್ತಾ 
ಸ್ವಲ್ಪ ಹೊತ್ತು ಅಲ್ಲೇ ನಿಂತ. ಆಮೇಲೆ ತಲೆಬಾಗಿಸಿ, ' ಹಾಗಾದರೆ , ನಾನು ನನ್ನ 
ರೂಮಿಗೆ ಹೋಗಿ ಇರುತ್ತೇನೆ. ಅವರನ್ನು ಯಾವಾಗ ನೋಡಬಹುದೋ ಆವಾಗ 
ಸ್ವಲ್ಪ ತಿಳಿಸುತೀರಾ' ಅಂದ. ಅವನು ಹೋದ. ತುಟಿಯಮೇಲೆ ಮಚ್ಚೆಯಿದ್ದ ತಂಗಿ 
ಮೆಲ್ಲಗೆ ನಗುವ ಸದ್ದು ಹಿಂದೆಯೇ ಸ್ಪಷ್ಟವಾಗಿ ಕೇಳಿಸಿತು. 
- ಮಾರನೆಯ ದಿನ ಪ್ರಿನ್ಸ್ ವ್ಯಾಸಿಲಿ ಬಂದು ಕೌಂಟ್‌ನ ಮನೆಯಲ್ಲಿ ವಾಸ್ತವ್ಯ 
ಹೂಡಿದ್ದ . ಪಿಯರೆಗೆ ಹೇಳಿಕಳುಹಿಸಿ ' ಮೈ ಡಿಯರ್ ಫೆಲೋ , ಪೀಟರ್ಸ್‌ಬರ್ಗಿನಲ್ಲಿ 
ಆಡಿದ ಹಾಗೆಯೇ ಇಲ್ಲಿಯೂ ಆಡಿದರೆ ಚೆನ್ನಾಗಿರಲ್ಲ. ಇಷ್ಟೇ ನಿನಗೆ ಹೇಳಬೇಕಾದದ್ದು. 
ಕೌಂಟ್‌ಗೆ ಆರೋಗ್ಯ ಚೆನ್ನಾಗಿಲ್ಲ. ಏನೇನೂ ಚೆನ್ನಾಗಿಲ್ಲ. ನೀನು ಕೌಂಟ್‌ನ 
ನೋಡಲೇಬಾರದು' ಅಂದಿದ್ದ. . 

ಆವಾಗಿನಿಂದ ಪಿಯರೆಯನ್ನು ಮಾತನಾಡಿಸಲು ಯಾರೂ ಬಂದಿರಲಿಲ್ಲ, 
ಅವನೂ ಮಹಡಿಯ ಮೇಲಿನ ಕೋಣೆಯಲ್ಲಿ ಒಬ್ಬನೇ ಕಾಲ ಕಳೆದಿದ್ದ. 

* ಬೋರಿಸ್ ಕೋಣೆಯ ಬಾಗಿಲಲ್ಲಿ ಕಾಣಿಸಿಕೊಂಡಾಗ ಪಿಯರೆ 
ರೂಮಿನೊಳಗೆ ಬೇಟೆಯ ಮೇಲೆರಗಲು ಹೊಂಚು ಹಾಕುವ ಹಾಗೆ ಆ ಕಡೆ ಈ 
ಕಡೆ ಹೆಜ್ಜೆ ಹಾಕುತ್ತಾ, ಮೂಲೆಗಳ ಹತ್ತಿರ ತಟ್ಟನೆ ನಿಂತು, ಅದೃಶ್ಯ ಶತ್ರುವನ್ನು 
ಕತ್ತಿಯಿಂದ ಇರಿಯುವವ ಹಾಗೆ ಭಯಹುಟ್ಟಿಸುವ ಭಂಗಿಯನ್ನು ತಾಳಿ ದಿಟ್ಟಿಸುತ್ತಾ, 
ಹಾಗೆ ಇರಿದು ಕೆಳಗೆ ಬಿದ್ದ ಶತ್ರುವನ್ನು ಕನ್ನಡಕದ ಅಂಚಿನಿಂದ ಕ್ರೂರವಾಗಿ 
ನೋಡಿ ಮತ್ತೆ ಅಸ್ಪಷ್ಟವಾಗಿ ಗೊಣಗುತ್ತಾ, ಭುಜ ಕೊಡವಿ , ಕೈ ಚಾಚಿ, ಮತ್ತೆ ಹೆಜ್ಜೆ 
ಹಾಕುತ್ತಾ ಇದ್ದ. 
* ಇಂಗ್ಲೆಂಡ್ ಕಥೆ ಮುಗಿಯಿತು,' ಸಿಟ್ಟಿನಿಂದ ಗುರುಗುಡುತ್ತಾ ಅಲ್ಲಿ ಯಾರೋ 
ಇದ್ದಾರೆ ಅನ್ನುವ ಹಾಗೆ ಬೆರಳು ತೋರುತ್ತಾ, ' ಮಿಸ್ಟರ್‌ ಪಿಟ್ ೨೪ ದೇಶಕ್ಕೆ 


ಸಂಪುಟ ೧ - ಸಂಚಿಕೆ ಒಂದು 
ದೋಹಮಾಡಿದ್ದಾನೆ , ಮನುಷ್ಯ ಕುಲವನ್ನು ವಂಚಿಸಿದ್ದಾನೆ. ಆದ್ದರಿಂದ ಅವನಿಗೆ...? 
ಶಿಕ್ಷೆಯನ್ನು ಘೋಷಿಸಲು ಆಗಲೇ ಇಲ್ಲ. ಪಿಯರೆಯು ಆ ಕ್ಷಣದಲ್ಲಿ , ಅಪಾಯಕಾರೀ 
ಡೋವರ್ ಕಡಲ್ಗಾಲುವೆ ದಾಟಿ ಪಾರಾಗಿ ಬಂದು, ಲಂಡನ್ನನ್ನು ಗೆದ್ದುಕೊಂಡು, 
ಮಿಸ್ಟರ್ ಪಿಟ್‌ಗೆ ಮರಣ ದಂಡನೆಯನ್ನು ಘೋಷಿಸುತ್ತಿರುವ ನೆಪೋಲಿಯನ್ನನ 
ವೀರ ವ್ಯಕ್ತಿತ್ವವೇ ತನ್ನದು ಎಂದುಕೊಂಡಿದ್ದ . ಮಾತು ಮುಗಿಸುವ ಮುನ್ನವೇ 
ಸದೃಢನಾದ ಯುವ ಸೈನ್ಯಾಧಿಕಾರಿಯೊಬ್ಬ ಕೋಣೆಯೊಳಕ್ಕೆ ಬರುತ್ತಿರುವುದನ್ನು 
ಕಂಡ, ಬೋರಿಸ್ ತಡೆದು ನಿಂತ. ಬೋರಿಸ್ ಇನ್ನೂ ಹದಿನಾಲ್ಕು ವರ್ಷದವನಾಗಿದ್ದಾಗ 
ಪಿಯರೆ ಅವನನ್ನು ನೋಡಿದ್ದು. ಈಗ ನೆನಪೇ ಇರಲಿಲ್ಲ. ಅವನ ಗುರುತು 
ಸಿಗಲಿಲ್ಲ. ಆದರೂ ಸ್ವಭಾವ ಸಹಜವಾಗಿ ಪ್ರೀತಿಯಿಂದ ಅವನ ಕೈ ಕುಲುಕಿ 
ಸ್ನೇಹದ ನಗೆ ಬೀರಿದ. 

'ನಾನು ಯಾರು, ನಿಮಗೆ ನನ್ನ ನೆನಪಿದೆಯೇ ?” ಶಾಂತವಾದ ಧ್ವನಿಯಲ್ಲಿ, 
ಹಿತವಾಗಿ ನಗುತ್ತಾ ಬೋರಿಸ್ ಕೇಳಿದ. 'ಕೌಂಟ್ ಅವರನ್ನು ಕಾಣಲು ಅಮ್ಮನ 
ಜೊತೆ ಬಂದಿದ್ದೆ. ಆದರೆ ಅವರ ಆರೋಗ್ಯ ಚೆನ್ನಾಗಿಲ್ಲ ಅಂತ ತಿಳಿಯಿತು.” 
- ' ಇಲ್ಲ. ಅವರಿಗೆ ಹುಷಾರಿಲ್ಲ. ಆದರೂ ಜನ ಬಂದು ಅವರಿಗೆ ತೊಂದರೆ 
ಕೊಡುತ್ತಲೇ ಇರುತ್ತಾರೆ' ಈ ಯುವಕ ಯಾರಿರಬಹುದು ಎಂದು ನೆನಪು 
ಮಾಡಿಕೊಳ್ಳಲು ಪ್ರಯತ್ನಪಡುತ್ತಾ ಪಿಯರೆ ಉತ್ತರಿಸಿದ. 

- ಪಿಯರೆಗೆ ತನ್ನ ಗುರುತು ಸಿಗಲಿಲ್ಲವೆಂದು ಬೋರಿಸ್‌ಗೆ ಗೊತ್ತಾಯಿತು. 
ಆದರೂ ತಾನು ಯಾರೆಂದು ಹೇಳಿಕೊಳ್ಳುವುದು ತನ್ನ ಕೆಲಸವಲ್ಲ ಅನ್ನಿಸಿತು. 
ಅದಕ್ಕೆ ಯಾವ ಇರಿಸುಮುರಿಸೂ ಇಲ್ಲದೆ ನೇರವಾಗಿ ಪಿಯರೆಯ ಮುಖವನ್ನೇ 
ದಿಟ್ಟಿಸಿದ. 
ಇರ ಬಹಳ ಹೊತ್ತು ಮೌನವಾಗಿದ್ದ . ಆ ಮೌನ ಪಿಯರೆಯಲ್ಲಿ ಚಡಪಡಿಕೆಯನ್ನು 
ಹುಟ್ಟಿಸಿತ್ತು. ಆಮೇಲೆ 'ಕೌಂಟ್ ರೋಸ್ಟೋವ್ ನಿಮ್ಮನ್ನು ಇವತ್ತು ರಾತ್ರಿ ಅವರ 
ಮನೆಗೆ ಊಟಕ್ಕೆ ಕರೆದಿದ್ದಾರೆ' ಅಂದ. 

- ' ಹಾಂ ! ಕೌಂಟ್ ರೋಸ್ಟೋವ್!' ಪಿಯರೆ ಆನಂದವಾಗಿ ಉದ್ದಾರ ಮಾಡಿದ. 
“ ಹಾಗಾದರೆ ನೀನು ಅವರ ಮಗ ಇಲ್ಯಾ ಇರಬೇಕಲ್ಲವಾ ? ಒಂದು ನಿಮಿಷ ನಿನ್ನ 
ಗುರುತೇ ಸಿಗಲಿಲ್ಲ ನೋಡು. ನಾವು ಚಿಕ್ಕವರಾಗಿದ್ದಾಗ ಮೇಡಂ ಜಾಳ್ವೆ ಜೊತೆಗೆ 
ಸ್ಥಾರೋ ಹಿಲ್‌ಗೆ ಹೋಗತಾ ಇದ್ದಿದ್ದು ಜ್ಞಾಪಕ ಇದೆಯಾ? ಎಷ್ಟು ವರ್ಷ 
ಆಗಿಹೋಯಿತು... ಪಿಯರೆ ಕೇಳಿದ. 


೨೪ ವಿಲಿಯಂ ಪಿಟ್ ( ೧೭೫೯ - ೧೮೦೬) ಇಂಗ್ಲೆಂಡಿನ ಪ್ರಧಾನ ಮಂತ್ರಿ, ಫ್ರೆಂಚ್ ಕ್ರಾಂತಿ ಮತ್ತು 

ನೆಪೋಲಿಯನ್‌ನನ್ನು ವಿರೋಧಿಸುತ್ತಿದ್ದವನು. 


eso 

ಯುದ್ಧ ಮತ್ತು ಶಾಂತಿ 
“ನೀವು ತಪ್ಪು ತಿಳಿದಿದ್ದೀರಿ' ಬೋರಿಸ್ ಸಣ್ಣದಾಗಿ ನಗುತ್ತಾ ನಿಧಾನವಾಗಿ, 
ಮಾತುಗಳನ್ನು ಒತ್ತಿ ಆಡಿದ, ' ನಾನು ಬೋರಿಸ್, ಪ್ರಿನ್ಸೆಸ್ ಅನ್ನಾ ಮಿಖಾಯೌವ್ವಾ 
ಅವರ ಮಗ, ಕೌಂಟ್ ರೋಸ್ಟೋವ್ದೊಡ್ಡವರು ಇದ್ದಾರಲ್ಲಾ ಅವರು ಇಲ್ಯಾ, 
ಅವರ ಮಗನ ಹೆಸರು ನಿಕೋಲಸ್ , ನನಗೆ ಯಾವ ಮೇಡಂ ಜಾಕ್ವೆಯೂ 
ಗೊತ್ತಿಲ್ಲ.' 
ಈ ಸೊಳ್ಳೆಗಳ ದಾಳಿಗೆ ಸಿಕ್ಕಿಬಿದ್ದವನ ಹಾಗೆ ಪಿಯರೆ ಮುಖದ ಮುಂದೆ ಕೈ 
ಆಡಿಸಿದ. 'ದೇವರೇ ! ನಾನೋ , ನನ್ನ ಯೋಚನೆಗಳೇ ! ಎಲ್ಲಾ ಬರೀ ಗೊಂದಲ . 
ಮಾಸ್ಕೋದಲ್ಲಿ ಎಷ್ಟೊಂದು ಜನ ನಂಟರು ಇದ್ದಾರೆ! ಹಾಗಾದರೆ ನೀನು ಬೋರಿಸ್ 
ಅನ್ನು , ಹೌದೌದು. ಈಗ ಗೊತ್ತಾಯಿತು. ಬುಲೋನ್೨೫ ಸಾಹಸದ ಬಗ್ಗೆ 
ನಿನಗೇನನ್ನಿಸುತ್ತದೆ? ನೆಪೋಲಿಯನ್ ಇಂಗ್ಲಿಷ್ ಚಾನಲ್ ದಾಟಿ ಹೋದರೆ ಸಾಕು. 
ಇಂಗ್ಲಿಷರು ಮಣ್ಣು ಮುಕ್ಕಿಬಿಡುತ್ತಾರೆ . ವಿನ್ನೂ ಇದ್ದಾನಲ್ಲ ಅವನು ಕೆಲಸ 
ಕೆಡಿಸಬಾರದು ಅಷ್ಟೆ!' ಅಂದ. 

ಬೋರಿಸ್‌ಗೆ ಬುಲೋನ್ ಅಕ್ರಮಣದ ಬಗ್ಗೆ ಏನೇನೂ ಗೊತ್ತಿರಲಿಲ್ಲ. 
ಅವನು ಪೇಪರುಗಳನ್ನು ಓದುತ್ತಿರಲಿಲ್ಲ, ವಿಲೆನ್ನೂ ಹೆಸರು ಕೇಳಿದ್ದು ಇದೇ 
ಮೊದಲು. ' ನಾವು ಇಲ್ಲಿ ಮಾಸ್ಕೋದಲ್ಲಿರುವವರು ಏನಿದ್ದರೂ ಡಿನ್ನರು, ಪಾರ್ಟಿ, 
ಗಾಸಿಪ್ಪು ಇವುಗಳಲ್ಲಷ್ಟೇ ಮುಳುಗಿರುವವರು, ರಾಜಕಾರಣಕ್ಕೂ ನಮಗೂ ದೂರ,' 
ಶಾಂತವಾಗಿ , ತಮಾಷೆ ಅನ್ನುವ ಹಾಗೆ ಹೇಳಿದ. ' ನನಗೆ ಅದೇನೂ ಗೊತ್ತಿಲ್ಲ, 
ಅದರ ಬಗ್ಗೆ ಯೋಚನೆ ಕೂಡ ಮಾಡಿಲ್ಲ. ಮಾಸ್ಕೋದ ಜನ ಗಾಳಿಸುದ್ದಿ 
ಕೇಳೋದರಲ್ಲೇ ಮುಳುಗಿರುತ್ತಾರೆ. ಈಗ ಸದ್ಯಕ್ಕೆ ಏನಿದ್ದರೂ ನಿಮ್ಮ , ಮತ್ತೆ ಕೌಂಟ್ 
ಅವರ ಕಾಯಿಲೆಯ ವಿಚಾರ ಅಷ್ಟೆ' ಅಂದ. 

ಪಿಯರೆ ತನ್ನ ಸ್ನೇಹಪೂರ್ಣ ನಗೆ ಬೀರುತ್ತಿದ್ದ . ಈ ಹುಡುಗ ಏನಾದರೂ 
ಹೇಳಿಬಿಟ್ಟು ಆಮೇಲೆ ಅಂಥ ಮಾತಾಡಬಾರದಾಗಿತ್ತು ಎಂದು ಎಲ್ಲಿ ಒದ್ದಾಡುವನೋ 
ಅನ್ನುವ ಆತಂಕವಿತ್ತು ಅವನಿಗೆ. ಆದರೆ ಬೋರಿಸ್ ಪಿಯರೆಯ ಕಣ್ಣುಗಳಲ್ಲೇ 
ದೃಷ್ಟಿ ಇಟ್ಟು ಸ್ಪಷ್ಟವಾಗಿ , ಖಚಿತವಾಗಿ , ನಿರ್ಲಿಪ್ತವಾದ ಧ್ವನಿಯಲ್ಲಿ 
ಮಾತನಾಡುತ್ತಿದ್ದ . ' ಗಾಸಿಪ್ಪು ಬಿಟ್ಟರೆ ಮಾಸ್ಕೋದಲ್ಲಿ ಮಾಡುವುದಕ್ಕೆ ಬೇರೆ ಏನೂ 
ಕೆಲಸ ಇಲ್ಲ. ಕೌಂಟ್ ಇನ್ನೂ ನೂರು ಕಾಲ ಬದುಕಿರಬಹುದು, ಆದರೂ ತಮ್ಮ 
ಆಸ್ತಿ ಅವರು ಯಾರ ಹೆಸರಿಗೆ ಮಾಡಬಹುದು ಅಂತ ಊಹೆಮಾಡತಾ ಇದಾರೆ. 


೨೫ ಇಂಗ್ಲಿಶ್ ಕಡಲ್ಗಾಲುವೆಯ ದಡದ ಮೇಲಿನ ಒಂದು ಸ್ಥಳ. 
೨೬ ಅಡ್ಮಿರಲ್ ಪಿಯರೆ ಚಾರ್ಲ ಡಿ ವಿಲೆನ್ಯೂ ( ೧೭೬೩ - ೧೮೦೬) ನೆಪೋಲಿಯನ್‌ನ ನೌಕಾಪಡೆಯ 

ಮುಖ್ಯಸ್ಥ, ಮೆಡಿಟರೇನಿಯನ್ ಸಾಗರದಲ್ಲಿದ್ದವನನ್ನು ಇಂಗ್ಲೆಂಡಿಗೆ ಕರೆಸಿದ ನೆಪೋಲಿಯನ್. 
ಟ್ರಫಾಲ್ಗರ್‌ ಯುದ್ಧದಲ್ಲಿ ನೆಪೋಲಿಯನ್‌ನ ನೌಕಾಪಡೆ ನಾಶವಾಯಿತು. 


೮೧ 


ಸಂಪುಟ ೧ - ಸಂಚಿಕೆ ಒಂದು 
ಬೇಜಾರಾಗತದೆ, ಅವರು ಬೇಗ ಹುಷಾರಾಗಲಿ ಅನ್ನೋದೇ ನನ್ನ ಆಸೆ...'. 

- `ಹೌದು, ತುಂಬಾ ಟೆರಿಬಲ್ ' ಅಂದ ಪಿಯರೆ. ಆ ಯುವಕ 
ಕಸಿವಿಸಿಯಾಗುವಂಥದ್ದೇನನ್ನೋ ಹೇಳಿಬಿಡುತ್ತಾನೆ ಅನ್ನುವ ಆತಂಕ ಪಿಯರೆಯ 
ಮನಸ್ಸಿನಲ್ಲಿ ಇನ್ನೂ ಇತ್ತು. 
ಅ 'ನಿಮ್ಮ ತಂದೆಯವರಿಂದ ಏನಾದರೂ ಕಿತ್ತುಕೊಳ್ಳೋದಕ್ಕೆ ಎಲ್ಲರೂ ಬರುತಾ 
ಇದಾರೆ ಅಂತ ನಿಮಗೆ ಅನ್ನಿಸಬಹುದು,' ಸ್ವಲ್ಪ ನಾಚುತ್ತಾ, ಆದರೆ ಮಾತಿನ 
ದಾಟಿಯನ್ನಾಗಲೀ ಧೋರಣೆಯನ್ನಾಗಲೀ ಬದಲಾಯಿಸದೆ, ಬೋರಿಸ್ ಹೇಳಿದ. 

' ಖಂಡಿತ ಹೌದು' ಅಂದುಕೊಂಡ ಪಿಯರೆ. 

'ಮೊದಲೇ ಹೇಳಿಬಿಡತೇನೆ, ನೀವು ತಪ್ಪು ತಿಳಿಯಬಾರದು ಅಂತ, ನನ್ನನ್ನೂ 
ಅಮ್ಮನನ್ನೂ ಅಂಥವರ ಸಾಲಿಗೆ ಸೇರಿಸಿದರೆ ತುಂಬ ತಪ್ಪು ಮಾಡಿದಹಾಗಾಗುತದೆ. 
ನಾವು ತೀರ ಬಡವರು, ನಿಜ . ಆದರೆ ನಾನು - ನನ್ನ ಮಟ್ಟಿಗೆ ಹೇಳತಾ ಇದೇನೆ, 
ನಿಮ್ಮ ತಂದೆಯವರು ಶ್ರೀಮಂತರಾಗಿದ್ದರೂ ನಾನು ಅವರ ಸಂಬಂಧಿಕ 
ಅಂದುಕೊಳ್ಳೋದಿಲ್ಲ. ನಾನಾಗಲಿ, ನಮ್ಮ ತಾಯಿ ಆಗಲೀ ಅವರನ್ನು ಏನೂ 
ಕೇಳೋದಿಲ್ಲ, ಅವರಿಂದ ಏನೂ ತೆಗೆದುಕೊಳ್ಳೋದೂ ಇಲ್ಲ' ಅಂದ ಬೋರಿಸ್, 
ದ ಅವನೇನು ಹೇಳುತ್ತಿದ್ದಾನೆಂದು ತಿಳಿಯುವುದಕ್ಕೆ ಪಿಯರೆಗೆ ಸ್ವಲ್ಪ ಹೊತ್ತು 
ಬೇಕಾಯಿತು. ಅರ್ಥವಾದಾಗ, ಸೋಫಾದಿಂದ ತಟ್ಟನೆ ಧುಮುಕಿ, ಮಾಮೂಲು 
ಲಗುಬಗೆಯಿಂದ ಬೋರಿಸ್‌ನ ತೋಳು ಹಿಡಿದು , ಅವನಿಗಿಂತ ಹೆಚ್ಚಾಗಿ 
ನಾಚಿಕೊಳ್ಳುತ್ತಾ, ಸ್ವಲ್ಪ ಕಸಿವಿಸಿ, ಸ್ವಲ್ಪ ಸಿಡುಕು ಬೆರೆತ ಧ್ವನಿಯಲ್ಲಿ ಹೇಳಿದ. 
ಈ 'ವಿಚಿತ್ರ ಅಲ್ಲವಾ ? ಹಾಗಂದುಕೊಳ್ಳುತ್ತೇನೆ ಅಂತ ಅನ್ನಿಸುತ್ತಾ...ಅಂದರೆ, 
ಯಾರು ತಾನೇ ಹಾಗೆ...ನನಗೆ ಗೊತ್ತು...' 

ಬೋರಿಸ್ ಮತ್ತೆ ಅವನ ಮಾತನ್ನು ತಡೆದ. ಕೈಯಲ್ಲಿರೋ ಎಲೆಗಳನ್ನೆಲ್ಲ 
ಟೇಬಲ್ಲಿನ ಮೇಲೆ ಇಟ್ಟುಬಿಟ್ಟಿದ್ದೇನೆ ಅಂತ ಸಂತೋಷವಾಗತಾ ಇದೆ. ನಿಮಗೆ ಇಷ್ಟ 
ಆಗದೆ ಇರಬಹುದು, ದಯವಿಟ್ಟು ಕ್ಷಮಿಸಿಬಿಡಿ' ಅನ್ನುತ್ತಾ ಪಿಯರೆ ತನ್ನನ್ನು 
ಸಮಾಧಾನ ಮಾಡುವ ಬದಲಾಗಿ ತಾನೇ ಪಿಯರೆಯನ್ನು ಸಂತೈಸಿದ, ' ನನ್ನ 
ಮಾತಿನಿಂದ ನಿಮಗೆ ಬೇಸರವಾಗಲಿಲ್ಲ ತಾನೇ ? ಯಾವಾಗಲೂ ಅಷ್ಟೇ , ಇದ್ದದ್ದು 
ಇದ್ದ ಹಾಗೆ ಹೇಳಿಬಿಡತೇನೆ....ಸರಿ , ಅಂದ ಹಾಗೆ ರೋಸ್ಟೋವ್ ಅವರಿಗೆ ಏನು 
ಹೇಳಲಿ ? ಅವರ ಮನೆಗೆ ಊಟಕ್ಕೆ ಬರುತೀರಿ ತಾನೇ ?' ಮನಸ್ಸಿನಲ್ಲಿದ್ದ ದೊಡ್ಡ 
ಭಾರವನ್ನು ಇಳಿಸಿ, ತಾನು ಸಿಕ್ಕಿಕೊಂಡಿದ್ದ ಇಕ್ಕಟ್ಟಿನಿಂದ ಪಾರಾಗಿ , ಮತ್ತೊಬ್ಬರನ್ನು 
ಅದರಲ್ಲಿ ಸಿಕ್ಕಿಸಿದ್ದರಿಂದ ಮತ್ತೆ ಸಂತೋಷಚಿತ್ತನಾದ. 
ಆ ' ತಾಳು, ತಾಳು, ಪಿಯರೆ ಸುದಾರಿಸಿಕೊಂಡು ಹೇಳಿದ. “ನೀನು ಎಲ್ಲಾರ 
ಹಾಗೆ ಅಲ್ಲ. ಈಗ ಹೇಳಿದೆಯಲ್ಲ, ಚೆನ್ನಾಗಿ ಹೇಳಿದೆ . ತುಂಬ ಚೆನ್ನಾಗಿ! ನಿನಗೆ 


೮೨ 


ಯುದ್ಧ ಮತ್ತು ಶಾಂತಿ 
ನಾನು ಗೊತ್ತಿಲ್ಲಾ ಅನ್ನೂ , ನಾವು ಒಬ್ಬರನ್ನ ಒಬ್ಬರು ನೋಡಿ ಯಾವ 
ಕಾಲವಾಯಿತೋ ... ಯಾವುದೋ ಯುಗದಲ್ಲಿ ನೋಡಿದ್ದು. ಮಕ್ಕಳಾಗಿದ್ದಾಗ 
ನೋಡಿದ್ದು ಬಿಟ್ಟರೆ ಮತ್ತೆ ಕಂಡೇ ಇಲ್ಲ ... ಏನಂದುಕೊಳ್ಳುತೀಯೋ 
ಏನೋ ... ನಾನು....ಗೊತ್ತು, ಗೊತ್ತು...ನಾನು ಹಾಗೆ ಹೇಳೋದಕ್ಕೆ ಆಗತಾ ಇರಲಿಲ್ಲ . 
ಸೈಂಡಿಡ್! ನಿನ್ನನ್ನ ನೋಡಿದ್ದು ಖುಷಿ ಆಯಿತು' ಅಂದವನು ಸ್ವಲ್ಪ ತಡೆದು 
“ ನನ್ನಿಂದ ಏನು ನಿರೀಕ್ಷೆ ಮಾಡಿದ್ದೆಯೋ ಏನೋ , ಒಳ್ಳೇ ತಮಾಷೆ!” ಅನ್ನುತ್ತಾ 
ಜೋರಾಗಿ ನಕ್ಕ . “ ಏನಾಯಿತೀಗ! ಇನ್ನು ಮೇಲೆ ಚೆನ್ನಾಗಿ 
ಪರಿಚಯಮಾಡಿಕೊಳ್ಳೋಣವಂತೆ, ಆಗಬಹುದಾ ?' ಅನ್ನುತ್ತಾ ಬೋರಿಸ್‌ನ ಕೈ 
ಕುಲುಕಿದ. 'ನಿನಗೆ ಗೊತ್ತಾ, ನಾನು ಇನ್ನೂ ಒಂದು ಸಾರಿಯೂ ಕೌಂಟ್ ಅವರನ್ನು 
ಭೇಟಿ ಮಾಡೋದಕ್ಕೆ ಆಗೇ ಇಲ್ಲ...ಅವರು ಹೇಳಿ ಕಳುಹಿಸಿಲ್ಲ. ಅವರ ಬಗ್ಗೆ 
ಅಯ್ಯೋ ಪಾಪ ಅನ್ನಿಸುತ್ತದೆ. ಸರಿ, ಏನು ಮಾಡುವುದಕ್ಕಾಗುತ್ತದೆ , ಹೇಳು?” 

- ಇರಲಿ ಬಿಡಿ. ನೆಪೋಲಿಯನ್ ಸೈನ್ಯ ತೆಗೆದುಕೊಂಡು ಕಡಲ್ಗಾಲುವೆ ದಾಟುತಾನೆ 
ಅನ್ನುತ್ತೀರಾ?' ನಗುತ್ತಾ ಬೋರಿಸ್ ಕೇಳಿದ. 
ಆ ಬೋರಿಸ್ ಮಾತು ಬದಲಾಯಿಸಲು ನೋಡುತ್ತಿದ್ದಾನೆ ಅಂತ ಪಿಯರೆ 
ಅರ್ಥಮಾಡಿಕೊಂಡ. ಅವನಿಗೂ ಅದೇ ಬೇಕಾಗಿತ್ತು. ಬೊಲೋನ್ ಆಕ್ರಮಣದ 
ಒಳ್ಳೆಯ ಅಂಶ ಕೆಟ್ಟ ಅಂಶಗಳನ್ನು ವಿವರಿಸಲು ಶುರುಮಾಡಿದ. 
.. ಬೋರಿಸ್‌ನನ್ನು ಕರೆದುಕೊಂಡು ಹೋಗಲು ಸೇವಕನೊಬ್ಬ ಬಂದ. ಪ್ರಿನ್ಸೆಸ್ 
ಹೊರಡಲು ಸಿದ್ಧವಾಗಿದ್ದಳು. ಬೋರಿಸ್‌ನ ಜೊತೆ ಮತ್ತಷ್ಟು ಹೊತ್ತು ಕಳೆಯಬಹುದು, 
ಅದಕ್ಕೇ ತಾನು ರಾತ್ರಿಯ ಊಟಕ್ಕೆ ರೋಸ್ಟೋವ್ ಅವರ ಮನೆಗೆ ಬರುತ್ತೇನೆ 
ಎಂದು ಪಿಯರೆ ಮಾತುಕೊಟ್ಟ, ಬೆಚ್ಚಗೆ ಸ್ನೇಹದಿಂದ ಅವನ ಕೈ ಕುಲುಕುತ್ತಾ 
ಕನ್ನಡಕದ ಒಳಗಿಂದ ಬೋರಿಸ್‌ನ ಮುಖವನ್ನು ಪ್ರೀತಿ ತುಂಬಿ ನೋಡಿದ. 
* ಬೋರಿಸ್ ಹೋದಮೇಲೂ ಪಿಯರೆ ಸ್ವಲ್ಪ ಹೊತ್ತು ರೂಮಿನಲ್ಲಿ ಒಬ್ಬನೇ 
ಅಡ್ಡಾಡಿದ. ಆದರೆ ಕಾಣದ ಶತ್ರುವನ್ನು ಇರಿಯುವ ಬದಲಾಗಿ ಖುಶಿ ತುಂಬಿದ, 
ಚತುರನಾದ, ಆತ್ಮ ವಿಶ್ವಾಸ ತುಂಬಿದ ಯುವಕ ಬೋರಿಸ್‌ನ ನೆನಪುಮಾಡಿಕೊಳ್ಳುತ್ತಾ, 
ತನಷ್ಟಕೆ ತಾನೇ ನಗುತ್ತಾ ಹೆಜ್ಜೆ ಹಾಕಿದ. 

ಯುವಕರಿಗೆ , ಅದರಲ್ಲೂ ಒಂಟಿ ಜೀವನ ಸಾಗಿಸುತ್ತಿರುವ ಯುವಕರಿಗೆ 
ಅನ್ನಿಸುವ ಹಾಗೆ ಪಿಯರೆಗೂ ಕೂಡ ಈ ಯುವಕ ಬೋರಿಸ್‌ನ ಬಗ್ಗೆ ವಿಚಿತ್ರವಾದ 
ಸ್ನೇಹ ಭಾವನೆ ಮೂಡಿತು . ಅವನ ಸ್ನೇಹ ಬೆಳೆಸಿಕೊಳ್ಳಬೇಕು ಅಂತ 
ಮನಸ್ಸುಮಾಡಿಕೊಂಡ. 

ಪ್ರಿನ್ಸ್ ವ್ಯಾಸಿಲಿ ಅನ್ನಾ ಮಿಖಾಲ್ಲೋವ್ಯಾಳನ್ನು ಕಳಿಸಿಕೊಡಲು ಬಂದ. 
ಅವಳು ಕರ್ಚಿಫನ್ನು ಕಣ್ಣಿಗೊತ್ತಿಕೊಂಡಿದ್ದಳು. ಕಣ್ಣಲ್ಲಿ ನೀರು ತುಂಬಿತ್ತು. 'ಭಯ 


ಸಂಪುಟ ೧ - ಸಂಚಿಕೆ ಒಂದು 
ಆಗುತ್ತಪ್ಪಾ, ನಿಜವಾಗಲೂ ಭಯ ಆಗುತ್ತೆ! ಖರ್ಚಿಗೆ ಯೋಚನೆಮಾಡಬೇಡ. 
ನನ್ನ ಕರ್ತವ್ಯ ನಾನು ಮಾಡುತ್ತೇನೆ. ರಾತ್ರಿಗೆ ಇಲ್ಲೇ ಬಂದು ಇರುತ್ತೇನೆ. ಅವರನ್ನ 
ಹೀಗೆ ಒಂಟಿಯಾಗಿ ಬಿಡಬಾರದು. ಒಂದೊಂದು ನಿಮಿಷಾನೂ ಮುಖ್ಯ . ಸೊಸೆಯರು 
ಏನಕ್ಕೆ ಕಾಯುತ್ತಿದ್ದಾರೋ ಗೊತ್ತಾಗುತ್ತಿಲ್ಲ. ದೇವರು ಮನಸ್ಸು ಮಾಡಿದರೆ ಕೌಂಟ್ 
ಅವರನ್ನು ಒಪ್ಪಿಸಿ ಸಿದ್ಧಮಾಡುತೇನೆ. ಹೋಗಿ ಬರುತ್ತೇನೆ, ಪ್ರಿನ್ಸ್, ದೇವರು ಒಳ್ಳೆಯದು 
ಮಾಡಲಿ' ಅಂದಳು. 

'ಹೋಗಿ ಬನ್ನಿ , ಒಳ್ಳೆಯದಾಗಲಿ' ಬೆನ್ನು ತಿರುಗಿಸುತ್ತಾ ಪ್ರಿನ್ಸ್ ವ್ಯಾಸಿಲಿ 


ಅಂದ, 


' ಅವನ ಸ್ಥಿತಿ ತೀರ ಹದಗೆಟ್ಟಿದೆ' ಸಾರೋಟಿನಲ್ಲಿ ಕೂತಾಗ ತಾಯಿ ಮಗನಿಗೆ 
ಹೇಳಿದಳು. 'ಕೌಂಟ್ ಈಗ ಯಾರನ್ನೂ ಗುರುತು ಹಿಡೀತಾ ಇಲ್ಲ' ಅಂದಳು. 

' ಮಮ್ಮಾ, ಪಿಯರೆ ಬಗ್ಗೆ ಅವರು ಯಾಕೆ ಹಾಗೆ? ನನಗಂತೂ ತಿಳೀಲಿಲ್ಲ' 
ಅಂದ ಬೋರಿಸ್ , 

“ಕೌಂಟ್ ಬರೆದಿರುವ ವಿಲ್ ನೋಡಿದಾಗ ಗೊತ್ತಾಗುತ್ತದೆ, ಮಗಾ, ನಮ್ಮ 
ಹಣೇ ಬರಹವೂ ಅವರ ವಿಲ್ ನೋಡಿದಾಗ ಗೊತ್ತಾಗತದೆ...' 
ಈ “ಅಮ್ಮಾ, ಅವರು ನಮ್ಮ ಹೆಸರಿಗೆ ಏನಾದರೂ ಬಿಟ್ಟು ಹೋಗಬಹುದು 
ಅಂತ ಯಾಕೆ ಅಂದುಕೊಂಡಿದ್ದೀಯಾ?' 

“ ಅವರು ಅಷ್ಟು ಶ್ರೀಮಂತರು , ನಾವು ಇಷ್ಟು ಬಡವರು!” 
“ ಅಷ್ಟಕ್ಕೇ ಆಸ್ತಿ ಕೊಟ್ಟುಬಿಡುತಾರಾ, ಅಮ್ಮಾ ?' 

'ಅಯ್ಯೋ ! ಎಷ್ಟೊಂದು ಕಾಯಿಲೆ ಆಗಿದೆಯಪ್ಪಾ ಅವರಿಗೆ!” ತಾಯಿ ರಾಗ 
ತೆಗೆದಳು. 


- ಅನ್ನಾ ಮಿಖಾಯೇವಾ ಬೋರಿಸ್‌ನ ಜೊತೆಗೆ ಕೌಂಟ್ ಕಿರಿಲ್ 
ಬೆಝುಕೋವ್‌ನನ್ನು ನೋಡಲು ಹೋದಮೇಲೆ ಕೌಂಟೆಸ್ ರೋಸ್ಕೋವಾ 
ಕರ್ಚಿಫನ್ನು ಕಣ್ಣಿಗೊತ್ತಿಕೊಂಡು ಬಹಳ ಹೊತ್ತುಸುಮ್ಮನೆ ಕುಳಿತಿದ್ದಳು. ಕೊನೆಗೊಮ್ಮೆ 
ಕರೆಗಂಟೆ ಬಾರಿಸಿದಳು. 

'ಏನು ಮಾಡತಾ ಇದ್ದೆ ಹುಡುಗೀ ?' ಕೆಲವು ನಿಮಿಷ ಕಾಯುವ ಹಾಗೆ 
ಮಾಡಿದ ಕೆಲಸದವಳ ಮೇಲೆ ರೇಗಿಕೊಂಡಳು . ' ನನ್ನ ಹತ್ತಿರ ಕೆಲಸ ಮಾಡಬೇಕು 
ಅಂತ ಇದೀಯೋ ಇಲ್ಲವೋ ? ನಿನ್ನನ್ನ ತೆಗೆದುಹಾಕಿ ಬೇರೆಯವರನ್ನು 
ಇಟ್ಟುಕೊಳ್ಳುತ್ತೇನೆ ನೋಡು' ಅಂದಳು. 

ಗೆಳತಿಯ ದುಃಖ ಮತ್ತು ಅಪಮಾನಕರವಾದ ಬಡತನದ ಕಥೆಯನ್ನು 
ಕೇಳಿ ಕೌಂಟೆಸ್ ರೋಸ್ಕೋವಾಳ ಮನಸ್ಸು ಕೆಟ್ಟಿತ್ತು. ಹಾಗೆ ಮನಸ್ಸು ಕೆಟ್ಟಾಗಲೆಲ್ಲ 


ಯುದ್ಧ ಮತ್ತು ಶಾಂತಿ 
ಸೇವಕಿಯರನ್ನು ' ಏ ಹುಡುಗಿ ' ಅಂತಲೋ ' ಏ , ನೀನು' ಅಂತಲೋ 
ಮಾತನಾಡಿಸುವುದು ಅವಳ ಅಭ್ಯಾಸವಾಗಿತ್ತು. 

'ಸಾರಿ, ಮ್ಯಾಮ್' ಅಂದಳು ಸೇವಕಿ . 
“ಹೋಗಿ, ಕೌಂಟ್ ಅವರನ್ನು ಬರುವುದಕ್ಕೆ ಹೇಳು' ಕೌಂಟೆಸ್ ಆಜ್ಞೆಮಾಡಿದಳು. 

ಕೌಂಟ್ ತನ್ನ ದೇಹವನ್ನು ಅತ್ತಿತ್ತ ಒನೆದಾಡಿಸಿಕೊಂಡು, ಮುಖದ ಮೇಲೆ 
ಎಂದಿನಂತೆ ತಪ್ಪಿತಸ್ಥ ಭಾವವನ್ನು ಹೊತ್ತುಕೊಂಡು ಕೌಂಟೆಸ್‌ಳ ಬಳಿಗೆ ಬಂದ. 

- ' ಪುಟ್ಟ ಮಹಾರಾಣೀ , ಏನು ಸಮಾಚಾರ ? ಎಂಥಾ ರುಚಿ ಇತ್ತು ಅನ್ನುತ್ತೀ . 
ಸ್ವಲ್ಪ ಬಾಯಿಗೆ ಹಾಕಿಕೊಂಡು ನೋಡಿದೆ. ಬೆಣ್ಣೆ ಹಾಕಿ ಹುರಿದದ ಮಾಡೀ 
ಮಾಡಿದ್ದ . ಮಜವಾಗಿತ್ತು. ಟಾರಸ್‌ಗೆ ಸಾವಿರ ರೂಬಲ್ ಕೊಟ್ಟರೂ ಕಾಸಿಗೆ 
ಮೋಸ ಇಲ್ಲ!' 

ಹೆಂಡತಿಯ ಪಕ್ಕದಲ್ಲಿ ಕುಳಿತ. ಮೊಳಕಾಲಿನ ಮೇಲೆ ಮೊಳಕೈಗಳನ್ನು 
ಊರಿಕೊಂಡು ನೆರೆಕೂದಲು ಕೈಯಾಡಿಸಿಕೊಂಡ. 'ಏನಪ್ಪಣೆ, ಪುಟ್ಟ ಮಹಾರಾಣೀ ?” 
ಅಂದ. 

- ' ಇಲ್ಲಿ ಕೇಳಿ...' ತಟ್ಟನೆ ಮಾತು ನಿಲ್ಲಿಸಿ, “ಇದೇನು ಮಾಡಿಕೊಂಡು ಬಂದಿದ್ದೀರಿ?' 
ಕೌಂಟ್‌ನ ವೇಸ್‌ಕೋಟಿನ ಮೇಲಾಗಿದ್ದ ಕಲೆಯನ್ನು ತೋರಿಸುತ್ತಾ ಕೌಂಟೆಸ್ 
ಕೇಳಿದಳು. ' ಬೆಣ್ಣೆ ಹಾಕಿದ ಮಾಡ್ರಿಯನ್ನ ನಿಮ್ಮ ಕೋಟಿಗೂ ತಿನ್ನಿಸಿದ್ದೀರಿ' ಎಂದು 
ನಗುತ್ತಾ 'ನೋಡಿ, ನನಗೆ ಸ್ವಲ್ಪ ದುಡ್ಡು ಬೇಕಾಗಿತ್ತು' ಅಂದಳು. ಅವಳ ಮುಖ 
ವಿಷಾದಕ್ಕೆ ತಿರುಗಿತು. 

- “ಓ , ಅಷ್ಟೇನೆ ಪುಟ್ಟ ರಾಣೀ !' ಎನ್ನುತ್ತಾ ಜೇಬಿನಿಂದ ಪಾಕೆಟ್ ಬುಕ್ಕು 
ತೆಗೆಯುವುದಕ್ಕೆ ಹೊರಟ. 
- 'ಇಲ್ಲ, ಇಲ್ಲ! ಕೌಂಟ್, ತುಂಬಾ ದುಡ್ಡು ಬೇಕು - ಐದು ನೂರು ರೂಬೆಲ್' 
ಅನ್ನುತ್ತಾ ತನ್ನ ಕ್ಯಾಂಬ್ರಿಕ್ ಕರ್ಚಿಫನ್ನು ತೆಗೆದುಕೊಂಡು ಗಂಡನ ವೇಸ್‌ಕೋಟು 
ಉಜ್ಜಿದಳು. 

- 'ಇಗೋ , ಈಗಲೇ ಕೊಟೆ! ಯಾರಿದ್ದೀರಿ ಅಲ್ಲಿ ?” ತಮ್ಮ ಮಾತಿಗೆ ಬೆಲೆಕೊಟ್ಟು 
ಸೇವಕರು ಓಡೋಡಿ ಬರುತ್ತಾರೆ ಅನ್ನುವುದನ್ನು ಖಚಿತವಾಗಿ ತಿಳಿದಿರುವವರ 
ಧ್ವನಿಯಲ್ಲಿ ಕೂಗಿದ. ಹಾಗೆ ಬಂದ ಆಳಿಗೆ ' ಮಿತೆಂಕಾನ ಬರುವುದಕ್ಕೆ ಹೇಳು' 
ಅಂದ. 

ಮಿತೆಂಕಾ ಒಳ್ಳೆಯ ಮನೆತನದಿಂದ ಬಂದವನು, ಚಿಕ್ಕಂದಿನಿಂದ ಕೌಂಟ್‌ನ 
ಮನೆಯಲ್ಲೇ ಬೆಳೆದು ಈಗ ಅವನ ಎಲ್ಲ ವ್ಯವಹಾರ ನೋಡಿಕೊಳ್ಳುತ್ತಿದ್ದವನು, 
ಮೆಲ್ಲಗೆ ಹೆಜ್ಜೆ ಇಡುತ್ತಾ ಕೋಣೆಯೊಳಕ್ಕೆ ಬಂದ. 

'ಬಂದೆಯಾ...ನೋಡು ತಮ್ಮಾ ...ಸ್ವಲ್ಪ ದುಡ್ಡು ಬೇಕು....' ಕೊಂಚ ತಡೆದು, 


೮೫ 
ಸಂಪುಟ ೧ - ಸಂಚಿಕೆ ಒಂದು 
“ ಹೂಂ ...ಏಳುನೂರು ರೂಬೆಲ್ ತೆಗೆದುಕೊಂಡು ಬಾ . ಹಾಂ , ಏಳು ನೂರು...ಜ್ಞಾಪಕ 
ಇರಲಿ, ಹೋದ ಸಾರಿ ತಂದುಕೊಟ್ಟಂಥ ಹಳೆಯ ನೋಟುಬೇಡ, ಗರಿಗರಿಯಾಗಿ 
ಹೊಸದಾಗಿರುವ ನೋಟು ತೆಗೆದುಕೊಂಡು ಬಾ ' ಮೈಯ ತುಂಬ ಗೌರವ 
ಹೊತ್ತು ನಿಂತಿದ್ದ ಯುವಕನಿಗೆ ಕೌಂಟ್ ಹೇಳಿದ, > 
- 'ಹೌದು, ಮಿತೆಂಕಾ , ನೋಟು ಹೊಸವು ಬೇಕು' ಕೌಂಟೆಸ್ ಮಂಕಾಗಿ 
ನಿಟ್ಟುಸಿರು ಬಿಡುತ್ತಾ ಹೇಳಿದಳು . 

- ' ಯಾವಾಗ ಬೇಕು, ಯುವರ್ ಎಕ್ಸಲೆನ್ಸಿ ?' ದಿಮಿತ್ರಿ ಕೇಳಿದ . ' ಯಾಕೆ 
ಹೇಳುತ್ತಿದ್ದೇನೆಂದರೆ...' ಕೌಂಟ್ ಜೋರಾಗಿ ಏದುಸಿರು ಬಿಡುತ್ತಿರುವುದನ್ನು ಕಂಡು, 
ಅದು ಕೋಪದ ಲಕ್ಷಣವೆಂದು ತಿಳಿದು, ' ಇಲ್ಲ, ಕೋಪ ಮಾಡಿಕೊಳ್ಳಬೇಡಿ... 
ಮರೆತುಬಿಟ್ಟಿದ್ದೆ . ಈಗಲೇ ತಂದುಕೊಡಲೇ ?” ಅಂದ. 

“ ಹಾಂ , ಅಷ್ಟು ಮಾಡು! ದುಡ್ಡು ತಂದು ಕೌಂಟೆಸ್ ಕೈಗೆ ಕೊಡು.' 

ಅವನು ಹೋದಮೇಲೆ ' ಮಿತೆಂಕಾ ಎಂಥ ಅದ್ಭುತ ಮನುಷ್ಯ ಆಗೋದಿಲ್ಲ 
ಅನ್ನುವ ಮಾತೇ ಇಲ್ಲ ಅವನ ಹತ್ತಿರ. ಆಗೋದಿಲ್ಲ ಅನ್ನುವವರನ್ನು ಕಂಡರೆ 
ನನಗಾಗುವುದಿಲ್ಲ. ಎಲ್ಲವೂ ಸಾಧ್ಯ, ಅಸಾಧ್ಯ ಯಾವುದೂ ಇಲ್ಲ!' ಅಂದ ಕೌಂಟ್. 

“ ದುಡ್ಡು, ದುಡ್ಡು, ದುಡ್ಡು. ಜಗತ್ತಿನಲ್ಲಿ ಎಲ್ಲಾ ಕಷ್ಟಕ್ಕೂ ದುಡ್ಡ ಕಾರಣ, 
ಕೌಂಟ್ ನನಗಂತೂ ಈಗ ಈ ದುಡ್ಡು ಬೇಕೇ ಬೇಕು' ಅಂದಳು ಕೌಂಟೆಸ್. 

ತೆಗೆದುಕೋ ಪುಟ್ಟ ರಾಣಿ! ನೀನು ನೀರಿನ ಹಾಗೆ ದುಡ್ಡು ಖರ್ಚುಮಾಡುತೀ 
ಅನ್ನೋದು ಎಲ್ಲರಿಗೂ ಗೊತ್ತು' ಅನ್ನುತ್ತಾ ಕೌಂಟ್ ಹೆಂಡತಿಯ ಕೈಗೆ ಮುತ್ತಿಟ್ಟು 
ತನ್ನ ಸ್ಪಡಿಗೆ ಹೋಗಿಬಿಟ್ಟ. 
- ಅನ್ನಾ ಮಿಖಾಯೌವ್ವಾ ಕೌಂಟ್ ಬೆಝುಕೋವ್ನ ಮನೆಯಿಂದ 
ವಾಪಸ್ಸಾದಾಗ ಕೌಂಟೆಸ್ ಗರಿ ಗರಿಯಾದ ನೋಟುಗಳನ್ನು ಪುಟ್ಟ ಮೇಜಿನ 
ಮೇಲೆ, ಕರ್ಚಿಫಿನ ಕೆಳಗೆ ಇಟ್ಟುಕೊಂಡು ಕೂತಿದ್ದಳು. ಗೆಳತಿಯ ಮನಸ್ಸು 
ಯಾಕೋ ಕೆರಳಿ ಕಸಿವಿಸಿಗೊಂಡಿದೆ ಅನ್ನಿಸಿತು ಅನ್ನಾ ಮಿಖಾಲ್ಲೋವ್ಯಾಳಿಗೆ , 

'ಹೋದಕೆಲಸ ಏನಾಯಿತು?' ಕೌಂಟೆಸ್ ಕೇಳಿದಳು. 

' ಓ , ಅವನನ್ನು ನೋಡಿ ಎಂಥಾ ಭಯ ಆಯಿತು ಅನ್ನುತ್ತೀ ? ಗುರುತೇ 
ಸಿಕ್ಕಲಿಲ್ಲ, ಅಷ್ಟು ಸೊರಗಿ ಹೋಗಿದ್ದಾನೆ! ತುಂಬಾ ಖಾಯಿಲೆ, ತುಂಬಾ... ಸ್ವಲ್ಪ 
ಹೊತ್ತು ಇದ್ದೆ ಅಷ್ಟೆ, ಏನೂ ಮಾತಾಡಲಿಲ್ಲ...' 

- 'ದೇವರ ಮೇಲೆ ಆಣೆ, ಆನ್, ಬೇಡ ಅನ್ನಬಾರದು...” ತಡೆದುಕೊಳ್ಳಲಾಗದೆ 
ದಡಕ್ಕನೆ ಕೌಂಟೆಸ್‌ ನಾಚಿ ಕೆಂಪಾಗುತ್ತಾ ಹೇಳಿಬಿಟ್ಟಳು. ಅವಳ ವಯಸ್ಸಾದ ಶ್ರೀಮಂತ 
ಮುಖದ ಮೇಲೆ ನಾಚಿಕೆ ಬಹಳ ವಿಚಿತ್ರವಾಗಿ ಕಾಣುತ್ತಿತ್ತು. ಕರ್ಚಿಫಿನ ಕೆಳಗಿನಿಂದ 
ದುಡ್ಡು ತೆಗೆದಳು. 


ಯುದ್ಧ ಮತ್ತು ಶಾಂತಿ 
ಅನ್ನಾ ಮಿಖಾಯ್ಲೆಟ್ನಾಗೆ ತಕ್ಷಣ ಗೊತ್ತಾಯಿತು. ಸರಿಯಾದ ಸಮಯದಲ್ಲಿ 
ಅವಳನ್ನು ಅಪ್ಪಿಕೊಳ್ಳುವುದಕ್ಕೆ ಸಿದ್ದವಾಗಿ ಮುಂದೆ ಬಾಗಿದಳು . 

'ಇದು ನಿನ್ನ ಬೋರಿಸ್‌ಗೆ ನಾನು ಕೊಡುತ್ತಿರುವ ಉಡುಗೊರೆ, ಅವನ 
ಹೊಸ ಬಟ್ಟೆಬರೆಗೆ' ಕೌಂಟೆಸ್ ಹೇಳಿದಳು. 

ಅನ್ನಾ ಮಿಖಾಯೌವ್ಹಾಳ ತೋಳು ಅವಳನ್ನು ಬಳಸಿತ್ತು. ಅಳುತ್ತಿದ್ದಳು. 
ಕೌಂಟೆಸ್ ಕಣ್ಣಿನಲ್ಲೂ ನೀರು ಬಂದಿತು. ತಮ್ಮ ಗೆಳೆತನದ ಕಾರಣಕ್ಕೆ ಅತ್ತರು; 
ಅವರ ಹೃದಯ ಮೃದುವೆಂಬ ಕಾರಣಕ್ಕೆ ಅತ್ತರು; ಚಿಕ್ಕಂದಿನಿಂದ ಗೆಳೆಯರಾಗಿದ್ದವರು 
ಈಗ ಹಣದಂಥ ಕುದ್ರ ಸಂಗತಿಯ ಬಗ್ಗೆ ಯೋಚನೆ ಮಾಡಬೇಕಾಯಿತಲ್ಲಾ 
ಎಂದು ಅತ್ತರು; ತಮ್ಮ ಕಳೆದು ಹೋದ ಯೌವನದ ಕಾರಣದಿಂದ ಅತ್ತರು...ಅಳು 
ಇಬ್ಬರಿಗೂ ಹಿತವಾಗಿತ್ತು. 

- ೧೫ || 
ಕೌಂಟೆಸ್ ರೋಸ್ಕೋವಾ ಹೆಣ್ಣುಮಕ್ಕಳನ್ನೂ ಕರೆದುಕೊಂಡು ಬಂದು ಆಗಲೇ 
ಡ್ರಾಯಿಂಗ್ ರೂಮಿನಲ್ಲಿ ಕುಳಿತಿದ್ದಳು. ಅತಿಥಿಗಳೂ ಆಗಲೇ ಬಂದಿದ್ದರು. ಕೌಂಟ್ 
ಗಂಡಸರನ್ನು ಸ್ವಡಿ ರೂಮಿಗೆ ಕರೆದುಕೊಂಡು ಹೋಗಿ ತಾನು ಟರ್ಕಿಯಿಂದ 
ತರಿಸಿದ್ದ ಅತ್ಯುತ್ತಮ ಪೈಪುಗಳ ಸಂಗ್ರಹವನ್ನು ತೋರಿಸುತ್ತಿದ್ದ. ಆಗಾಗ ಹೊರಗೆ 
ಹೋಗಿ“ ಆಕೆ ಇನ್ನೂ ಬಂದಿಲ್ಲವೇ ?' ಎಂದು ಕೇಳಿಕೊಂಡು ಬರುತ್ತಿದ್ದ . ಎಲ್ಲರೂ 
ಮಾರಿಯಾ ದ್ವಿತ್ರಿಯೆನ್ನಾ ಅಖೋಸಿಮೊವಾಳ ನಿರೀಕ್ಷೆಯಲ್ಲಿದ್ದರು. ಭಯಹುಟ್ಟಿಸುವ 
ಡ್ರಾಗನ್ ಎಂದೇ ಆಕೆ ಸಮಾಜದಲ್ಲಿ ಪ್ರಸಿದ್ದಳಾಗಿದ್ದಳು. ಅಂತಸ್ತು ಅಥವಾ 
ಶ್ರೀಮಂತಿಕೆಯ ಕಾರಣಕ್ಕಲ್ಲ ಚುರುಕು ಬುದ್ದಿ ಮತ್ತು ನೇರ ಮಾತಿನ ಕಾರಣಕ್ಕೆ 
ಪ್ರಸಿದ್ಧಳಾಗಿದ್ದ ಹೆಂಗಸು ಅವಳು. ರಾಜವಂಶದವರೊಡನೆ ಹೊಕ್ಕು ಬಳಕೆ ಇದ್ದವಳು, 
ಮಾಸ್ಕೋ ಮತ್ತು ಪೀಟರ್ಸ್‌ಬರ್ಗಿನಲ್ಲಿದ್ದವರಿಗೆಲ್ಲಾ ಗೊತ್ತಿದ್ದವಳು. ಎರಡೂ ಊರಿನ 
ಜನ ಅವಳ ಬಗ್ಗೆ ಆಶ್ಚರ್ಯಪಡುತ್ತಿದ್ದರು, ಹಾಗೆಯೇ ಅವಳ ಬೆನ್ನ ಹಿಂದೆ 
ಆಡಿಕೊಂಡು ನಗುತ್ತಿದ್ದರು, ಕಥೆ ಕಟ್ಟುತ್ತಿದ್ದರು. ಆದರೂ ಅವಳ ಬಗ್ಗೆ ಗೌರವ , 
ಭಯ ಇಟ್ಟುಕೊಳ್ಳದಿದ್ದವರು ಯಾರೂ ಇರಲಿಲ್ಲ. 

ಕೌಂಟ್‌ನ ಹೊಗೆ ತುಂಬಿಕೊಂಡ ಕೋಣೆಯಲ್ಲಿ ಯುದ್ಧದ ಬಗ್ಗೆ ಮಾತು 
ನಡೆಯುತ್ತಿತ್ತು. ಆಗ ತಾನೇ ಹೊರಬಿದ್ದಿದ್ದ ಘೋಷಣಾ ಪತ್ರದಲ್ಲಿ ಯುದ್ದ 
ಆರಂಭವಾಗಿರುವ ಬಗ್ಗೆ , ಸೈನ್ಯಕ್ಕೆ ಜನರನ್ನು ಸೇರಿಸಿಕೊಳ್ಳುವ ಬಗ್ಗೆ ಪ್ರಕಟಣೆಯಾಗಿತ್ತು. 
ಅದನ್ನು ಯಾರೂ ನೋಡಿರದಿದ್ದರೂ ಅದು ಪ್ರಕಟವಾಗಿದ್ದು ಎಲ್ಲರಿಗೂ ಗೊತ್ತಿತ್ತು. 
ಕೌಂಟ್ ಮೆತ್ತೆ ಇರುವ ದುಂಡು ಸ್ಕೂಲಿನ ಮೇಲೆ ಕೂತಿದ್ದ . ಅವನ ಎರಡೂ 
ಬದಿಯಲ್ಲಿ ಇಬ್ಬರು ಅತಿಥಿಗಳು ಪೈಪು ಸೇದುತ್ತಾ ಮಾತಾಡುತ್ತಿದ್ದರು. ಅವನು 
ಪೈಪೂ ಸೇದುತ್ತಿರಲಿಲ್ಲ, ಮಾತೂ ಆಡುತ್ತಿರಲಿಲ್ಲ. ಅಕ್ಕ ಪಕ್ಕ ಇದ್ದವರನ್ನು ಮಾತಿಗೆ 


ಸಂಪುಟ ೧ - ಸಂಚಿಕೆ ಒಂದು 
ಎತ್ತಿಕಟ್ಟಿ, ಒಮ್ಮೆ ಇತ್ತ ತಿರುಗಿ, ಒಮ್ಮೆ ಅತ್ತ ತಿರುಗಿ, ಅವರು ಖುಷಿಯಾಗಿ ವಾದ 
ಮಾಡುವುದನ್ನು ನೋಡುತ್ತಾ ಆನಂದಪಡುತ್ತಿದ್ದ . 

ಅವರಲ್ಲಿ ಒಬ್ಬಾತ ಬಿಳಿಚಿಕೊಂಡ ಮೈಯ, ನೀಟಾಗಿ ಕ್ಷೌರಮಾಡಿಕೊಂಡ, 
ತೆಳ್ಳನೆಯ ಗೆರೆಬಿದ್ದ ಮುಖದ ನಾಗರಿಕ, ಆಗಲೇ ವಯಸ್ಸಾಗಿದ್ದರೂ ಯುವಕರು 
ತೊಡುವಂಥ ಇತ್ತೀಚಿನ ಫ್ಯಾಶನ್ನಿನ ಉಡುಪು ತೊಟ್ಟಿದ್ದ . ಎರಡೂ ಕಾಲು ಮಡಿಸಿ 
ಸೋಫಾದಮೇಲಿಟ್ಟುಕೊಂಡು ತನ್ನ ಮನೆಯಲ್ಲೇ ಕೂತಿರುವವನ ಹಾಗೆ ಆರಾಮವಾಗಿ 
ಕೂತಿದ್ದ . ಕಿತ್ತಳೆ ಬಣ್ಣದ ಪೈಪು ಬಾಯಲ್ಲಿಟ್ಟುಕೊಂಡು ಆಗಾಗ ಆಳವಾಗಿ ಹೊಗೆ 
ಎಳೆದುಕೊಳ್ಳುತ್ತಾ , ಕಣ್ಣುಗಳನ್ನು ಕಿರಿದುಮಾಡಿಕೊಂಡು ನೋಡುತ್ತಾ ಇದ್ದ. ಅವನು 
ಶಿನ್‌ಶಿನ್ , ವಯಸ್ಸು ಮೀರಿದ್ದ ಬ್ರಹ್ಮಚಾರಿ , ಕೌಂಟೆಸ್‌ಗೆಸೋದರಿಕೆಯ ಸಂಬಂಧ. 
ಮಾಸ್ಕೋದಸೊಸೈಟಿಯಲ್ಲಿ 'ಹರಿತ ನಾಲಗೆ' ಯ ಆಸಾಮಿ ಅಂತಲೇ ಪ್ರಸಿದ್ಧನಾಗಿದ್ದ . 
ತನ್ನೊಡನೆ ಮಾತನಾಡುತ್ತಿದ್ದವನ ಮೇಲೆ ಅನುಗ್ರಹದ ದೃಷ್ಟಿ ಬೀರುವವನ ಹಾಗೆ 
ಕುಳಿತಿದ್ದ . ಹಾಗೆ ಮಾತನಾಡುತ್ತಿದ್ದವನು ಗಾರ್ಡ್ ದಳದಲ್ಲಿ ಆಫೀಸರನಾಗಿದ್ದ 
ಹೊಸ ಯೌವನದ ಕೆಂಪು ಮುಖದ ಯುವಕ. ಚೆನ್ನಾಗಿ ಸ್ನಾನಮಾಡಿ ಕುಂದಿಲ್ಲದ 
ಹಾಗೆ ಅಲಂಕಾರ ಮಾಡಿಕೊಂಡು, ಯೂನಿಫಾರಮ್ಮಿನ ಗುಂಡಿಗಳನ್ನೆಲ್ಲ ಅಚ್ಚುಕಟ್ಟಾಗಿ 
ಹಾಕಿಕೊಂಡು, ಕೆಂಪು ತುಟಿಗಳ ನಡುವೆ ಪೈಪನ್ನು ಹಿಡಿದು ಹಗುರವಾಗಿ ಹೊಗೆ 
ಎಳೆದುಕೊಂಡು ಧೂಮ ವರ್ತುಲಗಳನ್ನು ರಚಿಸುತ್ತಾ ಕೂತಿದ್ದ . ಅವನು ಲೆಫ್ಟಿನೆಂಟ್ 
ಬೆರ್ಗ್ , ಸೆಮೆನೊವ್ ರೆಜಿಮೆಂಟಿನಲ್ಲಿದ್ದ; ಬೋರಿಸ್ ಅವನ ಜೊತೆಯಲ್ಲೇ ಹೊರಟು 
ಸೈನ್ಯಕ್ಕೆ ಸೇರಬೇಕಾಗಿತ್ತು. ವೇರಾಳನ್ನು ಮದುವೆಯಾಗುವ ಗಂಡು ಎಂದು ನತಾಶಾ 
ತಮಾಷೆ ಮಾಡಿದ್ದಳಲ್ಲಾ, ಅವನೇ ಇವನು. ಶಿನ್ಶಿನ್ ಮತ್ತು ಬೆರ್ಗ್ ಇಬ್ಬರ 
ನಡುವೆ ಕುಳಿತಿದ್ದ ಕೌಂಟ್ ಮೈಯೆಲ್ಲಾ ಕಿವಿ ಮಾಡಿಕೊಂಡು ಅವರ ಮಾತು 
ಕೇಳುತ್ತಿದ್ದ . ಕೌಂಟ್‌ಗೆ ಬೋಸ್ಟನ್ ಇಸ್ಪೀಟು ಆಟವಾಡುವುದು ಇಷ್ಟ. ಅದು ಬಿಟ್ಟರೆ 
ಇಬ್ಬರು ಮಾತುಗಾರರನ್ನು ಎತ್ತಿಕಟ್ಟಿ ಅವರ ಮಾತು ಕೇಳುತ್ತಾ ಕೂರುವುದು ಇಷ್ಟ. 

'ಸರಿಯಯ್ಯಾ ಮಹಾನುಭಾವಾ' ಶಿನ್‌ಶಿನ್ ವ್ಯಂಗ್ಯವಾಗಿ ನಗುತ್ತಾ ಹೇಳಿದ, 
ಸೈನ್ಯಕ್ಕೆ ಸೇರಿ ಸರ್ಕಾರದ ದುಡ್ಡು ಕೀಳಬೇಕು ಅಂತ ಇದ್ದೀಯೇನು?” ಶಿನ್ಶಿನ್ 
ಸಾಮಾನ್ಯವಾದ ರಶಿಯನ್ ಮಾತಿನ ಜೊತೆಗೆ ಅಪರೂಪದ ಫ್ರೆಂಚ್ ನುಡಿಗಟ್ಟು 
ಸೇರಿಸಿ ಮಾತನಾಡುತ್ತಿದ್ದ . ಅವನ ಮಾತೇ ಹಾಗೆ, 

- ' ಇಲ್ಲ ಸಾರ್, ಇನ್‌ಫ್ಯಾಂಟ್ರಿಯಲ್ಲಿ ಅವಕಾಶ ಜಾಸ್ತಿ , ಅಶ್ವದಳದಲ್ಲಿ ಕಡಿಮೆ 
ಅಂತ ತೋರಿಸಿಕೊಡಬೇಕು ಅಂತಿದ್ದೇನೆ. ಈಗ ನನ್ನನ್ನೇ ನೋಡಿ...' ಬೆರ್ಗ್ 
ಯಾವಾಗಲೂ ನಿಧಾನವಾಗಿ , ಸೌಜನ್ಯದಿಂದ, ಖಚಿತವಾಗಿ ಮಾತನಾಡುತ್ತಿದ್ದ. 
ಅವನು ಮಾತಾಡುವುದಕ್ಕೆ ಇದ್ದದ್ದು ಒಂದೇ ವಿಷಯ - ಅದು ತಾನು ನೇರವಾಗಿ 
ತನಗೇ ಸಂಬಂಧಪಡದ ವಿಷಯದ ಬಗ್ಗೆ ಮಾತು ನಡೆಯುತ್ತಿದ್ದರೆ ಅಲಾಯಿದವಾಗಿ 


೮೮ 


ಯುದ್ಧ ಮತ್ತು ಶಾಂತಿ 
ಸುಮ್ಮನೆ ಇದ್ದುಬಿಡುತ್ತಿದ್ದ . ಯಾರಿಗೂ ಮುಜುಗರ ಆಗದ ಹಾಗೆ, ತನಗೂ 
ಕಿರಿಕಿರಿ ಆಗದ ಹಾಗೆ ಗಂಟೆಗಟ್ಟಲೆ ಸುಮ್ಮನೆ ಇರುವ ಶಕ್ತಿ ಇತ್ತು ಅವನಿಗೆ, ತನಗೆ 
ಒಂದಿಷ್ಟಾದರೂ ಸಂಬಂಧಪಟ್ಟಿರುವ ವಿಷಯ ಮಾತಿಗೆ ಬಂದರೆ ಪರಮ 
ಸಂತೋಷದಿಂದ ವಿವರವಾಗಿ ಮಾತಿಗೆ ಇಳಿಯುತ್ತಿದ್ದ. 

“ನೋಡಿ ಶಿನ್‌ಶಿನ್, ನಾನು ಅಶ್ವದಳದಲ್ಲಿದ್ದಿದ್ದರೆ, ಲೆಫ್ಟಿನೆಂಟ್ ಆಗಿದ್ದರೂ 
ಕೂಡ, ನಾಲ್ಕು ತಿಂಗಳಿಗೆ ಇನ್ನೂರು ರೂಬೆಲ್ ಬರುತ್ತಾ ಇತ್ತು. ಈಗ ತಿಂಗಳಿಗೇನೇ 
ಇನ್ನೂರ ಮೂವತ್ತು ಬರುತಾ ಇದೆ ನನಗೆ' ಶಿನ್ಶಿನ್‌ನನ್ನೂ ಕೌಂಟ್‌ನನ್ನೂ 
ನೋಡುತ್ತಾ, ಖುಶಿಯಾಗಿ ನಗುತ್ತಾ ತನಗೆ ದಕ್ಕಿದ ಯಶಸ್ಸು ಮಿಕ್ಕವರಿಗೂ ಸಂತೋಷ 
ತಂದೇ ತರುತ್ತದೆ ಅನ್ನುವ ವಿಶ್ವಾಸದಲ್ಲಿ ವಿವರಿಸಿದ. ಅಲ್ಲದೆ, ನೋಡಿ, ನಾನು ಈಗ 
ಗಾರ್ಡ್ ಗೆ ವರ್ಗವಾಗಿರುವುದರಿಂದ ಎಲ್ಲರ ಕಣ್ಣಿಗೂ ಎದ್ದು ಕಾಣುತೇನೆ, ಪುಟ್ 
ಗಾರ್ಡ್‌ನಲ್ಲಿ ಎಷ್ಟೋ ಹುದ್ದೆಗಳು ಖಾಲಿ ಇವೆ. ಮತ್ತೆ, ಇನ್ನೂರ ಮೂವತ್ತು 
ರೂಬೆಲ್ ಬಂದರೆ ಏನೇನೆಲ್ಲ ಮಾಡಬಹುದು ನೋಡಿ! ದುಡ್ಡು ಉಳಿಸಬಹುದು, 
ಮನೆಗೆ , ಅಪ್ಪನಿಗೆ ದುಡ್ಡು ಕಳಿಸಬಹುದು' ಅನ್ನುತ್ತಾ ಉಂಗುರ ಉಂಗುವಾಗಿ 
ಹೊಗೆ ಬಿಟ್ಟ. 
ಈ ' ಅಲ್ಲಿಗೆ ಸಮಾ ಆಯತು...ನಮ್ಮಲ್ಲಿ ಗಾದೆ ಇದೆಯಲ್ಲಾ, ಜರ್ಮನಿಯವನು 
ಕಲ್ಲಿನ ಸಿಪ್ಪೆಯನ್ನೂ ಸುಲಿಯುತಾನೆ ಅಂತ' ಬಾಯಿಯೊಳಗಿದ್ದ ಪೈಪನ್ನು ಇನ್ನೊಂದು 
ಬದಿಗೆ ಇಟ್ಟುಕೊಳ್ಳುತ್ತಾ ಕೌಂಟ್‌ನನ್ನು ನೋಡಿಕಣ್ಣು ಹೊಡೆದು ಶಿನ್‌ಶಿನ್ ಹೇಳಿದ. 
- ಕೌಂಟ್ ಗಹಗಹಿಸಿ ನಕ್ಕ . ಶಿನ್ಶಿನ್ ಮಾತಿನ ಸಾರಥ್ಯ ವಹಿಸಿದ್ದಾನೆ ಅನ್ನುವುದು 
ಗೊತ್ತಾಗಿ ಇನ್ನೂ ಕೆಲವು ಅತಿಥಿಗಳು ಮಾತು ಕೇಳುವುದಕ್ಕೆ ಅಲ್ಲಿಗೆ ಬಂದರು. 
ಲೇವಡಿಯನ್ನಾಗಲೀ ಉದಾಸೀನವನ್ನಾಗಲೀ ಮನಸ್ಸಿಗೇ ತಂದುಕೊಳ್ಳದೆ ಬೆರ್ಗ್ 
ದಡಬಡ ಮಾತಾಡುತ್ತಲೇ ಇದ್ದ - ತಾನು ಗಾರ್ಡ್‌ಗೆ ವರ್ಗಾವಣೆಯಾದ್ದರಿಂದ 
ಕೆಡೆಟ್ ಕಾರ್ಪ್ನಲ್ಲಿರುವ ಗೆಳೆಯರಿಗಿಂತ ಹೇಗೆ ಒಂದು ಹೆಜ್ಜೆ ಮುಂದಿದ್ದೇನೆ; 
ಯುದ್ಧದ ಸಮಯದಲ್ಲಿ ಕಂಪೆನಿ ಕಮಾಂಡರ್ ಎಷ್ಟು ಸುಲಭವಾಗಿ ಸಾಯಬಹುದು, 
ಹಾಗೆ ಸತ್ತರೆ ಸೀನಿಯರ್ ಆಗಿರುವ ತಾನೇ ಸುಲಭವಾಗಿ ಆ ಹುದ್ದೆಗೆ ಏರಬಹುದು, 
ಇಡೀ ರೆಜಿಮೆಂಟಿನಲ್ಲಿ ತಾನು ಎಷ್ಟು ಜನಪ್ರಿಯ; ಅಪ್ಪನಿಗೆ ತನ್ನನ್ನು ಕಂಡರೆ ಎಷ್ಟು 
ಖುಷಿ...ಉಬ್ಬುಬ್ಬಿ ಹೇಳಿಕೊಳ್ಳುತ್ತಾ ಬೆರ್ಗ್ ಖುಶಿಪಡುತ್ತಿದ್ದ . ಬೇರೆಯವರಿಗೆ ಬೇರೆ 
ವಿಷಯಗಳಲ್ಲಿ ಆಸಕ್ತಿ ಇರಬಹುದು ಅನ್ನುವುದು ಅವನಿಗೆ ಹೊಳೆಯುತ್ತಲೇ 
ಇರಲಿಲ್ಲವೇನೋ . ಆದರೆ ಅವನು ಹೇಳುವುದೆಲ್ಲ ಎಷ್ಟು ಸಂತೋಷತರುತ್ತಿತ್ತು , 
ಅವನು ವಯಸ್ಸಿಗೆ ಮೀರಿ ಅದೆಷ್ಟು ಬೆಳೆದಿದ್ದ, ಅವನ ಯುವ ಅಹಂಕಾರ, 
ಚಾತುರ್ಯ ಎಷ್ಟು ಎದ್ದು ಕಾಣುತ್ತಿತ್ತು ಅಂದರೆ ಕೇಳುವವರೆಲ್ಲ ಸುಮ್ಮನೆ 
ಕೈಚೆಲ್ಲಿಬಿಡುತ್ತಿದ್ದರು. 


೮೯ 


ಸಂಪುಟ ೧ - ಸಂಚಿಕೆ ಒಂದು 

' ಸರಿಯಪ್ಪಾ ಸರಿ, ಅಶ್ವದಳಕ್ಕಾದರೂ ಸೇರು, ಪದಾತಿ ದಳಕ್ಕಾದರೂ ಸೇರು. 
ನೀನಂತೂ ಮುಂದೆ ಬರುತೀಯೆ, ಬರೆದಿಟ್ಟುಕೋ ಬೇಕಾದರೆ' ಅನ್ನುತ್ತಾ ಶಿನ್ಶಿನ್ 
ಬೆರ್ಗ್ನ ಭುಜ ತಟ್ಟಿ ಸೋಫಾದಿಂದ ಕಾಲು ಇಳಿಸಿದ. ಬೆರ್ಗ್ ಖುಶಿಯ ನಗು 
ಬೀರಿದ, ಕೌಂಟ್ ಮತ್ತು ಎಲ್ಲ ಅತಿಥಿಗಳು ಗುಂಪಾಗಿ ದಿವಾನಖಾನೆಗೆ ಹೊರಟರು. 

ಅದು ಎಂಥ ಹೊತ್ತೆಂದರೆ ಅತಿಥಿಗಳು ಔತಣದ ಕರೆಬರುವುದೆಂದು 
ಕಾಯುತ್ತಿರುವುದರಿಂದಲೇ ಯಾವುದೇ ಗಹನವಾದ ವಿಚಾರವನ್ನು ಚರ್ಚೆಗೆ 
ಎತ್ತಿಕೊಳ್ಳದೆ, ಆದರೂ ತಾವೇನೂ ಊಟಕ್ಕಾಗಿಯೇ ಕಾದಿಲ್ಲ ಅಂತ ತೋರಿಸಿಕೊಳ್ಳುವ 
ಹಾಗೆ ಅಲ್ಲಲ್ಲೇ ಸುಳಿದಾಡುತ್ತಾ, ಹಗುರವಾಗಿ ಹರಟೆಹೊಡೆಯುತ್ತಿರುವಂಥ ಹೊತ್ತು; 
ಆತಿಥೇಯರು ಆಗಾಗ ಬಾಗಿಲತ್ತ ದೃಷ್ಟಿ ಹಾಯಿಸುತ್ತಾ ಆಗಾಗ ಪರಸ್ಪರ ಮುಖ 
ನೋಡಿಕೊಳ್ಳುತ್ತಾ ಇರುವ ಹೊತ್ತು; ಅದನ್ನು ಕಂಡ ಅತಿಥಿಗಳು ಊಟಕ್ಕೆ 
ಅಡ್ಡಿಯಾಗಿರುವುದು ಏನು, ಅಥವಾ ಯಾರು - ಬಹಳ ಮುಖ್ಯವಾದ ನಂಟರು 
ಯಾರಾದರೂ ಬರುವುದು ತಡವಾಗಿದೆಯೋ , ಅಥವಾ ಯಾವುದಾದರೂ ಭಕ್ಷ 
ತಯಾರಾಗುವುದು ತಡವಾಗಿದೆಯೋ ಎಂದು ಊಹೆ ಮಾಡುತ್ತಾ ಇರುವಂಥ 
ಹೊತ್ತು. 
- ಪಿಯರೆಊಟದ ಹೊತ್ತಿಗೆ ಸರಿಯಾಗಿ ಬಂದಿದ್ದ. ದಿವಾನಖಾನೆಯ ನಟ್ಟ 
ನಡುವೆ, ಮೊದಲು ಕಾಣಿಸಿದ ಖಾಲಿ ಕುರ್ಚಿಯಲ್ಲಿ ಎಲ್ಲರಿಗೂ ಅಡಚಣೆಯಾಗುವ 
ಹಾಗೆ ಮೈಚೆಲ್ಲಿಕೊಂಡು ಕೂತುಬಿಟ್ಟಿದ್ದ. ಕೌಂಟೆಸ್ ಅವನನ್ನು ಮಾತಿಗೆಳೆಯುವುದಕ್ಕೆ 
ನೋಡಿದಳು. ಆದರೆ ಪೆದ್ದು ಪೆದ್ದಾಗಿ , ಯಾರನ್ನೋ ಹುಡುಕುತ್ತಿರುವವನ ಹಾಗೆ, 
ಕನ್ನಡಕದ ಮೂಲಕ ಸುತ್ತಲೂ ದೃಷ್ಟಿ ಹಾಯಿಸುತ್ತಾ ಎಲ್ಲ ಪ್ರಶ್ನೆಗೂ ಒಂದೊಂದೇ 
ಮಾತಿನ ಉತ್ತರ ಕೊಡುತ್ತಾ ಕೂತಿದ್ದ. ಎಲ್ಲರಿಗೂ ಕಸಿವಿಸಿಯಾಗುತ್ತಿದ್ದರೂ ಅದು 
ಅವನೊಬ್ಬನಿಗೆ ಮಾತ್ರ ತಿಳಿಯಲಿಲ್ಲ. ಅಲ್ಲಿದ್ದ ಬಹಳ ಜನಕ್ಕೆ ಕರಡಿಯ ಪ್ರಸಂಗ 
ಗೊತ್ತಿದ್ದರಿಂದ ಈ ದೊಡ್ಡ ಗಾತ್ರದ , ಸ್ಕೂಲವಾದ ಮೈಯ, ನಿರಪಾಯಕಾರಿಯಾಗಿ 
ಕಾಣುವ ಪಿಯರೆಯನ್ನು ನೋಡುತ್ತ ತಡಬಡಾಯಿಸುವ, ಕಪಟವಿಲ್ಲದ ಈತ 
ಅದು ಹೇಗೆ ಪೋಲೀಸನನ್ನು ಗೋಳುಹೊಯ್ದುಕೊಂಡಿರಬಹುದು ಎಂದು 
ಆಶ್ಚರ್ಯಪಡುತ್ತಿದ್ದರು. 

' ಯಾವಾಗ ಬಂದದ್ದು ? ಈಗಷ್ಟೇ ಬಂದಿರಾ ?' ಕೌಂಟೆಸ್ ಕೇಳಿದಳು . 
' ಹೌದು, ಮೇಡಮ್.' 
“ನಮ್ಮ ಯಜಮಾನರನ್ನು ಮಾತಾಡಿಸಿದಿರಾ ?”. 
' ಇಲ್ಲ, ಮೇಡಮ್' ಅನ್ನುತ್ತಾ ನಕ್ಕ . ಆ ಹೊತ್ತಿಗೆ ಹಾಗೆ ನಕ್ಕದ್ದು ಸರಿಹೋಗಲಿಲ್ಲ. 
' ಪ್ಯಾರಿಸ್‌ನಲ್ಲಿದ್ದೀರಂತೆ? ಹೇಗೆ, ಊರು ಚೆನ್ನಾಗಿದೆ ಅಲ್ಲವಾ ?' 
“ ಹೌದು.' 


೯೦ 

ಯುದ್ಧ ಮತ್ತು ಶಾಂತಿ 
ಕೌಂಟೆಸ್ ಮತ್ತು ಅನ್ನಾ ಮಿಖಾಯ್ಲೆಟ್ನಾರ ನಡುವೆ ನೋಟಗಳ ವಿನಿಮಯ 
ನಡೆಯಿತು. ಈ ಹುಡುಗನನ್ನು ವಶಕ್ಕೆ ತೆಗೆದುಕೊ ಎಂದು ತನಗೆ ಹೇಳುತ್ತಿದ್ದಾಳೆ 
ಅನ್ನುವುದು ಅನ್ನಾ ಮಿಖಾಯ್ಲೆಟ್ನಾಗೆ ಕಂಡಿತು. ಅದಕ್ಕೇ ಪಿಯರೆಯ ಪಕ್ಕದಲ್ಲಿ 
ಕೂತು ಅವನ ತಂದೆಯ ಬಗ್ಗೆ ಮಾತು ತೆಗೆದಳು . ಪಿಯರೆ ಮತ್ತೆ ಒಂದೊಂದೇ 
ಮಾತಿನ ಉತ್ತರ ಕೊಡುವುದಕ್ಕೆ ಶುರುಮಾಡಿದ. ಮಿಕ್ಕವರೆಲ್ಲ ತಮ್ಮ ತಮ್ಮಲ್ಲಿ 
ಮಾತನಾಡಿಕೊಳ್ಳುತ್ತಿದ್ದರು. 'ರಾಝುಮೊವ್ಸ್ಕಿನ್ ಮನೆಯಲ್ಲಿ.... ಬಹಳ 
ಚೆನ್ನಾಗಿತ್ತಲ್ಲವಾ...ನಿಮ್ಮದು ಬಹಳ ದೊಡ್ಡ ಮನಸ್ಸು...ಕೌಂಟೆಸ್‌ ಅಪ್ರಾಕ್ಸಿನಾ 
ಇದ್ದಾರಲ್ಲಾ ....ಇಂಥ ಮಾತುಗಳು ಸುತ್ತಲಿನಿಂದ ಬರುತ್ತಿದ್ದವು. ಕೌಂಟೆಸ್ ಎದ್ದು 
ಬಾಲ್‌ರೂಮಿಗೆ ಹೋದಳು. 

' ಮಾರಿಯಾ ದಿತ್ರಿಯೇಟ್ನಾ?' ಅಲ್ಲಿಂದಲೇ ಅವಳು ಕೇಳಿದ್ದು ಕಿವಿಗೆ ಬೀಳುತ್ತಿತ್ತು. 
'ಹೌದು, ಅವಳೇ ' ಒರಟು ಹೆಂಗಸಿನ ಧ್ವನಿ ಕೇಳಿಸಿತು, ಮಾರಿಯಾ ದ್ವಿತ್ರಿಯೇಟ್ನಾ 
ಕೋಣೆಗೆ ನಡೆದು ಬಂದಳು. ಮದುವೆಯಾಗದಿರುವ ಹುಡುಗಿಯರು, ತೀರ 
ವಯಸ್ಸಾದವರನ್ನು ಬಿಟ್ಟು ಮದುವೆಯಾಗಿದ್ದ ಹೆಂಗಸರು ಕೂಡಎದ್ದು ನಿಂತರು. 
ಮಾರಿಯಾ ದ್ವಿತ್ರಿಯೇಟ್ನಾ ಬಾಗಿಲಲ್ಲೆ ಸ್ವಲ್ಪ ಹೊತ್ತು ನಿಂತಳು. ಗುಂಗುರು ಬಿಳಿಗೂದಲ 
ತಲೆಯನ್ನು ಎತ್ತಿ ಅತಿಥಿಗಳನ್ನೆಲ್ಲ ನೋಡಿದಳು. ಐವತ್ತು ವಯಸ್ಸಿನ ಸ್ಫೂಲಕಾಯದ 
ಹೆಂಗಸು. ತೊಟ್ಟಿದ್ದ ಗೌನಿನ ಅಗಲವಾದ ತೋಳುಗಳನ್ನು ಕೆಲಸಕ್ಕೆ ಸಿದ್ದವಾಗಿ 
ಮೇಲಕ್ಕೆ ಮಡಿಸಿಕೊಳ್ಳುವ ಹಾಗೆ ಸರಿಮಾಡಿಕೊಂಡಳು. ಆಕೆ ಯಾವಾಗಲೂ 
ರಶಿಯನ್ ಆಡುತ್ತಿದ್ದಳು. 

, ಅಲ್ಲಿ ಸೇರಿದ್ದವರೆಲ್ಲದರ ಮಾತನ್ನು ಮುಳುಗಿಸುವಂಥ ಗಟ್ಟಿ ಧ್ವನಿಯಲ್ಲಿ 
'ನೇಮ್ ಡೇ ತಾಯಿಗೆ, ಅವಳ ಮಕ್ಕಳಿಗೆ ಶುಭಾಶಯಗಳು' ಅಂದಳು. ಅವಳ 
ಮುಂಗೈಯನ್ನು ಹಿಡಿದು ಗೌರವಪೂರ್ವಕವಾಗಿ ಚುಂಬಿಸುತ್ತಿದ್ದ ಕೌಂಟ್‌ನ ಕಡೆಗೆ 
ತಿರುಗಿ ' ಅಯ್ಯೋ ಪಾಪಿ! ಹೇಗಿದ್ದೀಯಾ? ಮಾಸ್ಕೋ ಬೋರಾಗುತ್ತಿದೆಯಾ? 
ನಾಯಿಗಳನ್ನು ಕರಕೊಂಡು ಬೇಟೆಗೆ ಹೋಗುವ ಹಾಗಿಲ್ಲ ಅಂತ ಬೇಜಾರಾ ? 
ಏನು ಮಾಡೋದು? ಈ ಮರಿಗಳೆಲ್ಲ ಬೆಳೀತವೆ' ಅನ್ನುತ್ತಾ ಕೌಂಟ್‌ನ ಹೆಣ್ಣು 
ಮಕ್ಕಳತ್ತ ಬೆರಳು ಮಾಡಿ ತೋರಿದಳು. 'ಇಷ್ಟ ಇರಲಿ ಬಿಡಲಿ , ಇವರಿಗೆಲ್ಲ ಇನ್ನು 
ನೀನು ಗಂಡು ಹುಡುಕಬೇಕು' ಅಂದಳು. 

' ಆಹಾ, ಹೇಗಿದ್ದಾಳೆ ನಮ್ಮ ಕೊಸಾಕ್ ?'೨೭ ಒಂದಿಷ್ಟೂ ಸಂಕೋಚವಿಲ್ಲದೆ 
ಹತ್ತಿರ ಬಂದು ಖುಷಿಯಾಗಿ ಕೈಗೆ ಮುತ್ತಿಟ್ಟ ನತಾಶಾಳ ಭುಜ ತಟ್ಟುತ್ತಾ ಕೇಳಿದಳು. 
ಮಾರಿಯಾ ದ್ವಿತ್ರಿಯೇಟ್ನಾ ನತಾಶಾಳನ್ನು ಯಾವಾಗಲೂ ಕೊಸಾಕ್ ಅಂತಲೇ 
ಕರೆಯುತ್ತಿದ್ದಳು. 'ನೀನು ಶುದ್ದ ತರಲೆ, ಆದರೂ ನಿನ್ನ ಕಂಡರೆ ಇಷ್ಟ' ಅಂದಳು. 

ದೊಡ್ಡ ವ್ಯಾನಿಟಿ ಬ್ಯಾಗಿನಿಂದ ಅಂಜೂರ ಹಣ್ಣಿನ ಆಕಾರದ ಕೆಂಪು ಹರಳಿನ 


೯೧ 


ಸಂಪುಟ ೧ - ಸಂಚಿಕೆ ಒಂದು 
ಕಿವಿಯುಂಗುರಗಳನ್ನು ತೆಗೆದು ತನ್ನನ್ನು ನೋಡುತ್ತಾ ಹಲ್ಲುತೋರುವಂತೆ ನಗುತ್ತಿದ್ದ , 
ಹುಟ್ಟು ಹಬ್ಬದ ಸಡಗರದಿಂದ ನಾಚಿ ಕೆಂಪಾಗಿದ್ದ ನತಾಶಾಗೆ ಕೊಟ್ಟಳು . ಆಮೇಲೆ 
ಇದ್ದಕ್ಕಿದ್ದ ಹಾಗೆ ಪಿಯರೆಯ ಕಡೆಗೆ ತಿರುಗಿದಳು. 

' ಹಲೋ , ಫ್ರೆಂಡ್ ! ಹೇಗಿದ್ದೀಯಾ?' ಕೃತಕವಾದ ಪ್ರೀತಿ ತೋರುವ ತಗ್ಗಿದ 
ದನಿ ತಂದುಕೊಂಡು, ಅಂಜಿಸುವ ಹಾಗೆ ಅಂಗಿಯ ತೋಳುಗಳನ್ನು ಮತ್ತಷ್ಟು 
ಮೇಲಕ್ಕೆ ಮಡಿಸಿಕೊಳ್ಳುತ್ತಾ ' ಬಾ , ಇಲ್ಲಿ!' ಅಂತ ಕರೆದಳು . 
- ಕಪಟವಿಲ್ಲದ ಪುಟ್ಟ ಮಗುವಿನ ಹಾಗೆ ಕನ್ನಡಕದೊಳಗಿನಿಂದ ಅವಳನ್ನೇ 
ನೋಡುತ್ತಾ ಪಿಯರೆ ಹತ್ತಿರಕ್ಕೆ ಬಂದ. 

' ಇನ್ನೂ ಸ್ವಲ್ಪ ಹತ್ತಿರ ಬನ್ನಿ , ಸ್ವಾಮೀ , ನಿಮ್ಮಪ್ಪನಿಗೆ, ಅವನು ಚಕ್ರವರ್ತಿಗೆ 
ಹತ್ತಿರದವನಾಗಿದ್ದಾಗ ಕೂಡ, ನಿಜವಾದ ಮಾತನ್ನು ನೇರವಾಗಿ ಹೇಳುತ್ತಾ ಇದ್ದವಳು 
ನಾನೊಬ್ಬಳೇ , ನಿನ್ನ ಹತ್ತಿರವೂ ಹಾಗೇ ಮಾತಾಡುವುದು ನನ್ನ ಕ್ರಿಶ್ಚಿಯನ್ ಕರ್ತವ್ಯ . 
ಆ ಆಕೆ ಸ್ವಲ್ಪ ಹೊತ್ತು ಸುಮ್ಮನಿದ್ದಳು. ಏನೋ ನಡೆಯುವುದೆಂಬ ನಿರೀಕ್ಷೆಯ 
ಕುತೂಹಲದ ಮೌನಕೋಣೆಯಲ್ಲಿ ತುಂಬಿಕೊಂಡಿತು. ಮುಂದೇನಾಗುತ್ತದೋ ? 
ಇದು ಕೇವಲ ನಾಂದಿಯಷ್ಟೇ . 
* 'ಒಳ್ಳೇ ಆಸಾಮಿ ನೀನು!...ಅಲ್ಲಾ, ಇವರಪ್ಪ ಸಾಯುತಾ ಬಿದ್ದಿದಾನೆ, ಇವನು 
ಪೋಲೀಸಿನವನನ್ನ ಕರಡಿಯ ಬೆನ್ನಿಗೆ ಕಟ್ಟಿ ತಮಾಷೆಮಾಡಿಕೊಂಡು ತಿರಗತಾ 
ಇದಾನೆ! ನಾಚಿಕೆ ಆಗಬೇಕು ನಿನಗೆ! ನೀನು ಯುದ್ಧಕ್ಕೆ ಹೋಗಬೇಕಾಗಿತ್ತು.' 
ಮುಖ ತಿರುಗಿಸಿಕೊಂಡಳು. ಹತ್ತಿರಕ್ಕೆ ಬಂದಿದ್ದ, ಕಷ್ಟಪಟ್ಟು ನಗು ತಡೆದುಕೊಂಡಿದ್ದ 
ಕೌಂಟ್‌ನ ಕಡೆಗೆ ಕೈ ಚಾಚಿದಳು . 

' ಇನ್ನು ಊಟಕ್ಕೆ ಹೊರಡಬಹುದಲ್ಲವಾ? ಊಟ ತಯಾರಾಗಿದೆ ತಾನೇ ? 
ಅಂದಳು. 

ಮಾರಿಯಾ ದ್ವಿತ್ರಿಯೇಟ್ನಾಳ ಕೈ ಹಿಡಿದುಕೊಂಡು ಕೌಂಟ್ ಮುಂದೆ ಹೊರಟ . 
ಅವನ ಹಿಂದೆ ಹುಸಾರ್‌ಗಳ ಕರ್ನಲ್ ಆಗಿದ್ದವನ ತೋಳು ಹಿಡಿದುಕೊಂಡು 
ಕೌಂಟೆ ನಡೆದಳು. ಅವಳ ಮಗ ನಿಕೋಲಸ್ ಆ ಅಧಿಕಾರಿಯೊಡನೆ 
ಹೊರಡುವವನಿದ್ದದ್ದರಿಂದ ಅವನನ್ನು ಚೆನ್ನಾಗಿ ನೋಡಿಕೊಳ್ಳಬೇಕಾಗಿತ್ತು. ಆಮೇಲೆ 
ಬಂದವರು ಅನ್ನಾ ಮಿಖಾಯೌವ್ವಾ ಮತ್ತು ಶಿಶಿನ್, ಬೆರ್ಗ್ ವೇರಾಳಿಗೆ ತನ್ನ 
ತೋಳುನೀಡಿದ್ದ. ಜೂಲಿ ಕುರಾಗಿನ್ ನಿಕೋಲಸ್‌ನ ಜೊತೆಗೆ ಬಂದಳು. ಅವರ 


೨೭ ದಕ್ಷಿಣ ರಶಿಯಾದಲ್ಲಿ ನೆಲಸಿದ್ದ ಸ್ವತಂತ್ರ ರೈತರು, ಸ್ವಚ್ಛಂದ ವರ್ತನೆಗೆ ಹೆಸರುವಾಸಿಯಾಗಿದ್ದವರು. 

ಮಾರಿಯಾ ದ್ರಿತ್ರಿಯೇಟ್ನಾ ನತಾಶಾಳನ್ನು ಸ್ವಚ್ಛಂದ ವರ್ತನೆಯನ್ನು ಪ್ರೀತಿಯಿಂದಲೇ ಮೆಚ್ಚಿ 
ನುಡಿಯುತ್ತಿದ್ದಾಳೆ. 


ಯುದ್ಧ ಮತ್ತು ಶಾಂತಿ 
ಹಿಂದೆ ಉಳಿದಜೋಡಿಗಳು ಬಂದು ಇಡೀ ಹಾಲ್ ಹಿಗ್ಗಿ ಹೋಯಿತು. ಎಲ್ಲರಿಗಿಂತ 
ಕೊನೆಗೆ ಮನೆಯ ಮಕ್ಕಳು ತಮ್ಮ ಮೇಷ್ಟರು ಮತ್ತು ಗೌರ್ನಸ್‌ಗಳ ಜೊತೆಗೆ 
ಒಬ್ಬೊಬ್ಬರಾಗಿ ಬಂದರು. ಸೇವಕರು ಚುರುಕಾದರು . ಕುರ್ಚಿಗಳು ಸರಿದಾಡಿ 
ಸದ್ದು ಮಾಡಿದವು. ಗ್ಯಾಲರಿಯಲ್ಲಿ ಬ್ಯಾಂಡಿನವರು ಸಂಗೀತ ಶುರುಮಾಡಿದರು. 
ಅತಿಥಿಗಳು ತಮ್ಮ ತಮ್ಮ ಜಾಗದಲ್ಲಿ ಕೂತರು. ಮನೆಯ ಬ್ಯಾಂಡಿನವರ ಸಂಗೀತದ 
ಜಾಗದಲ್ಲಿ ಚಾಕು ಫೋರ್ಕುಗಳ ಸದ್ದು, ಗುಜುಗುಜು ಮಾತು, ಸೇವಕರ ಮೆಲು 
ಹೆಜ್ಜೆಯ ಓಡಾಟದ ಸಪ್ಪಳ ತುಂಬಿಕೊಂಡವು.ಊಟದ ಮೇಜಿನ ಒಂದು ತುದಿಯಲ್ಲಿ 
ಅತಿಥಿಗಳಾಗಿದ್ದ ಹೆಂಗಸರ ಜೊತೆ ಕೌಂಟೆಸ್ ಇದ್ದಳು . ಅವಳ ಬಲ ಬದಿಗೆ 
ಮಾರಿಯಾ ದ್ವಿತ್ರಿಯೇಟ್ನಾ ಎಡ ಬದಿಗೆ ಅನ್ನಾ ಮಿಖಾಯೌವ್ವಾ ಇದ್ದರು. 
ಆಮೇಲೆ ಉಳಿದ ಹೆಂಗಸರು, ಮೇಜಿನ ಇನ್ನೊಂದು ತುದಿಯಲ್ಲಿ ಕೌಂಟ್ ಎಲ್ಲಾ 
ಗಂಡಸರ ನಡುವೆ ಕೂತ, ಹುಸಾರ್‌ಗಳ ಕರ್ನಲ್ ಅವನ ಎಡಬದಿಗೆ, ಶಿನ್‌ಶಿನ್ 
ಮತ್ತು ಉಳಿದ ಅತಿಥಿಗಳು ಅವನ ಬಲಬದಿಗೆ ಇದ್ದರು. ಉದ್ದವಾದ ಮೇಜಿನ 
ಮಧ್ಯಭಾಗದಲ್ಲಿ ಯುವಕರು, ಬೆರ್ಗ್ನ ಪಕ್ಕದಲ್ಲಿ ವೇರಾ, ಬೋರಿಸ್‌ನೊಡನೆ 
ಪಿಯರೆ, ಅವರ ಎದುರಿಗೆ ಮಕ್ಕಳು, ಮೇಷ್ಟರು ಮತ್ತು ಗೌರ್ನೆಸ್‌ಗಳು ಇದ್ದರು. 
ಥಳಥಳಿಸುವ ಗಾಜಿನ ಪಾತ್ರೆ, ಕ್ರಿಸ್ಟಲ್ ಬಾಟಲಿ, ಹಣ್ಣು ತುಂಬಿದ ಬೋಗುಣಿಗಳ 
ಹಿಂದಿನಿಂದ ಇಣುಕುತ್ತಾ ನೀಲಿ ರಿಬ್ಬನುಗಳಿರುವ ಉದ್ದವಾದ ಕ್ಯಾಪು ತೊಟ್ಟಿದ್ದ 
ತನ್ನ ಹೆಂಡತಿಯ ಕಡೆಗೆ ಆಗಾಗ ನೋಡುತ್ತಾ ಅಕ್ಕಪಕ್ಕ ಕುಳಿತವರ ಮದ್ಯದ 
ಗ್ಲಾಸು ಖಾಲಿಯಾದಂತೆ ಧಾರಾಳವಾಗಿ ಅವನ್ನು ಮತ್ತೆ ಭರ್ತಿಮಾಡುತ್ತಾ, ತನ್ನ 
ಗ್ಲಾಸನ್ನೂ ಮರೆಯದೆ ತುಂಬಿಸಿಕೊಳ್ಳುತ್ತಾ ಇದ್ದ ಕೌಂಟ್, ಕೌಂಟೆಸ್ ಕೂಡ 
ಆತಿಥೇಯಳಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಾ ಇರುವಾಗ ಅನಾನಸು ಹಣ್ಣುಗಳ 
ಹಿಂದಿನಿಂದ ಆಗಾಗ ಗಂಡನ ಕಡೆಗೆ ಅರ್ಥಪೂರ್ಣವಾಗಿ ದೃಷ್ಟಿ ಹಾಯಿಸುತ್ತಾ 
ಇದ್ದಳು. ಅವನ ನೆರೆಗೂದಲಿಗೆ ಹೋಲಿಸಿದರೆ ಮುಖ ಮತ್ತೆ ಬೋಳುತಲೆ 
ಮಾಮೂಲಿಗಿಂತ ಕೆಂಪಾಗಿ ಕಾಣುತ್ತಾ ಇವೆ ಅನ್ನುವುದನ್ನು ಗಮನಿಸಿದಳು. ಹೆಂಗಸರು 
ಇದ್ದ ಎಡೆಯಲ್ಲಿ ಒಂದೇ ಸಮ ಗಲಗಲ ಮಾತು ಕೇಳುತ್ತಿತ್ತು. ಮೇಜಿನ ಇನ್ನೊಂದು 
ತುದಿಯಲ್ಲಿ ಗಂಡಸರ ಧ್ವನಿ , ಅದರಲ್ಲೂ ಉಂಡು ಉಂಡು, ಕುಡಿದು ಕುಡಿದು 
ಕೆಂಪಾಗಿದ್ದ ಹುಸಾರ್‌ಗಳ ಕರ್ನಲ್‌ನ ಧ್ವನಿ ಜೋರು ಜೋರಾಗಿ ಕೇಳುತ್ತಿತ್ತು. 
“ ಹಾಗೆ ತಿನ್ನ ಬೇಕು, ಹಾಗೆ ಕುಡಿಯಬೇಕು, ನೋಡಿ' ಎಂದು ಕರ್ನಲ್‌ನನ್ನು 
ನಿದರ್ಶನವೆನ್ನುವ ಹಾಗೆ ಕೌಂಟ್ ಉಳಿದವರಿಗೆ ತೋರಿಸುತ್ತಿದ್ದ . ಬೆರ್ಗ್ ಮೃದುವಾಗಿ . 
ನಗುತ್ತಾ ಪ್ರೀತಿ ಅನ್ನುವುದು ಲೌಕಿವಾದ ವಿಷಯವಲ್ಲ , ಸ್ವರ್ಗಿಯವಾದ ಅನುಭೂತಿ 
ಎಂದು ವೇರಾಗೆ ಹೇಳುತ್ತಿದ್ದ . ಬೋರಿಸ್ ತನ್ನ ಹೊಸ ಗೆಳೆಯ ಪಿಯರೆಗೆ 
ಮೇಜಿನ ಸುತ್ತ ಇದ್ದ ಅತಿಥಿಗಳ ಹೆಸರು ಹೇಳುತ್ತಿರುವಾಗಲೇ ತನ್ನೆದುರಿಗೆ ಕೂತಿದ್ದ 


೯೩ 
ಸಂಪುಟ ೧ - ಸಂಚಿಕೆ ಒಂದು 
ನತಾಶಾಳ ಜೊತೆಗೆ ದೃಷ್ಟಿ ವಿನಿಮಯ ಮಾಡಿಕೊಳ್ಳುತ್ತಾ ಇದ್ದ. ಪಿಯರೆ ಮಾತು 
ಕಡಮೆ ಆಡುತ್ತಾ ಮೇಜಿನ ಸುತ್ತಲೂ ಇದ್ದ ಹೊಸಬರ ಮುಖಗಳನ್ನು ನೋಡುತ್ತಾ 
ಹೆಚ್ಚಾಗಿ ಊಟ ಮಾಡಿದ. ಇರುವ ಎರಡು ಸೂಪ್‌ಗಳಲ್ಲಿ ಯಾವುದು ತೆಗೆದುಕೊಳ್ಳಲಿ 
ಎಂದು ಯೋಚನೆ ಮಾಡುತ್ತಾ ಟರ್ಟಲ್ ಸೂಪು ಆರಿಸಿಕೊಂಡ; ಆಮೇಲೆ 
ನೇರವಾಗಿ ಮೀನಿನ ರುಚಿ ನೋಡಿ, ಬಗೆಬಗೆಯ ಮಾಂಸದಡುಗೆಗಳಲ್ಲಿ 
ಯಾವುದನ್ನೂ ಬಿಡದೆ ಬಾಯಾಡಿಸಿದ. ಪಕ್ಕದಲ್ಲಿದ್ದವನ ಹಿಂದೆ ನಿಂತು ನ್ಯಾಪ್‌ಕಿನ್ನಿನಲ್ಲಿ 
ಸುತ್ತಿದ ಬಾಟಲಿಯನ್ನು ಮುಂದೆ ಚಾಚಿ, ' ಡ್ರೈ ಮಾಡೀರಿಯಾ'...' ಹಂಗೇರಿಯನ್'... 
'ರೈನ್' ಎಂದು ಬಾಣಸಿಗ ನಿಗೂಢವಾಗಿ ಪಿಸುಗುಡುತ್ತಿದ್ದಾಗ ಇದ್ದ ವೈನುಗಳಲ್ಲಿ 
ಯಾವುದೊಂದನ್ನೂ ಪಿಯರೆ ಕಡೆಗಣಿಸಲಿಲ್ಲ. ಮೇಜಿನ ಮೇಲೆ ಇದ್ದ ಕೌಂಟ್‌ನ 
ಹೆಸರು ಕೆತ್ತಿರುವ ನಾಲ್ಕು ಕಿಸ್ಪಲ್ ಗ್ಲಾಸುಗಳಲ್ಲಿ ಯಾವುದಾದರೊಂದನ್ನು ಎತ್ತಿಕೊಂಡು 
ಮುಂದೆ ಚಾಚಿ , ಅದರ ತುಂಬ ಬಾಣಸಿಗ ತಂದ ವೈನು ತುಂಬಿಸಿಕೊಂಡು, 
ಸಂತೋಷವಾಗಿ ಹೀರುತ್ತಾ , ಮನಸ್ಸಿನಲ್ಲಿ ಆನಂದ ಉಕ್ಕಿ, ಅತಿಥಿಗಳ ಕಡೆಗೆ 
ಬೀರುತ್ತಾ ಇದ್ದ ನೋಟದಲ್ಲಿ ಖುಷಿ ಹೆಚ್ಚಾಗುತ್ತಿತ್ತು. ಅವನ ಎದುರಿಗೆ ಕೂತಿದ್ದ 
ನತಾಶಾ ಜೀವನದಲ್ಲಿ ಮೊಟ್ಟಮೊದಲಬಾರಿಗೆ ತಾವು ಆಗಷ್ಟೇ ಚುಂಬಿಸಿದ ಪ್ರೀತಿಸುವ 
ಹುಡುಗನನ್ನು ಹದಿಮೂರು ವರ್ಷದ ಹುಡುಗಿಯರು ನೋಡುವ ಹಾಗೆ 
ಬೋರಿಸ್‌ನನ್ನು ನೋಡುತ್ತಾ ಕೂತಿದ್ದಳು. ಕೆಲವೊಮ್ಮೆ ಅದೇ ನೋಟಪಿಯರೆಯ 
ಕಡೆಗೂ ದಾರಿ ಮಾಡಿಕೊಂಡು ಹೋಗುತ್ತಿತ್ತು. ತಮಾಷೆ ಅನ್ನಿಸುವ ಹಾಗಿದ್ದ 
ಅವಳ ಉದ್ವಿಗ್ನ ಮುಖ ನೋಡಿದರೆ ಪಿಯರೆಗೆ ಕೂಡ, ಯಾಕೆಂದು 
ಗೊತ್ತಾಗದಿದ್ದರೂ , ನಗಬೇಕು ಅನ್ನಿಸುತ್ತಿತ್ತು... 

- ನಿಕೋಲಸ್ ಸೋನ್ಯಾಳಿಗಿಂತ ದೂರದಲ್ಲಿ , ಜೂಲಿ ಕರಾಗಿನ್‌ಳ ಪಕ್ಕ ಕೂತಿದ್ದ. 
ಸಹಜವಾಗಿ ಉಕ್ಕಿಬರುವ ಮಂದಹಾಸ ಬೀರುತ್ತಾ ಅವಳ ಜೊತೆ ಮಾತಾಡುತ್ತಿದ್ದ . 
ಸೋನ್ಯಾ ಮುಗುಳು ನಗೆಯ ಮುಖವಾಡ ತೊಟ್ಟಿದ್ದಳು, ಆದರೂ ಕಣ್ಣಿಗೆ ಕಾಣುವ 
ಹಾಗೆಯೇ ಹೊಟ್ಟೆಯ ಕಿಚ್ಚಿನಿಂದ ಬೆಂದುಹೋಗುತ್ತಿದ್ದಳು. ನಿಕೊಲಾಯ್ ಮತ್ತು 
ಜೂಲಿ ಆಡುತ್ತಿರುವ ಮಾತನ್ನು ಕೇಳಿಸಿಕೊಳ್ಳಲು ಮೈಯೆಲ್ಲ ಕಿವಿಯಾಗಿ 
ಪ್ರಯತ್ನಿಸುತ್ತಿರುವಾಗ ಅವಳ ಮುಖದ ಒಮ್ಮೆ ಬಿಳಿಚಿಕೊಳ್ಳುತ್ತಿತ್ತು, ಇನ್ನೊಮ್ಮೆ 
ಕೆಂಪಡರುತ್ತಿತ್ತು. ಗೌರ್ನೆಸ್ ಮಕ್ಕಳಿಗೆ ಯಾರಾದರೂ ನಿರ್ಲಕ್ಷ್ಯ ತೋರಿಸಿಯಾರೋ 
ಎಂದು ಆತಂಕಪಡುತ್ತಾ, ಹಾಗೇನಾದರೂ ಆದರೆ ತರಾಟೆಗೆ ತೆಗೆದುಕೊಳ್ಳಬೇಕೆಂದು 
ಚಡಪಡಿಸುತ್ತಾ ಇದ್ದಳು. ಜರ್ಮನ್ ಹೇಳಿಕೊಡುವ ಮೇಷ್ಟರು ತನ್ನ ಮನೆಯವರಿಗೆ 
ಬರೆಯುವ ಕಾಗದದಲ್ಲಿ ವರ್ಣಿಸಬೇಕೆಂದು ಬಡಿಸಿದ ಎಲ್ಲ ಭಕ್ಷಗಳ , ಇದ್ದ ಎಲ್ಲ 
ಬಗೆಯ ಡೆಸರ್ಟುಗಳ , ದೊರೆಯುತ್ತಿದ್ದ ಎಲ್ಲ ವೈನುಗಳ ಹೆಸರುಗಳನ್ನು 
ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಾ ಇದ್ದ . ನ್ಯಾಪ್ಟಿನ್ನಿನಲ್ಲಿ ಸುತ್ತಿದ ಬಾಟಲಿಯೊಂದನ್ನು 


೯೪ 

ಯುದ್ಧ ಮತ್ತು ಶಾಂತಿ 
ಹಿಡಿದುಕೊಂಡು ಬಂದ ಸೇವಕ ಅವನನ್ನು ವಿಚಾರಿಸದೆಯೇ ಮುಂದೆ ಸಾಗಿದಾಗ 
ಅವಮಾನ ಅನ್ನಿಸಿತು. ತನಗೇನೂ ಬೇಕಾಗಿಲ್ಲ ಅನ್ನುವ ಹಾಗೆ ನಟಿಸುತ್ತಾ ಮುಖ 
ಗಂಟಿಕ್ಕಿಕೊಂಡ. ಗಂಟಲಾಗಿದೆಯೆಂದೋ ಕುಡಿತದ ಚಪಲವೆಂದೋ ಅಲ್ಲ, ವೈನಿನ 
ಬಗೆಗಳನ್ನು ತಿಳಿದು ಜ್ಞಾನವೃದ್ಧಿಮಾಡಿಕೊಳ್ಳುವ ಆಸೆಗೆ ಅಡ್ಡಿಯಾಯಿತೆಂದು ತನಗೆ 
ಬೇಸರವಾಗಿದೆ ಅನ್ನುವ ಸಂಗತಿ ಯಾರಿಗೂ ತಿಳಿಯುವುದೇ ಇಲ್ಲವಲ್ಲ ಎಂದು 
ಬೇಸತ್ತ. 


೧೬ 


ಗಂಡಸರು ಇದ್ದ ಕಡೆ ಮಾತಿಗೆ ಕಾವೇರುತ್ತಿತ್ತು. ಪೀಟರ್ಸ್‌ಬರ್ಗಿನಲ್ಲಿ 
ಪ್ರಕಟವಾದ ಮ್ಯಾನಿಫೆಸ್ಟೋ ಮೂಲಕ ಯುದ್ಧದ ಘೋಷಣೆಯಾಗಿದೆ, ಕಮಾಂಡರ್ 
ಇನ್ ಛೀಫ್‌ಗೆ ದೂತನ ಮೂಲಕ ಕಳುಹಿಸಲಾದ ಅದರ ಒಂದು ಪ್ರತಿಯನ್ನು 
ನಾನೂ ಕಣ್ಣಾರೆ ನೋಡಿದ್ದೇನೆ ಎಂದು ಕರ್ನಲ್ ಹೇಳಿದ. 

'ದೇವರಿಗೇ ಗೊತ್ತು, ಬೋನಾಪಾರ್ಟೆಯ ಮೇಲೆ ನಾವು ಯುದ್ಧ ಯಾಕೆ 
ಮಾಡಬೇಕೋ ? ಆಸ್ಟಿಯಾದ ಬಾಯಿ ಮುಚ್ಚಿಸಿದಾನೆ, ಇನ್ನು ನಮ್ಮ ಸರದಿ ಅಂತ 
ಕಾಣುತದೆ ' ಅಂದ ಶಿನ್ಶಿನ್. 

ಕರ್ನಲ್ ಎತ್ತರವಾದ, ಸ್ಕೂಲಕಾಯದ, ಕೆಂಚು ಮೋರೆಯ ಜರ್ಮನ್ 
ಮನುಷ್ಯ. ಒಳ್ಳೆಯ ಅಧಿಕಾರಿ, ರಶಿಯಾದ ಬಗ್ಗೆ ದೇಶಪ್ರೇಮ ಇರುವವವನು 
ಅನ್ನುವ ಹಾಗೆ ಕಾಣುತ್ತಿತ್ತು . ಶಿನ್ಶಿನ್ ಮಾತಿಗೆ ಅವನು ರೇಗಿದ. ಅವನ ಉಚ್ಚಾರಣೆ 
ಜರ್ಮನ್ ರೀತಿಯದು. . 

ಕಾರಣ ಯೇನೆಂದರೆ ಝಾಮಿ , ಚಕ್ರವರ್ದಿಗಳು ಬಲ್ಲರು . ಯುದ್ಧ 
ಘೋಷಣೆಯನ್ನು ಮಾಡಿತ್ತಾರೆ. ರಶಿಯಾಗೆ ಭಯ ಹುಟ್ಟಿಝುತ್ತಿರುವ ಝಂಗತಿ 
ಬಗ್ಗೆ ಉದಾಝನ ಮಾಡುವಂತಿಲ್ಲ ಅವರು. ರಾಷ್ಟ್ರದ ಘನತೆ, ಕ್ಷೇಮ , ಮಿತ್ರಪಕ್ಷಗಳ 
ಹಿತ. ..' ಕೊನೆಯ ಮಾತನ್ನು ಅದೇ ಎಲ್ಲ ವಿಚಾರದ ಬಹುಮುಖ್ಯ ಅಂಶ ಎಂಬಂತೆ 
ಒತ್ತಿ ಹೇಳಿದ. ಆಮೇಲೆ ಆಡಳಿತಾತ್ಮಕ ವಿಚಾರಗಳ ಬಗ್ಗೆ ಅವನಿಗಿದ್ದ ಪ್ರಖರವಾದ 
ನೆನಪಿನಿಂದ (ಅದೇ ಅವನ ಮುಖ್ಯಗುಣ ) ಯುದ್ಧ ಘೋಷಣೆಯ ಪತ್ರದ 
ಪ್ರಸ್ತಾವನೆಯ ಮಾತುಗಳನ್ನು ಉದ್ದರಿಸಿದ: 

- ಯೂರೋಪಿನಲ್ಲಿ ಬಲವಾದ ನೆಲೆಗಟ್ಟಿನ ಮೇಲೆ ಸ್ಥಿರವಾದ ಶಾಂತಿಯನ್ನು 
ಸ್ಥಾಪಿಸುವುದೇ ಚಕ್ರವರ್ತಿಯವರ ಅಪೇಕ್ಷೆ ಮತ್ತು ಅಂತಿಮ ಗುರಿಯಾಗಿರುವುದರಿಂದ, 
ಆ ಉದ್ದೇಶ ಸಾಧನೆಯ ಸಲುವಾಗಿ ರಶಿಯನ್ ಸೈನ್ಯದ ಒಂದು ಭಾಗವನ್ನು 
ಯುದ್ಧಭೂಮಿಗೆ ರವಾನಿಸಲು ಅವರು ನಿರ್ಧರಿಸಿದ್ದಾರೆ.' 

'ನೋಡಿ ಝಾಮೀ , ಅದೇ ಕಾರಣ...' ಅನ್ನುತ್ತಾ, ಮಾತು ಮುಗಿಸಿ, ಒಂದು 
ಇಡೀ ಗ್ಲಾಸು ವೈನನ್ನು ಗಂಭೀರವಾಗಿ ಹೀರಿ, ತನ್ನ ಮಾತನ್ನು ಮೆಚ್ಚುತ್ತಾನೋ 


೯೫ 
ಸಂಪುಟ ೧ - ಸಂಚಿಕೆ ಒಂದು 
ಇಲ್ಲವೋ ಅನ್ನುವ ಹಾಗೆ ಕೌಂಟ್‌ನ ಕಡೆಗೆ ನೋಡಿದ. 

'ಗಾದೆ ಗೊತ್ತೇನು, ಫ್ರೆಂಚಿನಲ್ಲಿ ಕೇಳಿ 'ನೂರು ಊರು ಸುತ್ತುವ ಬದಲು 
ಮನೆಯಲ್ಲಿ ರಾಟೆ ಸುತ್ತು ಅನ್ನುತ್ತಾರೆ' ಅಂತ ರಶಿಯನ್‌ನಲ್ಲಿ ಅಂದು ನಮಗೆ 
ಅಚ್ಚುಕಟ್ಟಾಗಿ ಹೊಂದುತ್ತದೆ ಅದು' ಅಂತ ಫ್ರೆಂಚಿನಲ್ಲಿ ಹೇಳಿ “ಸುವೊರೋವ್‌ನನ್ನು 
ತುಂಡುತುಂಡು ಕತ್ತರಿಸಿಬಿಟ್ಟರು ' ಅಂತ ರಶಿಯನ್‌ನಲ್ಲಿ ಅಂದು “ಈಗೆಲ್ಲಿ ಅವನು ?' 
ಅಂತ ಫ್ರೆಂಚಿನಲ್ಲಿ ಕೇಳುತ್ತಾ, ಎರಡು ಭಾಷೆಗಳ ನಡುವೆ ಸಲೀಸಾಗಿ ಜಾರುತ್ತಾ 
ಶಿನ್‌ಶಿನ್ ಮಾತನಾಡಿದ. 
- ನಮ್ಮ ದೇಹದಲ್ಲಿ ಕೊನೆಯ ರಕ್ತದ ಹನಿ ಇರುವವರೆಗೆ ಯುದ್ಧ ಮಾಡಬೇಕು! 
ಟೇಬಲ್ಲು ಗುದ್ದುತ್ತಾ ಕರ್ನಲ್ ಹೇಳಿದ. ಚಕ್ರವರ್ತಿಗಾಗಿ ಪ್ರಾಣ ಅರ್ಪಿಝಬೇಕು. 
ಆಗ ಮಾತ್ರ ಒಳ್ಳೆಯದು ಆಗುತ್ತದೆ. ಈ ಬಗ್ಗೆ ಛರ್ಧೆ ಮಾಡುವುದನ್ನು 
ಸಾಧ್ಯವಾದಷ್ಟೂ ಕಡಮೆ ಮಾಡಬೇಕು . ಸಾಧ್ಯವಾದಷ್ಟೂ ಅನ್ನುವ ಮಾತನ್ನು 
ಒತ್ತಿ ಒತ್ತಿ ನಿಧಾನವಾಗಿ ಹೇಳಿದ . ಕೌಂಟ್‌ನತ್ತ ತಿರುಗಿ, 'ನಾವು ಹುಸಾರ್‌ಗಳು 
ಯೋಧನೆ ಮಾಡುವುದು ಹೀಗೆ. ಅಷ್ಟೇ . ಇದರಾಛ ಇನ್ನೇನೂ ಇಲ್ಲ!' ನಿಕೋಲಸನತ್ತ 
ತಿರುಗಿ, ' ಯುವಕ ಹುಝಾರ್‌, ನಿಮಗೇನನ್ನಿಸುತ್ತದೆ ?' ಎಂದು ಕೇಳಿದ . ಮಾತು 
ಯುದ್ಧದತ್ತ ತಿರುಗಿದೆ ಎಂದು ಗೊತ್ತಾದ ಕೂಡಲೇ ನಿಕೊಲಸ್ ತನ್ನ 
ಜೊತೆಗಾತಿಯೊಡನೆ ಆಡುತ್ತಿದ್ದ ಮಾತು ನಿಲ್ಲಿಸಿ ಕಣ್ಣು ಕಿವಿಗಳನ್ನು ಕರ್ನಲನ 
ಮೇಲೆಯೇ ನೆಟ್ಟು ಕೂತಿದ್ದ . 

' ನನ್ನದೂ ಅದೇ ಅಭಿಪ್ರಾಯ ' ನಿಕೋಲಸ್ ಹೇಳಿದ, ಉತ್ಸಾಹದ ಬೆಂಕಿ 
ಹೊತ್ತಿಕೊಂಡಿತ್ತು. ತನ್ನ ಊಟದ ತಟ್ಟೆಯನ್ನೂ , ವೈನು ಗ್ಲಾಸನ್ನೂ ಗಟ್ಟಿ ಮನಸ್ಸಿನಿಂದ 
ಪಕ್ಕಕ್ಕೆ ಸರಿಸುತ್ತಾ ತನ್ನ ಜೀವವೇ ಅಪಾಯಕ್ಕೆ ಸಿಕ್ಕಿದೆಯೇನೋ ಅನ್ನುವ ಹಾಗೆ 
ಹತಾಶೆಯಿಂದ ಮಾತನಾಡಿದ. ನನ್ನ ಮಾತು ಇಷ್ಟೇ . ನಾವು ರಶಿಯನ್ನರು ಗೆಲ್ಲಬೇಕು 
ಇಲ್ಲ ಜೀವ ಕೊಡಬೇಕು.' ಆ ಮಾತುಗಳನ್ನು ಆಡುತ್ತಿದ್ದಂತೆಯೇ ಆ ಸಂದರ್ಭಕ್ಕೆ 
ಅಗತ್ಯವಿಲ್ಲದಷ್ಟು ಉತ್ಸಾಹದಿಂದ ಆವೇಶದಿಂದ ಆಡಿದ ಮಾತುಗಳು ಎಂದು 
ಎಲ್ಲರಿಗೂ ಸ್ವತಃ ಅವನಿಗೂ ಅನ್ನಿಸಿ ಮುಜುಗರವಾಯಿತು. 

' ಬಹಳ ಚೆನ್ನಾಗಿ ಹೇಳಿದೆ! ಸ್ವಂಡಿಡ್! ಅನ್ನುತ್ತಾ ಜೂಲಿ ಮೆಚ್ಚುಗೆಯನ್ನು 
ಸುರಿದಳು . ನಿಕೋಲಸ್ ಮಾತಾಡುತ್ತಿರುವಾಗ ಸೋನ್ಯಾ ನಡುಗಿದಳು , 
ನಾಚಿಕೊಂಡಳು. ಅವಳ ಕಿವಿಯ ಅಂಚಿನಿಂದ ಶುರುವಾದ ನಾಚಿಕೆಯ ಕೆಂಪು , 
ಕತ್ತು, ಭುಜ , ಇಡೀ ಮೈ ಯನ್ನೆಲ್ಲ ಆವರಿಸಿಕೊಂಡಿತು. ಕರ್ನಲ್‌ನ ಮಾತು 
ಕೇಳಿಸಿಕೊಳ್ಳುತ್ತಿದ್ದ ಪಿಯರೆ ತಲೆದೂಗಿ ಒಪ್ಪಿಗೆ ಸೂಚಿಸಿದ. 

'ಸ್ಪೆಂಡಿಡ್' ಅಂದ ಪಿಯರೆ. 
“ ಹುಡುಗಾ ನೀನು ನಿಜವಾದ ಸೈನಿಕ' ಎಂದು ಗಟ್ಟಿಯಾಗಿ ಹೇಳುತ್ತಾ 


೯ 


ಯುದ್ಧ ಮತ್ತು ಶಾಂತಿ 
ಟೇಬಲ್ಲನ್ನು ಜೋರಾಗಿ ಗುದ್ದಿದ ಕರ್ನಲ್. 

' ಯಾಕೆ ಅಷ್ಟು ಗಲಾಟೆ ಎಬ್ಬಿಸಿದ್ದೀರಿ?' ಮಾರಿಯಾ ದಿತ್ರಿಯೇಟ್ನಾಳ ಆಳವಾದ 
ಧ್ವನಿ ಟೇಬಲ್ಲಿನ ಮತ್ತೊಂದು ತುದಿಯಿಂದ ಮೊಳಗಿತು. ' ಯಾಕೆ ಇಷ್ಟು ಗಲಾಟೆ? 
ಫ್ರೆಂಚಿನವರೇನೂ ಇಲ್ಲಿಗೆ ಬಂದಿಲ್ಲ, ಅಲ್ಲವಾ!' ಕರ್ನಲ್‌ನನ್ನು ಕೇಳಿದಳು. 

' ನಾನು ಝತ್ಯ ಹೇಳುತ್ತಿದ್ದೇನೆ' ಹುಸಾರ್ ನಗುತ್ತಾ ನುಡಿದ. 

- ' ಯುದ್ದದ ಮಾತು,' ಕೌಂಟ್ ತಾನು ಕೂತಿದ್ದಲ್ಲಿಂದ ಜೋರಾಗಿ ಹೇಳಿದ, 
'ನಿಮಗೆ ಗೊತ್ತೇ ಮಾರಿಯಾ ದ್ವಿತ್ರಿಯೇಟ್ನಾ, ನನ್ನ ಮಗ ಯುದ್ಧಕ್ಕೆ ಹೋಗುತಿದಾನೆ' 
ಅಂದ. 
- 'ನನ್ನ ನಾಲ್ಕು ಜನ ಮಕ್ಕಳು ಸೈನ್ಯದಲ್ಲಿದ್ದಾರೆ. ನಾನೇನು ಅದನ್ನ ಸಾರಿಕೊಂಡು 
ಬಂದಿಲ್ಲ. ಎಲ್ಲಾ ದೇವರ ಕೈಯಲ್ಲಿದೆ. ಮನೆಯಲ್ಲಿದ್ದರೂ ಸಾಯಬಹುದು, ಯುದ್ಧಕ್ಕೆ 
ಹೋದರೂ ಬದುಕಿ ಬರಬಹುದು' ಅಂದಳು. ಆಳವಾದ ಅವಳ ಧ್ವನಿ 
ನಿರಾಯಾಸವಾಗಿ ಇಡೀ ಟೇಬಲ್ಲಿಗೆ ಕೇಳಿಸುತ್ತಿತ್ತು. 

“ಅದೇನೋ ನಿಜ !' 

ಮತ್ತೊಮ್ಮೆ ಟೇಬಲ್ಲಿನ ಒಂದು ತುದಿಯಲ್ಲಿ ಗಂಡಸರು, ಇನ್ನೊಂದು ತುದಿಯಲ್ಲಿ 
ಗಂಡಸರು ತಮ್ಮ ಪಾಡಿಗೆ ತಾವು ಮಾತಾಡಿಕೊಳ್ಳತೊಡಗಿದರು. 

- “ನೀನು ಕೇಳಲ್ಲ, ನಂಗೊತ್ತು!' ನತಾಶಾಳ ಚಿಕ್ಕ ತಮ್ಮ ಹೇಳುತ್ತಾ ಇದ್ದ . 
“ ನನಗೆ ಗೊತ್ತು, ನೀನು ಕೇಳಲ್ಲ!' 
- “ಕೇಳೇ ಕೇಳತೇನೆ' ಅನ್ನುತ್ತಾ ತಮಾಷೆಯಾಗಿ ಕಾಣುವ ಗಟ್ಟಿ ನಿರ್ಧಾರವನ್ನು 
ಮುಖದಲ್ಲಿ ತೋರುತ್ತಾ ಅರ್ಧ ಎದ್ದು ನಿಂತು, 'ಈಗ ಏನು ಮಾಡುತ್ತೇನೋ 
ನೋಡು' ಅನ್ನುವ ಹಾಗೆ ತನ್ನೆದುರಿಗೆ ಕುಳಿತಿದ್ದ ಪಿಯರೆಯಗೆ ನೋಟದಲ್ಲೇ 
ಹೇಳುತ್ತಾ ಅಮ್ಮನ ಕಡೆಗೆ ತಿರುಗಿದಳು . 

'ಮಮ್ಮಾ!' ಎಂದು ಜೋರಾಗಿ ಕೂಗಿದಳು. ಅವಳ ಬಾಲಿಶ ಕೀರಲು ಧ್ವನಿ 
ಟೇಬಲ್ಲಿನ ಮತ್ತೊಂದು ತುದಿಗೂ ಕೇಳಿಸುತ್ತಿತ್ತು. 

' ಏನದು ?' ಮೆಟ್ಟಿಬಿದ್ದ ಕೌಂಟೆಸ್ ಕೇಳಿದಳು . ಮಗಳ ಮುಖವನ್ನು 
ನೋಡಿವಳೇ ಏನೋ ತುಂಟತನ ಮಾಡುತ್ತಾಳೆ ಅನ್ನುವುದು ಗೊತ್ತಾಗಿ ಹುಷಾರು 
ಅನ್ನುವ ಹಾಗೆ ಬೆರಳಾಡಿಸುತ್ತಾ ತಲೆಹರಟೆ ಮಾಡಬೇಡ ಅಂತ ಎಚ್ಚರಿಸುವ 
ಹಾಗೆ ತಲೆ ಆಡಿಸಿದಳು. 

ಎಲ್ಲರ ಮಾತಿನ ದನಿಯೂ ತಗ್ಗಿಹೋಯಿತು. 

ನತಾಶಾ ಸುಮ್ಮನಾಗಲಿಲ್ಲ. ' ಮಮ್ಮಾ! ಡೆಸೈರ್ಟ್ ಏನು ಮಾಡಿಸಿದ್ದೀರಿ?' 
ಎಳೆಯ ದನಿ ಇನ್ನೂ ಜೋರಾಗಿ ಕೇಳಿಸಿತು. 

ಕೌಂಟೆಸ್ ಹುಬ್ಬು ಗಂಟಿಕ್ಕಿಕೊಳ್ಳಲು ಯತ್ನಿಸಿ ಸೋತಳು. ಮಾರಿಯಾ 


೯೭ 
ಸಂಪುಟ ೧ - ಸಂಚಿಕೆ ಒಂದು 
ತ್ರಿಯೇಟ್ನಾ ದಪ್ಪಬೆರಳು ಆಡಿಸುತ್ತಾ, ಹೆದರಿಸುವ ಧ್ವನಿಯಲ್ಲಿ 'ಕೊಸಾಕ್ !' ಅಂದಳು. 

ಏನು ಮಾಡಬೇಕೆಂದು ಗೊತ್ತಾಗದೆ ಅತಿಥಿಗಳು ಅಪ್ಪ ಅಮ್ಮಂದಿರ ಕಡೆಗೆ 
ನೋಡಿದರು . 

ಏನು ಮಾಡುತ್ತೇನೆ, ನೋಡುತಾ ಇರು ' ಅಂದಳು ಕೌಂಟೆಸ್ . 

' ಮಮಾ! ಡೆಸೆರ್ಟ್‌ಗೆ ಏನೂ ? ' ಹಟಮಾರಿಯ ಹಾಗೆ , ಕೀಟಲೆಯನ್ನು 
ತಪ್ಪು ತಿಳಿಯುವುದಿಲ್ಲ ಅನ್ನುವುದು ಗೊತ್ತಿರುವವಳ ಹಾಗೆ ನತಾಶಾ ಮತ್ತಷ್ಟು 
ಜೋರಾಗಿ ಕೇಳಿದಳು. ಸೋನ್ಯಾ ಮತ್ತು ದಪ್ಪ ಮೈಯ ಪುಟ್ಟ ಪೀತ್ಯಾ ಬಾಯಿ 
ಭದ್ರವಾಗಿ ಮುಚ್ಚಿಕೊಂಡು ಮೈ ಕುಲುಕುವ ಹಾಗೆ ನಗುತ್ತಿದ್ದರು. 

“ಏನು ಮಾತಾಡುತ್ತಾ ಇದ್ದೀಯಾ, ಹುಷಾರು!' ಅಂದಳು ಕೌಂಟೆಸ್ . 

'ಅಮ್ಮಾ, ಡೆಸ್ಸೆರ್ಟ್ ಏನೂ ?' ಎಂದು ನತಾಶಾ. 'ಕೇಳಿಬಿಟ್ಟೆ ನೋಡಿದೆಯಾ!” 
ಪೀತ್ಯಾನ ಕಿವಿಯಲ್ಲಿ ಪಿಸುಗುಟ್ಟಿ ಮತ್ತೆ ಇನ್ನೊಂದು ಸಾರಿ ಪಿಯರೆಯ ಕಡೆ 
ನೋಡಿದಳು. 
- `ಐಸ್‌ . ಆದರೆ ನಿನಗೆ ಮಾತ್ರ ಇಲ್ಲಾ' ಅಂದಳು ಮಾರಿಯಾ ದ್ವಿತಿಯೇವಾ. 

ಯಾತಕ್ಕೂ ಹೆದರಿಕೊಳ್ಳಬೇಕಾಗಿಲ್ಲ, ತ್ರಿಯಾಗೆ ಕೂಡ ಅನ್ನುವುದು ನತಾಶಾಗೆ 
ಗೊತ್ತಾಯಿತು. 

“ ಯಾವ ಥರದ ಐಸ್, ಮಾರಿಯಾ ದ್ವಿತ್ರಿಯೇಟ್ನಾ? ನನಗೆ ಐಸ್‌ಕ್ರೀಮ್ 
ಇಷ್ಟವಿಲ್ಲ' ಅಂದಳು. 

' ಕ್ಯಾರಟ್ ಐಸುಗಳು.” 

“ ಅಲ್ಲ, ಯಾವ ಥರದ್ದು? ಮಾರಿಯಾ ದ್ವಿತಿಯೇನ್ಮಾ, ಯಾವ ಥರದ್ದು , 
ಅದು ಹೇಳಿ' ಎಂದು ಜೋರಾಗಿ ಕೇಳಿದಳು . ಮಾರಿಯಾ ದ್ವಿತಿಯೇವಾ ಮತ್ತು 
ಕೌಂಟೆಸ್ ಗಹಗಹಿಸಿ ನಕ್ಕರು. ಉಳಿದ ಅತಿಥಿಗಳೂ ನಕ್ಕರು. ಅವರು ನಕ್ಕದ್ದು 
ಮಾರಿಯಾ ದ್ವಿತ್ರಿಯೇಟ್ನಾ ಹೇಳಿದ ಉತ್ತರಕ್ಕಲ್ಲ, ಮಾರಿಯಾಳಂಥ ಮಾರಿಯಾಳನ್ನೇ 
ಕಂಡರಿಯದ ಧೈರ್ಯದಿಂದ ಹೀಗೆ ಎದುರಿಸಿ ಪ್ರಶ್ನೆ ಕೇಳಿದ ನತಾಶಾಳ ಧೈರ್ಯ 
ಮತ್ತು ಜಾಣತನ ಕಂಡು ನಕ್ಕರು. 

ಈ ' ಪೈನಾಪಲ್ ಐಸ್ಕ್ರೀಮ್' ಎಂಬ ಉತ್ತರ ಕೊಟ್ಟಮೇಲಷ್ಟೇ ನತಾಶ 
ಸುಮ್ಮನಾದದ್ದು . ಐಸ್‌ಗೆ ಮೊದಲು ಮತ್ತಷ್ಟು ಶಾಂಪೇನ್ ಬಂತು . ಬ್ಯಾಂಡಿನವರು 
ಮತ್ತೆ ಸಂಗೀತ ಬಾರಿಸಿದರು. ಕೌಂಟ್ ತನ್ನ ಪುಟ್ಟ ಕೌಂಟೆಸ್‌ಗೆ ಮುತ್ತಿಟ್ಟ . ಅತಿಥಿಗಳು 
ಎದ್ದು ನಿಂತು, ಒಬ್ಬೊಬ್ಬರಾಗಿ ಹೋಗಿ ಕೌಂಟೆಸ್‌ಗೆ ಶುಭ ಕೋರಿದರು. ಎಲ್ಲರೂ 
ಕೌಂಟ್‌ನ ಕೈಲಿದ್ದ ಗ್ಲಾಸಿಗೆ, ಮಕ್ಕಳ ಗ್ಲಾಸಿಗೆ ಮತ್ತೆ ಪರಸ್ಪರ ಗ್ಲಾಸ್ ತಾಗಿಸಿ , 
ಕಿಣಿಕಿಣಿಸಿ , ಶಾಂಪೇನ್ ಕುಡಿದರು. ಸೇವಕರು ಮತ್ತೆ ಲಗುಬಗೆಯಿಂದ ಓಡಾಡಿದರು. 
ಕುರ್ಚಿಗಳು ಮತ್ತೆ ಸರಿದಾಡಿದವು. ತಾವು ಡೈನಿಂಗ್‌ಹಾಲಿಗೆ ಬಂದ ಕ್ರಮದಲ್ಲೇ 


೯೮ 

ಯುದ್ಧ ಮತ್ತು ಶಾಂತಿ 
ಅತಿಥಿಗಳು ಹೊರನಡೆದರು . ಅವರ ಮುಖಗಳು ಈಗ ಕೆಂಪೇರಿದ್ದವು. ಕೆಲವರು 
ಡ್ರಾಯಿಂಗ್ ರೂಮಿಗೆ , ಕೆಲವರು ಕೌಂಟ್‌ನ ಸಡಿಗೆ ಹೆಜ್ಜೆ ಹಾಕಿದರು. 

- ೧೭ 
ಕಾರ್ಡ್ ಆಡುವುದಕ್ಕೆ ಟೇಬಲ್ಲುಗಳನ್ನು ಅಣಿಮಾಡಿದ್ದರು. ಬೋಸ್ಟನ್ ಆಟಕ್ಕೆ 
ಜೋಡಿಗಳು ಏರ್ಪಟ್ಟವು. ಕೌಂಟ್‌ನ ಅತಿಥಿಗಳಲ್ಲಿ ಕೆಲವರು ಸಿಟಿಂಗ್ ರೂಮಿಗೆ, 
ಮತ್ತೆ ಕೆಲವರು ಲೈಬ್ರರಿಗೆ ನಡೆದರು . 

ಕೌಂಟ್ ಎಲೆಗಳನ್ನು ಬೀಸಣಿಗೆಯ ಆಕಾರದಲ್ಲಿ ಹಿಡಿದುಕೊಂಡಿದ್ದಾಗ 
(ಊಟವಾದ ತಕ್ಷಣ ಸಣ್ಣ ನಿದ್ರೆ ತೆಗೆಯುವುದು ಅವನ ಅಭ್ಯಾಸ) ಎಚ್ಚರವಾಗಿರುವುದು 
ಕಷ್ಟ ಅನ್ನಿಸುತ್ತಿದ್ದರಿಂದ ಎಲ್ಲ ಮಾತಿಗೂ ನಗುತ್ತಾ ಕೂತಿದ್ದ. ಕೌಂಟೆಸ್ ಹುಡುಗರಲ್ಲಿ 
ಉತ್ಸಾಹ ಹುಟ್ಟಿಸಿ ಅವರೆಲ್ಲ ಕ್ಲಾವಿಕಾರ್ಡ್ ಮತ್ತು ಹಾರ್ಪ್ ವಾದ್ಯಗಳ ಹತ್ತಿರ 
ಗುಂಪುಗೂಡಿದ್ದರು. ಎಲ್ಲರೂ ಕೋರಿಕೊಂಡರೆಂದು ಜೂಲಿ ಹಾರ್ಪ್ ಮೇಲೆ 
ಚಿಕ್ಕದೊಂದು ಹಾಡು ನುಡಿಸಿದಳು . ಆಮೇಲೆ ಉಳಿದ ಹೆಂಗಸರೊಂದಿಗೆ ತಾನೂ 
ಸೇರಿ ನತಾಶಾ ಮತ್ತು ನಿಕೋಲಸ್ ಏನಾದರೂ ಹಾಡಬೇಕು ಅನ್ನುತ್ತಾ 
ಒತ್ತಾಯಮಾಡಿದಳು. ಅವರಿಬ್ಬರಿಗೂ ಚೆನ್ನಾಗಿ ಹಾಡುತ್ತಾರೆ ಅನ್ನುವ ಕೀರ್ತಿ 
ಇತ್ತು. ನತಾಶಾಳನ್ನು ಎಲ್ಲರೂ ದೊಡ್ಡವಳ ಹಾಗೆಯೇ ಕಾಣುತ್ತಿದ್ದರು. ಅದರಿಂದ 
ಅವಳಿಗೆ ಹೆಮ್ಮೆ ಅನ್ನಿಸುತಿತ್ತು, ಸ್ವಲ್ಪ ನಾಚಿಕೆಯೂ ಆಗುತ್ತಿತ್ತು. 

' ಯಾವುದು ಹೇಳೋಣ?' ನತಾಶಾ ಕೇಳಿದಳು. 
- ' ದಿ ಸಿಂಗ್ ' ಆಗಬಹುದು'೨೮ ಅಂದ ನಿಕೋಲಸ್ . 

'ಹಾಗಾದರೆ ಶುರುಮಾಡೋಣವಾ ಬೋರಿಸ್ ಬಾ ಇಲ್ಲಿ! ಅರೆ, ಸೋನ್ಯಾ 
ಎಲ್ಲಿ ಹೋದಳು ?” ನತಾಶಾ ಸುತ್ತಲೂ ಕಣ್ಣಾಡಿಸಿ ಗೆಳತಿಯನ್ನು ಕಾಣದೆ ಅವಳನ್ನು 
ಹುಡುಕಿಕೊಂಡು ಬರಲು ಹೋದಳು. 
- ಸೋನ್ಯಾಳ ಕೋಣೆಗೆ ಓಡಿದಳು. ಗೆಳತಿ ಅಲ್ಲಿರಲಿಲ್ಲ. ನರ್ಸರಿಗೆ ಓಡಿದಳು , 
ಅಲ್ಲೂ ಇರಲಿಲ್ಲ. ಹಾಗಾದರೆ ಉಗ್ರಾಣದ ಹತ್ತಿರ ಓಣಿಯಲ್ಲಿ ಇಟ್ಟಿರುವ 
ದೊಡ್ಡಪೆಟ್ಟಿಗೆಯ ಹತ್ತಿರ ಇರುತ್ತಾಳೆ ಅಂದುಕೊಂಡಳು . ರೋಸ್ಟೋವ್ ಮನೆಯ 
ಹುಡುಗಿಯರೆಲ್ಲ ಬೇಸರವಾದಾಗ ಹೋಗಿ ದುಃಖಿಸುವ ಜಾಗ ಅದು, ಸೋನ್ಯಾ 
ಅಲ್ಲಿದ್ದಳು. ಪೆಟ್ಟಿಗೆಯ ಮೇಲೆ ಹಾಸಿದ್ದ ಅಜ್ಜಿಯ ಕಾಲದ ಕೊಳಕು ಫೆದರ್ ಬೆಡ್ಡಿನ 
ಮೇಲೆ ಹಾಸಿಗೆಗೆ ಮುಖ ಒತ್ತಿ ಮಲಗಿದ್ದಳು . ಅವಳು ತೊಟ್ಟಿದ್ದ ಪಿಂಕ್ ಪಾರ್ಟಿ 
ಡ್ರೆಸ್ಸು ಸುಕ್ಕುಸುಕ್ಕಾಗಿತ್ತು. ಪುಟ್ಟ ಬೆರಳುಗಳಲ್ಲಿ ಮುಖ ಮುಚ್ಚಿಕೊಂಡು ಬಿಕ್ಕುತ್ತಿದ್ದಳು. 
ಅವಳ ಪುಟ್ಟ ಬೋಳು ಭುಜಗಳು ಏರಿಏರಿ ಇಳಿಯುತ್ತಿದ್ದವು. ಅವತ್ತಿನ ಸಡಗರ 
ಸಂತೋಷಗಳನ್ನು ತುಂಬಿಕೊಂಡು ಹೊಳೆಯುತ್ತಿದ್ದ ನತಾಶಾಳ ಮುಖ ತಟ್ಟನೆ 
ಬದಲಾಯಿತು. ನತಾಶಾಳ ಕಣ್ಣು ಕಿರಿದಾದವು. ಕೊರಳು ಕಂಪಿಸಿತು. ತುಟಿಯ 


೯೯ 


ಸಂಪುಟ ೧ - ಸಂಚಿಕೆ ಒಂದು 


ಅಂಚುಗಳು ಇಳಿಬಿದ್ದವು. 

'ಸೋನ್ಯಾ! ಏನಾಯಿತು? ಏನಾಯಿತು ಸೋನ್ಯಾ? ಓ.. ಓ.. ಓ ಓ!' ನತಾಶಾಳ 
ದೊಡ್ಡ ಬಾಯಿ ಇನ್ನೂ ಅಗಲವಾಗಿ ತೆರೆದುಕೊಂಡು ವಿಕಾರವಾಗಿ ಕಾಣುತ್ತಿದ್ದಳು. 
ಕಾರಣವಿಲ್ಲದೆ ಅಳುವ ಮಗುವಿನ ಹಾಗೆ ಅತ್ತಳು. ಸೋನ್ಯಾ ಅಳುತ್ತಿದ್ದಾಳೆಂದೇ 
ನತಾಶಾ ತಾನೂ ದೊಡ್ಡ ದನಿಯಲ್ಲಿ ರೋದಿಸಿದಳು. ಸೋನ್ಯಾ ತಲೆ ಎತ್ತಿ 
ಮಾತಾಡುವುದಕ್ಕೆ ನೋಡಿದಳು . ಆಗಲಿಲ್ಲ. ಮುಖವನ್ನು ಮತ್ತಷ್ಟು ಬಿಗಿಯಾಗಿ 
ಹಾಸುಗೆಗೆ ಒತ್ತಿಕೊಂಡಳು. ನತಾಶಾ ಜೋರಾಗಿ ಅಳುತ್ತಾ, ನೀಲಿಗೆರೆಗಳ ತುಪ್ಪುಳದ 
ಹಾಸಿಗೆಯ ಮೇಲೆಕೂತು ಗೆಳತಿಯನ್ನು ಅಪ್ಪಿಕೊಂಡಳು. ಸೋನ್ಯಾ ಕಷ್ಟಪಟ್ಟುಕೊಂಡು 
ಅರ್ಧ ಎದ್ದು ಕಣ್ಣು ಒರೆಸಿಕೊಂಡು ಮಾತನಾಡಿದಳು. 

'ಹೊರಟುಹೋಗುತಾನೆ ... ನಿಕಾಲಸ್...ಇನ್ನೊಂದೇ ವಾರ...ಆರ್ಡರು 
ಬಂದುಬಿಟ್ಟಿದೆ...ಅವನೇ ಹೇಳಿದ... ಥ ಅಳಬಾರದು ನಾನು...' ಅನ್ನುತ್ತಾ ಕೈಯಲ್ಲಿ 
ಹಿಡಿದಿದ್ದ ಮುದುರಿಹೋದ ಹಾಳೆಯನ್ನು ತೋರಿಸಿದಳು. ಅದರಲ್ಲಿ ನಿಕೋಲಸ್ 
ಪದ್ಯ ಬರೆದುಕೊಟ್ಟಿದ್ದ. “ ಅಳಬಾರದು ಅಂದುಕೊಂಡರೂ ಅಳು ಬರತ್ತೆ...ಏನು 
ಮಾಡಲಿ ಗೊತ್ತಾಗಲ್ಲ...ಎಷ್ಟು ಒಳ್ಳವನು...!” 

ಅವನು ಎಷ್ಟು ಒಳ್ಳೆಯವನು ಅನ್ನುವುದು ಮನಸ್ಸಿಗೆ ಬಂದು ಮತ್ತೆ ಅಳುವುದಕ್ಕೆ 
ಶುರುಮಾಡಿದಳು. . 

'ನಿನಗೇನು ಕಷ್ಟ ಹೇಳು...ನನಗೇನೂ ನಿನ್ನ ಮೇಲೆ ಹೊಟ್ಟೆಕಿಚ್ಚಿಲ್ಲ... ಐ ಲವ್ 
ಯೂ ... 

ಬೋರಿಸ್ ಕೂಡ ನನಗೆ ಇಷ್ಟ,' ಹೀಗೆ ಮಾತನಾಡುತ್ತಾ ಸೋನ್ಯಾ ಒಂದಿಷ್ಟು 
ಸುದಾರಿಸಿಕೊಂಡಳು. ' ಚೆನ್ನಾಗಿದ್ದಾನೆ, ಒಳ್ಳೆಯ ಹುಡುಗ...ನಿಮಗೇನೂ ಕಷ್ಟ 
ಇಲ್ಲ... ಆದರೆ ನಿಕೋಲಸ್ ನನಗೆ ಕಸಿನ್ ಆಗಬೇಕು... ಮೆಟ್ರೋಪಾಲಿಟನ್ ಛೀಫ್ 
ಪ್ರೀಸ್‌ನನ್ನೇ ಕೇಳಬೇಕೋ ಏನೋ ...ಆದರೂ ಆಗಲ್ಲ ಬಿಡು... ಮತ್ತೆ ಮಮ್ಮಾ 
(ಸೋನ್ಯಾಕೌಂಟೆಸ್‌ಳನ್ನು ತನ್ನ ತಾಯಿ ಎಂದೇ ಭಾವಿಸಿ, ಹಾಗೇ ಕರೆಯುತ್ತಿದ್ದಳು) 
ನಾನು ನಿಕೋಲಸ್‌ನ ಭವಿಷ್ಯ ಹಾಳುಮಾಡುತ್ತಿದ್ದೀನಿ ಅಂದುಕೊಳ್ಳುತ್ತಾರೆ, ನನಗೆ 
ಕೃತಜ್ಞತೆ ಇಲ್ಲ, ಕೆಟ್ಟವಳು ಅಂದುಕೊಳ್ಳುತ್ತಾರೆ... ಆದರೆ ದೇವರಾಣೆ...' ಹಾಗನ್ನುತ್ತಾ 
ಸೋನ್ಯಾ ಶಿಲುಬೆಯ ಆಕಾರದಲ್ಲಿ ಎದೆಯ ಮೇಲೆ ಕೈಯಾಡಿಸಿಕೊಂಡಳು, 
'ದೇವರಾಣೆಗೂ ನನಗೆ ಮಮ್ಮಾ ಮೇಲೆ ತುಂಬಾ ಪ್ರೀತಿ ಇದೆ. ನಿನ್ನ ಕಂಡರೂ 
ಅಷ್ಟೆ, ಎಲ್ಲಾರ ಮೇಲೂ ಇದೆ.. ಆ ವೇರಾ ಇದಾಳಲ್ಲ... ಏನು ಮಾಡಿದೇನೆ ನಾನು 
ಅವಳಿಗೆ ? ಏನು ಮಾಡಿದೇನೆ ಹೇಳು? ನಿನಗೋಸ್ಕರ ನಾನು ಏನು ಬೇಕಾದರೂ 


೨೮ ದಿ ಸ್ಪಿಂಗ್: ಸಂಗೀತಗಾರ ಮೊಝಾರ್ಟ್ ಬರೆದದ್ದು ಅನ್ನುವ ಮಾತು ಚಾಲ್ತಿಯಲ್ಲಿತ್ತು. 

ಟಾಲ್ಸ್ಟಾಯ್ ಈ ಹಾಡನ್ನು ತನ್ನ ಶಿಷ್ಯರಿಗಾಗಿ ಆಗಾಗ ಹಾಡುತ್ತಿದ್ದ . 


೧೦೦ 

ಯುದ್ಧ ಮತ್ತು ಶಾಂತಿ 
ಮಾಡತೇನೆ, ಏನು ಬೇಕಾದರೂ ತ್ಯಾಗ ಮಾಡತೇನೆ... ನನ್ನ ಹತ್ತಿರ ಏನೂ ಇಲ್ಲವಲ್ಲಾ...' 

ಸೋನ್ಯಾ ಮಾತು ಮುಂದುವರೆಸಲಾಗದೆ ಮತ್ತೆ ಕೈಯಲ್ಲಿ ಮುಖ 
ಮುಚ್ಚಿಕೊಂಡು ಫೆದರ್‌ಬೆಡ್‌ನಲ್ಲಿ ಮುಖ ಹುದುಗಿಸಿಕೊಂಡಳು. ನತಾಶಾ ಮನಸ್ಸು 
ಸಮಾಧಾನಕ್ಕೆ ತಿರುಗಿತ್ತು . ಗೆಳತಿಯ ದುಃಖ ಎಷ್ಟು ಗಹನವಾದದ್ದು ಅನ್ನುವುದನ್ನು 
ಬಲ್ಲೆ ಅನ್ನುವಂಥ ನೋಟ ಅವಳ ಮುಖದಲ್ಲಿತ್ತು. 

'ಸೋನ್ಯಾ' ಅಂದಳು ತಟ್ಟನೆ. ಗೆಳತಿಯ ದುಃಖಕ್ಕೆ ನಿಜವಾದ ಕಾರಣ 
ಅವಳಿಗೆ ಹೊಳೆದಹಾಗಿತ್ತು. “ಊಟ ಆದಮೇಲೆ ವೇರಾ ಸಿಕ್ಕಿ ಏನೋ ಅಂದಿರಬೇಕು, 
ಅಲ್ಲವಾ ? ಏನು ಹೇಳಿದಳು, ಹೇಳು.' 

' ಹೂಂ , ಇದು, ನಿಕೋಲಸ್ ಬರೆದುಕೊಟ್ಟ ಪದ್ಯ . ಇನ್ನೊಂದಷ್ಟು ನಾನೇ 
ಕಾಪಿಮಾಡಿಟ್ಟುಕೊಂಡಿದ್ದೆ . ಇಲ್ಲೇ ನನ್ನ ಟೇಬಲ್‌ಮೇಲೆ ಇದ್ದವು. ವೇರಾ ಕಣ್ಣಿಗೆ 
ಬಿತ್ತು. 'ಮಮಾಗೆ ತೋರಿಸತೇನೆ, ನೀನು ಎಷ್ಟು ಕೆಟ್ಟವಳು ಅಂತ ಹೇಳತೇನೆ, 
ನೀನು ನಿಕೋಲಸ್‌ನ ಮದುವೆ ಆಗೋಕೆಮಮ್ಮಾ ಬಿಡಲ್ಲ, ನಿಕೋಲಸ್ ಜೂಲಿಯನ್ನ 
ಮದುವೆ ಆಗತಾನೆ ' ಅಂದಳು. ಇವನ್ನೆಲ್ಲ ಜೂಲಿ ಜೊತೆ ಹೇಗೆ ಮಾತಾಡುತಾ 
ಇದದ್ದ ನೀನೇ ನೋಡಿದೆಯಲ್ಲ... ಯಾಕೇ ನತಾಶಾ, ಯಾಕೇ ?' 
- ಮತ್ತೆ ಇನ್ನೂ ಜೋರಾಗಿ ಬಿಕ್ಕಳಿಸಿ ಅತ್ತಳು. ನತಾಶಾ ಅವಳನ್ನು ಎಬ್ಬಿಸಿ , 
ಅಪ್ಪಿಕೊಂಡು, ತಾನೂ ಕಣ್ಣೀರಿನ ನಡುವೆಯೇ ಸಣ್ಣದಾಗಿ ನಗುತ್ತಾ ಸಮಾಧಾನ 
ಹೇಳಿದಳು . 
- “ ಅವಳ ಮಾತು ಕೇಳಬೇಡ, ಕಣೇ , ಅವಳ ಮಾತು ನಂಬಲೇ ಬೇಡ! 
ನಾವೆಲ್ಲ, ನೀನು, ನಿಕೋಲಸ್, ನಾನು, ಊಟ ಆದಮೇಲೆ ಡ್ರಾಯಿಂಗ್ ರೂಮಿನಲ್ಲಿ 
ಮಾತಾಡತಾ ಕೂತಿದ್ದವಿ... ಜ್ಞಾಪಕ ಇದೆಯಾ. .? ಅವತ್ತು ? ಎಲ್ಲಾ ತೀರ್ಮಾನ 
ಮಾಡಿದ್ದೆವು ಅಲ್ಲವಾ ? ಹೇಗೆ ತೀರ್ಮಾನಕ್ಕೆ ಬಂದೆವೋ ಮರೆತು ಹೋಗಿದೆ, 
ಆದರೆ ತೀರ್ಮಾನಮಾಡಿಕೊಂಡಿದ್ದಿವಿ . ಜ್ಞಾಪಕ ಇದೆಯಾ? ಯಾರನ್ನ ಮದುವೆ 
ಆಗಬೇಕು, ಕಷ್ಟ ಬಂದರೆ ಹೇಗೆ ಏನೇನು ಏರ್ಪಾಡು ಮಾಡಿಕೊಳ್ಳಬೇಕು 
ಅಂತೆಲ್ಲ...ಎಷ್ಟು ಚೆನ್ನಾಗಿತ್ತಲ್ಲಾ! ಅಂಕಲ್ ಶಿನ್ಶಿನ್ ಇದಾರಲ್ಲ ಅವರ ತಮ್ಮ ಕಸಿನ್ 
ಅನ್ನೇ ಮದುವೆ ಆಗಿರುವುದು ಅಲ್ಲವಾ? ಮತ್ತೆ ನೀನು ನಮಗೆ ನೇರವಾದ ಕಸಿನ್ 
ಕೂಡ ಅಲ್ಲ, ಸೆಕೆಂಡ್ ಕಸಿನ್ನು . ಮದುವೆ ಆಗಬಹುದು ಅಂತ ಬೋರಿಸ್ ಕೂಡ 
ಹೇಳಿದ್ದ . ನಿಮ್ಮ ಬಗ್ಗೆ ಅವನ ಹತ್ತಿರ ಹೇಳಿದ್ದೇನೆ, ನಿನಗೆ ಗೊತ್ತಲ್ಲವಾ ? ಬೋರಿಸ್ 
ತುಂಬಾ ಜಾಣ, ತುಂಬಾ ಒಳ್ಳೆಯವನು! ಅಳಬೇಡಸೋನ್ಯಾ, ಮುದ್ದು ಸೋನ್ಯಾ, 
ಅಳಬೇಡಾ!' ಅನ್ನುತ್ತಾ ಮುತ್ತಿಟ್ಟು ನಕ್ಕಳು . ' ವೇರಾಗೆ ಹೊಟ್ಟೆ ಕಿಚ್ಚು, ಅವಳ 
ಮಾತು ತಲೆಗೆ ಹಚ್ಚಿಕೋ ಬೇಡ. ಎಲ್ಲ ಸರಿ ಹೋಗುತ್ತೆ. ಅವಳೇನು ಮಮ್ಮಾ 
ಹತ್ತಿರ ಹೇಳಲ್ಲ. ನಿಕೋಲಸ್ ತಾನೇ ಎಲ್ಲ ಹೇಳ್ತಾನೆ. ಮತ್ತೆ ಜೂಲಿ ವಿಚಾರ 


ಸಂಪುಟ ೧ - ಸಂಚಿಕೆ ಒಂದು 

೧೦೧ 
ಅವನ ತಲೆಗೇ ಬಂದಿಲ್ಲ' ಅನ್ನುತ್ತಾ ಸೋನ್ಯಾಳ ನೆತ್ತಿಗೆ ಮುತ್ತಿಕ್ಕಿದಳು. ಸೋನ್ಯಾ 
ಅರ್ಧ ಎದ್ದು ಅವಳೊಳಗಿನ ಬೆಕ್ಕು ಮರಿ ಜೀವಗೊಂಡು ಅದರ ಕಣ್ಣುಗಳಲ್ಲಿ 
ಹೊಳಪು ಕಾಣಿಸಿ, ಬಾಲ ನಿಗುರಿಸಿಕೊಂಡು, ನೆಗೆದು, ಉಗುರೆಳೆದುಕೊಂಡ 
ಮೃದುಪಾದಗಳನ್ನು ನೆಲಕ್ಕೂರಿ, ಇನ್ನೇನು ಚೆಂಡು ಉರುಳಿಸಿ , ಜಾಣ ಬೆಕ್ಕಿನ ಥರ 
ಅಡುತ್ತದೆ ಅನ್ನುವಹಾಗಿತ್ತು. 

- ' ಹಾಗನ್ನುತ್ತೀಯಾ? ನಿಜವಾಗಿ ? ಸತ್ಯಾ ?” ತನ್ನ ಫ್ರಾಕು ನೇವರಿಸಿಕೊಳ್ಳುತ್ತಾ, 
ಕೂದಲು ಸರಿಪಡಿಸಿಕೊಳ್ಳುತ್ತಾ ಸೋನ್ಯಾ ಕೇಳಿದಳು. 

“ನಿಜಾ! ಸತ್ಯಾ! ಜಡೆಯಿಂದ ತಪ್ಪಿಸಿಕೊಂಡು ಬಂದು ಮುಖದ ಮೇಲೆ 
ಆಡುತ್ತಿದ್ದ ಸೋನ್ಯಾಳ ಕೂದಲೊಂದನ್ನು ಮತ್ತೆ ಹಿಂದಕ್ಕೆ ತಳ್ಳಿ ಸರಿಮಾಡುತ್ತಾ 
ನತಾಶಾ ಹೇಳಿದಳು. ಇಬ್ಬರೂ ನಕ್ಕರು. 

'ನಡಿ ಇಬ್ಬರೂ ಹೋಗಿ ದಿ ಸಿಂಗ್ ಹಾಡು ಹೇಳೋಣ.” 
' ನಡಿ, ಮತ್ತೆ!' . 

“ನಿನಗೆ ಗೊತ್ತಾ? ನನ್ನ ಎದುರಿಗೆ ಕೂತಿದ್ದನಲ್ಲ, ಡುಮ್ಮ ಪಿಯರೆ, ಅವನು 
ಎಷ್ಟು ತಮಾಷೆ ಗೊತ್ತಾ!' ಇದ್ದಕ್ಕಿದ್ದಂತೆ ನಿಂತ ನತಾಶಾ ಹೇಳಿದಳು. ' ನನಗೆ 
ತುಂಬಾ ಖುಷಿ ಆಗಿದೇಮಾ!' ಅನ್ನುತ್ತಾ ಜೋರಾಗಿ ಓಡಿದಳು. ಬಟ್ಟೆಗೆ ಮತ್ತಿಕೊಂಡಿದ್ದ 
ತುಪ್ಪಳವನ್ನು ಕೊಡವಿಕೊಳ್ಳುತ್ತಾ, ಪದ್ಯವನ್ನು ಕೊರಳ ಕೆಳಗೆ ಪುಟ್ಟ ಎದೆಗೆ ಹತ್ತಿರವಾಗಿ 
ಬಚ್ಚಿಟ್ಟುಕೊಕೊಂಡು, ಲಘುವಾದ ಹೆಜ್ಜೆಯಲ್ಲಿ ಸಂತೋಷ ತುಂಬಿಕೊಂಡು, 
ಮುಖದಲ್ಲಿ ನಗು ನಾಚಿಕೆಗಳನ್ನು ತುಂಬಿಕೊಂಡು ಸೋನ್ಯಾಕೂಡ ನತಾಶಾಳ 
ಹಿಂದೆಯೇ ಓಡುತ್ತಾ ದಿವಾನಖಾನೆಗೆ ಹೋದಳು. 
ಆ ಅತಿಥಿಗಳ ಕೋರಿಕೆಯ ಮೇರೆಗೆ ಹುಡುಗರೆಲ್ಲ ಸೇರಿ ದಿ ಸಿಂಗ್ ಎಂಬ 
ಚೌಪದಿ ಹಾಡಿದರು. ಎಲ್ಲರೂ ಸಂತೋಷಪಟ್ಟರು. ಆಮೇಲೆ ನಿಕೋಲಸ್ ಆಗತಾನೇ 
ತಾನು ಕಲಿತಿದ್ದ ಹಾಡು ಹೇಳಿದ. 


ಅಲ್ಲಿ ಇರುಳ ಚಂದಿರನ ಬೆಳಕು ಹೊಳೆಯುವಲ್ಲಿ | 
ಎಲ್ಲಿಯೋ ಯಾರೋ ನನಗಾಗಿ ಕಾದಿರುವರೆಂದು 
ಒಲುಮೆ ತುಂಬಿ ನೆನೆಯುವುದೆಷ್ಟು ಚಂದವೋ 
ನಲುಮೆಯ ಪ್ರೀತಿ ದೊರೆವುದೆಂದು ನಂಬುವುದೆಷ್ಟು ಅಂದವೋ 


ಪುಟ್ಟ ಬೆರಳಿನಲಿ ಹೊನ್ನ ಕಿನ್ನರಿಯ 
ತಂತಿಯನು ಮೀಟುವಳು, ಹಾಡುವಳು 
' ಬಾ ಬಾರೋ ಇನಿಯಾ, ಬಾ ' 


೧೦೨ 


ಯುದ್ಧ ಮತ್ತು ಶಾಂತಿ 


ತುಂಬಿದೊಲವು ಅಲ್ಲೇ ಸುಳಿದಾಡುವುದು 


ಸಗ್ಗ ಅರಳೀತು ಒಂದು ದಿನ | 
ಆದರಯ್ಯೋ ನನ್ನೊಲವು ಅಲ್ಲಿರದು 


ಅವನಿನ್ನೂ ಹಾಡು ಮುಗಿಸುವ ಮೊದಲೇ ಹುಡುಗ ಹುಡುಗಿಯರೆಲ್ಲಾ 
ಎದ್ದು ದೊಡ್ಡ ಹಾಲ್‌ನಲ್ಲಿ ಡಾನ್ಸು ಮಾಡಲು ಹೊರಟಿದ್ದರು. ಹೆಜ್ಜೆಗಳ ಸದ್ದು, 
ಗ್ಯಾಲರಿಯಲ್ಲಿ ಕೂತಿದ್ದ ಸಂಗೀತಗಾರರು ಕೆಮ್ಮಿ ಗಂಟಲು ಸರಿಮಾಡಿಕೊಳ್ಳುತ್ತಿರುವ 
ಸದ್ದು ಕೇಳಿಸಿದವು. 
- ಪಿಯರೆ ದಿವಾನ್‌ಖಾನೆಯಲ್ಲಿದ್ದ. ಅವನು ಈಗಷ್ಟೇ ವಿದೇಶದಿಂದ ಬಂದಿದ್ದಾನೆ 
ಅನ್ನುವುದು ಗೊತ್ತಿದ್ದ ಶಿನ್‌ಶಿನ್ ಪಿಯರೆಯ ಹತ್ತಿರ ಬಂದು ರಾಜಕೀಯದ 
ಚರ್ಚೆ ಶುರುಮಾಡಿದ್ದ . ಆ ಚರ್ಚೆಯಿಂದ ಪಿಯರೆಗೆ ಬೋರ್ ಆಗಿತ್ತು. ಇನ್ನೂ 
ಕೆಲವರು ಆ ಮಾತಿಗೆ ಸೇರಿಕೊಂಡಿದ್ದರು. ಸಂಗೀತ ಶುರುವಾದಾಗ ನತಾಶಾ 
ಅಲ್ಲಿಗೆ ಬಂದವಳೇ ಸೀದಾ ಪಿಯರೆಯ ಹತ್ತಿರ ಹೋಗಿ, ನಗುತ್ತಾ, ನಾಚಿಕೊಳ್ಳುತ್ತಾ 
“ ಮಮ್ಮಾ ಹೇಳಿದರು, ನೀವು ಡಾನ್ಸಿಗೆ ಬರಬೇಕಂತೆ' ಅಂದಳು. 

“ ನನಗೆ ಸರಿಯಾಗಿ ಹೆಜ್ಜೆ ಹಾಕುವುದಕ್ಕೆ ಬರೋದಿಲ್ಲ. ನೀನು ನನ್ನ ಟೀಚರ್ 
ಆಗುವುದಾದರೆ...' ಅನ್ನುತ್ತಾ ತನ್ನ ದೊಡ್ಡಕೈಯನ್ನು ಪುಟ್ಟ ಹುಡುಗಿಯತ್ತ ಚಾಚುತ್ತಾ 
ಪಿಯರೆ ಹೇಳಿದ. 

ಜೋಡಿಗಳು ತಮ್ಮ ತಮ್ಮ ಜಾಗದಲ್ಲಿ ಸರಿಯಾಗಿ ನಿಲ್ಲುತ್ತಾ ಸಂಗೀತಗಾರರು 
ವಾದ್ಯಗಳನ್ನು ಶ್ರುತಿಮಾಡಿಕೊಳ್ಳುತ್ತಾ ಇರುವಾಗ ಪಿಯರೆ ತನ್ನ ಪುಟ್ಟ ಲೇಡಿಯ 
ಜೊತೆಗೆ ಕೂತಿದ್ದ . ನತಾಶಾಳ ಸಂತೋಷತುಂಬಿ ಬಂದಿತ್ತು . ಅವಳೀಗ ದೊಡ್ಡ 
ಗಂಡಸಿನ ಜೊತೆಗೆ , ಈಗ ತಾನೇ ವಿದೇಶದಿಂದ ಬಂದವನ ಜೊತೆಗೆ ಡಾನ್ನು 
ಮಾಡುವವಳಿದ್ದಳು. ಎಲ್ಲರಿಗೂ ಎದ್ದು ಕಾಣುವ ಹಾಗೆ ತಾನೂ ದೊಡ್ಡ ಹೆಂಗಸೋ 
ಅನ್ನುವ ಹಾಗೆ ಅವನ ಜೊತೆ ಮಾತಾಡುತ್ತಾ ಕೂತಿದ್ದಳು. ಒಂದು ಕೈಯಲ್ಲಿ 
ಬೀಸಣಿಗೆ ಇತ್ತು ಯಾರೋ ಹೆಂಗಸು “ಸ್ವಲ್ಪ ಹಿಡಿದುಕೊಂಡಿರು' ಎಂದು ಹೇಳಿ 
ಕೊಟ್ಟಿದ್ದು. ಘನವಂತರ ಹೆಂಗಸರ ಶೈಲಿಯಲ್ಲಿ ( ಎಲ್ಲಿ ಯಾವಾಗ , ಅದನ್ನು 
ಕಲಿತಿದ್ದಳೋ ) ಬೀಸಣಿಗೆ ಹಿಡಿದುಕೊಂಡು ಆಗಾಗ ಬೀಸಣಿಗೆ ಆಡಿಸುತ್ತಾ, ತನ್ನ 
ಹೀರೋನಕಡೆಗೆ ಬೀಸಣಿಗೆಯ ಅಂಚಿನಿಂದ ದೃಷ್ಟಿ ಬೀರುತ್ತಾ ಮುಗುಳುನಗುತ್ತಾ 
ಕೂತಿದ್ದಳು. 
- “ಅಯ್ಯೋ ! ಅಯ್ಯೋ ! ನೋಡಿ ಇವಳನ್ನ !' ಬಾಲ್‌ರೂಮನ್ನು ದಾಟಿ 
ಹೋಗುತ್ತಿದ್ದ ಕೌಂಟೆಸ್ ನತಾಶಾಳನ್ನು ತೋರಿಸುತ್ತಾ ಉದ್ಧಾರ ಮಾಡಿದಳು. 


೧೦೩ 


ಸಂಪುಟ ೧ - ಸಂಚಿಕೆ ಒಂದು 


ಮಗು ಸ್ವಲ್ಪ ನಾಚಿಕೊಂಡು ನಗು ಬೀರಿದಳು. 

- ' ಯಾಕೆ ಮಮ್ಮಾ, ನನ್ನ ಹಾಗೆ ಯಾಕೆ ನೋಡುತೀ ? ನಾನೇನು ಮಾಡಿದೇ 
ಅಂತ!' 


ಮೂರನೆಯ ಎಕೋಸ್ಟಾಯ್ [ಶೀಘ್ರ ಗತಿಯ ಜಾನಪದ ನೃತ್ಯಗೀತೆ] 
ನಡೆದಿದ್ದಾಗ ಕೌಂಟ್ ಮತ್ತು ಮಾರಿಯಾ ದ್ವಿತ್ರಿಯೇಟ್ನಾ ಅತಿ ಗಣ್ಯರು ಮತ್ತು 
ವಯಸ್ಸಾದವರೊಡನೆ ಕಾರ್ಡು ಆಡುತ್ತಿದ್ದ ಕೋಣೆಯಲ್ಲಿ ಕುರ್ಚಿಗಳು ಸರಿದಾಡಿ 
ಸದ್ದು ಮಾಡಿದವು. ತಮ್ಮ ತಮ್ಮ ಪರ್ಸು ಪಾಕೆಟ್‌ ಬುಕ್‌ಗಳನ್ನು ಸರಿಯಾಗಿ 
ಎತ್ತಿಟ್ಟುಕೊಂಡು ಬಾಲ್‌ರೂಮಿಗೆ ಹೊರಡುವ ಮೊದಲು ಬಹಳ ಹೊತ್ತು ಕುಳಿತೇ 
ಇದ್ದ ಅತಿಥಿಗಳು ಎದ್ದು ನಿಂತು ಮೈ ಮುರಿದರು. ಮೊದಲು ಬಂದವರೆಂದರೆ 
ಮಾರಿಯಾ ದ್ವಿತ್ರಿಯೇಟ್ನಾ ಮತ್ತೆ ಕೌಂಟ್. ಅವರಿಬ್ಬರ ಮುಖದಲ್ಲೂ ಖುಶಿ 
ಕಾಣುತ್ತಿತ್ತು. ಕೌಂಟ್ ಅತಿ ಆಲಂಕಾರಿಕ ವಿನಯ ತೋರುತ್ತಾ ಬ್ಯಾಲೆ ನರ್ತಕನ 
ಶೈಲಿಯಲ್ಲಿ ಬಾಗಿ ಮಾರಿಯಾ ದ್ವಿತ್ರಿಯೇಟ್ನಾಳತ್ತ ತೋಳುನೀಡಿದ. ಮತ್ತೆ ನೆಟ್ಟಗೆ 
ನಿಂತು , ಮುಖದಲ್ಲಿ ಮುನ್ನುಗ್ಗುವ ಉತ್ಸಾಹ ತೋರುತ್ತಾ ಜಾಣ ನಗು ಬೀರುತ್ತಾ 
ಹಾಡಿನ ಕೊನೆಯ ಚರಣ ಮುಗಿಯುತ್ತಿದ್ದ ಹಾಗೆಯೇ ಚಪ್ಪಾಳೆ ತಟ್ಟಿ ಗ್ಯಾಲರಿಯಲ್ಲಿದ್ದ 
ಸಂಗೀತಗಾರರ ಗಮನ ಸೆಳೆದು, ವಯಲಿನ್ ನುಡಿಸುತ್ತಿದ್ದವನನ್ನು 'ಸೈಮನ್, 
ಡೇನಿಯಲ್ ಕೂಪರ್ ನುಡಿಸುತ್ತೀಯಾ?' ಅಂತ ಕೇಳಿದ. 

ಆ ಯುವಕನಾಗಿದ್ದಾಗಿನಿಂದಲೂ ಕೌಂಟ್‌ಗೆ ಬಹಳ ಪ್ರಿಯವಾದ ನೃತ್ಯ ಅದು. 
ಸರಿಯಾಗಿ ಹೇಳಬೇಕೆಂದರೆ ಡೇನಿಯಲ್ ಕೂಪರ್ ಇಂಗ್ಲಿಷ್ ನರ್ತನದ ಒಂದು 
ಮಾದರಿಯಾಗಿತ್ತು. ೨೯ 

- 'ಅಯ್ಯೋ ! ಪಪ್ಪಾನ ನೋಡಿ! ಡಾನ್ನು ಮಾಡ್ತಾ ಇದಾರೆ!' ನತಾಶಾ ಇಡೀ 
ಹಾಲ್‌ಗೆ ಕೇಳುವಂತೆ ಜೋರಾಗಿ ಕೂಗಿದಳು. ತನ್ನ ಜೊತೆಗೆ ಇರುವವನು 
ದೊಡ್ಡ ವಯಸ್ಸಿನ ಯುವಕ ಅನ್ನುವುದನ್ನೂ ಪೂರಾ ಮರೆತಿದ್ದಳು. ಗುಂಗುರು 
ತಲೆಗೂದಲು ಮೊಳಕಾಲಿಗೆ ತಾಗುವಂತೆ ಬಾಗುವಾಗ ಇಡೀ ಹಾಲ್‌ನಲ್ಲಿ ಅವಳ 
ನಗು ಮೊಳಗಿತು. ಖುಷಿ ಮುದುಕ ತನಗಿಂತ ಎತ್ತರವಾಗಿದ್ದ ಗಂಭೀರ ಸ್ವಭಾವದ 
ಮಾರಿಯಾ ದ್ವಿತ್ರಿಯೇಟ್ನಾಳನ್ನು ಜೋಡಿ ಮಾಡಿಕೊಂಡು ಲಯಕ್ಕೆ ತಕ್ಕ ಹಾಗೆ 


೨೯ ಎಕೋಸೈಸ್...ಡೇನಿಯಲ್ ಕೂಪರ್...ಆಂಗ್ಲಾಯ್: ಎಕೋಸೈಸ್ - ನರ್ತಕರು ಜೋಡಿಯಾಗಿ 

ಎದುರುಬದಿರು ನಿಂತು ಮಾಡುವ ಜಾನಪದ ನೃತ್ಯ, ಆಂಗ್ಲಾಯ್- ಹದಿನೆಂಟು ಮತ್ತು 
ಹತ್ತೊಂಬತ್ತನೆಯ ಶತಮಾನಗಳಲ್ಲಿ ಇಂಗ್ಲಿಶ್ ನೃತ್ಯ ಮಾದರಿಯನ್ನು ಅನುಕರಿಸುತ್ತಿದ್ದ ಹಲವು 
ಬಗೆಯ ನರ್ತನಗಳನ್ನು ಸೂಚಿಸುವ ಪದ. ಡೇನಿಯಲ್ ಕೂಪರ್ - ಇಂಥ ನರ್ತನದ ಹಲವು 
ಮಾದರಿಗಳಲ್ಲಿ ಒಂದು. 


೧೦೪ 


ಯುದ್ಧ ಮತ್ತು ಶಾಂತಿ 
ಅವಳ ತೋಳು ಹಿಡಿದು, ಭುಜ ಹಿಂದೆ ಮಾಡಿ , ಕಾಲಲ್ಲಿ ತಾಳ ಹಾಕುತ್ತಾ ಪ್ರೇಕ್ಷಕರ 
ಮೇಲೆ ದಯೆ ತೋರುವ ಹಾಗೆ ಮುಂದೆ ನಡೆಯಲಿರುವ ಡಾನ್ಸಿನ ಬಗ್ಗೆ ಅವರ 
ಹಸಿವೆ ಹೆಚ್ಚಿಸುವ ಹಾಗೆ ನಗುತ್ತಾ ಇದ್ದವನನ್ನು ನೋಡಿ ಅಲ್ಲಿದ್ದವರೆಲ್ಲ ನಿಜವಾಗಿಯೂ 
ಆನಂದಿಸುತ್ತಿದ್ದರು. ಹೆಸರು ಡ್ಯಾನಿಯಲ್ ಕೂಪರ್ ಎಂದಿದ್ದರೂ ರಶಿಯಾದ 
ರೈತರ ನರ್ತನವನ್ನು ಹೋಲುವ ಕುಣಿತಕ್ಕೆ ತಕ್ಕ ನಲಿವಿನ ಸ್ವರಗಳನ್ನು ಎತ್ತಿಕೊಳ್ಳುವ 
ಹೊತ್ತಿಗೆ ಬಾಲ್ ರೂಮಿನ ಬಾಗಿಲುಗಳೆಲ್ಲ ಮನೆಯ ಕೆಲಸಗಾರ ನಗುಮುಖಗಳಿಂದ 
ತುಂಬಿಹೋಗಿದ್ದವು. ತಮ್ಮ ಒಡೆಯ ಖುಷಿಮಾಡುತ್ತಿರುವುದನ್ನು ಕಣ್ಣಾರೆ ಕಾಣಲು 
ಗಂಡಾಳುಗಳು ಒಂದು ಬದಿಯಲ್ಲಿ, ಹೆಣ್ಣಾಳುಗಳು ಇನ್ನೊಂದು ಬದಿಯಲ್ಲಿ 
ನಿಂತಿದ್ದರು. 
ಆ ಬಾಗಿಲೊಂದರ ಹತ್ತಿರ ನಿಂತಿದ್ದ ವಯಸ್ಸಾದ ಆಯಾ ಒಡೆಯನ ಕುಣಿತಕ್ಕೆ 
ರೈತರ ಹಾಗೆ ಚಪ್ಪಾಳೆ ತಟ್ಟುತ್ತಾ 'ಅಯ್ಯೋ ನನ್ನಪ್ಪನೇ ! ಅಹಾ ಗರುಡಾಳ ಪಕ್ಷಿ '೩೦ 
ಅಂದಳು. ಕೌಂಟ್ ಒಳ್ಳೆಯ ಡಾನ್ಸರ್‌. ಅದನ್ನು ಅವನೂ ಬಲ್ಲ. ಆದರೆ ಅವನ 
ಲೇಡಿ ನರ್ತಿಸುತ್ತಿರಲಿಲ್ಲ, ಡಾನ್ಸುಮಾಡುವುದು ಅವಳಿಗೆ ಇಷ್ಟವೂ ಇರಲಿಲ್ಲ. ದೊಡ್ಡ 
ಆಕಾರದ ಸ್ಕೂಲವಾದ ಶರೀರವನ್ನು ನೇರವಾಗಿಟ್ಟುಕೊಂಡು, (ಕೌಂಟೆಸ್‌ಳ ಕೈಗೆ 
ವ್ಯಾನಿಟಿ ಬ್ಯಾಗನ್ನು ಕೊಟ್ಟಿದ್ದಳು) ಈಗ ಬಿಡುವಾಗಿರುವ ತೋರ ಕೈಗಳನ್ನು 
ಸುಮ್ಮನೆ ಇಳಿಬಿಟ್ಟುಕೊಂಡು ಹೆಜ್ಜೆ ಹಾಕುತ್ತಿದ್ದಳು. ಅವಳ ಇಡೀ ದೇಹದಲ್ಲಿ ಡಾನ್ನು 
ಮಾಡುತ್ತಿದ್ದದ್ದು ಏನಾದರೂ ಇದ್ದರೆ ಅದು ಸೆಡವು ಮತ್ತು ಚೆಲುವಿನ ಸುಂದರ 
ಮಿಶ್ರಣವಾಗಿದ್ದ ಅವಳ ಮುಖ ಮಾತ್ರ ಕೌಂಟ್ ತನ್ನ ಇಡೀ ದುಂಡು ಮೈಯನ್ನು 
ಬಳಸಿಕೊಂಡು ಕುಣಿಯುತ್ತಿದ್ದರೆ ಮಾರಿಯಾ ದ್ವಿತ್ರಿಯೇಟ್ನಾ ಆಗಾಗ ನಗುವನ್ನು 
ಹಿಗ್ಗಿಸುತ್ತಾ ಮೂಗಿನ ಹೊಳ್ಳೆಗಳನ್ನು ಅದುರಿಸುತ್ತಾ ಅಷ್ಟರಿಂದಲೇ ನರ್ತನದ 
ಅಭಿನಯ ಮಾಡುತ್ತಿದ್ದಳು. ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದ ಶಕ್ತಿಯಿಂದ, ಬೆರಗಾಗುವಷ್ಟು 
ಚುರುಕಾದ, ಲಘುವಾದ ಹೆಜ್ಜೆಗಳಿಂದ, ಅನಿರೀಕ್ಷಿತವಾದ ಚಲನೆಯ ಕೌಶಲದಿಂದ 
ಎಲ್ಲರನ್ನೂ ಮರುಳುಮಾಡಿದ್ದರೆ, ಮಾರಿಯಾ ದ್ವಿತ್ರಿಯೇಟ್ನಾ ಬೀರಿದ ಪ್ರಭಾವವೇನೂ 
ಕಡಮೆಯದಲ್ಲ . ತಿರುಗುವಾಗ ಅಪ್ರಯತ್ನವಾಗಿ ಎಂಬಂತೆ ಮಾಡುತ್ತಿದ್ದ ಭುಜಗಳ 
ಕುಲುಕು, ಕೈಗಳ ಬಾಗು ಬಳುಕು , ತಟ್ಟನೆ ಹೊಸ ಬಗೆಯದೆಂಬಂತೆ ಕಾಣುತ್ತಿದ್ದ 
ಪಾದ ಚಲನೆಗಳನ್ನು ಕಂಡು ಇಷ್ಟು ಗಾತ್ರವಿದ್ದರೂ , ಸದಾ ಮುಖ ಗಂಟಿಕ್ಕಿಕೊಂಡೇ 
ಇದ್ದರೂ ಇಷ್ಟು ಚೆನ್ನಾಗಿ ಕುಣಿಯುತ್ತಾಳಲ್ಲ ಎಂದು ನೋಡುವವರು 
ಮೆಚ್ಚಿಕೊಳ್ಳುತ್ತಿದ್ದರು. ನರ್ತನದ ಆವೇಗ ಹೆಚ್ಚುತ್ತ ಹೋಯಿತು. ಹಾಲ್‌ನಲ್ಲಿ ನರ್ತಿಸುತ್ತಿದ್ದ 
೩೦ ರಶಿಯನ್ ಜಾನಪದದಲ್ಲಿ ರೈತರ ಮಾತಿನಲ್ಲಿ ಮನೆಯವರನ್ನು ಗರುಡ, ಗರುಡಾಳ, ಪಾರಿವಾಳ 

ಇತ್ಯಾದಿಯಾಗಿ ಪಕ್ಷಿಗಳ ಹೆಸರಿನಿಂದ ಕರೆದು ಪ್ರೀತಿಯನ್ನೋ ಹೆಮ್ಮೆಯನ್ನೋ ತೋರುವುದು 
ವಾಡಿಕೆಯಾಗಿದೆ . 


೧೦೫. 
ಸಂಪುಟ ೧ - ಸಂಚಿಕೆ ಒಂದು 
ಇನ್ನೊಂದು ಜೋಡಿ ಯಾವ ಪ್ರಭಾವವನ್ನೂ ಬೀರಲಿಲ್ಲ, ಹಾಗೆ ಪ್ರಭಾವ ಬೀರುವ 
ಪ್ರಯತ್ನವನ್ನೂ ಮಾಡಲಿಲ್ಲ. ಎಲ್ಲ ಕಣ್ಣುಗಳೂ ಕೌಂಟ್ ಮತ್ತು ಮಾರಿಯಾ 
ದ್ವಿತ್ರಿಯೇಟ್ನಾರ ಮೇಲೆ ನಟ್ಟಿದ್ದವು. ನತಾಶಾ ಆಗಾಗ ಅವರಿವರ ಅಂಗಿಯ 
ತೋಳನ್ನೋ ಡ್ರೆಸ್ಸಿನ ಅಂಚನ್ನೋ ಎಳೆದು ' ಪಪ್ಪಾ ಡಾನ್ಸು ಮಾಡುವುದು ನೋಡಿ! 
ಎಂದು ಒತ್ತಾಯ ಮಾಡುತ್ತಿದ್ದಳು, ಎಲ್ಲರೂ ಅದನ್ನೇ ಮಾಡುತ್ತಿದ್ದರೂ ಕೂಡ. 
ನರ್ತನದ ನಡುವೆ ಸಣ್ಣ ವಿರಾಮ ತೆಗೆದುಕೊಂಡಾಗಲೆಲ್ಲ ಆಳವಾಗಿ 
ಉಸಿರೆಳೆದುಕೊಂಡು ಕೈ ಬೀಸುತ್ತಾ, 'ಜೋರಾಗಿ, ಇನ್ನೂ ಜೋರಾಗಿ ' ಎಂದು 
ಕೌಂಟ್ ಸಂಗೀತಗಾರರಿಗೆ ಹೇಳುತ್ತಿದ್ದ . ಲಘುವಾದ, ಮತ್ತಷ್ಟು ಲಘುವಾದ ಹೆಜ್ಜೆ 
ಹಾಕುತ್ತಾ ಒಮ್ಮೆ ಕಾಲಬೆರಳಮೇಲೆ ಭಾರಬಿಟ್ಟು, ಇನ್ನೊಮ್ಮೆ ಹಿಮ್ಮಡಿಗಳ ಮೇಲೆ 
ಭಾರಬಿಟ್ಟು, ಮಾರಿಯಾ ದ್ವಿತ್ರಿಯೇಟ್ನಾಳನ್ನು ಸುತ್ತುವರೆಯುತ್ತಾ, ಅವಳನ್ನೂ ಸುತ್ತು 
ತಿರುಗಿಸುತ್ತಾ, ಕುರ್ಚಿಯ ಬಳಿಗೆ ಕರೆತಂದು ನರ್ತನ ಗತಿಯಲ್ಲೇ ಅವಳನ್ನು ಅಲ್ಲಿ 
ಕೂರಿಸಿ, ಒಂದು ಕಾಲು ನೆಟ್ಟಗೆ ಊರಿ ಮತ್ತೊಂದನ್ನು ಎತ್ತಿ ಹಿಂದೆ ಚಾಚಿ, 
ಕೈಗಳನ್ನು ವಿಶಾಲವಾಗಿ ಅಗಲಿಸಿ ಬೆವರುತ್ತಿರುವ ಬೋಳುತಲೆಯನ್ನು ವಂದಿಸುವ 
ಹಾಗೆ ಬಾಗಿಸಿದ. ನಗು, ಚಪ್ಪಾಳೆಗಳ ಕಿವಿ ಗಡಚಿಕ್ಕುವಂಥ ಮೆಚ್ಚುಗೆ ವ್ಯಕ್ತವಾಯಿತು. 
ಅದರಲ್ಲೂ ನತಾಶಾಳ ನಗು ಜೋರಾಗಿ ಕೇಳಿಸುತ್ತಿತ್ತು. ಇಬ್ಬರು ನರ್ತಕರೂ 
ಏದುಸಿರು ಬಿಡುತ್ತಾ, ಕ್ಯಾಂಬ್ರಿಕ್ ಕರ್ಲಿಫಿನಲ್ಲಿ ಮುಖ ಒರೆಸಿಕೊಳ್ಳುತ್ತಾ ನಿಂತರು. 
ಆ 'ನಮ್ಮ ಕಾಲದಲ್ಲಿ ಹೀಗೆ ಡಾನ್ಸು ಮಾಡುತ್ತಿದ್ದೆವು, ಮೈ ಡಿಯರ್! ಅಂದ 
ಕೌಂಟ್ . 
ಈ ಅಂಗಿಯ ತೋಳುಗಳನ್ನು ಮತ್ತಷ್ಟು ಮೇಲಕ್ಕೆ ಮಡಿಸಿಕೊಳ್ಳುತ್ತಾ, ಏದುಸಿರು 
ಬಿಡುತ್ತಾ, 'ಡೇನಿಯಲ್ ಕೂಪರ್ ಅಂದರೆ ಅದು!' ಎಂದು ಉದ್ಗರಿಸಿದಳು 
ಮಾರಿಯಾ ದ್ವಿತ್ರಿಯೇಟ್ನಾ. . 


- ರೋಸ್ಕೋವ್ ಮನೆಯ ಬಾಲ್ ರೂಮಿನಲ್ಲಿ ಸಂಗೀತಗಾರರೆಲ್ಲ 
ಆಯಾಸಪಟ್ಟುಕೊಂಡು ಸ್ವರ ತಪ್ಪಿ , ತಾಳ ತಪ್ಪಿ , ನುಡಿಸುವ ಹಾಡಿಗೆ ಆರನೆಯ 
ನೃತ್ಯ ಪ್ರಸಂಗ ನಡೆಯುತ್ತಿರುವಾಗ, ದಣಿದ ಕೆಲಸಗಾರರು ಅಡುಗೆಯವರು ಊಟಕ್ಕೆ 
ಕೂತಿರುವಾಗ, ಕೌಂಟ್ ಬೆಝುಕೋವ್‌ಗೆ ಆರನೆಯ ಬಾರಿ ಹೃದಯಾಘಾತವಾಗಿತ್ತು. 
ಯಾವ ಆಸೆಯನ್ನೂ ಇಟ್ಟುಕೊಳ್ಳುವಂತಿಲ್ಲವೆಂದು ಹೇಳಿ ಡಾಕ್ಟರುಗಳು ಕೈಚೆಲ್ಲಿಬಿಟ್ಟಿದ್ದರು. 
ಪಶ್ಚಾತ್ತಾಪ ( ಕನ್ನೆಶನ್), ಪವಿತ್ರ ತೀರ್ಥ ಸ್ವೀಕಾರ (ಕಮ್ಯುನಿಯನ್) , ಕ್ರಿಯೆಗಳನ್ನು 
ಮುಗಿಸಿ ತೈಲ ಲೇಪನಕ್ಕೆ ( ಸಾಕ್ರಮೆಂಟ್ ಆಫ್ ಎಕಸ್ಟೀಮ್ ಅಂಕ್ಷನ್ ) 
ಅಣಿಮಾಡಿಕೊಳ್ಳುತ್ತಿದ್ದರು. ಇಂಥ ಹೊತ್ತಿನಲ್ಲಿ ಸಾಮಾನ್ಯವಾಗಿ ಆಗುವ ಹಾಗೆ 
ಯಾವಾಗ ಏನೋ ಅನ್ನುವ ಸಂಶಯದಿಂದ ಹುಟ್ಟಿದ ಆತಂಕ ತುಂಬಿದ ಕುತೂಹಲ , 


೧೦೬ : 

ಯುದ್ಧ ಮತ್ತು ಶಾಂತಿ 
ಗುಜುಗುಜು ಸದ್ದು , ಓಡಾಟಗಳು ಮನೆಯನ್ನೆಲ್ಲ ತುಂಬಿದ್ದವು. ಮನೆಯ ಆಚೆ, 
ಗೇಟಿನ ಹೊರಗೆ, ಅಂತ್ಯಕ್ರಿಯೆ ನಡೆಸುವವರ ಒಂದು ಗುಂಪು, ಸಾರೋಟುಗಳು 
ಬಂದಾಗ ತಲೆಮರೆಸಿಕೊಳ್ಳುತ್ತಾ ಮಹನೀಯರು ಇಳಿದು ಒಳಗೆ ಹೋದಮೇಲೆ 
ಮತ್ತೆ ಗೇಟಿನ ಬಳಿಗೆ ಬಂದು ಕಾಯುತ್ತಾ ದಂಡಿಯಾಗಿ ಕಾಸು ಸಿಗುವ ಈ 
ಸಂಸ್ಕಾರದ ಕೆಲಸ ತಮಗೆ ದೊರೆಯಲಿ ಎಂದು ಹಂಬಲಿಸುತ್ತಾ ಕಾದಿದ್ದರು. 
* ತನ್ನ ಏಡ್ ಡಿ ಕ್ಯಾಂಪ್ ಅನ್ನು ಅನೇಕ ಬಾರಿ ಕಳುಹಿಸಿ, ಕೌಂಟ್ 
ಬೆಝುಕೋವ್‌ನ ಆರೋಗ್ಯವನ್ನು ವಿಚಾರಿಸಿದ್ದ ಮಾಸ್ಕೋದ ಮಿಲಿಟರಿ ಗೌರ್ನರ್ 
ಮಹಾರಾಣಿ ಕ್ಯಾಥರೀನಳ ಆಸ್ಥಾನದ ಗಣ್ಯವ್ಯಕ್ತಿಯಾಗಿದ್ದ ಬೆಝುಕೋವ್‌ನ ಅಂತಿಮ 
ಭೇಟಿಗಾಗಿ ಈಗ ತಾನೇ ಸ್ವತಃ ಬಂದಿದ್ದ . 
* ವೈಭವೋಪೇತವಾದ ಡ್ರಾಯಿಂಗ್‌ರೂಮಿನಲ್ಲಿ ಜನ ಸಂದಣಿ ನೆರೆದಿತ್ತು. 
ಮರಣಾಸನ್ನನಾಗಿದ್ದ ಕೌಂಟ್ ಬೆಝುಕೋವ್‌ನೊಂದಿಗೆ ಅರ್ಧಗಂಟೆಯ ಕಾಲ 
ಏಕಾಂತವಾಗಿ ಕಳೆದು ಗೌರ್ನರ್ ರೋಗಿಯ ಕೋಣೆಯಿಂದ ಹೊರಗೆ ಕಾಲಿಟ್ಟ 
ಕೂಡಲೆ ಕುಳಿತಿದ್ದವರೆಲ್ಲ ತಟ್ಟನೆ ಎದ್ದು ನಿಂತು ಗೌರವ ತೋರಿಸಿದ್ದರು. ಅವರಿಗೆಲ್ಲ 
ಚುಟುಕಾಗಿ ತಲೆದೂಗಿ ಪ್ರತಿವಂದನೆ ಸಲ್ಲಿಸಿ, ತನ್ನ ಮೇಲೇ ದೃಷ್ಟಿ ನೆಟ್ಟಿದ್ದ ಡಾಕ್ಟರು, 
ಪಾದ್ರಿ, ನಂಟರುಗಳ ದೃಷ್ಟಿಯಿಂದ ಆದಷ್ಟೂ ಬೇಗ ತಪ್ಪಿಸಿಕೊಂಡ. ಕಳೆದ ಕೆಲವು 
ದಿನಗಳಲ್ಲಿ ಹೆಚ್ಚು ಬಿಳಿಚಿಕೊಂಡು ಕೃಶನಾದ ಹಾಗೆ ಕಾಣುತ್ತಿದ್ದ ಪ್ರಿನ್ಸ್ ವ್ಯಾಸಿಲಿ 
ತಗ್ಗಿದ ದನಿಯಲ್ಲಿ ಏನನ್ನೋ ಮತ್ತೆ ಮತ್ತೆ ಹೇಳುತ್ತಾ ಗೌರ್ನರ್ ಜೊತೆಯಲ್ಲೇ 
ತಲೆಬಾಗಿಲವರೆಗೆ ಹೋದ. 

ಮಿಲಿಟರಿ ಗೌರ್ನರ್ ಹೋದಮೇಲೆ ಪ್ರಿನ್ಸ್ ವ್ಯಾಸಿಲಿ ವಾಪಸ್ಸು ಬಂದು 
ಬಾಲ್‌ರೂಮಿನಲ್ಲಿದ್ದ ಕುರ್ಚಿಯ ಮೇಲೆ ಒಂಟಿಯಾಗಿ ಕೂತುಕೊಂಡ. ಕಾಲಮೇಲೆ 
ಕಾಲು ಹಾಕಿಕೊಂಡ. ಮೊಳಕೈಯನ್ನು ಮೊಳಕಾಲ ಮೇಲೆಊರಿ, ಅಂಗೈಯಲ್ಲಿ 
ಮುಖವನ್ನು ಮುಚ್ಚಿಕೊಂಡು ಕೂತಿದ್ದ . ಸ್ವಲ್ಪ ಹೊತ್ತು ಹಾಗೇ ಕೂತಿದ್ದು, ಎದ್ದು 
ನಿಂತು, ಸ್ವಲ್ಪ ಭಯಪಟ್ಟು ಸುತ್ತಲೂ ನೋಡುತ್ತಾ ಎಂದಿನ ತೂಕದ ಹೆಜ್ಜೆಗಳ 
ಬದಲಾಗಿ ದೊಡ್ಡ ಹೆಜ್ಜೆ ಹಾಕುತ್ತಾ ಮನೆಯ ಹಿಂಭಾಗಕ್ಕೆ , ಹಿರಿಯ ಪ್ರಿನ್ಸೆಸ್ 
ಇದ್ದಲ್ಲಿಗೆ , ಹೋದ. 

ಮಂಕು ಬೆಳಕಿನ ಡ್ರಾಯಿಂಗ್ ರೂಮಿನಲ್ಲಿ ಕಾಯುತ್ತಿದ್ದವರು ಪಿಸುದನಿಯಲ್ಲಿ 
ಮಾತಾಡಿಕೊಳ್ಳುತ್ತಿದ್ದರು. ಕಾಯಿಲೆಯ ಮನುಷ್ಯನಿದ್ದ ಕೋಣೆಯ ಬಾಗಿಲು 
ಕಿರುಗುಟ್ಟಿದಾಗ, ಯಾರಾದರೂ ಆ ಕೋಣೆಯೊಳಕ್ಕೆ ಹೋದಾಗ, ಬಂದಾಗ, 
ತಟ್ಟನೆ ಸುಮ್ಮನಾಗಿ, ಕುತೂಹಲದಿಂದಲೋ ನಿರೀಕ್ಷೆಯಿಂದಲೋ ಅತ್ತ ದೃಷ್ಟಿ 
ಹರಿಸುತ್ತಿದ್ದರು. 

' ಮನುಷ್ಯನ ಆಯಸ್ಸು ಇಷ್ಟೇ ಎಂದು ನಿಗದಿಯಾಗಿರುತ್ತದೆ. ಅದನ್ನು ಮೀರಿ 


೧೦೭ 
ಸಂಪುಟ ೧ - ಸಂಚಿಕೆ ಒಂದು 
ಯಾರೂ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ' ಚರ್ಚಿನ ಮುದುಕನೊಬ್ಬ ತನ್ನ 
ಬಳಿ ಕೂತು ಪೆದ್ದು ಪೆದ್ದಾಗಿ ಅವನ ಮಾತು ಕೇಳಿಸಿಕೊಳ್ಳುತ್ತಿದ್ದ ಮುದುಕಿಗೆ 
ಹೇಳುತ್ತಿದ್ದ . 

ಕ್ರಿಯೆಗಳಿಗೆ ತೀರ ತಡವಾಯಿತೋ ಏನೋ ?' ತನ್ನದೇ ಆದ ಯಾವ 
ಅಭಿಪ್ರಾಯವೂ ಇಲ್ಲದವಳ ಹಾಗೆ, ಆ ಮುದುಕನನ್ನು ಅವನ ಪದವಿಯ ಹೆಸರು 
ಹಿಡಿದು ಮಾತನಾಡಿಸಿದಳು ಮುದುಕಿ. .. 

' ಹೌದು, ಬಹಳ ನಿಗೂಢ ವಿಧಿಗಳು' ಬೋಳು ತಲೆಯಲ್ಲಿದ್ದ ಕೆಲವೇ 
ನೆರೆತ ಕೂದಲುಗಳನ್ನು ತಲೆಯ ಹಿಂದಕ್ಕೆ ನೇವರಿಸಿಕೊಳ್ಳುತ್ತಾ ಪಾದರಿ ನುಡಿದ. 

' ಯಾರದು ಬಂದದ್ದು ? ಮಿಲಿಟರಿ ಗೌರ್ನರೇ ?”ಕೋಣೆಯ ಇನ್ನೊಂದು 
ಬದಿಯಲ್ಲಿ ಯಾರೋ ಕೇಳುತ್ತಿದ್ದರು . 'ಎಷ್ಟು ಚಿಕ್ಕವರ ಹಾಗೆ ಕಾಣುತಾರಲ್ಲವೇ !' 

- ' ಹೌದು. ಆಗಲೇ ಅರುವತ್ತು ದಾಟಿದೆಯಂತೆ. ಕೌಂಟ್ ಅಂತೂ ಯಾರನ್ನೂ 
ಗುರುತು ಹಿಡಿಯುತ್ತಿಲ್ಲವಂತೆ. ಅವನಿಗೆ ತೀರ್ಥ ಕೊಡಬೇಕು ಅಂದುಕೊಳ್ಳುತ್ತಾ 
ಇದ್ದರು , ಇನ್ನು ಯಾರೋ ಮತ್ತಾರಿಗೋ ಹೇಳುತ್ತಿದ್ದರು. .. 

'ನಮ್ಮ ಊರಲ್ಲಿ ಒಬ್ಬರಿದ್ದರು. ಏಳು ಸಾರಿ ಕೊನೆಯ ತೀರ್ಥ 
ತಗೊಂಡಿದ್ದರಂತೆ' ಮತ್ತೆ ಯಾರೋ ಇನ್ನೊಂದು ಕತೆ ಹೇಳುತ್ತಿದ್ದರು. 

ಎರಡನೆಯ ಪ್ರಿನ್ಸೆಸ್ ಆಗ ತಾನೇ ಕಾಯಿಲೆ ಕೋಣೆಯಿಂದ ಹೊರಗೆ 
ಬಂದಿದ್ದಳು. ಅತ್ತು ಅತ್ತು ಅವಳ ಕಣ್ಣು ಕೆಂಪಾಗಿದ್ದವು. ಮಹಾರಾಣಿ ಕ್ಯಾಥರೀನಳ 
ದೊಡ್ಡ ಭಾವಚಿತ್ರದ ಬಳಿ ಮೇಜಿನ ಮೇಲೆ ಮೊಳಕೈಯೂರಿಗಂಭೀರವದನನಾಗಿ 
ಕುಳಿತಿದ್ದ ಡಾ . ಲೊರೈನ್‌ನ ಹತ್ತಿರ ಬಂದು ಕೂತಳು . 

'ಬಹಳ ಚೆನ್ನಾಗಿದೆ ' ಆಕೆ ಹವಾಮಾನದ ಬಗ್ಗೆ ಹೇಳಿದ ಮಾತಿಗೆ ಡಾಕ್ಟರು 
ಉತ್ತರಿಸುತ್ತಿದ್ದ. 'ಹವೆಯಂತೂ ಬಹಳ ಚೆನ್ನಾಗಿದೆ. ಮಾಸ್ಕೋದಲ್ಲಿದ್ದರೂ 
ಹಳ್ಳಿಯಲ್ಲಿದ್ದೇವೋ ಅನ್ನಿಸುವಷ್ಟು ಚೆನ್ನಾಗಿದೆ.' 

'ಹೌದು' ಅನ್ನುತ್ತಾ ನಿಟ್ಟುಸಿರಿಟ್ಟಳು ಪ್ರಿನ್ಸೆಸ್ , 'ಅವರಿಗೇನಾದರೂ ಕುಡಿಯುವುದಕ್ಕೆ 
ಕೊಡಬಹುದಾ ?' 

ಲೊರೈನ್ ಕೊಂಚ ಹೊತ್ತು ಯೋಚಿಸಿದ. 
“ ಔಷಧಿ ತೆಗೆದುಕೊಂಡರೇ ?' 
“ ಹೌದು.' 
ಡಾಕ್ಟರು ಗಡಿಯಾರ ನೋಡಿಕೊಂಡ. . 

' ಹಾಗಾದರೆ ಒಂದು ಲೋಟ ಕುದಿಸಿ ಆರಿಸಿದ ನೀರಿಗೆ ಒಂದು ಚಿಟಿಕೆ' 
ತನ್ನ ಸೂಕ್ಷ ವಾದ ಬೆರಳುಗಳಿಂದ ಒಂದು ಚಿಟಿಕೆ ಎಂದರೆ ಎಷ್ಟು ಅನ್ನುವುದು 
ತೋರಿಸುತ್ತಾ , 'ಒಂದು ಚಿಟಿಕೆ ಕ್ರೀಮ್ ಆಫ್ ಟಾರ್ಟ‌್ರ ಬೆರೆಸಿ ಕೊಡಿ' ಅಂದ. 


೧೦೮ 

ಯುದ್ಧ ಮತ್ತು ಶಾಂತಿ 
- 'ಮೂರು ಝಾರಿ ಝೇಕು ಆದಮೇಲೆ ಬದುಕಿದ ಕೇಝು ಯಾವುದೂ 
ಇಲ್ಲ' ಜರ್ಮನ್ ವೈದ್ಯನೊಬ್ಬ ಏಡ್ - ಡಿ - ಕ್ಯಾಂಪ್‌ಗೆ ಹೇಳುತ್ತಿದ್ದ . 

- 'ಆರೋಗ್ಯಕ್ಕೆ ಗಮನ ಕೊಡಲಿಲ್ಲ ಅವರು . ಇವಾಗ ಅವರ ಆಸ್ತಿಯೆಲ್ಲ 
ಯಾರಿಗೆ ಹೋಗುತದೋ ?' ಏಡ್ ಡಿ ಕ್ಯಾಂಪ್ ಪಿಸುಮಾತಿನಲ್ಲಿ ಕೇಳಿದ. 

' ಗಿರಾಕಿಗಳು ಬರತಾರೆ, ನೋಡಿ' ಜರ್ಮನ್ ನಗುತ್ತಾ ಹೇಳಿದ . 

ಬಾಗಿಲು ಕಿರುಗುಟ್ಟಿತು. ಎಲ್ಲರೂ ಆ ಕಡೆಗೆ ತಿರುಗಿದರು. ಎರಡನೆಯ 
ಪ್ರಿನ್ಸೆಸ್ ಡಾಕ್ಟರ್ " ಲೋರೈನ್ ಹೇಳಿದ ಹಾಗೆ ಪಾನೀಯ ಸಿದ್ಧಮಾಡಿಕೊಂಡು 
ಬಂದಿದ್ದಳು. ಅದನ್ನು ತೆಗೆದುಕೊಂಡು ಕಾಯಿಲೆಯ ಕೋಣೆಗೆ ಹೋದಳು . 
ಜರ್ಮನಿಯ ವೈದ್ಯ ಡಾಕ್ಟರ್ ಲೋರೈನ್ ಬಳಿಗೆ ಹೋದ. 

- ' ಝಾಯಂಕಾಲದವರೆಗೂ ಇರುತ್ತಾ ?” ತಪ್ಪು ಉಚ್ಚಾರಣೆಯ ಫ್ರೆಂಚ್ 
ಭಾಷೆಯಲ್ಲಿ ಡಾಕ್ಟರ್ ಲೊರೈನ್‌ನನ್ನು ಕೇಳಿದ. 

ಲೊರೈನ್ ಮುಖ ಬಿಗಿದುಕೊಂಡು ಇಲ್ಲ ಅನ್ನುವ ಹಾಗೆ ಬೆರಳಾಡಿಸಿದ. 

“ ಹೆಚ್ಚು ಎಂದರೆ ಇವತ್ತು ರಾತ್ರಿ, ಅಷ್ಟೆ' ಮೆಲ್ಲನೆಯ ದನಿಯಲ್ಲಿ ಹೇಳುತ್ತಾ , 
ರೋಗಿಯ ಸ್ಥಿತಿಯನ್ನು ಅಷ್ಟು ಕರಾರುವಾಕ್ಕಾಗಿ ಅರ್ಥಮಾಡಿಕೊಂಡಿದ್ದೇನೆಂದು 
ತನ್ನನ್ನೇ ತಾನು ಮೆಚ್ಚಿಕೊಂಡವನ ಹಾಗೆ ಮರ್ಯಾದೆಯನ್ನು ಮೀರದೆ ಮುಗುಳ್ಳಗುತ್ತಾ 
ದೂರ ಸರಿದ. 

ಇತ್ತ ಪ್ರಿನ್ಸ್ ವ್ಯಾಸಿಲಿ ಪ್ರಿನ್ಸೆಸ್‌ಳ ಕೋಣೆಯ ಬಾಗಿಲನ್ನು ತೆರೆದ. ಕೋಣೆ 
ಕತ್ತಲು ಕತ್ತಲಾಗಿತ್ತು. ವಿಗ್ರಹದ ಮುಂದೆ ಎರಡು ಪುಟ್ಟ ದೀಪ ಬೆಳಗುತ್ತಿದ್ದವು. 
ಹೂವಿನ, ಧೂಪದ ಸುಗಂಧ ಹಿತವಾಗಿ ಬೆರೆತಿದ್ದವು. ಕೋಣೆಯ ತುಂಬ ಚಿಕ್ಕ 
ಗಾತ್ರದ ಕುರ್ಚಿ, ಬೀರು, ಚಿಕ್ಕ ಟೇಬಲ್ಲು ಇತ್ಯಾದಿ ತುಂಬಿಕೊಂಡಿದ್ದವು. ಅಡ್ಡ 
ತೆರೆಯೊಂದರ ಹಿಂದೆ ಎತ್ತರದ ಮಂಚದಮೇಲೆ ತುಪ್ಪುಳದ ಹಾಸುಗೆ ಕಾಣುತ್ತಿತ್ತು. 
ಪುಟ್ಟ ನಾಯಿಯೊಂದು ಬೊಗಳಿತು. 
- “ ಓ , ನೀನಾ ಅಣ್ಣ ?' 

ಎದ್ದು ನಿಂತು ತೀರ ನುಣುಪಾದ, ತೀರ ನಯವಾದ, ತಲೆಗೆ ಅಂಟಿಸಿ 
ವಾರ್ನಿಷ್ ಬಳಿದ ಹಾಗಿದ್ದ ತನ್ನ ಕೂದಲನ್ನು ನೇವರಿಸಿ ಸರಿಮಾಡಿಕೊಳ್ಳುತ್ತಾ 
ಕೇಳಿದಳು. .- 

' ಆಗಿಹೋಯಿತಾ? ಭಯ ಆಗಿದೆ' ಎಂದಳು. 

“ ಇಲ್ಲ. ಹಾಗೇ ಇದಾರೆ. ನಿನ್ನ ಹತ್ತಿರ ವ್ಯವಹಾರದ ವಿಷಯ ಮಾತನಾಡುವುದಕ್ಕೆ 
ಬಂದೆ ಕ್ಯಾಚಿ [ಕ್ಯಾಥರೀನ್]. ಅವಳು ಎದ್ದು ನಿಂತದ್ದರಿಂದ ಖಾಲಿಯಾದ 
ಕುರ್ಚಿಯಲ್ಲಿ ಆಯಾಸದಿಂದ ಕುಸಿಯುತ್ತಾ ಪ್ರಿನ್ಸ್ ವ್ಯಾಸಿಲಿ ಗೊಣಗಿದ. ರೂಮನ್ನು 
ಬೆಚ್ಚಗೆ ಇಟ್ಟುಕೊಂಡಿದೀಯ. ಇರಲಿ, ಕೂತುಕೋ . ನಿನ್ನ ಹತ್ತಿರ ಮಾತನಾಡುವುದಿದೆ.' 


೧೦೯ 
ಸಂಪುಟ ೧ - ಸಂಚಿಕೆ ಒಂದು 
- ' ಆಗಿಹೋಯಿತೇನೋ ಅಂತ ಭಯವಾಗಿತ್ತು ,' ಕಲ್ಲಿನಂಥ ಮುಖದಲ್ಲಿ 
ಯಾವ ಬದಲಾವಣೆಯೂ ಇಲ್ಲದೆ, ಮಾತು ಕೇಳಿಸಿಕೊಳ್ಳುವುದಕ್ಕೆ ಸಿದ್ಧಳಾಗಿ 
ಪ್ರಿನ್ಸ್ನ ಎದುರಿಗೆ ಕೂರುತ್ತಾ ಹೇಳಿದಳು. ' ಸಣ್ಣದೊಂದು ನಿದ್ರೆ ಮಾಡಬೇಕು 
ಅಂತ ಇದ್ದೆ. ಆಗಲಿಲ್ಲ ಅಣ್ಣಾ.' 
- 'ಹೌದಾ, ಡಿಯರ್' ಅನ್ನುತ್ತಾ ಪ್ರಿನ್ ವ್ಯಾಸಿಲಿ ಅವಳ ಕೈ ಹಿಡಿದು ಎಂದಿನ 
ಅಭ್ಯಾಸದಂತೆ ಅವಳ ಕೈಯನ್ನು ತನ್ನ ಕಡೆಗೆ ಜಗ್ಗಿಕೊಂಡ. 'ಹೌದಾ? ' ಅನ್ನುವ 
ಮಾತು ಇಬ್ಬರಿಗೂ ಗೊತ್ತಿರುವ, ಆದರೆ ಬಾಯಿ ಬಿಟ್ಟು ಆಡದ ಅನೇಕ ಸಂಗತಿಗಳನ್ನು 
ಮುಟ್ಟುತ್ತಿತ್ತು. 

- ನೇರವಾದ ಕೋಲು ಮೈಯ, ಉದ್ದ ಕಾಲುಗಳಿಗೆ ಹೋಲಿಸಿದರೆ ದೇಹ 
ಗಿಡ್ಡ ಅನ್ನಿಸುವ ಹಾಗೆ ಇದ್ದ ಪ್ರಿನ್ಸೆಸ್ ಕ್ಯಾಥರೀನ್ ದೊಡ್ಡ ಕಪ್ಪು ಕಣ್ಣುಗಳಲ್ಲಿ 
ಯಾವ ಭಾವದ ಸುಳಿವೂ ಇಲ್ಲದ ಹಾಗೆ ವ್ಯಾಸಿಲಿಯನ್ನೇ ದಿಟ್ಟಿಸುತ್ತ ಕೂತಳು. 
ತಲೆ ಕೊಡವಿ , ನಿಟ್ಟುಸಿರು ಬಿಡುತ್ತಾ ವಿಗ್ರಹಗಳ ಕಡೆಗೆ ತಿರುಗಿ ನೋಡಿದಳು. 
ಹಾಗೆ ತಲೆ ಆಡಿಸಿದ್ದು ದುಃಖ ಮತ್ತೆ ಭಕ್ತಿಯನ್ನೋ , ದೀರ್ಘ ಆಯಾಸದ ದೇಹ 
ಬಯಸುತ್ತಿರುವ ವಿಶ್ರಾಂತಿ ಮತ್ತೆ ಬೇಗ ಬಿಡುಗಡೆ ಸಿಕ್ಕಿತು ಅನ್ನುವ ಭರವಸೆಯನ್ನೂ 
ಸೂಚಿಸುವ ಹಾಗಿತ್ತು. ಆಯಾಸದ ಸೂಚನೆ ಎಂದು ಪ್ರಿನ್ಸ್ ವ್ಯಾಸಿಲಿ 
ಅರ್ಥಮಾಡಿಕೊಂಡ. 
- 'ಮತ್ತೆ ನನ್ನ ಕಥೆ ಇನ್ನೇನು? ನಾನು ಆರಾಮವಾಗಿದೇನೆಯೇ ? ಅಂಚೆಯ 
ಕುದುರೆಯಷ್ಟೇ ದಣಿದಿದೇನೆ. ಆದರೂ ನಿನ್ನ ಜೊತೆ ಮಾತಾಡಲೇ ಬೇಕು ಕ್ಯಾಥರೀನ್. 
ತುಂಬ ಗಂಭೀರವಾದ ವಿಷಯ .' 
- ವ್ಯಾಸಿಲಿ ಮಾತು ನಿಲ್ಲಿಸಿಬಿಟ್ಟ. ಅವನ ಕೆನ್ನೆಗಳು ಒಮ್ಮೆ ಒಂದು ಪಕ್ಕದಲ್ಲಿ 
ಇನ್ನೊಮ್ಮೆ ಇನ್ನೊಂದು ಪಕ್ಕದಲ್ಲಿ ಅದುರುತ್ತಾ ಮುಖದಲ್ಲಿ ಅಸುಖ , ಕಿರಿಕಿರಿ 
ಕಂಡವು. ದಿವಾನಖಾನೆಗಳಲ್ಲಿ ಇರುವಾಗ ಅವನ ಮುಖ ಯಾವತ್ತೂ ಹೀಗೆ 
ಕಾಣುತ್ತಿರಲಿಲ್ಲ. ಕಣ್ಣು ಕೂಡ ಬೇರೆ ಥರ ಕಾಣುತ್ತಿದ್ದವು. ಒಡ್ಡ ಧೈರ್ಯವನ್ನೋ 
ಅಂಜಿಕೆ ಆತಂಕಗಳ ನೋಟವನ್ನೋ ಬೀರುತ್ತಿದ್ದವು. 

ಮಡಿಲಲ್ಲಿ ಪುಟ್ಟ ನಾಯಿಯನ್ನು ಕೂರಿಸಿಕೊಂಡು, ತೆಳ್ಳನೆ ಕೈಯಲ್ಲಿ ಅದನ್ನು 
ಹಿಡಿದುಕೊಂಡು, ಪ್ರಿನ್ಸ್ ವ್ಯಾಸಿಲಿಯನ್ನೇ ಕಣ್ಣಿಟ್ಟು ನೋಡುತ್ತಾ ಬೆಳಗಾಗುವವರೆಗೂ 
ಹೀಗೆ ಕೂತಿದ್ದರೂ ಸರಿ ತಾನು ಮಾತ್ರ ಮೌನ ಮುರಿಯುವುದಿಲ್ಲ ಅನ್ನುವ ಹಾಗೆ 
ಇದ್ದಳು ಅವಳು . 

'ಸರಿ...ಇದು ಹೀಗೆ... ಪ್ರಿನ್ಸೆಸ್ ..ಸೋದರಿ...ಕ್ಯಾಥರೀನ್ ಸೆಮೆಯೆನೋವ್ವಾ...? 
ಮಾತು ಮುಂದುವರೆಸುವುದಕ್ಕೆ ಪ್ರಿನ್ಸ್ ವ್ಯಾಸಿಲಿಗೆ ಕಷ್ಟವಾಗುತ್ತಿತ್ತು. ಇಂಥ ಹೊತ್ತಿನಲ್ಲಿ 
ಎಲ್ಲದರ ಬಗ್ಗೆ ವಿಚಾರ ಮಾಡಬೇಕು. ಭವಿಷ್ಯದ ಬಗ್ಗೆ, ನಿಮ್ಮೆಲ್ಲರ ಬಗ್ಗೆ ...ನಿಮ್ಮೆಲ್ಲರ 


೧೧೦ 

ಯುದ್ಧ ಮತ್ತು ಶಾಂತಿ 
ಬಗ್ಗೆಯೂ ನನಗೆ ಪ್ರೀತಿ ಇದೆ. ನೀವೆಲ್ಲ ನನ್ನ ಸ್ವಂತ ಮಕ್ಕಳಿದ್ದ ಹಾಗೆ, ಗೊತ್ತಲ್ಲ...? 

- ಪ್ರಿನ್ಸೆಸ್ ಯಾವ ಭಾವವೂ ತೋರದ ಅದೇ ನೋಟದಿಂದ ಅವನ 
ಮುಖವನ್ನು ದಿಟ್ಟಿಸುತ್ತಾ ಇದ್ದಳು. 

“ ಏನಾದರೂ ಅನ್ನು , ನಮ್ಮ ನಮ್ಮ ಮನೆಗಳ ಕಡೆಗೂ ಯೋಚನೆ ಮಾಡಬೇಕು' 
ಅಲ್ಲಿದ್ದ ಪುಟ್ಟ ಟೇಬಲ್ಲನ್ನು ಯಾವುದೋ ಸಿಟ್ಟಿನಿಂದ ಅನ್ನುವ ಹಾಗೆ ದೂರಕ್ಕೆ 
ದಬ್ಬುತ್ತಾ ಅವಳ ಕಡೆಗೆ ನೋಡದೆ ಪ್ರಿನ್ಸ್ ವ್ಯಾಸಿಲಿ ಹೇಳಿದ. 

'ನಿನಗೆ ಗೊತ್ತಲ್ಲ, ಕ್ಯಾಥಿ, ನಾವು - ಅಂದರೆ ನೀವು ಮೂರು ಜನ 
ಮಾಮೊನ್ನೋವ್ ಅಕ್ಕ ತಂಗಿಯರು, ಮತ್ತೆ ನನ್ನ ಹೆಂಡತಿ, ಇಷ್ಟು ಜನ ಮಾತ್ರ 
ಕೌಂಟ್‌ನ ಆಸ್ತಿಗೆ ನೇರವಾದ ಹಕ್ಕುದಾರರು. ಗೊತ್ತು, ನನಗೆ ಗೊತ್ತು... ಈ 
ವಿಷಯ ಮಾತಾಡುವುದು, ಯೋಚನೆ ಮಾಡುವುದು ನಿನ್ನ ಮನಸಿಗೆ 
ಹಿಂಸೆಯಾಗುತ್ತದೆ. ಮತ್ತೆ ನನಗೇನು ಸುಲಭ ಅಂದುಕೊಳ್ಳಬೇಡ. ನಾನು ಬಿಡು, 
ಐವತ್ತಾಯಿತು, ಎಲ್ಲಕ್ಕೂ ಸಿದ್ಧವಾಗಿದ್ದೇನೆ. ನೋಡು...ಪಿಯರೆಗೆ ಹೇಳಿಕಳಿಸಿದೇನೆ. 
ಗೊತ್ತಾ ನಿನಗೆ ? ಅವನ ಚಿತ್ರ ತೋರಿಸುತ್ತಾ ಅವನನ್ನು ಕರೆಸಲೇ ಬೇಕು ಅಂತ 
ಕೌಂಟ್ ಒತ್ತಾಯಮಾಡಿದರು, ಗೊತ್ತಾ?' 
- ಪ್ರಿನ್ಸ್ ವ್ಯಾಸಿಲಿ ಏನು ಅನ್ನುವ ಹಾಗೆ ಆಕೆಯ ಮುಖ ನೋಡಿದ. ತಾನು 
ಹೇಳಿದ ಮಾತನ್ನು ಅರಗಿಸಿಕೊಳ್ಳುತ್ತಾ ಇದ್ದಾಳೋ ಸುಮ್ಮನೆ ತನ್ನ ಕಡೆಗೆ 
ನೋಡುತ್ತಿದ್ದಾಳೋ ತಿಳಿಯಲಿಲ್ಲ. 

- “ಅಣ್ಣಾ, ನಾನು ಯಾವಾಗಲೂ ಬೇಡಿಕೊಳ್ಳೋದು ಇಷ್ಟೇ ... ದೇವರು 
ಅವರಿಗೆ ಸುಖದ ಸಾವು ಕೊಡಲಿ...' 

ಅಸಹನೆಯಿಂದ 'ಹೌದು, ಹೌದು' ಅನ್ನುತ್ತಾ ಪ್ರಿನ್ಸ್ ವ್ಯಾಸಿಲಿ 
ಬೋಳುತಲೆಯನ್ನು ಉಜ್ಜಿಕೊಂಡು, ಸಿಡಿಮಿಡಿಯಾಗಿ ದೂರ ತಳ್ಳಿದ್ದ ಪುಟ್ಟ ಮೇಜನ್ನು 
ತನ್ನತ್ತ ಎಳೆದುಕೊಂಡ. 'ಈಗ ಇರುವ ಹಾಗೆ... ಮುಖ್ಯವಾದ ಮಾತು ಇಷ್ಟೇ...ನೋಡು, 
ನನಗೆ ಗೊತ್ತಿರುವ ಹಾಗೆ ಹೋದ ವರ್ಷದ ಮಾಗಿಯ ಕಾಲದಲ್ಲಿ ಕೌಂಟ್ 
ಒಂದು ವಿಲ್ ಬರೆಸಿದ. ಅದರ ಪ್ರಕಾರ ಎಲ್ಲಾ ಆಸ್ತಿಯನ್ನೂ ನೇರವಾದ 
ಹಕ್ಕುದಾರರಿದ್ದೇವಲ್ಲ ನಾವು, ನಮಗೆ ಕೊಡದೆ ಪಿಯರೆ ಹೆಸರಿಗೆ ಮಾಡಿದಾನೆ.' 
- 'ಬೇಕಾದಷ್ಟು ಸಲ ವಿಲ್ ಬರೆದು ಬದಲಾಯಿಸಿದಾನೆ!” ಪ್ರಿನ್ಸೆಸ್ ತಣ್ಣಗೆ 
ಹೇಳಿದಳು . ' ಆಸ್ತಿಯೆಲ್ಲಾ ಪಿಯರೆಗೆ ಹೋಗುವ ಹಾಗಿಲ್ಲ . ಅವನು ಅಕ್ರಮ 
ಸಂತಾನ.' 

'ನೋಡಮ್ಮಾ ತಂಗೀ , ಪ್ರಿನ್ಸ್ ವ್ಯಾಸಿಲಿ ಇದ್ದಕ್ಕಿದ್ದ ಹಾಗೆ ಉದ್ವೇಗಕ್ಕೆ 
ಗುರಿಯಾದವನ ಹಾಗೆ ಟೇಬಲ್ಲನ್ನು ಗಟ್ಟಿಯಾಗಿ ಹಿಡಿದುಕೊಂಡು ಬಡಬಡ 
ಮಾತಾಡಿದ: ' ಪಿಯರೆಯನ್ನು ದತ್ತು ಮಗ ಎಂದು ಕ್ರಮಬದ್ಧವಾಗಿ ಘೋಷಣೆ 


ಸಂಪುಟ ೧ - ಸಂಚಿಕೆ ಒಂದು 
ಮಾಡಿ ಅಂತ ಚಕ್ರವರ್ತಿಗೆ ಈಗಾಗಲೇ ಕೌಂಟ್ ಕಾಗದ ಬರೆದಿದ್ದರೆ ? ರಾಜ 
ವಂಶಕ್ಕೆ ಕೌಂಟ್ ಮಾಡಿರುವ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಚಕ್ರವರ್ತಿ ಆ 
ಕೋರಿಕೆ ಒಪ್ಪಿಕೊಂಡುಬಿಟ್ಟರೆ...?' 

- ಪ್ರಿನ್ಸೆಸ್ ಸಣ್ಣದಾಗಿ ನಕ್ಕಳು - ಯಾರು ಮಾತಾಡುತ್ತಿದ್ದಾರೋ ಅವರಿಗಿಂತ 
ತಮಗೇ ವಿಷಯ ಚೆನ್ನಾಗಿ ಗೊತ್ತು ಅಂದುಕೊಂಡಿರುವವರು ನಗುವ ಹಾಗೆ. 

'ಕೇಳು ಇಲ್ಲಿ, ಅವಳ ಕೈ ಹಿಡಿದುಕೊಂಡು ಪ್ರಿನ್ಸ್ ವ್ಯಾಸಿಲಿ ಮಾತು 
ಮುಂದುವರೆಸಿದ. 'ಕಾಗದ ಬರೆದದ್ದಾಗಿದೆ, ಇನ್ನೂ ಕಳಿಸಿಲ್ಲ, ಅಷ್ಟೆ , ಚಕ್ರವರ್ತಿಗೂ 
ಆ ಕಾಗದದ ವಿಚಾರ ಗೊತ್ತು. ಆ ಕಾಗದ ನಾಶವಾಗಿದೆಯೋ ಇಲ್ಲವೋ ಅದೊಂದೇ 
ಈಗಿರುವ ಪ್ರಶ್ನೆ , ಕೌಂಟ್ ಬರೆದ ಕಾಗದ ಇನ್ನೂ ಇದ್ದರೆ ಅಲ್ಲಿಗೆ ಕಥೆ ಮುಗಿದ 
ಹಾಗೇ .' “ಕಥೆ ಮುಗಿಯಿತು' ಎಂದರೆ ಏನರ್ಥ ಅನ್ನುವುದನ್ನು ಒತ್ತಿ ಹೇಳುವ 
ಹಾಗೆ ಪಿನ್ ವ್ಯಾಸಿಲಿ ನಿಟ್ಟುಸಿರು ಬಿಟ್ಟ , 'ಕೌಂಟ್‌ನ ಕಾಗದ ಪತ್ರ ತೆಗೆದು ನೋಡಿದಾಗ 
ಅವನು ಬರೆದ ವಿಲ್ಲು, ಈ ಕಾಗದ ಎರಡೂ ಸಿಗುತ್ತವೆ, ಚಕ್ರವರ್ತಿಗೆ ತಲುಪಿಸುತ್ತಾರೆ , 
ಮತ್ತೆ ಚಕ್ರವರ್ತಿ ಕೌಂಟ್‌ನ ಕೋರಿಕೆ ಮನ್ನಿಸುತ್ತಾನೆ. ಪಿಯರೆ ಕೌಂಟನ ಸ್ವಂತ 
ಮಗನೋ ಅನ್ನುವ ಹಾಗೆ ಆಸ್ತಿಯೆಲ್ಲ ಅವನಿಗೆ ಹೋಗಿಬಿಡುತ್ತದೆ.' 
- “ ಮತ್ತೆ ನಮ್ಮ ಪಾಲು?' ಏನು ಬೇಕಾದರೂ ಆಗಬಹುದು, ಆದರೆ ಇದು 
ಮಾತ್ರ ಸಾಧ್ಯವಿಲ್ಲ ಅನ್ನುವ ಹಾಗೆ ವಕ್ರವಾಗಿ ನಗುತ್ತಾ ಪ್ರಿನ್ಸೆಸ್ ಕೇಳಿದಳು. 
- “ಅಯ್ಯೋ ಕ್ಯಾಥೀ , ಬೆಳಕಿನಷ್ಟೇ ನಿಚ್ಚಳವಾಗಿದೆ. ಎಲ್ಲಾ. ನಿನಗೆ ಮಾತ್ರ 
ತಿಳಿಯುತ್ತಿಲ್ಲವಾ ? ಆಸ್ತಿಗೆ ಅವನು ಏಕೈಕ ಸಕ್ರಮ ವಾರಸುದಾರ ಆಗಿಬಿಡುತ್ತಾನೆ, 
ನಿಮಗೆ ಏನೂ ಸಿಗೋದಿಲ್ಲ. ವಿಲ್ ಮತ್ತೆ ಕಾಗದ ಇವೆಯಲ್ಲಾ ಅವು 
ನಾಶವಾಗಿವೆಯೋ ಹೇಗೋ ಉಳಕೊಂಡುಬಿಟ್ಟಿವೆಯೋ ... ಅದನ್ನು ತಿಳಿದುಕೊಳ್ಳಬೇಕು 
ಕಣಮ್ಮಾ, ಅವು ಏನಾದರೂ ಇದ್ದರೆ ಎಲ್ಲಿವೆ ಪತ್ತೆ ಮಾಡಬೇಕು. ಯಾಕೆಂದರೆ...' 

- “ ಅತೀ ಆಯಿತು, ಇದು' ಪ್ರಿನ್ಸೆಸ್ ವ್ಯಂಗ್ಯವಾಗಿ ನಗುತ್ತಾ ಕಣ್ಣಿನಲ್ಲಿದ್ದ ಭಾವ 
ಬದಲಾಯಿಸದೆ, ' ನಾನು ಹೆಂಗಸು. ಹೆಂಗಸರೆಲ್ಲ ಮೂರ್ಖರು ಅಂದುಕೊಂಡಿದೀರಿ 
ನೀವೆಲ್ಲರೂ ನನಗೆ ಇಷ್ಟು ಗೊತ್ತು. ಅಕ್ರಮ ಸಂತಾನವಾಗಿರುವ ಮಗನಿಗೆ ಆಸ್ತಿ 
ಯಾವತ್ತೂ ಹೋಗೋದಿಲ್ಲ. ಅವನು ಹಾದರಕ್ಕೆ ಹುಟ್ಟಿದವನು - ಕೊನೆಯ 
ಮಾತನ್ನು ಫ್ರೆಂಚಿನಲ್ಲಿ ಹೇಳಿದಳು, ಈ ತರ್ಜುಮೆಯೇ ಪ್ರಿನ್ಸ್ ವ್ಯಾಸಿಲಿಯ ವಾದದ 
ಪೊಳ್ಳುತನ ತೋರಿಸುತ್ತದೆ ಅನ್ನುವ ಹಾಗೆ. 

- 'ಕ್ಯಾಥೀ , ನಿನಗೆ ಅರ್ಥವೇ ಆಗುತಿಲ್ಲವಲ್ಲಾ! ನೀನು ನಿಜವಾಗಿ 
ಜಾಣೆಯಾಗಿದ್ದರೆ ನೋಡು...ಕೌಂಟ್ ಆಗಲೇ ಚಕ್ರವರ್ತಿಗೆ ಕಾಗದ ಬರೆದು 
ಪಿಯರೆಯನ್ನು ಔರಸ ಪುತ್ರ ಅಂತ ಪರಿಗಣಿಸಿ ಅನ್ನುವಕೋರಿಕೆ ಮಾಡಿಕೊಂಡಿದ್ದರೆ 
ಇನ್ನು ಮೇಲೆ ಅವನು ಬರೀ ಪಿಯರೆ ಆಗಿರೋದಿಲ್ಲಾ ಕೌಂಟ್ ಪಿಯರೆ 


೧೧೨ 

ಯುದ್ಧ ಮತ್ತು ಶಾಂತಿ 
ಬೆಝುಕೋವ್ ಆಗಿಬಿಡುತ್ತಾನೆ, ವಿಲ್ ಪ್ರಕಾರ ಸಮಸ್ತ ಆಸ್ತಿಯೂ ಅವನದೇ 
ಆಗುತದೆ - ಇಷ್ಟು ತಿಳಿಯೋದಿಲ್ಲವಾ ? ವಿಲ್ಲು, ಕಾಗದ ಇವೆರಡನ್ನೂ 
ನಾಶಮಾಡದಿದ್ದರೆ - ನಿಷ್ಠೆಯಿಂದ ಸೇವೆ ಮಾಡಿದೆ ಇತ್ಯಾದಿ ಆನಂದ ಬಿಟ್ಟರೆ ನಿನಗೆ 
ಏನೂ ಸಿಗುವುದಿಲ್ಲ...!” 

ವಿಲ್ ಬರೆದದ್ದಾಗಿದೆ ಅನ್ನುವುದು ನನಗೆ ಗೊತ್ತು, ಅದಕ್ಕೆ ಯಾವ ಬೆಲೆಯೂ 
ಇಲ್ಲ ಅನ್ನುವುದೂ ಗೊತ್ತು. ಅಣ್ಣಾ , ನನ್ನನ್ನೇನು ಅಷ್ಟು ಪೆದ್ದಿ 
ಅ೦ದುಕೊ೦ಡಿದೀಯೇನು? ' ತಾವು ಬಹಳ ಜಾಣತನದ ಮಾತು 
ಆಡುತ್ತಿದ್ದೇವೆಂದುಕೊಳ್ಳುವ ಹೆಂಗಸರ ಮುಖದಲ್ಲಿರುವಂಥ ಭಾವ ಇತ್ತು ಅವಳಲ್ಲಿ. 

' ಪ್ರಿನ್ಸೆಸ್ ಕ್ಯಾಥರೀನ್ ಸೆಮೆನೊಪ್ಪಾ' ವ್ಯಾಸಿಲಿ ತಾಳ್ಮೆಗೆಟ್ಟು ಹೇಳಿದ , 'ನಿನ್ನ 
ಜೊತೆ ವಾದ ಮಾಡುವುದಕ್ಕೆ ಬಂದಿಲ್ಲಮ್ಮಾ, ಹಿರಿಯನಾಗಿ ನಿನಗೆ ಒಳ್ಳೆಯದಾಗಲಿ 
ಅಂತ ಹೇಳುವುದಕ್ಕೆ ಬಂದೆ ಅಷ್ಟೆ. ಇಪ್ಪತ್ತನೆಯ ಸಾರಿ ಹೇಳುತಿದೇನೆ ಕೌಂಟ್ 
ಬರೆದಿರುವ ವಿಲ್ಲು, ಮತ್ತೆ ಚಕ್ರವರ್ತಿಗೆ ಬರೆದಿರುವ ಮನವಿ ಪತ್ರ ಇವು ನಾಶವಾಗದೆ 
ಹಾಗೇ ಇದ್ದುಬಿಟ್ಟರೆ ನಿನಗೆ , ನಿನ್ನ ಅಕ್ಕ ತಂಗಿಯರಿಗೆ ಯಾವ ಆಸ್ತಿಯೂ ಬರಲ್ಲಾ! 
ನನ್ನ ಮಾತು ನಂಬದಿದ್ದರೆ ವಕೀಲರನ್ನ ಕೇಳು. ನಿಮ್ಮ ಕುಟುಂಬದ ವಕೀಲ ದೈತ್ರಿ 
ಓನುಫ್ರಿಚ್ ಇದಾನಲ್ಲ ಅವನನ್ನ ಕೇಳಿದೆ, ಅವನೂ ನಾನು ಹೇಳಿದ ಮಾತೇ 
ಹೇಳಿದ.' 

ಇದ್ದಕ್ಕಿದ್ದ ಹಾಗೆ ಪ್ರಿನ್ಸೆಸ್‌ಳ ವಿಚಾರ ಸರಣಿ ಬದಲಾದದ್ದು ಕಂಡಿತು. ಕಣ್ಣಿನ 
ನೋಟ ಬದಲಾಗದಿದ್ದರೂ ತೆಳ್ಳನೆಯ ತುಟಿಗಳ ಬಣ್ಣ ಬದಲಾಯಿತು. ಅವಳು 
ಮಾತನಾಡಿದಾಗ ಅವಳೇ ಅಂದುಕೊಂಡದ್ದಕ್ಕಿಂತ ಜೋರಾಗಿ ಗುಡುಗಿದ ಹಾಗಿತ್ತು. 
. ' ಒಳ್ಳೆಯದೇ ಆಯಿತು! ನನಗೇನೂ ಬೇಕಾಗಿರಲಿಲ್ಲ, ಬೇಕಾಗೂ ಇಲ್ಲ.' 
ಅನ್ನುತ್ತಾ ನಾಯಿ ಮರಿಯನ್ನು ಕೆಳಗಿಳಿಸಿ ಉಡುಪಿನ ನಿರಿಗೆ ಸರಿಮಾಡಿಕೊಂಡಳು. 
ಕೃತಜ್ಞತೆ ಅಂದರೆ ಇದಪ್ಪಾ! ಎಲ್ಲಾ ತ್ಯಾಗಮಾಡಿದರೂ ಸಿಕ್ಕುವುದು ಇಷ್ಟೇ ! ಬಹಳ 
ಚೆನ್ನಾಗಿದೆ! ನನಗೆ ಏನೂ ಬೇಕಾಗಿಲ್ಲ, ಪ್ರಿನ್ಸ್ ' .. 

- ' ಸರಿಯಮ್ಮಾ, ನೀನು ಒಬ್ಬಳೇ ಅಲ್ಲವಲ್ಲಾ. ಇಬ್ಬರು ತಂಗಿಯರು ಇದಾರೆ...' 
ಪ್ರಿನ್ಸೆಸ್‌ಗೆ ಅವನ ಮಾತು ಕೇಳಿಸುತ್ತಲೇ ಇರಲಿಲ್ಲ. 
- 'ಗೊತ್ತಿತ್ತು, ಈ ಮನೆಯಲ್ಲಿ ಕೃತಘ್ನತೆ, ಕುತಂತ್ರ, ಮೋಸ, ಹೊಟ್ಟೆಕಿಚ್ಚು, 
ಸಣ್ಣತನ ಬಿಟ್ಟರೆ ಇನ್ನೇನೂ ಇಲ್ಲ ಅಂತ. ಮರೆತುಬಿಟ್ಟಿದ್ದೆ...' 

' ವಿಲ್ ಎಲ್ಲಿದೆ ಅನ್ನುವುದು ನಿನಗೆ ಗೊತ್ತಿದೆಯೋ ಇಲ್ಲವೋ ?' ಪ್ರಿನ್ಸ್ 
ಕೇಳಿದ. ಅವನ ಕೆನ್ನೆಗಳು ಮೊದಲಿಗಿಂತ ಹೆಚ್ಚಾಗಿ ಅದುರುತ್ತಿದ್ದವು. 

- ' ನಿಜ , ಪೆದ್ದಿ ನಾನು! ಜನಗಳನ್ನ ನಂಬಿದೆ, ಪ್ರೀತಿ ತೋರಿಸಿದೆ, ತ್ಯಾಗ 
ಮಾಡಿದೆ. ಮೋಸ ಮಾಡುವವರು, ದುಷ್ಟರು ಮಾತ್ರ ಸುಖವಾಗಿರುತ್ತಾರೆ. ಯಾರದು 


ಸಂಪುಟ ೧ - ಸಂಚಿಕೆ ಒಂದು 


೧೧೩ 


ಈ ಕುತಂತ್ರವೆಲ್ಲಾ, ನನಗೆ ಗೊತ್ತು!' 

ಪ್ರಿನ್ಸೆಸ್ ಮೇಲೆದ್ದಳು . ಪ್ರಿನ್ಸ್ ವ್ಯಾಸಿಲಿ ಅವಳ ಕೈ ಹಿಡಿದು ಕೂರಿಸಿದ. 
ಇದ್ದಕ್ಕಿದ್ದಂತೆ ಇಡೀ ಮನುಷ್ಯ ಕುಲದ ಬಗ್ಗೆಯೇ ವಿಶ್ವಾಸ ಕಳೆದುಕೊಂಡವಳ 
ಹಾಗಿದ್ದಳು. ಪ್ರಿನ್ಸ್‌ವ್ಯಾಸಿಲಿಯ ಕಡೆಗೆ ಕೆಕ್ಕರಿಸಿಕೊಂಡು ನೋಡಿದಳು . . 

' ಇನ್ನೂ ಕಾಲ ಮೀರಿಲ್ಲ ಡಿಯರ್. ನೋಡು, ಕ್ಯಾಥೀ , ಯಾವಾಗಲೋ 
ಕೋಪ ಬಂದಾಗ, ಕಾಯಿಲೆ ಹೆಚ್ಚಾದಾಗ, ಮನಸ್ಸು ಕೆಟ್ಟಿದ್ದಾಗ ಆ ವಿಲ್ 
ಬರೆದಿರಬಹುದು. ಮತ್ತೆ ಅದನ್ನ ಮರೆತೂ ಬಿಟ್ಟಿರಬಹುದು. ಆಗಿರುವ ತಪ್ಪನ್ನು 
ಸರಿಮಾಡುವುದು ಇದೆಯಲ್ಲಾ ಅದು ನಾವು ಈಗ ಮಾಡಬೇಕಾದ ಕೆಲಸ. ನಮ್ಮ 
ಕರ್ತವ್ಯ ಕಣಮ್ಮಾ ಅದು. ಕೊನೆಯ ಗಳಿಗೆಯಲ್ಲಿ ಇಂಥ ಅನ್ಯಾಯ ಆಗುವುದಕ್ಕೆ 
ಬಿಟ್ಟು, ಸಾಯುವ ಹೊತ್ತಿನಲ್ಲಿ ನಿಮಗೆಲ್ಲ ಅನ್ಯಾಯಮಾಡಿದೆ ಅನ್ನುವ 
ಕೊರಗಿಟ್ಟುಕೊಂಡು ಅವನು ಸಾಯುವುದಕ್ಕೆ ಬಿಡಬಾರದು ನಾವು...' 

- 'ಅದೂ ತನಗಾಗಿ ಎಲ್ಲ ತ್ಯಾಗ ಮಾಡಿವರಿಗೆ ಅನ್ಯಾಯ ಮಾಡಿದೆ ಅನ್ನುವ 
ಕೊರಗು...' ಪ್ರಿನ್ಸೆಸ್ ಧ್ವನಿಗೂಡಿಸಿದಳು. ಪ್ರಿನ್ಸ್ ವ್ಯಾಸಿಲಿ ಅವಳ ಕೈ ಹಿಡಿದಿರದಿದ್ದರೆ 
ಎದ್ದು ನಿಂತೇ ಬಿಡುತ್ತಿದ್ದಳು. ' ಮಾಡಿದ ತ್ಯಾಗ... ಅವನಿಗಂತೂ ಗೊತ್ತಾಗಲೇ ಇಲ್ಲ' 
ಅನ್ನುತ್ತಾ ನಿಟ್ಟುಸಿರು ಬಿಟ್ಟು 'ಇಲ್ಲಣ್ಣಾ, ಈ ಜಗತ್ತಿನಲ್ಲಿ ನಾವು ಮಾಡಿದ ಕೆಲಸಕ್ಕೆ 
ಪ್ರತಿಫಲ ಸಿಗೋದಿಲ್ಲ, ಇಲ್ಲಿ ಗೌರವ ಇಲ್ಲಾ, ನ್ಯಾಯ ಇಲ್ಲಾ. ಈ ಜಗತ್ತಿನಲ್ಲಿ 
ಬೇಕಾದದ್ದು ಜಾಣತನ ಮತ್ತೆ ಕೆಟ್ಟತನ ಅಷ್ಟೇ ...' ಅಂದಳು. 

' ತಾಳು! ಅಷ್ಟೊಂದು ಮನಸ್ಸು ಕೆಡಿಸಿಕೋ ಬೇಡ. ನನಗೆ ಗೊತ್ತು, ನಿನ್ನದು 
ಒಳ್ಳೆಯ ಮನಸ್ಸು...' 

'ಇಲ್ಲ. ನನ್ನದು ಕೆಟ್ಟ ಮನಸ್ಸು ' 

'ನಿನ್ನ ಮನಸ್ಸು ಎಂಥಾದ್ದು, ನನಗೆ ಗೊತ್ತು, ಪ್ರಿನ್ಸ್ ಹೇಳಿದ , ' ನಿನ್ನ ವಿಶ್ವಾಸ 
ಮುಖ್ಯ . ನಿನ್ನ ಬಗ್ಗೆ ನಾನು ಯಾವ ವಿಶ್ವಾಸ ಇಟ್ಟುಕೊಂಡಿದೇನೋ ಅದೇ ವಿಶ್ವಾಸ 
ನೀನೂ ನನ್ನ ಬಗ್ಗೆ ತೋರಿಸಬೇಕು. ಮನಸ್ಸು ಕೆಡಿಸಿಕೋ ಬೇಡ. ಇನ್ನೂ ಸಮಯ 
ಇರುವಾಗಲೇ , ಇಡೀ ದಿನವೂ ಒಂದು ಗಂಟೆಯೋ , ಸಮಯ ಇರುವಾಗಲೇ 
ಸಮಾಧಾನವಾಗಿ ಕೂತು ಯೋಚನೆಮಾಡೋಣ. ವಿಲ್ ಬಗ್ಗೆ ನಿನಗೆ ಏನು 
ಗೊತ್ತೋ ಅದೆಲ್ಲಾ ಹೇಳು. ಮುಖ್ಯ ಅಂದರೆ ಅದು ಎಲ್ಲಿದೆ ? ನಿನಗೆ ಗೊತ್ತಿರುತ್ತದೆ. 
ಅದನ್ನ ತಕ್ಷಣ ತೆಗೆದುಕೊಂಡು ಹೋಗಿ ಕೌಂಟ್‌ಗೆ ತೋರಿಸೋಣ. ನನಗೆ 
ಅನ್ನಿಸುವ ಹಾಗೆ ಅವನು ಆ ವಿಲ್ ಮರೆತೇಬಿಟ್ಟಿರಬೇಕು. ಅವನೂ ಅದನ್ನ 
ನಾಶಮಾಡಬೇಕು ಅಂದುಕೊಂಡಿದ್ದು ಮರೆತಿರಬಹುದು. ಅವನ ಆಸೆ ನೆರವೇರಿಸ 
ಬೇಕು ಅನ್ನುವುದೇ ನನ್ನ ಆಸೆ. ಮರೀ ಬೇಡ. ನಾನು ಇಲ್ಲಿಗೆ ಬಂದದ್ದೂ 
ಅದಕ್ಕೇನೇ . ಅವನಿಗೆ ಸಹಾಯವಾಗಲಿ , ನಿನಗೆ ಸಹಾಯವಾಗಲಿ ಅಂತಲೇ ಬಂದೆ.' 


೧೧೪ 

ಯುದ್ಧ ಮತ್ತು ಶಾಂತಿ 
“ ನನಗೆ ಗೊತ್ತು! ಈ ಮೋಸದ ಆಟ ಯಾರು ಆಡುತಿದಾರೆ ಗೊತ್ತು!” 
ಅಂದಳು ಪ್ರಿನ್ಸೆಸ್. 

“ತಪ್ಪು ತಿಳಿದಿದ್ದೀಯಾ, ಕಣಮ್ಮಾ.' 

“ ಅವಳೇ , ಆ ಪ್ರಿನ್ಸೆಸ್ ಅನ್ನಾ ಮಿಖಾಯೌವ್ವಾ, ನಿನ್ನ ಶಿಷ್ಯಳು. ಅಂಥವಳನ್ನ 
ನಾನು ಮನೆ ಕೆಲಸಕ್ಕೂ ಇಟ್ಟುಕೊಳ್ಳುವುದಿಲ್ಲ . ಕೆಟ್ಟ ಹೆಂಗಸು, ದುಷ್ಟೆ!' 

'ಸುಮ್ಮನೆ ಕಾಲ ವ್ಯರ್ಥ ಮಾಡುತಾ...' 

“ಸುಮ್ಮನೆ ಇರು ಸಾಕು! ಹೋದ ವರ್ಷ , ಇಲ್ಲಿಗೆ ಹುಳುವಿನ ಥರಾ 
ಬಂದಳು , ಕೌಂಟ್ ಹತ್ತಿರ ಹೋಗಿ ನಮ್ಮ ಮೇಲೆ, ಅದರಲ್ಲೂ ಸೋಫಿ ಮೇಲೆ 
ಇದ್ದದ್ದು ಇಲ್ಲದ್ದು ಎಲ್ಲಾ ಏನೇನೋ ಚಾಡಿ ಹೇಳಿದಳು. ಬಾಯಲ್ಲಿ ಹೇಳಬಾರದು, 
ಅಂಥಾ ಮಾತು. ಅದನ್ನು ಕೇಳಿ ಕೌಂಟ್‌ಗೆ ಮನಸ್ಸು ಕೆಟ್ಟು ಹೋಗಿ ಹದಿನೈದು 
ದಿನ ನಮ್ಮ ಮುಖಾ ನೋಡಲಿಲ್ಲ. ಆವಾಗಲೇ ಅವನು ಆ ಭಯಂಕರ ವಿಲ್ 
ಬರೆದಿರಬೇಕು. ಅದಕ್ಕೇನೂ ಬೆಲೆ ಇಲ್ಲ ಅಂದುಕೊಂಡಿದ್ದೆ ' ಅಂದಳು. 

'ನೋಡಿದೆಯಾ, ಮೊದಲೇ ಯಾಕೆ ಹೇಳಲಿಲ್ಲ?' ಪ್ರಿನ್ಸ್ ವ್ಯಾಸಿಲಿ ಕೇಳಿದ. 

ಅವನ ಪ್ರಶ್ನೆ ಕೇಳಿಸಿಕೊಳ್ಳದೆ ಪಿನ್ನೆಸ್ ಮಾತಾಡಿದಳು. ಅದು ಒಂದು 
ಕವರ್‌ನಲ್ಲಿದೆ. ಆ ಕವರ್‌ ಕೌಂಟನ ದಿಂಬಿನ ಕೆಳಗೆ ಇರುತ್ತದೆ. ನನಗೆ ಗೊತ್ತು! 
ನನ್ನಲ್ಲಿ ಪಾಪ ಅನ್ನುವುದೇನಾದರೂ ಇದ್ದರೆ ಅದು ಈ ದುಷ್ಟ ಹೆಂಗಸಿನ ಬಗ್ಗೆ 
ಇರುವ ದ್ವೇಷ ಮಾತ್ರ ಅದು ಯಾಕೆ ಅವಳು ಬಾಲ ಆಡಿಸಿಕೊಂಡು, ಇಲ್ಲಿಗೆ 
ಬರಬೇಕು? ಇವತ್ತು ಸಿಗಲಿ, ಸರಿಯಾಗಿ ಬುದ್ದಿ ಕಲಿಸತೇನೆ. ಸರಿಯಾದ ಸಮಯ 
ಸಿಗಲಿ ಅಂತ ಕಾಯುತ್ತಾ ಇದೇನೆ.' 


ಈ ಎಲ್ಲ ಮಾತುಕತೆಗಳು ದಿವಾನಖಾನೆಯಲ್ಲಿ, ಪ್ರಿನ್ಸೆಸ್‌ಳ ಕೋಣೆಯಲ್ಲಿ 
ನಡೆಯುತ್ತಿರುವಾಗ ಸಾರೋಟುಪಿಯರೆಯನ್ನೂ ( ಅವನಿಗೆ ಹೇಳಿ ಕಳುಹಿಸಿದ್ದರು) 
ಅನ್ನಾ ಮಿಖಾಯೌವ್ಹಾಳನ್ನೂ ( ಪಿಯರೆಯ ಜೊತೆಗೆ ತಾನೂ ಹೋಗುವುದು 
ಅಗತ್ಯ ಅಂದುಕೊಂಡು ಅವಳೂ ಬಂದಿದ್ದಳು) ಕರೆದುಕೊಂಡು ಬರುತ್ತಿತ್ತು . 
ಕೌಂಟ್ ಬೆಝುಕೋವ್ನ ಮನೆಯ ಅಂಗಳವನ್ನು ಹೊಕ್ಕು ಕಿಟಕಿಗಳ ಹತ್ತಿರ 
ನೆಲದ ಮೇಲೆ ಹರಡಿದ್ದ ಒಣ ಹುಲ್ಲಿನ ಮೇಲೆ ಸಾರೋಟಿನ ಗಾಲಿಗಳು ಮೃದುವಾಗಿ 
ಉರುಳುತ್ತಿದ್ದಾಗ ಅನ್ನಾ ಮಿಖಾಝೇವಾ ಸಮಾಧಾನಪಡಿಸುವ ಹಾಗೆ ಪಿಯರೆಯ 
ಕಡೆ ನೋಡಿದರೆ - ನಿದ್ದೆ ಹೋಗಿದ್ದ ಅವನು. ಎಬ್ಬಿಸಿದಳು. ಪಿಯರೆಗೆ ಎಚ್ಚರವಾಗಿ, 
ಗಾಡಿಯಿಂದಿಳಿದು, ಅವಳ ಹಿಂದೆಯೇ ಸಾಗುತ್ತಾ ಇರುವಾಗಷ್ಟೇ ಸಾಯಲಿರುವ 
ತಂದೆಯೊಡನೆ ಮಾತಾಡಬೇಕಾಗಿದೆ ಅನ್ನುವ ಯೋಚನೆ ಅವನಿಗೆ ಬಂದದ್ದು. 
ತಾವು ಮುಂಬಾಗಿಲಿಗೆ ಬಂದಿಲ್ಲ ಹಿತ್ತಿಲ ಬಾಗಿಲಿಗೆ ಬಂದಿದ್ದೇವೆ ಅನ್ನುವುದು 


೧೧೫ 
ಸಂಪುಟ ೧ - ಸಂಚಿಕೆ ಒಂದು 
ಗಮನಿಸಿದ, ಗಾಡಿಯಿಂದ ಹೊರಕ್ಕೆ ಕಾಲಿಡುತ್ತಿರುವಾಗ ಇಬ್ಬರು, ಯಾರೋ 
ವ್ಯಾಪಾರಸ್ಥರ ಹಾಗೆ ಕಾಣುತ್ತಿದ್ದವರು , ಬಾಗಿಲಿನಿಂದ ದೂರ ಸರಿದು ಗೋಡೆಯ 
ನೆರಳಿನಲ್ಲಿ ಅವಿತುಕೊಂಡರು. ಒಂದು ಕ್ಷಣ ತಡೆದು ನಿಂತು ನೋಡಿದರೆ ಇನ್ನೂ 
ಕೆಲವು ಆಕಾರಗಳು ಮನೆಯ ಎರಡೂ ಪಕ್ಕದ ಗೋಡೆಯ ನೆರಳಲ್ಲಿ ಅವಿತು. 
ನಿಂತಿರುವುದು ಕಂಡಿತು. ಅನ್ನಾ ಮಿಖಾಯೌವ್ವಾ, ಸೇವಕ , ಮತ್ತೆ ಗಾಡಿಯವನು 
ಹೀಗೆ ನಿಂತವರನ್ನು ನೋಡಿದರೂ ನೋಡದವರ ಹಾಗೆ ಇದ್ದರು. ಎಲ್ಲಾ 
ಸರಿಯಾಗಿಯೇ ಇದೆ' ಅಂದುಕೊಂಡು ಪಿಯರೆ ಅನ್ನಾ ಮಿಖಾಯೌವ್ವಾಳ 
ಹಿಂದೆ ಹೆಜ್ಜೆ ಹಾಕಿದ. ಅನ್ನಾ ಮಿಖಾಯೌವ್ವಾ ಮಂಕು ಬೆಳಕಿದ್ದ ಕಿರಿದಾದ ಕಲ್ಲಿನ 
ಮೆಟ್ಟಿಲುಗಳನ್ನು ಹತ್ತುತ್ತಾ ಹಿಂದೆ ಬೀಳಬೇಡ ಬಾ ಎಂದು ಪಿಯರೆಯನ್ನು 
ಅವಸರಮಾಡಿದಳು. ಕೌಂಟ್‌ನನ್ನು ನೋಡಲು ಯಾಕೆ ಹೋಗಬೇಕು, ಹೋದರೂ 
ಯಾಕೆ ಹೀಗೆ ಹಿಂಬಾಗಿಲಿನಿಂದ ಹೋಗಬೇಕು ಅನ್ನುವುದು ಪಿಯರೆಗೆ ತಿಳಿಯಲಿಲ್ಲ. 
ಆದರೂ ಅನ್ನಾ ಮಿಖಾಯೌವ್ಹಾಳ ಧಾವಂತ, ಆತ್ಮವಿಶ್ವಾಸಗಳನ್ನು ಕಂಡು ಹೀಗೆಯೇ 
ಮಾಡಬೇಕೋ ಏನೋ ಅಂದುಕೊಂಡ. ಮೆಟ್ಟಿಲುಗಳನ್ನು ಅರ್ಧ ಏರಿದ್ದಾಗ 
ಬೋಗುಣಿಗಳನ್ನು ಹಿಡಿದು ದಡದಡನೆ ಮೆಟ್ಟಿಲಿಳಿದು ಬರುತ್ತಿದ್ದ ಸೇವಕರು ಡಿಕ್ಕಿ 
ಹೊಡೆಯುವುದರಲ್ಲಿದ್ದರು. ತಟ್ಟನೆ ನಿಂತು, ಗೋಡೆಗೆ ಆತುಕೊಂಡು ಪಿಯರೆ 
ಮತ್ತು ಅನ್ನಾ ಮಿಖಾಯೌವ್ವಾ ಮುಂದೆ ಹೋಗಲು ದಾರಿಮಾಡಿಕೊಟ್ಟರು. 
ಅವರನ್ನು ಹಿತ್ತಿಲ ಬಾಗಿಲ್ಲಿ ಕಂಡು ಸೇವಕರಿಗೆ ಒಂದಿಷ್ಟೂ ಆಶ್ಚರ್ಯವಾಗಲಿಲ್ಲ. 

' ಪ್ರಿನ್ಸೆಸ್‌ಗಳ ರೂಮಿಗೆ ಹೋಗುವುದಕ್ಕೆ ಇದೇ ದಾರಿಯೋ ?' ಅನ್ನಾ 
ಮಿಖಾಯೌವ್ವಾ ಅವರಲ್ಲಿ ಒಬ್ಬನನ್ನು ಕೇಳಿದಳು . 

'ಹೌದು, ಅಮ್ಮಾ, ಹೀಗೇ ಹೋಗಿ ಎಡಗಡೆಯ ರೂಮು ಅವರದು' ಈಗ 
ಹೇಗೆ ಬೇಕಾದರೂ ನಡೆದುಕೊಳ್ಳುವ ಸ್ವಾತಂತ್ರ ಇದೆ ಅನ್ನುವ ಹಾಗೆ ಗಟ್ಟಿಯಾದ 
ಧ್ವನಿಯಲ್ಲಿ ಸೇವಕ ಉತ್ತರ ಕೊಟ್ಟ 

ಆಕೆ ಕೊನೆಯ ಮೆಟ್ಟಿಲು ಮುಟ್ಟಿದಾಗ 'ಕೌಂಟ್ ನನಗೆ ಹೇಳಿ ಕಳುಹಿಸಿಲ್ಲವೋ 
ಏನೋ , ನಾನು ನನ್ನ ರೂಮಿಗೆ ಹೋದರೆ ವಾಸಿ ಅನ್ನಿಸುತ್ತದೆ' ಅಂದ ಪಿಯರೆ. 
ಪಿಯರೆ ಕೊನೆಯ ಮೆಟ್ಟಿಲಿಗೆ ಬರುವವರೆಗೆ ಕಾದಿದ್ದಳು ಅನ್ನಾ ಮಿಖಾಯೌವ್ವಾ. 
ಅಂದು ಬೆಳಿಗ್ಗೆ ಮಗನ ಭುಜ ಮುಟ್ಟಿದ ಹಾಗೆಯೇ ಈಗ ಪಿಯರೆಯ ಭುಜ 
ಮುಟ್ಟುತ್ತಾ ' 

ನೋಡಪ್ಪಾ , ನನಗೂ ನಿನ್ನಷ್ಟೇ ಬೇಜಾರಾಗಿದೆ. ಗಂಡಸರ ಹಾಗೆ 
ದುಃಖ ಸಹಿಸಿಕೊಳ್ಳಬೇಕಪ್ಪಾ ನೀನು!' ಅಂದಳು. 

'ನಾನು ವಾಪಸ್ಸು ಹೋಗುವುದೇ ವಾಸಿಯೇನೋ ?' ಕನ್ನಡಕದೊಳಗಿಂದ 
ಅವಳನ್ನು ಸ್ನೇಹಪೂರ್ವಕವಾಗಿ ನೋಡುತ್ತಾ ಪಿಯರೆ ಹೇಳಿದ . 

“ಕಂದಾ! ನಿನಗೆ ಆದ ಅನ್ಯಾಯ ಮರೆತುಬಿಡು. ಅವನು ನಿಮ್ಮ ಅಪ್ಪ, 


೧೧೬ 

ಯುದ್ಧ ಮತ್ತು ಶಾಂತಿ 
ಮರೀ ಬೇಡ... ನರಳುತಾ , ಸಾಯುತಾ ಇದಾನೆ.' ನಿಟ್ಟುಸಿರು ಬಿಟ್ಟಳು . 
“ ಮೊದಲಿನಿಂದಲೂ ನಿನ್ನನ್ನು ನನ್ನ ಮಗನ ಹಾಗೆಯೇ ಪ್ರೀತಿ ಮಾಡಿದ್ದೇನೆ. ನನ್ನ 
ನಂಬು, ನಿನ್ನ ಹಿತಕ್ಕೆ ಧಕ್ಕೆ ಆಗದ ಹಾಗೆ ನೋಡಿಕೊಳ್ಳುತ್ತೇನೆ' ಅಂದಳು. 

ಅವಳು ಹೇಳಿದ್ದೊಂದೂ ಪಿಯರೆಗೆ ಅರ್ಥವಾಗಲಿಲ್ಲ. ಎಲ್ಲವೂ ಹೀಗೆಯೇ 
ನಡೆಯಬೇಕೇನೋ ಅನ್ನುವ ವಿಶ್ವಾಸ ಮಾತ್ರ ಗಟ್ಟಿಯಾಯಿತು. ಆಗಲೇ ಹಿತ್ತಿಲ 
ಹಜಾರದ ಬಾಗಿಲು ದೂಡಿ ತೆರೆಯುತ್ತಿದ್ದ ಅನ್ನಾ ಮಿಖಾಯೌವ್ಹಾಳ ಹಿಂದೆ ತಲೆ 
ಬಗ್ಗಿಸಿಕೊಂಡು ನಡೆದ . ಅಲ್ಲಿ ಒಬ್ಬ ಮುದುಕ, ಪ್ರಿನ್ಸೆಸ್‌ಗಳ ಸೇವಕ, ಮೂಲೆಯಲ್ಲಿ 
ಕೂತು ಕಾಲು ಚೀಲ ಹೊಲಿದುಕೊಳ್ಳುತ್ತಿದ್ದ . ಮನೆಯ ಈ ಭಾಗಕ್ಕೆ ಪಿಯರೆ 
ಯಾವತ್ತೂ ಬಂದಿರಲಿಲ್ಲ. ಈ ಕೋಣೆಗಳು ಇರುವುದೂ ಅವನಿಗೆ ಗೊತ್ತಿರಲಿಲ್ಲ. 
ದೊಡ್ಡ ತಟ್ಟೆಯಲ್ಲಿ ನೀರಿನ ಪಾತ್ರೆ ಇಟ್ಟು ಕೊಂಡು ಆತುರಾತುರವಾಗಿ ಬರುತ್ತಿದ್ದ 
ಸೇವಕಿಯೊಬ್ಬಳನ್ನು ಅನ್ನಾ ಮಿಖಾಯೌವ್ವಾ ' ಅಕ್ಕಾ, ಅಮ್ಮಾ' ಅಂತ ಮಾತಾಡಿಸುತ್ತಾ 
ಪ್ರಿನ್ಸೆಸ್‌ಗಳ ಆರೋಗ್ಯದ ಬಗ್ಗೆ ವಿಚಾರಿಸಿಕೊಂಡಳು. ನೆಲ್ಲಕ್ಕೆ ಕಲ್ಲು ಹಾಸಿದ 
ಕಾರಿಡಾರಿನಲ್ಲಿ ಕರೆದುಕೊಂಡು ಹೋದಳು . ನೀರಿನ ಪಾತ್ರೆ ತೆಗೆದುಕೊಂಡು 
ಹೋಗುತ್ತಿದ್ದ ಸೇವಕಿ ಸರಿಯಾಗಿ ಬಾಗಿಲು ಮುಚ್ಚಿರಲಿಲ್ಲ. ( ಮನೆಯ ಎಲ್ಲ 
ಕೆಲಸಗಳನ್ನೂ ಆತುರಾತುರವಾಗಿ ಮಾಡಿ ಮುಗಿಸುತ್ತಿದ್ದ ಹೊತ್ತು ಅದು.) ಕಾರಿಡಾರಿಲ್ಲಿ 
ನಡೆಯುತ್ತಿದ್ದ ಪಿಯರೆ ಮತ್ತು ಅನ್ನಾ ಮಿಖಾಯೌವ್ವಾ ಸುಮ್ಮನೆ ಅರೆ ತೆರೆದ 
ಬಾಗಿಲತ್ತ ನೋಡಿದರು.ಕೋಣೆಯೊಳಗೆ ಪ್ರಿನ್ಸ್ ವ್ಯಾಸಿಲಿ ದೊಡ್ಡ ಪ್ರಿನ್ಸೆಸ್‌ಳೊಡನೆ 
ಮಾತಾಡುತ್ತಾ ಕೂತಿರುವುದು ಕಾಣಿಸಿತು. ಅವರಿಬ್ಬರನ್ನೂ ಕಂಡ ಪ್ರಿನ್ಸ್ ವ್ಯಾಸಿಲಿ 
ರೇಗಿಕೊಂಡವನ ಹಾಗೆ ಮುಖ ಮಾಡಿಕೊಂಡು ಹಿಂದಕ್ಕೆ ಒರಗಿ ಕೊಂಡ. 
ಪ್ರಿನ್ಸೆಸ್ ತಟ್ಟನೆ ಎದ್ದು, ಹತಾಶಳಾಗಿ ಶಕ್ತಿಯನ್ನೆಲ್ಲ ಬಿಟ್ಟು ಬಾಗಿಲನ್ನು ದಢಾರನೆ 
ಮುಚ್ಚಿ ಚಿಲುಕ ಹಾಕಿಕೊಂಡಳು. ಅವಳ ಸದಾ ಸಮಾಧಾನ ವರ್ತನೆಗೆ ವಿರುದ್ಧವಾಗಿತ್ತು 
ಅವಳು ಬಾಗಿಲು ಹಾಕಿದ ರೀತಿ, ಪ್ರಿನ್ಸ್ ವ್ಯಾಸಿಲಿಯ ಘನತೆಗೆ ತಕ್ಕಂತಿರಲಿಲ್ಲ. 
ಅವನ ಮುಖದ ಮೇಲಿದ್ದ ಕೋಪ. ಅದಕ್ಕೇ ಪಿಯರೆ ಒಂದು ಕ್ಷಣ ನಿಂತು 
ಏನಿದೆಲ್ಲ ಅನ್ನುವ ಹಾಗೆ ತಬ್ಬಿಬ್ಬಾಗಿ ಕನ್ನಡಕದೊಳಗಿನ ಕಣ್ಣುಗಳಿಂದ ತನ್ನ 
ಮಾರ್ಗದರ್ಶಿಯತ್ತ ನೋಡಿದ. ಆಕೆ ಯಾವ ಆಶ್ವರ್ಯವನ್ನೂ ತೋರಿಸದೆ, 
ಹೀಗೆಯೇ ನಡೆಯುತ್ತದೆ ಅನ್ನುವುದು ಗೊತ್ತಿತ್ತು ಅನ್ನುವ ಹಾಗೆ ಸಣ್ಣಗೆ ನಕ್ಕು 
ನಿಟ್ಟುಸಿರು ಬಿಟ್ಟಳು. . 

'ಧೈರ್ಯವಾಗಿರು ಮಗಾ! ನಿನ್ನ ಒಳ್ಳೆಯದು ಕೆಟ್ಟದ್ದು ನಾನು 
ನೋಡಿಕೊಳ್ಳುತ್ತೇನೆ' ಎಂದು ಅವನ ನೋಟಕ್ಕೆ ಮಾತಿನಲ್ಲಿ ಉತ್ತರ ಹೇಳಿ ಇನ್ನೂ 
ದೊಡ್ಡ ಹೆಜ್ಜೆ ಹಾಕುತ್ತಾ ಮುಂದೆ ನಡೆದಳು. 
- ಏನು ನಡೆಯುತ್ತಿದೆ ಅನ್ನುವುದು ಪಿಯರೆಗೆ ಇನ್ನೂ ಅರ್ಥವಾಗಲಿಲ್ಲ. 


೧೧೭ 
ಸಂಪುಟ ೧ - ಸಂಚಿಕೆ ಒಂದು 
“ನಿನ್ನ ಒಳ್ಳೆಯದು ಕೆಟ್ಟದ್ದು ನೋಡಿಕೊಳ್ಳುತೇನೆ' ಅಂದರೇನೆಂದು ತಿಳಿಯಲಿಲ್ಲ. 
ಆದರೂ ಎಲ್ಲಾ ಹೇಗಿರಬೇಕೋ ಹಾಗೇ ಇದೆ, ಹೇಗೆ ನಡೆಯಬೇಕೋ ಹಾಗೇ 
ನಡೆಯುತ್ತಿದೆ ಅಂದುಕೊಂಡ. ಕಾರಿಡಾರನ್ನು ದಾಟಿ, ಕೌಂಟ್‌ನ ದಿವಾನಖಾನೆಗೆ 
ಹೊಂದಿಕೊಂಡ ಹಾಗಿದ್ದ ಮಂಕು ಬೆಳಕಿನ ಕೋಣೆಗೆ ಬಂದರು. ಓರಣವಾಗಿ 
ಸಜ್ಜಾಗಿದ್ದ ತಣ್ಣನೆಯ ಆ ದೊಡ್ಡಕೋಣೆಗೆ ಪಿಯರೆ ಯಾವಾಗಲೂ 
ಮುಂಬಾಗಿಲಿನಿಂದ ಬರುತ್ತಿದ್ದ . ಈ ಕೋಣೆಯ ಮಧ್ಯದಲ್ಲಿ ಈಗ ದೊಡ್ಡಸ್ನಾನದ 
ಟಬ್ ಇತ್ತು. ಖಾಲಿಯಾಗಿತ್ತು. ಅದರ ಅಕ್ಕ ಪಕ್ಕದಲ್ಲಿ ಕಾರ್ಪೆಟ್ಟು ಒದ್ದೆಯಾಗಿತ್ತು. 
ಧೂಪದ ಪಾತ್ರೆ ಹಿಡಿದಿದ್ದ ಒಬ್ಬ ಕಿರಿಯ ಪಾದ್ರಿ, ಅವನ ಹಿಂದೆ ಆತುರಾತುರವಾಗಿ 
ತುದಿಗಾಲಲ್ಲಿ ಹೆಜ್ಜೆ ಇಟ್ಟುಕೊಂಡು ಬರುತ್ತಿದ್ದ ಸೇವಕ ಎದುರಾದರು . 
ಪಿಯರೆಯನ್ನಾಗಲೀ ಅನ್ಸಾಮಿಖಾಲ್ಲೋವ್ಯಾಳನ್ನಾಗಲೀ ಅವರು ಗಮನಿಸಲೇ 
ಇಲ್ಲ. ತನಗೆ ಚಿರಪರಿಚಿತವಾಗಿದ್ದ ದಿವಾನಖಾನೆಗೆ ಕಾಲಿಟ್ಟ ಪಿಯರೆ. ಕೈತೋಟದ 
ಕಡೆಗೆ ಮುಖಮಾಡಿರುವ ಎರಡು ಇಟಾಲಿಯನ್ ಕಿಟಕಿಗಳು , ಬಾಗಿಲು ಇದ್ದವು. 
ಮಹಾರಾಣಿ ಕ್ಯಾಥರೀನ್ ದಿ ಗ್ರೇಟ್‌ಳ ಎದೆಮಟ್ಟದ ವಿಗ್ರಹ, ಜೊತೆಗೆ ಪೂರ್ಣ 
ಪ್ರಮಾಣದ ಭಾವ ಚಿತ್ರ ಇದ್ದವು. ಅಲ್ಲಿ ಇನ್ನೂ ಅದೇ ಜನ, ಬಹಳ ಮಟ್ಟಿಗೆ ಅದೇ 
ಭಂಗಿಯಲ್ಲಿ ಅದೇ ರೀತಿ ಪಿಸುಮಾತು ಆಡುತ್ತಾ ಕೂತಿದ್ದರು. ಎಲ್ಲರೂ ಮಾತು 
ನಿಲ್ಲಿಸಿದರು. ಬಿಳಿಚಿಕೊಂಡ, ಕಣ್ಣೀರು ಕರೆಗಟ್ಟಿದ ಮುಖದ ಅನ್ನಾ ಮಿಖಾಯೌವ್ವಾ 
ಮತ್ತೆ ಅವಳ ಹಿಂದೆ ತಲೆ ತಗ್ಗಿಸಿಕೊಂಡು ವಿಧೇಯನಾಗಿ ಬರುತ್ತಿದ್ದ ದೊಡ್ಡ 
ಗಾತ್ರದ ಮೈಯ ಪಿಯರೆಯ ಕಡೆಗೆ ತಿರುಗಿ ನೋಡಿದರು. 

ಆಗಬೇಕಾದದ್ದು ಆಗುವ ಹೊತ್ತು ಬಂದಿದೆ ಅನ್ನುವ ಭಾವ ಅನ್ನಾ 
ಮಿಖಾಯೌವಾಳ ಮುಖದಲ್ಲಿ ಕಾಣುತ್ತಿತ್ತು. ಲೌಕಿಕ ವ್ಯವಹಾರಗಳಲ್ಲಿ ಪರಿಣಿತಳಾದ 
ಪೀಟರ್ಸ್‌ಬರ್ಗಿನ ಮಹಿಳೆಯ ಹಾಗೆ, ಅವತ್ತು ಮಧ್ಯಾಹ್ನ ಆ ಮನೆಗೆ ಕಾಲಿಟ್ಟದ್ದಕ್ಕಿಂತ 
ಮಿಗಿಲಾದ ಧೈರ್ಯದಲ್ಲಿ ಪಿಯರೆಯನ್ನು ತನ್ನ ಪಕ್ಕದಲ್ಲೇ ನಡೆಸಿಕೊಂಡು ಹೆಜ್ಜೆ 
ಹಾಕುತ್ತಿದ್ದಳು. ಸಾಯುತ್ತಿರುವ ಮನುಷ್ಯ ನೋಡಲು ಬಯಸಿದ ವ್ಯಕ್ತಿಯನ್ನು 
ಕರಕೊಂಡು ಬಂದಿರುವುದರಿಂದ ನನ್ನನ್ನು ಯಾರೂ ತಡೆಯಲಾರರು, ಒಳ್ಳೆಯ 
ಸ್ವಾಗತ ದೊರೆಯುತ್ತದೆ ಅನ್ನುವ ವಿಶ್ವಾಸ ಅವಳಲ್ಲಿತ್ತು. ಇಡೀ ಕೋಣೆಯನ್ನು 
ಒಮ್ಮೆ ಚುರುಕಾಗಿ ನೋಡಿಕೌಂಟ್‌ನ ಪಾಪನಿವೇದನೆಗಳನ್ನು ಕೇಳಲು ಬಂದಿದ್ದ 
ಪಾದ್ರಿಯನ್ನು ವಿಶೇಷವಾಗಿ ಕಣ್ಣಿಗೆ ತಂದುಕೊಂಡಳು. ಪೂರಾ ತಲೆಬಾಗಿಸಿ 
ವಂದಿಸದಿದ್ದರೂ ತನ್ನ ಇಡೀ ಮೈಯನ್ನೇ ಕುಬ್ದಗೊಳಿಸಿಕೊಂಡವಳ ಹಾಗೆ ಅವನತ್ತ 
ಹೋಗಿ ಇಬ್ಬರೂ ಪಾದರಿಗಳ ಆಶೀರ್ವಾದವನ್ನು ಭಕ್ತಿಯಿಂದ ಪಡೆದುಕೊಂಡಳು. 
'ಸದ್ಯ , ದೇವರು ದೊಡ್ಡವನು. ಸಮಯಕ್ಕೆ ಸರಿಯಾಗಿ ಬಂದೆವು. ನಾವು, ನಂಟರೆಲ್ಲ 
ಆತಂಕಪಡುತ್ತಿದ್ದೆವು. ಇವರು ಕೌಂಟ್ ಅವರ ಮಗ' ಎಂದು ಒಬ್ಬ ಪಾದ್ರಿಗೆ 


೧೧೮ 

ಯುದ್ಧ ಮತ್ತು ಶಾಂತಿ 
ಹೇಳಿದಳು . ಆನಂತರ ಧ್ವನಿಯನ್ನು ಮೆದುವಾಗಿಸಿಕೊಂಡು ' ನೆನೆಸಿಕೊಂಡರೆ 
ಭಯವಾಗುತದೆ!' ಅನ್ನುವ ಮಾತು ಸೇರಿಸಿದಳು. 

ಇಷ್ಟು ಹೇಳಿ ಡಾಕ್ಟರ ಹತ್ತಿರ ಹೋದಳು. 

' ಡಾಕ್ಟರೇ , ಈ ಯುವಕ ಕೌಂಟ್ ಅವರ ಮಗ...ಏನಾದರೂ ಹೋಪ್ 
ಇದೆಯಾ ?' ಅಂತ ಕೇಳಿದಳು. 
- ಡಾಕ್ಟರು ಏನೂ ಮಾತಾಡದೆ , ಭುಜ ಕೊಡವಿ, ಕಣ್ಣು ಮೇಲೆ ಹೊರಳಿಸಿ 
ಆಕಾಶ ನೋಡಿದ. ಅನ್ನಾ ಮಿಖಾಯೌವ್ವಾ ಕೂಡ ತದ್ವತ್ ಅವನ ಹಾಗೆಯೇ 
ಆಕಾಶ ನೋಡುತ್ತಾ ಆದರೆ ಕಣ್ಣು ಮುಕ್ಕಾಲುಭಾಗ ಮುಚ್ಚಿ, ಭುಜ ಕೊಡವಿ 
ನಿಟ್ಟುಸಿರು ಬಿಟ್ಟು, ಪಿಯರೆಯ ಕಡೆ ಹೆಜ್ಜೆ ಹಾಕಿ ಬಹಳ ಗೌರವದ ಗಂಭೀರವಾದ 
ಧ್ವನಿಯಲ್ಲಿ ಹೇಳಿದಳು: 

' ದೇವರನ್ನು ನಂಬು!' ಅನ್ನುತ್ತಾ ಕೂತು ತನಗಾಗಿ ಕಾಯುವುದಕ್ಕೆ ಅಲ್ಲಿದ್ದ 
ಪುಟ್ಟ ಸೋಫಾ ಅವನಿಗೆ ತೋರಿಸಿ, ಎಲ್ಲರೂ ನೋಡುತ್ತಾ ಇದ್ದ ಬಾಗಿಲಿನ 
ಕಡೆಗೆ ನಿಶ್ಯಬ್ದವಾಗಿ ಹೆಜ್ಜೆ ಹಾಕಿದಳು. ಬಾಗಿಲು ಸದ್ದಿಲ್ಲದೆ ತೆರೆದುಕೊಂಡು ಅವಳು 
ಒಳಗೆ ಜಾರಿಕೊಂಡ ತಕ್ಷಣ ಮತ್ತೆ ಮುಚ್ಚಿಕೊಂಡಿತು. 

ಈ ಎಲ್ಲಾ ವಿಚಾರದಲ್ಲೂ ಈ ಮಾರ್ಗದರ್ಶಿ ಹೇಳಿದ ಹಾಗೆ ಕೇಳಿಬಿಡುವುದೇ 
ಸೂಕ್ತ ಎಂದು ತೀರ್ಮಾನಮಾಡಿಕೊಂಡಿದ್ದ ಪಿಯರೆ ಆಕೆ ತೋರಿಸಿದಸೋಫಾದ 
ಕಡೆಗೆ ಹೆಜ್ಜೆ ಹಾಕಿದ . ಅನ್ನಾ ಮಿಖಾಯೌವ್ವಾ ಮಾಯವಾದ ಕೂಡಲೆ ಆ 
ಕೋಣೆಯಲ್ಲಿದ್ದವರೆಲ್ಲರ ಕಣ್ಣೂ ತನ್ನ ಕಡೆಗೆ ತಿರುಗಿವೆ , ಬರಿಯ ಕುತೂಹಲ, 
ಸಹಾನುಭೂತಿಯಲ್ಲದೆ ಇನ್ನೂ ಬೇರೆ ಏನೋ ಆ ನೋಟದಲ್ಲಿದೆ ಅನ್ನಿಸಿತು. 
ಗಮನಿಸಿ ನೋಡಿದ - ಪರಸ್ಪರ ಪಿಸು ಮಾತಾಡುತ್ತಾ , ಒಂದಿಷ್ಟು ಭಯ , ಒಂದಿಷ್ಟು 
ಭಟ್ಟಂಗಿತನ ಬೆರೆತ ರೀತಿಯಲ್ಲಿ ತನ್ನ ಕಡೆಗೆ ನೋಡುತ್ತಿದ್ದಾರೆ ಅನ್ನಿಸಿತು. ಅವರೆಲ್ಲ 
ಇದುವರೆಗೂ ಅವನು ಕಂಡರಿಯದಂಥ ಗೌರವ ತೋರುತ್ತಿದ್ದರು. ಅವನಿಗೆ 
ಪರಿಚಯವೇ ಇರದಿದ್ದ ಹೆಂಗಸು, ಪಾದ್ರಿಯ ಜೊತೆಗೆ ಮಾತಾಡುತ್ತಿದ್ದವಳು, 
ಎದ್ದು ನಿಂತು ತನ್ನ ಜಾಗ ಬಿಟ್ಟುಕೊಟ್ಟಳು; ಏಡ್ - ಡಿ -ಕ್ಯಾಂಪ್ ಪಿಯರೆ ಕೆಳಕ್ಕೆ 
ಬೀಳಿಸಿಕೊಂಡಿದ್ದ ಕೈ ಗೌಸನ್ನು ಬಗ್ಗಿ ತೆಗೆದುಕೊಂಡು ಎತ್ತಿ ಕೊಟ್ಟ; ಪಿಯರೆ ತಮ್ಮ 
ಬಳಿ ಹಾದು ಹೋದಾಗ ಡಾಕ್ಟರುಗಳು ಗೌರವ ಸೂಚಕವಾಗಿ ಮಾತು ನಿಲ್ಲಿಸಿ , 
ಅವನು ಮುಂದೆ ಹೋಗಲು ದಾರಿ ಬಿಟ್ಟರು. ಮೊದಲು ಪಿಯರೆಯ ಮನಸ್ಸಿನಲ್ಲಿ 
ಬಂದಿದ್ದ ಯೋಚನೆ ಅಂದರೆ - ಪಾದರಿಗಳೊಡನೆ ಮಾತನಾಡುತ್ತಿದ್ದ ಹೆಂಗಸಿಗೆ 
ತೊಂದರೆಯಾಗಬಾರದು, ಬೀಳಿಸಿಕೊಂಡಿದ್ದ ಗೌಸನ್ನು ಎತ್ತಿಕೊಂಡು, ಡಾಕ್ಟರುಗಳನ್ನು 
ಬಳಸಿಕೊಂಡು ಹೋಗಿ ಪುಟ್ಟ ಸೋಫಾದ ಮೇಲೆ ಕೂರಬೇಕು ಅನ್ನುವುದು. 
ಹಾಗೆ ಮಾಡಿದರೆ ಸರಿಹೋಗುವುದಿಲ್ಲ ಅಂತ ಇದ್ದಕ್ಕಿದ್ದ ಹಾಗೆ ಹೊಳೆಯಿತು. 


೧೧೯ 


0 


ಸಂಪುಟ ೧ - ಸಂಚಿಕೆ ಒಂದು 
ಇವತ್ತು ನಾನು ವಿಶೇಷವಾದ ವ್ಯಕ್ತಿ ಆಗಿಬಿಟ್ಟಿದೇನೆ, ಎಲ್ಲರೂ ನಿರೀಕ್ಷಿಸುವ ಹಾಗೆಯೇ 
ಭಯಂಕರವಾದ ಆಚರಣೆಗಳನ್ನು ಸಹಿಸಿಕೊಳ್ಳಬೇಕು, ಅಂದರೆ ಒಬ್ಬೊಬ್ಬರೂ 
ಮಾಡುವ ಸೇವೆಗಳನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳಬೇಕು ಅನ್ನುವುದು ತಟ್ಟನೆ 
ಹೊಳೆಯಿತು. ಏಡ್ ಡಿ ಕ್ಯಾಂಪ್ ಎತ್ತಿಕೊಟ್ಟ ಗೌಸು ಸುಮ್ಮನೆ ತೆಗೆದುಕೊಂಡ; 
ಹೆಂಗಸು ಬಿಟ್ಟುಕೊಟ್ಟ ಕುರ್ಚಿಯಲ್ಲಿ ಕೂತ. ತನ್ನೆರಡೂ ದೊಡ್ಡ ಹಸ್ತಗಳನ್ನು 
ಸಮಾನಾಂತರದಲ್ಲಿ ಮೊಳಕಾಲಮೇಲೆಊರಿಕೊಂಡು ಈಜಿಪ್ಪಿನ ಮುಗ್ಗ ವಿಗ್ರಹದ 
ಹಾಗೆ ಕೂತ. ಎಲ್ಲವೂ ಆಗಬೇಕಾದ ಹಾಗೆಯೇ ಆಗುತ್ತಿವೆ ; ಇವತ್ತು ರಾತ್ರಿ ತಲೆ 
ಕೆಟ್ಟು ಮೂರ್ಖನ ಹಾಗೆ ಆಡದಿರಬೇಕಾದರೆ ನನ್ನ ಮನಸ್ಸಿನಂತೆ ನಡೆದುಕೊಳ್ಳುವುದನ್ನು 
ಬಿಟ್ಟು, ಯಾರು ಹೇಗೆ ಹೇಳುತ್ತಾರೋ ಹಾಗೆ ಅವರಿಚ್ಛೆಗೆ ಅಧೀನನಾಗುವುದೇ 
ಸರಿ ಎಂದು ಗಟ್ಟಿಮಾಡಿಕೊಂಡ. 

ಇನ್ನೂ ಎರಡು ನಿಮಿಷ ಕಳೆದಿರಲಿಲ್ಲ, ಏನ್ ವ್ಯಾಸಿಲಿ ಕೊರಳು ಸೆಟೆಸಿಕೊಂಡು 
ಗಂಭೀರವಾಗಿ ಹೆಜ್ಜೆ ಹಾಕಿಕೊಂಡು ದಿವಾನಖಾನೆಗೆ ಬಂದ. ತೊಟ್ಟಿದ್ದ ಲಾಂಗ್ 
ಕೋಟಿನ ಮೇಲೆಮೂರು ನಕ್ಷತ್ರಗಳನ್ನು ಸಿಕ್ಕಿಸಿಕೊಂಡು ರಾಜಪುರುಷನ ಹಾಗಿದ್ದ. 
ಅವತ್ತು ಬೆಳಗಿನಿಂದ ಯಾಕೋ ಸೊರಗಿದ ಹಾಗೆ ಕಾಣುತ್ತಿದ್ದ . ಕೋಣೆಯ 
ಸುತ್ತಲೂ ಕಣ್ಣಾಡಿಸಿ ಪಿಯರೆಯನ್ನು ಕಂಡು ಹಿಡಿದಾಗ ಅವನ ಕಣ್ಣುಗಳು ಎಂದಿಗಿಂತ 
ದೊಡ್ಡದಾಗಿ ಕಂಡವು. ಪಿಯರೆಯ ಹತ್ತಿರ ಹೋಗಿ ಕೈ ಹಿಡಿದುಕೊಂಡ ( ಹಿಂದೆಂದೂ 
ಹೀಗೆ ವರ್ತಿಸಿರಲಿಲ್ಲ ಅವನು ); ಅವನ ಹಿಡಿತ ಭದ್ರವಾಗಿದೆಯೋ ಎಂದು ಪರೀಕ್ಷೆ 
ಮಾಡುವವನ ಹಾಗೆ ಪಿಯರೆಯ ಕೈಯನ್ನು ತನ್ನತ್ತ ಜಗ್ಗಿದ. 

'ಧೈರ್ಯವಾಗಿರು, ಫ್ರೆಂಡ್! ಅವನು ನಿನ್ನ ನೋಡಬೇಕು ಅನ್ನುತಿದಾನೆ. 
ಒಳ್ಳೆಯದೇ ಆಯಿತು!' ಅಂದ. 

ಪ್ರಿನ್ಸ್ ವ್ಯಾಸಿಲಿ ಇನ್ನೇನು ಹೊರಡಲಿದ್ದ. ಅವನನ್ನು ಏನೋ ಕೇಳಬೇಕು 
ಅನ್ನಿಸಿತು ಪಿಯರೆಗೆ, 'ಹೇಗಿದ್ದಾರೆ...ನಮ್ಮ ' ಅಂದು ತಡವರಿಸಿದ. ಸಾಯುತ್ತಿರುವ 
ಮನುಷ್ಯನನ್ನು ಕೌಂಟ್ ಅನ್ನುವುದು ಸರಿಯೋ ಅಲ್ಲವೋ ತಿಳಿಯದೆ, 'ತಂದೆ' 
ಅನ್ನುವುದಕ್ಕೆ ನಾಚಿಕೊಂಡು ತೀರ್ಮಾನ ಮಾಡಲಾಗದೆ ತಡಬಡಿಸಿದ. 

ಅರ್ಧಗಂಟೆಯ ಮೊದಲು ಇನ್ನೊಂದು ಸ್ಫೋಕ್ ಆಯಿತು. ಧೈರ್ಯವಾಗಿರು, 
ಫ್ರೆಂಡ್. . 

- ಪಿಯರೆಯ ಮನಸ್ಸಿನಲ್ಲಿ ಎಂಥ ಗೊಂದಲವಿತ್ತೆಂದರೆ 'ಸ್ನೇಕ್' ಅಂದರೆ 
ಹೊಡೆತ, ಭಾರವಾದ ವಸ್ತುವಿನಿಂದ ಬಿದ್ದ ಪೆಟ್ಟು ಅನ್ನುವ ಯೋಚನೆ ಬಂದು, 
ತಬ್ಬಿಬ್ಬಾಗಿ ಪ್ರಿನ್ಸ್‌ವ್ಯಾಸಿಲಿಯನ್ನು ನೋಡಿದ. ಅದು ಹೃದಯಾಘಾತ ಅನ್ನುವುದು 
ಅರ್ಥವಾಗಲು ಸ್ವಲ್ಪ ಸಮಯ ಹಿಡಿಯಿತು. ಪ್ರಿನ್ಸ್ ವ್ಯಾಸಿಲಿ ಹೋಗುತ್ತಾ ಡಾಕ್ಟರ್ 
ಲೊರೈನ್‌ಗೆ ಏನೋ ಹೇಳಿ ತುದಿಗಾಲಲ್ಲಿ ನಡೆಯುತ್ತಾ ಹೋಗಿ ಬಿಟ್ಟ. ತುದಿಗಾಲಲ್ಲಿ 


೧೨೦ 

ಯುದ್ಧ ಮತ್ತು ಶಾಂತಿ 
ನಡೆದು ಅವನಿಗೆ ಅಭ್ಯಾಸವಿರಲಿಲ್ಲ. ಒಂದೊಂದು ಹೆಜ್ಜೆ ಇಟ್ಟಾಗಲೂ ಇಡೀ ಮೈ 
ತಟ್ಟಾಡುತ್ತಿತ್ತು. ಅವನ ಹಿಂದೆಯೇ ದೊಡ್ಡ ಪ್ರಿನ್ಸೆಸ್ ಹೋದಳು , ಅವಳ ಹಿಂದೆ 
ಪಾದ್ರಿಗಳು, ಡೀಕನ್ ಮತ್ತೆ ಕೆಲವು ಸೇವಕರು ಹೋದರು. ಜನ ಸರಿದಾಡುವ 
ಸದ್ದು ಬಾಗಿಲಾಚೆಯಿಂದ ಕೇಳುತ್ತಿತ್ತು. ಅನ್ನಾ ಮಿಖಾಯೌವ್ವಾ ಓಡಿ ಬಂದಳು. 
ಮುಖ ಬಿಳಿಚಿಕೊಂಡಿದ್ದರೂ ಕರ್ತವ್ಯ ಮಾಡಲೇ ಬೇಕು ಅನ್ನುವ ಗಟ್ಟಿಯಾದ 
ಭಾವ ಕಾಣುತ್ತಿತ್ತು. ಪಿಯರೆಯ ಹತ್ತಿರ ಬಂದು, ಅವನ ತೋಳು ಮುಟ್ಟಿ 'ದೇವರು 
ದೊಡ್ಡವನು, ಕೊನೆಗಾಲದ ಕಟ್ಟಳೆ ನಡೆಯುತದೆ ಈಗ, ಬಾ ನನ್ನ ಜೊತೆಗೆ ' 
ಅಂದಳು . 

ಪಿಯರೆ ಒಳಗೆ ಹೋದ. ಮೃದುವಾದ ಜಮಖಾನೆಯಮೇಲೆ ಹೆಜ್ಜೆ 
ಊರುತ್ತಾ ಇರುವಾಗ ಆ ಅಪರಿಚಿತ ಹೆಂಗಸು, ಆ ಏಡ್ ಡಿ ಕ್ಯಾಂಪ್, ಆ 
ಸೇವಕರು ಎಲ್ಲರೂ ಆ ಕೋಣೆಗೆ ಕಾಲಿಡಲು ಇನ್ನು ಯಾರ ಅಪ್ಪಣೆಗೂ 
ಕಾಯಬೇಕಾಗಿಲ್ಲ ಎಂದು ತಿಳಿದವರಂತೆ ತನ್ನ ಹಿಂದೆ ನುಗ್ಗಿ ಬರುತ್ತಿರುವುದನ್ನು 
ಗಮನಿಸಿದ. 

೨೦ 
ಪಿಯರೆಗೆ ಚೆನ್ನಾಗಿ ಗೊತ್ತಿತ್ತು ಈ ಕಂಬಗಳಿರುವ, ಅಲಂಕಾರದ ಕಮಾನು 
ಇರುವ, ನೆಲಕ್ಕೆ ಪರ್ಶಿಯಾದ ಕಾರ್ಪಟ್ಟು ಹಾಕಿರುವ ಈ ದೊಡ್ಡಕೋಣೆ. 
ಕಂಬಗಳ ಆಚೆಗಿದ್ದ ರೂಮಿನ ಭಾಗದ ಒಂದು ಪಕ್ಕದಲ್ಲಿ ರೇಶಿಮೆಯ ಪರದೆಗಳಿದ್ದ 
ಮಹೋಗನಿ ಮರದ ದೊಡ್ಡ ಮಂಚ, ಇನ್ನೊಂದು ಪಕ್ಕದಲ್ಲಿ ದೊಡ್ಡ ವಿಗ್ರಹಗಳಿದ್ದವು. 
ಸಂಜೆಯ ಪ್ರಾರ್ಥನೆಗೆ ಸಜ್ಜಾದ ಚರ್ಚಿನ ಹಾಗೆ ಕೆಂಪು ದೀಪಗಳು ಪ್ರಖರವಾಗಿ 
ಬೆಳಗುತ್ತಿದ್ದವು. ಥಳಥಳಿಸುವ ವಿಗ್ರಹಗಳ ಕೆಳಗೆ ಉದ್ದ ಬೆನ್ನಿನ ವೋಲ್ವೇರ್‌ ಆರಾಮ 
ಕುರ್ಚಿ ಇತ್ತು. ಪಿಯರೆ ನೋಡಿದಾಗ ಆ ಕುರ್ಚಿಯ ಮೇಲೆ ಹಿಮದಷ್ಟು ಬೆಳ್ಳಗಿರುವ, 
ಸುಕ್ಕಿಲ್ಲದ ಹೊಸ ಮೆತ್ತನೆಯ ದಿಂಬುಗಳಿಗೆ ಒರಗಿ ಕೂತಿದ್ದ , ಸೊಂಟದವರೆಗೆ 
ಹೊಳೆವ ಹಸಿರು ಕೌದಿಯನ್ನು ಹೊದಿಸಿಕೊಂಡಿದ್ದ ತನ್ನ ತಂದೆಯ , ಕೌಂಟ್ 
ಬೆಝುಕೋವ್‌ನ, ಚಿರಪರಿಚಿತ ಗಂಭೀರ ಆಕಾರ ಕಾಣಿಸಿತು. ಕುಸಿದು ಕೂತಿದ್ದ 
ಬೆಝುಕೋವ್‌ನ ವಿಶಾಲವಾದ ಹಣೆಯಮೇಲೆ ಸಿಂಹದ ಕೇಸರಗಳ ಹಾಗಿದ್ದ 
ನೆರೆತ ಕೂದಲ ಸುಪರಿಚಿತ ರಾಶಿ ಚೆದುರಿ ಬಿದ್ದಿತ್ತು. ಸುಂದರವಾದ ಇಟ್ಟಿಗೆಗೆಂಪು 
ಮುಖದ ಮೇಲೆ ಪಕ್ಕಾ ಶ್ರೀಮಂತರ ಮುಖದಲ್ಲಿರುವಂಥ ಆಳವಾದ ನಿರಿಗೆಗಳು 
ಮೂಡಿದ್ದವು. ನೇರವಾಗಿ ವಿಗ್ರಹಗಳ ಕೆಳಗೇ ಒರಗಿ ಕೂತಿದ್ದ ಅವನು, ತೋರವಾದ 
ದೊಡ್ಡಕೈಗಳು ಮಾತ್ರ ಕೌದಿಯ ಮೇಲೆ ಪವಡಿಸಿದ್ದವು. ನೆಲಕ್ಕೆ ಮುಖಮಾಡಿಕೊಂಡಿದ್ದ 
ಅವನ ಬಲಗೈಯ ತೋರುಬೆರಳು ಹೆಬ್ಬೆರಳ ನಡುವೆ ಮೇಣದ ಬತ್ತಿಯೊಂದನ್ನು 
ಇರಿಸಿದ್ದರು. ಕುರ್ಚಿಯ ಹಿಂದೆ ನಿಂತಿದ್ದ ಮುದುಕ ಸೇವಕ ಮುಂದಕ್ಕೆ ಬಗ್ಗಿ 


೧೨೧ 
ಸಂಪುಟ ೧ - ಸಂಚಿಕೆ ಒಂದು 
ಮೇಣದ ಬತ್ತಿ ಬೀಳದ ಹಾಗೆ ನೆಟ್ಟಗೆ ಹಿಡಿದುಕೊಂಡಿದ್ದ . ಉದ್ದವಾದ ತಲೆಗೂದಲು 
- ಭುಜವನ್ನು ದಾಟಿ ಜಗಮಗಿಸುವ ಪೋಷಾಕಿನ ಮೇಲೆ ಬಿದ್ದಿದ್ದವು. ಚರ್ಚಿನ ಜನ 
ಕುರ್ಚಿಯ ಸುತ್ತಲೂ ನೆರೆದಿದ್ದರು. ಕೈಯಲ್ಲಿ ಉರಿಯುವ ಮೇಣದ ಬತ್ತಿ ಹಿಡಿದು 
ಆತುರವಿಲ್ಲದ ಗಂಭೀರವಾದ ಧ್ವನಿಯಲ್ಲಿ ಮಂತ್ರಗಳನ್ನು ಹೇಳುತ್ತಾ ತಮ್ಮ ಕರ್ಮಗಳನ್ನು 
ಮಾಡುತ್ತಿದ್ದರು. ಆ ಪಾದ್ರಿಗಳ ಹಿಂದೆ ಇಬ್ಬರು ಕಿರಿಯ ಪ್ರಿನ್ಸೆಸ್‌ಗಳು ಆಗಾಗ 
ಕಣ್ಣಿಗೆ ಕರ್ಚಿಫು ಒತ್ತಿಕೊಳ್ಳುತ್ತಾ ನಿಂತಿದ್ದರು. ಮುಂದೆ ಹಿರಿಯ ಪ್ರಿನ್ಸೆಸ್ ಕ್ಯಾಥೀ 
ಇದ್ದಳು. ಅವಳ ಮುಖದ ಮೇಲೆ ಕೆಟ್ಟ ನಿರ್ಧಾರ ಮನೆಮಾಡಿತ್ತು. ವಿಗ್ರಹವನ್ನೇ 
ದಿಟ್ಟಿಸುತ್ತಾ ಇದ್ದಳು. ದೃಷ್ಟಿ ಬೇರೆಯ ಕಡೆಗೆ ಹರಿದರೆ ತಾನೇನು ಮಾಡುತ್ತೇನೋ 
ತನಗೇ ಗೊತ್ತಿಲ್ಲ ಎಂದು ಜಗತ್ತಿಗೆ ಸಾರಿ ಹೇಳುವ ಹಾಗೆ ಶಿಲುಬೆಯ ವಿಗ್ರಹವನ್ನು 
ದಿಟ್ಟಿಸುತ್ತಿದ್ದಳು. ಅನ್ನಾ ಮಿಖಾಯೌವ್ವಾ ವಿನಯ , ದುಃಖ , ಕ್ಷಮೆಯ ಭಾವವವನ್ನು 
ಹೊತ್ತುಕೊಂಡು, ಗುರುತಿಲ್ಲದ ಮುದುಕಿಯ ಜೊತೆಗೆ ಬಾಗಿಲ ಹತ್ತಿರ ನಿಂತಿದ್ದಳು. 
ರೋಗಿಯ ಕುರ್ಚಿಯ ಹಿಂದೆ, ಬಾಗಿಲಿಗೆ ಹತ್ತಿರವಾಗಿ, ಪ್ರಿನ್ಸ್ ವ್ಯಾಸಿಲಿ ಇದ್ದ . 
ಕೆತ್ತನೆಯ ಕೆಲಸವಿರುವ ವೆಲ್ವೆಟ್ ಕುರ್ಚಿಯನ್ನು ಹತ್ತಿರಕ್ಕೆಳೆದುಕೊಂಡು, ಅದರ 
ಮೇಲೆ ಎಡಗೈಯನ್ನು ಇಟ್ಟುಕೊಂಡು, ಕೈಯಲ್ಲಿ ಮೇಣದ ಬತ್ತಿ ಹಿಡಿದುಕೊಂಡಿದ್ದ . 
ಬಲಗೈಯಲ್ಲಿ ತನ್ನೆದೆಯ ಮೇಲೆ ಶಿಲುಬೆಯಾಕಾರದಲ್ಲಿ ಕ್ರಾಸ್ ಮಾಡಿಕೊಳ್ಳುತ್ತಾ, 
ಕೈ ಹಣೆಯ ಸಮೀಪ ಬಂದಾಗಲೆಲ್ಲ ಮುಖ ಎತ್ತಿ ಆಕಾಶ ನೋಡುತ್ತಾ, 'ಎಲ್ಲಾ 
ದೇವರ ಇಚ್ಛೆ ' ಅನ್ನುವಂಥ ಶಾಂತ, ವಿನೀತ ಭಾವವನ್ನು ಮುಖದಲ್ಲಿ ತೋರುತ್ತಾ , 
'ಇಂಥ ಉದಾತ್ತ ಭಾವನೆ ನಿಮಗೆ ಅರ್ಥವಾಗದಿದ್ದರೆ ನಿಮ್ಮ ಹಣೆಯ ಬರಹ!' 
ಅನ್ನುವ ಹಾಗೆ ನಿಂತಿದ್ದ. 
- ಅವನ ಹಿಂದೆ ಏಡ್ - ಡಿ - ಕ್ಯಾಂಪು, ಡಾಕ್ಟರುಗಳು , ಗಂಡಾಳುಗಳು , 
ಹೆಣ್ಣಾಳುಗಳು ಇದ್ದರು. ಚರ್ಚಿನಲ್ಲಿರುವ ಹಾಗೆಯೇ ಗಂಡಸರು ಹೆಂಗಸರು 
ಬೇರೆ ಬೇರೆ ಗುಂಪಾಗಿ ನಿಂತಿದ್ದರು. ಎಲ್ಲರೂ ಮೌನವಾಗಿ ಶಿಲುಬೆಯಾಕಾರದಲ್ಲಿ 
ಕ್ರಾಸ್‌ಮಾಡಿಕೊಳ್ಳುತ್ತಿದ್ದರು. ಆಳವಾದ ಮಂದ್ರ ಧ್ವನಿಯಲ್ಲಿ ಪೂಜಾ ಮಂತ್ರಗಳ 
ಪಠಣ ಮಾತ್ರ ಕೇಳಿಸುತ್ತಿತ್ತು. ನಡು ನಡುವೆ ಮೌನದಲ್ಲಿ ಯಾರದೋ ನಿಟ್ಟುಸಿರು , 
ಆಗಾಗ ಯಾರೋ ಸರಿದಾಡಿದಾಗ ಆಗುತ್ತಿದ್ದ ಪಾದ ಚಲನೆಯ ಸದ್ದು ಮಾತ್ರ 
ಕೇಳುತ್ತಿದ್ದವು. ಅನ್ನಾ ಮಿಖಾಯೌವ್ವಾ ತಾನೇನು ಮಾಡುತ್ತಿದ್ದೇನೆ ಎಂದು ಬಲ್ಲವಳ 
ಹಾಗೆ ರೂಮಿನಲ್ಲಿದ್ದ ಎಲ್ಲರನ್ನೂ ದಾಟಿಕೊಂಡು ಪಿಯರೆ ನಿಂತಿದ್ದಲ್ಲಿಗೆ ಬಂದು 
ಅವನ ಕೈಗೆ ಮೇಣದ ಬತ್ತಿ ಕೊಟ್ಟಳು. ಪಿಯರೆ ಅದನ್ನು ಹತ್ತಿಸಿಕೊಂಡು ಸುತ್ತಲೂ 
ಇದ್ದವರನ್ನೇ ನೋಡುವುದರಲ್ಲಿ ಗೊಂದಲಗೊಂಡು ದೀಪ ಹಿಡಿದ ಕೈಯಲ್ಲೇ 
ಕ್ರಾಸ್‌ಮಾಡಿಕೊಳ್ಳಲು ಶುರುಮಾಡಿದ . . 

ಕಿರಿಯ ಪ್ರಿನ್ಸೆಸ್ ಸೋಫಿ, ಗುಲಾಬಿ ಬಣ್ಣದ, ತಮಾಷೆಯ ಸ್ವಭಾವದ, 


ದ ಬತ್ತಿಕೊಟ್ಟಳು. ತಕೊಂಡು ಪಿಯರೆ 


ಇದ್ದವರನ್ನೇ 


೧೨೨ 

ಯುದ್ಧ ಮತ್ತು ಶಾಂತಿ 
ತುಟಿಯ ಮೇಲೆ ಪುಟ್ಟ ಮಚ್ಚೆ ಇದ್ದ ಹುಡುಗಿ, ಪಿಯರೆಯನ್ನೇ ನೋಡುತ್ತಿದ್ದಳು. 
ಕರ್ಚಿಫಿನಲ್ಲಿ ಮುಖ ಮುಚ್ಚಿಕೊಂಡು ಸ್ವಲ್ಪ ಹೊತ್ತು ಹಾಗೇ ಇದ್ದಳು. ಮತ್ತೆ 
ಪಿಯರೆಯ ಕಡೆ ನೋಡಿ, ಮತ್ತೆ ಕುಲುಕಿದಳು. ಅವನ ಮುಖ ನೋಡಿದರೆ 
ಅವಳಿಗೆ ನಗದೆ ಸುಮ್ಮನೆ ಇರುವುದಕ್ಕೆ ಆಗುತ್ತಿರಲಿಲ್ಲ, ಹಾಗೆಂದು ಅವನ ಮುಖ 
ನೋಡುವ ಆಸೆ ತಪ್ಪಿಸಿಕೊಳ್ಳಲೂ ಆಗುತ್ತಿರಲಿಲ್ಲ. ಅದಕ್ಕೇ ಕಂಬದ ಮರೆಗೆ 
ಸದ್ದಿಲ್ಲದೆ ಜಾರಿಕೊಂಡು ಆ ಪ್ರಲೋಭನೆಯನ್ನು ನಿವಾರಿಸಿಕೊಂಡಳು. ಮಂತ್ರಗಳನ್ನು 
ಹೇಳುತ್ತಿದ್ದ ಪಾದ್ರಿಗಳ ಧ್ವನಿ ತಟ್ಟನೆ ನಿಂತುಬಿಟ್ಟಿತು. ತಮ್ಮ ತಮ್ಮಲ್ಲಿ 
ಪಿಸುಮಾತಾಡಿಕೊಂಡರು . ಕುರ್ಚಿಯ ಹಿಂದಿನಿಂದ ಮುಂದಕ್ಕೆ ಬಾಗಿ ಕೌಂಟ್‌ನ 
ಕೈಯಲ್ಲಿದ್ದ ಮೇಣದ ಬತ್ತಿಯನ್ನು ಎತ್ತಿ ಹಿಡಿದಿದ್ದ ಮುದುಕ ಸೇವಕ ನೆಟ್ಟಗೆ ಎದ್ದು 
ನಿಂತು ಹೆಂಗಸರು ಇದ್ದಲ್ಲಿಗೆ ಹೋಗಿ ಏನೋ ಹೇಳಿದ. ಅನ್ನಾ ಮಿಖಾಯೌವ್ವಾ 
ಮುಂದಕ್ಕೆ ಬಂದು ಸಾಯುತ್ತಿರುವ ರೋಗಿಯ ಹತ್ತಿರ ಹೋಗಿ, ಬಗ್ಗಿ ನೋಡಿ, 
ಡಾಕ್ಟರ್ ಲೋರೈನ್‌ನನ್ನು ಬೆನ್ನ ಹಿಂದಿನಿಂದಲೇ ಸನ್ನೆ ಮಾಡಿ ಕರೆದಳು. ಫ್ರೆಂಚ್ 
ಡಾಕ್ಟರನ ಕೈಯಲ್ಲಿ ದೀಪವಿರಲಿಲ್ಲ. ಕಂಬಕ್ಕೆ ಒರಗಿಕೊಂಡು ಅಲ್ಲಿ ನಡೆಯುತ್ತಿದ್ದ 
ಕರ್ಮಗಳು ಅರ್ಥವಾಗುತ್ತಿವೆ, ಬೇರೆ ಧರ್ಮಕ್ಕೆ ಸೇರಿದ ನಾನು ಕೂಡ ಇದನ್ನೆಲ್ಲ 
ಗೌರವಿಸುತ್ತೇನೆ ಅನ್ನುವಂಥ ವಿದೇಶೀಯನ ಭಾವ ಹೊತ್ತು ನಿಂತಿದ್ದ. ಈಗ 
ಆರೋಗ್ಯಪೂರ್ಣ ಲವಲವಿಕೆಯ ಹೆಜ್ಜೆಗಳನ್ನು ಸದ್ದಿಲ್ಲದ ಹಾಗೆ ಇಡುತ್ತಾ ರೋಗಿಯ 
ಹತ್ತಿರಕ್ಕೆ ಬಂದ. ಹಸಿರು ಬೆಡ್ಶೀಟಿನ ಮೇಲಿದ್ದ ರೋಗಿಯ ಎಡಗೈಯನ್ನು 
ಸೂಕ್ಷ ಬೆರಳುಗಳಲ್ಲಿ ಹಿಡಿದೆತ್ತಿ ಪಕ್ಕಕ್ಕೆ ತಿರುಗಿಕೊಂಡು ಯೋಚನಾ ಮಗ್ನನಾಗಿ 
ನಾಡಿ ಬಡಿತ ಪರಿಶೀಲಿಸಿದ. ರೋಗಿಗೆ ಏನೋ ಕುಡಿಸಿದರು. ಸ್ವಲ್ಪ ಹೊತ್ತು 
ರೋಗಿಯ ಮಂಚದ ಸುತ್ತ ಸಣ್ಣದೊಂದು ಸಂಚಲನೆ ಉಂಟಾಗಿ ಮತ್ತೆ ಎಲ್ಲರೂ 
ತಮ್ಮ ತಮ್ಮ ಜಾಗಕ್ಕೆ ಮರಳಿ ಪ್ರಾರ್ಥನೆ ಮುಂದುವರೆಯಿತು. ಈ ನಡುವೆ ಪಿಯರೆ 
ಪ್ರಿನ್ಸ್ ವ್ಯಾಸಿಲಿಯನ್ನು ಗಮನಿಸಿದ. ಪ್ರಿನ್ಸ್ ವ್ಯಾಸಿಲಿ ತನ್ನ ಎಡಗೈಯನ್ನೂರಿಕೊಂಡಿದ್ದ 
ಕುರ್ಚಿಯನ್ನು ದೂರ ಸರಿಸಿ, ತಾನೇನು ಮಾಡುತ್ತಿದ್ದೇನೆ ಅದು ತನಗೆ ಚೆನ್ನಾಗಿ 
ಗೊತ್ತಿದೆ, ಬೇರೆಯವರಿಗೆ ಅರ್ಥವಾಗದಿದ್ದರೆ ಅದು ಅವರ ಹಣೆಯ ಬರಹ 
ಅನ್ನುವ ಹಾಗೆ ರೋಗಿಯ ಹತ್ತಿರ ಹೋಗಿಅಲ್ಲಿ ನಿಲ್ಲದೆ ಮುಂದೆ ಸಾಗಿ , ಹಿರಿಯ 
ಪ್ರಿನ್ಸೆಸ್‌ಳ ಹತ್ತಿರ ಹೋಗಿ, ಅವಳ ಜೊತೆಯಲ್ಲಿ ರೇಶಿಮೆಯ ಪರದೆಗಳಿದ್ದ ದೊಡ್ಡ 
ಮಂಚದ ಹತ್ತಿರಕ್ಕೆ ಹೋದ. ಕೋಣೆಯ ಹಿಂದಿನ ಬಾಗಿಲಿನಿಂದ ಇಬ್ಬರೂ 
ಹೊರಗೆ ಹೋದರು. ಪ್ರಾರ್ಥನೆ ಮುಗಿಯುವ ಮೊದಲೇ ವಾಪಸ್ಸು ಬಂದು 
ತಮ್ಮ ತಮ್ಮ ಜಾಗದಲ್ಲಿ ನಿಂತುಕೊಂಡರು. ಅಂದು ಸಂಜೆಯಿಂದ ತನ್ನ ಸುತ್ತ 
ಏನೇನು ನಡೆಯುತ್ತಿವೆಯೋ ಅವೆಲ್ಲ ಅವಶ್ಯವಾಗಿ ಅನಿವಾರ್ಯವಾಗಿ ನಡೆಯಲೇ 
ಬೇಕಾದ ಸಂಗತಿಗಳು ಎಂದು ಮನಸ್ಸಿನಲ್ಲೇ ನಿರ್ಧಾರ ಮಾಡಿಬಿಟ್ಟಿದ್ದರಿಂದ ಪಿಯರೆ 


೧೨೩ 
ಸಂಪುಟ ೧ - ಸಂಚಿಕೆ ಒಂದು 
ಈ ಸಂಗತಿಗೆ ಮಿಕ್ಕ ವಿಷಯಗಳಿಗಿಂತ ಹೆಚ್ಚಿನ ಗಮನವನ್ನೇನೂ ಕೊಡಲಿಲ್ಲ. 

ಮಂತ್ರ ಪಠಣದ ಸದ್ದು ನಿಂತಿತು. ಪಾದ್ರಿಯು ಪವಿತ್ರ ತೀರ್ಥವನ್ನು ಸ್ವೀಕರಿಸಿದ 
ಸಾಯುತ್ತಿರುವ ಮನುಷ್ಯನನ್ನು ಗಂಭೀರವಾದ ಧ್ವನಿಯಲ್ಲಿ ಮರ್ಯಾದೆ ಪೂರ್ವಕವಾಗಿ 
ಹರಸಿದ. ರೋಗಿ ಜೀವದ ಲಕ್ಷಣವಿಲ್ಲದೆ, ಚಲನೆ ಇಲ್ಲದೆ ಸುಮ್ಮನೆ ಮಲಗಿದ್ದ. 
ಅವನ ಸುತ್ತಲೂ ಚಲನೆ , ಹೆಜ್ಜೆ ಶಬ್ದ , ಉಡುಪಿನ ಸರಬರ, ಪಿಸುಮಾತು , ಅವುಗಳ 
ನಡುವೆ ಅನ್ನಾ ಮಿಖಾಯೌವ್ವಾಳ ಧ್ವನಿ ಜೋರಾಗಿ ಕೇಳಿಸುತ್ತಿತ್ತು. 'ಈಗ ಮಂಚದ 
ಮೇಲೆ ಮಲಗಿಸಬೇಕು. ಇಲ್ಲೇ ಇದ್ದರೆ ಆಗುವುದಿಲ್ಲ...' ಅವಳು ಅಂದದ್ದನ್ನು 
ಪಿಯರೆ ಕೇಳಿಸಿಕೊಂಡ. 

ರೋಗಿಯ ಸುತ್ತಲೂ ಡಾಕ್ಟರುಗಳು, ಪಿನ್ನೆಸ್‌ಗಳು , ಸೇವಕರು ಗುಂಪು 
ಕೂಡಿದ್ದರು. ಪಿಯರೆಗೆ ಆ ಇಟ್ಟಿಗೆಗೆಂಪು ಬಣ್ಣದ ಮುಖ , ನೆರೆಗೂದಲ ರಾಶಿ 
ಕಾಣಿಸುತ್ತಲೇ ಇರಲಿಲ್ಲ. ಅಂದು ಇಡೀ ಸಂಜೆ, ಪ್ರಾರ್ಥನೆ ನಡೆಯುತ್ತಿದ್ದ 
ಹೊತ್ತು, ನೋಡುವುದಕ್ಕೆ ಬೇರೆ ಎಷ್ಟೋ ಮುಖಗಳಿದ್ದರೂ ಆ ಮುಖ ಒಂದು 
ಕ್ಷಣವೂ ತನ್ನ ನೋಟದಿಂದ ಮರೆಯಾಗುವುದಕ್ಕೆ ಬಿಟ್ಟಿರಲಿಲ್ಲ ಪಿಯರೆ. ರೋಗಿಯ 
ಕುರ್ಚಿಯ ಹತ್ತಿರ ಇದ್ದವರು ತೀರ ಹುಷಾರಾಗಿ ಓಡಾಡುತ್ತಿದ್ದುದರಿಂದ ಅವರೆಲ್ಲ 
ಸೇರಿ ಸಾಯುತ್ತಿರುವವನನ್ನು ಎತ್ತಿ ಹಾಸುಗೆಗೆ ಸಾಗಿಸುತ್ತಿರಬೇಕು ಅಂದುಕೊಂಡ. 

ತೋಳು ಹಿಡಿದುಕೋ , ಬೀಳಿಸಿಬಿಡುತೀಯ!' ಸೇವಕನ ಭಯದ ಪಿಸುಮಾತು 
ಕೇಳಿಸಿತು. ' ಹಾಗೇ , ಕೆಳಗಿನಿಂದ ಕೈ ಹಾಕು, “ ಅಲ್ಲಿ... ಸ್ವಲ್ಪ ಸರಿಯಾಗಿ ಬೇರೆ 
ಬೇರೆ ಉದ್ಧಾರಗಳು ಕೇಳುತ್ತಿದ್ದವು. ಸೇವಕರ ಏದುಸಿರು, ಆತುರದ ಹೆಜ್ಜೆ ಸದ್ದುಗಳಿಂದ 
ರೋಗಿಯ ದೇಹದ ಭಾರ ಹೊರುವುದು ಅವರಿಗೆ ಕಷ್ಟವಾಗುತ್ತಿದೆ ಅನ್ನಿಸುತ್ತಿತ್ತು. 

ಅವನನ್ನು ಹೊತ್ತವರಲ್ಲಿ ಅನ್ನಾ ಮಿಖಾಯೌವ್ವಾಕೂಡ ಇದ್ದಳು. ಅನೇಕ 
ಜನರ ತಲೆ ಬೆನ್ನುಗಳ ನಡುವೆ ಸಾಯುತ್ತಿರುವ ಮನುಷ್ಯನ ಉನ್ನತವಾದ, ವಿಶಾಲವಾದ 
ಬರಿಯೆದೆ, ಕಂಕುಳ ಕೆಳಗೆ ಕೈ ಹಾಕಿ ಎತ್ತಿ ಹಿಡಿದಿದ್ದರಿಂದ ಎದ್ದು ಕಾಣುತ್ತಿದ್ದ 
ಬಲವಾದತೋಳು, ಕುಸಿದ ಗೋಣು, ನೆರೆತ ಗುಂಗುರು ಕೂದಲರಾಶಿ , ಸಿಂಹವನ್ನು 
ನೆನಪಿಸುವಂಥ ಮುಖ ಇವು ಕ್ಷಣ ಹೊತ್ತು ಯುವಕ ಪಿಯರೆಗೆ ಕಂಡಿದ್ದವು. ಆ 
ತಲೆ, ವಿಶಾಲವಾದ ಹಣೆ, ಎದ್ದು ಕಾಣುವ ಗಲ್ಲ, ಕಾಮನೆ ತುಂಬಿದ ಸುಂದರವಾದ 
ಬಾಯಿ , ತಣ್ಣನೆಯ ಗಾಂಭೀರ್ಯ, ಇವು ಯಾವುವೂ ಸಮೀಪಿಸುತ್ತಿರುವ ಸಾವಿನ 
ಕಾರಣದಿಂದ ಅಂದಗೆಟ್ಟಿರಲಿಲ್ಲ. ಮೂರು ತಿಂಗಳ ಹಿಂದೆ ತನ್ನನ್ನು ಪೀಟರ್ಸ್‌ಬರ್ಗಿಗೆ 
ಕಳಿಸಿದಾಗ ಆ ತಲೆ ಹೇಗೆಕಾಣುತ್ತಿತ್ತು ಅನ್ನುವ ನೆನಪಿತ್ತು ಪಿಯರೆಗೆ, ಈಗ ಅವನ 
ದೇಹವನ್ನು ಹೊತ್ತವರು ಮೇಳವಿಲ್ಲದೆ ಹೆಜ್ಜೆ ಹಾಕುತ್ತಿರುವಾಗ ಆ ತಲೆ 
ಅಸಹಾಯಕವಾಗಿ ತೂಗಾಡುತ್ತಿತ್ತು. ತಣ್ಣನೆಯ ನಿರ್ಜಿವ ದೃಷ್ಟಿ ಯಾವುದೇ 
ಗುರಿಯಿಲ್ಲದೆ ಸುಮ್ಮನೆ ದಿಟ್ಟಿಸುತ್ತಿತ್ತು . 


೧೨೪ 

ಯುದ್ಧ ಮತ್ತು ಶಾಂತಿ 
ಕೆಲವು ನಿಮಿಷಗಳ ಗೊಂದಲ ಗದ್ದಲದ ನಂತರ ರೋಗಿಯನ್ನು ಮಂಚದ 
ಮೇಲೆ ಮಲಗಿಸಿ ಎಲ್ಲರೂ ದೂರ ಸರಿದರು. ಅನ್ನಾ ಮಿಖಾಯೌವ್ವಾ ಪಿಯರೆಯ 
ಕೈಯನ್ನು ಮೆಲುವಾಗಿ ತಟ್ಟಿ ನನ್ನ ಜೊತೆ ಬಾ ' ಅಂದಳು. ಆಗ ತಾನೇ ಮುಗಿದ 
ಕರ್ಮಗಳಿಗೆ ಹೊಂದಿಕೆಯಾಗುವಂತೆ ರಾಜನ ಹಾಗೆ ಹಾಸಿಗೆಯ ಮೇಲೆ ಒರಗಿದ್ದ 
ರೋಗಿಯ ಮಂಚದ ಹತ್ತಿರಕ್ಕೆ ಇಬ್ಬರೂ ಹೋದರು. ಎತ್ತರಿಸಿದ ಮೆತ್ತನೆಯ 
ದಿಂಬುಗಳ ಮೇಲೆ ತಲೆ ಇಟ್ಟುಕೊಂಡು ಮಲಗಿದ್ದ ಅವನು. ಹಸಿರು ಹೊದಿಕೆಯ 
ಮೇಲೆ ಎರಡೂ ಕೈಗಳು ಪ್ರಮಾಣಬದ್ಧವಾಗಿ ನಿಶ್ಚಲವಾಗಿ, ಅಂಗೈಗಳು ಹಾಸಿಗೆಗೆ 
ಒತ್ತಿಕೊಂಡಂತೆ ಇದ್ದವು. ಪಿಯರೆ ಬಂದಾಗ ಕೌಂಟ್ ಸುಮ್ಮನೆ ದಿಟ್ಟಿಸಿದ. ಆ 
ನೋಟದ ಅರ್ಥವೇನು, ಮಹತ್ವವೇನು ಅನ್ನುವುದು ಬದುಕಿರುವ ಯಾರಿಗೂ 
ಅರ್ಥವಾಗುವ ಹಾಗಿರಲಿಲ್ಲ. ಆನೋಟದಲ್ಲಿ ಯಾವ ಅರ್ಥವೂ ಇರಲಿಲ್ಲವೇನೋ , 
ಕಣ್ಣು ತೆರೆದಿರುವಷ್ಟೂ ಹೊತ್ತು ಏನಾದರೂ ನೋಡುತ್ತಲೇ ಇರಬೇಕೆಂಬ ಕಾರಣಕ್ಕೆ 
ಕಣ್ಣು ಸುಮ್ಮನೆ ದಿಟ್ಟಿಸುತ್ತಿತ್ತೇನೋ , ಅಥವಾ ನೋಟದಲ್ಲಿ ಅಗಾಧವಾದ ಅರ್ಥ 
ಅಡಗಿತ್ತೋ ಏನೋ . ಏನು ಮಾಡಬೇಕೆಂದು ತಿಳಿಯದೆ ಪಿಯರೆ ತನ್ನ 
ಮಾರ್ಗದರ್ಶಿಯ ಕಡೆಗೆ ನೋಡಿದ. ಅನ್ನಾ ಮಿಖಾಯೌವ್ವಾ ಕಣ್ಣಿನಲ್ಲೇ ರೋಗಿಯ 
ಕೈಯನ್ನು ತೋರಿಸುತ್ತಾ ಮುತ್ತಿಡು ಅನ್ನುವ ಹಾಗೆ ತುಟಿ ಆಡಿಸಿದಳು. ಪಿಯರೆ 
ಹುಷಾರಾಗಿ ಕತ್ತು ಮುಂದೆ ಚಾಚಿ, ರೋಗಿಗೆ ತೊಂದರೆಯಾಗದ ಹಾಗೆ ಅವನ 
ದೊಡ್ಡ ಕೈಗಳ ದಪ್ಪ ಬೆರಳುಗಳಿಗೆ ನಿಧಾನವಾಗಿ ಮುತ್ತಿಟ್ಟ , ರೋಗಿಯ ಕೈ 
ಬೆರಳಲ್ಲಾಗಲೀ , ಮುಖದಲ್ಲಾಗಲೀ ಯಾವ ಚಲನೆಯೂ ಕಾಣಲಿಲ್ಲ . ಇನ್ನೇನು 
ಮಾಡಬೇಕು ಅನ್ನುವ ಹಾಗೆ ಅನ್ನಾ ಮಿಖಾಯೌವ್ವಾಳ ಕಡೆಗೆ ನೋಡಿದ ಪಿಯರೆ. 
ಅವಳು ಮಂಚದ ಪಕ್ಕದಲ್ಲೇ ಇದ್ದ ಕುರ್ಚಿಯನ್ನು ಕಣ್ಣಿನ ನೋಟದಲ್ಲೇ ತೋರಿದಳು. 
ವಿಧೇಯನಾಗಿ ಕುರ್ಚಿಯ ಮೇಲೆ ಕೂತ ಪಿಯರೆ. ನಾನು ಮಾಡುತ್ತಿರುವುದು 
ಸರಿಯೇ ಅನ್ನುವ ಆಶ್ಚರ್ಯ ಕಣ್ಣುಗಳಲ್ಲಿತ್ತು. ಅನ್ನಾ ಮಿಖಾಯೌವ್ವಾ ಒಪ್ಪಿಗೆ 
ಸೂಚಿಸುವ ಹಾಗೆ ತಲೆದೂಗಿದಳು. ಪಿಯರೆ ಮತ್ತೊಮ್ಮೆ ಈಜಿಪ್ಪಿನ ವಿಗ್ರಹದ 
ಭಂಗಿಯಲ್ಲಿ ಕುಳಿತುಕೊಂಡ. ತನ್ನ ದೊಡ್ಡ ಗಾತ್ರದ ದೇಹ ಇಷ್ಟೊಂದು ಜಾಗವನ್ನು 
ಆಕ್ರಮಿಸಿಕೊಳ್ಳುತ್ತಿದೆಯಲ್ಲಾ ಎಂದು ಕಸಿವಿಸಿಪಡುತ್ತಾ ಚಿಕ್ಕವನಾಗಿ ಕಾಣುವ ಹಾಗೆ 
ಸಾಧ್ಯವಾದಷ್ಟೂ ಮೈ ಮುದುರಿ ಕೂತುಕೊಂಡ. ಕೌಂಟ್‌ನನ್ನು ನೋಡಿದ. 
ಕೂತುಕೊಳ್ಳುವ ಮೊದಲು ಪಿಯರೆಯ ನಿಂತಿದ್ದಾಗ ಅವನ ಮುಖ ಎಲ್ಲಿತ್ತೋ ಆ 
ಸ್ಥಳದಲ್ಲೇ ಕೌಂಟ್‌ನ ದೃಷ್ಟಿ ಇನ್ನೂ ನೆಟ್ಟಿತ್ತು. ತಂದೆ ಮಗನ ಈ ಅಂತಿಮ ಭೇಟಿ 
ಎಷ್ಟು ಕರುಣಾಜನಕ, ಎಷ್ಟು ಮಹತ್ವಪೂರ್ಣ ಅನ್ನುವುದನ್ನು ತಾನು ಮಾತ್ರ ಬಲ್ಲವಳ 
ಹಾಗೆ ಮುಖ ಮಾಡಿಕೊಂಡು ನಿಂತಿದ್ದಳು ಅನ್ನಾ ಮಿಖಾಯೌವ್ವಾ. ಅದು 
ಸುಮಾರು ಎರಡು ನಿಮಿಷಗಳ ಅವಧಿಯ ಭೇಟಿ, ಪಿಯರೆಗೆ ಅದು ಒಂದು 


೧೨೫ 
ಸಂಪುಟ ೧ - ಸಂಚಿಕೆ ಒಂದು 
ಗಂಟೆಯಷ್ಟು ದೀರ್ಘವಾದ ಕಾಲವಾಗಿ ಕಂಡಿತು. 

ಇದ್ದಕ್ಕಿದ್ದ ಹಾಗೆ ಕೌಂಟ್ ಮುಖ ಕಿವಿಚಿಕೊಂಡ, ಸುಂದರವಾದ ಬಾಯಿ 
ಸೊಟ್ಟಗಾಯಿತು. ಆಗ ಅಪ್ಪ ಸಾವಿಗೆ ಎಷ್ಟು ಹತ್ತಿರದಲ್ಲಿದ್ದಾನೆ ಅನ್ನಿಸಿತು ಪಿಯರೆಗೆ. 
ವಿಕಾರವಾದ ಬಾಯಿಯಿಂದ ಅಸ್ಪಷ್ಟವಾದ ಗೊಗ್ಗರು ದನಿ ಹೊರಟಿತು. ಅವನಿಗೇನು 
ಬೇಕು ಎಂದು ತಿಳಿಯುವುದಕ್ಕೆ ಅನ್ನಾ ಮಿಖಾಯೌವ್ವಾರೋಗಿಯ ಕಣ್ಣುಗಳಲ್ಲಿ 
ಕಣ್ಣಿಟ್ಟು ನೋಡಿದಳು. ಪಿಯರೆಯ ಕಡೆಗೆ ಬೆರಳುಮಾಡಿ ತೋರಿಸಿದಳು , ನೀರಿನ 
ಗ್ಲಾಸು ತೋರಿಸಿದಳು, ಪ್ರಿನ್ಸ್ ವ್ಯಾಸಿಲಿಯ ಹೆಸರನ್ನು ಪಿಸುಗುಟ್ಟಿದಳು, ಹಾಸುಗೆಯನ್ನು 
ತೋರಿಸಿದಳು . ರೋಗಿಯ ಕಣ್ಣಲ್ಲಿ ಮುಖದಲ್ಲಿ ಅಸಹನೆ ಕಂಡಿತು. ಮಂಚದ 
ಪಕ್ಕದಲ್ಲೇ ಯಾವಾಗಲೂ ಇರುತ್ತಿದ್ದ ಸೇವಕನ ಕಡೆ ಕಷ್ಟಪಟ್ಟುಕೊಂಡು ನೋಡಿದ . 

- 'ಪಕ್ಕಕ್ಕೆ ಹೊರಳಿಸಿ ಮಲಗಿಸಬೇಕು ಅನ್ನುತ್ತಿದ್ದಾರೆ' ಸೇವಕ ಪಿಸುಗುಟ್ಟಿದ. 
ಕೌಂಟ್‌ನ ಸ್ಕೂಲವಾದ ಶರೀರವನ್ನು ಗೋಡೆಯ ಕಡೆಗೆ ತಿರುಗಿಸುವುದಕ್ಕೆ ಪ್ರಯತ್ನಿಸಿದ. 
ಅವನಿಗೆ ಅಡ್ಡವಾಗಬಾರದೆಂದು ಪಿಯರೆ ಎದ್ದು ನಿಂತ. 
- ಕೌಂಟ್‌ನನ್ನು ಹಾಗೆ ಪಕ್ಕಕ್ಕೆ ಹೊರಳಿಸುತ್ತಿದ್ದಾಗ ಅವನ ಒಂದು ಕೈ 
ಅಸಹಾಯಕವಾಗಿ ಕೆಳಗೆ ಜೋತಾಡಿತು. ಕೈಯನ್ನು ಎಳೆದುಕೊಳ್ಳಲು ಕೌಂಟ್ 
ಪ್ರಯತ್ನಪಟ್ಟ ಆಗಲಿಲ್ಲ. ದುರ್ಬಲವಾಗಿ ಜೋತಾಡುತ್ತಿದ್ದ ಕೈಯನ್ನು ಕಂಡು 
ಭಯಪಟ್ಟಿದ್ದ ಪಿಯರಿಯ ಮುಖವನ್ನೊಮ್ಮೆ ನೋಡಿದನೋ , ಅಥವಾ ಅವನ 
ಸಾಯುತ್ತಿರುವ ಮಿದುಳಿನಲ್ಲಿ ಯಾವುದೋ ಬೇರೆ ಯೋಚನೆ ಮಿಂಚಿನಂತೆ 
ಸುಳಿದು ಹೋಯಿತೋ , ಅಂತೂ ಕೌಂಟ್ ತನ್ನ ಕೈಯನ್ನೊಮ್ಮೆ, ಪಿಯರೆಯ 
ಭಯ ತುಂಬಿದ ಮುಖವನ್ನೊಮ್ಮೆನೋಡಿದ. ಅವನ ಮುಖದ ಮೇಲೆ ಕ್ಷೀಣವಾದ, 
ಅಯ್ಯೋ ಅನ್ನಿಸುವಂಥ ನಗುವೊಂದು ಮೂಡಿತು. ಅವನಿದ್ದ ಸ್ಥಿತಿಗೆ ಅಸಹಜವಾಗಿ 
ತನ್ನ ಅಸಹಾಯಕತೆಯನ್ನು ತಾನೇ ವಿಡಂಬನೆ ಮಾಡಿಕೊಳ್ಳುತ್ತಿದ್ದಾನೋ ಅನ್ನುವ 
ಹಾಗಿತ್ತು. ಆ ನಗೆಯನ್ನು ಕಂಡು ಪಿಯರೆಯ ಎದೆಯಲ್ಲಿ ಚಳುಕು ಹುಟ್ಟಿತು . ಕಣ್ಣು 
ಮಂಜಾಯಿತು. ರೋಗಿಯ ಮುಖ ಈಗ ಗೋಡೆಯ ಕಡೆಗಿತ್ತು. ಪಿಯರೆ 
ನಿಟ್ಟುಸಿರಿಟ್ಟ. 

'ನಿದ್ದೆ ಮಾಡತಿದಾರೆ',ರೋಗಿಯ ಪಕ್ಕದಲ್ಲಿರುವುದಕ್ಕೆಂದು ಬಂದ ಹಿನ್ನೆಸ್ 
ಒಬ್ಬಳಿಗೆ ಅನ್ನಾ ಮಿಖಾಯೌವ್ವಾ ಹೇಳಿದಳು. 

'ಹೋಗೋಣ' ಅಂದಳು . 
ಪಿಯರೆ ಹೊರಗೆ ಹೋದ. 

೨೧. 
ದಿವಾನಖಾನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಪ್ರಿನ್ಸ್ ವ್ಯಾಸಿಲಿ ಮತ್ತು 
ಹಿರಿಯ ಪ್ರಿನ್ಸೆಸ್ ಕ್ಯಾಥಿ ಇಬ್ಬರೇ ಮಹಾರಾಣಿ ಕ್ಯಾಥರೀನಳ ದೊಡ್ಡ ಭಾವಚಿತ್ರದ 


೧೨೬ 


ಯುದ್ಧ ಮತ್ತು ಶಾಂತಿ 
ಕೆಳಗೆ , ಚುರುಕಾಗಿ ಮಾತಾಡಿಕೊಂಡು ಕೂತಿದ್ದರು. ಪಿಯರೆ ಮತ್ತವನ 
ಮಾರ್ಗದರ್ಶಕಿಯನ್ನು ಕಂಡ ತಕ್ಷಣ ಮಾತು ನಿಲ್ಲಿಸಿಬಿಟ್ಟರು. 'ಅವಳನ್ನು ಕಂಡರೆ 
ಮೈ ಉರೀತಿದೆ ' ವ್ಯಾಸಿಲಿಯ ಕಿವಿಯಲ್ಲಿ ಗೊಣಗುಟ್ಟಿ ಕ್ಯಾಥಿ ಏನೋ 
ಬಚ್ಚಿಟ್ಟುಕೊಂಡದ್ದು ಪಿಯರೆಗೆ ಕಂಡಿತು. 
- ' ಚಿಕ್ಕ ದಿವಾನಖಾನೆಯಲ್ಲಿ ಕ್ಯಾಥಿ ಟೀಗೆ ಏರ್ಪಾಡು ಮಾಡಿದಾಳೆ. ಹೋಗಿ 
ಏನಾದರೂ ಸ್ವಲ್ಪ ಹೊಟ್ಟೆಗೆ ತೆಗೆದುಕೊಳ್ಳಿ ಅನ್ನಾ ಮಿಖಾಯೌವ್ವಾ, ಇಲ್ಲದಿದ್ದರೆ 
ತಲೆ ತಿರುಗಿ ಬಿದ್ದು ಬಿಡುತೀರಿ' ಅಂದ ಪ್ರಿನ್ಸ್ ವ್ಯಾಸಿಲಿ. . 

ಪಿಯರೆಗೆ ಏನೂ ಹೇಳದೆ ಸುಮ್ಮನೆ ಅವನ ತೋಳನ್ನು ಕಳಕಳಿಯಿಂದ 
ಅಮುಕಿದ. ಅನ್ನಾ ಮಿಖಾಯೌವ್ವಾಳ ಜೊತೆಗೆ ಪಿಯರೆ ಚಿಕ್ಕ ದಿವಾನಖಾನೆಗೆ 
ನಡೆದ. 

“ ನಿದ್ರೆಯಿಲ್ಲದೆ ರಾತ್ರಿ ಕಳೆದ ಮೇಲೆ ಚೇತರಿಸಿಕೊಳ್ಳುವುದಕ್ಕೆ ರಶಿಯನ್ 
ಟೀಗೆ ಸಮನಾದ್ದು ಯಾವುದೂ ಇಲ್ಲ' ಡಾಕ್ಟರ್‌ ಲೊರೈನ್ ಉತ್ಸಾಹವನ್ನು 
ಅದುಮಿಟ್ಟುಕೊಂಡು ಹೇಳುತ್ತಿದ್ದ . ನಾಜೂಕಾದ, ಹಿಡಿಕೆಯಿಲ್ಲದ ಚೀನೀ ಕಪ್ 
ಹಿಡಿದು ಟೀ ಹೀರುತ್ತಾ ಸಣ್ಣ ವೃತ್ತಾಕಾರದ ದಿವಾನಖಾನೆಯಲ್ಲಿ ಟೀ ಜೊತೆಗೆ 
ತಣಿದ ಊಟವನ್ನು ಅಣಿಮಾಡಿ ಇಟ್ಟಿದ್ದ ಮೇಜಿನ ಹತ್ತಿರ ನಿಂತಿದ್ದ. ಅವತ್ತು ರಾತ್ರಿ 
ಕೌಂಟ್ ಬೆಝುಕೋವ್ನ ಮನೆಯಲ್ಲಿದ್ದವರೆಲ್ಲ ಹೊಟ್ಟೆಗೆ ಏನಾದರೂ 
ಹಾಕಿಕೊಳ್ಳುವುದಕ್ಕೆ ಮೇಜಿನ ಸುತ್ತ ಸೇರಿದ್ದರು. ಪಿಯರೆಯ ಮನಸ್ಸಿನಲ್ಲಿ ಪುಟ್ಟ 
ಮೇಜು ಮತ್ತು ಕನ್ನಡಿಗಳೇ ತುಂಬಿದ್ದ ಈ ಚಿಕ್ಕ ದಿವಾನಖಾನೆಯ ಪ್ರಿಯವಾದ 
ನೆನಪುಗಳಿದ್ದವು. ಆ ಮನೆಯಲ್ಲಿ ಬಾಲ್ ಡಾನ್ನು ನಡೆಯುತ್ತಿದ್ದಾಗ ಡಾನ್ಸು ಬರದ 
ಪಿಯರೆ ಆ ಕೋಣೆಯಲ್ಲಿ ಕೂತುಕೊಂಡಿರುತ್ತಿದ್ದ. ಬತ್ತಲೆ ತೋಳು, ಭುಜಗಳ 
ಮೇಲೆ ವಜ್ರದ, ಮುತ್ತಿನ ಆಭರಣ ಧರಿಸಿಕೊಂಡು ಬಾಲ್ ಡ್ರೆಸ್ಸಿನಲ್ಲಿ ಓಡಾಡುತ್ತಾ 
ಪ್ರಖರವಾದ ಬೆಳಕಿನಲ್ಲಿ ಕನ್ನಡಿಗಳ ಸರಣಿಯಲ್ಲಿ ಕೊನೆಯೇ ಇಲ್ಲದಂತೆ ಕಾಣುವ 
ತಮ್ಮ ಮುಖದ ಪ್ರತಿಬಿಂಬಗಳನ್ನು ತಾವೇ ನೋಡಿಕೊಂಡು ಹಿಗ್ಗುವ ನರ್ತಿಸಲು 
ಬಂದ ಹೆಂಗಸರನ್ನು ನೋಡಿ ಖುಶಿಪಡುತ್ತಿದ್ದ . ಈಗ, ನಡು ರಾತ್ರಿಯ ಈ 
ಹೊತ್ತಿನಲ್ಲಿ ಅದೇ ಕೋಣೆಯಲ್ಲಿ ಎರಡು ಮೇಣದ ಬತ್ತಿಗಳು ಮಂಕು ಬೆಳಕು 
ಬೀರುತ್ತಿದ್ದವು. ಪುಟ್ಟ ಮೇಜುಗಳ ಮೇಲೆ ಟೀ ಸಾಮಗ್ರಿ, ಊಟದ ಪಾತ್ರೆಗಳು 
ಅಸ್ತವ್ಯಸ್ತವಾಗಿ ಹರಡಿಕೊಂಡಿದ್ದವು. ಸಾಮಾನ್ಯವಾದ ಉಡುಪು ತೊಟ್ಟ ಎಲ್ಲ ಥರದ 
ಜನ ಕೂತು ಪಿಸು ಪಿಸು ಮಾತಾಡುತ್ತಾ ಪಕ್ಕದ ಕೋಣೆಯಲ್ಲಿ ಈ ಕ್ಷಣ 
ಆಗುತ್ತಿರುವುದನ್ನು , ಇನ್ನೇನು ಆಗಲಿರುವುದನ್ನು ಮರೆತಿಲ್ಲ ಅನ್ನುವುದನ್ನು ಒಂದೊಂದು 
ಮಾತಿನಲ್ಲೂ ಒಂದೊಂದು ವರ್ತನೆಯಲ್ಲೂ ತೋರ್ಪಡಿಸಿಕೊಳ್ಳುತ್ತಾ ಇದ್ದರು. 
ಹಸಿವಾಗಿದ್ದರೂ ಏನೂ ತಿನ್ನಲು ಆಗಲಿಲ್ಲ ಪಿಯರೆಗೆ, ಏನು ಮಾಡಲಿ ಅನ್ನುವ 


೧೨೭ 
ಸಂಪುಟ ೧ - ಸಂಚಿಕೆ ಒಂದು 
ಹಾಗೆ ಮಾರ್ಗದರ್ಶಕಿಯ ಕಡೆಗೆ ನೋಡಿದ. ಅನ್ನಾ ಮಿಖಾಯೌವ್ವಾ ಆತುರದ 
ಹೆಜ್ಜೆಹಾಕಿಕೊಂಡು ಪ್ರಿನ್ಸ್ ವ್ಯಾಸಿಲಿ ಮತ್ತು ಕ್ಯಾಥಿ ಮಾತಾಡುತ್ತಿದ್ದ ಚಿಕ್ಕ ದಿವಾನಖಾನೆಗೆ 
ವಾಪಸ್ಸು ಹೋಗುತ್ತಿದ್ದಳು. ಇದೂ ಅವಶ್ಯಕವಾದ ಕೆಲಸವೇ ಇರಬೇಕು ಎಂದು 
ತೀರ್ಮಾನಿಸಿದ ಪಿಯರೆ ಸ್ವಲ್ಪ ಹೊತ್ತಿನ ನಂತರ ತಾನೂ ಅವಳ ಹಿಂದೆಯೇ 
ಹೋದ. 

- ಅನ್ನಾ ಮಿಖಾಯೌವ್ವಾ ಕ್ಯಾಥೆಯ ಪಕ್ಕದಲ್ಲೇ ನಿಂತಿದ್ದಳು. ಇಬ್ಬರೂ 
ಉದ್ವಿಗ್ನರಾಗಿದ್ದರು. ಗುಸುಗುಸು ಮಾತನಾಡುತ್ತಿದ್ದರು. 'ಬಿಡಿ ಪ್ರಿನ್ಸೆಸ್ , ಏನು 
ಮಾಡಬೇಕು, ಏನು ಮಾಡಬಾರದು ನನಗೆ ಗೊತ್ತು' ಧಡಾರನೆ ಬಾಗಿಲು 
ಹಾಕಿಕೊಂಡಾಗ ಇದ್ದ ಮನಸ್ಥಿತಿಯಲ್ಲೇ ಕ್ಯಾಥಿ ಹೇಳುತ್ತಿದ್ದಳು . 
* ಕ್ಯಾಧಿ ರೋಗಿಯ ಕೋಣೆಗೆ ಹೋಗದ ಹಾಗೆ ಬಾಗಿಲಿಗೆ ಅಡ್ಡ ನಿಂತು 
ಅನ್ನ ಮಿಖಾಯೌವ್ವಾ ಅವಳ ಮನಸ್ಸು ಒಲಿಸುವ ಹಾಗೆ ತಣ್ಣನೆ ದನಿಯಲ್ಲಿ 
“ನೋಡಮ್ಮಾ, ಪಾಪ , ಅಂಕಲ್ ಇದನ್ನೆಲ್ಲ ಸಹಿಸಿಕೊಳ್ಳುವುದಕ್ಕೆ ಆಗುತ್ತದೆಯೇ ? 
ಈಗ ಅವರಿಗೆ ವಿಶ್ರಾಂತಿ ಬೇಕು. ಕರ್ಮಗಳನ್ನು ಮಾಡಿ ಅವರ ಆತ್ಮದ ಪ್ರಯಾಣಕ್ಕೆ 
ಸಜ್ಜುಮಾಡಿರುವಾಗ ಈ ಹೊತ್ತಿನಲ್ಲಿ , ಲೌಕಿಕ ವ್ಯವಹಾರದ ಮಾತೇ ...' ಅಂದಳು . 
- ಪ್ರಿನ್ಸ್ ವ್ಯಾಸಿಲಿ ಆರಾಮ ಕುರ್ಚಿಯ ಮೇಲೆ ತನ್ನ ಎಂದಿನ ಭಂಗಿಯಲ್ಲಿ 
ಕಾಲ ಮೇಲೆ ಕಾಲು ಹಾಕಿಕೊಂಡು ಕೂತಿದ್ದ . ಸಡಿಲ ಬಿದ್ದಿದ್ದ ಕೆನ್ನೆಗಳು 
ಅದುರುತ್ತಿದ್ದವು. ಹೆಂಗಸರ ಮಾತಿನಲ್ಲಿ ಏನೂ ಆಸಕ್ತಿ ಇಲ್ಲದವನ ಹಾಗೆ ಕೂತಿದ್ದ. 

'ಹೋಗಲಿ ಬಿಡಿ, ಅನ್ನಾ ಮಿಖಾಯೌವ್ವಾ. ಕ್ಯಾಥಿ ಅವಳಿಗಿಷ್ಟ ಬಂದ 
ಹಾಗೆ ಮಾಡಿಕೊಳ್ಳಲಿ. ಅವಳಿಗೆ ಕೌಂಟ್ ಮೇಲೆ ತುಂಬ ಪ್ರೀತಿ, ಗೊತ್ತಲ್ಲಾ' ಅಂದ. 

“ಈ ಪತ್ರದಲ್ಲಿ ಏನಿದೆ ಅನ್ನುವುದು ಕೂಡ ನನಗೆ ಗೊತ್ತಿಲ್ಲ,' ಕ್ಯಾಥಿ ಕೈಯಲ್ಲಿದ್ದ 
ಲಕೋಟೆಯನ್ನು ಎತ್ತಿ ಹಿಡಿದು ತೋರಿಸುತ್ತಾ ಪ್ರಿನ್ಸ್ ವ್ಯಾಸಿಲಿಗೆ ಹೇಳಿದಳು. 
. ' ನನಗೆ ಗೊತ್ತಿರುವುದು ಇಷ್ಟೇ . ನಿಜವಾದ ವಿಲ್ ರೈಟಿಂಗ್ ಟೇಬಲ್ಲಿನ 
ಡ್ರಾದಲ್ಲಿದೆ, ಇದು ಅಂಕಲ್ ಯಾವಾಗಲೋ ಬರೆದು ಮರೆತು ಹೋಗಿರುವ 
ಪತ್ರ' ಅನ್ನುತ್ತಾ ಕ್ಯಾಥಿ ಅನ್ನಾ ಮಿಖಾಯೌವ್ಹಾಳನ್ನು ದಾಟಿಕೊಂಡು ಹೋಗಲು 
ನೋಡಿದಳು. ಆದರೆ ಅನ್ನಾ ಮಿಖಾಯೌವ್ವಾ ತಟ್ಟನೆ ಪಕ್ಕಕ್ಕೆ ಸರಿದುಕೊಂಡು 
ಅವಳು ಹೊರಗೆ ಹೋಗದ ಹಾಗೆ ದಾರಿಗೆ ಅಡ್ಡವಾಗಿ ನಿಂತಳು. 

- 'ನನಗೆ ಗೊತ್ತು ಪ್ರಿನ್ಸೆಸ್ ' ಅನ್ನುತ್ತಾ ಕ್ಯಾಥಿ ಅಷ್ಟು ಸುಲಭವಾಗಿ ಹೋಗುವುದಕ್ಕೆ 
ಬಿಡುವುದಿಲ್ಲ ಅನ್ನುವ ಹಾಗೆ ಅನ್ನಾ ಮಿಖಾಯೌವ್ವಾ ಲಕೋಟೆಯನ್ನು ಭದ್ರವಾಗಿ 
ಹಿಡಿದುಕೊಂಡಳು , ' ಡಿಯರ್ ಪ್ರಿನ್ಸೆಸ್ , ನಿಮ್ಮನ್ನು ಬೇಡುತೇನೆ, ದಯವಿಟ್ಟು ಅವನ 
ಮೇಲೆ ಕರುಣೆ ತೋರಿಸಿ.' 

ಕ್ಯಾಥಿ ಮಾತಾಡಲಿಲ್ಲ. ಲಕೋಟೆಯನ್ನು ಕಿತ್ತುಕೊಳ್ಳುವುದಕ್ಕೆ ಇಬ್ಬರೂ 


೧೨೮ 

ಯುದ್ಧ ಮತ್ತು ಶಾಂತಿ 
ಹೆಂಗಸರು ಅದನ್ನು ಹಿಡಿದು ಎಳೆದಾಡುತ್ತಿದ್ದ ಸದ್ದು ಮಾತ್ರ ಕೇಳಿಸುತ್ತಿತ್ತು . ಪ್ರಿನ್ಸೆಸ್ 
ಬಾಯಿ ಬಿಟ್ಟಿದ್ದಿದ್ದರೆ ಕೆಟ್ಟ ಮಾತುಗಳೇ ಬರುತ್ತಿದ್ದವು. ಅನ್ನಾ ಮಿಖಾಯೌವ್ವಾ 
ಲಕೋಟೆಯನ್ನು ಭದ್ರವಾಗಿ ಹಿಡಿದುಕೊಂಡು, ತನ್ನ ಧ್ವನಿಯಲ್ಲಿ ಗಾಂಭೀರ್ಯ 
ಮಾಧುರ್ಯಗಳನ್ನೂ ಉಳಿಸಿಕೊಂಡು, ' ಪಿಯರೆ, ಇಲ್ಲಿ ಬನ್ನಿ ' ಅಂದಳು . 
“ಕುಟುಂಬದ ವ್ಯವಹಾರ, ಅವರೂ ಇದ್ದರೆ ಒಳ್ಳೆಯದಲ್ಲವೆ?' ಅಂತ ಪ್ರಿನ್ಸ್ 
ವ್ಯಾಸಿಲಿಯನ್ನು ಕೇಳಿದಳು. 

' ಯಾಕೆ ಬಾಯಿ ಮುಚ್ಚಿಕೊಂಡಿದೀರಿ? ಎಲ್ಲಾ ವಿಷಯಕ್ಕೂ ಮೂಗು 
ತೂರಿಸಿಕೊಂಡು ಬರೋದಕ್ಕೆ ಇವಳು ಯಾರು? ಅಲ್ಲಿ ಅವನು ಸಾಯುತಾ 
ಇದಾನೆ, ಇಲ್ಲಿ ಇವಳು ಜಗಳ ತೆಗೆದಿದಾಳೆ' ಪ್ರಿನ್ಸೆಸ್ ಜೋರಾಗಿ ಚೀರಿದ್ದು ಕೇಳಿ 
ಡ್ರಾಯಿಂಗ್ ರೂಮಿನಲ್ಲಿ ಊಟಮಾಡುತ್ತಿದ್ದವರೆಲ್ಲ ಬಿಚ್ಚಿದರು. 'ಮೋಸಗಾತಿ!' 
ಹಲ್ಲು ಕಚ್ಚಿಕೊಂಡು, ಲಕೋಟೆಯನ್ನು ಬಿಗಿಯಾಗಿ ಹಿಡಿದು ಶಕ್ತಿ ಬಿಟ್ಟು ಎಳೆಯುತ್ತಾ, 
ಕ್ಯಾಥಿ ಬುಸುಗುಟ್ಟಿದಳು . 
- ಅನ್ನಾ ಮಿಖಾಯೌವ್ವಾ ಲಕೋಟೆ ಬಿಡಲಿಲ್ಲ. ಕ್ಯಾಥಿ ಎಳೆದಾಗ ತಾನೇ 
ಎರಡು ಹೆಜ್ಜೆ ಮುಂದೆ ಸರಿದಳು, ಪ್ರಿನ್ಸ್ ವ್ಯಾಸಿಲಿ 'ಸಾಕು, ಸುಮ್ಮನಿರಿ' ಅಂದ. 
ಎದ್ದು ನಿಂತ. “ಏನು ಹೀಗೆ ಆಡುತ್ತಾ ಇದೀರಿ. ಇಬ್ಬರೂ ಬಿಡಿ, ನಾನು ಹೇಳತೇನೆ!' 
ಅಂದ. 

ಕ್ಯಾಥಿ ಲಕೋಟೆಯ ಕೈ ಬಿಟ್ಟಳು. 
"ಮತ್ತೆ, ನೀವೂ ಬಿಡಿ ಅದನ್ನ !' 
ಅನ್ನಾ ಮಿಖಾಯೌವ್ವಾ ಅವನ ಮಾತು ಕೇಳಲಿಲ್ಲ. 

'ಬಿಡಿ, ಅಂದೆನಲ್ಲಾ! ನಾನೇ ಜವಾಬ್ದಾರ. ನಾನೇ ಹೋಗಿ ಅವನನ್ನ 
ಕೇಳಿಕೊಂಡು ಬರುತ್ತೇನೆ! ನಾನೇ ! ಸರಿ ತಾನೇ ?' ಅಂದ. 

' ಪ್ರಿನ್ಸ್ , ಸಾಕ್ರಮೆಂಟ್ ಆದಮೇಲೆ ಅವರನ್ನ ನೆಮ್ಮದಿಯಾಗಿರೋದಕ್ಕೆ 
ಬಿಡಬೇಕು, ಅಲ್ಲವಾ! ನಿನಗೇನು ಅನ್ನಿಸುತ್ತದೆ ಪಿಯರೆ?' ಈ ವೇಳೆಗೆ ಅವಳ 
ಹತ್ತಿರಕ್ಕೆ ಬಂದು ಕೋಪದಿಂದ ವಿಕಾರವಾಗಿದ್ದ ಅವಳ ಮುಖವನ್ನೂ ಪ್ರಿನ್ಸ್ 
ವ್ಯಾಸಿಲಿಯ ಅದುರುತ್ತಿರುವ ಗಲ್ಲವನ್ನೂ ದಿಟ್ಟಿಸುತ್ತಿದ್ದ ಪಿಯರೆಯನ್ನು ಅನ್ನಾ 
ಮಿಖಾಯೌವ್ವಾ ಕೇಳಿದಳು. 

' ಮುಂದೆ ಏನೇ ಆದರೂ ನಿಮ್ಮದೇ ಜವಾಬ್ದಾರಿ, ಗೊತ್ತಾಯಿತಾ?' ಪ್ರಿನ್ಸ್ 
ವ್ಯಾಸಿಲಿ ನಿಷ್ಟೂರವಾಗಿ ಹೇಳಿದ. 

“ಕೆಟ್ಟ ಹೆಂಗಸು!' ಎಂದು ಚೀರುತ್ತಾ ತಟ್ಟನೆ ಅನ್ನಾ ಮಿಖಾಯೌವ್ವಾಳ 
ಮೇಲೆ ಎರಗಿ, ಅವಳ ಕೈಯಲ್ಲಿದ್ದ ಲಕೋಟೆ ಕಿತ್ತುಕೊಂಡಳು ಕ್ಯಾಥಿ. 

ಪ್ರಿನ್ಸ್ ವ್ಯಾಸಿಲಿ ತಲೆ ತಗ್ಗಿಸಿ ಕೈ ಚೆಲ್ಲಿದ. 


೧೨೯ 
ಸಂಪುಟ ೧ - ಸಂಚಿಕೆ ಒಂದು 

ಆ ಹೊತ್ತಿಗೆ ಪಿಯರೆ ಅಷ್ಟು ಹೊತ್ತಿನಿಂದ ಗಮನಿಸುತ್ತಲೇ ಇದ್ದ ಆ 
ಕೋಣೆಯ ಭಯಂಕರವಾದ ಬಾಗಿಲು, ಯಾವಾಗಲೂ ಸದ್ದಿಲ್ಲದೆ ತೆರೆದುಕೊಳ್ಳುತ್ತಾ 
ಇದ್ದದ್ದು, ತಟ್ಟನೆ ತೆಗೆದುಕೊಂಡು ಧಡಾರನೆ ಗೋಡೆಗೆ ಬಡಿದು ಸದ್ದು ಮಾಡಿತು. 
ಎರಡನೆಯ ಪ್ರಿನ್ಸೆಸ್ ಕೈ ಹಿಸುಕಿಕೊಳ್ಳುತ್ತಾ ಹೊರಗೆ ಬಂದಳು. 

'ಏನು ಮಾಡುತಾ ಇದೀರಿ? ಸಾಯುತಾ ಇದಾನೆ. ನನ್ನೊಬ್ಬಳನ್ನೇ ಅವನ 
ಜೊತೆಗೆ ಬಿಟ್ಟು ಬಂದಿದೀರಿ!' 

ಅವಳ ಅಕ್ಕ ಲಕೋಟೆಯನ್ನು ಕೆಳಗೆ ಬೀಳಿಸಿದಳು. ಅನ್ನಾ ಮಿಖಾಯೌವ್ವಾ 
ಬಗ್ಗೆ ಸಟಕ್ಕನೆ ಎತ್ತಿಕೊಂಡು ಮಲಗುವಕೋಣೆಗೆ ಓಡಿಹೋದಳು. ಎಚ್ಚೆತ್ತುಕೊಂಡ 
ಹಿರಿಯ ಪ್ರಿನ್ಸೆಸ್‌, ಪ್ರಿನ್ಸ್ ವ್ಯಾಸಿಲಿ ಅವಳನ್ನು ಹಿಂಬಾಲಿಸಿದರು. ಕೆಲವು ನಿಮಿಷಗಳ 
ನಂತರ ಹಿರಿಯ ರಾಜಕುಮಾರಿ ಬಿಳಿಚಿಕೊಂಡು ಮುಖ ಒಣಗಿ, ತುಟಿ ಕಚ್ಚಿಕೊಳ್ಳುತ್ತಾ 
ಹೊರಬಂದಳು . ಪಿಯರೆಯನ್ನು ಕಂಡ ಅವಳ ಮುಖ ದ್ವೇಷದಿಂದ 
ವಿಕಾರವಾಯಿತು. 

- 'ಈಗ ಸಂತೋಷವಾ! ಬೇಕಾಗಿದ್ದದ್ದು ಸಿಕ್ಕಿತಲ್ಲಾ' ಅನ್ನುತ್ತಾ ಕರ್ಚಿಫಿನಲ್ಲಿ 
ಮುಖ ಮುಚ್ಚಿಕೊಂಡು ಬಿಕ್ಕುತ್ತಾ ದೊಡ್ಡ ಹೆಜ್ಜೆ ಹಾಕಿಕೊಂಡು ಹೊರಟುಹೋದಳು. 
. ಆಮೇಲೆ ಪ್ರಿನ್ಸ್ ವ್ಯಾಸಿಲಿ ಬಂದ, ಪಿಯರೆ ಕುಳಿತಿದ್ದ ಸೋಫಾದವರೆಗೂ 
ತಟ್ಟಾಡಿಕೊಂಡು ಬಂದು ಅವನ ಪಕ್ಕದಲ್ಲೇ ಕುಸಿದು ಕೂತು ಮುಖ ಮುಚ್ಚಿಕೊಂಡ. 
ಅವನ ಮುಖ ಬಿಳುಪೇರಿ ಕೆನ್ನೆಗಳು ಅದುರುತ್ತಾ ಫಿಟ್ಸ್ ಬಂದವರ ಹಾಗೆ 
ದವಡೆಗಳು ಸದ್ದು ಮಾಡುತ್ತಿರುವುದನ್ನು ಪಿಯರೆ ಗಮನಿಸಿದ. 
ಈ 'ಅಯ್ಯೋ !' ಅನ್ನುತ್ತಾ ಪಿಯರೆಯ ತೋಳು ಹಿಡಿದುಕೊಂಡ. ಅವನ 
ಧ್ವನಿಯಲ್ಲಿ ಪಿಯರೆ ಎಂದೂ ಕಂಡಿರದಂಥ ಸಾಚಾತನವಿತ್ತು, ದುಃಖವಿತ್ತು, ' ಎಂತೆಂಥ 
ಪಾಪ ಮಾಡುತ್ತೇವೆ, ಎಂತೆಂಥಾ ಮೋಸ ಮಾಡುತೇವೆ! ಯಾಕೆ ಇವೆಲ್ಲಾ! ನನಗೂ 
ಐವತ್ತು ದಾಟುತಾ ಬಂತು. ನಾನೂ ...ಸತ್ತ ಮೇಲೆ ಎಲ್ಲಾ ಮುಗಿಯಿತು! ನೆನೆದರೆ 
ಭಯವಾಗುತ್ತಪ್ಪಾ ... ಪ್ರಿನ್ಸ್ ಜೋರಾಗಿ ಅತ್ತುಬಿಟ್ಟ. . 

- ಎಲ್ಲರಿಗಿಂತ ಕೊನೆಯಲ್ಲಿ ಬಂದವಳು ಅನ್ನಾ ಮಿಖಾಲ್ಲೋವ್ಯಾ. ಸದ್ದಿಲ್ಲದೆ 
ಮೆಲ್ಲಗೆ ಹೆಜ್ಜೆ ಹಾಕುತ್ತಾ ಪಿಯರೆಯ ಹತ್ತಿರ ಬಂದಳು. 

- 'ಪಿಯರೆ!' ಅಂದಳು. 
- ಏನು ಅನ್ನುವ ಹಾಗೆ ಪಿಯರೆ ತಲೆ ಎತ್ತಿ ನೋಡಿದ, ಪಿಯರೆಯ ಹಣೆಯ 
ಮೇಲೆ ಮುತ್ತಿಟ್ಟಳು. ಅವಳ ಕಣ್ಣೀರಿನಿಂದ ಪಿಯರೆಯ ಹಣೆ ತೊಯ್ದಿತು. ಸ್ವಲ್ಪ 
ಹೊತ್ತು ಸುಮ್ಮನಿದ್ದಳು. 

“ಹೋಗಿಬಿಟ್ಟಾ...' ಅಂದಳು. 
ಪಿಯರೆ ಸುಮ್ಮನೆ ದಿಟ್ಟಿಸಿದ. 


೧೩೦ 

ಯುದ್ಧ ಮತ್ತು ಶಾಂತಿ 
'ನಾನೂ ನಿನ್ನ ಜೊತೆ ಇರುತೇನೆ, ಬಾ . ಅತ್ತುಬಿಡು. ಅತ್ತರೆ ಸಮಾಧಾನ 
ಅಗುತದೆ' ಅಂದಳು. ಕತ್ತಲಾಗಿದ್ದ ದಿವಾನಖಾನೆಗೆ ಕರೆದುಕೊಂಡು ಹೋದಳು. 
ಇಲ್ಲಿ ಯಾರಿಗೂ ತನ್ನ ಮುಖ ಕಾಣುವುದಿಲ್ಲವೆಂದು ಪಿಯರೆಗೆ ಸಮಾಧಾನವಾಗಿತ್ತು. 
ಅವನೊಬ್ಬನನ್ನೇ ಬಿಟ್ಟು ಅನ್ನಾ ಮಿಖಾಯೌವ್ವಾ ಹೊರಟು ಹೋದಳು . ಅವಳು 
ವಾಪಸ್ಸು ಬಂದಾಗ ಪಿಯರೆ ತೋಳಿನಮೇಲೆ ತಲೆ ಇಟ್ಟುಕೊಂಡು ನಿದ್ರೆ ಹೋಗಿದ್ದ . 

ಮರುದಿನ ಬೆಳಗ್ಗೆ ಅನ್ನಾ ಮಿಖಾಯೌವ್ವಾ ಪಿಯರೆಗೆ ಹೇಳಿದಳು: 
'ನಮಗೆಲ್ಲಾರಿಗೂ ದೊಡ್ಡ ನಷ್ಟ. ನಿನ್ನ ಬಗ್ಗೆ ಹೇಳುವ ಹಾಗೇ ಇಲ್ಲ. ದೇವರು 
ಕಾಪಾಡುತ್ತಾನೆ. ನೀನಿನ್ನೂ ಯುವಕ , ಈಗ ದೊಡ್ಡ ಆಸ್ತಿ ಸಿಕ್ಕ ಬಹುದು. ವಿಲ್ಲನ್ನು 
ಇನ್ನೂ ಓದಿಲ್ಲ. ನೀನು ಎಂಥವನು ಅನ್ನುವುದು ನನಗೆ ಗೊತ್ತು. ಆಸ್ತಿ ಬಂದಿದೆ 
ಅಂತ ನಿನ್ನ ತಲೆ ತಿರುಗಲ್ಲ. ಆಸ್ತಿಯ ಜೊತೆಗೇ ಜವಾಬ್ದಾರಿಗಳೂ ಬರುತವೆ. 
ಗಂಡಸಿನ ಹಾಗೆ ಎಲ್ಲಾ ನೋಡಿಕೊಳ್ಳಬೇಕು.' 

ಪಿಯರೆ ಏನೂ ಅನ್ನಲಿಲ್ಲ. . 
- “ ಆಮೇಲೆ ಯಾವತ್ತಾದರೂ ಹೇಳುತೇನೆ, ಪಿಯರೆ. ನಾನು ಇಲ್ಲದೆ 
ಹೋಗಿದ್ದಿದ್ದರೆ ಏನಾಗುತಿತ್ತೋ ದೇವರಿಗೇ ಗೊತ್ತು! ನಿನಗೆ ಗೊತ್ತಾ, ಅಂಕಲ್ 
ಸಾಯುವ ಹಿಂದಿನ ದಿನವಲ್ಲ ಅದರ ಹಿಂದಿನ ದಿನ ನನಗೆ ಮಾತು ಕೊಟ್ಟಿದ್ದರು. 
ಬೋರಿಸ್‌ನನ್ನು ಮರೆಯುವುದಿಲ್ಲ ಅಂದಿದ್ದರು. ಆದರೆ , ಪಾಪ , ಅವರಿಗೆ 
ಸಮಯವಿರಲಿಲ್ಲ . ನೀನು ನಿಮ್ಮ ತಂದೆಯ ಆಸೆ ನೆರವೇರಿಸುತೀಯ, ಅಲ್ಲವಾ ?' 

- ಪಿಯರೆಗೆ ಯಾವ ಮಾತೂ ಅರ್ಥವಾಗಲಿಲ್ಲ . ನಾಚಿ ಕೆಂಪಾಗಿ ಅನ್ನಾ 
ಮಿಖಾಝೀವಾಳ ಮುಖ ದಿಟ್ಟಿಸಿದ. ಏನೂ ಹೇಳಲಿಲ್ಲ. ಅವನ ಜೊತೆ ಹೀಗೆ 
ಸ್ವಲ್ಪ ಮಾತಾಡಿ ಮುಗಿಸಿ ಅನ್ನಾ ಮಿಖಾಯೌವ್ವಾರೋಸ್ಟೋವ್ ಮನೆಗೆ ಹೋಗಿ 
ಮಲಗಿಕೊಂಡಳು. ಬೆಳಗ್ಗೆ ಎದ್ದಮೇಲೆರೋಸ್ಟೋವ್ ಮನೆಯವರಿಗೆ, ತನ್ನ ಎಲ್ಲ 
ಪರಿಚಿತ ಜನಕ್ಕೆ ಬೆಝುಕೋವ್‌ನ ಸಾವಿನ ಸಂಗತಿಯನ್ನು ವಿವರವಾಗಿ ಹೇಳಿದಳು. 
ತಾನು ಹೇಗೆ ಸಾಯಬೇಕು ಅಂದುಕೊಂಡಿದ್ದೇನೋ ಅದೇ ಥರ ಬೆಝುಕೋವ್ 
ಸತ್ಯ; ಅವನ ಸಾವು ಮನಸ್ಸು ಮುಟ್ಟಿ ನಮಗೆಲ್ಲ ಪಾಠ ಕಲಿಸುವ ಹಾಗಿತ್ತು; ತಂದೆ 
ಮಗನ ಕೊನೆಯ ಭೇಟಿ ಮನಸ್ಸು ಕರಗಿಸುವ ಹಾಗಿತ್ತು; ಈಗ ನೆನೆದರೂ 
ಕಣ್ಣೀರು ಬರುತ್ತದೆ ; ಆ ಹೊತ್ತಿನಲ್ಲಿ ಯಾರು ಸರಿಯಾಗಿ ನಡೆದುಕೊಂಡರೋ 
ಹೇಳುವುದೇ ಕಷ್ಟ - ಎಲ್ಲರನ್ನೂ , ಎಲ್ಲವನ್ನೂ ನೆನಪಿಟ್ಟುಕೊಂಡಿದ್ದ, ಮಗನೊಡನೆ 
ಅಯ್ಯೋ ಅನ್ನಿಸುವ ಹಾಗೆ ಮಾತನಾಡಿದ ತಂದೆಯೋ , ಅಥವಾ ತನಗೇ 
ಹೇಳಲಾಗದಷ್ಟು ದುಃಖವಾಗಿದ್ದರೂ ಬೇರೆಯವರಿಗೆ, ಸಾಯುತ್ತಿರುವ ತಂದೆಗೆ 
ತೊಂದರೆಯಾಗಬಾರದೆಂದು ಅದನ್ನು ಅಡಗಿಸಿಟ್ಟುಕೊಂಡಿದ್ದ ಮಗನೋ - ಅಂತೆಲ್ಲ 
ಹೇಳಿ, 'ಮನಸ್ಸಿಗೆ ತುಂಬ ದುಃಖವಾಗುತ್ತದೆ. ಅದರೂ ವೃದ್ದ ಕೌಂಟ್‌ನಂಥ 


೧೩೧ 


ಸಂಪುಟ ೧ - ಸಂಚಿಕೆ ಒಂದು 


ವ್ಯಕ್ತಿಗಳ ಕೊನೆಗಾಲ, ಆ ಹೊತ್ತಿನಲ್ಲಿ ಪಿಯರೆಯಂಥ ಮಗನ ವರ್ತನೆ ಇಂಥವನ್ನು 
ನೋಡಿದರೆ ನಮ್ಮ ಆತ್ಮವೂ ಮೇಲಿನ ಮಟ್ಟಕ್ಕೆ ಏರುತದೆ ' ಅಂದಳು. ತೀರ ಗುಟ್ಟು 
ಅನ್ನುತ್ತಾ ಹಿರಿಯ ಪ್ರಿನ್ಸೆಸ್ ಮತ್ತು ಪ್ರಿನ್ಸ್ ವ್ಯಾಸಿಲಿ ನಡೆದುಕೊಂಡ ರೀತಿ, ಅವರ 
ಕುತಂತ್ರ ನನಗೆ ಇಷ್ಟವಾಗಲಿಲ್ಲ ಅಂತ ಗೊಗ್ಗರು ಪಿಸುಮಾತಿನಲ್ಲಿ ಟೀಕಿಸಿದಳು. 


'ಬಾಲ್ಫ್ ಹಿಲ್ಸ್ ' ನಲ್ಲಿದ್ದ ಪ್ರಿನ್ಸ್ ನಿಕೋಲಸ್ ಬೋಲೋನ್ಯ 
ಎಸ್ಟೇಟಿನಲ್ಲಿದ್ದವರು ಪ್ರಿನ್ಸ್ ಆಂಡ್ರ ಮತ್ತು ಅವನ ಹೆಂಡತಿ ಬರುತ್ತಾರೆಂದು 
ದಿನವೂ ಕಾಯುತ್ತಿದ್ದರು. ಆದರೂ ಆ ನಿರೀಕ್ಷೆಯ ಕಾರಣದಿಂದ ವೃದ್ದ ಪ್ರಿನ್ಸ್ನ 
ಮನೆಯ ಬದುಕಿನ ಸುವ್ಯವಸ್ಥಿತ ಬದುಕಿನ ವಿಧಾನಕ್ಕೆ ಕಿಂಚಿತ್ತೂ ಧಕ್ಕೆಯಾಗಿರಲಿಲ್ಲ . 
ಹಿಂದೆ ಕಮಾಂಡರ್ ಇನ್ ಛೀಫ್ ಆಗಿದ್ದ ಪ್ರಿನ್ಸ್ ನಿಕೊಲಾನನ್ನು ( ಅವನನ್ನು 
ಪ್ರಶಿಯಾದ ರಾಜ ಎಂಬ ಅಡ್ಡ ಹೆಸರಿನಿಂದ ಘನವಂತರ ಸಮಾಜದಲ್ಲಿ 
ಕರೆಯುತ್ತಿದ್ದರು) ಚಕ್ರವರ್ತಿ ಪಾಲ್‌ನ ಆಳ್ವಿಕೆಯಲ್ಲಿ ಗಡೀಪಾರು ಮಾಡಲಾಗಿತ್ತು. 
ಆಗಿನಿಂದ ಅವನು ಮಗಳು ಪ್ರಿನ್ಸಸ್ ಮೇರಿ ಮತ್ತವಳ ಗೆಳತಿ ಮೇಡಂಬೋರೀನ್‌ರ 
ಜೊತೆಯಲ್ಲಿ ಹಳ್ಳಿಯ ತನ್ನ ಎಸ್ಟೇಟಿನಲ್ಲೇ ಇದ್ದುಬಿಟ್ಟಿದ್ದ. ಹೊಸ ಚಕ್ರವರ್ತಿಯ 
ಆಳ್ವಿಕೆಯಲ್ಲಿ ರಾಜಧಾನಿಗೆ ನಗರಗಳಿಗೆ ಹಿಂದಿರುಗುವ ಅವಕಾಶ ಅವನಿಗಿದ್ದರೂ 
ಯಾರಾದರೂ ನನ್ನನ್ನು ಕಾಣುವುದಿದ್ದರೆ ಮಾಸ್ಕೋದಿಂದ ನೂರು ಮೈಲು ಪ್ರಯಾಣ 
ಮಾಡಿಕೊಂಡು ಬಾಲ್ ಹಿಲ್‌ಗೇ ಬಂದು ಕಾಣಲಿ, ನನಗಂತೂ ಯಾರೂ ಏನೂ 
ಬೇಕಾಗಿಲ್ಲ ಎಂದು ಹೇಳಿ ಗಟ್ಟಿ ಮನಸ್ಸು ಮಾಡಿಕೊಂಡು ಹಳ್ಳಿಯಲ್ಲೇ ಉಳಿದಿದ್ದ. 
ಮನುಷ್ಯರ ಬದುಕಿನಲ್ಲಿ ದುಷ್ಟತನದ ಮೂಲಗಳು ಎರಡೇ -ಸೋಮಾರಿತನ ಮತ್ತು 
ಮೂಢ ನಂಬಿಕೆ , ಹಾಗೆಯೇ ಸದ್ಗುಣದ ಮೂಲಗಳೂ ಎರಡೇ - ಚಟುವಟಿಕೆ 
ಮತ್ತು ಬುದ್ದಿವಂತಿಕೆ ಅನ್ನುತ್ತಿದ್ದ . ಈ ಎರಡು ಸದ್ಗುಣಗಳನ್ನು ಮಗಳಲ್ಲಿ 
ತುಂಬುವುದಕ್ಕೆಂದು ಅವಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ತಾನೇ 
ಹೊತ್ತುಕೊಂಡಿದ್ದ. ಅವಳಿಗೆ ಇಪ್ಪತ್ತು ಆದಾಗಲೂ ಇನ್ನೂ ಆಬ್ರಾ ಜಾಮಿಟ್ರಿ 
ಹೇಳಿಕೊಡುತ್ತಿದ್ದ. ಅವಳ ಇಡೀ ಬದುಕು ಕೊನೆಯೇ ಇರದ ಶಿಕ್ಷಣದ ಸುತ್ತಲೂ 
ವ್ಯವಸ್ಥೆಗೊಳ್ಳುವ ಹಾಗೆ ಏರ್ಪಾಡು ಮಾಡಿದ್ದ . ಸ್ವತಃ ತಾನೂ ಕೂಡ ದಿನವೆಲ್ಲ 
ಏನಾದರೂ ಮಾಡುತ್ತಲೇ ಇರುತ್ತಿದ್ದ ನೆನಪುಗಳನ್ನು ಬರೆಯುತ್ತಿದ್ದ, ಗಣಿತದ 
ಸಮಸ್ಯೆಗಳನ್ನು ಬಿಡಿಸುತ್ತಿದ್ದ , ಲೇಥ್ ತಿರುಗಿಸುತ್ತಾ ನಶ್ಯದ ಡಬ್ಬಿಗಳನ್ನು ಮಾಡುತ್ತಿದ್ದ , 
ಎಸ್ಟೇಟಿನಲ್ಲಿ ಸದಾ ಕಟ್ಟಿಸುತ್ತಲೇ ಇದ್ದ ಕಟ್ಟಡಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. 
ಕಠಿಣ ದುಡಿಮೆಗೆ ಅಗತ್ಯವಾದದ್ದು ವ್ಯವಸ್ಥೆ , ಆದಕ್ಕೆ ವ್ಯವಸ್ಥೆ ಅನ್ನುವುದು ಅವನ 
ಬದುಕಿನ ಶೈಲಿಯ ಕೊಟ್ಟ ಕೊನೆಯ ವಿವರವನ್ನೂ ನಿರ್ದೆಶಿಸುತ್ತಾ ಆಳುತ್ತಿತ್ತು . 
ಊಟದ ಮೇಜಿಗೆ ಯಾವಾಗಲೂ ಒಂದೇ ರೀತಿಯಲ್ಲಿ, ಅದೇ ಗಂಟೆ ಅದೇ 


೧೩೨ 


ಯುದ್ಧ ಮತ್ತು ಶಾಂತಿ 
ನಿಮಿಷಕ್ಕೆ ಸರಿಯಾಗಿ ಹಾಜರಾಗುತ್ತಿದ್ದ. ತನ್ನ ಮಗಳಿಂದ ಹಿಡಿದು ಸೇವಕನವರೆಗೆ 
ತನ್ನ ಸುತ್ತಲೂ ಇರುವ ಎಲ್ಲರಿಂದಲೂ ಇಂಥ ಕಟ್ಟುನಿಟ್ಟನ್ನೇ ಅಪೇಕ್ಷಿಸುತ್ತಿದ್ದ ಪ್ರಿನ್ಸ್ 
ಕಠಿಣ ಹೃದಯಿ ಅಲ್ಲದಿದ್ದರೂ ಯಾವನೇ ಕಠಿಣ ಹೃದಯಿ ಹುಟ್ಟಿಸಬಹುದಾದ್ದಕ್ಕಿಂತ 
ಹೆಚ್ಚಿನ ಭಯ ಗೌರವಗಳನ್ನು ಎಲ್ಲರ ಮನಸ್ಸಿನಲ್ಲಿ ಹುಟ್ಟಿಸಿದ್ದ. ಈಗ ನಿವೃತ್ತನಾಗಿದ್ದರೂ 
ರಾಜಧಾನಿಯ ರಾಜಕೀಯ ವ್ಯವಹಾರಗಳಲ್ಲಿ ಯಾವ ಪ್ರಭಾವವೂ ಇರದಿದ್ದರೂ 
ಅವನಿದ್ದ ಪ್ರಾಂತ್ಯದ ಎಲ್ಲ ಅಧಿಕಾರಿಗಳೂ ಅವನ ಮನೆಗೆ ಭೇಟಿಕೊಡುತ್ತಿದ್ದರು. 
ನಿಗದಿಯಾದ ಹೊತ್ತಿಗೆ ಸರಿಯಾಗಿ ಹಾಜರಾಗುತ್ತಿದ್ದ ಪ್ರಿನ್ಸ್ಗಾಗಿ ಮೇಸ್ತಿ, ಮಾಲಿ, 
ಅಥವಾ ಅವನ ಸ್ವಂತ ಮಗಳೇ ಮಾಡುವ ಹಾಗೆ ಅವನ ಭವ್ಯವಾದ ಆಂಟಿ 
ಛೇಂಬರಿನಲ್ಲಿ ಕಾದು ನಿಲ್ಲುತ್ತಿದ್ದರು. ಸ್ವಡಿ ರೂಮಿನ ಎತ್ತರವಾದ ಬಾಗಿಲು ತಟ್ಟನೆ 
ತೆರೆದುಕೊಂಡು, ಗಿಡ್ಡ ಆಕಾರದ, ಪೌಡರ್ ಹಾಕಿದ ವಿಗ್ಗು , ತೆಳ್ಳನೆಯ ಸುಕ್ಕು 
ಕೈಗಳು, ಗಂಟಿಕ್ಕಿಕೊಳ್ಳಲು ತಯಾರಾಗಿರುವ, ಇನ್ನೂ ಉಳಿದಿದ್ದ ಯೌವನದ 
ಕಣ್ಣಿನ ಹೊಳಪನ್ನು ಮರೆಮಾಡುವಂಥ ನೆರೆತ ಪೊದೆಹುಬ್ಬುಗಳ ಪ್ರಿನ್ಸ್ ಕಾಣಿಸಿಕೊಂಡ 
ತಕ್ಷಣ ಕಾದಿದ್ದವರ ಮನಸ್ಸಿನಲ್ಲಿ ಭೀತಿಯ ಅಂಚನ್ನು ಮುಟ್ಟುವ ಅದೇ ಗೌರವ 
ತನ್ನಷ್ಟಕ್ಕೇ ಮೂಡುತ್ತಿತ್ತು. 

ಪ್ರಿನ್ಸ್ ಆಂಡ್ರ ಮತ್ತವನ ಹೆಂಡತಿ ಬರಬೇಕಾಗಿದ್ದ ದಿನ ಬೆಳಗ್ಗೆ, ಪ್ರಿನ್ಸೆಸ್ 
ಮೇರಿ ಪಾಠದ ಹೊತ್ತಿಗೆ ಎಂದಿನ ಹಾಗೆ ತಂದೆಗೆ ಗುಡ್ ಮಾರ್ನಿಂಗ್ 
ಹೇಳುವುದಕ್ಕೆಂದು ನಿಗದಿಯಾದ ಹೊತ್ತಿಗೆ ಸರಿಯಾಗಿ ಆಂಟಿ ಛೇಂಬರಿಗೆ ಬಂದಳು. 
ಎದೆಯಲ್ಲಿ ಭಯ ತುಂಬಿಕೊಂಡು ಮೌನವಾಗಿ ಪ್ರಾರ್ಥನೆ ಹೇಳಿಕೊಳ್ಳುತ್ತಾ 
ಶಿಲುಬೆಯಾಕಾರದಲ್ಲಿ ಕ್ರಾಸ್ ಮಾಡಿಕೊಂಡಳು. ಆಂಟಿ ಛೇಂಬರಿನ ಬಾಗಿಲಲ್ಲಿ 
ಕುಳಿತಿದ್ದ ಮುದಿ ಸೇವಕ ನಯವಾಗಿ ಎದ್ದು ನಿಂತು ಒಳಗೆ ಹೋಗಿ, ಅಮ್ಮಾ' 
ಅಂದ. 

ಬಾಗಿಲಾಚೆಯಿಂದ ಲೇಥ್‌ನ ಲಯಬದ್ದ ಸದ್ದು ಕೇಳುತ್ತಿತ್ತು. ಪ್ರಿನ್ಸೆಸ್ ಅಂಜುತ್ತಾ 
ಮೆಲ್ಲಗೆ ಬಾಗಿಲು ದೂಡಿದಳು. ಅಂಜಿಕೊಂಡು ಒಂದು ಕ್ಷಣ ಬಾಗಿಲಲ್ಲೇ ತಡೆದು 
ನಿಂತಳು . ಪ್ರಿನ್ಸ್ ಲೇಥ್‌ನ ಮುಂದೆ ನಿಂತು ಕೆಲಸಮಾಡುತ್ತಿದ್ದವನು ಒಮ್ಮೆ ತಿರುಗಿ 
ಅವಳ ಕಡೆಗೆ ಸುಮ್ಮನೆ ನೋಡಿ ತನ್ನ ಕೆಲಸ ಮುಂದುವರೆಸಿದ. . . 
- ಬೃಹದಾಕಾರದ ಆ ಸ್ಟಡಿ ರೂಮಿನಲ್ಲಿ ನಿರಂತರವಾಗಿ ಬಳಕೆಯಾಗುತ್ತಿದ್ದ 
ಅನೇಕ ವಸ್ತುಗಳು ತುಂಬಿಕೊಂಡಿದ್ದವು. ದೊಡ್ಡ ಮೇಜಿನ ಮೇಲೆ ಪುಸ್ತಕಗಳು 
ಪ್ಲಾನುಗಳು ಹರಡಿಕೊಂಡಿದ್ದವು. ಗೋಡೆಯುದ್ದಕ್ಕೂ ಪುಸ್ತಕಗಳು ತುಂಬಿದ ಗಾಜಿನ 
ಬೀರುಗಳು, ಒಂದೊಂದು ಬೀರುವಿನಲ್ಲೂ ನೇತಾಡುತ್ತಿದ್ದ ಬೀಗದ ಕೈಗಳು, 
ಎತ್ತರವಾದ ನಿಲುಮೇಜಿನ ಮೇಲೆ ತೆರೆದ ನೋಟುಬುಕ್ಕುಗಳು, ಹರಡಿಕೊಂಡಿದ್ದ 
ಮರಗೆಲಸದ ಹತ್ಯಾರುಗಳು , ನೆಲದಮೇಲೆ ಬಿದ್ದಿದ್ದ ಮರದ ಹೊಟ್ಟು ಇವೆಲ್ಲವೂ 


G 


೧೩೩ 


ಸಂಪುಟ ೧ - ಸಂಚಿಕೆ ಒಂದು 
ಅಲ್ಲಿ ಬಗೆಬಗೆಯ ಕೆಲಸಗಳು ನಿರಂತರವಾಗಿ ವ್ಯವಸ್ಥಿತವಾಗಿ ನಡೆಯುತ್ತಲೇ ಇವೆ 
ಅನ್ನುವುದನ್ನು ತೋರುತ್ತಿದ್ದವು. ಬೆಳ್ಳಿಯ ಅಂಚು ಕಟ್ಟಿದ ಟಾರ್ಟರ್ ಶೂ ಧರಿಸಿದ 
ಪುಟ್ಟ ಪಾದಗಳು ಪೆಡಲನ್ನು ಒತ್ತುತ್ತಿದ್ದ ರೀತಿ, ನರಗಳು ಎದ್ದು ಕಾಣುತ್ತಿದ್ದ ಪುಟ್ಟ 
ಕೈಗಳ ದೃಢತೆ ಇವು ಪ್ರಿನ್ಸ್‌ನಲ್ಲಿ ಇನ್ನೂ ಉಳಿದಿದ್ದ ಮುದಿ ಕಸುವನ್ನು ಎತ್ತಿ 
ತೋರುತ್ತಿದ್ದವು. ಲೇಥ್ ಒಂದೆರಡು ಸುತ್ತು ತಿರುಗಿದಮೇಲೆ ಪಾದವನ್ನು ಪೆಡಲಿನಿಂದೆತ್ತಿ, 
ಕೈಯಲ್ಲಿದ್ದ ಉಳಿಯನ್ನು ಒರೆಸಿ ಲೇಥಿಗೆ ಕಟ್ಟಿದ್ದ ಪುಟ್ಟ ಚರ್ಮದ ಚೀಲದಲ್ಲಿಟ್ಟು, 
ಮೇಜಿನ ಬಳಿಗೆ ಬರುತ್ತಾ ಮಗಳನ್ನು ಹತ್ತಿರಕ್ಕೆ ಕರೆದ. ಮಕ್ಕಳಿಗೆ ಎಂದೂ 
ಬಾಯಿತೆರೆದು ಹರಸಿದವನಲ್ಲವಾದ್ದರಿಂದ, ಅಂದು ಇನ್ನೂ ಕ್ಷೌರಮಾಡಿಕೊಳ್ಳದಿದ್ದ 
ಕುರುಚಲು ಗಡ್ಡದ ಕೆನ್ನೆಯನ್ನು ಮಗಳು ಚುಂಬಿಸಲೆಂದು ಮುಂದೊಡ್ಡಿ ಅದು 
ಹೇಗೋ ಕಾಠಿಣ್ಯ, ಶಿಸ್ತು, ಕಳಕಳಿ , ಪ್ರೀತಿ ತುಂಬಿದ ರೀತಿಯಲ್ಲಿ ಅವಳನ್ನು 
ನೋಡುತ್ತಾ ಗಡುಸಾದ ಧ್ವನಿಯಲ್ಲಿ ' ಚೆನ್ನಾಗಿದ್ದೀಯಾ? ಸರಿ , ಕೂತುಕೋ ' ಅಂದ. 

ತಾನೇ ಬರೆದಿದ್ದ ಜಾಮಿಟ್ರಿಯ ಪಾಠಗಳಿದ್ದ ಎಕ್ಸರ್ಸೆಸನ್ನು ಎತ್ತಿಕೊಂಡು, 
ಕಾಲಿನಿಂದ ಕುರ್ಚಿಯನ್ನು ಹತ್ತಿರಕ್ಕೆಳೆದುಕೊಂಡು ತಾನೂ ಕೂತ. 

- 'ಇದು ನಾಳೆಯ ಪಾಠ' ಅನ್ನುತ್ತಾ ಸರಿಯಾದ ಪುಟವನ್ನು ಹುಡುಕಿ ಒಂದು 
ಪ್ಯಾರಾದಿಂದ ಇನ್ನೊಂದರವರೆಗೆ ಗಟ್ಟಿಯಾದ ಉಗುರಿನಿಂದ ಒತ್ತಿ ಗೆರೆ ಎಳೆದು 
ಗುರುತುಮಾಡಿದ. ಪ್ರಿನ್ಸೆಸ್ ಮೇಜಿನ ಹತ್ತಿರ ಬಂದು, ಬಗ್ಗಿ , ಪುಸ್ತಕವನ್ನು 
ನೋಡುತ್ತಿದ್ದಾಗ ಇದ್ದಕ್ಕಿದ್ದ ಹಾಗೆ ಒಂದು ನಿಮಿಷ, ನಿನಗೊಂದು ಪತ್ರ ಬಂದಿದೆ' 
ಅಂದ ಪ್ರಿನ್ಸ್, ಹೆಣ್ಣು ಅಕ್ಷರಗಳಿದ್ದ ಪತ್ರವೊಂದನ್ನು ಮೇಜಿನ ಮೇಲೆನೇತುಹಾಕಿದ್ದ 
ಚೀಲದಿಂದ ತೆಗೆದು ಅವಳ ಮುಂದೆ ಎಸೆದ . 

ಪತ್ರವನ್ನು ಕಂಡ ತಕ್ಷಣ ಪ್ರಿನ್ಸೆಸ್‌ಳ ಮುಖ ಕೆಂಪಾಯಿತು. ತಟ್ಟನೆ ತೆಗೆದುಕೊಂಡು 
ನೋಡಿದಳು. 

“ನಿನ್ನ ಹೆಲಾಯಿಸ್ ಬರೆದಿದ್ದೋ ?' ಪ್ರಿನ್ಸ್ ಕೇಳಿದ. ಹಳದಿಗೆ ತಿರುಗಿದ್ದ, 
ಆದರೂ ಗಟ್ಟಿಯಾಗಿದ್ದ ಹಲ್ಲುಗಳು ಕಾಣುವ ಹಾಗೆ ತಣ್ಣಗೆ ನಕ್ಕ . 

- ' ಹೌದು, ಜೂಲಿ ಬರೆದಿದಾಳೆ' ಅಂಜುತ್ತಾ ನೋಡಿ, ಹಾಗೆಯೇ ಅಂಜುತ್ತಾ 
ಸಣ್ಣಗೆ ನಕ್ಕು ಪ್ರಿನ್ಸೆಸ್ ಹೇಳಿದಳು. 

- ' ಇನ್ನು ಎರಡು ಕಾಗದ ಹಾಗೇ ಕೊಡುತೇನೆ, ಮೂರನೆಯದು ಒಡೆದು 
ಓದಿ ನೋಡುತೇನೆ' ಪ್ರಿನ್ಸ್ ಕಠಿಣವಾಗಿ ಹೇಳಿದ. “ನೀವು ಹುಡುಗಿಯರು, ಕೆಲಸಕ್ಕೆ 
ಬಾರದ ಕಗ್ಗೆ ಬರೆದುಕೊಳ್ಳುತ್ತೀರಿ. ಮೂರನೆಯ ಕಾಗದ ನಾನೇ ಓದಿ ನೋಡುತೇನೆ.' 

' ಇದನ್ನೇ ಓದಿ , ಅಪ್ಪಾ' ಇನ್ನೂ ಕೆಂಪಾಗಿಯೇ ಇದ್ದ ಪ್ರಿನ್ಸೆಸ್ ಕಾಗದವನ್ನು 
ಕೊಟ್ಟಳು. 

'ಮೂರನೆಯದು! ಮೂರನೆಯದು ಅಂದದ್ದು ನಾನು!' ಕಾಗದವನ್ನು ಅತ್ತ 


೧೩೪ 

ಯುದ್ಧ ಮತ್ತು ಶಾಂತಿ 
ದಬ್ಬಿ , ಮೇಜಿನ ಮೇಲೆ ಮೊಳಕೈ ಊರಿ ಜಾಮಿಟ್ರಿಯ ಚಿತ್ರಗಳಿದ್ದ ಎಕ್ಸರ್‌ಸೈಜನ್ನು 
ತನ್ನತ್ತ ಎಳೆದುಕೊಂಡ ಪ್ರಿನ್ಸ್ 

“ಸರಿ, ಮೇಡಮ್' ಮುದುಕ ಶುರುಮಾಡಿದ. ಮಗಳು ಕೂತಿದ್ದ ಕುರ್ಚಿಯ 
ಬೆನ್ನಿನಮೇಲೆ ಒಂದು ಕೈಯೂರಿ ಮುಂದಕ್ಕೆ ಬಾಗಿ ಪಾಠ ಶುರುಮಾಡಿದ. 
ಚಿರಪರಿಚಿತವಾದ ಅಪ್ಪನ ಮುದಿತನದ ವಾಸನೆ, ಹೊಗೆಸೊಪ್ಪಿನ ಕಟು ವಾಸನೆಗಳಲ್ಲಿ 
ಪೂರಾ ಮುಳುಗಿ ಹೋದಂತೆ ಅನಿಸಿತು ಪ್ರಿನ್ಸೆಸ್‌ಗೆ. . 

'ನೋಡು, ಈ ಎಲ್ಲ ತ್ರಿಕೋನಗಳೂ ಸಮಭುಜ ತ್ರಿಕೋನಗಳು. ಕೋನ 
ಎಬಿಸಿ ಇದೆಯಲ್ಲಾ. ..' ಪ್ರಿನ್ಸೆಸ್ ಕಂಪಿಸುತ್ತಾ ತನ್ನ ಪಕ್ಕದಲ್ಲೇ ಅಷ್ಟು ಹತ್ತಿರ 
ಥಳಥಳಿಸುತ್ತಿದ್ದ ತಂದೆಯ ಕಣ್ಣು ನೋಡಿದಳು ; ಅವಳ ಮುಖದ ಕೆಂಪು ಹೆಚ್ಚಿತು; 
ಅವನು ಹೇಳಿದ್ದು ಏನೂ ಅರ್ಥವಾಗುತ್ತಿರಲಿಲ್ಲ; ಭಯ ಹೆಚ್ಚಾಗಿ ಅದರಿಂದಲೇ 
ತಂದೆ ಎಷ್ಟೆಷ್ಟು ಸ್ಪಷ್ಟವಾಗಿ ವಿವರಿಸಿದರೂ ಅದು ಅವಳಿಗೆ ತಿಳಿಯುತ್ತಿರಲಿಲ್ಲ . ಅದು 
ಗುರುವಿನ ತಪೋ ಶಿಷ್ಯಳ ತಪೋ ಅಂತೂ ದಿನವೂ ಹೀಗೆಯೇ ನಡೆಯುತ್ತಿತ್ತು. 
ಪ್ರಿನ್ಸೆಸ್ ಕಣ್ಣು ಮಂಜಾಗುತ್ತಿತ್ತು. ಏನೂ ಕಾಣುತ್ತಿರಲಿಲ್ಲ, ಕೇಳುತ್ತಿರಲಿಲ್ಲ. ಅಪ್ಪನ 
ಸುಕ್ಕುಗಟ್ಟಿದ ಕಠಿಣವಾದ ಮುಖ , ಅವನ ಉಸಿರು, ಉಸಿರಿನ ಹಳಸಲು ವಾಸನೆ 
ಇಷ್ಟು ಬಿಟ್ಟು ಬೇರೇನೂ ಮನಸ್ಸಿಗೆ ಇಳಿಯುತ್ತಿರಲಿಲ್ಲ. ಆದಷ್ಟೂ ಬೇಗ ತಪ್ಪಿಸಿಕೊಂಡು 
ಹೋಗಿ ತನ್ನ ಕೋಣೆಯಲ್ಲಿ ಶಾಂತವಾಗಿ ಕೂತು ಹೇಗಾದರೂ ಲೆಕ್ಕಬಿಡಿಸುವುದು 
ವಾಸಿ ಅಂದುಕೊಳ್ಳುತ್ತಿದ್ದಳು. ಮುದುಕನಿಗೆಕೋಪ ಹೆಚ್ಚುತ್ತಿತ್ತು. ಕೂತಿದ್ದ ಕುರ್ಚಿಯನ್ನು 
ಹಿಂದಕ್ಕೂ ಮುಂದಕ್ಕೂ ಸರಿಸುತ್ತಿದ್ದ .ಕೋಪ ಮಾಡಿಕೊಳ್ಳಬಾರದು, ದನಿ ಎತ್ತಬಾರದು 
ಎಂದು ಹೆಣಗುತ್ತಾ ಇದ್ದ; ಆದರೂ ಸ್ವಲ್ಪ ಹೊತ್ತಿನಲ್ಲೇ ಕೋಪ ಕೆರಳಿ ಜೋರಾಗಿ 
ಕೂಗಾಡಿ, ಮಗಳನ್ನು ಬೈದು ಪುಸ್ತಕವನ್ನು ಬೀಸಿ ಎಸೆದುಬಿಡುತ್ತಿದ್ದ . 

ಪ್ರಿನ್ಸೆಸ್ ತಪ್ಪು ಉತ್ತರ ಹೇಳಿದಳು . 

' ಪದ್ದೀ !' ಪ್ರಿನ್ಸ್ ಜೋರಾಗಿ ಅರಚಿದ. ಪುಸ್ತಕವನ್ನು ದೂರ ನೂಕಿ ತಟ್ಟನೆ 
ಮುಖ ತಿರುಗಿಸಿಕೊಂಡ . ಎದ್ದು ನಿಂತು ಶತಪಥ ಹಾಕಿದ. ಮಗಳ ಕೂದಲನ್ನು 
ಮೃದುವಾಗಿ ಮುಟ್ಟಿ ಮತ್ತೆ ಕುರ್ಚಿಯನ್ನೆಳೆದುಕೊಂಡು ಕೂತು ಪಾಠವನ್ನು ಇನ್ನೊಂದು 
ಸಾರಿ ಶುರುಮಾಡಿದ. 
- ' ಇದು ಹೀಗಾದರೆ ಆಗುವುದಿಲ್ಲ ಪ್ರಿನ್ಸೆಸ್‌, ಪ್ರಿನ್ಸೆಸ್ ಎಕ್ಸರ್‌ಸೈಜು ಮತ್ತೆ 
ಹೋಂವರ್ಕು ಎತ್ತಿಕೊಂಡು, ಪುಸ್ತಕ ಮುಚ್ಚಿ, ಹೊರಡಲು ಸಿದ್ದವಾದಾಗ ಮುದಿ 
ಪ್ರಿನ್ಸ್ ಹೇಳಿದ, ' ಗಣಿತ ಬಹಳ ದೊಡ್ಡದು! ನೀನು ಈ ಕಾಲದ ಉಳಿದ ಹೆಂಗಸರ 
ಹಾಗೆ ಪೆದ್ದಿಯಾಗಿ ಬೆಳೆಯಬಾರದು . ಅದು ನನ್ನ ಆಸೆ. ಗಮನ ಕೊಟ್ಟು ಅಭ್ಯಾಸ 
ಮಾಡು, ಸರಿ ಹೋಗತದೆ ' ಅಂದ. ಅವಳ ಗಲ್ಲವನ್ನು ಮೃದುವಾಗಿ ತಟ್ಟಿದ. 
'ಗಣಿತ ನಿನ್ನ ತಲೆಯಲ್ಲಿರುವ ಅಸಂಬದ್ದ ಯೋಚನೆಗಳನ್ನ ಹೊಡೆದು ಓಡಿಸುತ್ತದೆ' 


೧೩೫ 


ಸಂಪುಟ ೧ - ಸಂಚಿಕೆ ಒಂದು 


ಅಂದ. 

ಪ್ರಿನ್ಸೆಸ್ ಹೊರಟಳು. ನಿಲ್ಲು ಅನ್ನುವ ಹಾಗೆ ಸನ್ನೆ ಮಾಡಿದ . ಮೇಜಿನ ಡ್ರಾ 
ದಿಂದ ಹೊಸ ಪುಸ್ತಕವೊಂದನ್ನು ತೆಗೆದ. 'ನಿನ್ನ ಹೆಲಾಯಿಸ್ ಕಳಿಸಿದಾಳೆ, 'ಎ ಕೀ 
ಟು ದಿ ಮಿಸ್ಟರಿ, ರಹಸ್ಯದ ಕೀಲಿ,೩೧ ಅಂತೆ. ಧರ್ಮದ ವಿಚಾರ. ಬೇರೆಯವರ 
ನಂಬಿಕೆಗೆ ನಾನು ಅಡ್ಡಿ ಮಾಡಲ್ಲ... ಈ ಪುಸ್ತಕ ಕಣ್ಣಾಡಿಸಿದೇನೆ. ತಗೋ , ಹೊರಡು 
ಇನ್ನು .' 

ಅವಳ ಭುಜ ತಟ್ಟಿದ. ಅವಳ ಹಿಂದೆಯೇ ತಾನೂ ಹೋಗಿ 
ಬಾಗಿಲೆಳೆದುಕೊಂಡ. 

- ಪಿನೆಸ್ ಮೇರಿ ತನ್ನ ಕೋಣೆಗೆ ವಾಪಸ್ಸು ಬಂದಳು. ಮಂಕಾದ, ಭಯ 
ತುಂಬಿದ ನೋಟವು ಕಾಯಿಲೆಯವರಂಥ ಅವಳ ಸಾದಾ ಮುಖವನ್ನು ಇನ್ನೂ 
ತೀರಾ ಸಾದಾ ಆಗಿ ಕಾಣುವ ಹಾಗೆ ಮಾಡಿತ್ತು. ಸಣ್ಣ ಸಣ್ಣ ಚಿತ್ರಗಳು , ಪುಸ್ತಕಗಳು , 
ಹಾಳೆಗಳು ಹರಡಿಕೊಂಡಿದ್ದ ಬರೆಯುವ ಮೇಜಿನ ಮುಂದೆ ಕೂತಳು. ತಂದೆ 
ಎಷ್ಟರಮಟ್ಟಿಗೆ ಶಿಸ್ತಿನವನೋ ಇವಳು ಅಷ್ಟೇ ಅಶಿಸ್ತಿನವಳು. ಜಾಮಿಟ್ರಿ ಪುಸ್ತಕವನ್ನು 
ಬದಿಗೆ ಸರಿಸಿ, ಕಾತರದಿಂದ ಪತ್ರವನ್ನು ಒಡೆದಳು. ಅದನ್ನು ಅವಳ ಆತ್ಮೀಯ 
ಗೆಳತಿ, ಬಾಲ್ಯ ಸ್ನೇಹಿತೆ, ಜೂಲಿ ಕುರಾಗಿನ್, ರೋಸ್ಟೋವ್ರ ಮನೆಯಲ್ಲಿ ನೇಮ್ 
ಡೇ ಊಟಕ್ಕೆ ಬಂದಿದ್ದವಳು, ಬರೆದಿದ್ದಳು. ಕಾಗದ ಫ್ರೆಂಚ್ ಭಾಷೆಯಲ್ಲಿತ್ತು: 
* ಪ್ರಿಯ , ಶ್ರೇಷ್ಠ ಗೆಳತೀ , 

- ಹೀಗೆ ಒಬ್ಬರಿಂದ ಒಬ್ಬರು ಅಗಲಿ ದೂರವಿರುವುದೆಷ್ಟು ಭಯಂಕರ! ನನ್ನ 
ಅರ್ಧ ಜೀವ, ನನ್ನ ಬದುಕಿನ ಅರ್ಧ ಸಂತೋಷ ನಿನ್ನಲ್ಲೇ ಇವೆ, ನಾವು ಎಷ್ಟೇ 
ದೂರವಿದ್ದರೂ ನಮ್ಮ ಹೃದಯಗಳು ಬಿಡಿಸಲಾಗದ ಬಂಧನಕ್ಕೆ ಒಳಪಟ್ಟಿವೆ 
ಹೀಗೆಂದು ನಾನು ಎಷ್ಟೇ ಹೇಳಿಕೊಂಡರೂ ನನ್ನ ಹೃದಯ ವಿಧಿಯ ವಿರುದ್ಧವಾಗಿ 
ದಂಗೆಯೇಳುತ್ತದೆ. ನನ್ನ ಸುತ್ತಲೂ ಎಷ್ಟೇ ಸಂತೋಷಸಂಭ್ರಮಗಳಿದ್ದರೂ ನಾವಿಬ್ಬರೂ 
ಬೇರೆಯಾದ ಕ್ಷಣದಿಂದ ನನ್ನ ಎದೆಯಾಳದಲ್ಲಿ ಹುಟ್ಟಿಕೊಂಡ ದುಃಖವನ್ನು ಗೆಲ್ಲಲು 
ಆಗಿಲ್ಲ. ಹೋದ ಬೇಸಗೆಯಲ್ಲಿ, ನಿಮ್ಮ ಮನೆಗೆ ಬಂದಿದ್ದಾಗ, ದೊಡ್ಡ ಸ್ಟಡಿ 
ರೂಮಿನ ನೀಲಿಸೋಫಾದಮೇಲೆ, ಗುಟ್ಟುಗಳ ಸೋಫಾ ಅದು, ಮಾತಾಡಿಕೊಂಡಾಗ 
ಇದ್ದ ಹಾಗೆ ಈಗ ಯಾಕೆ ಒಪ್ಪಿಗೆ ಇಲ್ಲ ನಾವು? ಮೂರೇ ಮೂರು ತಿಂಗಳ ಹಿಂದೆ 
ನಿಮ್ಮ ಮನೆಗೆ ಬಂದು ಅಷ್ಟೊಂದು ಶಾಂತವಾದ, ಮನಸ್ಸಿನ ಆಳಕ್ಕೆ ಇಳಿಯುವ 
ನಿನ್ನ ನೋಟದಿಂದ ಪಡೆದುಕೊಂಡಿದ್ದ ಅಂಥ ನೈತಿಕ ಬಲವನ್ನು ಮತ್ತೆ ಪಡೆಯಲು 


೩೧ ಎ ಕೀ ಟು ದಿ ಮಿಸ್ಟರೀಸ್ ಆಫ್ ನೇಚರ್‌, ಕೆ. ಎಕ್ಕಾರ್ಟ್ಶಾಸನ್‌ನ ಪುಸ್ತಕ. ಆ ಕಾಲದಲ್ಲಿ 

ಅತ್ಯಂತ ಜನಪ್ರಿಯವಾಗಿತ್ತು . ಫ್ರೀ ಮೇಸನ್‌ಗಳು ಬಹಳವಾಗಿ ಓದುತ್ತಿದ್ದ ಪುಸ್ತಕ. 


೧೩೬ 

ಯುದ್ಧ ಮತ್ತು ಶಾಂತಿ 
ಆಗುತ್ತಿಲ್ಲವೇಕೆ? ಈಗ ಕಾಗದ ಬರೆಯುತ್ತಿರುವಾಗ ಕೂಡ ನಿನ್ನ ಮುಖ ನನ್ನ 
ಕಣ್ಣಿಗೆ ಕಟ್ಟಿದಂತಿದೆ. 
- ಇಷ್ಟು ಓದಿದ ಮೇಲೆ ಪ್ರಿನ್ಸೆಸ್ ಮೇರಿ ನಿಟ್ಟುಸಿರು ಬಿಟ್ಟಳು. ಬಲಗಡೆ ಇದ್ದ 
ನಿಲುವುಗನ್ನಡಿನೋಡಿದಳು. ಆಕರ್ಷಣೆ ಇರದ ಬಡಕಲು ಮೈ , ಬತ್ತಿದ ಮುಖ 
ಪ್ರತಿಫಲಿಸಿತು. ಯಾವಾಗಲೂ ಮಂಕಾಗಿರುತ್ತಿದ್ದ ಕಣ್ಣು ಮತ್ತಷ್ಟು ಹತಾಶವಾದ 
ಕಣ್ಣನ್ನೇ ಕಂಡಿತು. ಮತ್ತೆ ಪತ್ರ ಓದುವುದಕ್ಕೆ ತೊಡಗಿದಾಗ 'ಸುಮ್ಮನೆ ನನ್ನ 
ಹೊಗಳುತ್ತಿದಾಳೆ ' ಅಂದುಕೊಂಡಳು . ಜೂಲಿಯೇನೂ ಅವಳನ್ನು ಸುಮ್ಮನೆ 
ಹೊಗಳಿರಲಿಲ್ಲ. ಮೇರಿಯದು ಆಳವಾದ ದೊಡ್ಡ ಹೊಳೆಯುವ ಕಣ್ಣು (ಒಮ್ಮೊಮ್ಮೆ 
ಸ್ನೇಹ ಪ್ರೀತಿಯ ಕಿರಣ ಅದರಿಂದ ಹೊಮ್ಮುವ ಹಾಗಿತ್ತು). ಅವಳ ಮುಖ ಎಷ್ಟೇ 
ಸಾದಾ ಮುಖವಾಗಿದ್ದರೂ ಕಣ್ಣು ಮಾತ್ರ ಮನಸ್ಸು ಸೆಳೆಯುವ ಹಾಗಿತ್ತು. ಚೆಲುವಿಗಿಂತ 
ಮಿಗಿಲಾದ ಸೆಳೆತ ಅದರಲ್ಲಿತ್ತು. ಪ್ರಿನ್ಸೆಸ್ ತನ್ನ ಬಗ್ಗೆಯೇ ಚಿಂತೆ ಮಾಡದೆ ಇರುವಾಗ 
ಆ ಕಣ್ಣುಗಳಲ್ಲಿ ಇರುತ್ತಿದ್ದ ನೋಟದ ಚೆಲುವು ಅವಳಿಗೇ ಗೊತ್ತಿರಲಿಲ್ಲ. ಕನ್ನಡಿಯನ್ನು 
ನೋಡಿಕೊಂಡಾಗ ಎಲ್ಲರಿಗೂ ಆಗುವ ಹಾಗೆಯೇ ಅವಳ ಮುಖದಲ್ಲಿ ಒತ್ತಾಯದ, 
ಕೃತಕವಾದ, ಇಷ್ಟವಾಗದಂಥ ಭಾವ ಮೂಡುತ್ತಿತ್ತು . 

ಪ್ರಿನ್ಸೆಸ್ ಮೇರಿ ಮುಂದೆ ಓದಿದಳು: 

ಈಗ ಮಾಸ್ಕೋದಲ್ಲೆಲ್ಲಾ ಯುದ್ಧದ್ದೆ ಮಾತು. ನನ್ನ ಇಬ್ಬರು ಅಣ್ಣಂದಿರಲ್ಲಿ 
ಒಬ್ಬ ಆಗಲೇ ವಿದೇಶಕ್ಕೆ ಹೋಗಿದಾನೆ, ಇನ್ನೊಬ್ಬ ಗಾರ್ಡ್ ದಳಕ್ಕೆ ಸೇರಿದಾನೆ. 
ಇಷ್ಟರಲ್ಲಿ ಅವರು ಯುದ್ಧ ಭೂಮಿಗೆ ಹೋಗುತ್ತಾರೆ. ಚಕ್ರವರ್ತಿಯವರು 
ಪೀಟರ್ಸ್‌ಬರ್ಗಿನಿಂದ ಹೊರಟುಬಿಟ್ಟಿದಾರೆ. ಯುದ್ಧದ ಅಪಾಯಕ್ಕೆ ತಮ್ಮನ್ನೇ 
ಒಡ್ಡಿಕೊಳ್ಳುವುದು ಅವರ ಉದ್ದೇಶವಂತೆ. ಆ ಸರ್ವಶಕ್ತನು ಕರುಣೆಯಿಂದ ನಮ್ಮ 
ಚಕ್ರವರ್ತಿಯನ್ನಾಗಿಸಿರುವ ದೇವತೆಗೆ ಗೆಲುವು ಸಿಗಲಿ! ಯೂರೋಪಿನ ಶಾಂತಿಯನ್ನೆಲ್ಲ 
ನಾಶಮಾಡುತ್ತಿರುವ ಕಾರ್ಸಿಕನ್ ರಾಕ್ಷಸ ನಾಶವಾಗಲಿ! ನನ್ನ ಅಣ್ಣಂದಿರ 
ಸಮಾಚಾರವನ್ನು ಬಿಟ್ಟು ಹೇಳುವುದಾದರೆ ಈ ಯುದ್ದವು ನನ್ನ ಹೃದಯಕ್ಕೆ 
ಅತ್ಯಂತ ಪ್ರಿಯನಾದ ವ್ಯಕ್ತಿಯನ್ನು ನನ್ನಿಂದ ದೂರ ಮಾಡಿದೆ. ಅವನೇ ನಿಕೋಲಸ್ 
ರೋಸ್ಟೋವ್, ಇಂಥ ಹೊತ್ತಿನಲ್ಲಿ ನಿಷ್ಕ್ರಿಯನಾಗಿರಲು ಒಲ್ಲದ ಆ ಉತ್ಸಾಹಿ 
ಯೂನಿವರ್ಸಿಟಿಯನ್ನು ಬಿಟ್ಟು ಸೈನ್ಯಕ್ಕೆ ಸೇರಿದಾನೆ. ನಿನ್ನ ಹತ್ತಿರ ಮುಚ್ಚುಮರೆಯೇಕೆ 
ಮೇರಿ, ಹೇಳಿಬಿಡುತ್ತೇನೆ. ನವ ಯುವಕ ನಿಕೋಲಸ್ ಸೈನ್ಯಕ್ಕೆ ಸೇರಿರುವುದರಿಂದ 
ನನಗೆ ಬಹಳ ದುಃಖವಾಗಿದೆ. ಹೋದ ಬಾರಿ ನಿಮ್ಮಲ್ಲಿಗೆ ಬಂದಾಗ ಹೇಳಿದ್ದೆನಲ್ಲಾ, 
ಈ ಯುವಕ ಎಷ್ಟು ಉದಾತ್ತ ಎಂಥ ಉತ್ಸಾಹಿ ಅಂದರೆ ನಮ್ಮ ಕಾಲದಲ್ಲಿ ಇಪ್ಪತ್ತು 
ವಯಸ್ಸಿನ ಅಂಥ ಇನ್ನೊಬ್ಬ ತರುಣ ಇರುವುದಕ್ಕೆ ಸಾಧ್ಯವೇ ಇಲ್ಲ. ತುಂಬ 
ಪ್ರಾಮಾಣಿಕ , ಹೃದಯವಂತ. ಮತ್ತೆ ಅವನ ಮನಸ್ಸು ಎಷ್ಟು ಶುದ್ದ ! ಅವನು ಕವಿ! . . 


೧೩೭ 
ಸಂಪುಟ ೧ - ಸಂಚಿಕೆ ಒಂದು 
ನಮ್ಮದು ಅಲ್ಪ ಕಾಲದ ಸ್ನೇಹ ಸಂಬಂಧ ಮಾತ್ರವೇ ಆಗಿದ್ದರೂ ಅದು ನನ್ನ 
ಹೃದಯಕ್ಕೆ, ಈಗಾಗಲೇ ಇಷ್ಟೊಂದು ನರಳಿರುವ ನನ್ನ ಹೃದಯಕ್ಕೆ, ತಂಪೆರೆದಿದೆ. 
ಅವನು ಹೊರಟಾಗ ನಾವು ಏನೆಲ್ಲ ಮಾತಾಡಿದೆವು, ಹೇಗೆ ಅವನನ್ನು ಬೀಳ್ಕೊಟ್ಟೆ 
ಅನ್ನುವ ವಿವರವನ್ನೆಲ್ಲ ನಿನಗೆ ಇನ್ನೊಮ್ಮೆ ಹೇಳುತ್ತೇನೆ. ಅದೆಲ್ಲ ನನ್ನ ಮನಸ್ಸಿನಲ್ಲಿ 
ಇನ್ನೂ ಹಸಿರಾಗಿದೆ. ಪ್ರಿಯ ಗೆಳತೀ , ಗೆಳೆತನದ ಆನಂದ ಮತ್ತು ದುಃಖವನ್ನು 
ಅರಿಯದ ನೀನೇ ಪುಣ್ಯವಂತೆ. ಗೆಳೆತನದಲ್ಲಿ ಆನಂದಕ್ಕಿಂತ ದುಃಖವೇ ಹೆಚ್ಚು 
ಎಂಬುದನ್ನರಿಯದ ನೀನೇ ಅದೃಷ್ಟವಂತೆ. ಕೇವಲ ಗೆಳೆಯನಾಗುವುದಕ್ಕಿಂತ ಹೆಚ್ಚಿನ 
ಇನ್ನೇನೋ ಆಗುವಷ್ಟು ವಯಸ್ಸಾದವನಲ್ಲ ಕೌಂಟ್ ರೋಸ್ಟೋವ್, ಅದು ನನಗೆ 
ಗೊತ್ತು. ಆದರೆ ಈ ಸವಿಯಾದ ಗೆಳೆತನ , ಕಾವ್ಯದಂಥ ಶುದ್ದ ಆತ್ಮೀಯತೆ, ಇವು 
ನನಗೆ ಬೇಕಾಗಿದ್ದವು. ಅವನಲ್ಲಿ ಅದನ್ನೆಲ್ಲ ಪಡೆದೆ . ಈ ಮಾತು ಸಾಕು! 
- ಈಗ ಮಾಸ್ಕೋದಲ್ಲೆಲ್ಲ ದೊಡ್ಡ ಸುದ್ದಿಯೆಂದರೆ ಕೌಂಟ್ ಬೆಝುಕೋವ್‌ನ 
ಸಾವು ಮತ್ತೆ ಅವನ ಆಸ್ತಿಯ ವಿಚಾರ. ನಿನಗೆ ಗೊತ್ತಾ, ಮೂರು ಜನ ಪ್ರಿನ್ಸೆಸ್‌ಗಳಿಗೆ 
ತೀರ ಕಡಮೆ ಆಸ್ತಿ ಸಿಕ್ಕಿದೆ, ಪ್ರಿನ್ಸ್ ವ್ಯಾಸಿಲಿಗೆ ಏನೇನೂ ಸಿಕ್ಕಿಲ್ಲ, ಮಿಸ್ಟರ್ ಪಿಯರೆಗೆ 
ಎಲ್ಲ ಆಸ್ತಿಯೂ ಸಿಕ್ಕಿದೆ, ಮತ್ತೆ ಅವರು ಕಾನೂನು ಬದ್ದ ಉತ್ತರಾಧಿಕಾರಿ ಎಂದು 
ಚಕ್ರವರ್ತಿ ಘೋಷಿಸಿದ್ದೂ ಆಗಿದೆ. ಈಗ ಪಿಯರೆಯೇ ಕೌಂಟ್ ಬೆಝುಕೋವ್ 
ಮತ್ತು ಇಡಿ ರಶಿಯಾದಲ್ಲೇ ಅತ್ಯಂತ ಶ್ರೀಮಂತ, ಈ ವ್ಯವಹಾರದಲ್ಲೆಲ್ಲ ಪ್ರಿನ್ಸ್ 
ವ್ಯಾಸಿಲಿ ದುಷ್ಪಪಾತ್ರವನ್ನು ವಹಿಸಿದ್ದ ಅನ್ನುವ ಸುದ್ದಿಗಳು ಹರಡಿವೆ. ಈಗ ತೀರ 
ಬೇಜಾರುಮಾಡಿಕೊಂಡು ಪೀಟರ್ಸ್‌ಬರ್ಗಿಗೆ ವಾಪಸ್ಸಾಗಿದಾನಂತೆ. ವಿಲ್ಲು, 
ಉತ್ತರಾಧಿಕಾರ, ಆಸ್ತಿ ಹಕ್ಕು ಇಂಥ ವಿಚಾರಗಳ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ . 
ಆದರೆ ನಾವು ಇದುವರೆಗೂ ಸುಮ್ಮನೆ ಪಿಯರೆ ಎಂದು ಕರೆಯುತ್ತಿದ್ದ ಯುವಕ 
ಈಗ ಕೌಂಟ್ ಬೆಝುಕೋವ್ಆಗಿ, ಇಡೀ ರಶಿಯಾದಲ್ಲೇ ಅತಿ ದೊಡ್ಡ ಪ್ರಮಾಣದ 
ಆಸ್ತಿಗೆ ಒಡೆಯನಾಗಿರುವುದು ಮಾತ್ರ ಗೊತ್ತು. ಮದುವೆಯ ವಯಸ್ಸಿಗೆ ಬಂದಿರುವ 
ಹೆಣ್ಣುಮಕ್ಕಳ ತಾಯಂದಿರು ಇದ್ದಕ್ಕಿದ್ದ ಹಾಗೆ ಅವನಿಗೆ ಗೌರವ ತೋರಿಸುತಿರುವುದು 
ಕಂಡು ತಮಾಷೆ ಅನ್ನಿಸುತ್ತಿದೆ. ಮತ್ತೆ ವಯಸ್ಸಿಗೆ ಬಂದ ಹುಡುಗಿಯರೂ ಹಾಗೇ 
ಆಡುತ್ತಿದಾರೆ. ಅವನು ನನಗೆ ತೀರ ಸಾಮಾನ್ಯ ಬಡ ಮನುಷ್ಯ ಅಂತಲೇ ಅನ್ನಿಸುತದೆ. 
ಈ ವಿಚಾರ ನಿನ್ನಲ್ಲೇ ಇರಲಿ, 

ಕಳೆದ ಎರಡು ವರ್ಷಗಳಿಂದ ನನಗೆ ಯಾವ ಯಾವದೋ ಗಂಡು 
ಹುಡುಕುವ ಪ್ರಯತ್ನದಲ್ಲಿ ಮುಳುಗಿದಾರೆ ಎಲ್ಲರೂ . ಹಾಗೆ ಹುಡುಕುತ್ತಿರುವ 
ಎಷ್ಟೋ ಜನರ ಹೆಸರು ಕೂಡ ನನಗೆ ಗೊತ್ತಿಲ್ಲ. ಮಾಸ್ಕೋದ ಮದುವೆ ಸುದ್ದಿ 
ಸಮಾಚಾರದ ಗಾಸಿಪ್ಪುಗಳನ್ನು ನಂಬುವುದಾದರೆ ನಾನು ಪಿಯರೆಯನ್ನು 
ಮದುವೆಯಾಗಿ ಕೌಂಟೆಸ್ ಬೆಝುಕೋವಾ ಆಗುತೇನಂತೆ, ಆದರೆ ನನಗಂತೂ 


೧೩೮ 

ಯುದ್ಧ ಮತ್ತು ಶಾಂತಿ 
ಆ ಹುದ್ದೆಯನ್ನು ಪಡೆದುಕೊಳ್ಳುವ ಆಸೆಯಿಲ್ಲ. ಮದುವೆಯ ವಿಚಾರ 
ಹೇಳುತ್ತಿರುವಾಗಲೇ ಇನ್ನೊಂದು ಮಾತು : ಜಗತ್ತಿನ ಎಲ್ಲರ ಆಂಟಿ ಆಗಿರುವ 
ಅನ್ನಾ ಮಿಖಾಯ್ತಾ ಇದ್ದಾರಲ್ಲ ಅವರು, ಯಾರಿಗೂ ಈ ವಿಚಾರ 
ತಿಳಿಸಬಾರದೆಂದು ಹೇಳಿ, ನನಗೆ ಕೆಲವು ದಿನಗಳ ಹಿಂದೆ ಹೇಳಿದರು. ಅದು ನಿನ್ನ 
ಮದುವೆಯ ವಿಚಾರ . ಪ್ರಿನ್ಸ್ ವ್ಯಾಸಿಲಿಯ ಮಗ ಅನತೋಲ್ ಇದ್ದಾನಲ್ಲ ಅವನಿಗೆ 
ಯಾರಾದರೂ ಶ್ರೀಮಂತ ಮನೆತನದ ಹುಡುಗಿಯನ್ನು ತಂದುಕೊಳ್ಳಬೇಕು, ಅದರಿಂದ 
ಅವನು ಸುಧಾರಿಸಬಹುದು ಎಂದು ಯೋಚನೆಮಾಡುತಾ ಇದಾರೆ. ಅವನ 
ನೆಂಟರೆಲ್ಲ ಸೇರಿ ನೀನೇ ಅದಕ್ಕೆ ತಕ್ಕವಳು ಎಂದು ಆಯ್ಕೆಮಾಡಿದಾರೆ, ನಿನಗೆ 
ಏನನ್ನಿಸುತ್ತದೋ ಗೊತ್ತಿಲ್ಲ. ಅವನು ನೋಡುವುದಕ್ಕೆ ತುಂಬ ಚೆನ್ನಾಗಿದ್ದಾನಂತೆ, 
ಮಹಾ ಪೋಕರಿಯಂತೆ. ಅವನ ಬಗ್ಗೆ ನನಗೆ ತಿಳಿದದ್ದು ಅಷ್ಟೆ. ನಿನಗೆ ಬರೆಯುತ್ತ 
ಬರೆಯುತ್ತ ಎರಡನೆಯ ಹಾಳೆ ತುಂಬುತ್ತಿದೆ . ಅಪ್ರಾಕ್ಸಿನ್ ಅವರ ಮನೆಗೆ ಊಟಕ್ಕೆ 
ಹೋಗಬೇಕು, ರೆಡಿಯಾಗು ಎಂದು ಮಮ್ಮಾ ಹೇಳಿಕಳಿಸಿದ್ದಾರೆ ಆಗಲೇ . ಒಂದು 
ಆಧ್ಯಾತ್ಮದ ಪುಸ್ತಕ ನಿನಗೆ ಕಳುಹಿಸಿದ್ದೇನೆ. ಇಲ್ಲಿ ಎಲ್ಲರೂ ಹುಚ್ಚು ಹಿಡಿದವರ ಹಾಗೆ 
ಅದನ್ನು ಓದುತ್ತಿದಾರೆ. ಮನುಷ್ಯ ಮಾತ್ರದವರಿಗೆ ಅರ್ಥವಾಗದ ಎಷ್ಟೋ ಸಂಗತಿಗಳು 
ಆ ಪುಸ್ತಕದಲ್ಲಿವೆ. ಆದರೂ ಅದನ್ನು ಓದಿದರೆ ಆತ್ಮದ ಶಾಂತಿಯೂ ಉನ್ನತಿಯೂ 
ಲಭಿಸತ್ತವೆ. ಬಾಯ್! ನಿನ್ನ ಪೂಜ್ಯ ತಂದೆಯವರಿಗೆ ನನ್ನ ನಮಸ್ಕಾರಗಳನ್ನು 
ತಿಳಿಸು, ಮೇಡಂ ಬೋರೀನ್ ಅವರಿಗೆ ನನ್ನ ನೆನಪುಗಳು. ನಿನಗೆ ನನ್ನ ಪ್ರೀತಿಯ 
ಆಲಿಂಗನಗಳು. 

ಜೂಲಿ. 

ಮರೆತಮಾತು: ನಿನ್ನ ಅಣ್ಣ ಮತ್ತು ಅವನ ಮುದ್ದು ಪುಟ್ಟ ಹೆಂಡತಿಯ 
ವಿಚಾರ ತಿಳಿಸು. 

ಪ್ರಿನ್ಸೆಸ್ ಸ್ವಲ್ಪ ಹೊತ್ತು ಸುಮ್ಮನಿದ್ದಳು . ದುಃಖವೂ ಕಿರುನಗುವೂ ಸೇರಿ 
ಹೊಳಪಿನ ಕಣ್ಣುಗಳು ಬೆಳಗುತ್ತಾ ಅವಳ ಇಡೀ ಮುಖವನ್ನೇ ಪೂರಾ 
ಬದಲಾಯಿಸಿಬಿಟ್ಟಿದ್ದವು. ತಟ್ಟನೆ ಎದ್ದಳು. ಭಾರವಾದ ಹೆಜ್ಜೆ ಹಾಕುತ್ತಾ ಮೇಜಿನ 
ಹತ್ತಿರಕ್ಕೆ ಹೋದಳು. ಹಾಳೆಯೊಂದನ್ನು ಎತ್ತಿಕೊಂಡಳು. ಕೈ ಸರಸರನೆ ಹಾಳೆಯ 
ಮೇಲೆ ಓಡುತ್ತಾ ಬರೆಯಿತು. ಅವಳು ಬರೆದ ಉತ್ತರವೂ ಫ್ರೆಂಚಿನಲ್ಲಿತ್ತು: 

ಪ್ರಿಯ ಶ್ರೇಷ್ಠ ಗೆಳತಿ, ೧೩ನೆಯ ತಾರೀಕಿನ ನಿನ್ನ ಪತ್ರ ಓದಿ ತುಂಬ 
ಸಂತೋಷವಾಗಿದೆ. ನನ್ನ ಬಗ್ಗೆ ಇನ್ನೂ ಪ್ರೀತಿ ಇದೆಯಲ್ಲ ರೊಮಾಂಟಿಕ್ ಜೂಲಿ! 
ವಿರಹದ ಬಗ್ಗೆ, ಬೇರ್ಪಡುವ ಬಗ್ಗೆ ಏನೇನೋ ಹೇಳಿರುವೆಯಲ್ಲ, ಆ ಪರಿಣಾಮ 
ನಿನ್ನ ಮೇಲೆ ಏನೂ ಆದಂತೆ ಕಾಣುವುದಿಲ್ಲ. ನಾನೇನು ಹೇಳಲಿ ? ನನಗೆ 
ಪ್ರಿಯರಾದವರು ಯಾರೂ ನನ್ನ ಹತ್ತಿರ ಇಲ್ಲವಲ್ಲಾ ? ನಮ್ಮ ಮನಸ್ಸಿಗೆ ಸಮಾಧಾನ 


೧೩೯ 
ಸಂಪುಟ ೧ - ಸಂಚಿಕೆ ಒಂದು 
ತರುವುದಕ್ಕೆ ಧರ್ಮ ಎಂಬುದೊಂದು ಇರದಿದ್ದರೆ ಬದುಕೇ ದುರ್ಭರವಾಗುತಿತ್ತು. 
ಯುವಕನೊಬ್ಬನ ಬಗ್ಗೆ ನಿನ್ನಲ್ಲಿ ಪ್ರೀತಿ ಮೂಡಿದೆ ಎಂಬ ಕಾರಣಕ್ಕೆ ನಾನು 
ನಿಷ್ಠುರಳಾಗುತ್ತೇನೆ ಎಂದೇಕೆ ' ಭಾವಿಸುವೆ ? ಇಂಥ ವಿಷಯಗಳಲ್ಲಿ ನನ್ನ ಬಗ್ಗೆ 
ನಾನೇ ನಿಷ್ಣುರಳಾಗಿರುತ್ತೇನೆ. ಬೇರೆಯವರಲ್ಲಿರುವ ಪ್ರೀತಿಯ ಭಾವನೆ ನನಗೆ 
ಅರ್ಥವಾಗುತ್ತದೆ, ಆದರೆ ಸ್ವತಃ ನಾನೇ ಎಂದೂ ಅಂಥ ಭಾವನೆಯನ್ನು 
ಅನುಭವಿಸಿಲ್ಲದಿರುವುದರಿಂದ , ಅದನ್ನು ನಾನು ಮೆಚ್ಚಲೂ ಸಾಧ್ಯವಿಲ್ಲ, ನಿಂದಿಸಲೂ 
ಸಾಧ್ಯವಿಲ್ಲ . ನನಗನ್ನಿಸುವುದು ಇಷ್ಟೆ : ಕ್ರಿಶ್ಚಿಯನ್ ಪ್ರೀತಿ ಇದೆಯಲ್ಲ - ನೆರೆಯವರ 
ಬಗ್ಗೆ ಪ್ರೀತಿ, ಶತ್ರುವಿನ ಬಗ್ಗೆ ಪ್ರೀತಿ, ಅದು ನಿನ್ನಂಥ ರೊಮಾಂಟಿಕ್ ಹುಡುಗಿಯಲ್ಲಿ 
ಸುಂದರ ಯುವಕನ ಕಣ್ಣಿನ ನೋಟ ಹುಟ್ಟಿಸುವ ಪ್ರೀತಿಗಿಂತ ಯೋಗ್ಯವಾದದ್ದು, 
ಮಧುರವಾದದ್ದು, ಉನ್ನತವಾದದ್ದು. 
- ಕೌಂಟ್ ಬೆಝುಕೋವ್‌ನ ಸಾವಿನ ಸಮಾಚಾರ ನಿನ್ನ ಪತ್ರ ಬರುವುದಕ್ಕೆ 
ಮೊದಲೇ ಇಲ್ಲಿಗೆ ತಲುಪಿತ್ತು. ಅದನ್ನು ಕೇಳಿ ತಂದೆಯವರು ಬಹಳ ಕಳವಳಪಟ್ಟರು. 
“ಕೌಂಟ್ ಬೆಝುಕೋವ್ಕಳೆದ ಮಹಾನ್ ಶತಮಾನದ ಉಜ್ವಲ ಪ್ರತಿನಿಧಿ; ಅವನ 
ಕಾಲ ಮುಗಿಯಿತು, ಇನ್ನು ನನ್ನ ಸರದಿ, ಸಾಧ್ಯವಾದಷ್ಟೂ ತಡವಾಗಿ ಬರುವಂತೆ 
ಎಲ್ಲ ಪ್ರಯತ್ನಮಾಡುತೇನೆ' ಎನ್ನುತ್ತಿದಾರೆ ತಂದೆಯವರು. ಅಂಥ ಅನಾಹುತ 
ಆಗದಂತೆ ದೇವರು ಕಾಪಾಡಲಿ! ಪಿಯರೆಯ ಬಗ್ಗೆ ನೀನು ಹೇಳಿದ ಮಾತುಗಳನ್ನು 
ಒಪ್ಪಲಾರೆ. ನಾನು ಚಿಕ್ಕವಳಾಗಿದ್ದಾಗಿನಿಂದ ಅವನನ್ನು ನೋಡಿದ್ದೇನೆ. ತುಂಬ 
- ಒಳ್ಳೆಯ ಹೃದಯ ಅವನದು. ಜನರ ಹೃದಯವಂತಿಕೆಗೆ ಬೆಲೆ ಕೊಡುವವಳು 
ನಾನು. ಇನ್ನು ಅವನಿಗೆ ದೊರೆತ ಆಸ್ತಿ, ಆ ವಿಚಾರದಲ್ಲಿ ಪ್ರಿನ್ಸ್ ವ್ಯಾಸಿಲಿಯ 
ಕುತಂತ್ರ ಇವುಗಳ ಬಗ್ಗೆ ಹೇಳುವುದಾದರೆ, ಹೀಗಾಗಬಾರದಿತ್ತು ಅನ್ನಿಸುತ್ತದೆ ನನಗೆ . 
ಸೂಜಿಯ ಕಣ್ಣಿನಲ್ಲಿ ಒಂಟೆ ಬೇಕಾದರೂ ತೂರಿ ಹೋದೀತು, ಆದರೆ 
ಶ್ರೀಮಂತನಾದವನು ಸ್ವರ್ಗದ ಬಾಗಿಲಿನ ಮೂಲಕ ಸಾಗುವುದು ಬಹಳ ಕಷ್ಟ 
ಎಂದು ನಮ್ಮ ರಕ್ಷಕ ಹೇಳಿದ ಮಾತಿದೆಯಲ್ಲ ಅದು ಭಯಂಕರವಾದ ಸತ್ಯ . ಪ್ರಿನ್ಸ್ 
ವ್ಯಾಸಿಲಿಯ ಬಗ್ಗೆ ಅಯ್ಯೋ ಪಾಪ ಅನ್ನಿಸುತ್ತದೆ. ಅದಕ್ಕಿಂತ ಮಿಗಿಲಾಗಿ ಪಿಯರೆಯ 
ಬಗ್ಗೆ ಮರುಕ ಹುಟ್ಟುತ್ತದೆ. ಇಷ್ಟು ಚಿಕ್ಕ ವಯಸ್ಸಿಗೇ ಇಂಥ ಶ್ರೀಮಂತಿಕೆಯ ಭಾರ 
ಹೊರಬೇಕಾಗಿ ಬಂದಿದೆಯಲ್ಲ - ಯಾವ ಯಾವ ಪ್ರಲೋಭನೆಗಳಿಗೆ ಒಳಗಾಗುತ್ತಾನೋ 
ಅವನು! ಈ ಜಗತ್ತಿನಲ್ಲಿ ನಿನಗೆ ಬೇಕಾದುದೇನು ಎಂದು ಯಾರಾದರೂ ಕೇಳಿದರೆ 
ಬಡ ಭಿಕ್ಷುಕನಿಗಿಂತ ಕಡು ಬಡವಳಾಗಿರುವುದೇ ನನ್ನ ಆಸೆ ಅನ್ನುತ್ತೇನೆ. ಮಾಸ್ಕೋದಲ್ಲಿ 
ಎಲ್ಲರೂ ಓದುತ್ತಿರುವ ಆ ಪುಸ್ತಕವನ್ನು ನನಗೆ ಕಳುಹಿಸಿದ್ದಕ್ಕೆ ಥ್ಯಾಂಕ್ಸ್ ಅದರಲ್ಲಿ 
ಅನೇಕ ಒಳ್ಳೆಯ ವಿಷಯಗಳಿವೆ, ಆದರೆ ಮನುಷ್ಯರಿಗೆ ಅರ್ಥವಾಗದ ಎಷ್ಟೋ 
ಸಂಗತಿಗಳಿವೆ ಎಂದು ಹೇಳಿದ್ದೀಯೆ. ಅರ್ಥವಾಗದ ಸಂಗತಿಯನ್ನು ಕುರಿತು 


೧೪೦ 

ಯುದ್ಧ ಮತ್ತು ಶಾಂತಿ 
ಓದುವುದರಿಂದ ಸಮಯ ವ್ಯರ್ಥವಾಗುತ್ತದೆಯಷ್ಟೇ ! ಆಧ್ಯಾತ್ಮದ ನಿಗೂಢ ಪುಸ್ತಕಗಳನ್ನು 
ಓದುತ್ತಾ ಮನಸ್ಸಿಗೆ ಗೊಂದಲ ಮಾಡಿಕೊಂಡು, ಬುದ್ದಿಯನ್ನು ಕೆರಳಿಸಿಕೊಳ್ಳುವುದಕ್ಕೆ , 
ಕ್ರಿಶ್ಚಿಯನ್ ಸರಳತೆಗೆ ವಿರುದ್ಧವಾಗಿ ಅತಿ ಉತ್ತೇಕ್ಷೆ ಮಾಡುವುದಕ್ಕೆ ಕೆಲವು ಜನ 
ಇಷ್ಟಪಡುತ್ತಾರೆ . ಅದು ಯಾಕೋ , ನನಗಂತೂ ತಿಳಿಯುವುದಿಲ್ಲ . ಅದರ ಬದಲು 
ನಾವು ಎಪಿಸಲ್‌ಗಳನ್ನೂ ಗಾಸ್ಟೆಲ್‌ಗಳನ್ನೂ ಓದೋಣ. ಅವುಗಳಲ್ಲಿರುವ 
ನಿಗೂಢತೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವುದು ಬೇಡ. ನಾವು ಪರಮ 
ಪಾಪಿಗಳು. ಅನಂತತೆಗೆ ಅಡ್ಡಿಯಾಗಿರುವ ಈ ದೇಹವನ್ನು ಹೊತ್ತಿರುವಾಗಲೇ 
ಪವಿತ್ರವೂ ಭಯಂಕರವೂ ಆದ ದೈವಿಕ ಸತ್ಯಗಳನ್ನು ಹೇಗೆ ತಾನೇ ಅರಿಯಬಲ್ಲೆವು? 
ಅದಕ್ಕೆ ಬದಲಾಗಿ ನಾವು ಈ ಲೋಕದಲ್ಲಿ ಹೇಗೆ ಬದುಕಬೇಕೆಂದು ಮಾರ್ಗದರ್ಶನ 
ಮಾಡುವುದಕ್ಕೆ ನಮ್ಮ ರಕ್ಷಕ ಬಿಟ್ಟು ಹೋಗಿರುವ ದಿವ್ಯ ನಿಯಮಗಳನ್ನು 
ಅರ್ಥಮಾಡಿಕೊಂಡು ಪಾಲಿಸೋಣ. ನಮ್ಮ ದುರ್ಬಲವಾದ ಮನುಷ್ಯ ಮನಸ್ಸನ್ನು 
ಅದಕ್ಕೆ ಬೇಕಾದಂತೆ ಅಲೆಯುವುದಕ್ಕೆ ಬಿಡದೆ ದೇವರನ್ನು ಮೆಚ್ಚಲು ಪ್ರಯತ್ನಿಸೋಣ. 
ದೇವರು ತನ್ನ ಮುಖಾಂತರ ಬರದಿರುವ ಎಲ್ಲ ಜ್ಞಾನವನ್ನೂ ನಿರಾಕರಿಸುತ್ತಾನೆ. 
ನಮ್ಮಿಂದ ಅವನು ಅಡಗಿಸಿಟ್ಟಿರುವ ಜ್ಞಾನವನ್ನು ಹೊಂದಲು ಪ್ರಯತ್ನಿಸದೆ ಇದ್ದರೆ 
ಅವನೇ ತನ್ನ ದಿವ್ಯತೆಯ ಮೂಲಕ ಅದನ್ನು ನಮಗೆ ತಿಳಿಸಿಕೊಡುತ್ತಾನೆ. 

- ನನ್ನ ಮದುವೆಯ ವಿಚಾರವಾಗಿ ತಂದೆಯವರು ಏನೂ ಹೇಳಿಲ್ಲ. ಪ್ರಿನ್ಸ್ 
ವ್ಯಾಸಿಲಿಯವರಿಂದ ಒಂದು ಪತ್ರ ಬಂದಿದೆ, ಅವರು ಇಷ್ಟರಲ್ಲಿ ನಮ್ಮ ಭೇಟಿಗೆ 
ಬರುತ್ತಾರೆ ಎಂದಷ್ಟೇ ಹೇಳಿದಾರೆ. ಮದುವೆಯ ವಿಚಾರ ಹೇಳುವುದಾದರೆ, ಗೆಳತೀ , 
ಅದು ಪವಿತ್ರವಾದ ಒಂದು ಬಂಧ , ನಾವು ಅದನ್ನು ಒಪ್ಪಬೇಕು ಅನ್ನಿಸುತ್ತದೆ. 
ಸರ್ವಶಕ್ತನಾದ ದೇವರು ನಾನು ಮದುವೆಯಾಗಿ, ಹೆಂಡತಿಯಾಗಿ, ತಾಯಿಯಾಗಿ 
ನನ್ನ ಕರ್ತವ್ಯವನ್ನು ನಿರ್ವಹಿಸಬೇಕೆಂದು ಬಯಸುವುದಾದರೆ ನನಗೆ ಸಿಗುವ 
ಗಂಡ ಎಂಥವನೇ ಆಗಿರಲಿ, ಅವನ ಬಗ್ಗೆ ನನಗೆ ಏನೇನು ಅನ್ನಿಸುತ್ತದೆ ಎಂದು 
ಪರೀಕ್ಷಿಸುತ್ತಾ ಕೂರುವುದಿಲ್ಲ . ನನಗೆ ಎಷ್ಟೇ ವೇದನೆಯಾದರೂ ನನ್ನ ಪಾಲಿನ 
ಕರ್ತವ್ಯವನ್ನು ನಾನು ನಿರ್ವಹಿಸುತ್ತೇನೆ. ಅಣ್ಣ ಆಂಡೂ ಕಾಗದ ಬರೆದಿದಾನೆ. 
ಹೆಂಡತಿಯನ್ನೂ ಕರೆದುಕೊಂಡು ಶೀಘ್ರದಲ್ಲೇ ಬಾಲ್ ಹಿಲ್ಸ್‌ಗೆ ಬರುತಾನಂತೆ. 
ಆದರೆ ಈ ಸಂತೋಷ ಬಹುಕಾಲವಿರುವುದಿಲ್ಲ. ಯಾಕೆಂದರೆ ಅವನು ಯುದ್ಧಕ್ಕೆ 
ಹೋಗುತಾನಂತೆ. ಈ ಯುದ್ಧದದಲ್ಲಿ ನಾವೆಲ್ಲ ಸಿಕ್ಕಿಬಿದ್ದಿದೇವೆ. ಈ ಯುದ್ಧ ಯಾಕೋ 
ಏನೋ , ದೇವರಿಗೇ ಗೊತ್ತು. ಜಗತ್ತಿನ ಎಲ್ಲ ಸಂಗತಿಗಳ ಕೇಂದ್ರವಾಗಿರುವಂಥ 
ನಗರದಲ್ಲಿ ನೀನು ಇದೀಯಾ, ಅಲ್ಲಿ ಮಾತ್ರವಲ್ಲ, ಪ್ರಶಾಂತವಾದ ವಾತಾವರಣ, 
ಹಳ್ಳಿಗಾಡಿನ ನೆಮ್ಮದಿಯ ಬದುಕು ಎಂದು ನಗರದವರು ಅಂದುಕೊಳ್ಳುತ್ತಾರಲ್ಲ, 
ಅಂಥ ಇಲ್ಲೂ ಯುದ್ದದ್ದೇ ಮಾತು. ತಂದೆಯವರಂತೂ ದಾಳಿ, ಪ್ರತಿದಾಳಿ ಇಂಥ 


ಸಂಪುಟ ೧ - ಸಂಚಿಕೆ ಒಂದು 

೧೪೧ 
ವಿಷಯಗಳನ್ನು ಬಿಟ್ಟು ಬೇರೆಯ ಮಾತೇ ಆಡುವುದಿಲ್ಲ. ಅವು ಏನೂ ನನಗೆ 
ಅರ್ಥವಾಗುವುದಿಲ್ಲ . ನಿನ್ನೆಯಲ್ಲ ಮೊನ್ನೆ ಹಳ್ಳಿಯಲ್ಲಿ ವಾಕ್ ಮಾಡುತ್ತಿದ್ದಾಗ 
ಹೃದಯವನ್ನು ಭೇದಿಸುವಂಥ ದೃಶ್ಯವನ್ನು ನೋಡಿದೆ. ಸೈನ್ಯಕ್ಕೆ ಸೇರಿಸಿಕೊಳ್ಳಲು 
ಯುವಕರನ್ನೆಲ್ಲ ಬಲವಂತವಾಗಿ ಕರೆದೊಯ್ಯುತ್ತಿದ್ದರು. ಅವರ ತಾಯಂದಿರು , 
ಹೆಂಡಿರು, ಮಕ್ಕಳು ಬಿಕ್ಕಿ ಬಿಕ್ಕಿ ಅಳುತಿದ್ದರು. ನೋವನ್ನು ಮರೆತು ಕ್ಷಮಿಸಬೇಕು, 
ಪ್ರೀತಿಸಬೇಕು ಎಂದು ನಮ್ಮ ರಕ್ಷಕ ಹೇಳಿದ ಮಾತನ್ನು ಲೋಕ ಮರೆತೇಬಿಟ್ಟಿದೆ 
ಅನ್ನಿಸುತ್ತದೆ. ಒಬ್ಬರನ್ನೊಬ್ಬರು ಕೊಲ್ಲುವ ಕೌಶಲವೇ ಅತಿ ದೊಡ್ಡ ಸಂಗತಿ ಎಂದು 
ಜನ ತಿಳಿದಿದಾರೆ. 

ನಮ್ಮ ದಿವ್ಯ ರಕ್ಷಕ, ಮತ್ತವನ ಪವಿತ್ರ ಮಾತೆ ನಿನ್ನನ್ನು ಹರಸಲಿ , ಕಾಪಾಡಲಿ. 


ಮೇರಿ. 

'ಆಹಾ, ಪತ್ರ ಕಳಿಸುತ್ತಿದೀರಾ ಮಿನ್ನೆಸ್ ? ನಾನು ಆಗಲೇ ನನ್ನ ಪತ್ರ ಕಳಿಸಿಬಿಟ್ಟೆ. 
ಅಮ್ಮನಿಗೆ ಕಾಗದ ಬರೆದಿದ್ದೆ' ಮೇಡಮ್ ಬೋರೀನ್ ಮುಗುಲ್ನಗುತ್ತಾ ಕೇಳಿದಳು. 
ಹಿತವಾದ ಮಧುರವಾದ ಧ್ವನಿಯಲ್ಲಿ ' ರ' ಕಾರಗಳನ್ನು ಗಂಟಲಿನ ಆಳದಿಂದ 
ಉಚ್ಚರಿಸುತ್ತಾ ಮಾತಾಡುತಿದ್ದಳು . ಪ್ರಿನ್ಸೆಸ್ ಮೇರಿಯ ಕಠಿಣ, ದುಃಖ ಭರಿತ , 
ಮಂಕು ಲೋಕದಲ್ಲಿ ಮೇಡಮ್ ಬೋರೀನ್ ಲಘು ಹೃದಯದ, ಸ್ವಯಂ ತೃಪ್ತಿಯ , 
ಯಾವುದೇ ಹೊಣೆಗಾರಿಕೆ ಇಲ್ಲದಂಥ ಹೊಸ ವಾತಾವರಣವನ್ನು ಸೃಷ್ಟಿಸುತ್ತಿದ್ದಳು. 
“ ಹುಷಾರಾಗಿರಿ ಪ್ರಿನ್ಸೆಸ್ ' ಇದ್ದಕ್ಕಿದ್ದಂತೆ ದನಿ ತಗ್ಗಿಸಿ, ತನ್ನ ಧ್ವನಿಯನ್ನು ತಾನೇ 
ಆನಂದಿಸುತ್ತಾ ಉತ್ತೇಕ್ಷಿತ ಹುಡುಗಾಟದ ರೀತಿಯಲ್ಲಿ ಹೇಳಿದಳು . 'ಇವತ್ತು ಪ್ರಿನ್ಸ್ 
ಮೈಖೆಲ್ ಇವಾನೊವಿಚ್‌ನನ್ನು ಸಿಕ್ಕಾಪಟ್ಟೆ ಬೈಯುತ್ತಿದ್ದರು. ಇವತ್ತು ಅವರ ಮೂಡು 
ಚೆನ್ನಾಗಿಲ್ಲ. ಹುಷಾರಾಗಿರಿ .' 

- 'ನೋಡುಫ್ರೆಡ್, ನನ್ನ ತಂದೆಯ ಮೂಡುಗಳ ಬಗ್ಗೆ ನನಗೇನೂ ಹೇಳಬೇಡ. 
ಅವರ ಬಗ್ಗೆ ನಾನು ಯಾವ ರೀತಿಯಲ್ಲೂ ಜಡ್ಡು ಮಾಡುವುದಿಲ್ಲ, ಬೇರೆಯವರು 
ಮಾಡಿದರೂ ಇಷ್ಟವಾಗುವುದಿಲ್ಲ' ಎಂದಳು ಪ್ರಿನ್ಸೆಸ್. . 

ಪ್ರಿನ್ಸೆಸ್ ಗಡಿಯಾರ ನೋಡಿಕೊಂಡಳು. ಕ್ಲಾವಿಕಾರ್ಡ್ ವಾದ್ಯದ ಅಭ್ಯಾಸಕ್ಕೆ 
ಐದು ನಿಮಿಷ ತಡವಾಗಿಬಿಟ್ಟಿದೆ ಎಂದು ಆತಂಕ ಪಡುತ್ತಾ ಸಿಟಿಂಗ್ ರೂಮಿಗೆ 
ಹೋದಳು. ಪ್ರತಿದಿನವೂ ಮಧ್ಯಾಹ್ನ ಹನ್ನೆರಡರಿಂದ ಎರಡು ಗಂಟೆಯವರೆಗೆ 
ಪ್ರಿನ್ಸ್ ವಿಶ್ರಾಂತಿಪಡೆಯಬೇಕು, ಪ್ರಿನ್ಸೆಸ್ ಕ್ಲಾವಿಕಾರ್ಡ್ ನುಡಿಸಬೇಕು ಎಂದು 
ನಿಗದಿಯಾಗಿತ್ತು. 


೨೩ 


ನೆರೆಗೂದಲ ಮುದುಕ ಸೇವಕ ಆಂಟಿರೂಮಿನಲ್ಲಿ ಕೂತು ತೂಕಡಿಸುತ್ತಾ 


೧೪೨ 

ಯುದ್ಧ ಮತ್ತು ಶಾಂತಿ 
ದೊಡ್ಡ ಸ್ಟಡಿ ರೂಮಿನಿಂದ ಕೇಳಿಸುತ್ತಿದ್ದ ಪ್ರಿನ್ಸ್‌ನ ಗೊರಕೆಯ ಶಬ್ದವನ್ನು ಆಲಿಸುತ್ತಿದ್ದ . 
ಮನೆಯ ಇನ್ನೊಂದು ತುದಿಯಿಂದ ಮುಚ್ಚಿದ ಬಾಗಿಲುಗಳನ್ನೂ ದಾಟಿ, ಡಸೆಕ್೩ 
ಎಂಬ ವಾಗ್ಗೇಯಕಾರನ ಸೊನಾಟಾವನ್ನು ಇಪ್ಪತ್ತು ಬಾರಿ ಮತ್ತೆ ಮತ್ತೆ ನುಡಿಸಿ 
ಅಭ್ಯಾಸ ಮಾಡಿಕೊಳ್ಳುತ್ತಿರುವುದು ಕೇಳಿಸುತ್ತಿತ್ತು. 

- ಎರಡು ಸಾರೋಟುಗಳು , ಒಂದು ದೊಡ್ಡದು ಇನ್ನೊಂದು ಚಿಕ್ಕದು, ಮನೆಯ 
ಮುಂದೆ ಬಂದು ನಿಂತವು. ಪ್ರಿನ್ಸ್ ಆಂಡೂ ಸಾರೋಟಿನಿಂದ ಮೊದಲು ಇಳಿದು 
ಪುಟ್ಟ ರಾಜಕುಮಾರಿ ಇಳಿಯುವುದಕ್ಕೆ ಸಹಾಯ ಮಾಡಿದ. ಅವಳೇ ಮೊದಲು 
ಮನೆಯ ಮೆಟ್ಟಿಲು ಏರುವುದಕ್ಕೆ ದಾರಿ ಬಿಟ್ಟು ತಾನೂ ಹಿಂಬಾಲಿಸಿದ. ವಿಗ್ 
ತೊಟ್ಟಿದ್ದ ಮುದುಕ ಸೇವಕ ತಿಕಾನ್, ಆಂಟಿರೂಮಿನ ಬಾಗಿಲು ತೆರೆದು ಇಣುಕಿದ. 
ಪ್ರಿನ್ಸ್ ನಿದ್ರೆ ಮಾಡುತಿದ್ದಾರೆ ಎಂದು ಪಿಸುಮಾತಿನಲ್ಲಿ ಹೇಳಿ ಮತ್ತೆ ಬಾಗಿಲು 
ಮುಂದಿಟ್ಟುಕೊಂಡ. ಬಂದದ್ದು ಮಗನೇ ಆಗಿರಲಿ , ಅಥವಾ ಜಗತ್ತಿನಲ್ಲೇ ಏನೇ 
ವಿಶೇಷ ಸಂಭವಿಸಲಿ, ಮನೆಯ ದಿನನಿತ್ಯದ ವೇಳಾಪಟ್ಟಿ ಬದಲಾಗುವುದಕ್ಕೆ ಕಿಂಚಿತ್ತೂ 
ಅವಕಾಶವಿಲ್ಲವೆಂದು ತಿಕಾನ್‌ಗೆ ಗೊತ್ತಿತ್ತು. ಪ್ರಿನ್ಸ್ ಆಂಡೂ ಕೂಡ ಅದನ್ನು 
ಬಲ್ಲವನಾಗಿದ್ದ. ಕಳೆದಬಾರಿ ತಂದೆಯನ್ನು ನೋಡಿದ್ದಕ್ಕೂ ಈಗಿಗೂ ಅವರ 
ಅಭ್ಯಾಸದಲ್ಲಿ ಏನಾದರೂ ಬದಲಾವಣೆ ಆಗಿದೆಯೋ ಅನ್ನುವುದನ್ನು ಪರೀಕ್ಷಿಸುವ 
ಹಾಗೆ ಗಡಿಯಾರನೋಡಿಕೊಂಡ. ಹಾಗೆ ಏನೂ ಬದಲಾಗಿಲ್ಲವೆಂದು ಕಂಡುಕೊಂಡು 
ಹೆಂಡತಿ ಕಡೆಗೆ ತಿರುಗಿ ' ಇನ್ನು ಇಪ್ಪತ್ತು ನಿಮಿಷಕ್ಕೆ ಅಪ್ಪ ಏಳುತಾರೆ. ನಾವು 
ಮೇರಿಯ ರೂಮಿಗೆ ಹೋಗೋಣ' ಅಂದ. 
- ಈ ನಡುವೆ ಪುಟ್ಟ ರಾಜಕುಮಾರಿ ಕೊಂಚ ದಪ್ಪಗಾಗಿದ್ದರೂ ಮುದ್ದು 
ಮುದ್ದಾಗಿ ಸಂತೋಷವಾಗಿ ಮಾತಾಡುವಾಗ ನವಿರು ರೋಮಗಳಿರುವ ಅವಳ 
ಪುಟ್ಟ ತುಟಿ ಎಂದಿನ ಹಾಗೆ ತುಸು ಮೇಲೇರಿತು. ಕಣ್ಣಿನಲ್ಲಿ ನಗು ತುಳುಕಿತು. 
“ ಅಯ್ಯೋ , ಇದು ಅರಮನೆ ಇದ್ದ ಹಾಗಿದೆ!' ಸುತ್ತಲೂ ಕಣ್ಣಾಡಿಸುತ್ತಾ , ಬಾಲ್ 
ಡಾನ್ಸನ್ನು ಏರ್ಪಡಿಸಿದ ಆತಿಥೇಯನನ್ನು ಅತಿಥಿ ಮೆಚ್ಚಿಕೊಳ್ಳುವ ಹಾಗೆ ಗಂಡನಿಗೆ 
ಹೇಳಿದಳು. 

- “ ಬೇಗ, ಬೇಗ ಬನ್ನಿ .' ಇನ್ನೂ ಸುತ್ತಲೂ ಕಣ್ಣಾಡಿಸುತ್ತಾ ಮುದುಕ ತಿಕಾನ್, 
ತನ್ನ ಗಂಡ, ತಮ್ಮ ಸಹಾಯಕ್ಕೆ ಬಂದ ಸೇವಕ ಎಲ್ಲರ ಕಡೆಗೆ ಮುಗುಳು ನಗು 
ಬೀರುತ್ತಿದ್ದಳು. 

'ಮೇರಿ ಅಲ್ಲವಾ ಸಂಗೀತ ಅಭ್ಯಾಸ ಮಾಡುತ್ತಾ ಇರುವುದು ? ಸೈಲೆಂಟಾಗಿ 
ಹೋಗಿ ಆಶ್ಚರ್ಯ ಆಗುವ ಹಾಗೆ ಮಾಡೋಣ' ಅಂದಳು . ಪ್ರಿನ್ಸ್ ಆಂಡ್ರ 
೩೨ ಜಾನ್ ಲಾಡಿಸ್ಲಾವ್ ಡೆಸೈಕ್ , ಬೊಹಿಮಿಯಾದಲ್ಲಿ ಹುಟ್ಟಿ ಪ್ಯಾರಿಸ್‌ನಲ್ಲಿ ಸತ್ತ ( ೧೭೬೦ - ೧೮೧೨) 

ಪಿಯಾನೋ ವಾದಕ ಮತ್ತು ರಚನಕಾರ. ಯೂರೋಪಿನಲ್ಲೆಲ್ಲ ಜನಪ್ರಿಯನಾಗಿದ್ದ . 


೧೪೩ 
ಸಂಪುಟ ೧ - ಸಂಚಿಕೆ ಒಂದು 
ಸೌಜನ್ಯಪೂರ್ಣವಾಗಿ, ಆದರೆ ನಿರಾಶೆಯ ಮುಖಭಾವ ಹೊತ್ತು ಅವಳ ಹಿಂದೆ 
ಹೆಜ್ಜೆ ಹಾಕಿದ. 
- 'ವಯಸ್ಸಾದ ಹಾಗೆ ಕಾಣುತೀ ತಿಕಾನ್' ತನ್ನ ಕೈಯನ್ನು ಚುಂಬಿಸಿದ ಮುದುಕ 
ಸೇವಕನಿಗೆ ಹೇಳಿದಳು. ಕ್ಲಾವಿಕಾರ್ಡ್ ಸಂಗೀತದ ಸದ್ದು ಕೇಳಿಬರುತ್ತಿದ್ದ ಕೋಣೆಯನ್ನು 
ತಲುಪುವ ಮೊದಲೇ ಮುದ್ದು ಮುಖದ, ಸುಂದರ ತಲೆಗೂದಲ ಫ್ರೆಂಚ್ ಹೆಂಗಸು 
ಬೋರೀನ್ ಓಡಿ ಬಂದಳು. ಸಂತೋಷದಿಂದ ಮೈಮರೆತಿದ್ದಳು. ಕೊನೆಗೂ 
ಬಂದಿರಲ್ಲ ಪ್ರಿನ್ಸೆಸ್ ! ನಾನು ಹೋಗಿನೀವು ಬಂದಿರುವ ಸಮಾಚಾರ ಹೇಳುತ್ತೇನೆ' 
ಅಂದಳು . 

'ಬೇಡ, ಬೇಡ, ಫೀಸ್!...ನೀವು ಮೇಡಮ್ ಬೋರೀನ್ ಇರಬೇಕಲ್ಲಾ ?” 
ಅವಳ ಕೆನ್ನೆಯನ್ನು ಚುಂಬಿಸುತ್ತಾ ಪುಟ್ಟ ರಾಜಕುಮಾರಿ ಕೇಳಿದಳು. ನನ್ನ ನಾದಿನಿ 
ಬರೆದ ಕಾಗದದಲ್ಲಿ ನಿಮ್ಮ ಬಗ್ಗೆ ತುಂಬ ಹೇಳಿದಾಳೆ, ನೀವು ಅವಳ ಗೆಳತಿ 
ಅಲ್ಲವಾ ? ನಾವು ಬರುವುದು ಗೊತ್ತಾ ಅವಳಿಗೆ ?” 

ಎಲ್ಲರೂ ದಿವಾನಖಾನೆಯ ಬಾಗಿಲಿಗೆ ಬಂದರು. ಬಾಗಿಲ ಆಚೆಯಿಂದ 
ಸೊನಾಟಾದ ಒಂದೇ ಸಾಲನ್ನು ಮತ್ತೆ ಮತ್ತೆ ನುಡಿಸುತ್ತಿರುವ ಸದ್ದು ಕೇಳಿಸುತ್ತಿತ್ತು . 
ಇಷ್ಟವಿರದ ಏನೋ ಆಗಲಿದೆ ಅನ್ನುವ ಹಾಗೆ ಪ್ರಿನ್ಸ್ ಅಲ್ಲೇ ನಿಂತು ಮುಖ 
ಹಿಂಡಿಕೊಂಡ. 

- ಪುಟ್ಟ ರಾಜಕುಮಾರಿಕೋಣೆಯೊಳಕ್ಕೆ ಕಾಲಿಟ್ಟಳು. ಸಂಗೀತ ತಟ್ಟನೆ ನಿಂತಿತು. 
ಚೀರಿದ ಸದ್ದು ಕೇಳಿತು. ಪ್ರಿನ್ಸೆಸ್ ಮೇರಿಯ ಭಾರವಾದ ಹೆಜ್ಜೆ ಸದ್ದು, ಮುತ್ತಿಡುವ 
ಸದ್ದು ಕೇಳಿಸಿತು. ಪ್ರಿನ್ಸ್ ಆಂಡೂ ಕೋಣೆಯೊಳಕ್ಕೆ ಕಾಲಿಟ್ಟಾಗ ಮದುವೆಯ 
ಸಮಯದಲ್ಲಿ ಸ್ವಲ್ಪ ಹೊತ್ತು ಮಾತ್ರ ಒಬ್ಬರನ್ನೊಬ್ಬರು ಕಂಡಿದ್ದ ಇಬ್ಬರು ಪ್ರಿನ್ಸೆಸ್‌ಗಳು 
ಆಲಂಗಿಸಿಕೊಂಡು ಅವರವರ ತುಟಿಗಳು ಎಲ್ಲೆಲ್ಲಿ ತಗಲುತ್ತವೋ ಅಲ್ಲೆಲ್ಲ 
ಮುತ್ತುಕೊಟ್ಟುಕೊಳ್ಳುತ್ತ ಇದ್ದರು. ಮೇಡಮ್ ಬೋರೀನ್ ಎದೆಯಮೇಲೆ ಕೈ 
ಇಟ್ಟುಕೊಂಡು ಅಳುವುದಕ್ಕೂ ನಗುವುದಕ್ಕೂ ಸಿದ್ದಳಾಗಿರುವವಳ ಹಾಗೆ ನಿಂತಿದ್ದಳು. 
ಪ್ರಿನ್ಸ್ ಆಂಡೂ ಭುಜ ಕೊಡವಿಕೊಂಡು, ಸಂಗೀತ ಪ್ರೇಮಿಗಳು ಅಪಸ್ವರವನ್ನು 
ಕೇಳಿದಾಗ ಮಾಡುವ ಹಾಗೆ ಹುಬ್ಬು ಗಂಟಿಕ್ಕಿದ. ಇಬ್ಬರು ಹೆಂಗಸರೂ ಅಪ್ಪುಗೆ 
ಸಡಿಲಿಸಿದರು. ಮತ್ತೆ ಎಲ್ಲಿ ತೀರ ತಡವಾದೀತೋ ಅನ್ನುವ ಹಾಗೆ ಒಬ್ಬರ ಕೈಗೆ 
ಒಬ್ಬರು ಮುತ್ತಿಟ್ಟುಕೊಂಡರು. ಹಿಂದೆ ಸರಿದರು . ಮತ್ತೆ ಅಪ್ಪಿಕೊಂಡರು. ಮತ್ತೆ 
ಮುಖಕ್ಕೆ ಮುತ್ತಿಟ್ಟರು. ಪ್ರಿನ್ಸ್ ಆಂಡ್ರ ಗೆ ಆಶ್ಚರ್ಯವಾಗುವ ಹಾಗೆ ಒಟ್ಟಿಗೆ 
ಅಳುತ್ತಾ ಮತ್ತೆ ಮತ್ತೆ ಮುತ್ತಿಟ್ಟುಕೊಂಡರು. ಮೇಡಮ್ ಬೋರೀನ್ ಕೂಡ 
ಅಳುತ್ತಿದ್ದಳು . ಆಂಡ್ರ ಗೆ ಕಸಿವಿಸಿಯಾಗುತ್ತಿತ್ತು. ಆದರೆ ಇಬ್ಬರೂ ಹೆಂಗಸರು 
ತಾವು ಹೀಗೆ ಅಳುವುದು ತೀರ ಸಹಜ , ಬಹುಕಾಲವಾದಮೇಲೆ 


೧೪೪ 


ಯುದ್ಧ ಮತ್ತು ಶಾಂತಿ 
ಭೇಟಿಯಾಗುತ್ತಿರುವಾಗ ಅಳದೆ ಹೇಗಿರುವುದು ಅನ್ನುವ ಭಾವನೆ ತುಂಬಿಕೊಂಡಿದ್ದರು. 

“ಆಹ್ , ಮೈ ಡಿಯರ್!” “ ಆಹ್, ಮೇರಿ!” ಎಂದು ಇಬ್ಬರೂ ಒಟ್ಟಿಗೆ ಉದ್ದಾರ 
ತೆಗೆದರು. ನಕ್ಕರು. ' ನಿನ್ನೆ ರಾತ್ರಿ ನನಗೆ ಕನಸು ಬಿದ್ದಿತ್ತು...' ' ನಾವು ಬರುತ್ತೇವೆ ಅಂತ 
ಗೊತ್ತಿರಲಿಲ್ಲವಾ...' “ಆಹ್, ಮೇರಿ, ಸೊರಗಿ ಹೋಗಿದ್ದೀಯೆ...' 'ನೀವು, ಮೈ 
ತುಂಬಿಕೊಂಡಿದೀರಿ...' 

'ಪ್ರಿನ್ಸೆಸ್‌ನ ನೋಡಿದ ತಕ್ಷಣ ಗುರುತುಸಿಕ್ಕಿಬಿಟ್ಟಿತು ನನಗೆ...' ಮೇಡಮ್ 
ಬೋರೀನ್ ಹೇಳಿದಳು. 

- 'ಗೊತ್ತೇ ಇರಲಿಲ್ಲ...ಓಹೋ , ಆಂಡೂ , ನಿನ್ನ ನೋಡಲೇ ಇಲ್ಲ...' ಮೇರಿ 
ಉದ್ದಾರ ತೆಗೆದಳು. ಪ್ರಿನ್ಸ್ ಆಂಡ್ರ ಮತ್ತು ಮೇರಿ ಒಬ್ಬರ ಕೈ ಒಬ್ಬರು ಹಿಡಿದು 
ಚುಂಬಿಸಿದರು. 'ನೀನಿನ್ನೂ ಅದೇ ಅಳುಬುರುಕಿ' ಅಂದ ಆಂಡೂ ಪ್ರಿನ್ಸೆಸ್ 
ಮೇರಿ ತನ್ನ ದೊಡ್ಡ ಹೊಳೆಯುವ ಕಣ್ಣಲ್ಲಿ ನೀರು ತುಂಬಿಕೊಂಡು ಅಣ್ಣನ 
ಮುಖವನ್ನೇ ಪ್ರೀತಿಯಿಂದ ನೋಡುತ್ತಾ ಆ ಕ್ಷಣದಲ್ಲಿ ಬಹಳ ಸುಂದರವಾಗಿ 
ಕಾಣುತ್ತಿದ್ದ ತನ್ನ ಮುಖವನ್ನು ಅವನ ಕೆನ್ನೆಯಮೇಲೆ ಒತ್ತಿದಳು. 
ಈ ಪುಟ್ಟ ರಾಜಕುಮಾರಿ ಒಂದೇ ಸಮ ಮಾತನಾಡುತ್ತಿದ್ದಳು . ನವಿರು 
ರೋಮಗಳಿರುವ ಅವಳ ತುಟಿ ಒಂದೇ ಸಮ ಮೇಲೂ ಕೆಳಗೂ ಚಲಿಸುತ್ತಾ, 
ಅಗತ್ಯವಿದ್ದಾಗ ಕೆಳತುಟಿಯನ್ನು ಒತ್ತುತ್ತಾ ಅವಳು ನಕ್ಕಾಗ ಮೇಲೇರಿ ಹೊಳೆಯುವ 
ಹಲ್ಲುಗಳ ಸಾಲು ಕಾಣುವಂತೆ ಮಾಡುತ್ತಾ ಇತ್ತು. ಸ್ವಾಸಿ ಬೆಟ್ಟ ದಾಟುವಾಗ ಆದ 
ಅಪಘಾತ , ತಾನಿರುವ ಸ್ಥಿತಿಯಲ್ಲಿ ಏನು ಬೇಕಾದರೂ ಆಗಬಹುದಾಗಿತ್ತು ಅಂದಳು; 
ತಟ್ಟನೆ, ಅಯ್ಯೋ , ನನ್ನ ಬಟ್ಟೆಗಳನ್ನೆಲ್ಲಾ ಪೀಟರ್ಸ್‌ಬರ್ಗಿನಲ್ಲೇ ಬಿಟ್ಟು ಬಂದೆ, ಇಲ್ಲಿ 
ಡೆಸ್ತುಗಳು ಬೇಕಾದಾಗ ಏನು ಮಾಡಲಿ ಅಂತ ಪೇಚಾಡಿಕೊಂಡಳು; ಗಂಡ 
ಆಂಡೂ ತುಂಬ ಬದಲಾಗಿಬಿಟ್ಟಿದ್ದಾನೆ ಅಂದಳು ; ಕಿಟಿ ಓದ್ಮಾವಾಯಾರೋ 
ಮುದುಕನನ್ನು ಮದುವೆಯಾದಳು ಅಂದಳು; ಮೇರಿಗೆ ಒಂದು ಗಂಡು ಬಂದಿದೆ, 
ಸತ್ಯವಾಗಲೂ , ಅದನ್ನೆಲ್ಲ ಆಮೇಲೆ ಹೇಳುತ್ತೇನೆ ಅಂದಳು. 
ಆ ತನ್ನ ಸುಂದರವಾದ ಕಣ್ಣಿನಲ್ಲಿ ಪ್ರೀತಿಯನ್ನೂ ದುಃಖವನ್ನೂ ತುಂಬಿಕೊಂಡು 
ಪ್ರಿನ್ಸೆಸ್ ಮೇರಿ ಅಣ್ಣನ ಮುಖವನ್ನೇ ನೋಡುತ್ತಿದ್ದಳು. ತನ್ನ ಅತ್ತಿಗೆ ಹೇಳುತ್ತಿದ್ದ 
ಮಾತುಗಳಿಗಿಂತ ಬೇರೆಯದೇ ಆಲೋಚನೆಗಳ ಅಲೆ ಅವಳ ಮನಸ್ಸಿನಲ್ಲಿ ಏಳುತ್ತಿತ್ತು. 
ಪೀಟರ್ಸ್‌ಬರ್ಗಿನ ಇತ್ತೀಚಿನ ಪಾರ್ಟಿಯ ವಿಚಾರ ಹೇಳುತ್ತಾ ನಡುವೆ ಅತ್ತಿಗೆ ಸ್ವಲ್ಪ 
ಮಾತು ನಿಲ್ಲಿಸಿದಾಗ ಅಣ್ಣನನ್ನು ಕೇಳಿದಳು : ' ನಿಜವಾಗಲೂ ಯುದ್ಧಕ್ಕೆ 
ಹೋಗುತಿದೀಯಾ, ಅಣ್ಣಾ?” ನಿಟ್ಟುಸಿರು ಬಿಟ್ಟಳು. 

ಲಿಸ್ಪಿಯೂ ಉಸಿರು ಬಿಟ್ಟಳು. 
' ಹೂಂ . ನಾಳೆಯೇ ಹೊರಟೆ' ಅಂದ ಅಣ್ಣ. 


೧೪೫ 


- 


- 


' ನನ್ನೊಬ್ಬಳನ್ನೇ ಬಿಟ್ಟು ಹೋಗುತಿದಾರೆ. ಯಾಕೋ ಏನೋ , ದೇವರಿಗೇ 
ಗೊತ್ತು. ಇಲ್ಲೇ ಇದ್ದು ಪ್ರಮೋಶನ್...' ಪ್ರಿನ್ಸೆಸ್ ಮೇರಿ ಅತ್ತಿಗೆಯ ಮಾತನ್ನು 
ಪೂರ್ತಿ ಕೇಳಿಸಿಕೊಳ್ಳಲಿಲ್ಲ. ತನ್ನ ಮನಸ್ಸಿನಲ್ಲಿದ್ದ ಆಲೋಚನೆಯ ಎಳೆಯನ್ನೇ 
ಹಿಡಿದು, ಅತ್ತಿಗೆಯ ಮುಖವನ್ನೊಮ್ಮೆ ಉಬ್ಬಿದ ಹೊಟ್ಟೆಯನ್ನೊಮ್ಮೆ ಪ್ರೀತಿಯಿಂದ 
ನೋಡಿದಳು. 
* 'ಗ್ಯಾರಂಟಿ ಆಗಿದೆಯಾ?” ಎಂದು ಕೇಳಿದಳು . 

ಪುಟ್ಟ ರಾಜಕುಮಾರಿಯ ಮುಖ ಬದಲಾಯಿತು. ನಿಟ್ಟುಸಿರಿಟ್ಟಳು. 'ಹೌದು, 
ತುಂಬ ಭಯವಾಗುತ್ತದೆ...' ಅಂದಳು . ತುಟಿಗಳನ್ನು ಒತ್ತಿಕೊಂಡಳು. ನಾದಿನಿಯ 
ಮುಖದತ್ತ ಬಾಗಿ ಇದ್ದಕ್ಕಿದ್ದ ಹಾಗೆ ಅಳುವುದಕ್ಕೆ ಶುರುಮಾಡಿದಳು. 

“ಅವಳಿಗೆ ವಿಶ್ರಾಂತಿ ಬೇಕು' ಪ್ರಿನ್ಸ್ ಆಂಡೂ ಹುಬ್ಬು ಗಂಟಿಕ್ಕಿಕೊಂಡು 
ಹೇಳಿದ, “ ಅಲ್ಲವಾ ಲಿಸ್ತೀ ? ಅವಳನ್ನು ನಿನ್ನ ಕೋಣೆಗೆ ಕರೆದುಕೊಂಡು ಹೋಗು. 
ನಾನು ಹೋಗಿ ಅಪ್ಪನನ್ನು ಕಂಡುಬರುತ್ತೇನೆ. ಹೇಗಿದಾರೆ? ಹಾಗೇ ಇದಾರೋ 
ಏನಾದರೂ ಬದಲಾಗಿದಾರೋ ? ” 
- ' ಹಾಗೇ ಇದಾರೆ, ನಿನಗೇನನ್ನಿಸುತ್ತದೋ ನೋಡು' ಪ್ರಿನ್ಸೆಸ್ ನಗುನಗುತ್ತಾ 
ಹೇಳಿದಳು. 

' ಅದೇ ಹಳೆಯ ವೇಳಾಪಟ್ಟಿ ? ಸಾಲು ಮರಗಳ ನಡುವೆ ವಾಕಿಂಗು, 
ಆಮೇಲೆಲೇಥ್?” ತಂದೆಯ ಬಗ್ಗೆ ಪ್ರೀತಿ ಗೌರವಗಳಿದ್ದರೂ ಅವರ ದೌರ್ಬಲ್ಯಗಳೂ 
ಗೊತ್ತು ಅನ್ನುವುದನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸುವ ಹಾಗೆ ನಗುತ್ತಾ ಪ್ರಿನ್ಸ್ ಆಂಡೂ 
ಕೇಳಿದ. 

'ಅದೇ ವೇಳಾಪಟ್ಟಿ , ಅದೇ ಲೇಥ್, ಅದೇ ಮ್ಯಾಕ್ಸ್ ಮತ್ತೆ ಜಾಮಿಟ್ರಿ ಪಾಠ' 
ಪ್ರಿನ್ಸೆಸ್ ಮೇರಿ ನಗುನಗುತ್ತಾ, ಜಾಮಿಟ್ರಿಯ ಪಾಠ ತನ್ನ ಬದುಕಿನ ಅಮೂಲ್ಯ 
ಸಂತೋಷದ ಗಳಿಗೆಯೋ ಅನ್ನುವ ಹಾಗೆ ಹೇಳಿದಳು. 

ಇಪ್ಪತ್ತು ನಿಮಿಷ ಕಳೆದಿತ್ತು. ವೃದ್ದ ಪ್ರಿನ್ಸ್ ಏಳುವ ಹೊತ್ತಾಗಿತ್ತು. ಪ್ರಿನ್ಸ್ 
ಆಂಡ್ರ ನನ್ನು ತಂದೆಯ ಬಳಿಗೆ ಕರೆದೊಯ್ಯಲು ಮುದುಕ ಸೇವಕ ತಿಕಾನ್ 
ಬಂದ. ತನ್ನ ಮಗ ಬಂದಿರುವ ಕಾರಣಕ್ಕೆ ವೃದ್ದ ಪ್ರಿನ್ಸ್ ತನ್ನ ಪರಿಪಾಠದಲ್ಲಿ ಸ್ವಲ್ಪ 
ಬದಲಾವಣೆ ಮಾಡಿಕೊಂಡಿದ್ದ. ಊಟಕ್ಕೆ ಸಿದ್ಧವಾಗುವ ಮೊದಲೇ ಮಗನನ್ನು 
ತನ್ನ ಕೋಣೆಗೆ ಕರೆತರಬೇಕೆಂದು ತಿಳಿಸಿದ್ದ. ವೃದ್ದ ಪ್ರಿನ್ಸ್ ಯಾವಾಗಲೂ ಪ್ರಾಚೀನ 
ಶೈಲಿಯಲ್ಲಿ ಅಲಂಕಾರಮಾಡಿಕೊಳ್ಳುತ್ತಿದ್ದ. ಹಳೆಯ ಕಾಲದ ಕೋಟು ತೊಟ್ಟು 
ತಲೆಗೆ ಪೌಡರ್ ಲೇಪನ ಮಾಡಿಕೊಳ್ಳುತ್ತಿದ್ದ . ಪ್ರಿನ್ಸ್ ಆಂಡೂ ತಂದೆಯ ಡ್ರೆಸಿಂಗ್ 
ಕೋಣೆಗೆ ಕಾಲಿಟ್ಟಾಗ ( ದಿವಾನಖನೆಗಳಿಗೆ ಪ್ರವೇಶಿಸುವಾಗ ಅವನ ಮುಖದಲ್ಲಿ 
ಯಾವಾಗಲೂ ಇರುತ್ತಿದ್ದಂಥ ತಿರಸ್ಕಾರದ ಭಾವವೇ ಈಗಲೂ ಇತ್ತು. ಆದರೆ 


೧೪೬ 

ಯುದ್ಧ ಮತ್ತು ಶಾಂತಿ 
ಪಿಯರೆಯನ್ನು ಕಂಡಾಗ ಮುಖದ ಮೇಲಿರುತ್ತಿದ್ದಂಥ ಜೀವಂತ ಉತ್ಸಾಹವೂ 
ಇತ್ತು) ವೃದ್ದ ಪ್ರಿನ್ಸ್ ಚರ್ಮದ ಹೊದಿಕೆ ಇರುವ ದೊಡ್ಡ ಕುರ್ಚಿಯಮೇಲೆ 
ಕೂತಿದ್ದ. ಕೇಶಾಲಂಕಾರಕ್ಕಾಗಿ ತಲೆಯನ್ನು ಮುದುಕ ಸೇವಕ ತಿಕಾನ್‌ಗೆ ಒಪ್ಪಿಸಿ , 
ಹಚ್ಚುವ ಪೌಡರು ಮೈ ಮೇಲೆ ಬೀಳದಿರಲೆಂದು ಕತ್ತಿಗೆ ಒಂದು ಬಟ್ಟೆ ಸುತ್ತಿಕೊಂಡು 
ಕೂತಿದ್ದ. 

- “ ಅಹಾ! ವೀರ ಸೈನಿಕ! ಬೋನಾಪಾರ್ಟೆಯನ್ನು ಸೋಲಿಸಬೇಕು ಅಂತ 
ಇದೀಯಾ?' ಕೂದಲಿಗೆ ಗಂಟು ಹಾಕುವುದಕ್ಕೆ ಮುದುಕ ಸೇವಕ ತಿಕಾನ್ 
ತಲೆಗೂದಲನ್ನು ಬಿಗಿಯಾಗಿ ಹಿಡಿದಿದ್ದರಿಂದ ಎಷ್ಟು ಸಾಧ್ಯವೋ ಅಷ್ಟು ತಲೆ 
ಆಡಿಸುತ್ತಾ ಕೇಳಿದ. 

- “ ಅವನ ಮೇಲೆ ಹುಷಾರಾಗಿ ದಾಳಿ ಮಾಡ ಬೇಕು. ಹೀಗೇ 
ಮುಂದುವರೆಯುವುದಕ್ಕೆ ಬಿಟ್ಟರೆ ನಮ್ಮನ್ನೂ ಗೆದ್ದು ಗುಲಾಮರನ್ನ 
ಮಾಡಿಕೊಂಡುಬಿಡುತ್ತಾನೆ ! ಹೇಗಿದೀಯ ನೀನು?' ಅನ್ನುತ್ತಾ ಮಗ ಚುಂಬಿಸಲೆಂದು 
ತನ್ನ ಕೆನ್ನೆಯನ್ನು ಮುಂದೊಡ್ಡಿದ. 
- ಊಟದ ಮೊದಲು ನಿದ್ರೆಮಾಡಿ ಎದ್ದಿದ್ದ ವೃದ್ದ ಪ್ರಿನ್ಸ್ ಬಹಳ ಒಳ್ಳೆಯ 
ಮೂಡಿನಲ್ಲಿದ್ದ (ಊಟದ ನಂತರ ಮಾಡುವ ನಿದ್ರೆ ಬೆಳ್ಳಿ, ಊಟದ ಮೊದಲು 
ಮಾಡುವ ನಿದ್ರೆ ಬಂಗಾರ ಅನ್ನುತ್ತಿದ್ದ ಅವನು). ಪೊದೆಯಂಥ ಹುಬ್ಬುಗಳ ಅಡಿಯಿಂದ 
ಸಂತೋಷದ ನೋಟ ಬೀರಿದ, ಪ್ರಿನ್ಸ್ ಆಂಡೂ ತಂದೆಯ ಹತ್ತಿರ ಹೋಗಿ 
ಅವನು ಸೂಚಿಸಿದ ಸ್ಥಳದಲ್ಲಿ ಚುಂಬಿಸಿದ. ತಂದೆಗೆ ಪ್ರಿಯವಾದ ವಿಷಯಗಳ 
ಬಗಗೆ - ಸಮಕಾಲೀನ ಸೈನ್ಯಾಧಿಕಾರಿಗಳನ್ನು ಕುರಿತ ಲೇವಡಿ ಮತ್ತು ಬೋನಾಪಾರ್ಟೆ 
ಏನೂ ಹೇಳಲಿಲ್ಲ. 
- ' ಹೌದು, ಅಪ್ಪಾ, ಈಗ ತಾನೇ ಬಂದೆ. ಹೆಂಡತಿಯನ್ನೂ ಕರೆದುಕೊಂಡು 
ಬಂದಿದೇನೆ. ಈಗ ಅವಳು ಬಸುರಿ.' ತಂದೆಯ ಮುಖದಲ್ಲಿ ಆಗುತ್ತಿದ್ದ ಒಂದೊಂದು 
ಬದಲಾವಣೆಯನ್ನೂ ಹುಷಾರಾಗಿ , ಗೌರವಪೂರ್ವಕವಾಗಿ ಗಮನಿಸುತ್ತಾ ಹೇಳಿದ. 
“ಈಗ ನಿಮ್ಮ ಆರೋಗ್ಯ ಹೇಗಿದೆ?' 

. 'ಕೇವಲ ಮೂರ್ಖರು ಮತ್ತು ಪೋಕರಿಗಳು ಮಾತ್ರ ಆರೋಗ್ಯ 
ಕೆಡಿಸಿಕೊಳ್ಳುತ್ತಾರೆ. ನಾನು ಎಂಥವನು ನಿನಗೆ ಗೊತ್ತಿಲ್ಲ. ಬೆಳಗಿನಿಂದ ಸಂಜೆಯವರೆಗೂ 
ಚಟುವಟಿಕೆಯಿಂದ ಇರತೇನೆ. ದುರಭ್ಯಾಸಗಳಿಲ್ಲ. ಚೆನ್ನಾಗಿಯೇ ಇದೇನೆ' ಅಂದ 
ವೃದ್ಧ ಪ್ರಿನ್ಸ್ . 

“ಸದ್ಯ ದೇವರು ದೊಡ್ಡವನು' ಮಗ ನುಡಿದ. 

' ಇದರಲ್ಲಿ ದೇವರ ವಿಚಾರವೇನು ಬಂತು!' ಅನ್ನುತ್ತಾ ವೃದ್ದ ಪ್ರಿನ್ಸ್ ತನಗೆ 
ಪ್ರಿಯವಾದ ವಿಚಾರವನ್ನು ಎತ್ತಿಕೊಂಡ. 'ಜರ್ಮನಿಯವರು ಅದೇನೋ ಸ್ಪಾಟೆಜಿ 


೧೪೭ 
ಸಂಪುಟ ೧ - ಸಂಚಿಕೆ ಒಂದು 
ಅನ್ನುತ್ತಾರಲ್ಲ ಅದನ್ನು ಬಳಸಿಕೊಂಡು ಬೋನಾಪಾರ್ಟೆಯ ವಿರುದ್ಧ 
ಯುದ್ಧಮಾಡುವುದಕ್ಕೆ ಹೊಸದೇನನ್ನಾದರೂ ಕಲಿಸಿದಾರೋ ಅವರು ? ' 

ಪ್ರಿನ್ಸ್ ಆಂಡೂ ನಕ್ಕ. “ಸ್ವಲ್ಪ ಸಮಯ ಕೊಡಿ, ಅಪ್ಪಾ, ನಾನಿನ್ನೂ ಸರಿಯಾಗಿ 
ಸುದಾರಿಸಿಕೊಂಡೇ ಇಲ್ಲ' ಅಂದ. ತಂದೆಯ ದೌರ್ಬಲ್ಯಗಳು ಏನೇ ಇದ್ದರೂ 
ಆತನ ಬಗ್ಗೆ ತನಗೆ ಪ್ರೀತಿ ಗೌರವಗಳು ಕಡಮೆಯಾಗುವುದಿಲ್ಲ ಅನ್ನುವ ಹಾಗೆ 
ನಡೆದುಕೊಂಡ. 

' ನಾನ್ಸೆನ್, ನಾನ್ಸೆನ್!' ಹೆಣೆದ ಕೂದಲು ಭದ್ರವಾಗಿದೆಯೋ ಇಲ್ಲವೋ 
ಎಂದು ಪರೀಕ್ಷಿಸಲು ಒಮ್ಮೆ ಎಳೆದು ನೋಡಿಕೊಂಡು ಹೇಳಿದ. ' ನಿನ್ನ ಹೆಂಡತಿಗೆ 
ಬೇಕಾದದ್ದನ್ನೆಲ್ಲ ಸಿದ್ದ ಮಾಡಿಸಿ ಇಟ್ಟಿದ್ದೇನೆ. ಪಿನ್ನೆಸ್ ಮೇರಿ ಅವಳನ್ನು ಕರೆದುಕೊಂಡು 
ಹೋಗಿ ಎಲ್ಲ ತೋರಿಸುತ್ತಾಳೆ. ಹೆಂಗಸರಲ್ಲವಾ ? ಒಂದೇ ಸಮ 
ಬಡಬಡಿಸಿಕೊಳ್ಳುತ್ತಾರೆ. ನಿನ್ನ ಹೆಂಡತಿ ಬಂದದ್ದು ಸಂತೋಷ ಕೂತುಕೋ . 
ಮಾತನಾಡೋಣ. ಮೈಕೆಲ್‌ಸನ್‌ನ ಸೈನ್ಯವಿದೆಯಲ್ಲ, ಅದು, ಮತ್ತೆ ಟಾಲ್ಸ್ಟಾಯ್‌ನ 
ಸೈನ್ಯ ೩೩ ಕೂಡ... ಏಕ ಕಾಲದಲ್ಲಿ ದಾಳಿಯನ್ನು ಸಂಘಟಿಸಬೇಕಂತೆ...ಆದರೆ 
ದಕ್ಷಿಣದಲ್ಲಿರುವ ಸೈನ್ಯ ಏನು ಮಾಡಬೇಕು ಹೇಳು? ಪ್ರಶಿಯಾ ತಾನು ಅಲಿಪ್ತ 
ಎಂದು ಹೇಳಿಕೊಂಡಿದೆ. ಅದು ನನಗೆ ಗೊತ್ತು. ಆದರೆ ಆಸ್ಟಿಯಾ ಬಗ್ಗೆ ಏನು 
ಹೇಳುತೀಯ ? ' 

ಕುರ್ಚಿಯಿಂದೆದ್ದು ಕೋಣೆಯಲ್ಲಿ ಶತಪಥ ತಿರುಗಲು ತೊಡಗಿದ. ಮುದುಕ 
ಸೇವಕ ತಿಕಾನ್ ಅವನ ಹಿಂದೆಯೇ ಹೆಜ್ಜೆ ಹಾಕಿದ. ಯಜಮಾನನಿಗೆ ಬೇಕಾದ 
ಬಟ್ಟೆಗಳನ್ನು ಒಂದೊಂದಾಗಿ ಅವನ ಕೈಗೆ ಕೊಟ್ಟ `ಸ್ವೀಡನ್ನಿನ ಕಥೆ ಏನು? ಅವರು 
ಪೊಮೆರಾನಿಯಾವನ್ನು ದಾಟುತ್ತಾರೆ ಹೇಗೆ?? 

ತಂದೆಯು ಅದೇ ವಿಷಯವನ್ನು ಮಾತನಾಡಲು ಒತ್ತಾಯಿಸುತ್ತಿದ್ದಿದ್ದರಿಂದ 
ಮೊದಲು ನಿರಾಸಕ್ತನಾಗಿ ಕ್ರಮೇಣ ತಾನೂ ಉತ್ಸಾಹಿತನಾಗಿ ಪ್ರಿನ್ಸ್ ಆಂಡೂ 
ಮಾತನಾಡಿದ. ತನ್ನ ಎಂದಿನ ಅಭ್ಯಾಸದಂತೆ ರಶಿಯನ್ ಭಾಷೆಯಲ್ಲಿ ಮಾತು 
ಆರಂಭಿಸಿ ಫ್ರೆಂಚ್ ಭಾಷೆಯಲ್ಲಿ ಚರ್ಚೆ ಮುಂದುವರೆಸಿದ. ಮುಂದೆ ನಡೆಯಲಿರುವ 
ಸೈನಿಕ ಕಾರ್ಯಾಚರಣೆಯನ್ನು ಕುರಿತು ಹೇಳಿದ. ತೊಂಬತ್ತು ಸಾವಿರ ಸಂಖ್ಯೆಯ 
ದೊಡ್ಡ ಸೈನ್ಯ ಹೇಗೆ ಪ್ರಶ್ಯಾವನ್ನು ಅಂಜಿಸಿ, ಅದು ತನ್ನ ಅಲಿಪ್ತ ನೀತಿಯನ್ನು ಕೈ 
ಬಿಡುವಂತೆ ಒತ್ತಾಯಿಸಲಾಗುತ್ತದೆ, ಆ ಸೈನ್ಯದ ಒಂದು ಭಾಗ ಹೇಗೆ ಸ್ಟಾಲ್ಪುಂಡ್‌ನಲ್ಲಿ 
ಸ್ವೀಡಿಶ್ ಸೈನ್ಯದೊಂದಿಗೆ ಸೇರಿಕೊಳ್ಳುತ್ತದೆ ; ಇನ್ನೂರ ಇಪ್ಪತ್ತು ಸಾವಿರ ಆಸ್ಪಿಯನ್ನರು, 
೩೩ ಜನರಲ್‌ಗಳಾದ ಮೈಖೆಲ್ಸನ್ ಮತ್ತು ಟಾಲ್ಸ್ಟಾಯ್‌ಗಳ ನೇತೃತ್ವದಲ್ಲಿ ಎರಡು ತಂಡಗಳು 
ಸೇರಿದಂತೆ ಫ್ರೆಂಚ್ ಸೈನ್ಯವನ್ನು ಮೂರು ದಿಕ್ಕಿನಿಂದ ಮುತ್ತುವ ಯೋಜನೆಯ ಬಗ್ಗೆ ವೃದ್ದ ಪ್ರಿನ್ಸ್ 
ಹೇಳುತ್ತಿದ್ದಾನೆ. 


ಯುದ್ಧ ಮತ್ತು ಶಾಂತಿ 
ಒಂದು ಲಕ್ಷ ರಶಿಯನ್ನರು ಹೇಗೆ ಇಟಲಿಯಲ್ಲಿ, ರೈನ್ ನದಿಯ ದಡದಲ್ಲಿ 
ಕಾರ್ಯಾಚರಣೆ ನಡೆಸಲಿದ್ದಾರೆ; ಐವತ್ತು ಸಾವಿರ ರಶಿಯನ್ನರು, ಅಷ್ಟೇ ಸಂಖ್ಯೆಯ 
ಬ್ರಿಟಿಷರು ಹೇಗೆ ನೇಪಲ್ಸ್‌ನಲ್ಲಿ ಇಳಿದು, ಒಟ್ಟಾರೆಯಾಗಿ ಐದು ಲಕ್ಷ ಸಂಖ್ಯೆಯ 
ಸೈನ್ಯ ಫ್ರೆಂಚರನ್ನು ಎಲ್ಲ ದಿಕ್ಕುಗಳಿಂದ ಮುತ್ತುತ್ತದೆ ಎನ್ನುವುದನ್ನು ವಿವರಿಸಿದ. 
ವೃದ್ದ ಪ್ರಿನ್ಸ್ ಈ ವಿವರಣೆಯನ್ನೆಲ್ಲ ಯಾವ ಆಸಕ್ತಿಯೂ ಇಲ್ಲದಂತೆ ಕೇಳಿಸಿಕೊಳ್ಳುತ್ತಾ 
ತನಗೆ ಸೇವಕ ಮಾಡುತ್ತಿರುವ ಅಲಂಕಾರವನ್ನೇ ಗಮನಿಸುವಂತೆ ಕೋಣೆಯೊಳಗೆ 
ತಿರುಗಾಡುತ್ತಿದ್ದ. ಮೂರು ಬಾರಿ ಅನಿರೀಕ್ಷಿತವಾಗಿ ಕೂಗಾಡಿದ್ದ. 

' ಬಿಳೀದು, ಬಿಳೀದುಕೊಡು!' ಅಂದರೆ ಮುದುಕ ಸೇವಕ ತಿಕಾನ್ ಒಡೆಯ 
ಇಷ್ಟಪಟ್ಟ ವೇಸ್‌ಕೋಟುಕೊಡುತ್ತಿರಲಿಲ್ಲವೆಂದು ಅರ್ಥ . * 
ಆ ಮತ್ತೊಮ್ಮೆ ಅವಳಿಗೆ ಇಷ್ಟರಲ್ಲೇ ದಿನಗಳು ತುಂಬುತವಾ?” ಎಂದು ಕೇಳಿದ್ದ. 
ತಲೆ ಕೊಡವುತ್ತಾ ' ದಟ್ ಈಸ್ ಬ್ಯಾಡ್, ಮುಂದುವರೆಸು' ಎಂದಿದ್ದ. 
* ಮೂರನೆಯ ಬಾರಿ, ಪ್ರಿನ್ಸ್ ಆಂಡೂ ತನ್ನ ಮಾತು ಮುಗಿಸುವುದರಲ್ಲಿದ್ದಾಗ 
ಇದ್ದಕ್ಕಿದ್ದ ಹಾಗೆಯೇ ತನ್ನ ನಡುಗುವ ಮುದಿ ಸ್ವರದಲ್ಲಿ ಮಾಲ್‌ಬೂಕನ ಹಾಡು 
' ಮಾಲ್‌ಬೂಕ್ ಹೊರಟಿಹನು ಸಮರಕೆ, ಮರಳುವುದೆಂದೋ ತಿಳಿಯದು೩೪ - 
ಎಂದು ಹಾಡತೊಡಗಿದ. 
- ಮಗ ಸುಮ್ಮನೆ ನಕ್ಕ . ' ಇದು ನಾನು ಮೆಚ್ಚುವ ತಂತ್ರವಲ್ಲ. ಈಗ ಸೈನ್ಯದವರು 
ಹೇಗೆ ಯೋಚನೆ ಮಾಡುತ್ತಿದಾರೆ ಅನ್ನುವುದನ್ನು ಹೇಳಿದೆ ಅಷ್ಟೆ, ಇಷ್ಟು ಹೊತ್ತಿಗೆ 
ನೆಪೋಲಿಯನ್ ಕೂಡ ಯಾವುದೋ ತಂತ್ರ ಹೂಡಿರುತ್ತಾನೆ. ಅದು ನಮ್ಮ ತಂತ್ರಕ್ಕಿಂತ 
ಕೆಟ್ಟದಾಗೇನೂ ಇರುವುದಿಲ್ಲ' ಅಂದ ಪ್ರಿನ್ಸ್ ಆಂಡೂ 

'ಸರಿ ಸರಿ , ಹೊಸದೇನೂ ಹೇಳಿಲ್ಲ ನೀನು' ಅಂದ ವೃದ್ದ ಪ್ರಿನ್ಸ್ ನಿಧಾನವಾಗಿ 
ಹಾಡಿನ ಕೊನೆಯ ಸಾಲುಗಳನ್ನು ಹೇಳಿದ. 

' ಮರಳುವುದೆಂದೋ ತಿಳಿಯದು- ನಡಿ , ಡೈನಿಂಗ್ ಹಾಲಿಗೆ ಹೋಗೋಣ' 
ಅಂದ. 

೨೪ 
ಕೌರಮಾಡಿಕೊಂಡು ಪೌಡರು ಹಚ್ಚಿಕೊಂಡ ವೃದ್ದ ಪ್ರಿನ್ಸ್ ನಿಗದಿಯಾದ 
ಸಮಯಕ್ಕೆ ಸರಿಯಾಗಿ ಊಟದ ಮನೆಗೆ ಕಾಲಿಟ್ಟ , ಅಲ್ಲಿ ಅವನ ಸೊಸೆ, ಪ್ರಿನ್ಸೆಸ್ 
ಮೇರಿ, ಮೇಡಂ ಬೋರೀನ್ ಆಗಲೇ ಬಂದು ಕಾಯುತ್ತಿದ್ದರು. ಅವರ ಜೊತೆಗೆ 
ವೃದ್ದ ಪ್ರಿನ್ಸ್ನ ಮೇಸ್ತಿಕೂಡ ಇದ್ದ . ಸಮಾಜದಲ್ಲಿ ಅಂಥಾ ಅಂತಸ್ತು ಏನೂ ಇಲ್ಲದ 
೩೪ ಹದಿನೆಂಟನೆಯ ಶತಮಾನದ ಆರಂಭದಲ್ಲಿ ಜನಪ್ರಿಯವಾಗಿದ್ದ ಫ್ರೆಂಚ್ ಹಾಡು, ಫ್ರೆಂಚ್ ಸೈನ್ಯದ 

ವಿರುದ್ಧವಾಗಿ ಡ್ಯೂಕ್ ಮಾರ್ಲ್ಬರೋ ಇಂಗ್ಲಿಶ್ ಸೈನ್ಯವನ್ನು ಮುನ್ನಡೆಸಿದಾಗ ಹಾಡುತ್ತಿದ್ದದ್ದು. 


೧೪೯ 
ಸಂಪುಟ ೧ - ಸಂಚಿಕೆ ಒಂದು 
ತೀರ ನಗಣ್ಯನಾಗಿ ಇಂಥ ಗೌರವದ ಹಕ್ಕುದಾರನಲ್ಲದಿದ್ದರೂ ವೃದ್ದ ಪ್ರಿನ್ಸ್ನ 
ಯಾವುದೋ ವಿಚಿತ್ರ ಲಹರಿಯ ಕಾರಣದಿಂದ ಒಡೆಯನೊಟ್ಟಿಗೇ ದಿನವೂ ಊಟಕ್ಕೆ 
ಕೂರುವ ಅವಕಾಶ ಅವನಿಗೆ ದೊರೆತಿತ್ತು. ಸಾಮಾಜಿಕ ಅಂತಸ್ತುಗಳ ತಾರತಮ್ಯವನ್ನು 
ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುವ ವೃದ್ಧ ಪ್ರಿನ್ಸ್ ಬಹುಮುಖ್ಯ ಸ್ಥಳೀಯ ಗಣ್ಯರನ್ನೂ 
ತನ್ನೊಡನೆ ಊಟಕ್ಕೆ ಕರೆಯಲು ಅಸಹ್ಯಪಡುತ್ತಿದ್ದ. ಯಾವಾಗಲೂ ಕಂಬದ ಮರೆಗೆ 
ಹೋಗಿ ಚೌಕಳಿ ಕರ್ಚಿಫನ್ನು ಮೂಗಿಗೆ ಒತ್ತಿ ಸಿಂಬಳ ಸೀದುವ ಅಭ್ಯಾಸವಿದ್ದ 
ಮೈಕೆಲ್ ಇವಾನೊವಿಚ್‌ನನ್ನು , “ಎಲ್ಲ ಮನುಷ್ಯರೂ ಸಮಾನರು' ಎಂಬ ತನ್ನ 
ಸಿದ್ದಾಂತದ ಜೀವಂತ ನಿದರ್ಶನವೆಂದು ಅದು ಹೇಗೋ ಆಯ್ಕೆಮಾಡಿಕೊಂಡಿದ್ದ. 
' ಮೈಕೆಲ್ ಇವಾನೊವಿಚ್ ನಿನಗಿಂತ, ನನಗಿಂತ ಕೀಳಲ್ಲ' ಎಂದು ಮಗಳಿಗೆ ಮತ್ತೆ 
ಮತ್ತೆ ಹೇಳಿದ್ದ . ಊಟಕ್ಕೆ ಕೂತಾಗ ಅವನನ್ನೇ ಹೆಚ್ಚಾಗಿ ಮಾತನಾಡಿಸುತ್ತಿದ್ದ. 
ಮೈಕೆಲ್ ಇವಾನೊವಿಚ್ ಎಂದೂ ಮರುಮಾತು ಆಡುತ್ತಿರಲಿಲ್ಲ. 
ಆ ಮನೆಯ ಎಲ್ಲ ಕೋಣೆಗಳಂತೆ ಊಟದ ಮನೆಯೂ ವಿಶಾಲವಾಗಿತ್ತು, 
ಚಾವಣಿ ಕೂಡ ಬಹಳ ಎತ್ತರದಲ್ಲಿತ್ತು. ಪ್ರಿನ್ಸ್ ಇನ್ನೇನು ಬರುವುದರಲ್ಲಿದ್ದ . ಒಂದೊಂದು 
ಕುರ್ಚಿಯ ಹಿಂದೆ ಒಬ್ಬೊಬ್ಬರು ಸೇವಕರು ನಿಂತು ಕಾತರದಿಂದ ಕಾಯುತ್ತಿದ್ದರು. 
ಮನೆಯ ಮುಖ್ಯ ಬಾಣಸಿಗ ತೋಳ ಮೇಲೆ ಒಂದು ಟವೆಲು ಹಾಕಿಕೊಂಡು 
ಊಟದ ಮೇಜು ಪರಿಶೀಲಿಸುತ್ತಾ ಸೇವಕರಿಗೆ ಕಣ್ಣಿನಲ್ಲೇ ಸೂಚನೆ ಕೊಡುತ್ತಾ 
ಗಡಿಯಾರವನ್ನೊಮ್ಮೆ ಇನ್ನೇನು ವೃದ್ದ ಪ್ರಿನ್ಸ್ ಪ್ರವೇಶಿಸಲಿರುವ ಬಾಗಿಲನ್ನೊಮ್ಮೆ 
ಆತಂಕದಿಂದನೋಡುತ್ತಾ ನಿಂತಿದ್ದ. ಪ್ರಿನ್ಸ್ ಆಂಡೂ ಹೊಸತೇನನ್ನೋ ನೋಡುತ್ತಿದ್ದ. 
ಅದು ಬಂಗಾರದ ಕಟ್ಟಿನ ದೊಡ್ಡ ಚಿತ್ರ, ಬೋಲೋನ್ ಪ್ರಿನ್ಸ್‌ಗಳ ವಂಶವೃಕ್ಷ. 
ಆ ಚಿತ್ರದ ಎದುರಿಗೆ ಮತ್ತೊಂದು ಗೋಡೆಯಮೇಲೆ ಕಿರೀಟ ಧರಿಸಿ ನಿಂತಿರುವ, 
ರೂರಿಕ್೩ನ ವಂಶಜನೆಂದು ಹೇಳಲಾಗುವ, ಸದ್ಯದ ಬೋಲೋನ್‌ ವಂಶ 
ಸ್ಥಾಪಕನ ಚಿತ್ರವಿತ್ತು. ಯಾರೋ ಎಸ್ಟೇಟಿನಲ್ಲಿ ಕೆಲಸಮಾಡುವ ಕಲಾವಿದ ಬರೆದ 
ಚಿತ್ರದಂತಿತ್ತು. ಮತ್ತೊಮ್ಮೆ ವಂಶವೃಕ್ಷದ ಚಿತ್ರ ನೋಡುತ್ತಾ ಪ್ರಿನ್ಸ್ ಆಂಡೂ ತಮ್ಮ 
ಚಿತ್ರವನ್ನು ತಾವೇ ನೋಡಿಕೊಂಡವರು ನಗುವ ಹಾಗೆ ನಕ್ಕ. 'ಥೇಟು ಎಲ್ಲ ಅವರ 
ಹಾಗೆಯೇ !' ಎಂದು ತನ್ನ ಬಳಿಗೆ ಬಂದ ಪ್ರಿನ್ಸೆಸ್ ಮೇರಿಗೆ ಹೇಳಿದ. 

- ಪ್ರಿನ್ಸೆಸ್ ಮೇರಿ ಆಶ್ಚರ್ಯದಿಂದ ಅಣ್ಣನ ಮುಖ ನೋಡಿದಳು. ಅವನೇಕೆ 
ನಗುತ್ತಿದ್ದಾನೆಯೋ ಅವಳಿಗೆ ತಿಳಿಯಲಿಲ್ಲ. ತಂದೆಯವರು ಮಾಡಿದ ಎಲ್ಲ 
ಕಾರ್ಯಗಳೂ ಪ್ರಶ್ನಾತೀತವಾಗಿ ಗೌರವಕ್ಕೆ ಅರ್ಹ ಎಂದು ನಂಬಿದ್ದವಳು ಅವಳು . 


೩೫ ರೂರಿಕ್: ಐತಿಹ್ಯಗಳ ಪ್ರಕಾರ ಸ್ಕಾಂಡಿನೇವಿಯಾದ ರಾಜಕುಮಾರ, ಒಂಬತ್ತನೆಯ ಶತಮಾನದಲ್ಲಿ 

ನೊವ್ಗೊರೊಡ್‌ಗೆ ಬಂದು ರಶಿಯನ್ ಸಾಮ್ರಾಜ್ಯ ಸ್ಥಾಪಿಸಿದವನು. 


೧೫೦ 

ಯುದ್ಧ ಮತ್ತು ಶಾಂತಿ 
“ ಅಖಿಲೆಸ್‌ನಿಗೆ ದುರ್ಬಲವಾದ ಹಿಮ್ಮಡಿ ಇದ್ದ ಹಾಗೆಯೇ ಎಲ್ಲರಿಗೂ 
ಒಂದೊಂದು ದೌರ್ಬಲ್ಯ ಇರುತ್ತದೆ. ಅಷ್ಟು ಬುದ್ದಿವಂತ ಇಂಥ ಅರ್ಥವಿಲ್ಲದ 
ಕೆಲಸಮಾಡುವುದೇ !' ಅಂದ ಪ್ರಿನ್ಸ್ ಆಂಡೂ ಅಣ್ಣ ಅದು ಹೇಗೆ ಅಷ್ಟು ಧೈರ್ಯವಾಗಿ 
ಟೀಕೆ ಮಾಡುತ್ತಾನೋ ಪ್ರಿನ್ಸೆಸ್ ಮೇರಿಗೆ ಅರ್ಥವಾಗಲಿಲ್ಲ. ಅವನಿಗೆ ಉತ್ತರ 
ಹೇಳಬೇಕೆಂದಿರುವಷ್ಟರಲ್ಲಿ ಅವರೆಲ್ಲ ಕಿವಿಗೊಟ್ಟು ಆಲಿಸುತ್ತಿದ್ದ ಹೆಜ್ಜೆಗಳ ಸದ್ದು ಸ್ಪಡಿ 
ರೂಮಿನಿಂದ ಕೇಳಿಸಿತು. ಆತ್ಮವಿಶ್ವಾಸದ ದೊಡ್ಡ ದೊಡ್ಡ ಹೆಜ್ಜೆಗಳನ್ನು ಖುಷಿಯಾಗಿ 
ಎತ್ತಿ ಎತ್ತಿ ಇಡುತ್ತಾ ವೃದ್ಧ ಪ್ರಿನ್ಸ್ ತನ್ನ ಎಂದಿನ ಗತ್ತಿನಲ್ಲಿ ಬಂದ. ಅವನ ನಡೆಯುತ್ತಿದ್ದದ್ದೇ 
ಹಾಗೆ - ಮನೆಯ ನಿಷ್ಠುರ ವ್ಯವಹಾರದ ರೀತಿಯನ್ನು ಬೇಕೆಂದೇ ತನ್ನ ಚುರುಕು 
ನಡಿಗೆಯಿಂದ ವಿರೋಧಿಸುವ ಹಾಗೆ, ಅದೇ ಹೊತ್ತಿಗೆ ದೊಡ್ಡಗಡಿಯಾರ ಎರಡು 
ಗಂಟೆ ಹೊಡೆಯಿತು. ಡ್ರಾಯಿಂಗ್ ರೂಮಿನಲ್ಲಿದ್ದ ಇನ್ನೊಂದು ಗಡಿಯಾರ ಅದಕ್ಕೆ 
ತನ್ನ ಮೆಲ್ಲನೆಯ ಪ್ರತಿಧ್ವನಿ ಸೇರಿಸಿತು. ಪ್ರಿನ್ಸ್ ಒಂದು ಕ್ಷಣ ಸುಮ್ಮನೆ ನಿಂತ. ಅವನ 
ಪೊದೆ ಹುಬ್ಬಿನ ಅಡಿಯ ಕಣ್ಣಗಳ ನೋಟಊಟಕ್ಕೆ ಸೇರಿದ್ದ ಎಲ್ಲರನ್ನೂ ಮಸೆದು 
ನೋಡುತ್ತಾ ಪುಟ್ಟ ರಾಜಕುಮಾರಿಯ ಮೇಲೆ ಬಂದು ನಿಂತಿತು . ತ್ವಾರ್ ಚಕ್ರವರ್ತಿಯು 
ಆಸ್ಥಾನವನ್ನು ಪ್ರವೇಶಿಸಿದಾಗ ಸಭಾಸದರಿಗೆ ಅನ್ನಿಸುವ ಹಾಗೆ ಅವಳಿಗೆ ಅನ್ನಿಸಿತು. 
ಪ್ರಿನ್ಸ್ ತನ್ನ ಸುತ್ತಲೂ ಇದ್ದವರಲ್ಲಿ ಅಂಥ ಭಯ ಮತ್ತೆ ಅತೀವ ಗೌರವವನ್ನು 
ಹುಟ್ಟಿಸುತ್ತಿದ್ದ. ಪುಟ್ಟ ರಾಜಕುಮಾರಿಯ ತಲೆ ನೇವರಿಸಿ , ಆಮೇಲೆ ಸಂಕೋಚದಿಂದಲೇ 
ಅವಳ ಕೊರಳು ತಟ್ಟಿದ. 

ಅವಳ ಕಣ್ಣನ್ನೇ ದಿಟ್ಟಿಸುತ್ತಾ 'ಬಹಳ ಸಂತೋಷ' ಅಂದು ತನ್ನ ಕುರ್ಚಿಯತ್ತ 
ಹೆಜ್ಜೆ ಹಾಕಿದ. ಕುಳಿತುಕೊಳ್ಳಿ! ಮೈಕೇಲ್ ಇವಾನೊವಿಚ್ ಕೂತುಕೋ !' ಅಂದ. 

ಸೊಸೆಗೆ ತನ್ನ ಪಕ್ಕದಲ್ಲಿ ಕೂತುಕೋ ಅನ್ನುವ ಹಾಗೆ ಸೂಚನೆ ಕೊಟ್ಟ. 
ಸೇವಕ ಅವಳಿಗಾಗಿ ಕುರ್ಚಿಯನ್ನು ಹಿಂದಕ್ಕೆ ಎಳೆದು ಕಾದು ನಿಂತ. 
. ' ಹೋ ಹೋ ಹೋ !” ಸೊಸೆಯ ತುಂಬಿಕೊಂಡ ಮೈ ನೋಡುತ್ತಾ 
ಉದ್ದಾರ ತೆಗೆದ. 'ಸಮಯ ದಂಡ ಮಾಡಿಲ್ಲಾ! ಒಳ್ಳಯದಲ್ಲಾ!' ಅಂದ. ನಕ್ಕ . 
ಒಣನಗು , ತಣ್ಣಗಿತ್ತು, ಹಿತವಲ್ಲದ ಹಾಗೆ ಇತ್ತು. ಎಂದಿನಂತೆ ಅವನ ತುಟಿ ನಕ್ಕಿತು , 
ಕಣ್ಣು ನಗಲಿಲ್ಲ. ' ವಾಕ್ ಮಾಡಬೇಕು, ಎಷ್ಟು ಆಗುತದೋ ಅಷ್ಟು, ಎಷ್ಟು ಆಗುತದೋ 
ಅಷ್ಟು' ಅಂದ. 

ಪುಟ್ಟ ರಾಜಕುಮಾರಿ ಅವನ ಮಾತು ಕೇಳಿಸಿಕೊಳ್ಳದೆ, ಅಥವಾ ಕೇಳಿಸಿಕೊಳ್ಳುವ 
ಮನಸ್ಸಿಲ್ಲದೆ ಸಂಕೋಚಪಡುತ್ತಾ ಸುಮ್ಮನೆ ಕೂತಳು. 

- ಪ್ರಿನ್ಸ್ ಅವಳ ತಂದೆಯ ಬಗ್ಗೆ ವಿಚಾರಿಸಿದ. ಅವಳು ಮಾತಾಡುವುದಕ್ಕೆ , 
ನಗುವುದಕ್ಕೆ ಶುರುಮಾಡಿದಳು. ತನಗೆ ಪರಿಚಯವಿದ್ದ ಅವಳ ಗುರುತಿನವರ ಬಗ್ಗೆ 
ಕೇಳಿದ. ಅವಳು ಇನ್ನೂ ಇನ್ನೂ ಉತ್ಸಾಹ ತುಂಬಿಕೊಂಡು ಬಡಬಡಿಸುತ್ತಾ 


ಸಂಪುಟ ೧ - ಸಂಚಿಕೆ ಒಂದು 

೧೫೧ 
ಯಾರು ಯಾರು ಪ್ರಿನ್ಸ್‌ಗೆ ನಮಸ್ಕಾರಗಳನ್ನು ತಿಳಿಸುವಂತೆ ಹೇಳಿದ್ದಾರೆ ಅನ್ನುವ 
ಪಟ್ಟಿಕೊಡುತ್ತಾ ಊರಿನ ಸುದ್ದಿಯೆಲ್ಲ ಹೇಳಿದಳು . . 

'ಕೌಂಟೆಸ್‌ ಅಪ್ರಾಕ್ಸಿನಾ ಗಂಡ ಸತ್ತು ಹೋದ. ಪಾಪ , ಅತ್ತು ಅತ್ತು ಅವಳ 
ಕಣ್ಣೆಲ್ಲ ಕೆಂಪಾಗಿದ್ದವು' ಕ್ಷಣ ಕ್ಷಣವೂ ಅವಳ ಉತ್ಸಾಹ ಹೆಚ್ಚುತ್ತಿತ್ತು. ಅವಳು ಹಾಗೆ 
ಮಾತಾಡುವಾಗ ಪ್ರಿನ್ಸ್ ಅವಳನ್ನು ನಿಷ್ಠುರವಾಗಿ, ಮತ್ತೂ ನಿಷ್ಠುರವಾಗಿ ನೋಡುತ್ತಾ 
ಇದ್ದ . ನೋಡಿಯಾಯಿತು, ಅವಳ ಬಗ್ಗೆ ಸ್ಪಷ್ಟ ಚಿತ್ರ ಮೂಡಿಸಿಕೊಂಡು ಆಯಿತು 
ಅನ್ನುವ ಹಾಗೆ ಪ್ರಿನ್ಸ್ ತಟ್ಟನೆ ಮೇಸ್ತಿಯ ಕಡೆಗೆ ತಿರುಗಿ ಮಾತಾಡಿದ. 

' ಮೈಕೆಲ್ ಇವಾನೊವಿಚ್, ನಮ್ಮ ಬೂ ... ನಾಪಾರ್ಟೆಗೆ ಯಾಕೋ ಹೊತ್ತು 
ಸರಿಯಾಗಿಲ್ಲ. ಪ್ರಿನ್ಸ್ ಆಂಡೂ ( ವೃದ್ದ ಪ್ರಿನ್ಸ್ ಮಗನನ್ನು ಯಾವಾಗಲೂ 
ಕರೆಯುತ್ತಿದ್ದುದೇ ಹಾಗೆ) ಬೋನಾಪಾರ್ಟೆಯ ವಿರುದ್ಧ ಯಾವ ಯಾವ ಸೈನ್ಯ 
ಎಷ್ಟು ಒಟ್ಟುಗೂಡಿವೆ ಅಂತ ಹೇಳುತಿದ್ದ! ಇಲ್ಲಿ ನೀನು, ನಾನು ಬೋನಾಪಾರ್ಟೆಯನ್ನ 
ಲೆಕ್ಕಕ್ಕೆ ಇಟ್ಟಿರಲಿಲ್ಲ!' 

“ನೀನು ಮತ್ತು ನಾನು' ಯಾವಾಗ ಬೋನಾಪಾರ್ಟೆಯ ಬಗ್ಗೆ 
ಮಾತನಾಡಿದ್ದರೋ ಅದು ಮೈಕೆಲ್ ಇವಾನೊವಿಚ್‌ಗೆ ಗೊತ್ತೇ ಇರಲಿಲ್ಲ. ಪ್ರಿನ್ಸ್‌ಗೆ 
ಪ್ರಿಯವಾದ ವಿಚಾರ ಮಾತಾಡುವುದಕ್ಕೆ ತಾನು ನೆಪವಷ್ಟೇ ಎಂದು ಗೊತ್ತಿದ್ದುದರಿಂದ 
ಚಿಕ್ಕ ಪ್ರಿನ್ಸ್ನ ಮುಖ ನೋಡುತ್ತಾ, ತಬ್ಬಿಬ್ಬಾಗಿ ವಿಷಯ ಹೇಗೆ ತಿರುಗುತ್ತದೋ 
ಎಂದು ಆಶ್ಚರ್ಯಪಡುತ್ತಾ ಸುಮ್ಮನೆ ಕೂತ. 

'ಬಹಳ ಚೆನ್ನಾಗಿ ವ್ಯೂಹ ರಚನೆ ಮಾಡುತ್ತಾನೆ ' ಮೇಸ್ತಿಯನ್ನು ತೋರಿಸುತ್ತಾ 
- ಪಿನ್ ಮಗನಿಗೆ ಹೇಳಿದ. ಮಾತು ಮತ್ತೆ ಯುದ್ದ, ನೆಪೋಲಿಯನ್ ಬೋನಾಪಾರ್ಟೆ, 
ಸೇನಾಪತಿಗಳು ಮತ್ತು ಸಮಕಾಲೀನ ರಾಜಕಾರಣಿಗಳತ್ತ ಹೊರಳಿತು. ಈ ಕಾಲದ 
ಎಲ್ಲ ಸೇನಾಪತಿಗಳೂ ರಾಜಕಾರಣಿಗಳೂ ಯುದ್ದದ ರಾಜಕಾರಣದ ಅ ಆ ಇ 
ಈ ಗೊತ್ತಿಲ್ಲದ ಕಂದಮ್ಮಗಳು; ಬೋನಾಪಾರ್ಟೆ ನಿಜವಾಗಿ ಲೆಕ್ಕಕ್ಕೇ ಇಲ್ಲದ ಕುದ್ರ 
ಫ್ರೆಂಚಿಗ ; ಅವನನ್ನು ವಿರೋಧಿಸುವುದಕ್ಕೆ ರಷಿಯಾದಲ್ಲಿ ಈಗ ಪೊಟೆಮ್ಮಿನ್೩೬ 
ಅಥವಾ ಸುವೊರೊವ್‌ಗಳಂಥ ದಂಡನಾಯಕರು ಇಲ್ಲದೆ ಇರುವುದರಿಂದ ಅವನು 
ಯಶಸ್ವೀ ಸೇನಾನಿಯ ಹಾಗೆ ಕಾಣುತ್ತಾನೆ ಅನ್ನುವುದು ವೃದ್ದ ಪ್ರಿನ್ಸ್ನ ಬಲವಾದ 
ನಂಬಿಕೆಯಾಗಿತ್ತು. ಯೂರೋಪಿನಲ್ಲಿ ಈಗ ನಿಜವಾದ ರಾಜಕೀಯ ಬಿಕ್ಕಟ್ಟಾಗಲೀ 
ಯುದ್ಧವಾಗಲೀ ಇಲ್ಲ; ಈಗಿನ ಕಾಲದ ಜನ ಬೊಂಬೆಯಾಟ ಆಡಿಕೊಂಡು 
ಅದನ್ನೇ ಯುದ್ಧ ಎಂದು ಭ್ರಮಿಸಿದ್ದಾರೆ ಅನ್ನುವುದು ಕೂಡ ಅವನ ಗಟ್ಟಿಯಾದ 


೩೬ ಜಿ. ಎ . ಪೊಟೆಮ್ಮಿನ್ ( ೧೭೩೯ -೯೧) ಹದಿನೆಂಟನೆಯ ಶತಮನಾದ ಉತ್ತರಾರ್ಧದಲ್ಲಿ ಪ್ರಸಿದ್ಧನಾಗಿದ್ದ 

ರಶಿಯನ್ ದಂಡನಾಯಕ. 


೧೫೨ 

ಯುದ್ಧ ಮತ್ತು ಶಾಂತಿ 
ನಂಬಿಕೆ. ಈಗಿನ ಕಾಲದ ಜನರ ಬಗ್ಗೆ ತಂದೆಯ ಲೇವಡಿಯ ಧೋರಣೆಯನ್ನು 
ಖುಷಿಯಾಗಿ ಒಪ್ಪಿಕೊಂಡ ಪ್ರಿನ್ಸ್ ಆಂಡೂ ಅಪ್ಪನನ್ನು ಇನ್ನಷ್ಟು ಹುರಿದುಂಬಿಸಿದ. 
ಮಾತು ಕೇಳಿಸಿಕೊಳ್ಳುವುದಕ್ಕೆ ಅವನಿಗೆ ಖುಷಿಯಾಗುತ್ತಿತ್ತು. 
1 . 'ಕಳೆದು ಹೋದ ಕಾಲ ಯಾವಾಗಲೂ ಚೆನ್ನಾಗಿತ್ತು ಎಂದೇ ಅನ್ನಿಸುತದೆ. 
ಮೋರ್ಯು ಒಡ್ಡಿದ ಬಲೆಗೆ ಸುವೊರೊವ್ ಸಿಕ್ಕಿಬೀಳಲಿಲ್ಲವಾ ? ಅದರಿಂದ 
ತಪ್ಪಿಸಿಕೊಳ್ಳುವುದು ಹೇಗೆ ಎಂದು ಅವನಿಗೆ ತಿಳಿಯಲೇ ಇಲ್ಲ, ಅಲ್ಲವಾ ? ' ಅಂದ. 
- ' ಯಾರು ? ಯಾರು ಹಾಗೆಂದಿದ್ದು ? ಯಾರು ?' ವೃದ್ದ ಪ್ರಿನ್ಸ್ ಸಿಟ್ಟಿನಿಂದ 
ತಟ್ಟೆಯನ್ನು ಎಸೆದ. ಮುದುಕ ಸೇವಕ ತಿಕಾನ್ ಚುರುಕಾಗಿ ಅದನ್ನು ಹಿಡಿದುಕೊಂಡ. 
“ಸುವರೋವ್!...ಯೋಚನೆ ಮಾಡು ಪ್ರಿನ್ಸ್ ಆಂಡೂ ಇಬ್ಬರು ಗಂಡಸರಿದ್ದರು. 
ಫ್ರೆಡರಿಕ್ ಮತ್ತೆ ಸುವೊರೊವ್,ಮೋರ್ಯೂ? ಸುವೊರೊವ್ನಕೈ ಕಟ್ಟಿಹಾಕಿರದಿದ್ದರೆ 
ಮೋರ್ಯೂ ಯಾವತ್ತೋ ಜೈಲಿನಲ್ಲಿರುತ್ತಿದ್ದ. ಅದು ಯಾವುದೋ ' ಯುದ್ಧ 
ಪರಿಣತ ರಾಜಕಾರಣಿ ಬಾಣಸಿಗರ ಉನ್ನತ ಸಮಿತಿ೩೭' ಸುವೊರೊವ್ನ ಕೈಗಳನ್ನು 
ಕಟ್ಟಿತ್ತು. ಈ ಯುದ್ಧ ಪರಿಣತ ರಾಜಕಾರಣಿ ಬಾಣಸಿಗರು ಎಂಥವರು - ನಿನಗೇ 
ಗೊತ್ತಾಗುತ್ತದೆ! ಸುವೊರೊವ್ನಿಗೇ ಆ ಸಮಿತಿಯ ಜೊತೆ ಏಗುವುದಕ್ಕೆ ಆಗಲಿಲ್ಲ, 
ಇನ್ನು ನಿಮ್ಮ ದಂಡ ನಾಯಕ ಕುತುಝೇವ್ ಏನು ಮಾಡಬಲ್ಲ ? ಇಲ್ಲಯ್ಯಾ , 
ಖಂಡಿತ ಇಲ್ಲ. ನೀವೂ ನಿಮ್ಮ ದಂಡನಾಯಕರೂ ಬೋನಾಪಾರ್ಟೆಯನ್ನು 
ಎದುರಿಸುವುದಕ್ಕೆ ಸಾಧ್ಯವೇ ಇಲ್ಲ . ಫ್ರೆಂಚ್‌ನವರನ್ನ ಕರೆಸಿಕೊಂಡು ಅವರವರಲ್ಲೇ 
ಕಿತ್ತಾಟಕ್ಕೆ ಹಚ್ಚಬೇಕು ಅಷ್ಟೆ . ಆ ಜರ್ಮನಿಯವನು, ಪಬ್ಲಿನ್‌ನನ್ನ ಅಮೆರಿಕದ 
ನ್ಯೂಯಾರ್ಕಿಗೆ ಕಳುಹಿಸಿದ್ದಾರಂತೆ, ಫ್ರಾನ್ಸಿನ ಮೋರ್ಯೂನನ್ನು ಕರೆದುಕೊಂಡು. 
ಬರುವುದಕ್ಕೆ,' ಆ ವರ್ಷ ರಷಿಯನ್ ಸೇನೆಗೆ ಸೇರಲು ಮೋರ್ಯೂಗೆ ಆಹ್ವಾನ 
ನೀಡಿದ್ದರ ಬಗ್ಗೆ ವೃದ್ದ ಪ್ರಿನ್ಸ್ ಹೇಳುತ್ತಿದ್ದ, ' ವಂಡರ್‌ಫುಲ್ ! ಯಾಕೆ, ಪೊಟೆಮ್ಮಿನ್, 
ಸುವೊರೊವ್, ಓರ್ಲಾಫ್ ಇವರೆಲ್ಲ ಜರ್ಮನರೇನು? ಇಲ್ಲಯ್ಯಾ ಇಲ್ಲ, ನೀವು 
ಈಗಿನ ಕಾಲದವರು ಬುದ್ದಿ ಇಲ್ಲದವರೋ ಅಥವಾ ನಾನೇ ಹಿಂದಿನ ಕಾಲದವನೋ 
ಗೊತ್ತಾಗುತ್ತಿಲ್ಲ. ದೇವರು ನಿಮಗೆ ಒಳ್ಳೆಯದು ಮಾಡಲಿ. ಏನಾಗುತ್ತದೋ ನೋಡುತ್ತೇನೆ 
ನಾನೂ . ಅಂತೂ ಬೋನಾಪಾರ್ಟೆ ದೊಡ್ಡ ದಂಡನಾಯಕ! ಹೂಂ ! - 

- 'ನಮ್ಮ ಎಲ್ಲಾ ಯೋಜನೆಗಳೂ ಸರಿ ಎಂದೇನೂ ಅಲ್ಲ, ಪ್ರಿನ್ಸ್ ಆಂಡೂ 
ಹೇಳಿದ, “ ಆದರೂ ಬೋನಾಪಾರ್ಟೆಯ ಬಗ್ಗೆ ನೀವು ಅಂದುಕೊಂಡಿರುವುದು 
ಮಾತ್ರ ಸರಿಯಲ್ಲ. ನೀವು ಬೇಕಾದಷ್ಟು ತಮಾಷೆ ಮಾಡಿ, ಆದರೆ ನೆಪೋಲಿಯನ್ 
ಬೊನಪಾರ್ಟೆ ಮಾತ್ರ ದೊಡ್ಡ ದಂಡನಾಯಕ, ಅನುಮಾನವೇ ಇಲ್ಲ.' 


೩೭ ಆಸ್ಟಿಯಾದ ಯುದ್ಧ ಸಲಹಾ ಸಮಿತಿಗೆ ವೃದ್ಧ ಪ್ರಿನ್ಸ್ ಇಟ್ಟಿದ್ದ ವ್ಯಂಗ್ಯವಾದ ಹೆಸರು. 


೧೫೩ 


- ಸಂಪುಟ ೧ - ಸಂಚಿಕೆ ಒಂದು 

'ಮೈಖೇಲ್ ಇವಾನೊವಿಚ್ ! ವೃದ್ದ ಪ್ರಿನ್ಸ್ ಉದ್ದಾರ ತೆಗೆದ. ಮೈಖೆಲ್ 
ಇವಾನೊವಿಚ್ ಬೇಯಿಸಿದ ಮಾಂಸದ ತುಂಡು ಕತ್ತರಿಸುತ್ತಾ , ಸದ್ಯ ಯಜಮಾನರು 
ನನ್ನ ಮರೆತರಲ್ಲ ಎಂದು ಸಂತೋಷವಾಗಿದ್ದವನು ತಲೆ ಎತ್ತಿದ. 'ಬೋನಾಪಾರ್ಟೆ 
ಚತುರ ವ್ಯೂಹಗಳನ್ನು ರಚನೆಮಾಡುತ್ತಾನೆ ಅಂತ ನಾನು ಹೇಳಿರಲಿಲ್ಲವೇ ? ನೋಡು, 
ಇವರೂ ಅದೇ ಹೇಳುತಿದಾರೆ.' 
- ' ಖಂಡಿತ, ಯುವರ್ ಎಕ್ಸಲೆನ್ಸಿ' ಎಂದ ಮೇಸ್ತಿ. 
ಆ ವೃದ್ದ ಪ್ರಿನ್ಸ್ ಮತ್ತೆ ಒಣ ನಗು ನಗುತ್ತಾ ಹೇಳಿದ. ' ಬೋನಾಪಾರ್ಟೆ ಬಾಯಲ್ಲಿ 
ಬೆಳ್ಳಿಯ ಚಮಚ ಇಟ್ಟುಕೊಂಡು ಹುಟ್ಟಿದವನು. ಒಳ್ಳೆಯ ಸೈನ್ಯ ಇದೆ ಅವನ 
ಹತ್ತಿರ . ಮತ್ತೆ ಮೊದಲು ಜರ್ಮನಿಯ ಮೇಲೆ ದಾಳಿ ಮಾಡಿದ . ಯಾವ ಮೂರ್ಖ 
ಬೇಕಾದರೂ ಜರ್ಮನಿಯವರನ್ನ ಸೋಲಿಸಬಹುದು. ಈ ಪ್ರಪಂಚ ಹುಟ್ಟಿದಾಗಿನಿಂದ 
ಎಲ್ಲರೂ ಜರ್ಮನಿಯವರನ್ನ ಸೋಲಿಸಿರುವವರೇ ! ಅವರು ಮಾತ್ರ ಯಾರನ್ನೂ 
ಸೋಲಿಸಿಲ್ಲ, ತಮ್ಮಲ್ಲೆ ಕಾದಾಡಿಕೊಂಡುಸೋತಿದಾರೆ ಅಷ್ಟೆ. ಅಂಥವರನ್ನ ಸೋಲಿಸಿ 
ಬೋನಾಪಾರ್ಟೆ ಕೀರ್ತಿವಂತನಾದ ' . 

ಆನಂತರ ವೃದ್ದ ಪ್ರಿನ್ಸ್ ಬೋನಾಪಾರ್ಟೆ ಯುದ್ಧದಲ್ಲಿ ಮಾತ್ರವಲ್ಲ 
ರಾಜಕೀಯದಲ್ಲೂ ಮಾಡಿದ ತಪ್ಪುಗಳನ್ನೆಲ್ಲ ಪಟ್ಟಿಮಾಡಲು ತೊಡಗಿದ. ಅದಕ್ಕೆ 
ಪ್ರಿನ್ಸ್ ಆಂಡೂ ಯಾವ ಮಾತೂ ಹೇಳಲಿಲ್ಲ. ಯಾವ ರೀತಿಯಲ್ಲಿ ವಾದಮಾಡಿದರೂ 
ತಂದೆಯ ಅಭಿಪ್ರಾಯ ಬದಲಾಗುವುದಿಲ್ಲವೆಂದು ಅವನಿಗೆ ಗೊತ್ತಿತ್ತು. ಬದಲು 
ಮಾತನಾಡದೆ, ಅದೆಷ್ಟೋ ವರ್ಷಗಳಿಂದ ಹಳ್ಳಿಯಲ್ಲಿ ಒಂಟಿಯಾಗಿ ಬದುಕುತ್ತಿರುವ 
ಅಪ್ಪ ಅದು ಹೇಗೆ ಇತ್ತೀಚಿನ ಯೂರೋಪಿಯನ್ ಯುದ್ದದ, ರಾಜಕೀಯದ 
ಸೂಕ್ಷ ಗಳನ್ನೆಲ್ಲ ಖಚಿತವಾಗಿ ತಿಳಿದು ವಾದಮಾಡುತ್ತಿದ್ದಾರೆ ಎಂದು ಆಶ್ಚರ್ಯಪಟ್ಟ, 

'ನಾನು ಮುದುಕ, ಇವತ್ತಿನ ವಿಚಾರಗಳು ನನಗೇನೂ ಅರ್ಥವಾಗುವುದಿಲ್ಲ 
ಅಂದುಕೊಂಡಿದೀರಾ? ನಿಜ ಹೇಳಬೇಕೆಂದರೆ ಈಗ ಆಗುತ್ತಿರುವುದನ್ನೆಲ್ಲ ನೋಡಿ 
ಮನಸ್ಸು ಕೆಟ್ಟುಹೋಗಿದೆ. ರಾತ್ರಿಯ ಹೊತ್ತು ನಿದ್ರೆ ಬರುವುದೇ ಇಲ್ಲ. ಇರಲಿ, 
ಹೇಳು, ನೀನು ಅಷ್ಟೊಂದು ಹೊಗಳುವ ಮಹಾನ್ ದಂಡನಾಯಕ ಎಲ್ಲಿ ಯಾವ 
ಯುದ್ದದಲ್ಲಿ ತನ್ನ ಚಾತುರ್ಯ ತೋರಿಸಿದ್ದಾನೆ, ಹೇಳು ನೋಡೋಣ?' 
- ' ಅದನ್ನೆಲ್ಲ ವಿವರಿಸುವುದಕ್ಕೆ ಬಹಳ ಹೊತ್ತಾಗುತ್ತದೆ' ಎಂದ ಮಗ. . 

- 'ಸರಿ ಹಾಗಾದರೆ ನಿಮ್ಮ ಬೋನಾಪಾರ್ಟೆಯ ಹತ್ತಿರವೇ ಹೋಗು! ಮೇಡಂ 
ಬೋರೀನ್, ಇಲ್ಲಿ ನೋಡಿ, ನಿಮ್ಮ ಮರ್ಕಟ ಚಕ್ರವರ್ತಿಯ ಇನ್ನೊಬ್ಬ ಅಭಿಮಾನಿ 
ಇದಾರೆ ಇಲ್ಲಿ ' ಎಂದು ಉತ್ಕೃಷ್ಟವಾದ ಫ್ರೆಂಚಿನಲ್ಲಿ ಹೇಳುತ್ತಾ ' ನಾನಂತೂ 
ನೆಪೋಲಿಯನ್‌ವಾದಿಯಲ್ಲ' ಎಂದ. 

“ಎಂದು ಕಾಣುವೆನೋ ದೇವರೇ ಬಲ್ಲ' ಎಂದು ಫ್ರೆಂಚ್ ಹಾಡನ್ನು 


ತೆ 


೧೫೪ 

ಯುದ್ಧ ಮತ್ತು ಶಾಂತಿ 
ರಾಗವಿಲ್ಲದೆ ಗುನುಗುತ್ತಾ ಪ್ರಿನ್ಸ್ ಊಟ ಮುಗಿಸಿ ಏಳುವಾಗ ನಕ್ಕದ್ದು ಮತ್ತಷ್ಟು 
ಕರ್ಕಶವಾಗಿತ್ತು. 

ಈ ಮಾತಿನುದ್ದಕ್ಕೂ ಮತ್ತೆಊಟ ಮುಗಿಯುವವರೆಗೂ ಪುಟ್ಟ ರಾಜಕುಮಾರಿ 
ಮೌನವಾಗಿಯೇ ಕೂತಿದ್ದಳು. ಪ್ರಿನ್ಸೆಸ್ ಮೇರಿಯನ್ನೂ ಮಾವನನ್ನು ಸ್ವಲ್ಪ 
ಭಯದಿಂದಲೆ ನೋಡುತ್ತಿದ್ದಳು. ಊಟ ಮುಗಿಸಿ ಹೊರಟಾಗ ನಾದಿನಿಯ ತೋಳು 
ಹಿಡಿದು ಮತ್ತೊಂದು ಕೋಣೆಗೆ ಕರೆದುಕೊಂಡು ಹೋದಳು. 

'ನಿಮ್ಮಪ್ಪ ಎಷ್ಟು ಬುದ್ಧಿವಂತರು. ಅದಕ್ಕೆ ಅವರನ್ನ ನೋಡಿದರೆ 
ಭಯವಾಗುತ್ತದೆ' ಅಂದಳು. 

"ಓ ! ಅಪ್ಪ ತುಂಬ ಒಳ್ಳೆಯವರು!' ಅಂದಳು ಪ್ರಿನ್ಸೆಸ್ ಮೇರಿ. 


ಮಾರನೆಯ ದಿನ. ಸಾಯಂಕಾಲವಾಗಿತ್ತು. ಪ್ರಿನ್ಸ್ ಆಂಡೂ ಹೊರಡುವುದಕ್ಕೆ 
ಸಿದ್ದವಾಗುತ್ತಿದ್ದ . ತನ್ನ ಮಾಮೂಲು ದಿನಚರಿಯನ್ನು ಕೆಡಿಸಿಕೊಳ್ಳುವವನಲ್ಲದ ವೃದ್ದ 
ಪ್ರಿನ್ಸ್ ಊಟದ ನಂತರ ವಿಶ್ರಾಂತಿಗೆ ತೆರಳಿದ್ದ. ಪುಟ್ಟ ರಾಜಕುಮಾರಿ ನಾದಿನಿಯ 
ಜೊತೆಯಲ್ಲಿದ್ದಳು. ಪ್ರಿನ್ಸ್ ಆಂಡ್ರ ಪ್ರಯಾಣದಕೋಟುತೊಟ್ಟುಸೇವಕನೊಡನೆ 
ಸೇರಿಕೊಂಡು ಪ್ರಯಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಕಟ್ಟುತ್ತಾ ಸ್ವಲ್ಪ ಹೊತ್ತು 
ಕೋಣೆಯೊಳಗೆ ಸೇರಿಕೊಂಡಿದ್ದ. ತಾನೇ ಹೋಗಿಸಾರೋಟನ್ನು ನೋಡಿಕೊಂಡು 
ಬಂದು, ಪೆಟ್ಟಿಗೆಗಳನ್ನೆಲ್ಲ ಗಾಡಿಗೆ ಏರಿಸುವುದನ್ನು ನಿಗಾಮಾಡಿ, ಕುದುರೆಗಳನ್ನು 
ಹೂಡುವುದಕ್ಕೆ ಅಪ್ಪಣೆ ಕೊಟ್ಟಿದ್ದ . ಯಾವಾಗಲೂ ಜೊತೆಯಲ್ಲೇ ಒಯ್ಯುತ್ತಿದ್ದ 
ವಸ್ತುಗಳಷ್ಟೇ ಈಗ ಕೋಣೆಯೊಳಗೆ ಇದ್ದವು: ಸಣ್ಣ ಪೆಟ್ಟಿಗೆ, ಬೆಳ್ಳಿ ತಟ್ಟೆ ಮತ್ತೆ 
ಊಟದ ಡಬ್ಬಿ , ಎರಡು ಟರ್ಕಿಷ್‌ ಪಿಸ್ತೂಲು, ಮತ್ತೊಂದು ಕತ್ತಿ, ಆ ಕತ್ತಿಯನ್ನು 
ಅವರಪ್ಪ ಉಡುಗೊರೆಯಾಗಿ ಕೊಟ್ಟದ್ದು, ಸುವರೋವ್‌ ಓಛಕೋವ್‌ಗೆ ಮುತ್ತಿಗೆ 
ಹಾಕಿದ್ದಾಗ ಅದನ್ನವನು ಲೂಟಿ ಮಾಡಿ ತಂದಿದ್ದ. ಪ್ರಯಾಣಕ್ಕೆ ಅಗತ್ಯವಾದ ಈ 
ವಸ್ತುಗಳೆಲ್ಲ ವ್ಯವಸ್ಥಿತವಾಗಿ ಜೋಡಣೆಯಾಗಿ, ತೀರ ಅಚ್ಚುಕಟ್ಟಾಗಿ, ಹೊಸ ಬಟ್ಟೆಯಲ್ಲಿ 
ಸುತ್ತಿಕೊಂಡು ಹುಷಾರಾಗಿ ಹಗ್ಗ ಬಿಗಿಸಿಕೊಂಡು ಸಿದ್ದವಾಗಿದ್ದವು. 

- ಪ್ರಯಾಣ ಹೊರಡಲಿರುವಾಗ ಅಥವಾ ಬದಲಾವಣೆಗೆ ಒಡ್ಡಿಕೊಳ್ಳಲಿರುವಾಗ 
ಚಿಂತನಶೀಲ ವ್ಯಕ್ತಿಗಳ ಮನಸ್ಸು ಸಾಮಾನ್ಯವಾಗಿ ತೀರ ಗಂಭೀರವಾದ 
ಸ್ಥಿತಿಯಲ್ಲಿರುತ್ತದೆ ; ಕಳೆದ ದಿನಗಳನ್ನು ನೋಡಿಕೊಳ್ಳುತ್ತಾ ಮುಂದಿನ ದಿನಗಳಿಗೆ 
ತಕ್ಕ ಯೋಜನೆ ಮಾಡಿಕೊಳ್ಳುತ್ತಾ ಇರುತ್ತದೆ . ಪ್ರಿನ್ಸ್ ಆಂಡ್ರ ನ ಮುಖ 
ಸೌಮ್ಯವಾಗಿಯೂ ಚಿಂತಾಮಗ್ನವಾಗಿಯೂ ಇತ್ತು. ಬೆನ್ನ ಹಿಂದೆ ಕೈ ಕಟ್ಟಿಕೊಂಡು 
ಕೋಣೆಯಲ್ಲಿ ಅತ್ತಿಂದಿತ್ತ ದೊಡ್ಡ ಹೆಜ್ಜೆ ಹಾಕಿಕೊಂಡು ಓಡಾಡುತ್ತಾ ನೆಟ್ಟ ನೋಟದಿಂದ 
ದಿಟ್ಟಿಸುತ್ತಾ ಆಗಾಗ ತಲೆ ಕೊಡವುತ್ತಾ ಇದ್ದ . ಯುದ್ಧಕ್ಕೆ ಹೋಗುವುದಕ್ಕೆ ಭಯವೋ 


೧೫೫ 
ಸಂಪುಟ ೧ - ಸಂಚಿಕೆ ಒಂದು 
ಹೆಂಡತಿಯನ್ನು ಬಿಟ್ಟು ಹೋಗುತ್ತಿರುವುದಕ್ಕೆ ದುಃಖವೋ ಅಥವಾ ಎರಡೂ ಮನಸ್ಸಿನಲ್ಲಿ 
ಸ್ವಲ್ಪ ಸ್ವಲ್ಪ ಇತ್ತೋ - ಈಗ ಇರುವ ಹಾಗ ಯಾರ ಕಣ್ಣಿಗೂ ಬೀಳಬಾರದೆನ್ನುವುದು 
ಮಾತ್ರ ಅವನ ಅಪೇಕ್ಷೆಯಾಗಿತ್ತು. ಹೊರಗಿನ ಹಜಾರದಲ್ಲಿ ಹೆಜ್ಜೆ ಸಪ್ಪಳ ಕೇಳಿದ 
ತಕ್ಷಣ ಬೆನ್ನ ಹಿಂದೆ ಕಟ್ಟಿಕೊಂಡಿದ್ದ ಕೈಗಳನ್ನು ತಟಕ್ಕನೆ ಬಿಟ್ಟು, ಮೇಜಿನ ಹತ್ತಿರ 
ಹೋಗಿ, ಪೆಟ್ಟಿಗೆಯ ಮುಚ್ಚಳವನ್ನು ಮೈ ಮರೆತು ನೋಡುತ್ತಿರುವವನ ಹಾಗೆ 
ನಿಂತುಕೊಂಡು, ತನ್ನ ಎಂದಿನ ಶಾಂತ ನಿರ್ಭಾವುಕತೆಯ ಭಾವವನ್ನು ಮುಖದ 
ಮೇಲೆ ತಂದುಕೊಂಡ. ಅವನಿಗೆ ಕೇಳಿಸಿದ್ದು ಪ್ರಿನ್ಸೆಸ್ ಮೇರಿಯ ಭಾರವಾದ 
ಹೆಜ್ಜೆಗಳ ಸದ್ದು. 

- 'ಕುದುರೆಗಳನ್ನು ಕಟ್ಟುವುದಕ್ಕೆ ಹೇಳಿದೀಯಂತೆ' ಏದುಸಿರು ಬಿಡುತ್ತಾ ಪಿನ್ನೆಸ್ 
ಮೇರಿ ಕೇಳಿದಳು (ಓಡಿ ಬಂದಿರಬೇಕು ಅವಳು ). ' ನಿನ್ನ ಜೊತೆ ಒಬ್ಬಳೇ 
ಮಾತನಾಡಬೇಕು ಅನ್ನಿಸಿತು . ಈ ಸಾರಿ ನಿನ್ನ ಮತ್ತೆ ಯಾವಾಗ ನೋಡುತೇನೋ 
ದೇವರಿಗೇ ಗೊತ್ತು. ನಾನು ಬಂದೆ ಅಂತ ಕೋಪ ಇಲ್ಲ ತಾನೇ ?' ಅಂದಳು . ಆ 
ಪ್ರಶ್ನೆಯನ್ನು ಕೇಳಿದ್ದಕ್ಕೆ ಸಮರ್ಥನೆ ಅನ್ನುವ ಹಾಗೆ 'ನೀನು ತುಂಬ 
ಬದಲಾಗಿಬಿಟ್ಟಿದೀಯ ಆಂದ್ರೂಷ್ಕಾ' ಅಂದಳು . 

ಅವನನ್ನು ಆಂದೂಷ್ಕಾ ಎಂದು ಕರೆಯುವಾಗ ಅವಳ ಮುಖದಲ್ಲಿ ಸಣ್ಣ 
ನಗುವಿತ್ತು . ಹೆದರಿಸುವ ಹಾಗಿರುವ ಈ ಸುಂದರ ಯುವಕನೇ ತನ್ನ ಚಿಕ್ಕಂದಿನ 
ಆಟದ ಗೆಳೆಯ , ಬಡಕಲು ಮೈಯ ತುಂಟ ಆಂದ್ರೂಷ್ಕಾ ಅನ್ನುವ ಕಲ್ಪನೆ 
ಮಾಡಿಕೊಳ್ಳುವುದೂ ಕಷ್ಟವಾಗಿತ್ತು. 

- ' ಲಿಸೀ ಎಲ್ಲಿ?' ಅಂದ. ಕಿರು ನಗೆಯೊಂದೇ ಅವನ ಉತ್ತರವಾಗಿತ್ತು . 
* 'ಬಹಳ ಆಯಾಸವಾಗಿತ್ತು. ನನ್ನ ರೂಮಿನಲ್ಲೇ ಸೋಫಾ ಮೇಲೆ ಮಲಗಿ 
ನಿದ್ದೆ ಮಾಡಿ ಬಿಟ್ಟಳು. ಆಂಡೂ , ನಿನ್ನ ಹೆಂಡತಿ ತುಂಬ ಅಪರೂಪದವಳು' 
ಅಣ್ಣನ ಎದುರಿಗೆ ಸೋಫಾ ಮೇಲೆ ಕೂರುತ್ತಾ ಹೇಳಿದಳು. 'ಥೇಟು ಮಗುವಿನ 
ಹಾಗೆ, ಮುದ್ದು ಮುದ್ದಾಗಿ ಖುಶಿ ಖುಶಿಯಾಗಿರುವ ಮಗು. ನನಗಂತೂ ತುಂಬ 
ಹಿಡಿಸಿದಳು' ಅಂದಳು. 

ಪ್ರಿನ್ಸ್ ಆಂಡೂ ಏನೂ ಅನ್ನಲಿಲ್ಲ. ವ್ಯಂಗ್ಯ ಮತ್ತೆ ತಿರಸ್ಕಾರದ ಭಾವ 
ಅವನ ಮುಖದ ಮೇಲೆ ಮೂಡಿದ್ದನ್ನು ಪ್ರಿನ್ಸೆಸ್ ಗಮನಿಸಿದಳು. 

'ಸಣ್ಣ ಪುಟ್ಟ ತಪ್ಪು ಇದ್ದರೆ ಸಹಿಸಿಕೊಳ್ಳಬೇಕಪ್ಪಾ , ನಮ್ಮಲ್ಲೂ ಅಂಥವು 
ಇರತಾವೆ, ಆಂದ್ರೆ ಅವಳು ಘನವಂತರ ಸಮಾಜದಲ್ಲೇ ಹುಟ್ಟಿ, ಬೆಳೆದು, ಬುದ್ದಿ 
ಕಲಿತವಳು . ಅಲ್ಲದೆ ಈಗಿನ ಸ್ಥಿತಿಯೂ ಅವಳಿಗೆ ಕಿರಿಕಿರಿ ಅನ್ನಿಸುತ್ತಿದೆ. ನಾವೇ 
ಬೇರೆಯವರ ಜಾಗದಲ್ಲಿದ್ದರೆ ನಮಗೆ ಏನನ್ನಿಸುತ್ತಿತ್ತು, ಅದನ್ನು ತಿಳೀಬೇಕು. 
ಅರ್ಥವಾದರೆ ಕ್ಷಮಿಸಿಬಿಡುತ್ತೀ . ಯೋಚನೆ ಮಾಡಿ ನೋಡು, ಅವಳಿಗೆ ಹೇಗೆ 


೧೫೬ 

ಯುದ್ಧ ಮತ್ತು ಶಾಂತಿ 
ಇರಬಹುದು ಪಾಪ , ಅಭ್ಯಾಸವಾಗಿರುವ ಬದಕು ಬಿಟ್ಟು, ಈಗ ಗಂಡನೂ ದೂರ 
ಹೋಗಿ, ಹಳ್ಳಿಯಲ್ಲಿ ಒಬ್ಬಳೇ ಇರುವುದು , ಅದೂ ಈಗಿರುವ ಸ್ಥಿತಿಯಲ್ಲಿ, ತುಂಬ 
ಕಷ್ಟವಾಗಿದೆ ಅವಳಿಗೆ.' 
- ತಂಗಿಯನ್ನು ನೋಡುತ್ತಾ ಪ್ರಿನ್ಸ್ ಆಂಡೂ ನಕ್ಕ - ಇವರು ನಮಗೆ ಪೂರಾ 
ಗೊತ್ತು' ಅಂದುಕೊಂಡಿರುತ್ತೇವಲ್ಲ ಅಂಥವರಿಗಾಗೇ ನಾವು ಮೀಸಲಿಟ್ಟಿರುವ ನಗುವಿನ 
ಹಾಗೆ 

“ನೀನು ಹಳ್ಳಿಯಲ್ಲಿರುತ್ತೀಯ, ನಿನಗೇನೂ ಭಯ , ಆತಂಕ ಇಲ್ಲ,' ಅಂದ. 

“ಅದು ಬೇರೆ. ನನ್ನ ವಿಚಾರ ಈಗ ಬೇಡ. ಬೇರೆ ಥರದ ಬದುಕು ನನಗೆ 
ಬೇಡ, ಬೇಕು ಅಂದುಕೊಂಡರೂ ಆಗುವುದಿಲ್ಲ. ಯಾಕೆಂದರೆ ಬೇರೆ ಥರ ಬದುಕುವುದು 
ನನಗೆ ಗೊತ್ತೇ ಇಲ್ಲ. ಸುಮ್ಮನೆ ಯೋಚನೆ ಮಾಡಿ ನೋಡು, ಆಂದ್ರೇ . ಘನವಂತರ 
ಸಮಾಜದ ಬದುಕಿಗೆ ಹೊಂದಿಕೊಂಡಿರುವ ಎಳೆಯ ವಯಸ್ಸಿನ ಹುಡುಗಿ, ತನ್ನ 
ಬದುಕಿನ ಅತ್ಯುತ್ತಮ ಸಮಯವನ್ನು ಹಳ್ಳಿಯಲ್ಲಿ ಬಚ್ಚಿಟ್ಟುಕೊಂಡು, ಅದೂ 
ಒಬ್ಬಂಟಿಯಾಗಿ ತನ್ನ ಪಾಡಿಗೆ ತಾನು ಕಳೆಯುವುದು ಎಷ್ಟು ಕಷ್ಟ - ಅಪ್ಪ, ಯಾವಾಗಲೂ 
ಬ್ಯುಸಿ. ಇನ್ನು ನಾನು, ನನ್ನ ಬಿಡು, ನಿನಗೇ ಗೊತ್ತು, ಘನವಂತರ ಸಮಾಜದ 
ಹುಡುಗಿಗೆ ಜೊತೆಯಾಗುವುದಕ್ಕೆ ತಕ್ಕವಳಲ್ಲ. ಇನ್ನು ಉಳಿದದ್ದು ಮೇಡಂ 
ಬೋರೀನ್...' 

'ಮೇಡಂ ಬೋರೀನ್ ಅನ್ನುವ ಹೆಂಗಸು ನನಗೆ ಹಿಡಿಸಲಿಲ್ಲ . ಅಂದ ಪ್ರಿನ್ಸ್ 
ಆಂಡ್ರ 

- 'ಹೌದಾ? ನಿಜವಾಗಲೂ ತುಂಬ ಒಳ್ಳೆಯ ಹೆಣ್ಣುಮಗಳು. ಮರುಕ ಜಾಸ್ತಿ , 
ಒಳ್ಳೆಯ ಸ್ವಭಾವ. ಅವಳನ್ನು ಕಂಡರೆ ಅಯ್ಯೋ ಅನ್ನಿಸುತ್ತದೆ. ಅವಳಿಗೆ ಯಾರೂ 
ಇಲ್ಲ. ಯಾರೂ ಅಂದರೆ ಯಾರೂ . ನಿಜ ಹೇಳಬೇಕು ಅಂದರೆ ಅವಳಿಂದ 
ನನಗೇನೂ ಉಪಯೋಗ ಇಲ್ಲ. ದಬ್ಬಾಳಿಕೆ ಮಾಡುತಾಳೆ ಅನ್ನಿಸುತ್ತದೆ. ನಾನು 
ಒಂದು ಥರಾ ಒಂಟಿ ಬಡಕಿ, ಇತ್ತೀಚೆಗಂತೂ ಯಾರೂ ಬೇಡ, ಒಬ್ಬಳೇ ಇರಬೇಕು 
ಅನ್ನಿಸುತ್ತಾ ಇದೆ. .. ಅಪ್ಪನಿಗೆ ಅವಳನ್ನು ಕಂಡರೆ ಇಷ್ಟ, ಅವಳು ಮತ್ತೆ ಮೈಖೆಲ್ 
ಇವಾನೊವಿಚ್ ಇವರಿಬ್ಬರ ಹತ್ತಿರ ಮಾತ್ರ ಅಪ್ಪ ಕೋಪ ಮಾಡಿಕೊಳ್ಳದೆ 
ಮಾತಾಡಿಸುತ್ತಾರೆ, ಹೊಂದಿಕೊಂಡು ಹೋಗುತ್ತಾರೆ. ಯಾಕೆ ಅಂದರೆ ಇಬ್ಬರೂ 
ಅಪ್ಪನ ಹಂಗಿನಲ್ಲಿದಾರೆ. ಲಾರೆನ್ಸ್ ಸ್ಟರ್ನ್ ಹೇಳುತ್ತಾನಲ್ಲಾ - ನಮಗೆ ಒಳ್ಳೆಯದು 
ಮಾಡಿದವರಿಗಿಂತ ನಮ್ಮಿಂದ ಯಾರಿಗೆ ಒಳ್ಳೆಯದಾಗಿದೆಯೋ ಅವರನ್ನ ಕಂಡರೆ 
ನಮಗೆ ಇಷ್ಟವಾಗುತ್ತದೆ - ಅಂತ. ಅಪ್ಪ ಸತ್ತು ಅವಳು ತಬ್ಬಲಿಯಾಗಿ ಬೀದಿಯಲ್ಲಿ 
ಬಿದ್ದಿದ್ದಾಗ ನಮ್ಮಪ್ಪ ಅವಳನ್ನು ಕರೆದುಕೊಂಡು ಬಂದದ್ದು. ಅವಳ ಮನಸ್ಸು 
ಒಳ್ಳೆಯದು. ಮತ್ತೆ ಅವಳು ಓದುವ ರೀತಿ ಅಪ್ಪನಿಗೆ ಇಷ್ಟ, ದಿನಾ ಸಂಜೆಯ 


೧೫೭ 
ಸಂಪುಟ ೧ - ಸಂಚಿಕೆ ಒಂದು 
ಹೊತ್ತು ಅಪ್ಪನ ಎದುರಿಗೆ ಕೂತು ಏನೇನಾದರೂ ಓದುತಾ ಇರುತಾಳೆ, ತುಂಬ 
ಚೆನ್ನಾಗಿ ಓದುತಾಳೆ.' 

“ ನಿಜ ಹೇಳು ಮೇರಿ, ಅಪ್ಪನ ಜೊತೆಯಲ್ಲಿ ಇರೋದು ನಿನಗೆ ಕಷ್ಟ 
ಅಂತಲೇ ನನಗೆ ಅನ್ನಿಸುತ್ತದೆ. ಅಪ್ಪ ಹೇಗೆ ಅನ್ನುವುದು ಚೆನ್ನಾಗಿ ಗೊತ್ತು ನನಗೆ.' 
ಪ್ರಿನ್ಸ್ ಆಂಡೂ ತಟ್ಟನೆ ಕೇಳಿದ. 

- ಪ್ರಿನ್ಸೆಸ್ ಮೇರಿಗೆ ಆಶ್ಚರ್ಯವಾಯಿತು. ಅಮೇಲೆ ಆ ಪ್ರಶ್ನೆ ಕೇಳಿ 
ಆಘಾತವಾಯಿತು. 

“ನನಗೆ ?...ನನಗೆ ?...ಕಷ್ಟ, ನನಗಾ!' ಅಂದಳು. 
- “ ಅಪ್ಪ ಯಾವಾಗಲೂ ನಿರ ಜಾಸ್ತಿ. ಈಗ ಇನ್ನೂ ಅತೀ ಮಾಡತಾ 
ಇದಾರೆ ಅನ್ನಿಸುತದೆ.' ಪ್ರಿನ್ಸ್ ಅಂದ್ರೂ ತಂದೆಯ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದ. 
ತಂಗಿಯನ್ನು ಕೆಣಕುವುದಕ್ಕೆ ಇರಬೇಕು, ಅಥವಾ ಪರೀಕ್ಷಿಸುವುದಕ್ಕೆ . 

- ನೀನು ಒಳ್ಳೆಯವನು ಆಂದ್ರಿ, ಆದರೆ ನಿನಗೆ ಒಂದು ಥರಾ ಬುದ್ದಿವಂತಿಕೆಯ 
ಜಂಬ ಇದೆ' ಅಂದಳು ಪ್ರಿನ್ಸೆಸ್ , ಮಾತು ಮುಂದುವರೆಸುವ ಬದಲಾಗಿ ತನ್ನದೇ 
ಯೋಚನೆಗಳನ್ನು ಹಿಂಬಾಲಿಸುತ್ತಾ 'ಜಂಬ ಪಡುವುದು ಮಹಾ ಪಾಪ. ನಮ್ಮಪ್ಪನ 
ಬಗ್ಗೆ ತೀರ್ಮಾನ ಹೇಳುವುದಕ್ಕೆ ನಾವು ಯಾರು ? ಹಾಗೊಂದುವೇಳೆ ಹೇಳಿದರೂ 
ನಮ್ಮ ತಂದೆಯಂಥ ವ್ಯಕ್ತಿ ಬಗ್ಗೆ ತುಂಬ ಗೌರವ ಅಲ್ಲದೆ ಬೇರೆ ಭಾವನೆ ಹುಟ್ಟಿಸುವುದಕ್ಕೆ 
ಸಾಧ್ಯವಾ ? ಅಪ್ಪನ ಜೊತೆಯಲ್ಲಿ ಸಂತೋಷವಾಗಿ ತೃಪ್ತಿಯಾಗಿ ಇದ್ದೇನೆ. ನೀವೂ 
ಎಲ್ಲರೂ ನನ್ನ ಹಾಗೆಯೇ ಸಂತೋಷವಾಗಿರಬೇಕು ಅನ್ನೋದಷ್ಟೇ ನನ್ನ ಆಸೆ' 
ಅಂದಳು . 

ಅವಳ ಅಣ್ಣ ನಂಬಲಾರದವನಂತೆ ತಲೆ ಆಡಿಸಿದ. 

' ನನಗೆ ಕಷ್ಟ ಅನ್ನಿಸುವುದು ಒಂದೇ ವಿಚಾರ ಏನೂ ಅಂದರೆ , ನಿಜ 
ಹೇಳಿಬಿಡುತ್ತೇನೆ, ಆಂದ್ರಿ, ಧಾರ್ಮಿಕ ವಿಚಾರಗಳ ಬಗ್ಗೆ ಅಪ್ಪನ ಅಭಿಪ್ರಾಯ 
ಇದೆಯಲ್ಲಾ ಅದರಿಂದ ನನ್ನ ಮನಸ್ಸಿಗೆ ಕಷ್ಟವಾಗತದೆ. ಅಪ್ಪ ಅಷ್ಟೊಂದು 
ಬುದ್ದಿವಂತರು, ಬೆಳಕಿನಷ್ಟೇ ಸ್ಪಷ್ಟವಾಗಿರುವ ಧರ್ಮದ ವಿಚಾರದಲ್ಲಿ ಮಾತ್ರ ಅದೇಕೆ 
ಹಾಗೆ ತಪ್ಪು ಯೋಚನೆಮಾಡುತಾರೋ ಗೊತ್ತಾಗಲ್ಲ. ಇದೊಂದು ಮಾತ್ರ ನನ್ನ 
ಮನಸ್ಸಿಗೆ ಕಷ್ಟ, ಈ ವಿಚಾರದಲ್ಲೂ ಇತ್ತೀಚೆಗೆ ಸ್ವಲ್ಪ ಬದಲಾವಣೆಯ ಹೊಳಪು 
ಕಾಣುತಾ ಇದೆ. ಮೊದಲಿನ ಹಾಗೆ ಧರ್ಮದ ವಿಚಾರದಲ್ಲಿ ಕಟುವಾಗಿ ವ್ಯಂಗ್ಯವಾಗಿ 
ಮಾತಾಡಲ್ಲ. ಮೊನ್ನೆ ಚರ್ಚಿನಿಂದ ಒಬ್ಬ ಮಂಕ್ ಬಂದಿದ್ದರು. ಅವರ ಜೊತೆ 
ಬಹಳ ಹೊತ್ತು ಮಾತಾಡಿದರು.' 
- “ಅಯ್ಯೋ ಡಿಯರ್! ನೀನು ಆ ನಿನ್ನ ಸನ್ಯಾಸಿ ಹಿಬ್ಬರೂ ನಿಮ್ಮ 
ಮದ್ದುಗುಂಡುಗಳನ್ನ ದಂಡ ಮಾಡಿಕೊಳ್ಳುತ್ತಾ ಇದೀರಿ ಅನ್ನಿಸದೆ!' ಪ್ರಿನ್ಸ್ ಆಂಡೂ 


೧೫೮ 

ಯುದ್ಧ ಮತ್ತು ಶಾಂತಿ 
ಪ್ರೀತಿ ತುಂಬಿದ ತಮಾಷೆಯ ಧ್ವನಿಯಲ್ಲಿ ಹೇಳಿದ. 

'ದೇವರು ನನ್ನ ಪ್ರಾರ್ಥನೆ ಕೇಳಲಿ ಅನ್ನುವುದಷ್ಟೇ ನನ್ನ ಆಸೆ. ಆಂದ್ರೀ ...” 
ಅಂದು, ಒಂದು ಕ್ಷಣ ಸುಮ್ಮನಿದ್ದು ಯಾಚನೆಯ ಧ್ವನಿಯಲ್ಲಿ ' ನಾನು ಒಂದು 
ಕೇಳುತೇನೆ, ಇಲ್ಲ ಅನ್ನದೆ ನಡೆಸಿಕೊಡಬೇಕು' ಬೇಡಿಕೊಂಡಳು. 

' ನಡೆಸಿಕೊಡುತ್ತೇನೆ ಅನ್ನುವ ಮಾತು ಕೊಡು ಮೊದಲು! ಅದರಿಂದ ನಿನಗೆ 
ಏನೂ ತೊಂದರೆ ಇಲ್ಲ, ಅಥವಾ ಮಾಡಬಾರದಂಥ ಕೆಲಸವೂ ಅಲ್ಲ. ನೀನು 
ನಡೆಸಿಕೊಟ್ಟರೆ ಮಾತ್ರ ತುಂಬ ಸಮಾಧಾನ ಆಗತದೆ. ಮಾತು ಕೊಡು ಆಂದ್ರೂಷಾ' 
ಅಂದು ಪುಟ್ಟ ಚೀಲದೊಳಕ್ಕೆ ಕೈ ಹಾಕಿ, ಒಳಗಿರುವ ಏನನ್ನೋ ಹಿಡಿದುಕೊಂಡು, 
ಆದರೆ ಹೊರಗೆ ತೆಗೆಯದೆ, ಅದೇ ಅವಳ ಕೋರಿಕೆಗೆ ಸಂಬಂಧಿಸಿದ್ದು, ಆದರೂ 
ಮಾತು ಕೊಡುವವರೆಗೆ ತೋರಿಸುವುದಿಲ್ಲ ಅನ್ನುವ ಹಾಗೆ ಅಣ್ಣನನ್ನು ನೋಡಿದಳು. 

- 'ಎಷ್ಟೇ ಕಷ್ಟವಾದರೂ ಸರಿ ...' ಇದೆಲ್ಲ ಏನು ಅನ್ನುವುದನ್ನು ಊಹಿಸಿದವನ 
ಹಾಗೆ ಪ್ರಿನ್ಸ್ ಆಂಡೂ ಹೇಳಿದ. 
- ' ಏನು ಬೇಕಾದರೂ ಅಂದುಕೋ , ಪರವಾಗಿಲ್ಲ! ನೀನೂ ಅಪ್ಪನ ಹಾಗೆನೇ 
ಅನ್ನೋದುಗೊತ್ತು. ಏನು ಬೇಕಾದರೂ ಅಂದುಕೋ , ನನಗೋಸ್ಕರ ಈ ಕೆಲಸ 
ಮಾಡು! ಫೀಸ್ ! ಅಪ್ಪನ ಅಪ್ಪ, ನಮ್ಮ ತಾತ, ಯುದ್ಧಕ್ಕೆ ಹೋಗುವಾಗೆಲ್ಲ ಇದನ್ನು 
ಹಾಕಿಕೊಳ್ಳುತ್ತಾ ಇದ್ದರು....' ಕೈಯನ್ನು ಇನ್ನೂ ಚೀಲದಿಂದ ಹೊರಗೆ ತೆಗೆಯದೆ, 
“ ಮಾತು ಕೊಡುತೀಯಾ?' ಅಂದಳು . 

'ಖಂಡಿತ. ಏನದು ?' 

“ ಆಂದ್ರೀ , ಪವಿತ್ರವಾದ ವಿಗ್ರಹ, ಹರಸಿಕೊಂಡು ಕೊಡುತ್ತೇನೆ. ಯಾವಾಗಲೂ 
ಹಾಕಿಕೊಂಡೇ ಇರಬೇಕು, ತೆಗೆಯಲೇಬಾರದು... ಮಾತು ಕೊಡುತೀಯಾ?' 

- 'ಅದೇನು ಮಣ ಭಾರ ಇದೆಯಾ ? ಹಾಕಿಕೊಂಡಿದ್ದರೆ ನನ್ನ ಕತ್ತು 
ಮುರಿದುಹೋಗುತದಾ ? ನಿನಗೆ ಖುಶಿ ಆದರೆ ಸಾಕು...' ತಮಾಷೆಯಾಗಿ ತಾನು 
ಹೇಳಿದ ಮಾತಿನಿಂದ ತಂಗಿಗೆ ನೋವಾಗಿರುವುದು ಕಂಡು ಮರುಕ ಪಡುತ್ತಾ 
“ ನನಗೂ ಸಂತೋಷವೇ , ಪುಟ್ಟ , ತುಂಬ ಸಂತೋಷ' ಅಂದ. 

'ಇದನ್ನು ಹಾಕಿಕೊಂಡಿದ್ದರೆ, ನಿನಗೆ ಬೇಡದೆ ಇದ್ದರೂ ದೇವರು ನಿನ್ನ 
ಕಾಪಾಡುತ್ತಾನೆ, ತನ್ನವನನ್ನಾಗಿ ಮಾಡಿಕೊಳ್ಳುತ್ತಾನೆ. ಸತ್ಯ ಮತ್ತೆ ಶಾಂತಿ ಇರುವುದು 
ದೇವರ ಬಳಿಯೇ ' ಮಾತಾಡುತ್ತಾ ಪ್ರಿನ್ಸೆಸ್ ಮೇರಿ ಭಾವೋದ್ವೇಗಕ್ಕೆ ಗುರಿಯಾಗಿ 
ಕಂಪಿಸುತ್ತಿದ್ದಳು. ಬಾದಾಮಿ ಆಕಾರದ, ಬೆಳ್ಳಿಯ ಸರಪಳಿ ಕಟ್ಟಿದ ಏಸುಕ್ರಿಸ್ತನ ಪುಟ್ಟ 
ಪ್ರಾಚೀನ ಕಾಲದ ಚಿನ್ನದ ವಿಗ್ರಹವನ್ನು ಭಯಭಕ್ತಿಯಿಂದ ಎರಡೂ ಕೈಯಲ್ಲಿ ಎತ್ತಿ 
ಹಿಡಿದು ಅಣ್ಣನಿಗೆ ತೋರಿಸುತ್ತಾ ಹೇಳಿದಳು . ಶಿಲುಬೆಯಾಕಾರದಲ್ಲಿ ಕ್ರಾಸ್ 
ಮಾಡಿಕೊಂಡು ವಿಗ್ರಹವನ್ನು ಚುಂಬಿಸಿ, ಅಣ್ಣನಿಗೆ ಕೊಟ್ಟಳು. | 


೧೫೯ 
ಸಂಪುಟ ೧ - ಸಂಚಿಕೆ ಒಂದು 

'ಫೀಸ್ ಆಂದ್ರಿ , ನನಗೋಸ್ಕರ!...' 

ದೊಡ್ಡ ಕಣ್ಣುಗಳಲ್ಲಿ ಪ್ರೀತಿ, ಕರುಣೆಯ ಮೃದುವಾದ ಬೆಳಕಿನ ಕಿರಣ 
ಮೂಡಿದ್ದವು. ಆ ಬೆಳಕು ಅವಳ ಬಡಕಲು ರೋಗಿಷ್ಟ ಮುಖಕ್ಕೆ ಇಡೀ ಹೊಸ 
ಪ್ರಭೆಯನ್ನು ತಂದು ಮುಖವನ್ನು ಚೆಲುವಾಗುವಂತೆ ಬದಲಾಯಿಸಿಬಿಟ್ಟಿತ್ತು. ಅಣ್ಣ 
ಕೈ ಚಾಚಿದ . ಆದರೆ ಅವಳೇ ತಡೆದಳು . ಆ೦ದ್ರಿಗೆ ಅರ್ಥವಾಯಿತು. 
ಶಿಲುಬೆಯಾಕಾರದಲ್ಲಿ ಕ್ರಾಸ್ ಮಾಡಿಕೊಂಡು ವಿಗ್ರಹಕ್ಕೆ ಮುತ್ತಿಟ್ಟ . ಅವನ ಮನಸ್ಸು 
ಕರಗಿತ್ತು. ನೋಟ ಮಿದುವಾಗಿತ್ತು. ಮುಖದಲ್ಲಿ ತಮಾಷೆ ಮತ್ತೆ ಮರುಕವಿತ್ತು. 
- ' ಥ್ಯಾಂಕ್ಯೂ ಅಣ್ಣಾ' ಅವನ ಹಣೆಗೆ ಮುತ್ತಿಟ್ಟು, ಮತ್ತೆ ಸೋಫಾದ ಮೇಲೆ 
ಕೂತಳು . 

ಯಾರೂ ಮಾತಾಡಲಿಲ್ಲ.... 

“ಹೇಳುತ್ತಾ ಇದ್ದೆನಲ್ಲ, ಆಂದ್ರಿ , ಯಾವಾಗಲೂ ಇದ್ದ ಹಾಗೆ ಉದಾರವಾಗಿ, 
ಕರುಣೆ ತೋರಿಸುತಾ ಇರು, ದಯವಿಟ್ಟು ಲಿಸೀ ಬಗ್ಗೆ ಕಠಿಣವಾಗಬೇಡ' ಮತ್ತೆ 
ಶುರುಮಾಡಿದಳು . “ತುಂಬ ಒಳ್ಳೆವಳು , ಮೆದು ಸ್ವಭಾವ, ಈಗಂತೂ ಬಹಳ ಕಷ್ಟದ 
ಸ್ಥಿತಿಯಲ್ಲಿದಾಳೆ.” 

- ' ಮಾಷಾ, ನನ್ನ ಹೆಂಡತೀ ಬಗ್ಗೆ ದೂರು ಹೇಳಿಲ್ಲ, ಯಾವ ಕಾರಣಕ್ಕೂ 
ಅವಳನ್ನು ಬಯೂ ಇಲ್ಲ. ಯಾಕೆ ಅದನ್ನೇ ಹೇಳುತಿದ್ದೀ ?' 

ಪ್ರಿನ್ಸೆಸ್ ಮೇರಿಯ ಮುಖ ಕೆಂಪಾಯಿತು. ತಪ್ಪು ಮಾಡಿದವಳ ಹಾಗೆ 
ಮಾತು ನಿಲ್ಲಿಸಿದಳು. 

' ನಾನೇನೂ ಹೇಳಿಲ್ಲ. ಬೇರೆಯವರು ಹೇಳಿರಬೇಕು. ಅದಕ್ಕೆ ನನಗೆ ಬೇಜಾರು' 
ಅಂದ. 

ಪ್ರಿನ್ಸೆಸ್ ಮೇರಿಯ ಹಣೆ, ಕುತ್ತಿಗೆ, ಕೆನ್ನೆಗಳೆಲ್ಲ ಮತ್ತೂ ಕೆಂಪಾದವು. ಏನೋ 
ಹೇಳಬೇಕೆಂದುಕೊಂಡಳು. ಆಗಲಿಲ್ಲ. ಅಣ್ಣ ಸರಿಯಾಗಿ ಊಹೆ ಮಾಡಿದ್ದ :ಊಟವಾದ 
ಮೇಲೆ ಅವನ ಹೆಂಡತಿ ಅತ್ತಿದ್ದಳು; ಹೆರಿಗೆ ಕಷ್ಟವಾಗುತ್ತದೆ, ಭಯವಾಗುತ್ತದೆ ಅಂತ 
ಹೇಳಿಕೊಂಡು ತನ್ನ ಹಣೆಯ ಬರಹ , ಗಂಡ, ಮಾವ ಎಲ್ಲರನ್ನೂ ಎಲ್ಲವನ್ನೂ 
ದೂರಿದ್ದಳು. ಆಮೇಲೆ ನಿದ್ರೆ ಹೋಗಿದ್ದಳು. ಪ್ರಿನ್ಸ್ ಆಂಡ್ರ ಗೆ ತಂಗಿಯ ಬಗ್ಗೆ 
ಅಯ್ಯೋ ಅನ್ನಿಸಿತು. 

'ಇಷ್ಟು ತಿಳಿದುಕೋ ಮಾಷಾ, ನನ್ನ ಹೆಂಡತಿಯನ್ನು ನಾನೆಂದೂ ಬೈದಿಲ್ಲ , 
ಬೈಯಲಾರೆ. ಇದುವರೆಗೂ ಅಷ್ಟೇನೇ , ಮುಂದೆಯೂ ಹಾಗೇನೇ . ಅವಳ ಜೊತೆ 
ಹೀಗಿದೇನಲ್ಲಾ ಅಂತ ನನ್ನನ್ನೇ ನಾನು ಕೂಡ ಬೈದುಕೊಳ್ಳಲಾರೆ. ಹೀಗೇ ಇದ್ದೆ , 
ಇನ್ನು ಮುಂದೆಯೂ ಯಾವ ಪರಿಸ್ಥಿತಿ ಬಂದರೂ ಹೀಗೆಯೇ ಇರುತ್ತೇನೆ. ನಿನಗೆ 
ಸತ್ಯ ತಿಳಿಯುವುದು ಬೇಕಾಗಿದ್ದರೆ, ನಾನು ಸಂತೋಷವಾಗಿದೇನೆಯೇ ಅಂತ 


೧೬೦ 

ಯುದ್ಧ ಮತ್ತು ಶಾಂತಿ | 
ಕೇಳಿದರೆ - ಇಲ್ಲ. ಅವಳು ಸಂತೋಷವಾಗಿದಾಳೆಯೇ - ಇಲ್ಲ. ಯಾಕೆ ಹೀಗಿರಬೇಕು ? 
ಗೊತ್ತಿಲ್ಲ...' 

- ಹೀಗೆ ಹೇಳುತ್ತಿರುವಾಗ ಎದ್ದು ನಿಂತ. ತಂಗಿಯ ಹತ್ತಿರ ಹೋಗಿ ಅವಳ 
ಹಣೆಗೆ ಮುತ್ತಿಡಲು ಬಾಗಿದ. ಅವನ ಸುಂದರವಾದ ಕಣ್ಣುಗಳಲ್ಲಿ ತೀರ ಅಪರೂಪದ 
ಬೆಳಕಿತ್ತು , ಕರುಣೆ ಇತ್ತು. ಆದರೆ ನೋಟ ಮಾತ್ರ ಅವಳ ತಲೆಯಾಚೆ ತೆರೆದ 
ಬಾಗಿಲಾಚೆ ಕಾಣುತ್ತಿದ್ದ ಕತ್ತಲನ್ನು ದಿಟ್ಟಿಸುತ್ತಿತ್ತು . . 

'ಹೋಗೋಣ ನಡಿ. ಅವಳಿಗೆ ಗುಡ್ ಬೈ ಹೇಳಬೇಕು. ಇಲ್ಲಾ, ನೀನು 
ಮೊದಲು ಹೋಗಿ ಅವಳನ್ನು ಎಬ್ಬಿಸಿರು , ಒಂದೇ ನಿಮಿಷ, ಬಂದುಬಿಡುತ್ತೇನೆ. 
ಪೆಟೂಷ್ಕಾ!' ಸೇವಕನನ್ನು ಕರೆದ. ' ಬಾ ಇಲ್ಲಿ . ಇವನ್ನೆಲ್ಲ ತೆಗೆದುಕೊಂಡು ಹೋಗು. 
ಇದು ಸೀಟಿನ ಕೆಳಗೆ, ಇದು ಬಲಗಡೆಗೆ ಇಡು' ಅಂದ. 

ಪ್ರಿನ್ಸೆಸ್ ಮೇರಿ ಎದ್ದು ಬಾಗಿಲ ಕಡೆಗೆ ಹೆಜ್ಜೆ ಹಾಕಿದಳು. ನಿಂತಳು. “ ಆಂದ್ರಿ , 
ನಿನಗೆ ನಂಬಿಕೆ ಇದ್ದಿದ್ದರೆ ಪ್ರಾರ್ಥನೆ ಮಾಡಬಹುದಾಗಿತ್ತು. ಪ್ರೀತಿ ಕೊಡು ದೇವರೇ 
ಅಂತ ಕೇಳಬಹುದಾಗಿತ್ತು. ದೇವರು ಕೊಡುತಿದ್ದ.' 

ಇರಬಹುದು, ಮಾಷಾ' ಅಂದ ಪ್ರಿನ್ಸ್ ಆಂಡೂ “ನೀನು ಹೋಗಿರು 
ಮಾಷ, ನಾನು ಇಗೋ ಬಂದು ಬಿಟ್ಟೆ' ಅಂದ. 

ತಂಗಿಯ ಕೋಣೆಗೆ ಹೋಗುತ್ತಾ ಮನೆಯ ಎರಡು ಭಾಗಗಳನ್ನು 
ಒಂದುಗೂಡಿಸುವ ಹಜಾರದಲ್ಲಿ ಪ್ರಿನ್ಸ್ ಆಂಡ್ರ ಮೇಡಂ ಬೋರೀನ್‌ಳನ್ನು 
ಕಂಡ, ಸಿಹಿಯಾಗಿ ನಕ್ಕಳು. ಅಂದು ಮೂರನೆಯ ಬಾರಿ ನಗು ಉಕ್ಕುವ ಅವಳ 
ಮುಖವನ್ನು ಖಾಲಿ ಹಜಾರಗಳಲ್ಲಿ ಕಂಡಿದ್ದ ಅವನು. 

'ಓ , ನೀವು ನಿಮ್ಮ ಕೋಣೆಯಲ್ಲಿದೀರಿ ಅಂದುಕೊಂಡಿದ್ದೆ' ಯಾಕೋ 
ನಾಚಿಕೊಂಡು ನೆಲ ನೋಡುತ್ತಾ ಹೇಳಿದಳು. ತುಂಬ ನಿಷ್ಣುವಾಗಿ ಅವಳನ್ನು 
ದಿಟ್ಟಿಸಿದ. ಕಹಿಯಾದ ಅಸೌಖ್ಯದ ಭಾವ ಅವನ ಮುಖದಲ್ಲಿ ಕಾಣಿಸಿತು. ಸುಮ್ಮನೆ 
ದುರುಗುಟ್ಟಿಕೊಂಡು ನೋಡಿದ, ಅವಳ ಕಣ್ಣನ್ನಲ್ಲ, ಅವಳ ಹಣೆ, ತಲೆಗೂದಲನ್ನೇ 
ಎಂಥ ತಿರಸ್ಕಾರದಿಂದ ದಿಟ್ಟಿಸಿದನೆಂದರೆ ಅವಳು ಕಡುಕೆಂಪಾಗಿ ಒಂದೂ ಮಾತನಾಡದೆ 
ಹೊರಟುಹೋದಳು . ತಂಗಿಯ ಕೋಣೆಗೆ ಬಂದಾಗ ಪುಟ್ಟ ರಾಜಕುಮಾರಿ 
ಆಗಲೇ ಎದ್ದಿದ್ದಳು . ತೆರೆದಿದ್ದ ಬಾಗಿಲಿನಿಂದ ಅವಳ ಖುಷಿಯಾದ ಮಾತು 
ಕೇಳಿಸುತ್ತಿತ್ತು. ಹುಚ್ಚರ ಹಾಗೆ ಬಡಬಡಿಸುತ್ತಿದ್ದಳು. ಬಹಳ ಹೊತ್ತು ಸುಮ್ಮನಿದ್ದದ್ದನ್ನು 
ಸರಿದೂಗಿಸಬೇಕೋ ಅನ್ನುವ ಹಾಗೆ ಫ್ರೆಂಚ್ ಮಾತು ಸುರಿಯುತ್ತಿತ್ತು. 

' ಇಲ್ಲ, ಹ ಹ ಜ್ಞಾ , ಮೇರಿ! ಸುಮ್ಮನೆ ಒಂದು ಸಾರಿ ಮುದುಕಿ ಕೌಂಟೆಸ್ 
ಝುಬೋವಾನ ಕಲ್ಪನೆ ಮಾಡಿಕೋ . ಬಾಯಲ್ಲಿ ಕಟ್ಟಿಸಿಕೊಂಡ ಹಲ್ಲು, ತಲೆಯಲ್ಲಿ 
ಆರ್ಟಿಫಿಶಿಯಲ್ ಗುಂಗುರು ಕೂದಲು, ವಯಸ್ಸು ತಿರುಗಿತೋ ಅನ್ನುವ ಹಾಗೆ!” 


೧೬೧. 
ಸಂಪುಟ ೧ - ಸಂಚಿಕೆ ಒಂದು 
- ಕೌಂಟೆಸ್ ಝಬೋವಾ ಬಗ್ಗೆ ಹೆಂಡತಿ ಬೇರೆಯವರ ಹತ್ತಿರ ಇದೇ 
ಮಾತುಗಳನ್ನು , ಇದೇ ರೀತಿ ನಗುತ್ತಾ ಆಡಿದ್ದನ್ನು ಆಂಡೂ ಐದನೆಯ ಸಾರಿಯೋ 
ಆರನೆಯ ಸಾರಿಯೋ ಕೇಳುತ್ತಾ ಇದ್ದ. ಕೋಣೆಯೊಳಕ್ಕೆ ಮೆಲ್ಲಗೆ ಕಾಲಿಟ್ಟ. ಕೆಂಪು 
ಕೆಂಪಗೆ, ದುಂಡಗಿದ್ದ ಪುಟ್ಟ ರಾಜಕುಮಾರಿ ಕೈಯಲ್ಲೊಂದು ಕಸೂತಿ ಹಿಡಿದು 
ಆರಾಮ ಕುರ್ಚಿಯಮೇಲೆಕೂತು ಪೀಟರ್ಸ್‌ಬರ್ಗಿನ ನೆನಪುಗಳ ಪ್ರವಾಹವನ್ನು 
ಬಿನ್ನಾಣದ ಮಾತುಗಳಲ್ಲಿ ಹೇಳುತ್ತಿದ್ದಳು. ಪ್ರಿನ್ಸ್ ಆಂಡೂ ಹೋಗಿ, ತಲೆಯನ್ನು 
ಮೃದುವಾಗಿ ತಟ್ಟಿ, 'ಪ್ರಯಾಣದ ಆಯಾಸ ಹೋಯಿತೇ ' ಅಂದ, ತಲೆಯಾಡಿಸಿ 
ಅವಳು ಕಥೆ ಮುಂದುವರೆಸಿದಳು. 
ಈ ಆರು ಕುದುರೆಗಳನ್ನು ಕಟ್ಟಿದ ಸಾರೋಟು ಮೆಟ್ಟಿಲ ಹತ್ತಿರ ನಿಂತು ಕಾಯುತ್ತಿತ್ತು. 
ಶರತ್ಕಾಲದ ರಾತ್ರಿ, ಗಾಡಿ ಹೊಡೆಯುವವನಿಗೆ ಗಾಡಿಯ ಮೂಕಿ ಕೂಡ 
ಕಾಣುತ್ತಿರಲಿಲ್ಲ. ಸೇವಕರು ಲಾಟೀನು ಹಿಡಿದು ಆತುರಾತುರವಾಗಿ ಮೆಟ್ಟಿಲು 
ಹತ್ತಿಳಿಯುತ್ತಿದ್ದರು. ದೊಡ್ಡ ಮನೆಯ ಕಿಟಕಿಗಳೆಲ್ಲ ಉಜ್ವಲವಾದ ಬೆಳಕು 
ಉರಿಸಿಕೊಂಡು ನಿಂತಿದ್ದವು. ಕಿರಿಯ ಪಿನ್‌ನ ಪ್ರಯಾಣ ಶುಭವಾಗಲೆಂದು ಹಾರೈಸಲು 
ಮನೆಯ ಆಳುಗಳೆಲ್ಲ ಬಾಗಿಲಲ್ಲಿ ನೆರೆದಿದ್ದರು. ಮನೆಯವರು, ಮೈಖೆಲ್ 
ಇವಾನೊವಿಚ್, ಮೇಡಂ ಬೋರೀನ್, ಪಿನೆಸ್ ಮೇರಿ, ಮತ್ತು ಪುಟ್ಟ ರಾಜಕುಮಾರಿ 
ದಿವಾನಖಾನೆಯಲ್ಲಿ ಸೇರಿದ್ದರು. ಮಗನಿಗೆ ಏಕಾಂತದಲ್ಲಿ ಬೀಳ್ಕೊಡುಗೆ ನೀಡಬೇಕೆಂದು 
ಬಯಸಿ ವೃದ್ಧ ಪ್ರಿನ್ಸ್ ಆಂಡ್ರ ನನ್ನು ತನ್ನ ಸ್ಪಡಿಗೆ ಕರೆಸಿಕೊಂಡಿದ್ದ . ಅವರಿಬ್ಬರೂ 
ಹೊರಬರುವುದನ್ನೇ ಎಲ್ಲರೂ ಕಾಯುತ್ತಿದ್ದರು. 

- ಪ್ರಿನ್ಸ್ ಆಂಡೂ ಸ್ಪಡಿಗೆ ಕಾಲಿಟ್ಟಾಗ ವೃದ್ದ ಪ್ರಿನ್ಸ್ ಕನ್ನಡಕ ಹಾಕಿಕೊಂಡು , 
ಬಿಳಿಯ ಡ್ರೆಸಿಂಗ್ ಗೌನು ತೊಟ್ಟುಕೊಂಡಿದ್ದ . ಈ ದಿರುಸಿನಲ್ಲಿ ಅವನು ಮಗನನ್ನು 
ಬಿಟ್ಟರೆ ಬೇರೆ ಯಾರನ್ನೂ ಭೇಟಿ ಮಾಡುತ್ತಿರಲಿಲ್ಲ. ಮೇಜಿನ ಮುಂದೆ ಏನೋ 
ಬರೆಯುತ್ತಾ ಕೂತಿದ್ದ . ತಲೆ ಎತ್ತಿ ಸುತ್ತಲೂ ಕಣ್ಣಾಡಿಸಿದ. 

' ಹೊರಟೆಯಾ? ” ಬರೆಯುತ್ತಲೇ ಇದ್ದ. 
'ಗುಡ್ ಬೈ ಹೇಳುವುದಕ್ಕೆ ಬಂದಿದೇನೆ.' 

' ಇಲ್ಲಿ ಮುತ್ತಿಡು', ಕೆನ್ನೆಯ ಮೇಲೆ ಬೆರಳಿಟ್ಟು ತೋರಿಸಿದ. ' ಥ್ಯಾಂಕ್ಸ್ , 
ಥ್ಯಾಂಕ್ಸ್!” 

' ಥ್ಯಾಂಕ್ಸ್ ಯಾಕೆ?' 

' ಹೆಂಗಸರ ಹಿಂದೆ ಓಡಾಡಿಕೊಂಡು ಹೊರಡುವುದಕ್ಕೆ ಮೀನಾ ಮೇಷ 
ಎಣಿಸದೆ ಇದ್ದದ್ದಕ್ಕೆ, ಎಲ್ಲಕ್ಕಿಂತ ಕರ್ತವ್ಯ ಮೊದಲು!' ಬರೆಯುವುದನ್ನು ಮತ್ತೆ 
ಮುಂದುವರೆಸಿದ. ಲೇಖಣಿ ಕರಕರ ಸದ್ದುಮಾಡುತ್ತಿತ್ತು. ಏನಾದರೂ ಹೇಳುವುದಿದ್ದರೆ 
ಹೇಳು. ಎರಡೂ ಕೆಲಸ ಒಟ್ಟಿಗೆ ಮಾಡಬಲ್ಲೆ' ಅಂದ. 


೧೬೨ 

ಯುದ್ಧ ಮತ್ತು ಶಾಂತಿ 
' ಸರಿ , ನನ್ನ ಹೆಂಡತಿ...ನಿಮ್ಮ ಮೇಲೆ ಅವಳ ಜವಾಬ್ದಾರಿ ಹೊರಿಸಿ ಹೋಗುತಾ 
ಇದೇನೆ, ಸಂಕೋಚ ಅನ್ನಿಸುತಾ ಇದೆ.' 

- 'ಸುಮ್ಮನೆ ಏನೇನೋ ಮಾತು ಯಾಕೆ ? ಏನು ಹೇಳಬೇಕೋ ಅದನ್ನು 
ಹೇಳು.' 

“ಅವಳಿಗೆ ದಿನ ತುಂಬಿದಾಗ ಮಾಸ್ಕೋದಿಂದ ಡಾಕ್ಟರನ್ನು ಕರೆಸಿ.' 

ಆ ಮಾತು ಅರ್ಥವಾಗಲಿಲ್ಲ ಅನ್ನುವ ಹಾಗೆ ವೃದ್ದ ಪ್ರಿನ್ಸ್ ಬರೆಯುವುದನ್ನು 
ನಿಲ್ಲಿಸಿ ದುರುಗುಟ್ಟಿ ನೋಡಿದ. 
* 'ಸಹಜವಾಗಿ ನಡೆಯುವುದು ನಡೆಯದಿದ್ದರೆ ಯಾರೂ ಏನೂ 
ಮಾಡುವುದಕ್ಕಾಗುವುದಿಲ್ಲ ಅನ್ನುವುದು ಗೊತ್ತು' ಪ್ರಿನ್ಸ್ ಆಂಡೂ ಹೇಳಿದ. 
ಕಸಿವಿಸಿಪಡುತ್ತಿದ್ದ. ಒಂದು ಲಕ್ಷ ಕೇಸುಗಳಲ್ಲಿ ಒಂದು ಎಲ್ಲೋ ತೊಂದರೆಯಾಗುತ್ತದೆ 
ಅನ್ನುವುದು ನನಗೂ ಗೊತ್ತು. ಆದರೆ ಅವಳಿಗೂ ನನಗೂ ಒಂದು ದುಸ್ವಪ್ನ . 
ಯಾರು ಯಾರೋ ಏನೇನೋ ಹೇಳುವುದು ಕೇಳಿ ಅವಳ ಅವಳಿಗೆ ಕೆಟ್ಟ ಕನಸು 
ಬಿದ್ದಿದ್ದವು. ಹೆದರಿದಾಳೆ.' 
ಈ ' ಹಂ. . ಹಂ...' ವೃದ್ಧ ಪ್ರಿನ್ಸ್ ತನ್ನಷ್ಟಕ್ಕೇ ಗೊಣಗಿಕೊಳ್ಳುತಾ ಬರೆದು ಮುಗಿಸಿದ. 
“ ಆಗಲಿ, ಹಾಗೇ ಮಾಡುತೇನೆ.' ತನ್ನದೇ ವೈಖರಿಯಲ್ಲಿ ಕಾಗದಕ್ಕೆ ಸಹಿ ಮಾಡಿದ. 
ತಟ್ಟನೆ ಮಗನ ಕಡೆ ತಿರುಗಿ ಜೋರಾಗಿ ನಕ್ಕ . . 

“ ಸರಿ ಹೋಗಲಿಲ್ಲ, ಅಲ್ಲವಾ?' 
“ ಏನು ಸರಿ ಹೋಗಲಿಲ್ಲ, ಅಪ್ಪಾ ?' 
“ ಹೆಂಡತಿ!' ಚುಟುಕಾಗಿ, ಒತ್ತಿ ಹೇಳಿದ ವೃದ್ದ ಪ್ರಿನ್ಸ್. 
“ಏನು ಹೇಳುತಿದೀರೋ , ತಿಳೀಲಿಲ್ಲ!' ಅಂದ ಪ್ರಿನ್ಸ್ ಆಂಡ್ರ 

“ಏನೂ ಮಾಡುವುದಕ್ಕಾಗುವುದಿಲ್ಲ, ಮಗಾ. ಹೆಂಡತಿಯರೆಲ್ಲ ಅಷ್ಟೇ . ಆಗಿರುವ 
ಮದುವೆಯನ್ನು ಆಗಲಿಲ್ಲ ಅಂದುಕೊಳ್ಳುವ ಹಾಗಿಲ್ಲ. ಹೆದರ ಬೇಡ. ನಾನು 
ಯಾರಿಗೂ ಹೇಳಲ್ಲ. ನಿಜ ಅಂತ ನಿನಗೇ ಗೊತ್ತು.' 
ಈ ಪುಟ್ಟ ಬಡಕಲು ಬೆರಳುಗಳಲ್ಲಿ ಮಗನ ಕೈ ಹಿಡಿದು ಕುಲುಕಿದ. ಮಗನ 
ಕಣ್ಣನ್ನೇ ದಿಟ್ಟಿಸಿ ಅವನ ಮನಸ್ಸನ್ನು ಭೇದಿಸುವ ಹಾಗೆ ನೋಡಿದ. ಮತ್ತೆ ಮೈ 
ಕೊರೆಯುವ ಹಾಗೆ ನಕ್ಕುಬಿಟ್ಟ. 
- ಮಗ ನಿಟ್ಟುಸಿರುಬಿಟ್ಟ , ಅಪ್ಪ ತನ್ನನ್ನು ಅರ್ಥಮಾಡಿಕೊಂಡ ಅನ್ನುವುದು 
ತಿಳಿದವನ ಹಾಗೆ, ವೃದ್ದ ಪ್ರಿನ್ಸ್ ಕಾಗದವನ್ನು ಮಡಿಸಿ, ಮುದ್ರೆ ಒತ್ತಿ, ಅರಗು, 
ಮುದ್ರೆ, ಹಾಳೆಗಳನ್ನು ಎಂದಿನ ಅಭ್ಯಾಸದಂತೆ ಸರಸರನೆ ಅದರರದರ ಜಾಗದಲ್ಲಿಟ್ಟ . 

“ಏನೂ ಮಾಡುವುದಕ್ಕಾಗಲ್ಲ. ಮುದ್ದಾಗಿದಾಳೆ ! ಎಲ್ಲಾ ನೋಡಿಕೊಳ್ಳುತ್ತೇನೆ. 
ಚಿಂತೆ ಮಾಡಬೇಡ.' ತುಂಡು ತುಂಡು ಮಾತು ಆಡುತ್ತಾ ಲಕೋಟೆಯ ಮೇಲೆ 


M 


೧೬೩ 


ಸಂಪುಟ ೧ - ಸಂಚಿಕೆ ಒಂದು 


ತನ್ನ ಹೆಸರಿನ ಮುದ್ರೆ ಒತ್ತಿದ. 

ಪ್ರಿನ್ಸ್ ಆಂಡೂ ಮಾತಾಡಲಿಲ್ಲ. ಅಪ್ಪ ತನ್ನನ್ನು ಅರ್ಥಮಾಡಿಕೊಂಡದ್ದಕ್ಕೆ 
ಸಂತೋಷವೂ ಆಗಿತ್ತು , ಬೇಸರವೂ ಆಗಿತ್ತು. ವೃದ್ದ ಪ್ರಿನ್ಸ್ ಎದ್ದು ನಿಂತು ಮಗನ 
ಕೈಗೆ ಮೊದಲ ಪತ್ರ ಕೊಟ್ಟ. . . 

'ಕೇಳು! ಹೆಂಡತಿಯ ಬಗ್ಗೆ ಯೋಚನೆಮಾಡಬೇಡ. ಏನು ಮಾಡಬೇಕೋ 
ಅದೆಲ್ಲ ನೋಡಿಕೊಳ್ಳುತ್ತೇನೆ. ಕೇಳು! ಈ ಕಾಗದ ಜನರಲ್ ಕುತುಝೇವ್ ಗೆ 
ಕೊಡು. ನಿನ್ನನ್ನು ಬಹಳ ಕಾಲ ಅಡುಟೆಂಟಾಗಿಯೇ ಇಟ್ಟುಕೊಳ್ಳಬೇಡ, ಅದು 
ದೆವ್ವದಂಥ ಕೆಲಸ, ತಕ್ಕ ಸ್ಥಾನದಲ್ಲಿ ನೇಮಕ ಮಾಡು ಅಂತ ಬರೆದಿದ್ದೇನೆ. ಅವನನ್ನ 
ಕೇಳಿದೆ ಅಂತ ಹೇಳು. ನಿನ್ನನ್ನು ಹೇಗೆ ನಡೆಸಿಕೊಳ್ಳುತ್ತಾನೆ ಅದರ ಬಗ್ಗೆ ಕಾಗದ 
ಬರೆ. ಸರಿಯಾಗಿದ್ದರೆ ಚೆನ್ನಾಗಿ ಸೇವೆ ಮಾಡು. ನಿಕೋಲಸ್ ಬೋಲೋನ್‌ಸ್ವಿಯ 
ಯಾವ ಮಗನೂ ಬಿಟ್ಟಿ ಚಾಕರಿ ಮಾಡಬೇಕಾಗಿಲ್ಲ . ಇಲ್ಲಿ ಬಾ .' 
ಆ ವೃದ್ದ ಪ್ರಿನ್ಸ್ ಬೇಗ ಬೇಗ ಮಾತನಾಡುತ್ತಿದ್ದ . ಎಷ್ಟೋ ಮಾತುಗಳನ್ನು 
ಮುಗಿಸುತ್ತಲೇ ಇರಲಿಲ್ಲ. ಆದರೂ ಮಗನಿಗೆ ಅದು ಅರ್ಥವಾಗುತ್ತಿತ್ತು. ಮಗನನ್ನು 
ಬೀರುವಿನ ಹತ್ತಿರಕ್ಕೆ ಕರೆದುಕೊಂಡು ಹೋಗಿ ಡ್ರಾ ಎಳೆದು, ಅದರಲ್ಲಿದ್ದ ನೋಟು 
ಬುಕ್ಕು ತೆಗೆದುಕೊಟ್ಟ. ಅದರಲ್ಲಿ ಮೊದಲಿಂದ ಕೊನೆಯವರೆಗೂ ದಪ್ಪ ದಪ್ಪ 
ಅಕ್ಷರಗಳಲ್ಲಿ ಒತ್ತಾಗಿ ಬರೆದಿದ್ದ . 

- “ನಿನಗಿಂತ ಮೊದಲು ನಾನೇ ಹೋಗತೇನೆ.ನೋಡು, ಇವು ನನ್ನ ಬದುಕಿನ 
ನೆನಪುಗಳು. ನಾನು ಸತ್ತಮೇಲೆ ಚಕ್ರವರ್ತಿಗೆ ಕೊಡು.. ಇಲ್ಲಿ ನೋಡು, ಸ್ಟೇಟ್ 
ಲಾಟರಿ ಬಾಂಡ್. ಮತ್ತೆ ಇದು ಕಾಗದ, ಸುವೋರೋವ್ ಮಾಡಿದ ಯುದ್ದಗಳ 
ಚರಿತ್ರೆಯನ್ನು ಮೊದಲು ಬರೆಯುವವರಿಗೆ ಇದು ಬಹುಮಾನ. ಅಕಾಡೆಮಿಗೆ 
ಕಳುಹಿಸಿಕೊಡು. ಇಲ್ಲಿ ನಿನಗಾಗಿ ಬರೆದದ್ದು ಒಂದಷ್ಟು ಇದೆ . ನಾನು ಹೋದ 
ಮೇಲೆ ಓದು. ನಿನಗೆ ಅದರಿಂದ ಉಪಯೋಗ ಆಗಬಹುದು.' ಅಪ್ಪ ಇನ್ನೂ 
ಸಾಕಷ್ಟು ದೀರ್ಘ ಕಾಲ ಬದುಕುವ ವಿಶ್ವಾಸ ತನಗಿದೆ ಎಂದು ಪ್ರಿನ್ಸ್ ಆಂಡೂ 
ಹೇಳಲಿಲ್ಲ. ಹೇಳದೆಯೂ ಗೊತ್ತಾಗುತ್ತದೆ ಅನ್ನುವುದು ಅವನಿಗೆ ತಿಳಿದಿತ್ತು. 

“ ಹಾಗೇ ಆಗಲಿ , ಅಪ್ಪಾ' ಅಂದ. 

' ವೆಲ್ , ಗುಡ್ ಬೈ !' ಮಗ ಚುಂಬಿಸಲೆಂದು ತನ್ನ ಕೈ ಮುಂದೆ ಚಾಚಿದ. 
ಆಮೇಲೆ, ಮಗನನ್ನು ಅಪ್ಪಿಕೊಂಡ. ' ಪ್ರಿನ್ಸ್ ಆಂಡೂ , ಯುದ್ದದಲ್ಲಿ ನೀನು 
ಕೊಲೆಯಾದರೆ ನನಗೆ, ಈ ಮುದಿ ತಂದೆಗೆ ಬಹಳ ನೋವಾಗುತ್ತದೆ...' ಅನಿರೀಕ್ಷಿತವಾಗಿ 
ಮಾತು ನಿಲ್ಲಿಸಿದ. ನಡುಗುವ ಕೀರಲು ದನಿಯಲ್ಲಿ ಹೇಳಿದ. “ನೀನು ನಿಕೋಲಸ್ 
ಬೋಲೋನ್‌ಸ್ವಿಯ ಮಗ ಮಾಡಬಾರದಂಥ ಕೆಲಸ ಮಾಡಿದೆ ಅನ್ನುವ ಮಾತು 
ಕೇಳಿದರೆ ನನಗೆ ಅವಮಾನವಾಗಿ ಸತ್ತೇ ಹೋಗುತ್ತೇನೆ.' 


೧೬೪ 

ಯುದ್ಧ ಮತ್ತು ಶಾಂತಿ 
' ಬಾಯಿ ಬಿಟ್ಟು ಹೇಳುವ ಅಗತ್ಯವೇ ಇಲ್ಲ , ಅಪ್ಪಾ' ನಗುತ್ತಾ ಉತ್ತರಿಸಿದ. 
ವೃದ್ದ ಪ್ರಿನ್ಸ್ ಮೌನವಾಗಿದ್ದ . 

'ನಿಮ್ಮನ್ನು ಇನ್ನೊಂದು ಮಾತು ಕೇಳುವುದಿತ್ತು' ಪ್ರಿನ್ಸ್ ಆಂಡೂ ಹೇಳಿದ. 
“ ಅಕಸ್ಮಾತ್ ನಾನು ಸತ್ತರೆ , ನನಗೆ ಮಗ ಹುಟ್ಟಿದರೆ , ದಯವಿಟ್ಟು ಅವನನ್ನು ದೂರ 
ಮಾಡಬೇಡಿ. ನಿನ್ನೆ ಹೇಳಿದೆನಲ್ಲ, ಹಾಗೆ, ನಿಮ್ಮೊಂದಿಗೇ ಇಟ್ಟುಕೊಂಡು ಬೆಳೆಸಿ...ಫೀಸ್.' 

ಈ “ನಿನ್ನ ಹೆಂಡತಿಯ ಕೈಗೆಕೊಡಬಾರದು, ಅಲ್ಲವಾ ?' ವೃದ್ದ ಪ್ರಿನ್ಸ್ ಜೋರಾಗಿ 
ನಕ್ಕುಬಿಟ್ಟ. . 

ಈ ಇಬ್ಬರೂ ಮೌನವಾಗಿ ಒಬ್ಬರನ್ನೊಬ್ಬರು ನೋಡುತ್ತ ನಿಂತರು. ವೃದ್ಧನ 
ಚುರುಕು ಕಣ್ಣು ಮಗನ ಕಣನ್ನೇ ದಿಟ್ಟಿಸುತ್ತಿದ್ದವು. ಅವನ ಗಲ್ಲ ಒಂದಿಷ್ಟೆ ಅದುರಿತು. 
- 'ಗುಡ್ ಬೈ ಹೇಳಿದ್ದಾಯಿತು. ಹೊರಡು!' ಇದ್ದಕ್ಕಿದ್ದಂತೆ ಜೋರಾಗಿ ಸಿಟ್ಟಿನ 
ಧ್ವನಿಯಲ್ಲಿ ಹೇಳುತ್ತಾ ಬಾಗಿಲು ತೆರೆದ. 

'ಏನು ? ಏನಾಯಿತು?' ಬಾಗಿಲು ತೆರೆದುಕೊಂಡು, ಪ್ರಿನ್ಸ್ ಆಂಡ್ರ ಮತ್ತು 
ತಲೆಗೆ ವಿಗ್ ಇಲ್ಲದೆ, ಡ್ರೆಸಿಂಗ್ ಗೌನು ತೊಟ್ಟು, ಕನ್ನಡಕ ಹಾಕಿಕೊಂಡ ವೃದ್ದ ಪ್ರಿನ್ಸ್ 
ಕೂಗಾಡುತಿರುವುದು ಕಂಡು ಕಂಡು ಇಬ್ಬರೂ ಪ್ರಿನ್ಸೆಸ್‌ಗಳು ಒಟ್ಟಿಗೆ ಕೇಳಿದರು. 

ಪ್ರಿನ್ಸ್ ಆಂಡ್ರ ನಿಟ್ಟುಸಿರುಬಿಟ್ಟ , ಏನೂ ಮಾತಾಡಲಿಲ್ಲ. 
ಹೆಂಡತಿಯತ್ತ ತಿರುಗಿ 'ಸರಿ, ಬಾ ' ಅಂದ. 

“ಸರಿ, ಬಾ ' ಅನ್ನುವ ಮಾತಿನಲ್ಲಿ ನಿನ್ನ ನಾಟಕ ನೋಡೋಣ' ಅಂದನೇನೋ 
ಅನ್ನುವಂಥ ತಣ್ಣನೆಯ ವ್ಯಂಗ್ಯ , ನಿಂದನೆ ಇತ್ತು. 

“ಆಂಡೂ , ಆಗಲೇ ...!' ಅಂದಳು ಪುಟ್ಟ ರಾಜಕುಮಾರಿ , ಮುಖ 
ಬಿಳಿಚಿಕೊಂಡು ಭಯದಿಂದ ಗಂಡನ ಮುಖ ನೋಡಿದಳು. 

ಅವಳನ್ನು ಆಲಂಗಿಸಿಕೊಂಡ. ಸಣ್ಣಗೆ ಚೀರಿ ಅವನ ತೋಳುಗಳಲ್ಲೇ ಮೂರ್ಛ 
ಹೋದಳು. 

ಹುಷಾರಾಗಿ ತೊಳು ಬಿಡಿಸಿಕೊಂಡು, ಅವಳ ಮುಖ ನೋಡಿ, 
ಎಚ್ಚರಿಕೆಯಿಂದ ಆರಾಮ ಕುರ್ಚಿಯಮೇಲೆ ಕೂರಿಸಿದ. 

' ಬರುತ್ತೇನೆ, ಮೇರಿ' ಮೃದುವಾಗಿ ನುಡಿದ. ಇಬ್ಬರೂ ಕೈಗಳಿಗೆ 
ಮುತ್ತಿಟ್ಟುಕೊಂಡರು . ದೊಡ್ಡ ಹೆಜ್ಜೆ ಹಾಕುತ್ತಾ ಕೋಣೆಯಿಂದ ಹೊರ ನಡೆದ. 

ಪುಟ್ಟ ರಾಜಕುಮಾರಿ ಆರಾಮ ಕುರ್ಚಿಯ ಮೇಲೆ ಒರಗಿದ್ದಳು. ಮೇಡಂ 
ಬೋರೀನ್ ಅವಳ ಹಣೆ ತಿಕ್ಕುತ್ತಿದ್ದಳು. ಪ್ರಿನ್ಸೆಸ್ ಮೇರಿ ಅತ್ತಿಗೆಗೆ ಆಧಾರವಾಗಿ 
ನಿಂತುಕೊಂಡೇ ಆಂಡೂ ಹೊರಟು ಹೋದ ಬಾಗಿಲನ್ನು ನೀರು ತುಂಬಿದ 
ಕಣ್ಣಿಂದ ನೋಡುತ್ತಾ ಇದ್ದಳು. 

ಶಿಲುಬೆಯಾಕಾರದಲ್ಲಿ ಕ್ರಾಸ್ ಮಾಡಿಕೊಂಡಳು . ಸ್ವಡಿ ರೂಮಿನಿಂದ 


ಸಂಪುಟ ೧ - ಸಂಚಿಕೆ ಒಂದು 


೧೬೫ 


ಪಿಸ್ತೂಲಿನಿಂದ ಗುಂಡು ಹಾರಿಸಿದ ಹಾಗೆ ವೃದ್ದ ಪ್ರಿನ್ಸ್ ಮೂಗು ಸೀದುತ್ತಿರುವ 
ಸದ್ದು ಕೇಳಿಸಿತು. ಪ್ರಿನ್ಸ್ ಆಂಡೂ ಅತ್ತ ಹೋಗುತ್ತಲೇ ಇತ್ತ ಸ್ಪಡಿ ರೂಮಿನ 
ಬಾಗಿಲು ತೆರೆದುಕೊಂಡಿತು. ಬಿಳಿಯ ಡ್ರೆಸಿಂಗ್ ಗೌನಿನಲ್ಲಿದ್ದ ಮುದುಕನ ನಿಷ್ಠುರ 
ಆಕಾರ ಹೊರಗಿಣುಕಿತು. 

- `ಹೋದನೇ ? ಸರಿ!' ಎಂದು ಎಚ್ಚರತಪ್ಪಿ ಬಿದ್ದಿದ್ದ ಲಿಟಲ್ ಪ್ರಿನ್ಸೆಸ್‌ಳತ್ತ 
ಕೋಪದ ದೃಷ್ಟಿ ಬೀರಿ ಟೀಕಿಸುವ ಹಾಗೆ ತಲೆಯಾಡಿಸುತ್ತಾ ದಡಾರನೆ ಬಾಗಿಲು 
ಹಾಕಿಕೊಂಡ. 


ಸಂಚಿಕೆ ಎರಡು 
( ಅಕ್ಟೋಬರ್ - ನವೆಂಬರ್ ೧೮೦೫) 


ಅಕ್ಟೋಬರ್ ತಿಂಗಳಿನಲ್ಲಿ ರಶಿಯನ್ ಸೈನ್ಯವು ಆಸ್ಟಿಯಾದ ಆರ್ಚ್‌ಡ್ಯೂಕಿಗೆ 
ಸೇರಿದ ಹಳ್ಳಿ, ಪಟ್ಟಣಗಳನ್ನು ಆಕ್ರಮಿಸಿಕೊಳ್ಳುತ್ತಿತ್ತು. ರಶಿಯಾದಿಂದ ಬರುತ್ತಲೇ 
ಇದ್ದ ಹೊಸ ಹೊಸ ರೆಜಿಮೆಂಟುಗಳು ಬ್ಯಾನ್ ಕೋಟೆಯ ಸಮೀಪದಲ್ಲಿ ಬೀಡು 
ಬಿಡುತ್ತಾ, ತಮ್ಮ ದೇಖರೇಖೆಯ ಜವಾಬ್ದಾರಿಯನ್ನು ಅಲ್ಲಿನ ನಿವಾಸಿಗಳ ಮೇಲೆ 
ಹೊರಿಸುತ್ತಾ ಅಲ್ಲಿನ ಜನರ ಬದುಕು ಕಷ್ಟವಾಗುವಂತೆ ಮಾಡಿದ್ದವು. ಬ್ರಾನ್ 
ರಶಿಯನ್ ಸೈನ್ಯದ ಮಹಾ ದಂಡನಾಯಕ ಕುತುರೋಪ್‌ನ ಕೇಂದ್ರ ಸ್ಥಳವಾಗಿತ್ತು. 

ಅಕ್ಟೋಬರ್ ೧೧, ೧೮೦೫ ರಂದು೩೮ ಪದಾತಿಗಳ ರೆಜಿಮೆಂಟೊಂದು 
ರಶಿಯಾದಿಂದ ಬಂದು ಬ್ರಾನ್‌ದಿಂದ ಅರ್ಧಮೈಲು ದೂರದಲ್ಲಿ ಬೀಡು ಬಿಟ್ಟು, 
ಮಹಾ ದಂಡನಾಯಕರ ಪರಿಶೀಲನೆಗಾಗಿ ಕಾಯುತ್ತಿತ್ತು, ಅಲ್ಲಿನ ಹಣ್ಣಿನ ತೋಟಗಳು, 
ಕಲ್ಲು ಗೋಡೆಗಳು, ಹೆಂಚಿನ ಚಾವಣಿಗಳು , ದೂರದಲ್ಲಿ ಕಾಣುತ್ತಿದ್ದ ಬೆಟ್ಟಗಳು 
ರಶಿಯನ್ ಸೈನಿಕರನ್ನೇ ಕಣ್ಣುಬಿಟ್ಟುಕೊಂಡು ದಿಟ್ಟಿಸುತ್ತಿದ್ದ ಅಲ್ಲಿನ ಜನರು, ಇಡೀ 
ಹಳ್ಳಿಗಾಡು, ಅದರ ವಾತಾವರಣ ಎಲ್ಲವೂ ವಿದೇಶೀಯವಾಗಿದ್ದವು. ಆದರೂ ಆ 
ಪಡೆ ಕೂಡ ರಶಿಯಾದ ಒಳನಾಡಿನಲ್ಲಿ ಇನ್‌ಫೆಕ್ಷನ್ನಿಗೆ ಸಿದ್ಧವಾಗುತ್ತಿರುವ ಯಾವುದೇ 
ರಶಿಯನ್ ರೆಜಿಮೆಂಟಿನಂತೆಯೇ ಇತ್ತು. 

ಹಿಂದಿನ ದಿನ ಸಂಜೆ, ದಿನದ ನಡೆ ಮುಗಿಯುವ ಹೊತ್ತಿಗೆ ರೆಜಿಮೆಂಟಿನ 
ಕಮಾಂಡರನಿಗೆ ಮಹಾ ದಂಡನಾಯಕರ ಆಜ್ಞೆಯ ಪತ್ರವೊಂದು ಬಂದಿತ್ತು. 
ಮಾರ್ಚಿಂಗ್ ಸ್ಥಿತಿಯಲ್ಲಿರುವ ರೆಜಿಮೆಂಟನ್ನು ಮಹಾದಂಡನಾಯಕರು 


೩೮ ಇಸವಿ ೧೯೧೮ರವರೆಗೆ ರಶಿಯಾ ಜೂಲಿಯನ್ ಕ್ಯಾಲೆಂಡರನ್ನು ಬಳಸುತ್ತಿತ್ತು. ಅದು ಇಂದು 

ನಾವು ಬಳಸುತ್ತಿರುವ ಗ್ರೆಗೋರಿಯನ್ ಕ್ಯಾಲೆಂಡರಿಗಿಂತ ಭಿನ್ನವಾಗಿತ್ತು. ಈ ಕಥೆ ನಡೆದ 
ಕಾಲದಲ್ಲಿ ಜೂಲಿಯನ್ ಅಥವಾ ' ಹಳೆಯ ಶೈಲಿ' ಯ ಕ್ಯಾಲೆಂಡರು ಗ್ರಿಗೋರಿಯನ್ ಅಥವಾ 
'ಹೊಸ ಶೈಲಿ' ಯ ಕ್ಯಾಲೆಂಡರಿಗಿಂತ ಹನ್ನೆರಡು ದಿನ ಹಿಂದೆ ಇತ್ತು. ವಾರ್ ಅಂಡ್ ಪೀಸ್‌ನಲ್ಲಿ 
ಬಳಕೆಯಾಗಿರುವ ದಿನಾಂಕಗಳು ಬಹುಮಟ್ಟಿಗೆ ಹಳೆಯ ಶೈಲಿಯ ಕ್ಯಾಲೆಂಡರಿನ ದಿನಾಂಕಗಳು. 


೧೬೭ 
ಸಂಪುಟ ೧ - ಸಂಚಿಕೆ ಎರಡು 
ಪರಿಶೀಲಿಸಲಿದ್ದಾರೆ ಎಂದು ತಿಳಿಸಿತ್ತು, ಆಜ್ಜೆಯ ಒಕ್ಕಣೆ ರೆಜಿಮೆಂಟಿನ ಕಮಾಂಡರನಿಗೆ 
ಸರಿಯಾಗಿ ಅರ್ಥವಾಗಿರಲಿಲ್ಲ. ಸೈನಿಕರು ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಬೇಕೋ 
ಪೂರ್ಣ ಯೂನಿಫಾರಂ ಧರಿಸಿ ಕವಾಯತು ಮಾಡಬೇಕೋ ಅನ್ನುವ ಪ್ರಶ್ನೆ 
ಬಗೆಹರಿಯಲಿಲ್ಲ. ಬೆಟಾಲಿಯನ್ ಕಮಾಂಡರುಗಳೊಡನೆ ಸಮಾಲೋಚನೆ ನಡೆಸಿ 
ರೆಜಿಮೆಂಟನ್ನು ಪೂರ್ಣ ಯೂನಿಫಾರಂನಲ್ಲಿ ಪೆರೇಡಿಗೆ ಸಜ್ಜುಗೊಳಿಸಬೇಕು, ಬಗ್ಗು 
ಅಂದಾಗ ಸ್ವಲ್ಪ ಬಗ್ಗುವುದಕ್ಕಿಂತ ಅತಿ ಹೆಚ್ಚು ಬಗ್ಗುವುದೇ ಉತ್ತಮ ಅನ್ನುವ 
ನಿಯಮವನ್ನು ಪಾಲಿಸುವುದೇ ಸರಿ ಅನ್ನುವ ತೀರ್ಮಾನಕ್ಕೆ ಬಂದ. ದಿನವಿಡೀ 
ಇಪ್ಪತ್ತೈದು ಮೈಲು ನಡೆದು ಬಂದಿದ್ದ ಸೈನಿಕರು ರಾತ್ರಿಯೆಲ್ಲಾ ಎವೆ ಮುಚ್ಚದೆ 
ತಮ್ಮ ಸಾಮಗ್ರಿಗಳನ್ನು ರಿಪೇರಿಮಾಡಿಕೊಳ್ಳುತ್ತಾ ಕ್ಲೀನುಮಾಡುತ್ತಾ ಕಳೆದರು; ಸ್ಟಾಫ್ 
ಆಫಿಸರುಗಳು ಲೆಕ್ಕಾಚಾರ ಹಾಕುತ್ತಾ , ಆರ್ಡರುಗಳನ್ನು ನೀಡುತ್ತಾ ರಾತ್ರಿಯನ್ನು 
ಕಳೆದರು. ಹಿಂದಿನ ದಿನ ಸಾಯಂಕಾಲ ಮಾರ್ಚ್ ಮುಗಿಯುವ ಹೊತ್ತಿಗೆ 
ಅಸ್ತವ್ಯಸ್ತವಾಗಿ ತಟ್ಟಾಡಿಕೊಂಡಿರುವ ಗುಂಪಿನ ಹಾಗೆ ಇದ್ದ ಇಡೀ ರೆಜಿಮೆಂಟು 
ಬೆಳಗಿನ ಜಾವದ ಹೊತ್ತಿಗೆ - ಒಬ್ಬೊಬ್ಬರೂ ತಮ್ಮ ಜಾಗ, ತಮ್ಮ ಕೆಲಸ ಗೊತ್ತಿರುವ, 
ಪ್ರತಿ ಗುಂಡಿಯೂ ಭದ್ರವಾಗಿ , ಪ್ರತಿ ಪಟ್ಟಿಯೂ ನೇರವಾಗಿ, ಪ್ರತಿ ಬಕಲ್ಲು ಕ್ಲೀನಾಗಿ 
ಥಳಥಳಿಸುತ್ತಿರುವ, ಸಜ್ಜುಗೊಂಡ ಎರಡು ಸಾವಿರ ಸೈನಿಕರ ರೆಜಿಮೆಂಟಿನ ಹಾಗೆ 
ಕಾಣುತ್ತಿತ್ತು. ಬರೀ ಮೇಲುಮೇಲಷ್ಟೇ ಅಲ್ಲ, ಮಹಾದಂಡನಾಯಕ ಏನಾದರೂ 
ಇಚ್ಛೆಪಟ್ಟು ಸೈನಿಕರ ಸಮವಸ್ತ್ರ ಬಿಚ್ಚಿಸಿ ನೋಡಿದ್ದಿದ್ದರೆ , ಪ್ರತಿ ಸೈನಿಕನೂ ಸ್ವಚ್ಛವಾದ 
ಅಂಗಿಯನ್ನು ತೊಟ್ಟಿರುವುದು, ತನ್ನ ನ್ಯಾಪ್‌ಸ್ಯಾಕಿನಲ್ಲಿ 'ಸೋಪು, ಸೂಜಿ ದಾರಿಗಳಿಂದ 
ಹಿಡಿದು ಸೈನಿಕರ ಬಳಿ ಇರಲೇಬೇಕೆಂದು ವಿಧಿಸಿದ್ದ ವಸ್ತುಗಳನ್ನೆಲ್ಲ ಇಟ್ಟು 
ಕೊಂಡಿರುವುದು ಕಂಡಿರುತ್ತಿದ್ದರು. ಒಂದು ವಿಷಯದ ಬಗ್ಗೆ ಮಾತ್ರ - ಸೈನಿಕರ 
ಬೂಟುಗಳ ಬಗ್ಗೆ ಮಾತ್ರ ಯಾರಿಗೂ ಸಂತೋಷವಿರಲು ಸಾಧ್ಯವಿರಲಿಲ್ಲ. ಅರ್ಧಕ್ಕಿಂತ 
ಹೆಚ್ಚು ಬೂಟುಗಳು ತೂತು ಬಿದ್ದಿದ್ದವು. ಅದು ರೆಜಿಮೆಂಟಿನ ಕಮಾಂಡರನ 
ತಪ್ಪಲ್ಲ. ಹಲವು ಬಾರಿ ಕೋರಿಕೆ ಸಲ್ಲಿಸಿದ್ದರೂ ಆಸ್ಟಿಯನ್ ಅಧಿಕಾರಿಗಳು ಬೂಟು 
ಸರಬರಾಜು ಮಾಡಿರಲೇ ಇಲ್ಲ. ಸೈನಿಕರು ಈಗ ಏಳು ನೂರು ಮೈಲು ನಡೆದು 
ಬಂದಿದ್ದರು. 
- ರೆಜಿಮೆಂಟಿನ ಕಮಾಂಡರು ವಯಸ್ಸಾಗುತ್ತಿದ್ದ , ಕೆಂಚು ಮುಖದ, ಅರೆನೆರೆತ 
ಹುಬ್ಬು, ಮೀಸೆಗಳ, ಸ್ವಲ್ಪ ತೋರವೆಂದೇ ಕಾಣುತ್ತಿದ್ದ , ಅಕ್ಕ ಪಕ್ಕಗಳ ಅಗಲಕ್ಕಿಂತ 
ಹಿಂದು ಮುಂದಿನ ವಿಸ್ತಾರ ದೊಡ್ಡದಾಗಿದ್ದ ಮನುಷ್ಯ . ಅವನ ಯೂನಿಫಾರಂ 
ಹೊಚ್ಚ ಹೊಸದಾಗಿ ಗರಿಮುರಿಯಾಗಿತ್ತು. ಬಂಗಾರದ ದೊಡ್ಡ ಎಪಾಲೆಟ್‌ಗಳು 
ಅವನ ದೊಡ್ಡ ಭುಜಗಳ ಮೇಲೆ ಸರಿಯಾಗಿ ಕೂರುತ್ತಲೇ ಇರಲಿಲ್ಲ. ಬದುಕಿನ 
ಅತ್ಯಂತ ಪವಿತ್ರವಾದ ಕರ್ತವ್ಯವೊಂದನ್ನು ಶ್ರದ್ಧೆಯಿಂದ ಸಂತೋಷದಿಂದ 


ozes 

ಯುದ್ಧ ಮತ್ತು ಶಾಂತಿ 
ಪೂರೈಸುತ್ತಿರುವವನ ಹಾಗೆ ಕಾಣುತ್ತಿದ್ದ . ಮೊದಲ ಸಾಲಿನ ಮುಂದೆ ಪೆರೇಡು 
ಮಾಡಿದ. ಹಾಗೆ ಮಾಡುವಾಗ ಬೆನ್ನು ಸೆಟೆದು ಕಮಾನಾಗಿ ಮೈ ಕಂಪಿಸುತ್ತಿತ್ತು . 
ತನ್ನ ರೆಜಿಮೆಂಟಿನ ಬಗ್ಗೆ ಅವನಿಗೆ ಅಪಾರವಾದ ಹೆಮ್ಮೆ ಇದೆ, ಅದರ ಉಸ್ತುವಾರಿಯಲ್ಲಿ 
ಸಂತೋಷಪಡುತ್ತಿದ್ದಾನೆ, ಅವನ ಮನಸ್ಸಿನ ತುಂಬ ರೆಜಿಮೆಂಟ್ ತುಂಬಿದೆ ಅನ್ನುವುದು 
ಯಾರಿಗೂ ತಿಳಿಯುತ್ತಿತ್ತು. ಹಾಗಿದ್ದರೂ ಕಂಪಿಸುವ ನಡಿಗೆಯು ಅವನ ಆಸಕ್ತಿಗಳು 
ಮಿಲಿಟರಿ ವಿಚಾರಗಳ ಆಚೆಗೆ ಘನವಂತರ ಸಮಾಜದ ಸಂಗತಿ, ಸೀ ವಿಚಾರಗಳಿಗೂ 
ಚಾಚಿಕೊಂಡಿರುವುದನ್ನು ಸೂಚಿಸುತ್ತಿತ್ತು. 

ಮುಖದ ಮೇಲೆ ಮುಗುಳುನಗೆಯನ್ನು ಹೊತ್ತು ಒಂದು ಹೆಜ್ಜೆ ಮುಂದೆ 
ಇಟ್ಟ ಬೆಟಾಲಿಯನ್ ಕಮಾಂಡರೊಬ್ಬನನ್ನು ' ವೆಲ್, ಮೈಖೇಲ್ ಮಿಚ್, ಸರ್ ?” 
ಅಂತ ಮಾತಾಡಿಸಿದ ( ಇಬ್ಬರೂ ಉತ್ಸಾಹಲ್ಲಿದ್ದದ್ದು ಎದ್ದು ಕಾಣುತ್ತಿತ್ತು.) ' ರಾತ್ರಿಯಿಡೀ 
ಎದ್ದಿರಬೇಕಾಗಿತ್ತು ಅಲ್ಲವಾ ?... ಆದರೂ ರೆಜಿಮೆಂಟು ಅಷ್ಟೇನೂ ಕೆಟ್ಟದಾಗಿಲ್ಲ, ಹಾಂ ?... 
ಇದಕ್ಕಿಂತ ಕೆಟ್ಟದಾಗಿರುವ ಒಂದೋ ಎರಡೋ ರೆಜಿಮೆಂಟು ಇರಬೇಕಲ್ಲವಾ ?' 
ಅಂದ. 

ರೆಜಿಮೆಂಟ್ ಕಮಾಂಡರನ ಲಘುವಾದ ಹರಟೆ ಮಾತು ಬೆಟಾಲಿಯನ್‌ 
ಕಮಾಂಡರನಿಗೆ ಅರ್ಥವಾಯಿತು. ಜೋರಾಗಿ ನಕ್ಕ . 

'ಬೆಸ್ಟ್ ಪೆರೇಡು ಗೌಂಡಿಗೂ ಸಿದ್ದ. ಬೇಕಾದರೆ ಪೀಟರ್ಸ್‌ಬರ್ಗಿನ ಝಾರ್ 
ಮೈದಾನಕ್ಕೂ ಯೋಗ್ಯ.' 
- 'ಏನದು ?' ಅಂದ ಕಮಾಂಡರ್ . 

ನಗರದ ಕಡೆಯಿಂದ ಬರುವ, ಸಿಗ್ನಲ್‌ಮೆನ್‌ಗಳನ್ನು ನೇಮಿಸಿದ್ದ ರಸ್ತೆಯ 
ಮೇಲೆ ಇಬ್ಬರು ಸವಾರರು ಕಾಣಿಸಿದರು. ಏಡ್ ಡಿ ಕ್ಯಾಂಪ್ ಕೊಸಾಕ್ ಒಬ್ಬನನ್ನು 
ಹಿಂದಿಟ್ಟುಕೊಂಡು ಬರುತ್ತಿದ್ದ. ಏಡ್ ಡಿ ಕ್ಯಾಂಪ್‌ನನ್ನು ಹೆಡ್ಕ್ವಾರ್ಟಸ್‌ನಿಂದ 
ಕಳಿಸಿದ್ದರು. ಹಿಂದಿನ ಆಜ್ಞೆಯ ಒಕ್ಕಣೆಯಲ್ಲಿದ್ದ ಅಸ್ಪಷ್ಟವಿಚಾರವನ್ನು ಸ್ಪಷ್ಟಮಾಡಲು 
ತಿದ್ದುಪಡಿಯನ್ನು ತಂದಿದ್ದ - ಮಹಾದಂಡನಾಯಕರು ತುಕಡಿಯನ್ನು ಮಾರ್ಚಿಂಗ್ 
ಸ್ಥಿತಿಯಲ್ಲಿ, ಅಂದರೆ ರಸ್ತೆಯ ಮೇಲೆ ಅವರು ಹೇಗಿದ್ದಾರೋ ಹಾಗೇ , ಗ್ರೇಟ್ 
ಕೋಟುಗಳು, ಬೆನ್ನಮೇಲಿನ ಸಾಮಗ್ರಿಗಳ ಹೊರೆ ಎಲ್ಲದರೊಂದಿಗೆ ಯಾವ 
ವಿಶೇಷ ಸಿದ್ಧತೆಯೂ ಇಲ್ಲದ ಸ್ಥಿತಿಯಲ್ಲಿ ಪರಿಶೀಲಿಸಲು ಬಯಸಿದ್ದಾರೆ ಅನ್ನುವ 
ವಿವರ ತಂದಿದ್ದ. 

ವಿಯೆನ್ನಾದ ರಕ್ಷಣಾಸಮಿತಿಯ ಒಬ್ಬ ಸದಸ್ಯ ಹಿಂದಿನ ದಿನವಷ್ಟೇ 
ಕುತುಝೇವ್‌ನನ್ನು ಕಾಣಲು ಬಂದಿದ್ದ. ರಶಿಯನ್ ಸೈನ್ಯವು ಆರ್ಚ್‌ಡ್ಯೂಕ್ 
ಫರ್ಡಿನೆಂಡ್ ಮತ್ತು ಮ್ಯಾಕ್‌ರ ತುಕಡಿಗಳೊಂದಿಗೆ ಸೇರಬೇಕೆಂಬ ಪ್ರಸ್ತಾಪವನ್ನು , 
ಅಲ್ಲ, ಒತ್ತಾಯವನ್ನು ತಂದಿದ್ದ. ಇದು ಸೂಕ್ತವಲ್ಲವೆಂಬುದು ಕುತುಝಪ್‌ನ 


ಸಂಪುಟ ೧ - ಸಂಚಿಕೆ ಎರಡು 

೧೬೯ 
ಅಭಿಪ್ರಾಯವಾಗಿತ್ತು. ತನ್ನ ಅಭಿಪ್ರಾಯದ ಸಮರ್ಥನೆಯಾಗಿ ರಶಿಯಾದಿಂದ ನಡೆದು 
ಬಂದಿರುವ ತುಕಡಿಗಳ ದುರವಸ್ಥೆಯನ್ನು ಆಸ್ವಿಯದ ದಂಡನಾಯಕನಿಗೆ ತೋರಿಸಲು 
ಬಯಸಿದ್ದ . ಆದ್ದರಿಂದಲೇ ಸೈನ್ಯವು ನಡೆದು ಬರುವ ದಾರಿಯಲ್ಲೇ ಭೇಟಿ ಮಾಡಲು 
ಉದ್ದೇಶಿಸಿದ್ದ. ಸೈನ್ಯದ ತುಕಡಿಯು ದಯನೀಯ ದುರವಸ್ಥೆಯಲ್ಲಿದ್ದಷ್ಟೂ 
ಮಹಾದಂಡನಾಯಕನಿಗೆ ಸಂತೋಷವಾಗುತ್ತಿತ್ತು. ಈ ಎಲ್ಲ ವಿವರಗಳೂ ಏಡ್ 
ಡಿ ಕ್ಯಾಂಪ್‌ಗೆ ತಿಳಿದಿರದಿದ್ದರೂ ಸೈನಿಕರು ಮಾತ್ರ ಮಾರ್ಚಿಂಗ್ ಸ್ಥಿತಿಯಲ್ಲಿಯೇ 
ಉದ್ದ ಕೋಟು ತೊಟ್ಟಿರಬೇಕು, ಇಲ್ಲದಿದ್ದರೆ ಮಹಾದಂಡನಾಯಕರು 
ಅಸಂತುಷ್ಟವಾಗುತ್ತಾರೆ ಎನ್ನುವುದಷ್ಟು ಗೊತ್ತಿತ್ತು. 

ಈ ಮಾತು ಕೇಳಿ ರೆಜಿಮೆಂಟಿನ ಕಮಾಂಡರ್‌ನ ತಲೆ ಬಾಗಿತು, ಭುಜ 
ಕೊಡವಿದ, ಸ್ವಲ್ಪ ರೇಗಿಕೊಂಡು ಕೈ ಬೀಸಿದ. 

* ನೆಗೆದು ಬಿತ್ತು' ಅಂದ. 'ನೋಡಿದೆಯಾ ಮೈಖೇಲ್ ಮಿಚ್, ನಾನು 
ಹೇಳಿರಲಿಲ್ಲವಾ ಮಾರ್ಚಿಂಗ್ ಸ್ಥಿತಿ ಅಂದರೆ ನಿಲುವಂಗಿ ಹಾಕಿಕೊಂಡು ಅಂತಲೇ 
ಅರ್ಥ ಅಂತ' ಮೇಜರ್‌ನನ್ನು ಟೀಕೆ ಮಾಡಿದ. ' ದೇವರೇ , ದೇವರೇ ' ಅಂತ 
ಗೊಣಗಿಕೊಂಡ. ದೃಢ ನಿರ್ಧಾರ ಮಾಡಿ ಎರಡು ಹೆಜ್ಜೆ ಮುಂದೆ ಬಂದು, ಆಜ್ಞೆ 
ಒದರಿ ಅಭ್ಯಾಸವಾದ ಧ್ವನಿಯಲ್ಲಿ “ಕಂಪನಿ ಕ್ಯಾಪ್ಟನ್, ಸಾರ್ಜೆಂಟ್ಸ್ ಮೇಜರ್!” 
ಅಂತ ಕಿರುಚಿ ....ಹಿಸ್ ಎಕ್ಸಲೆನ್ಸಿ ಯಾವಾಗ ಬರಬಹುದು ?' ಏಡ್ ಡಿ ಕ್ಯಾಂಪ್‌ನನ್ನು 
ಕೇಳಿದ. ಅವನ ಧ್ವನಿಯಲ್ಲಿದ್ದ ಸೌಜನ್ಯ ಯಾರನ್ನು ಕುರಿತದ್ದು ಅನ್ನುವುದು ಸ್ಪಷ್ಟವಾಗಿ 
ತಿಳಿಯುತ್ತಿತ್ತು. 

' ಇನ್ನು ಒಂದು ಗಂಟೆಯೊಳಗೆ, ಅನ್ನಿಸುತ್ತದೆ.' 
“ ಬಟ್ಟೆ ಬದಲಾಯಿಸುವಷ್ಟು ಟೈಮಿದೆಯಾ?” 
'ಗೊತ್ತಿಲ್ಲ , ಜನರಲ್...' 
- ಎಲ್ಲರೂ ಮತ್ತೆ ನಿಲುವಂಗಿ ತೊಟ್ಟುಕೊಳ್ಳುವುದರ ಉಸ್ತುವಾರಿ ನೋಡಲು 
ಜನರಲ್ ತಾನೇ ಸೈನಿಕರ ಬಳಿಗೆ ಹೋದ. ಕ್ಯಾಪ್ಟನ್ನುಗಳು ತುಕಡಿಗಳ ಬಳಿಗೆ 
ಓಡಿದರು. ಸಾರ್ಜೆಂಟುಗಳು ಹರಿದ ನಿಲುವಂಗಿಗಳ ಬಗ್ಗೆ ತಲೆ ಕೆಡಿಸಿಕೊಂಡರು . 
ಇದುವರೆಗೆ ಸುವ್ಯವಸ್ಥಿತವಾಗಿ ಘನಮೌನದ ಚಚೌಕವಾಗಿ ಕಾಣುತ್ತಿದ್ದ ದಳದಲ್ಲೀಗ 
ಇದ್ದಕ್ಕಿದ್ದಂತೆ ಸದ್ದು, ಗದ್ದಲ, ಗಜಿಬಿಜಿ ಹುಟ್ಟಿದವು. ಎಲ್ಲಿ ನೋಡಿದರೂ ಹಿಂದೆ 
ಮುಂದೆ ಓಡಾಡುವ ಸೈನಿಕರು; ಹೆಗಲ ಚೀಲಗಳನ್ನು ಭುಜದ ಮೇಲಿಂದ ಜಗ್ಗಿ , 
ತಲೆಯ ಮೇಲಿಂದ ಎತ್ತಿ ತೆಗೆದು, ಚೀಲ ಬಿಚ್ಚಿ ಓವರ್ ಕೋಟುಗಳನ್ನು ತೆಗೆದು 
ತೊಟ್ಟು, ತೋಳಿನೊಳಗೆ ಕೈ ತೂರಿಸಿ ಒಳಗಿನ ಅಂಗಿ ಕೆಳಗೆಳೆದುಕೊಳ್ಳುತಿದ್ದರು. 
- ಅರ್ಧ ಗಂಟೆಯ ಹೊತ್ತಿನಲ್ಲಿ ಎಲ್ಲಾ ಮಾಮೂಲಾಗಿತ್ತು. ಸ್ಮಾಡ್ರನ್ನುಗಳು 
ಕಪ್ಪಾಗಿ ಕಾಣುವ ಬದಲು ಬೂದು ಬೂದಾಗಿ ಕಾಣುತ್ತಿದ್ದವು. ಕಾಲೆತ್ತಿ, ಮೈ 


೧೭೦ 

ಯುದ್ಧ ಮತ್ತು ಶಾಂತಿ 
ಸೆಟಿಸಿಕೊಂಡು ಹೆಜ್ಜೆ ಇಡುತ್ತಾ ಮೈಯನ್ನು ಮುಂದೆ ದಬ್ಬಿಕೊಂಡು ಹೋಗಿ 
ಜನರಲ್ ತನ್ನ ಪಡೆಯನ್ನು ಸ್ವಲ್ಪ ದೂರದಿಂದಲೇ ವೀಕ್ಷಿಸಿದ. 

ತಟ್ಟನೆ ನಿಲ್ಲುತ್ತಾ ' ಏನಿದು ? ಏನಿದೆಲ್ಲಾ! 'ಮೂರನೆಯ ಕಂಪನಿಯ 
ಕ್ಯಾಪ್ಪನ್!' ಗರ್ಜಿಸಿದ. 

- 'ಮೂರನೆಯ ಕಂಪನಿಯ ಕ್ಯಾಪ್ಟನ್ , ರಿಪೋರ್ಟ್ ಟು ಜನರಲ್!... ಕಂಪನಿ 
ಕ್ಯಾಪ್ಪನ್ ಟು ದಿ ಜನರಲ್!... ಥರ್ಡ್ ಕಂಪನಿ ಟು ಕ್ಯಾಪ್ಟನ್...' ದನಿಗಳು ಸೈನಿಕ 
ಸಾಲಿನ ಉದ್ದಕ್ಕೂ ಹರಿದಾಡಿದವು. ತಪ್ಪಿಸಿಕೊಂಡಿರುವ ಅಧಿಕಾರಿಯನ್ನು ಹುಡುಲು 
ಅಡುಟೆಂಟ್ ಒಬ್ಬಾತ ಹೋದ. ತರಾತುರಿಯ ಗೌಜಿನಲ್ಲಿ ಎಲ್ಲ ಮಾತೂ 
ಕಲಬೆರಕೆಯಾಗಿ 'ಜನರಲ್ ಮೂರನೆಯ ಕಂಪನಿಗೆ ಬರುತಿದ್ದಾರೆ ' ಅನ್ನುವ ತಪ್ಪು 
ಮಾಹಿತಿ ಗುರಿಮುಟ್ಟಿತು. ಯಾವತ್ತೂ ಓಡಿ ಅಭ್ಯಾಸವಿರದ ಮಧ್ಯವಯಸ್ಸಿನ 
ಅಧಿಕಾರಿಯೊಬ್ಬ ತನ್ನ ಕಂಪನಿಯ ಹಿಂದಿನ ಸಾಲಿನಿಂದ ತನ್ನ ಹೆಜ್ಜೆ ತಾನೇ 
ಎಡವುತ್ತಾ ಹೇಗೋ ಬಂದು ಜನರಲ್‌ನ ಮುಂದೆ ನಿಂತ. ಕಲಿತಿರದ ಪಾಠವನ್ನು 
ಒಪ್ಪಿಸುವಂತೆ ಮೇಷ್ಟರು ಹೇಳಿದಾಗ ಶಾಲೆಯ ಹುಡುಗ ಮುಖಮಾಡಿಕೊಳ್ಳುವ 
ಹಾಗೆ ಅವನ ಮುಖವಿತ್ತು. ಆಗಲೇ ಕೆಂಪು ಕೆಂಪಾಗಿದ್ದ ಅವನ ಮುಖ - ಹೆಂಡ 
ಬಿಟ್ಟವನೇನಲ್ಲ ಅವನು - ಈಗ ಮತ್ತಷ್ಟು ಕೆಂಪಾಗಿತ್ತು. ತುಟಿ ಕಚ್ಚಿಕೊಳ್ಳುತ್ತಿದ್ದ . ಏದುಸಿರು 
ಬಿಡುತ್ತಾ ಓಡಿಬರುತ್ತಿರುವ, ಹತ್ತಿರ ಬಂದ ಹಾಗೆಲ್ಲ ಒಂದೊಂದು ಹೆಜ್ಜೆಗೂ 
ನಿಧಾನಮಾಡುತ್ತಿರುವ ಕ್ಯಾಪ್ಟನ್ನನನ್ನು ಜನರಲ್ ತಲೆಯಿಂದ ಕಾಲಿನವರೆಗೆ ನೋಡಿದ. 
- 'ಹೀಗೇ ಆದರೆ ನೀನು ಸೈನಿಕರಿಗೆಲ್ಲ ಲಂಗ ತೊಡಿಸಿಬಿಡುತ್ತೀಯ! ಏನಿದು?” 
ಜನರಲ್ ಜೋರಾಗಿ ಗರ್ಜಿಸಿ, ಹಲ್ಲು ಕಚ್ಚುತ್ತಾ ಮೂರನೆಯ ಡಿವಿಶನ್ನಿನಲ್ಲಿ ಮಿಕ್ಕ 
ಎಲ್ಲ ಸೈನಿಕರಿಗಿಂತ ಬೇರೆಯಾಗಿ ನೀಲಿ ಬಣ್ಣದ ಓವರ್ ಕೋಟು ತೊಟ್ಟಿದ್ದ 
ಸೈನಿಕನನ್ನು ತೋರಿಸಿದ. “ ಎನು ಮಾಡುತ್ತಿದ್ದೆ ? ಮಹಾ ದಂಡನಾಯಕರು ಬರುತಾ 
ಇದಾರೆ, ನಿನ್ನ ಜಾಗದಲ್ಲಿ ಇರುವುದು ಬಿಟ್ಟು ಎಲ್ಲಿ ಹೋಗಿದ್ದೆ? ಹಾಂ ? ಸೈನಿಕರನ್ನ 
ಫ್ಯಾನ್ಸಿ ಡ್ರೆಸ್ಸಿಗೆ ಕಳಿಸುತಿದೀಯಾ? ಹಾಂ ...?' 

ಕ್ಯಾಪ್ಟನ್ ತನ್ನ ಹಿರಿಯ ಅಧಿಕಾರಿಯಮೇಲೆಯೇ ನೆಟ್ಟ ದೃಷ್ಟಿಯನ್ನು ಕದಲಿಸದೆ, 
ಎರಡು ಬೆರಳುಗಳನ್ನು ಬಲವಾಗಿ ಒತ್ತಿ , ಮತ್ತೆ ಮತ್ತೆ ಕ್ಯಾಪನ್ನು ಮುಟ್ಟಿ, ಸೆಲ್ಯೂಟು 
ಮಾಡಿದರಷ್ಟೇ ಬದುಕಿಕೊಂಡೇನು ಅನ್ನುವ ಹಾಗೆ ಸೆಲ್ಯೂಟು ಮಾಡಿದ. 

' ಬಾಯಿ ಬಿಡೋದಕ್ಕೆ ಏನು ಧಾಡಿ? ಹಂಗೇರಿಯನ್ನರ ಹಾಗೆ ಡ್ರೆಸ್ಸು 
ಹಾಕಿ ಕೊಂಡಿರುವವನು, ಯಾವನು ಅವನು ? ' ಜನರಲ್ ಮಾಡಿದ ಜೋಕು 
ಕಹಿಯಾಗಿತ್ತು. 

' ಯುವರ್ ಎಕ್ಸಲೆನ್ಸಿ...' 
' ಯುವರ್ ಎಕ್ಸಲೆನ್ಸಿಯಂತೆ, ಯುವರ್ ಎಕ್ಸಲೆನ್ನಿ! ಏನು ಯುವರ್ ಎಕ್ಸಲೆನ್ಸಿ ? 


೧೭೧ 


ಸಂಪುಟ ೧ - ಸಂಚಿಕೆ ಎರಡು 


ಸುಮ್ಮನೇ ಹಾಗಂದರೆ ಯಾವನಿಗೆ ಗೊತ್ತಾಗುತ್ತದೆ...' 

' ಯುವರ್ ಎಕ್ಸಲೆನ್ಸಿ , ಅವನು ಆಫೀಸರ್ದೋಖೋವ್. ಅವನಿಗೆ 
ಪೇದೆಯಾಗಿ ಹಿಂಬಡ್ತಿ ಆಗಿದೆ,' ಕ್ಯಾಪ್ಟನ್ ಮೆಲ್ಲಗೆ ಹೇಳಿದ . 
- “ಅದಕ್ಕೆ ? ಅವನಿಗೇನು ಫೀಲ್ಡ್ ಮಾರ್ಷಲ್ ಅಂತ ಹಿಂಬಡ್ತಿ ಕೊಟ್ಟಿದೆಯಾ ? 
ಪೇದೆ ತಾನೇ ? ಪೇದೆಯಾಗಿದ್ದರೆ ಉಳಿದವರ ಹಾಗೆ ಅವನೂ ಯೂನಿಫಾರಂ 
ಹಾಕಿಕೊಂಡಿರಬೇಕು ತಾನೆ ?' 

' ಯುವರ್ ಎಕ್ಸಲೆನ್ನಿ , ಮಾರ್ಚು ಮಾಡುವಾಗ ನೀವೇ ಅವನಿಗೆ 
ಪರ್ಮಿಶನ್ನು ಕೊಟ್ಟಿದ್ದಿರಿ.' 

'ಪರ್ಮಿಶನ್ನು ಕೊಟ್ಟಿದ್ದೆ ? ಪರ್ಮಿಶನ್ನು ? ಈ ಹುಡುಗ ಆಫೀಸರುಗಳ 
ಕಥೆಯೆಲ್ಲಾ ಇಷ್ಟೇ ' ಸ್ವಲ್ಪ ತಣ್ಣಗಾಗುತ್ತಾ ಜನರಲ್ ಹೇಳಿದ, 'ಪರ್ಮಿಶನ್ನು ...ಸುಮ್ಮನೆ 
ಒಂದು ಮಾತು ಹೇಳಿದರೆ ಸಾಕು, ನೀವುಹೋಗಿಬಿಟ್ಟು...ಏನು ?” ಮತ್ತೆ ಗುರುಗುಟ್ಟಿದ. 
“ನಿಮ್ಮ ಸೈನಿಕರಿಗೆ ಸ್ವಲ್ಪ ಸರಿಯಾಗಿ ಬಟ್ಟೆ ಹಾಕಿಕೊಳ್ಳುವುದಕ್ಕೆ ಹೇಳು.' 
- ಜನರಲ್ ತನ್ನ ಪಕ್ಕದಲ್ಲೇ ಇದ್ದ ಸಹಾಯಕನ ಕಡೆ ತಿರುಗಿ ನೋಡಿ, 
ಸೈನಿಕರ ಸಾಲಿನುದ್ದಕ್ಕೂ ಹೆಜ್ಜೆ ಎತ್ತಿ ಹಾಕಿದ. ತಾನು ಕೋಪತೋರಿಸಿದ ರೀತಿಗೆ 
ಅವನಿಗೇ ಆನಂದವಾಗಿತ್ತು. ಮತ್ತಷ್ಟು ಕೋಪಮಾಡಿಕೊಳ್ಳುವುದಕ್ಕೆ ಕಾರಣ ಹುಡುಕುತ್ತಾ 
ಸೈನಿಕರ ಸಾಲಿನುದ್ದಕ್ಕೂ ಹೆಜ್ಜೆ ಹಾಕಿದ. ಒಬ್ಬನ ಕೊಳೆಯಾದ ಬ್ಯಾಡ್ಲು ಕಿತ್ತೆಸೆದ, 
ಇನ್ನೊಬ್ಬ ಸಾಲು ಬಿಟ್ಟು ನಿಂತಿದ್ದಕ್ಕೆ ಗದರಿದ, ಮೂರನೆಯ ಕಂಪೆನಿಯ ಹತ್ತಿರ 
ಬಂದ. 

'ಅಟೆನ್ಸನ್ ಅಂದರೆ ಹೀಗೇನಾ ನಿಲ್ಲೋದು? ಆ ಕಾಲು ಏನು ಮಾಡುತ್ತಾ 
ಇದೆ? ಅದು, ಆ ಕಾಲು?” ನೀಲಿಕೋಟುತೊಟ್ಟು ನಿಂತಿದ್ದ ದೊಲೊಯೋವ್‌ಗೂ 
ಅವನಿಗೂ ಮಧ್ಯೆ ಇನ್ನೂ ಐದು ಜನ ಸೈನಿಕರು ಇದ್ದರು. ಆಗಲೇ ಜನರಲ್ 
ಸಿಟ್ಟುಮಾಡಿಕೊಂಡು ಕೇಳಿದಾಗ ಬಾಗಿಸಿದ್ದ ಮಂಡಿಯನ್ನು ನಿಧಾನವಾಗಿ ನೆಟ್ಟಗೆ 
ಮಾಡಿಕೊಳ್ಳುತ್ತಾ ದೊಲೊಯೋವ್ ಸ್ವಚ್ಛ ಕಣ್ಣಲ್ಲಿ ಧಿಕ್ಕಾರ ತುಂಬಿಕೊಂಡು ಅವನ 
ಮುಖ ನೋಡಿದ. 

' ಯಾಕೆ ಈ ನೀಲಿಕೋಟು? ತೆಗೆದು ಹಾಕು ಅದನ್ನ ...ಸರ್ಜೆಂಟ್ ಮೇಜರ್! 
ಇವನ ಕೋಟು ಬದಲಾಯಿಸು...ಕೊಳಕು ಹಂ ...' ಮಾತು ಮುಗಿಸಲು ಆಗಲೇ 


' ಜನರಲ್, ನಿಮ್ಮ ಆಜ್ಞೆ ಪಾಲಿಸಬೇಕು. ಸಹಿಸಿಕೊಳ್...' ದೊಲೊಯೋವ್ 
ತಕ್ಷಣ ಹೇಳಿದ. 

' ಸಾಲಲ್ಲಿ ನಿಂತಿರೋವಾಗ ಮಾತಾಡಬಾರದು! ಮಾತ್ ಆಡಬಾರದು, 
ಅಲ್ಲಿ..!” 


೧೨ 

ಯುದ್ಧ ಮತ್ತು ಶಾಂತಿ 
“ಸಹಿಸಿಕೊಳ್ಳಲ್ಲ ನೀವು ಮಾಡುವ ಅವಮಾನ ' ದೊಲೋಖೋವ್ ಸ್ಪಷ್ಟವಾಗಿ, 
ಗಟ್ಟಿಯಾಗಿ ಹೇಳಿದ. ಜನರಲ್ಲನ, ಸೈನಿಕನ ನೋಟಗಳು ಕಲೆತವು. ಜನರಲ್ 
ಸುಮ್ಮನಾಗಿ, ಸಿಟ್ಟು ಮಾಡಿಕೊಂಡು ಬಿಗಿಯಾದ ಸ್ಕಾರ್ಫ್ ಅನ್ನು ಜೋರಾಗಿ 
ಎಳೆದುಕೊಂಡ. 

'ದಯವಿಟ್ಟು ತಮ್ಮ ಕೋಟು ಬದಲಾಯಿಸಿಕೊಳ್ಳಬೇಕು' ಅನ್ನುತ್ತಾ 
ಮುಂದೆ ಹೋದ. 


'ಬರುತಾ ಇದಾರೆ!' ಕಾವಲಿನವನ ಕೂಗು ಕೇಳಿಸಿತು. ಜನರಲ್ ಮುಖ 
ಕೆಂಪು ಮಾಡಿಕೊಂಡು ಕುದುರೆಯ ಹತ್ತಿರಕ್ಕೆ ಓಡಿ, ನಡುಗುವ ಕೈಯಲ್ಲಿ ಲಗಾಮು 
ಹಿಡಿದು, ಇಡೀ ಮೈ ಮೇಲಕ್ಕೆ ಜಗ್ಗಿಕೊಂಡು ಕುದುರೆ ಏರಿ ನೆಟ್ಟಗೆ ಕೂತು, 
ಕತ್ತಿಯನ್ನು ಒರೆಯಿಂದ ಹೊರಕ್ಕೆಳೆದು, ಮುಖದಮೇಲೆ ಸಂತೋಷವನ್ನೂ 
ದೃಢತೆಯನ್ನೂ ತಂದುಕೊಂಡು ಆಜ್ಞೆಯನ್ನು ಒರಲುವುದಕ್ಕೆ ಸಿದ್ಧನಾಗಿ ಒಂದು 
ಪಕ್ಕದಲ್ಲಿ ಬಾಯಿ ತೆರೆದ, ಗರಿ ಕೊಡವಿಕೊಳ್ಳುವ ಹಕ್ಕಿಯ ಹಾಗೆ ಇಡೀ ಪಡೆ 
ಒಮ್ಮೆಲೇ ಚಡಪಡಿಸಿ ಆಮೇಲೆ ನಿಶ್ಯಬ್ದವಾಗಿ , ನಿಶ್ಚಲವಾಗಿ ನಿಂತಿತು. 
- ಅಥೇನ್ - ಷನ್ !' ಆತ್ಮಗಳನ್ನು ಗದಗುಡಿಸುವ ಧ್ವನಿಯಲ್ಲಿ, ತನಗೇ ಖುಷಿ 
ಕೊಡುವ, ಪಡೆಗೆ ಎಚ್ಚರಿಕೆ ನೀಡುವ, ಆಗಮಿಸುತ್ತಿರುವ ಮಹಾದಂಡನಾಯಕನಿಗೆ 
ಸ್ವಾಗತ ಕೋರುವ ಧ್ವನಿಯಲ್ಲಿ ಜನರಲ್ ಗರ್ಜಿಸಿದ. 

ಎರಡೂ ಬದಿಗಳಲ್ಲಿ ಸಾಲುಮರಗಳಿದ್ದ ಅಗಲವಾದ ಹಳ್ಳಿಯ ರಸ್ತೆಯಲ್ಲಿ, 
ಆರು ಕುದುರೆಗಳು ಕುಕ್ಕುಲೋಟದಲ್ಲಿ ಎಳೆಯುತ್ತಿದ್ದ, ಸ್ಟಿಂಗುಗಳು ಸ್ವಲ್ಪ ಕಿರುಗುಟ್ಟುತಿದ್ದ, 
ಮಹಾದಂಡನಾಯಕರು ಕೂತಿದ್ದ ಎತ್ತರವಾದ ನೀಲಿ ಬಣ್ಣದ ವಿಯೆನ್ನಾ ಸಾರೋಟು 
ಕಾಣಿಸಿತು. ಅದರ ಹಿಂದೆಯೇ ಬೆಂಗಾವಲು ಪಡೆಯ ಕ್ರೋಟ್ಸ್ ಗಾಡಿಗಳು 
ಬರುತ್ತಿದ್ದವು. ಕುತುಝೇವ್‌ನ ಪಕ್ಕದಲ್ಲಿ ಆಸ್ಟಿಯನ್ ದಂಡನಾಯಕನಿದ್ದ. ರಶಿಯನ್ 
ಸೈನಿಕರ ಕಪ್ಪು ಬಣ್ಣದ ಸಮವಸ್ತಗಳ ನಡುವೆ ಅವನ ಬಿಳಿಯ ಸಮವಸ್ತ್ರ ವಿಚಿತ್ರವಾಗಿ 
ಕಾಣುತ್ತಿತ್ತು. ಸಾರೋಟು ರೆಜಿಮೆಂಟಿನ ಎದುರಿಗೆ ಬಂದು ನಿಂತಿತು. ಕುತುಝೇವ್ 
ಮತ್ತು ಆಸ್ಟ್ರಿಯಾದ ದಂಡ ನಾಯಕ ಮೆಲುದನಿಯಲ್ಲಿ ಮಾತಾಡಿಕೊಳ್ಳುತ್ತಿದ್ದರು. 
ಕುತುಝೇವ್ ಕಿರುನಗೆ ನಕ್ಕು , ಬಲು ಮೆಲ್ಲಗೆ ಭಾರವಾದ ಹೆಜ್ಜೆ ಇಡುತ್ತಾ 
ಸಾರೋಟಿನಿಂದ ಇಳಿದ- ತನ್ನನ್ನೇ ನೋಡುತ್ತಿರುವ ಎರಡು ಸಾವಿರ ಸೈನಿಕರು, 
ಉಸಿರು ಬಿಗಿಹಿಡಿದುಕೊಂಡಿದ್ದ ಇನ್ನೊಬ್ಬ ಜನರಲ್ ಅಲ್ಲಿ ಇಲ್ಲವೇ ಇಲ್ಲ ಅನ್ನುವ 
ಹಾಗೆ. 

ಹುಕುಮ್ ಮೊಳಗಿತು , ಇಡೀ ರೆಜಿಮೆಂಟು ದಡದಡಿಸಿ ಕಿಣಿಕಿಣಿ ಕಟಿಲ್ 
ಸದ್ದುಮಾಡಿ ಶಸ್ತಗೌರವ ಸಲ್ಲಿಸಿತು. ಆಮೇಲೆ ಮರಣ ಸದೃಶ ಮೌನವನ್ನು 


೧೭೩ 
ಸಂಪುಟ ೧ - ಸಂಚಿಕೆ ಎರಡು 
ಸೀಳಿಕೊಂಡು ಮಹಾ ದಂಡನಾಯಕರ ಕೀಚಲು ಧ್ವನಿ ಸ್ಪಷ್ಟವಾಗಿ ಕೇಳಿಸಿತು. 
ರೆಜಿಮೆಂಟು ಪ್ರತ್ಯುತ್ತವಾಗಿ ' ಲಾಂಗ್ ಲಿವ್ ಹಿಸ್ ಎಕ್ಸ... ಲೆ ...ಲೆನ್ . ಸಿ... ! 
ಎಂದು ಮೊರೆಯಿತು. ಮತ್ತೆ ಮೌನ ನೆಲೆಸಿತು. 

ಮೊದಲಲ್ಲಿ ಕುತುರೋವ್ ಇದ್ದಲ್ಲೇ ನಿಶ್ಚಲವಾಗಿ ನಿಂತಿದ್ದ ; ರೆಜಿಮೆಂಟು 
ಚಲಿಸಿ ಅದರ ವಿನ್ಯಾಸ ಬದಲಾಯಿತು. ಆಮೇಲೆ ಅವನು ಬಿಳಿಯ ಸಮವಸ್ತ್ರ 
ಧರಿಸಿದ್ದ ಆಸ್ಟಿಯನ್ ದಂಡ ನಾಯಕನನ್ನು ಜೊತೆಗಿಟ್ಟುಕೊಂಡು ಆಪ್ತ ಸಿಬ್ಬಂದಿಯನ್ನು 
ಹಿಂದಿಟ್ಟುಕೊಂಡು ಸೈನಿಕ ಸಾಲುಗಳ ಮುಂದೆ ನಡೆದ. 

- ರೆಜಿಮೆಂಟ್ ಕಮಾಂಡರು ತನ್ನ ಮಹಾದಂಡನಾಯಕನನ್ನೇ ದಿಟ್ಟಿಸಿ 
ನೋಡುತ್ತಾ ಅಟೆನ್ನನ್ನಿನಲ್ಲಿ ಸೆಟೆದುಕೊಂಡಿದ್ದರೂ ಹೇಗೋ ಹಲ್ಲುಗಿಂಚುತ್ತಾ ಸೆಲ್ಯೂಟು 
ಮಾಡುತಿದ್ದ ರೀತಿ, ಜನರಲ್ಲುಗಳನ್ನು ಹಿಂಬಾಲಿಸುವಾಗ ಕಾತರದಿಂದ ಹೆಜ್ಜೆ ಹಾಕುತ್ತಾ 
ಮುಂದೆ ಬಗ್ಗಿದ್ದ ರೀತಿ, ನಡಿಗೆಯಲ್ಲಿದ್ದ ಬಚ್ಚಿಟ್ಟುಕೊಳ್ಳಲಾಗದ ಕಂಪನ , ದಂಡನಾಯಕ 
ಏನಾದರೂ ಮಾತನಾಡಿದರೆ , ಸನ್ನೆ ಮಾಡಿದರೆ ಬೆದರಿ ಕುಪ್ಪಳಿಸುತ್ತಿದ್ದದ್ದು ಇವನ್ನೆಲ್ಲ 
ನೋಡಿದರೆ ಅವನು ರೆಜಿಮೆಂಟಿನ ಮುಖ್ಯಸ್ಥನಾಗಿರುವುದಕ್ಕಿಂತ ಕೈಕೆಳಗಿನ ವಿಧೇಯ 
ಅಧಿಕಾರಿಯ ಪಾತ್ರ ವಹಿಸುವುದರಲ್ಲೇ ಸುಖ ಕಾಣುತ್ತಿದ್ದಾನೆ ಅನ್ನಿಸುತ್ತಿತ್ತು. ಅವನ 
ಶಿಸ್ತಿನ ದೆಸೆಯಿಂದಾಗಿ ಆ ರೆಜಿಮೆಂಟು ಅದೇ ಸಮಯದಲ್ಲಿ ರಶಿಯಾದಿಂದ 
ಬ್ರಾನ್‌ಗೆ ಬಂದು ಸೇರಿದ ಉಳಿದ ರೆಜಿಮೆಂಟುಗಳಿಗಿಂತ ಸುಸ್ಥಿತಿಯಲ್ಲಿತ್ತು. 
ಕಾಯಿಲೆಯಾದವರು, ಹಿಂದೆ ಬಿದ್ದವರು ಕೇವಲ ೨೧೭ ಜನಕ್ಕಿಂತ ಹೆಚ್ಚು ಇರಲಿಲ್ಲ. 
ಎಲ್ಲವೂ ಅದ್ಭುತವಾಗಿತ್ತು - ಸೈನಿಕರ ಬೂಟು ಬಿಟ್ಟರೆ. 

- ಕುತುಝೇವ್‌ಟರ್ಕಿಷ್ ಯುದ್ಧದಲ್ಲಿ ತನಗೆ ಪರಿಚಿತರಾಗಿದ್ದ ಅಧಿಕಾರಿಗಳು 
ಕಂಡಾಗ ಕುಶಲೋಪರಿ ವಿಚಾರಿಸುವುದಕ್ಕೆ ಬೇರೆ ಸೈನಿಕರೊಡನೆ ಎರಡು 
ಮಾತಾಡುವುದಕ್ಕೆ ಆಗಾಗ ನಿಲ್ಲುತ್ತಾ ಸೈನಿಕರ ಸಾಲುಗಳ ನಡುವೆ ನಡೆದ. ಒಮ್ಮೆಯಲ್ಲ 
ಹಲವು ಬಾರಿ ಅವರ ಬೂಟುನೋಡಿ ದುಃಖದಿಂದ ತಲೆಯಾಡಿಸಿ , ಆಸ್ತಿಯನ್ 
ದಂಡನಾಯಕನಿಗೆ ಅವನ್ನು ಬೆರಳುಮಾಡಿ ತೋರಿಸಿದ-ಹೀಗಾಗುವುದಕ್ಕೆ ಯಾರನ್ನೂ 
ದೂಷಿಸುವಹಾಗಿಲ್ಲ, ಆದರೂ ಹದಗೆಟ್ಟ ಸ್ಥಿತಿಯನ್ನು ಗಮನಿಸದೆ ಹೇಗಿರಲಿ 
ಅನ್ನುವ ಹಾಗೆ, ಒಂದೊಂದು ಬಾರಿ ಹೀಗಾದಾಗಲೂ ರೆಜಿಮೆಂಟ್ ಕಮಾಂಡರ್ 
ಕುಪ್ಪಳಿಸಿ ಹತ್ತಿರ ಹೋಗುತ್ತಿದ್ದ - ಮಹಾದಂಡನಾಯಕ ತನ್ನ ಸೈನಿಕರ ಬಗ್ಗೆ ಹೇಳುವ 
ಒಂದು ಮಾತೂ ತಪ್ಪಿ ಹೋಗರದೆನ್ನುವ ಹಾಗೆ, ಕುತುರೋಪ್‌ನ ಹಿಂದೆ, ಅವನ 
ಪಿಸು ಮಾತು ಕೇಳುವಷ್ಟು ದೂರದಲ್ಲಿ , ಪರಿವಾರದ ಸಿಬ್ಬಂದಿಯ ಇಪ್ಪತ್ತು ಜನ 
ಬರುತ್ತಿದ್ದರು. ಈ ಮಹನೀಯರೆಲ್ಲ ತಮ್ಮಲ್ಲಿ ಮಾತನಾಡಿಕೊಳ್ಳುತ್ತಾ ಆಗಾಗ ನಗುತ್ತಾ 
ಇದ್ದರು. ಮಹಾದಂಡನಾಯಕನಿಗೆ ಹತ್ತಿರವಾಗಿ ತುಂಬ ಸುಂದರವಾದ ಯುವಕ 
ಅಡುಟೆಂಟನೊಬ್ಬ ಹೆಜ್ಜೆ ಹಾಕುತಿದ್ದ. ಅದು ಪ್ರಿನ್ಸ್ ಆಂಡೂ ಬೋಲೋನ್‌ . 


೧೭೪ 

ಯುದ್ಧ ಮತ್ತು ಶಾಂತಿ 
ಅವನ ಪಕ್ಕದಲ್ಲಿ ಸಹೋದ್ಯೋಗಿ ಕಾಮೇಡ್ ನೆಸ್ವಿಟ್‌ ಇದ್ದ - ಎತ್ತರವಾದ , 
ತೀರ ಸ್ಕೂಲವಾದ ಮೈಯ ಸ್ಟಾಫ್ ಆಫೀಸರು, ಕರುಣೆಯ ನಗು, ಚೆಲುವಾದ 
ಮುಖ, ನೀರುಗಣ್ಣು ಇದ್ದವನು. ಹತ್ತಿರದಲ್ಲೇ ಇದ್ದ ಕಪ್ಪು ಚರ್ಮದ ಹುಸಾರ್‌ನನ್ನು 
ನೋಡಿನಗದೆ ಇರಲಾಗಲಿಲ್ಲ ಅವನಿಗೆ. ಈ ಹುಸ್ಸಾರ್ ಮುಂದೆ ಚೂರೂ ನಗದೆ, 
ಹಟತೊಟ್ಟವನ ಹಾಗೆ ಕಣ್ಣರಳಿಸಿ ರೆಜಿಮೆಂಟ್ ಕಮಾಂಡರನ ಬೆನ್ನನ್ನೇ ದಿಟ್ಟಿಸುತ್ತಾ, 
ಅವನು ಮಾಡಿದ್ದನ್ನೆಲ್ಲ ತಾನೂ ಮಾಡಿ ಅಣಕಿಸುತ್ತಿದ್ದ. ಕಮಾಂಡರ್ ನಡುಗಿ, 
ತಟ್ಟಾಡಿ ಹೆಜ್ಜೆ ಇಟ್ಟು ಮುಂದೆ ಬಗ್ಗಿದಾಗೆಲ್ಲ ಹುಸ್ಸಾರ್ ಕೂಡ ಯಥಾವತ್‌ ಹಾಗೇ 
ತಟ್ಟಾಡಿ ಹೆಜ್ಜೆ ಇಟ್ಟು ಮುಂದೆ ಬಗ್ಗುತ್ತಿದ್ದ . ನೆಸ್ವಿಟ್ಸ್ಕಿ ನಗುತ್ತಾ ಬೇರೆಯವರ 
ಪಕ್ಕೆ ತಿವಿಯುತ್ತಿದ್ದ , ಈ ನಾಟಕ ಅವರ ಕಣ್ಣು ತಪ್ಪದೆ ಇರಲಿ ಎಂದು. 
- ಮಹಾದಂಡನಾಯಕನನ್ನು ನೋಡುವ ಯತ್ನದಲ್ಲಿ ಕಣ್ಣುಗುಡ್ಡೆಗಳು ಹೊರಗೆ 
ಬಿದ್ದುಬಿಡುವಹಾಗೆ ದಿಟ್ಟಿಸುತ್ತಿದ್ದ ಸಾವಿರ ಕಣ್ಣುಗಳ ಎದುರಿನಲ್ಲಿ ಕುತುಝೇವ್ 
ಮೆಲ್ಲಗೆ ಹೆಜ್ಜೆ ಹಾಕುತ್ತಾ ಸಾವಕಾಶವಾಗಿ ನಡೆದ. ಮೂರನೆಯ ಕಂಪೆನಿಯ ಹತ್ತಿರ 
ಬಂದಾಗ ದಡಕ್ಕನೆ ನಿಂತ. ಹಾಗೆ ಅವನು ತಟ್ಟನೆ ನಿಲ್ಲಬಹುದೆಂದು ನಿರೀಕ್ಷಿಸಿರದಿದ್ದ 
ಪರಿವಾರ ಅವನ ತೀರ ಹತ್ತಿರಕ್ಕೆ ಬಂದುಬಿಟ್ಟಿದ್ದರು. 
- 'ಆಹಾ, ತಿಮೋಖಿನ್!' ನೀಲಿ ಓವರ್ ಕೋಟು ತೊಟ್ಟಿದ್ದಕ್ಕಾಗಿ 
ತಾಪತ್ರಯಪಟ್ಟಿದ್ದ ಕೆಂಪು ಮೂಗಿನ ಕ್ಯಾಪ್ಟನ್ನನನ್ನು ಮಹಾದಂಡನಾಯಕ ಗುರುತಿಸಿ 
ಮಾತನಾಡಿಸಿದ. 

- ರೆಜಿಮೆಂಟ್ ಕಮಾಂಡರನು ಬೈದಾಗ ಯಾರೂ ಹೀಗೆ ಸೆಳೆಯುವುದಕ್ಕೆ 
ಸಾಧ್ಯವಿಲ್ಲ ಅನ್ನುವ ಹಾಗೆ ಸೆಟೆದು ನಿಂತಿದ್ದ ತಿಮೋಖಿನ್ ಈಗ ಮಹಾದಂಡನಾಯಕ 
ಮಾತಾಡಿಸಿದಾಗ ಎಷ್ಟು ಸೆಟೆದು ಅಟೆನ್ಸನ್‌ನಲ್ಲಿ ನಿಗುರಿ ನಿಂತಿದ್ದನೆಂದರೆ ದಂಡನಾಯಕ 
ಅಲ್ಲೇ ನಿಂತು ನೋಡುತ್ತಾ ಇದ್ದರೆ ತಿಮೋಖನ್ ಬದುಕಿ ಉಳಿಯುವುದಿಲ್ಲ 
ಅನ್ನುವ ಹಾಗಿತ್ತು. ಆ ಕಾರಣಕ್ಕೇನೇ ಅವನಿಗೆ ಸದಾ ಒಳಿತು ಬಯಸುತ್ತಿದ್ದ 
ಕುತುರೋಪ್ತಕ್ಷಣವೇ ಮುಖ ತಿರುಗಿಸಿಕೊಂಡ. ಗಾಯದ ಗುರುತಿದ್ದ ಅವನ 
ಊದಿಕೊಂಡ ಮುಖದ ಮೇಲೆ ಕಿರು ನಗೆ ಹೊಳೆದು ಹೋಯಿತು. 

- ' ಇಸ್ರೇಲ್ ಯುದ್ದದ ಇನ್ನೊಬ್ಬ ಕಾಮ್ರಡ್, ತುಂಬಾ ಧೈರ್ಯವಂತ! ಇವನ 
ಕೆಲಸ ಹೇಗೆ, ತೃಪ್ತಿಯೋ ?' ಮಹಾದಂಡನಾಯಕ ರೆಜಿಮೆಂಟಲ್ ಜನರಲ್‌ನನ್ನು 
ಕೇಳಿದ. 
- ಕನ್ನಡಿಯ ಹಾಗೆ ಅಣಕಿಸುತ್ತಿರುವ ಹುಸ್ಸಾರ್ ಬೆನ್ನ ಹಿಂದೆ ಇದ್ದಾನೆ ಅನ್ನುವುದು 
ಗೊತ್ತಿರದ ಜನರಲ್ ತಟ್ಟನೆ ನಡುಗಿ, ಮುಂದೆ ಬಗ್ಗಿ 'ತುಂಬಾ ತೃಪ್ತಿಯಾಗಿದೆ, 
ಯುವರ್ ಎಕ್ಸಲೆನ್ಸಿ'' ಅಂದ. 

'ನಮಗೆಲ್ಲ ಸಣ್ಣ ಪುಟ್ಟ ದೌರ್ಬಲ್ಯ ಇರುತ್ತದೆ, ಇವನಿಗೆ ಕುಡಿತದ ಚಟ 


೧೭೫ 


ಸಂಪುಟ ೧ - ಸಂಚಿಕೆ ಎರಡು 
ಇತ್ತು' ಕುತುಝೇವ್ ಮುಂದೆ ಹೋಗುತ್ತಾ ಹೇಳಿ ನಕ್ಕ. . 

ತನ್ನದೇ ತಪ್ಪು ಇರಬಹುದೆಂದು ಕಳವಳಪಟ್ಟುಕೊಂಡ ಕಮಾಂಡರ್. ಅದಕ್ಕೇ 
ಏನೂ ಮಾತನಾಡಲಿಲ್ಲ. ಆ ಹೊತ್ತಿಗೆ ಕೆಂಪು ಮೋರೆಯ ಕ್ಯಾಪ್ಟನ್‌ನನ್ನೂ ಅವನು 
ಬಲವಂತವಾಗಿ ಹೊಟ್ಟೆ ಒಳಕ್ಕೆಳೆದುಕೊಂಡು ನಿಂತಿರುವುದನ್ನೂ ಕಂಡ ಹುಸ್ಸಾರ್ 
ಅವನ ಮುಖವನ್ನೂ ನಿಂತ ಭಂಗಿಯನ್ನೂ ಹೇಗೆ ಅಣಕಿಸಿದ ಅಂದರೆ ನೆಸ್ವಿಟ್ 
ಜೋರಾಗಿ ನಕ್ಕುಬಿಟ್ಟ, ಕುತುಝೇವ್ತಿರುಗಿ ನೋಡಿದ. ಆಫೀಸರನಿಗೆ ಮುಖವನ್ನು 
ಬೇಕಾದ ಹಾಗೆ ಬದಲಾಯಿಸಿಕೊಳ್ಳುವ ಶಕ್ತಿ ಇದ್ದಹಾಗಿತ್ತು. ಕುತುಝೇವ್ 
ತಿರುಗುವಷ್ಟರೊಳಗೆ ಗೌರವ ಸೂಚಕವಾದ ಮುಗ್ಧ ಭಾವನ್ನು ಮುಖದ 
ಮೂಡಿಸಿಕೊಳ್ಳುವ ಮೊದಲು ಇನ್ನೊಂದು ಅಣಕ ತೋರಿದ. 

ಮೂರನೆಯ ಕಂಪೆನಿ ಕೊನೆಯದು. ಕುತುಝೇವ್ಸ್ವಲ್ಪ ತಡೆದು ನಿಂತ 
ಏನೋ ನೆನಪು ಮಾಡಿಕೊಳ್ಳುವ ಹಾಗೆ, ಪ್ರಿನ್ಸ್ ಆಂಡೂ ಮುಂದೆ ಬಂದು 
“ಪೇದೆಯಾಗಿ ಹಿಂಬಡ್ತಿ ಪಡೆದಿರುವ ಆಫೀಸರ್ ದೋಖೋವ್‌ನ ಬಗ್ಗೆ 
ನೆನಪಿಸುವಂತೆ ತಿಳಿಸಿದ್ದಿರಿ,' ಮೆಲ್ಲಗೆ ಫ್ರೆಂಚಿನಲ್ಲಿ ಹೇಳಿದ. 

'ಎಲ್ಲಿದ್ದಾನೆ ದೊಲೊಖೋವ್?' ಕುತುಝೇವ್ಕೇಳಿದ. 

ಈಗ ಸೈನಿಕ ಪೇದೆಯ ಸಮವಸ್ತ್ರ ತೊಟ್ಟಿದ್ದ ದೊಲೊಯೋವ್ ತನ್ನನ್ನು 
ಕರೆಯುವವರೆಗೂ ಕಾಯಲಿಲ್ಲ. ಸುಂದರ ತಲೆಗೂದಲ, ತೆಳು ಮೈಯ್ಯ, ಸ್ವಚ್ಛ 
ನೀಲಿಕಣ್ಣಿನ ಸೈನಿಕ ಆಕಾರ ತಾನಾಗಿಯೇ ಸಾಲಿನಿಂದ ಮುಂದೆ ಬಂದು 
ಮಹಾದಂಡನಾಯಕ ಇದ್ದಲ್ಲಿಗೆ ಹೆಜ್ಜೆ ಹಾಕಿ ಶಸ್ತಗೌರವ ಸಲ್ಲಿಸಿ ಸೆಲ್ಯೂಟು 
ಮಾಡಿತು . 

“ ಏನಾದರೂ ದೂರು?' ಕುತುಝೇವ್ ಸ್ವಲ್ಪ ಹುಬ್ಬುಗಂಟಿಕ್ಕಿಕೊಂಡು 
ಕೇಳಿದ. 

' ಇವನೇ ದೊಲೊನೊವ್, ಸರ್' ಪ್ರಿನ್ಸ್ ಅಂದ್ರೂ ಹೇಳಿದ. 

“ಆಹಾ!' ಅಂದ ಕುತುಝೇವ್, 'ಸರಿ, ಇದು ನಿನಗೆ ಪಾಠವಾಗಲಿ, ಸೈನಿಕನಾಗಿ 
ನಿನ್ನ ಡ್ಯೂಟಿ ಮಾಡು. ಪ್ರಭುಗಳು ದಯಾವಂತರು, ನಾನು ನಿನ್ನ ಮರೆಯುವುದಿಲ್ಲ, 
ಸರಿಯಾಗಿ ನಡೆದುಕೊಂಡರೆ .' 

ಸ್ವಚ್ಛ ನೀಲಿ ಕಣ್ಣು ರೆಜಿಮೆಂಟಲ್ ಕಮಾಂಡರನನ್ನು ದಿಟ್ಟಿಸಿದಷ್ಟೇ ನಿರ್ಭಯವಾಗಿ 
ಮಹಾದಂಡನಾಯಕನನ್ನೂ ದಿಟ್ಟಿಸಿದವು. ಮಹಾದಂಡನಾಯಕನನ್ನು ಸಾಮಾನ್ಯ 
ಪೇದೆಯಿಂದ ಅಷ್ಟು ಮೇಲೆ ಇರಿಸಿರುವ ಸಂಪ್ರದಾಯದ ಪರದೆಯನ್ನು ಸೀಳಿಹಾಕುವ 
ಹಾಗಿತ್ತು ಆ ನೋಟ. 

'ನನ್ನದು ಒಂದೇ ಕೋರಿಕೆ , ಯುವರ್ ಮೋಸ್ಟ್ ಹೈ ಎಕ್ಸಲೆನ್ಸಿ ,' 
ದೊಲೊಖೋವ್ ಆತುರಪಡದೆ ದೃಢವಾದ ಗಟ್ಟಿಯಾದ ಧ್ವನಿಯಲ್ಲಿ ಹೇಳಿದ, 


೧೭೬ 

ಯುದ್ಧ ಮತ್ತು ಶಾಂತಿ 
'ತಪ್ಪು ತಿದ್ದಿಕೊಂಡು ಪ್ರಭುಗಳ ಬಗ್ಗೆ, ನನ್ನ ದೇಶದ ಬಗ್ಗೆ ಇರುವ ಭಕ್ತಿಯನ್ನು 
ತೋರಿಸಲು ಒಂದು ಅವಕಾಶ ಕೊಡಿ!' 

ಕುತುಝೇವ್ ಮುಖ ತಿರುಗಿಸಿಬಿಟ್ಟ. ಅವನ ಕಣ್ಣಿನಲ್ಲಿ ಕ್ಯಾಪ್ಟನ್ 
ತಿಮೋಖಿನ್‌ನನ್ನು ಮಾತಾಡಿಸಿ ತಿರುಗಿಸಿಕೊಂಡಾಗ ಇದ್ದಂಥದ್ದೇ ಕಿರು ನಗೆ 
ಹೊತ್ತಿ ಹೊಳೆಯಿತು. ಮುಖ ತಿರುಗಿಸಿ ಹುಬ್ಬು ಗಂಟಿಕ್ಕಿಕೊಂಡ- ದೊಲೊಖೋವ್ 
ತನಗೆ ಹೇಳಿದ ಹೇಳಬಹುದಾದ ಎಲ್ಲ ಮಾತೂ ಸಾವಿರ ಸಾರಿ ಹೇಳಿಯಾಗಿದೆ, 
ಕೇಳಿಯಾಗಿದೆ , ಗೊತ್ತಾಗಿದೆ , ಹಳೆಯ ಟೋಪಿಯ ಥರಾ . ಪ್ರತಿಯಾಗಿ 
ಮಾತಾಡುವುದೂ ಆಯಾಸವೇ . ನನಗೆ ಬೇಕಾದದ್ದು ಇದಲ್ಲ ಅನ್ನುವಂಥ ನಗು 
ಅದು. ಹಾಗೆ ಮುಖ ತಿರುಗಿಸಿದ ದಂಡನಾಯಕ ನೇರವಾಗಿ ಸಾರೋಟಿನ ಕಡೆಗೆ 
ಹೆಜ್ಜೆ ಹಾಕಿದ . 

ರೆಜಿಮೆಂಟು ಕಂಪನಿಗಳಾಗಿ ವಿಂಗಡಣೆಗೊಂಡು ಬ್ಯಾನ್ ಊರಿನಿಂದ 
ಬಹಳ ದೂರವೇನು ಇರದ ಪಾಳೆಯಕ್ಕೆ , ಅಲ್ಲಿ ಹೊಸಬೂಟು, ಹೊಸ ಬಟ್ಟೆ, 
ಮತ್ತೆ ಸುದೀರ್ಘ ನಡಿಗೆಯ ನಂತರ ಒಂದಿಷ್ಟು ವಿಶ್ರಾಂತಿ ದೊರೆಯುತ್ತದೆ ಅನ್ನುವ 
ಆಸೆ ಇಟ್ಟುಕೊಂಡು ಹೊರಟಿತು. 

' ನನ್ನ ತಪ್ಪು ತಿಳೀಬೇಡ,' ಮೂರನೆಯ ಕಂಪೆನಿಯನ್ನು ದಾಟಿಕೊಂಡು 
ಮುಂಭಾಗದಲ್ಲಿದ್ದ ಕ್ಯಾಪ್ಟನ್ ತಿಮೋಖಿನ್‌ನ ಹತ್ತಿರಕ್ಕೆ ಹೋಗಿ ರೆಜಿಮೆಂಟಲ್ 
ಕಮಾಂಡರ್ ಕೇಳಿದ. ಇನ್‌ಸೆಕನ್ನು ಸುಗಮವಾಗಿ ಮುಗಿದದ್ದರಿಂದ ಅವನ ಮುಖ 
ಸ೦ತೋಷದಿಂದ ಹೊಳೆಯುತ್ತಿತ್ತು . ' ಪ್ರಭುಗಳ ಸೇವೆ... ಏನು 
ಮಾಡುವುದು....ಒಂದೊಂದು ಸಾರಿ ರೇಗಬೇಕಾಗತದೆ...ತಪ್ಪಾಗಿದ್ದು ಒಪ್ಪಿಕೊಳ್ಳೋದರಲ್ಲಿ 
ನಾನೇ ಮೊದಲು...ನಾನು ಎಂಥವನು ಗೊತ್ತಲ್ಲ ನಿನಗೆ...! ಸಾಹೇಬರು 
ಖುಷಿಯಾದರು!' ಅನ್ನುತ್ತಾ ಕ್ಯಾಪ್ಟನ್ನನ ಕಡೆಗೆ ಕೈ ಮುಂದೆ ಚಾಚಿದ. 

- “ ಫೀಸ್, ಜನರಲ್, ನಾನು ತಪ್ಪು ತಿಳೀತೇನಾ!' ಅಂದ ಕ್ಯಾಪ್ಟನ್. ಅವನ 
ಮೂಗು ಮಾಮೂಲಿಗಿಂತ ಜಾಸ್ತಿ ಕೆಂಪಾಗಿತ್ತು. ನಕ್ಕ . ಆ ನಗು ಮುಂದಿನ ಎರಡು 
ಹಲ್ಲು ಉದುರಿವೆ ಅನ್ನುವುದನ್ನು ತೋರಿಸಿತು. ಇಸ್ರೇಲ್ ಯುದ್ದದಲ್ಲಿ ಬಂದೂಕಿನ 
ಹಿಂಬದಿಯಿಂದ ಪೆಟ್ಟು ತಿಂದು ಅವು ಬಿದ್ದು ಹೋಗಿದ್ದವು. 

- 'ದೊಲೊಖೋವ್ಗೆ ಹೇಳು, ನಾನೇನೂ ಅವನನ್ನು ಮರೆಯಲ್ಲ. 
ಆರಾಮವಾಗಿರಲಿ . ಆಮೇಲೆ, ಕೇಳಬೇಕು ಅಂತಿದ್ದೆ , ಏನು ಮಾಡುತಾ ಇದಾನೆ, 
ಸರಿಯಾಗಿದಾನಾ...?' 

'ಡ್ಯೂಟಿಯ ವಿಷಯದಲ್ಲಿ ಯಾರೂ ಬೆರಳು ತೋರಿಸುವಹಾಗಿಲ್ಲ, 
ಯುವರ್ ಎಕ್ಸಲೆನ್ನಿ. ಆದರೆ ಅವನ ಸ್ವಭಾವ ಮಾತ್ರ...' ತಿಮೋಖಿನ್‌ ಹೇಳಿದ. 

ಏನಾಗಿದೆ ಅವನ ಸ್ವಭಾವಕ್ಕೆ ?' ಜನರಲ್ ಕೇಳಿದ. 


೧೭೭ 
ಸಂಪುಟ ೧ - ಸಂಚಿಕೆ ಎರಡು 

ಒಂದೊಂದು ದಿನ ಒಂದೊಂದು ಥರ ಇರುತಾನೆ. ಇವತ್ತು ಸರಿಯಾಗಿ , 
ಸಭ್ಯವಾಗಿ ಸೌಮ್ಯವಾಗಿ ಇರುತ್ತಾನೆ. ನಾಳೆ ಕಾಡು ಪ್ರಾಣಿಯ ಥರ ಇರುತ್ತಾನೆ. 
ಪೋಲೆಂಡಿನಲ್ಲಿದ್ದಾಗ ಒಬ್ಬ ಯೆಹೂದಿಯನ್ನು ಕೊಂದೇ ಬಿಡುತ್ತಾ ಇದ್ದ...' 

“ಸರಿ, ಸರಿ! ಯುವಕರು ಕಷ್ಟದಲ್ಲಿರುವಾಗ ನಾವು ದೊಡ್ಡವರು ಸ್ವಲ್ಪ 
ಉದಾರ ವಾಗಿರ ಬೇಕು. ಅವನಿಗೆ ದೊಡ್ಡದೊಡ್ಡವರೆಲ್ಲ ಚೆನ್ನಾಗಿ 
ಗೊತ್ತಿದ್ದಾರೆ...ಗೊತ್ತಲ್ಲ...ಅವನ ವಿಚಾರದಲ್ಲಿ ನೀನು...' | 

- ' ಯೆಸ್ ಸರ್! ಯೆಸ್ ಸರ್!' ತಾನೇನು ಮಾಡಬೇಕೋ ಗೊತ್ತು 
ಅನ್ನುವ ಹಾಗೆ ತಿಮೋಖನ್ ನಕ್ಕ. 
- ' ಸರಿ , ಹಾಗಾದರೆ, ಸರಿ ಹಾಗಾದರೆ.' 

ಜನರಲ್ ಆಮೇಲೆ ಸೈನಿಕರ ಸಾಲಿನಲ್ಲಿ ನಡೆಯುತ್ತಿದ್ದ ದೊಲೊಖೋವ್‌ನನ್ನು 
ಹುಡುಕಿ, ಅವನ ಹತ್ತಿರ ಹೋಗಿ, ತನ್ನ ಕುದುರೆಯ ಲಗಾಮು ಹಿಡಿದೆಳೆದು 
ನಿಲ್ಲಿಸಿಕೊಂಡು, 'ಒಂದು ದಾಳಿ ಆಗಲಿ...ಎಪಾಲೆಟ್ಸ್ , ಗ್ಯಾರಂಟಿ' ಅಂದ. 
ದೊಲೊಖೋವ್ ನೋಡಿದ , ಏನೂ ಹೇಳಲಿಲ್ಲ. ಅವನ ತುಟಿಯ ಮೇಲೆ 
ಆಡುತ್ತಿದ್ದ ಧಿಕ್ಕಾರದ ನಗು ಹಾಗೇ ಇತ್ತು. 

'ಸರಿ ' ಅಂದ ಜನರಲ್. 'ಎಲ್ಲಾರಿಗೂ ನನ್ನ ಪರವಾಗಿ ವೋಡ್ಕಾ' ಸೈನಿಕರಿಗೆಲ್ಲ 
ಕೇಳುವಹಾಗೆ ಹೇಳಿ 'ಎಲ್ಲಾರಿಗೂ ಥ್ಯಾಂಕ್ಸ್ ! ದೇವರು ದೊಡ್ಡವನು!' ಅಂದ. 
ಅವರ ಕಂಪೆನಿಯನ್ನು ದಾಟಿ ಮುಂದಿನದರ ಜೊತೆಗೆ ಸೇರಿಕೊಂಡ. 

“ನಿಜವಾಗಲೂ ಒಳ್ಳೆಯ ಮನುಷ್ಯ. ಅವನ ಕೈಕೆಳಗೆ ಡ್ಯೂಟಿ ಮಾಡುವುದು 
ಕಷ್ಟ ಅಲ್ಲ' ತಿಮೋಖಿನ್ ತನ್ನ ಸಮೀಪದಲ್ಲಿದ್ದ ಪೇದೆಗೆ ಹೇಳಿದ. 
* ' ಆರೀನ್ ರಾಜಾ ಅವನು!' ನಗುತ್ತಾ ಅಂದ ಪೇದೆ. ಅದು ಜನರಲ್‌ಗೆ 
ಸೈನಿಕರು ಇಟ್ಟಿದ್ದ ಅಡ್ಡ ಹೆಸರು. 

- ಸೇನಾ ಪರಿಶೀಲನೆ ಆದಮೇಲೆ ಆಫೀಸರುಗಳಲ್ಲಿ ಹುಟ್ಟಿದ್ದ ಒಳ್ಳೆಯ ಮೂಡು 
ಸಾಮಾನ್ಯ ಸೈನಿಕರಿಗೂ ತಟ್ಟಿತು. ಖುಷಿಯಾಗಿ ಹೆಜ್ಜೆ ಹಾಕಿದರು. ಎಲ್ಲ ಕಡೆ 
ಸೈನಿಕರ ಹರಟೆ ದನಿ ಕೇಳಿಸುತ್ತಿತ್ತು. 

“ಕುತುರೊವ್‌ಗೆ ಒಂದು ಕಣ್ಣು ಕಾಣಲ್ಲ ಅಂದಿದ್ದು ಯಾರು ?' 
“ಹೌದು, ಕಾಣಲ್ಲ. ಕುರುಡ!” 

' ಏನಿಲ್ಲ. ನಿನಗಿಂತ ಚೆನ್ನಾಗಿಕಾಣ್ಯವೆ ಅವನ ಕಣ್ಣು. ನಮ್ಮ ಬೂಟು, ಕಾಲಿಗೆ 
ಸುತ್ತಿಕೊಂಡ ಬಟ್ಟೆ , ಎಲ್ಲಾ ಹೇಗೆ ನೋಡಿದ...' 

- 'ನನ್ನ ಕಾಲು ನೋಡತಾ ಇದ್ದಾಗ, ಅಯ್ಯಪ್ಪಾ, ನನಗಂತೂ ...' 
೩೯ ರೈತರ ಹಾಗೇ ಸೈನಿಕರಿಗೂ ಕಾಲುಚೀಲ ಇರಲಿಲ್ಲ. ಪಾದಗಳಿಗೆ ಸುತ್ತಿಕೊಳ್ಳಲು ಬಟ್ಟೆಯ 

ತುಂಡು ಕೊಡುತ್ತಿದ್ದರು. 


೧೭೮ 


ಯುದ್ಧ ಮತ್ತು ಶಾಂತಿ 
1 . ' ಅವನ ಜೊತೆ ಇದ್ದನಲ್ಲ, ಆಸ್ಪಿಯಾದವನು, ಮೈಗೆಲ್ಲ ಸುಣ್ಣ ಬಳಿದು 
ಕಳಿಸಿದ್ದರು ಅಂತ ಕಾಣತ್ತೆ! ಹಿಟ್ಟಿನ ಹಾಗೆ ಬೆಳ್ಳಗೆ ಇದ್ದ. ನಾವು ಬಂದೂಕುಕ್ಲೀನು 
ಮಾಡುವ ಹಾಗೆ ಅವನನ್ನೂ ಪೂರ ಬಟ್ಟೆ ಬಿಚ್ಚಿಸಿ ಕ್ಲೀನು ಮಾಡುತ್ತಾರೋ 
ಏನೋ !” 

'ಹೇಯ್, ಫದ್ಯಾ ಯಾವಾಗ ಶುರುವಾಗತ್ತೆ ಅಂತ ಹೇಳಿದನಾ ? ನೀನು 
ನನಗಿಂತ ಹತ್ತಿರ ಇದ್ದೆಯಲ್ಲ...? ಬೊನಪಾರ್ಟೆ ಬ್ರಾನ್‌ಗೆ ಬಂದಿದಾನೆ ಅಂದರು 
ಯಾರೋ , ಹೌದಾ?' 
* ' ಬ್ರಾನ್‌ಗೆ ಬಂದಿದಾನಾ? ಕೇಳಿರಪ್ಪಾ ಇವನ ಮಾತನ್ನ ! ಈಗ ದಂಗೆ 
ಎದ್ದಿರೋರು ಪ್ರಶ್ಯಾದವರು, ಅದನ್ನ ಅಡಗಿಸಬೇಕಾದೋರು ಆಸ್ಟಿಯಾದವರು. 
ಅದಾದಮೇಲೆ, ಆಮೇಲೆ, ಬೋನಾಪಾರ್ಟೆ ಜೊತೆ ಯುದ್ಧ ಶುರುವಾಗತ್ತೆ. ಇವನು 
ಹೇಳೋದುಕೇಳಿದರೆ ಬೊನಾಪಾರ್ಟೆ ಆಗಲೇ ಬ್ರಾನ್‌ಗೆ ಬಂದಿದಾನಂತೆ! ಪೆದ್ದಾ 
ಕಣೋಲೋ ನೀನು! ಹೇಳಿದ ಮಾತು ಸರಿಯಾಗಿ ಕೇಳಿಸಿಕೋ !? 
- ' ಈ ಕ್ವಾರ್ಟ‌ ಮಾಸ್ಟರುಗಳು ಪಿಶಾಚಿಗಳು! ಐದನೆ ಕಂಪನಿಯವರು ಆಗಲೇ 
ಹಳ್ಳಿ ಮುಟ್ಟಿ ಪಾರಿಡ್ ಬೇಯಿಸಿಕೊಳ್ತಾ ಇದಾರೆ, ನಾವಿನ್ನೂ ಇಲ್ಲೇ ಇದೀವಿ.' 
* ಒಂದು ಬಿಸ್ಕತ್ತು ಕೊಡೋಲೋ !' 
ಈ 'ನಿನ್ನೆ ಹೊಗೆ ಸೊಪ್ಪು ಕೊಟ್ಟೆನೋಡುನೀನು! ಇರಲಿ ಬಿಡೋ , 
ಬೇಜಾರು ಮಾಡಕೋಬೇಡ, ತಗೋ .? 

'ಹಾಲ್ಸ್ ಕೊಡಬೇಕಾಗಿತ್ತು. ಹೊಟ್ಟೆಗೆ ಏನೂ ಇನ್ನೂ ಮೂರು ನಾಕು 
ಮೈಲಿ ಹೋಗಬೇಕು.' 

'ಜರ್ಮನಿಯವರು ನಮಗೆ ಗಾಡಿ ಕೊಟ್ಟಿದ್ದಾಗ ಎಷ್ಟು ಚೆನ್ನಾಗಿತ್ತು ° , ಧಿಂ 
ಅಂತ ಕೂತುಕೊಂಡು ಹೋಗಿದ್ದೆವಲ್ಲ!' 

- “ ಅಯ್ಯಾ , ಇಲ್ಲಿ ಇರೋ ಜನಕ್ಕೆ ಐಲು. ಅಲ್ಲಿ ರಶಿಯಾ ಚಕ್ರವರ್ತಿಗೆ ಸೇರಿದ 
ಪೋಲಿಶ್ ಜನ ಇದ್ದರು ಗಾಡಿ ಕೊಟ್ಟರು, ಇಲ್ಲಿ ಅಪ್ಪಟ ಜರ್ಮನಿಯವರು 
ಇರೋದು, ತಿಳಕೋ .” 
- 'ಹಾಡಿನವರು ಮುಂದೆ ಬನ್ನಿ ' ಕ್ಯಾಪ್ಟನ್ನನ ಆಜ್ಞೆ ಕೇಳಿಸಿತು. ಬೇರೆ ಬೇರೆ 
ಸಾಲುಗಳಲ್ಲಿದ್ದ ಸುಮಾರು ಇಪ್ಪತ್ತು ಜನ ತುಕಡಿಯ ಮುಂಭಾಗಕ್ಕೆ ಓಡಿ ಬಂದರು. 


೪೦ ನೆಪೋಲಿಯನ್ ಇನ್ನೂ ಇಂಗ್ಲೆಂಡಿನ ಮೇಲೆ ದಾಳಿ ನಡೆಸಲು ಸಿದ್ಧನಾಗುತ್ತಿದ್ದಾನೆಂದು ಭಾವಿಸಿದ್ದ 

ರಶಿಯನ್ನರಾಗಲೀ ಆಸ್ಪಿಯನ್ನರಾಗಲೀ ತಮ್ಮ ಪಡೆಗಳನ್ನು ಅವು ತಲುಪಬೇಕಾದ ಜಾಗಕ್ಕೆ 
ಕಳಿಸಲು ಆತುರ ತೋರಿರಲಿಲ್ಲ. ನೆಪೋಲಿಯನ್ ಆಗಲೇ ರೈನ್ ತಲುಪಿದ್ದಾನೆ ಎಂಬ ಸುದ್ದಿ 
ಬಂದಾಗ ರಶಿಯನ್ ಸೇನೆ ಬೇಗ ಅಲ್ಲಿಗೆ ತಲುಪಲೆಂದು ಅವರಿಗೆ ಗಾಡಿಗಳನ್ನು ಒದಗಿಸಬೇಕಾಗಿ 
ಬಂದಿತ್ತು. ಹಾಗಾಗಿ ಅವರ ನಡೆಯ ವೇಗ ಹೆಚ್ಚಿತ್ತು. 


೧೭೯ 
ಸಂಪುಟ ೧ - ಸಂಚಿಕೆ ಎರಡು 
ಹಾಡುಗಾರರ ಮುಖಂಡನೂ ಆಗಿದ್ದ ಡ್ರಮರ್ ಎಲ್ಲರಿಗಿಂತ ಮುಂದೆ, 
ಹಾಡುಗಾರರಿಗೆ ಮುಖಮಾಡಿ ನಿಂತು ಕೈ ಬೀಸುತ್ತಾ ' ಆಗಿದೆ ಸೂರ್ಯೋದಯ ' 
ಎಂದು ಆರಂಭವಾಗಿ ನಡೆ ಮುಂದೆ ಸೈನಿಕಾ ತಂದೆ ಕಾಮೆನ್ಸಿಯೆ ಮುಖಂಡ, 
ಕಾದಿದೆ ವೈಭವ ನಿನಗೆ' ಎಂದು ಕೊನೆಯಾಗುವ ಸುದೀರ್ಘವಾದ ಸೈನಿಕ 
ಹಾಡು ಶುರುಮಾಡಿದ. ಟರ್ಕಿಷ್ ಯದ್ಧದ ಸಂದರ್ಭದಲ್ಲಿ ಬರೆದದ್ದು ಆ ಹಾಡು. 
ಈಗ ಆಸ್ಟ್ರಿಯಾದಲ್ಲಿ ಹಾಡುವಾಗ ' ತಂದೆ ಕಾಮೆನ್ನಿ ' ಗೆ ಬದಲಾಗಿ 'ತಂದೆ 
ಕುತುಝೇವ್' ಅನ್ನುವ ಬದಲಾವಣೆ ಯಾಗಿತ್ತು ಅಷ್ಟೆ. 

ಸಾಲಿನ ಕೊನೆಯ ಪದಗಳನ್ನು ಜೋರಾಗಿ ಹೇಳಿ, ಸೈನಿಕ ಶೈಲಿಯಲ್ಲಿ 
ಏನನ್ನೋ ನೆಲಕ್ಕೆಸೆಯುವವನ ಹಾಗೆ ಕೈ ಮೇಲೆತ್ತಿದ- ನಲವತ್ತು ವಯಸ್ಸಿನ, ತೆಳು 
ಮೈಯ ಸುಂದರ ಡ್ರಮರ್, ಹಾಡುಗಾರರನ್ನು ಗಂಭೀರವಾಗಿ ನೋಡುತ್ತಾ ಹುಬ್ಬು 
ಗಂಟಿಕ್ಕಿದ. ಎಲ್ಲರ ಕಣ್ಣು ತನ್ನಮೇಲೇ ಇದೆಯೆಂದು ಗೊತ್ತಾಗಿ, ಅದೃಶ್ಯವೂ 
ಅಪೂರ್ವವೂ ಆದ ಸಂಪತ್ತನ್ನು ತಲೆಯ ಮೇಲೆ ಎತ್ತಿ ಹಿಡಿಯುವ ಹಾಗೆ 
ಎರಡೂ ಕೈ ಹುಷಾರಾಗಿ ಎತ್ತಿದ ಕೈ ಸ್ವಲ್ಪ ಹೊತ್ತು ಅಲ್ಲೇ ಇತ್ತು , ಕೈಯಲ್ಲಿದ್ದುದನ್ನು 
ದೊಪ್ಪನೆ ಕೆಳಕ್ಕೆ ಎಸೆದು ಹಾಡು ಶುರುಮಾಡಿದ: 
- “ ಆಹಾ ನನ್ನ ಗುಡಿಸಿಲ ಒಡಲೇ !' 

ಇಪ್ಪತ್ತು ಧ್ವನಿಗಳು ನನ್ನ ಹೊಸ ಗುಡಿಸಿಲಲ್ಲಿ...!' ಮುಂದಿನ ಸಾಲನ್ನು 
ಜೊತೆಯಾಗಿ ಹೇಳಿದವು. ಕ್ಯಾಸ್ಪಾನೆಟ್ ತಾಳವಾದ್ಯ ನಿಪುಣನಾದ ಸೈನಿಕನೊಬ್ಬ 
ಬೆನ್ನ ಮೇಲಿನ ಭಾರವನ್ನೂ ಲೆಕ್ಕಿಸದೆ ಚುರುಕಾಗಿ ಮುಂದೆ ಬಂದು ಸೈನಿಕರ ಕಡೆ 
ಮುಖಮಾಡಿ, ಹಿಂದು ಹಿಂದಕ್ಕೆ ಹೆಜ್ಜೆ ಹಾಕುತ್ತಾ ಅಂಜಿಸುವ ಹಾಗೆ ಭುಜ ಕುಣಿಸಿ 
ತಾಳವನ್ನು ಬೀಸಿ ಬೀಸಿ ಬಾರಿಸಿದ. ಸೈನಿಕರ ಹೆಜ್ಜೆ ತಪ್ಪಿ , ತಮಗೇ ಗೊತ್ತಿಲ್ಲದೆ 
ಜೋರಾಗಿ ಕೈ ಬೀಸಿ ಹಾಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹೊಂದಿಸಿಕೊಂಡರು. ಕಂಪನಿಯ 
ಹಿಂಬದಿಯಿಂದ ಇದ್ದಕ್ಕಿದ್ದ ಹಾಗೆ ಗಾಲಿಗಳ ಶಬ್ದ , ಸ್ಪಿಂಗು ಕಿರುಗುಡುವ ಶಬ್ದ , 
ಕುದುರೆಗಳ ಗೊರಸಿನ ಕಟಕಟ ಶಬ್ದ ಕೇಳಿಸಿದವು. ಕುತುಝೇವ್ ಮತ್ತವನ 
ಸಿಬ್ಬಂದಿ ಊರಿಗೆ ವಾಪಸಾಗುತ್ತಿದ್ದರು. ಹಾಡು ಮುಂದುವರೆಯಲಿ ಅನ್ನುವ 
ಸೂಚನೆ ನೀಡಿದರು. ಮಹಾದಂಡನಾಯಕರು ಮತ್ತವರ ಪರಿವಾರದವರೆಲ್ಲರೂ 
ಹಾಡು, ಕುಣಿಯುತ್ತಿರುವ ಸೈನಿಕನ ಚೇಷ್ಟೆ, ಉಲ್ಲಾಸದಿಂದಿದ್ದ ಸಾಗುತ್ತಿದ್ದ ಸೈನಿಕರು 
ಇವನ್ನೆಲ್ಲ ನೋಡುತ್ತಾ ಕೇಳುತ್ತಾ ಸಂತೋಷಪಟ್ಟರು. ಸಾರೋಟು ದಾಟಿ 
ಹೋಗಬೇಕಾಗಿದ್ದ ಬಲಬದಿಯ ಗುಂಪಿನ ಎರಡನೆಯ ಸಾಲಿನಲ್ಲಿದ್ದ ಒಬ್ಬಾತ 
ಎದ್ದು ಕಾಣುತ್ತಿದ್ದ - ನೀಲಿಗಣ್ಣಿನ ಸೈನಿಕ ದೊಲೊಯೋವ್, ಹಾಡಿನ ತಾಳಕ್ಕೆ ತಕ್ಕಹಾಗೆ 
ಹುಮ್ಮಸ್ಸಿನಿಂದ ಉಬ್ಬಿ ಹೆಜ್ಜೆ ಹಾಕುತ್ತಾ, ತನ್ನ ಪಕ್ಕದಲ್ಲಿ ಸಾಗುತ್ತಿರುವ 
ಸಾರೋಟಿನಲ್ಲಿರುವವರಿಗೆ ಈ ಕ್ಷಣದಲ್ಲಿ ಸೈನಿಕರೊಡನೆ ನಡೆಯುವ ಭಾಗ್ಯವಿಲ್ಲ, 


೧೮೦ 


ಯುದ್ಧ ಮತ್ತು ಶಾಂತಿ 
ಅಯ್ಯೋ ಪಾಪ ಅನ್ನುವ ಹಾಗೆ ಮರುಕದಿಂದ ನೋಡುತ್ತಿದ್ದ. ಕುಟುಜೋವನ 
ಪರಿವಾರದ ಯುವಕ ಹುಸಾರ್ ಆಫೀಸರ್ ಜೆರ್ಕೊವ್, ರೆಜಿಮೆಂಟಲ್ 
ಕಮಾಂಡರನನ್ನು ಅಣಕಿಸಿದ್ದವನು , ಸಾರೋಟಿಗಿಂತ ಸ್ವಲ್ಪ ಹಿಂದೆಯೇ ಉಳಿದು 
ದೋಲೋಖೋವ್‌ನ ಪಕ್ಕಕ್ಕೆ ತನ್ನ ಕುದುರೆಯನ್ನು ತಂದ. 
ಆ ಹುಸ್ಸಾರ್‌ ಜೆರ್ಕೊವ್ ಒಂದು ಕಾಲದಲ್ಲಿ ಪೀಟರ್ಸ್‌ಬರ್ಗಿನಲ್ಲಿದ್ದ, 
ದೋಲೊಯೋವ್ ನಾಯಕನಾಗಿದ್ದ ಪೋಕರಿಗಳ ಗುಂಪಿನ ಸದಸ್ಯನಾಗಿದ್ದ. 
ಪರದೇಶದಲ್ಲಿದೋಖೋವ್ಸಾಮಾನ್ಯ ಸೈನಿಕನಾಗಿ ಆಗಾಗ ಎದುರಾಗಿದ್ದರೂ 
ಅವನನ್ನು ಗುರುತು ಹಿಡಿಯುವುದೂ ಬೇಕಾಗಿಲ್ಲ ಅನ್ನುವ ಹಾಗೆ ಇರುತ್ತಿದ್ದ. 
ಹಿಂಬಡ್ತಿಯಾಗಿ ಅವಮಾನಕ್ಕೆ ಗುರಿಯಾಗಿದ್ದ ದೊಲೊಖೋವ್‌ನನ್ನು ಕುತುಝೇವ್ 
ಸ್ವತಃ ಮಾತಾಡಿಸಿದ್ದರಿಂದ ಹಳೆಯ ಗೆಳೆಯನ ಆಪ್ತವಾದ ಧ್ವನಿಯಲ್ಲಿ ಮಾತಾಡಿಸಿದ. 
- ' ಮೈ ಡಿಯರ್ ಫೆಲೋ , ಹೇಗಿದೀಯ?' ಹಾಡಿನ ಸದ್ದಿನ ನಡುವೆ , 
ನಡೆಯುತ್ತಿರುವ ಸೈನಿಕರ ವೇಗಕ್ಕೆ ತಕ್ಕ ಹಾಗೆ ತನ್ನ ಕುದುರೆ ನಡೆಸಲು ಯತ್ನಿಸುತ್ತಾ, 
ಕೇಳಿದ. 

'ಹೇಗಿದೇನೆ? ಕಾಣುತಾ ಇದೆಯಲ್ಲಾ' ತಣ್ಣಗೆ ಹೇಳಿದ 
ದೊಲೊಯೋವ್. . 

ಉಲ್ಲಾಸದ ಹಾಡು ಜೆರ್ಕೊವ್‌ನ ಬಿಡುಬೀಸು ಮಾತಿನ ಖುಷಿಗೂ 
ಬೇಕೆಂದೇ ತಣ್ಣಗೆ ಮಾತಾಡುತ್ತಿದ್ದ ದೊಲೊಯೋವ್‌ನ ಉತ್ತರಕ್ಕೂ ವಿಶೇಷವಾದ 
ರಂಗು ತಂದಿತ್ತು. 
- “ಅಫೀಸರುಗಳ ಜೊತೆ ಹೇಗಿದೀಯ? ' ಜೆರ್ಕೊವ್ ಕೇಳಿದ. 

- ' ಪರವಾಗಿಲ್ಲ. ಎಲ್ಲಾರೂ ಒಳ್ಳೆಯವರೇ . ನೀನು ಸ್ನಾಫಿಗೆ ಹೇಗೆ 
ನುಸುಳಿಕೊಂಡೆ? ' . 

' ಡೆಪ್ಯೂಟ್ ಮಾಡಿದರು; ನಾನೀಗ ಡ್ಯೂಟಿಯ ಮೇಲಿದೀನಿ.' 
ಇಬ್ಬರೂ ಸುಮ್ಮನಿದ್ದರು. 
“ ಅಂಗಿಯ ತೋಳಿನಲ್ಲಿದ್ದ ಗಿಡುಗನ ತೆಗೆದೆನು 
ಮೇಲೆ ತೂರಿ ಹಾರಿ ಬಿಟ್ಟೆನು...' 

ಹಾಡು ಕೇಳಿಸಿತು. ಸೈನಿಕರಲ್ಲಿ ತಾನೇ ತಾನಾಗಿ ಧೈರ್ಯ, ಉತ್ಸಾಹಗಳನ್ನು 
ತುಂಬುತ್ತಿತ್ತು. ಆ ಹಾಡಿನ ಹಿನ್ನೆಲೆ ಇರದಿದ್ದರೆ ಅವರಿಬ್ಬರ ಮಾತು ಕತೆ ಬೇರೆಯದೇ 
ರೀತಿಯಲ್ಲಿರುತ್ತಿದ್ದುದರಲ್ಲಿ ಅನುಮಾನವಿಲ್ಲ. 

“ ಆಸ್ಟಿಯಾದವರು ಹೊಡೆಸಿಕೊಂಡಿದ್ದಾರಂತೆ, ಹೌದಾ?' 
ದೊಲೊಖೋವ್ ಕೇಳಿದ. 

'ದೇವರೇ ಬಲ್ಲ! ಹಾಗನ್ನುತಾರಪ್ಪ .' 


೧೮೧. 
ಸಂಪುಟ ೧ - ಸಂಚಿಕೆ ಎರಡು 

“ಸಂತೋಷ, ಸಂತೋಷ' ಹಾಡು ಮೂಡಿಸಿದ ಭಾವಕ್ಕೆ ತಕ್ಕಂತೆ ಸಂಕ್ಷಿಪ್ತವಾಗಿ, 
ಸ್ಪಷ್ಟವಾಗಿದೋಖೋವ್ ಉತ್ತರಿಸಿದ. 

- ' ಐ ಸೇ , ಸಾಯಂಕಾಲದ ಹೊತ್ತು ಬಿಡುವಾದಾಗ ಬಾ , ಇಸ್ಪೀಟು ಆಡೋಣ!” 
ಜೆರ್ಕೊವ್ ಹೇಳಿದ, 

' ಯಾಕೆ, ದುಡ್ಡು ಜಾಸ್ತಿ ಆಗಿದೆಯಾ ?” 
'ತಪ್ಪಿಸಿಕೋಬೇಡ, ಬಾ .' 

' ಇಲ್ಲ. ಕಾರ್ಡು ಆಡಲ್ಲ ಅಂತ ಪ್ರಮಾಣ ಮಾಡಿದ್ದೇನೆ. ನಾನಿದ್ದ ಹುದ್ದೆ 
ಮತ್ತೆ ನನಗೆ ಸಿಗುವ ತನಕ ಕುಡಿಯುವುದೂ ಇಲ್ಲ , ಆಡುವುದೂ ಇಲ್ಲ.' 

' ಅದೇನು ಮಹಾ, ಒಂದು ಸಣ್ಣ ಕದನ ನಡೆದರೆ ಆಯಿತು...' 
'ನೋಡೋಣ.' 
ಮತ್ತೆ ಇಬ್ಬರೂ ಮೌನವಾದರು. 

“ಏನಾದರೂ ಬೇಕಾಗಿದ್ದರೆ ಸಂಕೋಚ ಮಾಡಿಕೋ ಬೇಡ. ನಾನು ಸ್ನಾಫಿನಲ್ಲಿ 
ಇರೋದರಿಂದ ಸುಲಭವಾಗಿ ಕೆಲಸ ಮಾಡಿಕೊಡಬಹುದು.' 

ದೋಲೋಖೋವ್ ಮುಗುಳಕ್ಕ. “ನಿನಗೆ ತಾಪತ್ರಯ ಬೇಡ, ಏನಾದರೂ 
ಬೇಕಾದರೆ ಸುಮ್ಮನೆ ತೆಗೆದುಕೊಳ್ಳತೇನೆ, ಬೇಡೋದಿಲ್ಲ!' 

“ ಪರವಾಗಿಲ್ಲ, ನಾನು ಹೇಳಿದ್ದು...' 
“ ಅದೇ , ನಾನು ಹೇಳಿದ್ದು...' 
'ಗುಡ್ ಬೈ .' 
'ಗುಡ್ ಹೆಲ್..' 
' ಹಾರು ಗಿಡುಗವೇ ಹಾರು 
ನಿನ್ನೂರು ಬಲು ದೂರ...' 

ಜೆರ್ಕೊವ್ ಕುದುರೆಯ ಪಕ್ಕೆಯನ್ನು ತಿವಿದ. ಕೆರಳಿದ ಕುದುರೆ ಯಾವ 
ಕಾಲನ್ನು ಮೊದಲು ಮುಂದಿಡುವುದೆಂದು ತಿಳಿಯದು ಅನ್ನುವ ಹಾಗೆ ನಿಂತಲ್ಲೆ 
ಹಿಂಗಾಲ ಮೇಲೆ ಮೂರು ಬಾರಿ ಮೇಲೆದ್ದು, ಜೋರಾಗಿ ಓಡಿ, ಕಂಪನಿಯನ್ನು 
ದಾಟಿಕೊಂಡು, ಮಹಾದಂಡನಾಯಕನ ಸಾರೋಟನ್ನು ತಲುಪಿತು. ಇನ್ನೂ ತಾಳಕ್ಕೆ 
ತಕ್ಕೆ ತಕ್ಕ ಹಾಗೆಯೇ ಹೆಜ್ಜೆ ಹಾಕುತಿತ್ತು. 


ಸೇನಾಪಡೆಯ ಪರಿಶೀಲನೆ ಮುಗಿಸಿ ವಾಪಸಾದ ಕುತುಝೇವ್ಆಸ್ಪಿಯನ್ 
ದಂಡನಾಯಕನನ್ನು ತನ್ನ ಖಾಸಗಿ ರೂಮಿಗೆ ಕರೆದುಕೊಂಡು ಹೋದ. ಏಡ್ ಡಿ 
ಕ್ಯಾಂಪ್‌ನನ್ನು ಕರೆದು ಹೊಸದಾಗಿ ಆಗಮಿಸಿದ ಪಡೆಗಳ ಸ್ಥಿತಿಗತಿಯ ವರದಿ, 
ಮುಂಚೂಣಿ ಪಡೆಗಳ ನಾಯಕನಾಗಿದ್ದ ಆರ್ಚ್‌ಡ್ಯೂಕ್ ಫೆರ್ಡಿನೆಂಡ್ ಬರೆದಿದ್ದ 


೧೮೨ 

ಯುದ್ಧ ಮತ್ತು ಶಾಂತಿ 
ಪತ್ರಗಳು ಇವನ್ನೆಲ್ಲ ತರುವಂತೆ ಹೇಳಿದ. ಪ್ರಿನ್ಸ್ ಆಂಡೂ ಆ ಪತ್ರಗಳನ್ನೆಲ್ಲ 
ತೆಗೆದುಕೊಂಡು ಬಂದ. ಕುತುಝೇವ್, ಆಸ್ಟ್ರಿಯಾದ ಜನರಲ್ ಇಬ್ಬರೂ ಮೇಜಿನ 
ಮೇಲೆ ಹರಡಿದ್ದ ನಕ್ಷೆಯನ್ನು ನೋಡುತ್ತಾ ಕೂತಿದ್ದರು . 

ಪ್ರಿನ್ಸ್ ಆಂಡ್ರನಕಡೆಗೆ ತಿರುಗಿ 'ಆಹಾ..ಸರಿ!' ಅಂದ ಕುತುಝೇವ್, 
ಅವನೂ ತಮ್ಮೊಡನೆ ಇರಬೇಕು ಅನ್ನುವ ಹಾಗೆ, ಮತ್ತೆ ಮಾತು ಮುಂದುವರೆಸಿದ. 

' ನಾನು ಹೇಳುವುದು ಇಷ್ಟೇ , ಜನರಲ್,' ಕುತುವ್ ಎಷ್ಟು ನಯವಾಗಿ, 
ಮನಸ್ಸು ಒಲಿಸುವ ಹಾಗೆ ಆಡುತ್ತಿದ್ದ ಅಂದರೆ ಕೇಳುವವರು ಅವನು ಹುಷಾರಾಗಿ 
ಆಡುತ್ತಿದ್ದ ಒಂದೊಂದು ಮಾತನ್ನೂ ಗಮನವಿಟ್ಟು ಕೇಳಬೇಕಾಗಿತ್ತು. ಮತ್ತೆ, ಸ್ವತಃ 
ಕುತುರೋವ್‌ಗೆ ತನ್ನ ಧ್ವನಿಯನ್ನು ಕೇಳುತ್ತಾ ತಾನೇ ಆನಂದಪಡುವುದು ಅಪ್ರಿಯವೂ 
ಆಗಿರಲಿಲ್ಲ. 'ನಾನು ಹೇಳುವುದು ಇಷ್ಟೇ , ಜನರಲ್, ನನ್ನ ಸ್ವಂತ ಇಷ್ಟದ ಪ್ರಕಾರ 
ನಡೆದುಕೊಳ್ಳುವ ಹಾಗಿದ್ದರೆ ಚಕ್ರವರ್ತಿ ಫ್ರಾನ್ಸಿಸ್ರ ಇಚ್ಛೆ ಯಾವತ್ತೂ 
ನೆರವೇರಿಬಿಡುತಿತ್ತು. ಆರ್ಚ್‌ಡ್ಯೂಕರೊಡನೆ ಸೇರುವುದಕ್ಕೆ ನಾನು ತಡಮಾಡುತಿರಲಿಲ್ಲ. 
ಆಣೆ ಮಾಡಿ ಹೇಳುತೇನೆ, ಸೈನ್ಯದ ಮಹಾದಂಡನಾಯಕ ಪದವಿಯನ್ನ ನನಗಿಂತ 
ಹೆಚ್ಚು ತಿಳಿವಳಿಕೆ, ಚಾತುರ್ಯ ಇರುವ ನಾಯಕರಿಗೆ ಸಂತೋಷದಿಂದ ಒಪ್ಪಿಸಿಕೊಟ್ಟು, 
ಆಸಿಯಾದಲ್ಲಿ ಅಂಥ ಸಮರ್ಥರು ಬಹಳ ಜನ ಇದಾರೆ , ಈ ಜವಾಬ್ದಾರಿಯ 
ಭಾರ ನೀಗಿಕೊಂಡರೆ ತುಂಬ ಸಮಾಧಾನವಾಗುತಿತ್ತು. ಆದರೆ , ಜನರಲ್, 
ಸಂದರ್ಭಗಳು ಅನೇಕ ಸಾರಿ ನಮ್ಮ ಶಕ್ತಿಗೆ ಮೀರಿರುತವೆ.' ಕುತುರೋಪ್‌ನ ನಕ್ಕ. 
' ನನ್ನ ಮಾತು ನಂಬದೆ ಇರಬಹುದು ನೀವು, ನಂಬಿದರೂ ಅಷ್ಟೇ , ಬಿಟ್ಟರೂ 
ಅಷ್ಟೇ . ನಂಬಲಾರೆ ಅಂತ ಬಾಯಿಬಿಟ್ಟು ಹೇಳುವುದಕ್ಕೆ ಆಗುವುದಿಲ್ಲ. ಗೊತ್ತು 
ನನಗೆ' ಅನ್ನುವ ಹಾಗಿತ್ತು ಆ ನಗು. 

ಆಸ್ಟಿಯಾದ ದಂಡನಾಯಕನಿಗೆ ಸಮಾಧಾನವಿರಲಿಲ್ಲ, ಕುತುರೋಪ್‌ನ 
ಧಾಟಿಯನ್ನು ಬಿಟ್ಟು ಬೇರೆ ಥರ ಉತ್ತರಿಸುವ ಧೈರ್ಯವೂ ಇರಲಿಲ್ಲ . 

' ಹಾಗಲ್ಲ, ಅದು...' ಆಡುತ್ತಿರುವ ಮಾತುಗಳಿಗೆ ಹೊಂದದಂಥ ರೇಗಿದ 
ಧ್ವನಿ ಅವನ ಬೆಣ್ಣೆ ಮಾತಿನ ಹಿಂದಿನ ಅರ್ಥವನ್ನು ಬಯಲುಮಾಡುತಿತ್ತು. ' ಹಾಗಲ್ಲಾ, 
ಯುವರ್ ಎಕ್ಸಲೆನ್ಸಿಯವರು ಜಂಟಿ ಕಾರ್ಯಾಚರಣೆಯಲ್ಲಿ ಸೇರಿರುವುದನ್ನ ಪ್ರಭುಗಳು 
ತುಂಬ ಮೆಚ್ಚಿಕೊಂಡಿದ್ದಾರೆ. ಎಷ್ಟೋ ಯುದ್ದಗಳಲ್ಲಿ ದಿಗ್ವಿಜಯವನ್ನು ಸಾಧಿಸಿರುವ 
ರಶಿಯದ ಶೂರ ಪಡೆ ಮತ್ತೆ ಅದರ ದಂಡನಾಯಕ ಮತ್ತೊಂದು ಗೆಲುವು 
ಪಡೆಯುವುದಕ್ಕೆ ತಡವಾಗುತಿದೆಯಲ್ಲಾ ಅನ್ನುವುದು ನಮ್ಮ ಚಿಂತೆ' ಅಂದ. ಅವನಾಡಿದ 
ಕೊನೆಯ ಮಾತು ಮೊದಲೇ ಸಿದ್ಧಮಾಡಿಕೊಂಡು ಬಂದಹಾಗಿತ್ತು. 

- ಇನ್ನೂ ಹಾಗೇ ನಗುತ್ತಾ ಕುತುಝೇವ್ ಗೌರವ ತೋರುವ ಹಾಗೆ 
ತಲೆಬಾಗಿಸಿದ. 


೧೮೩ 
ಸಂಪುಟ ೧ - ಸಂಚಿಕೆ ಎರಡು 

'ಹಿಸ್ ಹೈನೆಸ್‌ ಆರ್ಚ್‌ಡ್ಯೂಕ್ ಫರ್ಡಿನೆಂಡ್ ಅವರು ಬರೆದ ಹಿಂದಿನ 
ಪತ್ರ, ಅವರು ಪತ್ರ ಬರೆದದ್ದು ನನಗೆ ದೊಡ್ಡ ಗೌರವದ ವಿಷಯ , ಓದಿದ ಮೇಲೆ 
ತೀರ್ಮಾನ ಗಟ್ಟಿಯಾಗಿದೆ. ಜನರಲ್ ಮ್ಯಾಕ್ ಅವರಂಥವರ ಚತುರ ನಾಯಕತ್ವದಲ್ಲಿ 
ಆಸ್ಟಿಯನ್ ಪಡೆಗಳು ಈಗಾಗಲೇ ಪೂರ್ಣ ಗೆಲುವು ಪಡೆದಿವೆ. ಆದ್ದರಿಂದ ನಮ್ಮ 
ಸಹಾಯ ಅಗತ್ಯವಿಲ್ಲ ಅಂತಲೇ ಭಾವಿಸುತ್ತೇನೆ' ಅಂದ ಕುತುಝೇವ್. .. 

ಜನರಲ್ ಹುಬ್ಬು ಗಂಟಿಕ್ಕಿದ. ಆಸ್ಟಿಯಾದ ಪಡೆಗಳು ಸೋತಿವೆ ಅನ್ನುವ 
ಖಚಿತ ವರ್ತಮಾನವಿಲ್ಲದಿದ್ದರೂ ಸೋಲಾಗಿದೆ ಅನ್ನುವುದನ್ನು ಖಚಿತಪಡಿಸುವ 
ಅನೇಕ ಸಾಂದರ್ಭಿಕ ಸಾಕ್ಷಿಗಳಿದ್ದವು. ಆದ್ದರಿಂದಲೇ ಆಸ್ಟಿಯಾದ ಗೆಲುವನ್ನು ಒತ್ತಿ 
ಹೇಳಿದ ಕುತುರೋಪ್‌ನ ಮಾತು ವ್ಯಂಗ್ಯವಾಗಿ ಕೇಳಿಸುತ್ತಿತ್ತು. ಕುತುರೋಪ್‌ನ 
ಕಿರುನಗೆಯಲ್ಲಿ ಮೊದಲಿದ್ದ 'ನಾನು ಹೇಳಿದ್ದೇ ಸರಿ ' ಅನ್ನುವ ಸೂಚನೆಯೇ ಇತ್ತು. 
ಅವನಿಗೆ ಇತ್ತೀಚೆಗೆ ಬಂದಿದ್ದ ಪತ್ರದಲ್ಲಿ ಮ್ಯಾಕ್‌ನ ಸೈನ್ಯವು ವಿಜಯವನ್ನು ಸಾಧಿಸಿದೆ , 
ರಣತಂತ್ರದ ದೃಷ್ಟಿಯಿಂದ ಮಹತ್ವದ ಸ್ಥಾನವನ್ನು ಆಕ್ರಮಿಸಿಕೊಂಡಿದೆ ಅನ್ನುವ 
ಮಾಹಿತಿಯಿತ್ತು. 
- “ ಆ ಕಾಗದವನ್ನಿಲ್ಲಿ ಕೊಡು,' ಕುತುವ್ ಪ್ರಿನ್ಸ್ ಆಂಡ್ರ ನ ಕಡೆಗೆ 
ತಿರುಗಿ ಕೇಳಿದ, 'ನೋಡಿ ಇಲ್ಲಿ, ತುಟಿಗಳ ಅಂಚಿನಲ್ಲಿ ಅದೇ ವ್ಯಂಗ್ಯದ ನಗು 
ಆಡುತ್ತಿರುವ ಹಾಗೆಯೇ ಆರ್ಚ್‌ಡ್ಯೂಕ್ ಫರ್ಡಿನೆಂಡನು ಜರ್ಮನ್ ಭಾಷೆಯಲ್ಲಿ 
ಬರೆದಿದ್ದ ಪತ್ರದ ಭಾಗವನ್ನು ಆಸ್ಟಿಯಾದ ದಂಡನಾಯಕನಿಗೆ ಓದಿ ಹೇಳಿದ: 
- `ಸುಮಾರು ಎಪ್ಪತ್ತು ಸಾವಿರ ಸೈನಿಕರ ದಂಡನ್ನು ಸಿದ್ಧಪಡಿಸಿಕೊಂಡಿದೇವೆ. 
ಶತ್ರುವು ಲೆಕ್ ಊರನ್ನು ದಾಟಿ ಬಂದರೆ ಅವನನ್ನು ಎದುರಿಸಿ ಸೋಲಿಸುತೇವೆ. 
ಈಗಾಗಲೇ ಉಲ್ಟ್ ಅನ್ನು ಗೆದ್ದಿರುವುದರಿಂದ ಡ್ಯಾನುಬೇ ನದಿಯ ಎರಡೂ 
ದಂಡೆಗಳ ಮೇಲೆ ನಮಗೆ ಒಡೆತನವಿದೆ. ಶತ್ರುವು ಲೆಕ್ ದಾಟಿ ಬಾರದಿದ್ದರೆ, ನಮ್ಮ 
ಪ್ರಾಮಾಣಿಕ ಮಿತ್ರರ ಮೇಲೆ ದಾಳಿಮಾಡಲು ಉದ್ದೇಶಿಸಿದ್ದರೆ ನಾವೇ ಡ್ಯಾನುಬೆಯನ್ನು 
ದಾಟಿ ಹೋಗಿ ಶತ್ರುವಿನ ಸಂಪರ್ಕ ಸಾಧನಗಳನ್ನೆಲ್ಲ ನಾಶಮಾಡಿ, ಹಾಗೇ ಆ 
ನದಿಯ ಗುಂಟ ಮುಂದೆ ಸಾಗಿ, ಮತ್ತೆ ಡ್ಯಾನುಬೆಯನ್ನು ದಾಟಿ ಹಿಂದಿರುಗುವುದು 
ಸಾಧ್ಯವಿದೆ. ಆದ್ದರಿಂದಲೇ ರಶಿಯನ್ ಸಾರ್ವಭೌಮರ ಸೈನ್ಯವು ಸಂಪೂರ್ಣ 
ಸುಸಜ್ಜಿತವಾಗಿ ನಮ್ಮೊಡನೆ ಬಂದು ಸೇರುವುದನ್ನೇ ವಿಶ್ವಾಸಪೂರ್ಣವಾಗಿ 
ಎದುರುನೋಡುತ್ತಿದ್ದೇವೆ. ನಾವು ಶತ್ರುವಿಗೆ ತಕ್ಕ ಶಾಸ್ತಿಯನ್ನು ಮಾಡುವುದು 
ಸಾಧ್ಯವೆಂದು ನಂಬಿದೇವೆ.' 

ಆ ಪತ್ರದ ಭಾಗವನ್ನು ಓದಿ ಮುಗಿಸುತ್ತಿದ್ದ ಹಾಗೇ ಕುತುಝೇವ್ದೀರ್ಘವಾದ 
ನಿಟ್ಟುಸಿರುಬಿಟ್ಟು, ಆಸ್ಟಿಯನ್ ದಂಡನಾಯಕನ ಮುಖವನ್ನೇ ಗಮನವಿಟ್ಟು 
ನೋಡಿದ. 


೧೮೪ 

ಯುದ್ಧ ಮತ್ತು ಶಾಂತಿ 
'ನಿಮಗೆ ಗೊತ್ತಲ್ಲಾ ಯುವರ್ ಎಕ್ಸಲೆನ್ಸಿ , ಕೆಟ್ಟದ್ದು ಆಗಬಹುದು ಅಂತ 
ಸದಾ ಸಿದ್ಧವಾಗಿರುವುದೇ ಒಳ್ಳೆಯದು' ಇಂಥ ಲಘುವಾದ ಮಾತು ಸಾಕು, 
ವಿಷಯವನ್ನು ಗಂಭೀರವಾಗಿ ಚರ್ಚಿಸೋಣ ಅನ್ನುವ ದನಿಯಲ್ಲಿ ಆಸ್ಟಿಯಾದ 
ದಂಡನಾಯಕ ಹೇಳಿದ, ಅಡ್ಲುಟೆಂಟನ ಕಡೆಗೆ ಸಿಡುಕಿನಿಂದ ನೋಡಿದ. 

- ' ಎಕ್ಸ್ ಕ್ಯೂಸ್ ಮಿ , ಜನರಲ್' ಅನ್ನುತ್ತಾ ಕುತುಝೇವ್ ಅವನ ಮಾತು 
ತಡೆದ. ತಾನೂ ಪ್ರಿನ್ಸ್ ಆಂಡ್ರ ನ ಕಡೆಗೆ ತಿರುಗಿದ. 'ನೋಡು, ಕೊಲ್ಲೋವ್ಸ್ಕಿಯ 
ಹತ್ತಿರ ಇರುವ ಎಲ್ಲ ಗೂಢಚಾರ ವರದಿ ತೆಗೆದುಕೋ . ಇಗೋ , ಕೌಂಟ್ನೋಟ್ಸ್ 
ಬರೆದಿರುವ ಎರಡು ಪತ್ರ ಇವೆ. ಮತ್ತೆ ಇಗೋ , ಇದು ಹಿಸ್ ಹೈನೆಸ್‌ ಆರ್ಚ್‌ಡ್ಯೂಕ್ 
ಫರ್ಡಿನಂಡ್ ಬರೆದಿರುವ ಪತ್ರ, ಎಲ್ಲಾನೂ ಓದಿ ಆಸ್ಟಿಯಾದ ಸೈನ್ಯದ ಎಲ್ಲ 
ಚಲನವಲನಗಳ ಬಗ್ಗೆ ಇರುವ ಮಾಹಿತಿಯ ಸಾರಾಂಶವನ್ನು ಒಳ್ಳೆಯ ಫ್ರೆಂಚಿನಲ್ಲಿ 
ತಯಾರುಮಾಡಿಕೊಂಡು ಬಾ . ಫೀಸ್, ಅಷ್ಟು ಮಾಡಿ ಹಿಸ್ ಎಕ್ಸಲೆನ್ಸಿಯವರಿಗೆ 
ತಂದು ಕೊಡು' ಅಂದ. 

ಕುತುಝೇವ್ ಹೇಳಿದ್ದು ಮಾತ್ರವಲ್ಲದೆ ಹೇಳಬೇಕೆಂದು ಬಯಸಿದ್ದನ್ನೂ 
ಅರ್ಥಮಾಡಿಕೊಂಡವನ ಹಾಗೆ ಪ್ರಿನ್ಸ್ ಆಂಡೂ ತಲೆ ಹಾಕಿದ. ಪತ್ರಗಳನ್ನೆಲ್ಲ 
ತೆಗೆದುಕೊಂಡು ಇಬ್ಬರಿಗೂ ಒಟ್ಟಿಗೆ ವಂದಿಸಿ, ಮೆತ್ತನೆಯ ಜಮಖಾನೆಯ ಮೇಲೆ 
ಹೆಜ್ಜೆ ಇಡುತ್ತಾ ಕೋಣೆಯಿಂದಾಚೆಗೆ ವೇಟಿಂಗ್ ರೂಮಿಗೆ ಹೋದ. 

ಪ್ರಿನ್ಸ್ ಆಂಡೂ ರಶಿಯಾ ಬಿಟ್ಟು ಬಂದು ಬಹಳ ಕಾಲವಾಗಿರಲಿಲ್ಲ. 
ಅಷ್ಟರಲ್ಲಿ ಬಹಳ ಬದಲಾಗಿದ್ದ. ಅವನ ಮುಖಭಾವದಲ್ಲಿ ವರ್ತನೆಯಲ್ಲಿ ನಡಿಗೆಯಲ್ಲಿ 
ಮೊದಲಿನ ಸೋಮಾರಿತನ, ಉದಾಸೀನ,ತೋರಿಕೆ ಒಂದಿಷ್ಟೂ ಇರಲಿಲ್ಲ. ಸದಾ 
ತನಗೆ ಇಷ್ಟವಾದ, ಆಸಕ್ತಿಯಿರುವ ಕೆಲಸದಲ್ಲಿ ಮಗ್ನನಾಗಿ ತನ್ನ ಬಗ್ಗೆ ಬೇರೆಯವರು 
ಏನಂದುಕೊಳ್ಳುತ್ತಾರೆ ಅನ್ನುವ ಯೋಚನೆಗೆ ಪುರೊಸೊತ್ತೇ ಇಲ್ಲದವನ ಹಾಗೆ 
ಕಾಣುತ್ತಿದ್ದ . ಮುಖದಲ್ಲಿ ಹೆಚ್ಚಿನ ತೃಪ್ತಿ ಇತ್ತು, ತನ್ನ ಬಗ್ಗೆ , ಸುತ್ತಲೂ ಇರುವವವರ 
ಬಗ್ಗೆ, ನಗು ಸಲೀಸಾಗಿತ್ತು. ಕಣ್ಣಿನಲ್ಲಿ ಹೊಳಪು ಇತ್ತು . 
- ಕುತುರೈವ್ಪೋಲೆಂಡಿನಲ್ಲಿದ್ದಾಗ ಪ್ರಿನ್ಸ್ ಆಂಡೂ ಬಂದು 
ಸೇರಿಕೊಂಡಿದ್ದ. ಕುತುಝೇವ್ ಅವನನ್ನು ಒಳ್ಳೆಯ ಮನಸ್ಸಿನಿಂದ ಬರಮಾಡಿಕೊಂಡು 
ಅವನನ್ನು ಮರೆಯುವುದಿಲ್ಲವೆಂದು ಮಾತುಕೊಟ್ಟಿದ್ದ . ಮಿಕ್ಕ ಅಡುಟೆಂಟುಗಳಿಗಿಂತ 
ಹೆಚ್ಚಿನ ಗಮನ ಕೊಟ್ಟು, ವಿಯೆನ್ನಾಗೆ ಕರೆದುಕೊಂಡು ಹೋಗಿ ಅವನಿಗೆ ಮಹತ್ವದ 
ಕೆಲಸಗಳನ್ನು ವಹಿಸಿದ್ದ . ವಿಯೆನ್ನಾದಿಂದ ತನ್ನ ಹಳೆಯ ಗೆಳೆಯ , ಪ್ರಿನ್ಸ್ ಆಂಡ್ರನ 
ತಂದೆಗೆ, ಹೀಗೆ ಬರೆದಿದ್ದ - ನಿಮ್ಮ ಮಗ ತನ್ನ ಕಾರ್ಯ ಕ್ಷಮತೆ, ದೃಢತೆ ಮತ್ತು 
ಸಾಹಸ ಮನೋವೃತ್ತಿಗಳಿಂದಾಗಿ ವಿಶಿಷ್ಟ ಅಧಿಕಾರಿಯಾಗುವುದಕ್ಕೆ ಅರ್ಹನಾಗಿದ್ದಾನೆ. 
ಅಂಥವನು ನನ್ನ ಕೈಕೆಳಗಿನ ಅಧಿಕಾರಿಯಾಗಿರುವುದು ನನ್ನ ಸುಕೃತವೆಂದೇ 


ಸಂಪುಟ ೧ - ಸಂಚಿಕೆ ಎರಡು 


೧೮೫ 


CH 


ಭಾವಿಸುತ್ತೇನೆ.' 

ಕುತುರೋಪ್‌ನ ಸಿಬ್ಬಂದಿಯಲ್ಲಿದ್ದವರ , ಜೊತೆಗಾರ ಅಧಿಕಾರಿಗಳ ಮತ್ತೆ 
ಇಡೀ ಸೈನ್ಯದ ಕಣ್ಣಿಗೆ ಪ್ರಿನ್ಸ್ ಆಂಡೂ , ಪೀಟರ್ಸ್‌ಬರ್ಗಿನ ಘನವಂತರ 
ಸಮಾಜದಲ್ಲಿದ್ದ ಹಾಗೆಯೇ , ಎರಡು ತೀರ ಬೇರೆ ಬಗೆಯ ಸ್ವಭಾವದವನಾಗಿ 
ಕಾಣುತ್ತಿದ್ದ. ಕೆಲವರು, ಅಂಥವರು ಕಡಮೆ , ಅವನನ್ನು ತಮಗಿಂತ ಬೇರೆಯವರಿಗಿಂತ 
ಮೇಲಿನ ಮಟ್ಟದವನೆಂದು ಭಾವಿಸಿದ್ದರು. ದೊಡ್ಡ ನಿರೀಕ್ಷೆಯಿಟ್ಟುಕೊಂಡದಿದ್ದರು, 
ಅವನ ಮಾತು ಕೇಳುತ್ತಿದ್ದರು, ಮೆಚ್ಚುತ್ತಿದ್ದರು, ಅನುಕರಿಸುತ್ತಿದ್ದರು. ಅಂಥವರೊಡನೆ 
ಪ್ರಿನ್ಸ್ ಆಂಡೂ ಸಹಜವಾಗಿ ಸಂತೋಷವಾಗಿ ಇರುತ್ತಿದ್ದ . ಉಳಿದವರು, ಅಂಥರೇ 
ಹೆಚ್ಚು, ಅವನನ್ನು ಇಷ್ಟಪಡುತ್ತಲೇ ಇರಲಿಲ್ಲ, ಹಟಮಾರಿ, ತಂತ್ರಗಾರ , ಪ್ರೀತಿ 
ವಿಶ್ವಾಸಗಳು ತಿಳಿಯದ ತಣ್ಣನೆಯ ಮನುಷ್ಯ, ಅವನ ಜೊತೆ ಇರುವುದು ಸಾಧ್ಯವಿಲ್ಲ. 
ಅಂದುಕೊಂಡಿದ್ದರು. ಇಂಥವರು ಕೂಡ ತನ್ನ ಬಗ್ಗೆ ಗೌರವದಿಂದ, ಒಂದಿಷ್ಟು 
| ಭಯದಿಂದ ನಡೆದುಕೊಳ್ಳುವ ಹಾಗೆ ಯಾವರೀತಿ ವ್ಯವಹರಿಸಬೇಕು ಅನ್ನುವುದು 
ಪ್ರಿನ್ಸ್ ಆಂಡ್ರ ಗೆ ಗೊತ್ತಿತ್ತು. 
* ಅವನು ಕುತುರೋಪ್‌ನ ರೂಮಿನಿಂದ ಹೊರಟು, ಆಂಟೆ ರೂಮು 
ದಾಟಿ, ಕಿಟಕಿಯ ಪಕ್ಕ ಕೂತು ಓದುತ್ತಾ ಇದ್ದ ಡ್ಯೂಟಿ ಅಡುಟೆಂಟ್ ಕೊಲ್ಲೋವ್ಸ್ಕಿಯ 
ಹತ್ತಿರ ಹೋದ. 

“ಏನಂತೆ, ಪ್ರಿನ್ಸ್ ?' ಕೊಲ್ಲೋವ್ಸ್ಕಿ ಕೇಳಿದ. 

“ ಹೇಳಿದರು, ನಾವು ಯಾಕೆ ಮುನ್ನುಗ್ಗುತಾ ಇಲ್ಲ ಅನ್ನುವುದನ್ನು ವಿವರಿಸುವ 
ವರದಿ ಸಿದ್ಧಮಾಡಬೇಕಂತೆ.' 

' ಹೌದು, ನಮ್ಮ ಸೈನ್ಯ ಯಾಕೆ ಮುನ್ನುಗ್ಗುತಾ ಇಲ್ಲ?' 
ಪ್ರಿನ್ಸ್ ಆಂಡೂ ಭುಜ ಕೊಡವಿದ. 
" ಮ್ಯಾಕ್‌ನಿಂದ ಏನಾದರೂ ಸುದ್ದಿ ?' 


“ ಅವನು ನಿಜವಾಗಲೂ ಸೋತಿದ್ದರೆ ಸುದ್ದಿ ಬಂದಿರುತಾ ಇತ್ತು.' 

' ಹೌದೇನೋ ' ಅನ್ನುತ್ತಾ ಪ್ರಿನ್ಸ್ ಆಂಡೂ ಬಾಗಿಲಿತ್ತ ಹೆಜ್ಜೆ ಹಾಕಿದ. ಆ 
ಹೊತ್ತಿಗೆ ಎತ್ತರವಾದ ಆಳೊಬ್ಬ ಆಂಟೆ ರೂಮಿಗೆ ನುಗ್ಗಿ ದಢಾರನೆ ಬಾಗಿಲಿಕ್ಕಿಕೊಂಡ. 
ಉದ್ದ ಕೋಟುತೊಟ್ಟಿದ್ದ ಈ ಹೊಸಬ ಆಸ್ಟಿಯಾದ ಒಬ್ಬ ಜನರಲ್. ತಲೆಗೆ ಕಪ್ಪು 
ಬಟ್ಟೆ ಸುತ್ತಿಕೊಂಡಿದ್ದ, ಕುತ್ತಿಗೆಯಲ್ಲಿ ಆರ್ಡರ್ ಆಫ್ ಮಾರಿಯಾ ಥೆರೆಸಾ ಪದಕವಿತ್ತು. 
ಪ್ರಿನ್ಸ್ ಆಂಡೂ ತಟ್ಟನೆ ನಿಂತ. 

'ಕಮಾಂಡರ್ ಇನ್ ಚೀಫ್ ಕುತುಝೇವ್?” ಹೊಸದಾಗಿ ಬಂದವನ 
ಮಾತಿನಲ್ಲಿ ಜರ್ಮನ್ ಉಚ್ಚಾರಣೆಯ ಕರ್ಕಶತೆ ಇತ್ತು. ಅತ್ತ ಇತ್ತ ಕಣ್ಣು ಹಾಯಿಸಿ 


೧೮೬ 

ಯುದ್ಧ ಮತ್ತು ಶಾಂತಿ 
ನೇರವಾಗಿ ಒಳಕೋಣೆಯ ಬಾಗಿಲಿನ ಕಡೆ ನಡೆದ. 

'ಕಮಾಂಡರ್ ಇನ್ ಛೀಫ್ ಮೀಟಿಂಗಿನಲ್ಲಿದ್ದಾರೆ' ತಟ್ಟನೆ ಎದ್ದ ಕೊಲ್ಲೋವ್ಸ್ಕಿ 
ದಡದಡನೆ ಬಾಗಿಲ ಹತ್ತಿರ ಹೋಗಿ, ಪರಿಚಯವಿಲ್ಲದ ಜನರಲ್‌ಗೆ ಅಡ್ಡ ನಿಂತು 
' ಯಾರು ಬಂದಿದ್ದಾರೆ ಅಂತ ಹೇಳಲಿ ?' ಅಂದ. 

ಗಿಡ್ಡ ಆಳು ಕೊಲ್ಲೋವ್ಸ್ಕಿಯ ಕಡೆಗೆ ಕಣ್ಣು ಇಳಿಸಿ ನನ್ನನ್ನು ತಿಳಿಯದವರೂ 
ಇದ್ದಾರೆಯೇ ಅಂತ ಆಶ್ಚರ್ಯ ಪಡುವವನ ಹಾಗೆ ಹೊಸಬ ದಿಟ್ಟಿಸಿದ. 

'ಕಮಾಂಡರ್ ಇನ್ ಛೀಫ್ ಮೀಟಿಂಗಿನಲ್ಲಿದ್ದಾರೆ ' ಕೊಲ್ಲೋವ್ಸ್ಕಿತಣ್ಣಗೆ 
ಹೇಳಿದ. 

ಜನರಲ್‌ನ ಮುಖ ಕೆಟ್ಟಿತು, ತುಟಿ ಅದುರಿದವು. ನೋಟುಬುಕ್ಕು ತೆಗೆದು, 
ಸರಸರನೆ ಪೆನ್ಸಿಲ್ಲಿನಲ್ಲಿ ಏನೋ ಗೀಚಿ, ಹಾಳೆಯನ್ನು ಹರಿದು, ಕೊಲ್ಲೋವ್ಸ್ಕಿಯ 
ಕೈಗೆ ಕೊಟ್ಟ, ಆಮೇಲೆ ಸಟಸಟನೆ ಕಿಟಕಿಯ ಹತ್ತಿರ ಹೋಗಿ ಅಲ್ಲಿದ್ದ ಕುರ್ಚಿಯ 
ಮೇಲೆ ದೊಪ್ಪನೆ ಕೂತ. ಎಲ್ಲರೂ ಯಾಕೆ ಹೀಗೆ ನನ್ನ ನೋಡುತಿದಾರೆ ಅಂತ 
ಆಶ್ಚರ್ಯಪಡುವವನ ಹಾಗೆ ಹಾಗೆ ಕೋಣೆಯಲ್ಲಿದ್ದ ಎಲ್ಲರನ್ನೂ ನೋಡಿದ. 
ಏನೋ ಹೇಳವವನ ಹಾಗೆ ತಲೆ ಎತ್ತಿ,ಗೋಣು ಮುಂದೆ ಚಾಚಿದವನು ತಕ್ಷಣವೇ 
ಕೃತಕವಾದ ಉದಾಸೀನ ತೋರುತ್ತಾ ಹಾಡು ಗುನುಗಿದ. ವಿಚಿತ್ರವಾದ ಸದ್ದಿನ 
ಗುನುಗು ಹಾಡು ತಟ್ಟನೆ ನಿಂತಿತು. ಖಾಸಗಿ ಕೋಣೆಯ ಬಾಗಿಲು ತೆರೆದು 
ಕುತುರೋವ್ಕಾಣಿಸಿಕೊಂಡ. ತಲೆಗೆ ಬ್ಯಾಂಡೇಜು ಕಟ್ಟಿಕೊಂಡಿದ್ದ ಜನರಲ್‌ನ 
ನಿಶ್ಯಕ್ತ ಕಾಲುಗಳು ಯಾವುದೋ ಅಪಾಯದಿಂದ ತಪ್ಪಿಸಿಕೊಂಡು ಓಡಿ ಹೋಗುವ 
ಹಾಗೆ ಕುತುಜೋವನ ಕಡೆಗೆ ದೊಡ್ಡ ಹೆಜ್ಜೆಗಳನ್ನು ಹಾಕಿದವು. 

' ನಾನೆ, ನಿಮ್ಮ ಕಣ್ಣೆದುರಿಗೆ ಇರೋನು, ಅದೃಷ್ಟ ಹೀನ ಮ್ಯಾಕ್, ಫ್ರೆಂಚಿನಲ್ಲಿ 
ಹೇಳಿದ ಹೊಸಬ . ದನಿ ಕುಸಿಯುತಿತ್ತು. 

ಬಾಗಿಲಲ್ಲಿ ನಿಂತಿರುವಾಗ ಕುತುರೋಪ್‌ನ ಮುಖ ಒಂದೆರಡು ಕ್ಷಣ 
ನಿಶ್ಚಲವಾಗಿತ್ತು. ಹಣೆಯ ಮೇಲೆ ನಿರಿಗೆಯೊಂದು ಮೂಡಿ ಚಿಂತೆಯ ಅಲೆಯ 
ಹಾಗೆ ಮುಖವೆಲ್ಲ ಹರಡಿ ಮತ್ತೆ ಅವನ ಮುಖ ಮಾಮೂಲಾಯಿತು. ಗೌರವದಿಂದ 
ತಲೆ ಬಾಗಿಸಿ, ಕಣ್ಣು ಮುಚ್ಚಿ, ಒಂದೂ ಮಾತಾಡದೆ ಜನರಲ್ ಮ್ಯಾಕ್‌ನನ್ನು ಒಳಗೆ 
ಕರೆದುಕೊಂಡು ಕದವಿಕ್ಕಿಕೊಂಡ. . 

ಅಂದರೆ ಸುಳಿದಾಡುತ್ತಿದ್ದ ಗಾಳಿ ಸುದ್ದಿ - ಆಸ್ಟಿಯಾದ ಸೈನ್ಯ ಸೋತಿದೆ, 
ಉಲ್ಡ್ನಲ್ಲಿ ಇಡೀ ಸೈನ್ಯವು ಸೋತು ಶರಣಾಗಿದೆ ಅನ್ನುವ ಸುದ್ದಿ - ನಿಜವಾಗಿತ್ತು. 
ಅರ್ಧ ಗಂಟೆಯೊಳಗೆ ಅಡುಟೆಂಟುಗಳು ಆಜ್ಞೆಯ ಪ್ರತಿಗಳನ್ನು ಹಿಡಿದು ಇದುವರೆಗೆ 
ನಿಷ್ಕ್ರಿಯವಾಗಿದ್ದ ರಶಿಯನ್ ಸೇನೆ ಸದ್ಯದಲ್ಲೇ ಶತ್ರುವನ್ನು ಎದುರಿಸಬೇಕಾಗುತ್ತದೆ 
ಅನ್ನುವ ಸುದ್ದಿ ಹೊತ್ತು ಎಲ್ಲ ದಿಕ್ಕುಗಳಿಗೆ ಧಾವಿಸಿದರು. 


ಸಂಪುಟ ೧ - ಸಂಚಿಕೆ ಎರಡು 

೧೮೭ 
- ಒಟ್ಟಾರೆ ಯುದ್ಧ ಸ್ಥಿತಿಗತಿಯ ಬಗ್ಗೆ ನಿಜವಾದ ಆಸಕ್ತಿ ಇದ್ದ ಕೆಲವೇ ಸ್ಟಾಫ್ 
ಆಫೀಸರುಗಳಲ್ಲಿ ಪ್ರಿನ್ಸ್ ಆಂಡೂ ಒಬ್ಬನಾಗಿದ್ದ . ಮ್ಯಾಕ್‌ನನ್ನು ನೋಡಿದ ಮೇಲೆ, 
ಅವನ ಸೋಲಿನ ವಿವರಗಳನ್ನು ತಿಳಿದಮೇಲೆ, ನಾವು ಕಾರ್ಯಾಚರಣೆಯಲ್ಲಿ 
ಅರ್ಧ ಸೋತಹಾಗೆಯೇ ಅನ್ನುವುದು ಥಟ್ಟನೆ ಹೊಳೆಯಿತು. ರಶಿಯನ್ ಪಡೆಗಳ 
ಎದುರಿಗೆ ಎಂಥ ಅಗಾಧವಾದ ಕಷ್ಟವಿದೆ ಅನ್ನುವುದರ ಕಲ್ಪನೆ ಮೂಡಿತು. ಮುಂದೆ 
ಏನಾದೀತು, ಏನಾದರೆ ತಾನು ಯಾವ ಪಾತ್ರ ವಹಿಸಬೇಕು ಅನ್ನುವುದೆಲ್ಲ ಪ್ರಿನ್ಸ್ 
ಆಂಡ್ಯನ ಮನಸ್ಸಿಗೆ ಸ್ಪಷ್ಟವಾಗಿ ಕಂಡಿತು. ಉದ್ಧಟ ಆಸ್ಟಿಯಾಕ್ಕೆ ಆದ ಅಪಮಾನದಿಂದ 
ಹುಟ್ಟಿದ ಸಂತೋಷದ ರೋಮಾಂಚನವನ್ನು ತಡೆದುಕೊಳ್ಳಲಾಗಲಿಲ್ಲ. ಬಲು ಹಿಂದೆ 
ಸುವೋವ್ ನಡೆಸಿದ ಯುದ್ಧದ ನಂತರ ರಶಿಯನ್ ಸೇನೆ ಮೊದಲಬಾರಿಗೆ, 
ಹೆಚ್ಚೆಂದರೆ ಇನ್ನೊಂದು ವಾರದಲ್ಲಿ , ಫ್ರೆಂಚ್ ಸೈನ್ಯವನ್ನು ಎದುರಿಸುವುದನ್ನು 
ಕಾಣಬೇಕಾದೀತು, ತಾನೂ ಅದರಲ್ಲಿ ಭಾಗವಹಿಸಬೇಕಾದೀತು ಅನ್ನಿಸಿತು. 
ಬೊನಪಾರ್ಟೆಯ ಪ್ರತಿಭೆಯ ಬಗ್ಗೆ ಅಂಜಿಕೆಯಿತ್ತು. ರಶಿಯಾದ ಒಟ್ಟೂ ಸೈನ್ಯದ 
ಧೈರ್ಯವನ್ನೂ ಮೀರಿಸಿ ಬೊನಪಾರ್ಟೆ ಗೆದ್ದುಬಿಡಬಹುದು ಅನ್ನಿಸಿತು. ತನ್ನ 
ಆದರ್ಶ ನಾಯಕ ಸೋತು ಅಪಮಾನಕ್ಕೆ ಈಡಾಗುವುದನ್ನು ಕಲ್ಪಿಸಿಕೊಳ್ಳಲು 
ಅವನ ಮನಸ್ಸು ಒಪ್ಪಲಿಲ್ಲ. 
* ಇಂಥ ಯೋಚನೆಗಳಿಂದ ಭೀತನೂ ಉತ್ಸುಕನೂ ಆಗಿ ಪ್ರಿನ್ಸ್ ಆಂಡೂ 
ತಂದೆಗೆ ಪತ್ರ ಬರೆಯುವುದಕ್ಕೆಂದು, ( ದಿನವೂ ತಂದೆಗೆ ಬರೆಯುತ್ತಿದ್ದ ತನ್ನ 
ಕೋಣೆಯತ್ತ ಹೊರಟ. ಹಜಾರದಲ್ಲಿ ಅವನ ರೂಮ್‌ಮೇಟ್ ನೆಸ್ವಿಟ್ಸ್ಕಿ ಮತ್ತೆ 
ವಿದೂಷಕ ಜೆರ್ಕೊವ್ ಕಂಡರು. ಕುಲು ಕುಲು ನಗುವುದಕ್ಕೆ ಅವರಿಗೆ ಈಗಲೂ 
ಏನೋ ವಿಷಯ ಸಿಕ್ಕಿತ್ತು. 

' ಯಾಕೆ ಹೀಗಿದೀಯ ?' ಪ್ರಿನ್ಸ್ ಆಂಡ್ರ ನ ಬಿಳಿಚಿಕೊಂಡ ಮುಖ , 
ಹೊಳೆಯುವ ಕಣ್ಣು ಕಂಡು ನೆಸ್ವಿಟ್‌ ಕೇಳಿದ. 

“ ಸಂತೋಷಪಡುವಂಥದ್ದು ಏನೂ ಇಲ್ಲ' ಪ್ರಿನ್ಸ್ ಆಂಡೂ ಹೇಳಿದ. 

ಪ್ರಿನ್ಸ್ ಆಂಡೂ , ನೆಸ್ವಿಟ್ಸ್ಕಿ ಮತ್ತು ಝರ್ಕೊವ್‌ರನ್ನು ಭೆಟ್ಟಿಯಾದ 
ಕ್ಷಣದಲ್ಲೇ ಹಜಾರದ ಇನ್ನೊಂದು ತುದಿಯಲ್ಲಿ ಇಬ್ಬರು ಆಸ್ಟಿಯನ್‌ ಜನರಲ್‌ಗಳು 
ಕಾಣಿಸಿಕೊಂಡರು. ಅವರು ಹಿಂದಿನ ರಾತ್ರಿಯೇ ಬಂದಿದ್ದರು . ರಶಿಯನ್ ಸೈನ್ಯಕ್ಕೆ 
ಅಗತ್ಯವಾದ ಸರಬರಾಜುಗಳ ಉಸ್ತುವಾರಿ ಹೊತ್ತಿದ್ದ ಸ್ಟಾಚ್ ಒಬ್ಬ , ಯುದ್ದ 
ಸಮಿತಿಯ ಪ್ರತಿನಿಧಿ ಇನ್ನೊಬ್ಬ ವಿಶಾಲವಾದ ಹಜಾರದಲ್ಲಿ ಆ ಜನರಲ್‌ಗಳು 
ಆಫೀಸರುಗಳನ್ನು ಸುಲಭವಾಗಿ ದಾಟಿ ಹೋಗುವಷ್ಟು ಸ್ಥಳವಿತ್ತು. ಆದರೂ 
ಜೆರ್ಕೊವ್ನೆವಿಟ್ಟಿಯನ್ನು ಪಕ್ಕಕ್ಕೆ ದಬ್ಬುತ್ತಾ ಉಸಿರುಗಟ್ಟಿದವನ ಹಾಗೆ ಅವರು 
ಬರುತಾ ಇದಾರೆ! ಅವರು ಬರುತಾ ಇದಾರೆ! ಪಕ್ಕಕ್ಕೆ ಸರಿ! ದಾರಿ ಬಿಡು!' ಅಂದ. 


neses 


ಯುದ್ಧ ಮತ್ತು ಶಾಂತಿ 
ತಮ್ಮನ್ನು ಯಾರೂ ಗಮನಿಸುವುದೇ ಬೇಡ ಅನ್ನುವ ಹಾಗೆ ಹೋಗುತ್ತಿದ್ದ 
ಜನರಲ್‌ಗಳಿಗೆ ಈ ಮರ್ಯಾದೆಯ ತೋರಿಕೆಯಿಂದ ಕಸಿವಿಸಿಯಾಯಿತು. ಅವರನ್ನು 
ದಾಟಿ ಹೋಗುತ್ತಿರುವಾಗ ಜೆರ್ಕೊವ್ನ ತಡೆಯಲಾಗದ ಖುಷಿಯಿಂದ 
ಅನ್ನುವಹಾಗೆ ಬಾಯಿ ಚಪ್ಪರಿಸಿಕೊಂಡ . 
ಆ ಒಂದು ಹೆಜ್ಜೆ ಮುಂದೆ ಬಂದು ಜರ್ಮನ್ ಭಾಷೆಯಲ್ಲಿ ' ಯುವರ್ ಎಕ್ಸಲೆನ್ಸಿ , 
ದಯವಿಟ್ಟು ನಿಮ್ಮನ್ನು ಅಭಿನಂದಿಸುವ ಗೌರವ ನನ್ನದಾಗಲಿ' ಅಂತ ಆಸ್ಟಿಯಾದ 
ಜನರಲ್‌ಗೆ ಹೇಳಿದ. ಹೊಸದಾಗಿ ಡಾನ್ಸ್ ಕ್ಲಾಸಿಗೆ ಬಂದಿರುವ ಮಗು ಹೆಜ್ಜೆ ತಪ್ಪಿ 
ತಡವರಿಸುತ್ತಾ ತಟ್ಟಾಡುತ್ತಾ ಬಗ್ಗಿ ವಂದಿಸುವ ಹಾಗೆ ಆಡಿದ , ರಕ್ಷಣಾ ಸಮಿತಿಯ 
ಸದಸ್ಯ ಮೊದಲು ಅವನನ್ನು ನಿಷ್ಠುರವಾಗಿ ನೋಡಿದರೂ ಈ ಹಲ್ಲು ಕಿರಿಯುವುದರ 
ಹಿಂದೆ ಗಂಭೀರವಾದದ್ದು ಏನೋ ಇದೆ ಅನ್ನಿಸಿ ಗಮನಕೊಡದೆ ಇರಲಾಗಲಿಲ್ಲ. 
ಕೇಳಿಸಿಕೊಳ್ಳುತ್ತಿದ್ದೇನೆ ಅನ್ನುವುದನ್ನು ತೋರುವ ಹಾಗೆ ಕಣ್ಣನ್ನು ಕಿರಿದುಮಾಡಿಕೊಂಡು 
ಹುಬ್ಬು ಗಂಟಿಕ್ಕಿಕೊಂಡ. 

'ನಿಮ್ಮನ್ನು ಅಭಿನಂದಿಸುವ ಗೌರವ ನನ್ನದು. ಜನರಲ್ ಮ್ಯಾಕ್ ಬಂದಿದಾರೆ. 
ಆರೋಗ್ಯವಾಗಿದ್ದಾರೆ. ಇಲ್ಲಿ ಸ್ವಲ್ಪ ತೊಂದರೆ ಅಷ್ಟೇ ' ತನ್ನ ತಲೆಯನ್ನು ಮುಟ್ಟಿಕೊಳ್ಳುತ್ತಾ 
ಇನ್ನೂ ದೊಡ್ಡದಾಗಿ ಹಲ್ಲು ಕಿರಿದ. 

ಜನರಲ್‌ ಇನ್ನಷ್ಟು ಬಿಗಿಯಾಗಿ ಹುಬ್ಬು ಗಂಟಿಕ್ಕಿಕೊಂಡು ಮುಖ ತಿರುಗಿಸಿ 
ಹೊರಟ. 

ನಾಲ್ಕು ಹೆಜ್ಜೆ ಹೋದಮೇಲೆ ' ಪೆದ್ದ ' ಅನ್ನುತ್ತಾ ಸಿಡಿಮಿಡಿಯಾದ. 

ನೆಸ್ವಿಟ್ಸ್ಕಿ ಗಹಗಹಿಸಿ ನಗುತ್ತಾ ಪ್ರಿನ್ಸ್ ಆಂಡ್ರ ನ ಭುಜದ ಮೇಲೆ ಕೈ 
ಹಾಕಿದ. ಪ್ರಿನ್ಸ್ ಆಂಡ್ರ ಮತ್ತಷ್ಟು ಬಿಳುಪೇರಿ ದುರುಗುಟ್ಟಿಕೊಂಡು ನೋಡುತ್ತಾ 
ಅವನ ಕೈ ದೂಡಿದ. ಸಿಟ್ಟಿನಿಂದ ಜೆರ್ಕೊವ್‌ನನ್ನು ದಿಟ್ಟಿಸಿದ, ಜನರಲ್ ಮ್ಯಾಕ್ 
ಬಂದಾಗಿನಿಂದ ಹುಟ್ಟಿಕೊಂಡಿದ್ದ ಆತಂಕ, ಸೋಲಿನ ವಾರ್ತೆ , ರಶಿಯನ್ ಸೈನ್ಯ 
ಎದುರಿಸಬೇಕಾದ ಸಂಕಷ್ಟದ ಬಗ್ಗೆ ತಲೆ ಎತ್ತಿದ್ದ ಚಿಂತೆ ಇವೆಲ್ಲವೂ ಜೆರ್ಕೊವ್ 
ಹೊತ್ತಲ್ಲದ ಹೊತ್ತಿನಲ್ಲಿ ಮಾಡಿದ ತಮಾಷೆಗೆ ಪ್ರತಿಯಾಗಿ ತೀವ್ರವಾದ ಕೋಪವಾಗಿ 
ವ್ಯಕ್ತವಾದವು. 

“ನೀನುಕೋಡಂಗಿ ಥರ ಆಡುವುದಿದ್ದರೆ ಆಡು, ನಿನ್ನ ಹಣೆ ಬರಹ , ನನ್ನ 
ಎದುರಿಗೆ ಹೀಗೆ ಪೆಕರನ ಹಾಗೆ ಆಡಿದರೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ, 
ಹುಷಾರ್' ಅಂದ. ಪ್ರಿನ್ಸ್ ಆಂಡ್ರನ ಧ್ವನಿ ನಡುಗುತಿತ್ತು, ಕೆಳತುಟಿ ಸ್ವಲ್ಪ ಅದುರುತಿತ್ತು. 
ಈ ಕೋಪದ ಆಸ್ಫೋಟದಿಂದ ಮೆಟ್ಟಿಬಿದ್ದ ನೆಸ್ವಿಟ್ಟಿ , ಜೆರ್ಕೊವ್ ಇಬ್ಬರೂ 
ಕಣ್ಣರಳಿಸಿಕೊಂಡು ಪ್ರಿನ್ಸ್ ಆಂಡ್ರ ನನ್ನೇ ಸುಮ್ಮನೆ ದಿಟ್ಟಿಸಿದರು. 

' ನಾನು ಅವರಿಗೆ ಅಭಿನಂದನೆ ಹೇಳಿದೆ, ಅಷ್ಟೇ ' ಅಂದ ಜೆರ್ಕೊವ್. 


೧೮೯ 
ಸಂಪುಟ ೧ - ಸಂಚಿಕೆ ಎರಡು 

'ತಮಾಷೆ ಮಾಡುತಾ ಇಲ್ಲ, ಬಾಯಿ ಮುಚ್ಚು!' ಎಂದು ಚೀರಿ, ನೆಸ್ವಿಟ್ಟಿಯ 
ತೋಳು ಹಿಡಿದು, ಮಾತಿಲ್ಲದೆ ತಬ್ಬಿಬ್ಬಾಗಿ ನಿಂತಿದ್ದ ಜೆರ್ಕೊವ್‌ನನ್ನು ಅಲ್ಲೇ ಬಿಟ್ಟು 
ನಡೆದ ಪ್ರಿನ್ಸ್ ಆಂಡ್ರ . 

' ಯಾಕೆ, ಏನಾಯಿತು, ಏನು ಸಮಾಚಾರ, ಫ್ರೆಂಡ್ ?' ಸಮಾಧಾನ 
ಮಾಡುವವನ ಹಾಗೆ ನೆಸ್ವಿಟ್ಸ್ತಿ ಕೇಳಿದ. 

“ ಏನಾಯಿತಾ!' ಅಂದು ಸ್ವಲ್ಪ ತಡೆದ. ಅವನ ಉದ್ರೇಕ ಇನ್ನೂ ತಗ್ಗಿರಲಿಲ್ಲ. 
'ಕೇಳು! ಒಂದೋ ನಾವು ಚಕ್ರವರ್ತಿಯ ಸೇವೆಗೆ, ದೇಶದ ಸೇವೆಗೆ ಬಂದಿರುವವರು , 
ಮಿತ್ರ ಪಕ್ಷ ಗೆದ್ದಾಗ ಸಂತೋಷಪಡುವ, ಸೋತಾಗ ದುಃಖಪಡುವ ಜನ, ಅಥವಾ 
ಯಜಮಾನನಿಗೆ ಏನಾದರೆ ನಮಗೇನಂತೆ ಅಂದುಕೊಳ್ಳುವ ಬಾಡಿಗೆ ಆಳುಗಳು. 
ನಲವತ್ತು ಸಾವಿರ ಜನ ಸೈನಿಕರು ಸತ್ತಿದಾರೆ, ನಮ್ಮ ಮಿತ್ರ ಸೈನ್ಯ ನಾಶವಾಗಿದೆ, 
ಇದನ್ನ ತಮಾಷೆ ಅಂದುಕೊಂಡಿದೀರಿ' ಮಾತಿಗೆ ತಕ್ಕ ತೂಕವಿರಲೆಂದು ಫ್ರೆಂಚ್ 
ನುಡಿಗಳನ್ನು ಹುಷಾರಾಗಿ ಆಯ್ದು ಹೇಳುತಿದ್ದ. 'ನಿನ್ನ ಸ್ನೇಹಿತ ಅನ್ನುವ ಹಾಗೆ 
ಆಡಿದರೆ ಸರಿಯಾಗಬಹುದು, ನೀನು, ನಿನಗೆ ಅದು ತಕ್ಕದಲ್ಲ-ಸ್ಕೂಲು ಹುಡುಗರ 
ಹಾಗೆ ತಮಾಷೆ ಮಾಡುವುದು. ಕೊನೆಯ ಮಾತನ್ನು ಫ್ರೆಂಚ್ ಉಚ್ಚಾರಣೆಯ 
ರಶಿಯನ್‌ನಲ್ಲಿ ಹೇಳಿದ ಮಾತು ಕೇಳಿಸುವಷ್ಟು ಹತ್ತಿರದಲ್ಲೇ ಜೆರ್ಕೊವ್ ಇದ್ದಾನೆ 
ಅನ್ನುವುದನ್ನು ಗಮನಿಸಿದ. ಕಾರ್ನೆಟ್ ಜೆರ್ಕೊವ್ ಏನಾದರೂ ಹೇಳುತ್ತಾನೋ 
ಎಂದು ಕಾದು ನೋಡಿದ. ಮಾತಿರಲಿಲ್ಲ. ಅವರಿಗೆ ಬೆನ್ನು ತಿರುಗಿಸಿ ಹಜಾರದಿಂದಾಚೆಗೆ 
ಹೋಗಿಬಿಟ್ಟ. 


ಪಾವೋಗ್ರಾದ್ ಹುಸ್ಸಾರ್‌ಗಳು ಬ್ರಾನ್‌ದಿಂದ ಎರಡು ಮೈಲು ದೂರದಲ್ಲಿ 
ಬೀಡುಬಿಟ್ಟಿದ್ದರು. ನಿಕೋಲಸ್ ರೋಸ್ಟೋವ್ ಕೆಡೆಟ್ ಆಗಿ ಸೇವೆ ಸಲ್ಲಿಸುತ್ತಿದ್ದ 
ಸ್ಯಾಡ್ರನ್‌ನ ದೇಖರೇಖೆ ಸಾಲೈನೆಕ್ ಅನ್ನುವ ಜರ್ಮನ್ ಹಳ್ಳಿಯ ಪಾಲಿಗೆ 
ಬಂದಿತ್ತು. ಸ್ಯಾಡ್ರನ್ ಕಮಾಂಡರ್ ಆಗಿದ್ದ ಅಶ್ವದಳದ ಕ್ಯಾಪ್ಟನ್ ಡೆನಿಸೋವ್‌ಗೆ 
( ಅಶ್ವದಳದ ಡಿವಿಜನ್ನಿನವರೆಲ್ಲ ಅವನನ್ನು ವಾಸ್ಕಾ ಅಂತ ಕರೆಯುತ್ತಿದ್ದರು) ಊರಿನ 
ಅತ್ಯುತ್ತಮವಾದ ಮನೆಯನ್ನು ಬಿಟ್ಟುಕೊಟ್ಟಿದ್ದರು. ಕ್ಯಾಡೆಟ್ ರೋಸ್ಟೋವ್ಪೋಲೆಂಡಿಗೆ 
ಬಂದು ಅಶ್ವದಳದೊಡನೆ ಸೇರಿಕೊಂಡಾಗಿನಿಂದ ಡೆನಿಸೋವನ ಜೊತೆಗೇ 
ವಾಸವಾಗಿದ್ದ. 

ಅಕ್ಟೋಬರ್ ೮ನೆಯ ತಾರೀಕು, ಮ್ಯಾಕ್‌ನ ಸೇನೆಯ ಸೋಲಿನ ವಾರ್ತೆಯನ್ನು 
ಕೇಳಿ ಹೆಡ್ಕ್ವಾರ್ಟಸ್ ಕಲಮಲಕ್ಕೆ ಈಡಾಗಿದ್ದಾಗ ಸ್ನಾ ಇನ್ನಿನ ದಿನಚರಿ 
ಮಾಮೂಲಾಗಿಯೇ ನಡೆದಿತ್ತು, 

ರಾತ್ರಿಯೆಲ್ಲ ಇಸ್ಪೀಟು ಆಡಿ ಆಡಿ ಸೋತಿದ್ದ ಡೆನಿಸೋವ್, ಸಣ್ಣದಾಗಿ 


೧೯೦ 

- ಯುದ್ಧ ಮತ್ತು ಶಾಂತಿ 
ಬೇಟೆಯಾಡಿಕೊಂಡು ಕುದುರೆಗೆ ಹುಲ್ಲು ಸಂಪಾದಿಸಿಕೊಂಡು ಬರಲು ತೀರ 
ಬೆಳಗಿನ ಹೊತ್ತಿಗೇ ಎದ್ದು ಹೋಗಿದ್ದ ರೋಸ್ಟೋವ್ ವಾಪಸ್ಸು ಬಂದಾಗಲೂ 
ಇನ್ನೂ ಮನೆಗೆ ಬಂದಿರಲಿಲ್ಲ . ಕೆಡೆಟ್ ಸಮವಸ್ತ್ರ ಧರಿಸಿದ್ದ ರೋಸ್ಟೋವ್ ಮನೆಯ 
ಮುಂದಿನ ಮೆಟ್ಟಿಲವರೆಗೂ ಕುದುರೆಯನ್ನು ಏರಿಕೊಂಡೇ ಬಂದ, ಚುರುಕು 
ಯುವಕನಿಗೆ ತಕ್ಕ ರೀತಿಯಲ್ಲಿ ಒಂದು ಕಾಲನ್ನು ಎತ್ತಿ ಹಿಂದಕ್ಕೆಸೆದು ಕುದುರೆಯಿಂದ 
ಇಳಿಯುವುದು ಇಷ್ಟವಿಲ್ಲವೇನೋ ಅನ್ನುವ ಹಾಗೆ ರಿಕಾಪಿನಿಂದ ಇನ್ನೊಂದು 
ಕಾಲು ತೆಗೆಯದೆ ಸ್ವಲ್ಪ ತಡೆದು, ಧುಮುಕಿ, ತನ್ನ ಆರ್ಡಲಿ್ರಯನ್ನು ಕರೆದ. 

ಕುದುರೆಯತ್ತ ಧಾವಿಸಿಬರುತ್ತಿದ್ದ ಹುಸ್ಸಾರ್‌ನನ್ನು ನೋಡಿ 'ಓಹೋ , 
ಬೋನ್ಸಾರೆಷ್ಟೋ ! ಕುದುರೇನ ವಾಕ್ ಮಾಡಿಸು!' ಅಂದ. ಸಂತೋಷಚಿತ್ತರಾಗಿರುವ 
ಯುವಕರು ಒಳ್ಳೆಯ ಮೂಡಿನಲ್ಲಿರುವಾಗ ಎಲ್ಲರ ಬಗೆಗೂ ತೋರಿಸುವಂಥ 
ಖುಷಿಯ ಗೆಳೆತನದ ಭಾವವಿತ್ತು ಅವನ ಮಾತಿನಲ್ಲಿ . 
. ಉಕ್ರೇನಿನ ಹುಡುಗ ಖುಷಿಯಾಗಿ ತಲೆಯನ್ನು ಹಿಂದೆ ಚಿಮ್ಮುತ್ತಾ 'ಸರಿ , 
ಯುವರ್ ಎಕ್ಸಲೆನ್ಸಿ ' ಅಂದ. 

'ಕುದುರೆಯನ್ನ ಚೆನ್ನಾಗಿ ಓಡಾಡಿಸಬೇಕು, ಜ್ಞಾಪಕ ಇರಲೀ !' 

ಅಷ್ಟು ಹೊತ್ತಿಗೆ ಇನ್ನೊಬ್ಬ ಹುಸ್ಸಾರ್ ಕೂಡ ಕುದುರೆಯತ್ತ ಓಡಿಬರುತ್ತಿದ್ದ . 
ಆದರೆ ಬೋನ್ಸಾರನ್ನೋ ಅದಾಗಲೇ ಕುದುರೆಗೆ ಕಡಿವಾಣವನ್ನು ತೊಡಿಸಿ ಗಟ್ಟಿಯಾಗಿ 
ಹಿಡಿದುಬಿಟ್ಟಿದ್ದ. 

ಕೆಡೆಟ್ ರೋಸ್ಟೋವ್ಉದಾರವಾಗಿ ಭಕ್ಷೀಸುಕೊಡುತ್ತಿದ್ದ. ಅವನು ಹೇಳಿದ 
ಕೆಲಸ ಮಾಡಿದರೆ ಲಾಭ ಹೆಚ್ಚು ಅನ್ನುವುದು ಕೆಲಸದವರಿಗೆ ಗೊತ್ತಾಗಿತ್ತು. 

ರೋಸ್ಟೋವ್ ಕುದುರೆಯ ಬೆನ್ನು ಚಪ್ಪರಿಸಿ, ಕತ್ತು ನೇವರಿಸಿ, ಮೆಟ್ಟಿಲ 
ಮೇಲೆ ಒಂದು ಕ್ಷಣ ತಡೆದು ನಿಂತ. 

“ ಚೆನ್ನಾಗಿ ಬೆಳೆದರೆ ಎಂಥಾ ಕುದುರೆ ಅಗುತದೆ!' ಅಂದುಕೊಂಡು ನಗುತ್ತಾ 
ಒಂದು ಕೈಯಲ್ಲಿ ಸೇಬರ್ ಕತ್ತಿಯನ್ನು ಎತ್ತಿ ಹಿಡಿದು, ರಿಕಾಪುಗಳು ಕಿಣಿಕಿಣಿ ಸದ್ದು 
ಮಾಡುತ್ತಾ ಓಡೋಡಿಕೊಂಡು ಮನೆಯ ಮೆಟ್ಟಿಲುಗಳನ್ನು ಹತ್ತಿದ. ಆ ಮನೆಯ 
ಒಡೆಯ , ದಪ್ಪ ಬಟ್ಟೆಯ ಅಂಗಿ ತೊಟ್ಟು, ತಲೆಗೊಂದು ಚೂಪಾದ ಟೋಪಿ 
ಇಟ್ಟುಕೊಂಡು ಸಲಿಕೆಯಿಂದ ಸಗಣಿ ಎತ್ತಿ ಹಾಕುತ್ತಿದ್ದ ಜರ್ಮನ್ ಮನುಷ್ಯ , 
ಕೊಟ್ಟಿಗೆಯಿಂದ ಇಣುಕಿ ನೋಡಿದ. ರೋಸ್ಟೋವ್‌ನನ್ನು ಕಂಡ ತಕ್ಷಣ ಅವನ 
ಮುಖ ಹೊಳೆಯಿತು. ಖುಷಿಯಾಗಿ ಕಣ್ಣು ಹೊಡೆದು, ಜರ್ಮನ್ ಉಚ್ಚಾರಣೆಯಲ್ಲಿ 
'ಗುಟ್ ಮಾರ್ನಿಂಗ್ ! ಗುಟ್ ಮಾರ್ನಿಂಗ್!' ಅಂದ. ಯುವಕ ಸೈನಿನನ್ನು 
ಮಾತಾಡಿಸುವುದಕ್ಕೆ ಅವನಿಗೆ ಖುಷಿಯಾದ ಹಾಗಿತ್ತು. 

“ ಬೆಳಿಗ್ಗೇನೇ ಕೆಲಸ ಹಚ್ಚಿಕೊಂಡುಬಿಟ್ಟಿದೀರಿ? ' ರೋಸ್ಟೋವ್ ಕೂಡ 


೧೯೧ 
ಸಂಪುಟ ೧ - ಸಂಚಿಕೆ ಎರಡು 
ಜರ್ಮನ್‌ನಲ್ಲೇ , ಉತ್ಸಾಹ ತುಂಬಿದ ಮುಖವನ್ನು ಎಂದೂ ಬಿಟ್ಟಿರದ ನಗುವಿನ 
ಜೊತೆಗೇ ಕೇಳಿದ. ಆಸ್ಪಿಯಾಕ್ಕೆ ಜಯವಾಗಲಿ ! ರಶಿಯಾಕ್ಕೆ ಜಯವಾಗಲಿ! ಚಕ್ರವರ್ತಿ 
ಅಲೆಕ್ಸಾಂಡರನಿಗೆ ಜಯವಾಗಲಿ!' ಜರ್ಮನಿಯವನು ಆಗಾಗ ಬಳಸುತ್ತಿದ್ದ ಮಾತನ್ನು 
ಹೇಳಿದ. ಕೊಟ್ಟಿಗೆಯಿಂದ ಹೊರಗೆ ಬಂದಿದ್ದ ಜರ್ಮನಿಯವನು ನಗುತ್ತಾ 
ಟೋಪಿಯನ್ನು ತೆಗೆದು ಬೀಸುತ್ತಾ 'ಇಡೀ ಜಗತ್ತಿಗೆ ಜಯವಾಗಲಿ!' ಅಂದ. . 

ಅವನ ಹಾಗೆಯೇ ರೋಸ್ಟೋವ್ ಕೂಡ ತನ್ನ ಟೋಪಿಯನ್ನು ತೆಗೆದು 
ಬೀಸುತ್ತಾ ಗಟ್ಟಿಯಾಗಿ ನಗುತ್ತಾ 'ಜಗತ್ತಿಗೆ ಜಯವಾಗಲಿ!' ಅಂದ. ಕೊಟ್ಟಿಗೆಯಲ್ಲಿ 
ಸಗಣಿ ಎತ್ತುತ್ತಿದ್ದ ಜರ್ಮನಿಯವನಿಗಾಗಲೀ ಕುದು